ಮೈಸೂರು, ಆ.21(ಎಂಟಿವೈ)-ಕೊರೊನಾ 3ನೇ ಅಲೆ ಆತಂಕ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಜನಾಶೀ ರ್ವಾದ ಯಾತ್ರೆ ನಡೆಸುವ ಮೂಲಕ ಕೇಂದ್ರ ಸಚಿವರು ಹಾಗೂ ಆಡಳಿತಾರೂಢ ಪಕ್ಷದ ಸಂಸದರು ಪಾಲ್ಗೊ ಳ್ಳುವ ಮೂಲಕ ಕೊರೊನಾ ಸೋಂಕು ವ್ಯಾಪಕವಾಗಿ ಹರಡಲು ಕಾರಣರಾಗುತ್ತಿದ್ದಾರೆ ಎಂದು ಕರ್ನಾಟಕ ಪ್ರಜಾಪಾರ್ಟಿ ರಾಜ್ಯಾಧ್ಯಕ್ಷ ಡಾ. ಬಿ.ಶಿವಣ್ಣ ದೂರಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸರ್ಕಾರ ನಿರ್ಲಕ್ಷ್ಯತನದಿಂದ ಎರಡನೇ ಅಲೆಯಲ್ಲಿ ಸಾಕಷ್ಟು ಸಾವು- ನೋವು ಸಂಭವಿಸಿದೆ. ಸೋಂಕು ಹರಡುವಿಕೆ ತಡೆಗೆ ಅಗತ್ಯ ಕ್ರಮ…
ಅಡುಗೆ ಅನಿಲ ದರ ಹೆಚ್ಚಳ: ಕಾಂಗ್ರೆಸ್ ಮುಖಂಡ ಖಂಡನೆ
August 22, 2021ಮೈಸೂರು, ಆ.21- ಅಡುಗೆ ಅನಿಲ ದರವನ್ನು 25 ರೂ. ಹೆಚ್ಚಳ ಮಾಡುವ ಮೂಲಕ ಕೇಂದ್ರ ಸರ್ಕಾರ ಜನಸಾಮಾನ್ಯರ ವಿರೋಧಿ ಎಂಬು ದನ್ನು ಮತ್ತೆ ಸಾಬೀತುಪಡಿಸಿದೆ ಎಂದು ಕಾಂಗ್ರೆಸ್ ಮುಖಂಡ ಎನ್.ಎಂ.ನವೀನ್‍ಕುಮಾರ್ ಆರೋಪಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ದಿನ ಬಳಕೆ ವಸ್ತುಗಳ ಬೆಲೆ ನಿರಂತರ ಏರಿಕೆಯಾಗುತ್ತಿದೆ. ತೈಲಬೆಲೆ ಹೆಚ್ಚಳದಿಂದ ಈಗಾಗಲೇ ಕಂಗಾಲಾಗಿದ್ದ ಜನ ಸಿಲಿಂಡರ್ ಬೆಲೆ ಹೆಚ್ಚಳದಿಂದ ನಿತ್ಯ ಪರದಾಡುವಂತಾಗಿದೆ ಎಂದಿದ್ದಾರೆ. ಬಿಜೆಪಿಗೆ ಬಡವರು, ಮಧ್ಯಮ ವರ್ಗದವರ ಬಗ್ಗೆ…
ವಾರಾಂತ್ಯ ಕಫ್ರ್ಯೂಗೆ ಮೈಸೂರು ವರ್ತಕರಿಂದ ವ್ಯಾಪಕ ವಿರೋಧ; ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ
August 22, 2021ಮೈಸೂರು,ಆ.21(ಪಿಎಂ)- ಮೈಸೂರು ನಗರ ವ್ಯಾಪ್ತಿಯಲ್ಲೂ ವಾರಾಂತ್ಯ ಕಫ್ರ್ಯೂ ವಿಧಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಆರಂಭದಲ್ಲೇ ವಿರೋಧಿಸಿದ್ದ ಮೈಸೂರು ವರ್ತಕರು, ಇದೀಗ ಪ್ರತಿಭಟನೆ ನಡೆಸಿ, ತಮ್ಮ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ. ಕೋವಿಡ್ ಮೂರನೇ ಅಲೆ ನಿಯಂತ್ರಿ ಸುವ ಹಿನ್ನೆಲೆಯಲ್ಲಿ ಸರ್ಕಾರ ಮೈಸೂರು ನಗರಕ್ಕೆ ವಿಧಿಸಿರುವ ವಾರಾಂತ್ಯ ಕಫ್ರ್ಯೂ (ವೀಕೆಂಡ್ ಕಫ್ರ್ಯೂ) ಅವೈಜ್ಞಾನಿಕ. ಕೂಡಲೇ ಮೈಸೂರು ನಗರ ವ್ಯಾಪ್ತಿಯಲ್ಲಿ ವೀಕೆಂಡ್ ಕಫ್ರ್ಯೂ ತೆರವುಗೊಳಿಸಬೇಕೆಂದು ಆಗ್ರಹಿಸಿ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದ ನೇತೃತ್ವದಲ್ಲಿ ಮೈಸೂರು ವರ್ತಕರು ಶನಿವಾರ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ…
ಮೈಸೂರು ಮೇಯರ್ ಚುನಾವಣೆ: ಸಾರಾ ಅಭಿಪ್ರಾಯ ಸಂಗ್ರಹ
August 22, 2021ಮೈಸೂರು, ಆ.21(ಎಸ್‍ಬಿಡಿ)- ಮೈಸೂರು ನಗರಪಾಲಿಕೆ ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಜೆಡಿಎಸ್ ಸಭೆ ನಡೆದಿದ್ದು, `ಮೈತ್ರಿ’ ವಿಚಾರ ಪಕ್ಷದ ನಾಯಕರ ಅಂಗಳ ತಲುಪಿದೆ. ಮೈಸೂರಿನಲ್ಲಿರುವ ಶಾಸಕ ಸಾ.ರಾ.ಮಹೇಶ್ ಕಚೇರಿಯಲ್ಲಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಚರ್ಚಿಸ ಲಾಗಿದೆ. ವಿಧಾನಪರಿಷತ್ ಸದಸ್ಯರಾದ ಮರಿತಿಬ್ಬೇ ಗೌಡ, ಶ್ರೀಕಂಠೇಗೌಡ, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ. ಚೆಲುವೇಗೌಡ, ಎಲ್ಲಾ ಕಾರ್ಪೊರೇಟರ್‍ಗಳು, ಮಾಜಿ ಮೇಯರ್‍ಗಳು, ಮಾಜಿ ಉಪಮೇಯರ್‍ಗಳು, ಅಬ್ದುಲ್ಲಾ ಸೇರಿದಂತೆ ಹಲವು ಪ್ರಮುಖರು ಸಭೆ ಯಲ್ಲಿ ಪಾಲ್ಗೊಂಡು ಮೇಯರ್ ಚುನಾವಣೆ `ಮೈತ್ರಿ’ ಸಂಬಂಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ….
ಕೆಆರ್‍ಎಸ್ ಹಿನ್ನೀರಲ್ಲಿ ಯಶಸ್ವಿಯಾಗಿ ನಡೆದ ಜಲಸಾಹಸಿ ನೌಕಾ ಕ್ರೀಡೆ
August 22, 2021ಶ್ರೀರಂಗಪಟ್ಟಣ, ಆ. 21(ವಿನಯ್ ಕಾರೇಕುರ)- ಕರ್ನಾಟಕ ಸ್ಟೇಟ್ ಸೈಯ್ಲಿಂಗ್ ಅಸೋಸಿಯೇಷನ್ (ಕೆಎಸ್ ಎಸ್‍ಎ) ಮತ್ತು ಮೈಸೂರು ಸೈಯ್ಲಿಂಗ್ ರೆಗಟ್