ಮೈಸೂರು,ಆ.25(ಆರ್‍ಕೆ)-ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣದ ಸಂಬಂಧ ಬುಧವಾರ ಸಂಜೆ ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸೋಮವಾರ ಸಂಜೆಯಷ್ಟೇ ಹಾಡ ಹಗಲೇ ಜುವೆಲರಿ ಅಂಗಡಿ ದೋಚಿ, ಅಮಾ ಯಕನ ಗುಂಡಿಕ್ಕಿ ಹತ್ಯೆಗೈದ ಘಟನೆ ಇಡೀ ಮೈಸೂರು ನಗರವನ್ನು ಬೆಚ್ಚಿ ಬೀಳಿಸಿದೆ. ಈ ಘಟನೆಯಿಂದ ಮುಖ್ಯಮಂತ್ರಿ, ಗೃಹ ಸಚಿವರು ಅಸಮಾಧಾನಗೊಂಡಿದ್ದಾರೆ ಎಂದು ಸಚಿವ ಸೋಮಶೇಖರ್ ತಿಳಿಸಿದರು. ಸದಾ ಜನದಟ್ಟಣೆ ಸ್ಥಳದಲ್ಲೇ ರಾಜಾ ರೋಷವಾಗಿ ಕೃತ್ಯವೆಸಗಿ ಪರಾರಿಯಾಗಿ ರುವ…
ಮೈಸೂರಿನ ಕಾವಾದಲ್ಲಿ ಕಲಾಕೃತಿ ವೀಕ್ಷಣೆಗೆ ಸೀಮಿತವಾದ ಕನ್ನಡ-ಸಂಸ್ಕøತಿ ಸಚಿವರ ಭೇಟಿ
August 26, 2021ಮೈಸೂರು, ಆ.25(ಎಂಟಿವೈ)- ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜಿಗೆ (ಕಾವಾ) ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್‍ಕುಮಾರ್ ಬುಧ ವಾರ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು. ಸಚಿವರಾದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಸಚಿವ ವಿ.ಸುನೀಲ್ ಕುಮಾರ್ ಬೆಂಬಲಿಗ ರೊಂದಿಗೆ ಚಾಮುಂಡಿಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ಕಾವಾ ಕಾಲೇಜಿಗೆ ಭೇಟಿ ನೀಡಿದ ಅವರು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ರಚಿಸಿದ ಕಲಾಕೃತಿಗಳು ಮತ್ತು ಚಿತ್ರಕಲೆಯನ್ನು ವೀಕ್ಷಣೆ ಮಾಡಿದರು. ಆದರೆ ಕಾಲೇಜಿನ ನಾನಾ ಸಮಸ್ಯೆಗಳಿಗೆ…
ಎನ್‍ಟಿಎಂ ಶಾಲೆ ಉಳಿಸಲು ಆಗ್ರಹಿಸಿ ಮುಂದುವರಿದ ಹೋರಾಟ
August 25, 2021ಮೈಸೂರು, ಆ.24(ಆರ್‍ಕೆಬಿ)- ಮೈಸೂರಿನ ನಾರಾ ಯಣಶಾಸ್ತ್ರಿ ರಸ್ತೆಯಲ್ಲಿರುವ ಎನ್‍ಟಿಎಂ ಶಾಲೆ ಉಳಿಸಿ ಹೋರಾಟದಲ್ಲಿ ಮಂಗಳವಾರ ಮೈಸೂರು ಹೃದಯ ವಂತ ಕನ್ನಡಿಗರ ಬಳಗದ ಕಾರ್ಯಕರ್ತರು ಭಾಗವಹಿಸಿದ್ದರು. ಮಾಜಿ ಮೇಯರ್ ಪುರುಷೋತ್ತಮ್, ಕೊ.ಸು. ನರ ಸಿಂಹಮೂರ್ತಿ, ಹೃದಯವಂತ ಕನ್ನಡಿಗರ ಬಳಗದ ಅಧ್ಯಕ್ಷ ಡಿಪಿಕೆ ಪರಮೇಶ್ವರ್, ಕರ್ನಾಟಕ ಕಾವಲು ಪಡೆಯ ರಾಜ್ಯಾ ಧ್ಯಕ್ಷ ಮೋಹನ್‍ಕುಮಾರ್‍ಗೌಡ, ಸಾಹಿತಿ ಬನ್ನೂರು ಕೆ.ರಾಜು, ರೈತಸಂಘದ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ಮುಖಂಡರಾದ ಉಗ್ರ ನರಸಿಂಹೇಗೌಡ, ಭಾನು ಮೋಹನ್,…
36ನೇ ವಾರ್ಡ್ ಉಪ ಚುನಾವಣೆ; ಪಕ್ಷೇತರ ಅಭ್ಯರ್ಥಿ ನಾಮಪತ್ರ ತಿರಸ್ಕøತ
August 25, 2021ಮೈಸೂರು,ಆ.24(ಎಂಟಿವೈ)-ಮೈಸೂರು ಮಹಾ ನಗರ ಪಾಲಿಕೆಯ 36ನೇ ವಾರ್ಡ್ ಉಪ ಚುನಾವಣೆ ಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಆರು ಮಂದಿಯಲ್ಲಿ ಓರ್ವ ಪಕ್ಷೇತರ ಅಭ್ಯರ್ಥಿಯ ಉಮೇದುವಾರಿಕೆ ರದ್ದಾಗಿದೆ. ಉಳಿದ ಐವರು ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದೆ. 36ನೇ ವಾರ್ಡ್ ಸದಸ್ಯೆಯಾಗಿದ್ದ ರುಕ್ಮಿಣಿ ಮಾದೇ ಗೌಡ ಅವರ ಸದಸ್ಯತ್ವ ನ್ಯಾಯಾಲಯದಿಂದ ಅಸಿಂಧು ಗೊಂಡ ಹಿನ್ನೆಲೆಯಲ್ಲಿ ಸೆ.3ರಂದು ಉಪ ಚುನಾವಣೆ ನಡೆಯಲಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿ ಗಳು, ಮೂವರು ಪಕ್ಷೇತರರು ನಾಮಪತ್ರ ಸಲ್ಲಿಸಿ ದ್ದರು. ಗಾಯತ್ರಿಪುರಂನಲ್ಲಿರುವ ಪಾಲಿಕೆ ವಲಯ ಕಚೇರಿ-9ರಲ್ಲಿ ಚುನಾವಣಾಧಿಕಾರಿಯಾಗಿ…
ಯಶೋಧ ವನ ಮೇಕೆ ಸಾಕಾಣಿಕೆ ಕೇಂದ್ರಕ್ಕೆ ನಾಳೆ ಮಹಾರಾಷ್ಟ್ರದ ಪಶುಸಂಗೋಪನಾ ಸಚಿವ ಭೇಟಿ
August 25, 2021ಮೈಸೂರು, ಆ.24(ಆರ್‍ಕೆಬಿ)- ನಂಜನಗೂಡು ತಾಲೂಕಿನ ಎಡಹಳ್ಳಿಯಲ್ಲಿರುವ ಯಶೋಧ ವನ ಮೇಕೆ ಸಾಕಾಣಿಕೆ ಕೇಂದ್ರದಲ್ಲಿ ನಡೆಯುತ್ತಿರುವ ಸಂಶೋಧನೆ ಮತ್ತು ಮೇಕೆ ಸಾಕಾಣಿಕೆ ಯಶಸ್ಸಿನ ಕುರಿತು ಚರ್ಚಿಸುವ ಸಲುವಾಗಿ ಮಹಾರಾಷ್ಟ್ರದ ಪಶುಸಂಗೋಪನಾ ಮತ್ತು ಹೈನುಗಾರಿಕೆ ಸಚಿವ ಸುನೀಲ್ ಕೇದಾರ್ ಆ.26ರಂದು ಭೇಟಿ ನೀಡಲಿದ್ದಾರೆ ಎಂದು ಸಾಕಾಣಿಕೆ ಕೇಂದ್ರದ ಅಬ್ದುಲ್ ಕರೀಂ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಶೋಧ ವನ ಮೇಕೆ ಸಾಕಾಣಿಕೆ ಕೇಂದ್ರವು ಕೊಟ್ಟಿಗೆ ಪದ್ಧತಿಯ ಅಳಡಿಸಿಕೊಂಡಿರುವ ದೇಶದ ಕೆಲವೇ ಕೆಲವು ಸಾಕಾಣಿಕೆ ಕೇಂದ್ರಗಳಲ್ಲಿ ಒಂದಾಗಿದೆ….
ಜನರ ಹಿತದೃಷ್ಟಿಯಿಂದ ಯಾರೇ ಅಭಿವೃದ್ಧಿ ಕಾರ್ಯ ಮಾಡಿದರೂ ಪ್ರಶಂಸಿಸಿ
August 25, 2021ಮೈಸೂರು,ಆ.24-ಜನರ ಹಿತದೃಷ್ಟಿಯಿಂದ ಯಾರೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ದರೂ ಅದನ್ನು ಒಪ್ಪಿಕೊಳ್ಳುವ ಮನೋಭಾವ ರಾಜಕಾರಣಿಗಳಲ್ಲಿರ ಬೇಕು ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಅಭಿಪ್ರಾಯಿಸಿದ್ದಾರೆ. ಮೈಸೂರು-ಬೆಂಗಳೂರು ದಶಪಥ ರಸ್ತೆ ಕಾಮಗಾರಿ ಸಂಬಂಧ ರಾಜಕಾರಣಿಗಳು ವಿಭಿನ್ನ ಹೇಳಿಕೆ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ ರುವ ಅವರು, ಯೋಜನೆಗೆ ಯಾರೇ ಕಾರಣರಾಗಿರಲಿ ಅಗತ್ಯ ಅನುದಾನವನ್ನು ಸರ್ಕಾರದಿಂದ ತಂದು ಅನುಷ್ಠಾನಕ್ಕೆ ತಂದವರನ್ನು ಪ್ರಶಂಸಿಸಬೇಕು. ಈ ನಿಟ್ಟಿನಲ್ಲಿ ದಶಪಥ ರಸ್ತೆ ಯೋಜನೆ ಪೂರ್ಣ ಗೊಳಿಸಲು ಶ್ರಮಿಸಿರುವ ಸಂಸದ ಪ್ರತಾಪ್ ಸಿಂಹ, `ಈ ಕೆಲಸವನ್ನು ನಾನು…
25ನೇ ದಿನಕ್ಕೆ ಕಾಲಿಟ್ಟ `ನಿರಂಜನ ಮಠ ಉಳಿಸಿ’ ಹೋರಾಟ
August 25, 2021ಮೈಸೂರು,ಆ.24(ಎಸ್‍ಪಿಎನ್)- ಶ್ರೀ ನಿರಂಜನ ಮಠ ಉಳಿಸಿ ಹೋರಾಟ ಸಮಿತಿ ಅಹೋರಾತ್ರಿ ಧರಣಿ 25ನೇ ದಿನಕ್ಕೆ ಕಾಲಿಟ್ಟಿದೆ. ಈ ಸಂಬಂಧ ವೀರಶೈವ ಲಿಂಗಾಯತ ಮುಖಂಡ ಟಿ.ಎಸ್.ಲೋಕೇಶ್ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿ, ಶ್ರೀ ನಿರಂಜನ ಮಠ ಉಳಿಸಿ ಹೋರಾಟ ಸಮಿತಿ ನಡೆಸು ತ್ತಿರುವ ಹೋರಾಟದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುನಂದ ಪಾಲನೇತ್ರ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡು ಬೆಂಬಲ ಸೂಚಿಸಿದರು. ಹೋರಾಟದ ಸ್ಥಳಕ್ಕೆ ಬಂದ ಹೊಸ ಮಠದ ಶ್ರೀ ಚಿದಾನಂದ ಸ್ವಾಮೀಜಿ,…
ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಯೋಜನೆ ಮೋದಿ ಸರ್ಕಾರದ ಸಾಧನೆ; ಕೆಲವರ ವ್ಯರ್ಥ ಆಲಾಪನೆ!
August 25, 2021ಮೈಸೂರು,ಆ.24(ಆರ್‍ಕೆ)- ಮೈಸೂರು -ಬೆಂಗಳೂರು ದಶಪಥ ಕಾಮಗಾರಿ ವಿಡಿಯೋ ಮಾಡಿಸಿರುವುದು ಕೆಲವರ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಅವರು ವಿಧಾನ ಪರಿಷತ್ ಸದಸ್ಯ ಎ.ಹೆಚ್.ವಿಶ್ವನಾಥ್, ಶಾಸಕ ರಾಮದಾಸ್‍ಗೆ ತಿರುಗೇಟು ನೀಡಿದ್ದಾರೆ. ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ತಮ್ಮ ಕಚೇರಿಯಲ್ಲಿ ಇಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಮೈಸೂರು-ಬೆಂಗಳೂರು ನಡುವಿನ 10 ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಪ್ರಗತಿ ಕುರಿತು ವಿಡಿಯೋ ರೆಕಾರ್ಡ್ ಮಾಡಿ, ಹರಿಬಿಟ್ಟಿರುವುದು ಇಷ್ಟೂ ಜನರ ಹೊಟ್ಟೆಗೆ ಬೆಂಕಿ ಬೀಳಿಸುತ್ತೆ ಅಂತಾ…
ಪೊಲೀಸ್ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ನಾಗೇಶ, ಉಪಾಧ್ಯಕ್ಷರಾಗಿ ಮರೀಗೌಡ ಅವಿರೋಧ ಆಯ್ಕೆ
August 24, 2021ಮೈಸೂರು,ಆ.23(ಆರ್‍ಕೆ)-ಮೈಸೂರಿನ ಆಲನಹಳ್ಳಿಯಲ್ಲಿರುವ ಕರ್ನಾಟಕ ಪೊಲೀಸ್ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ನಿವೃತ್ತ ಅಸಿಸ್ಟೆಂಟ್ ಸಬ್‍ಇನ್‍ಸ್ಪೆಕ್ಟರ್ ಟಿ.ಎನ್. ನಾಗೇಶ್ ಮತ್ತು ಉಪಾಧ್ಯಕ್ಷರಾಗಿ ನಿವೃತ್ತ ಸಬ್ ಇನ್‍ಸ್ಪೆಕ್ಟರ್ ಮರೀಗೌಡ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. 2020ರಲ್ಲಿ ಸಂಘದ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈ ಹಿಂದೆ ಅಧ್ಯಕ್ಷರಾಗಿದ್ದ ನಿವೃತ್ತ ಡಿವೈಎಸ್ಪಿ ನಂಜುಂಡೇ ಗೌಡರು ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು, ಟಿ.ಎನ್.ನಾಗೇಶ ಅಧ್ಯಕ್ಷರಾಗಿ ಮತ್ತು ಮರೀಗೌಡರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿ ಕಾರಿಯೂ ಆದ ಸಹಕಾರ ಇಲಾಖೆಯ…
ಪಾಲಿಕೆಗೆ 81.72 ಕೋಟಿ ರೂ. ಆಸ್ತಿ ತೆರಿಗೆ ಪಾವತಿ
August 24, 2021ಮೈಸೂರು, ಆ.23(ಆರ್‍ಕೆ)- ಆಗಸ್ಟ್ 22ರವರೆಗೆ ಮೈಸೂರು ಮಹಾನಗರ ಪಾಲಿಕೆಗೆ ಒಟ್ಟು 81,71,96,615 ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ. ಇ-ಆಸ್ತಿ ತೆರಿಗೆ ವ್ಯವಸ್ಥೆ ಜಾರಿಗೆ ತಂದಿರುವುದರಿಂದ ಹಾಗೂ ಶೇ.5 ರಷ್ಟು ರಿಯಾಯಿತಿ ನೀಡಿರುವ ಅವ ಕಾಶವನ್ನು ಬಳಸಿಕೊಂಡು ಆಸ್ತಿ ಮಾಲೀ ಕರು ಮನೆಯಲ್ಲೇ ಕುಳಿತು ಆನ್‍ಲೈನ್ ಮೂಲಕ ಮನೆ, ವಾಣಿಜ್ಯ ಮಳಿಗೆ ಹಾಗೂ ನಿವೇಶನಗಳ ಆಸ್ತಿ ತೆರಿಗೆಯನ್ನು ಸ್ವಯಂ ಪ್ರೇರಿತವಾಗಿ ಪಾವತಿಸುತ್ತಿದ್ದಾರೆ ಎಂದು ಮೈಸೂರು ಮಹಾನಗರ ಪಾಲಿಕೆ ಪ್ರಭಾರ ಉಪ ಆಯುಕ್ತ(ಕಂದಾಯ) ರಂಗಸ್ವಾಮಿ ತಿಳಿಸಿದ್ದಾರೆ. 2021ರ ಏಪ್ರಿಲ್ 1ರಿಂದ…









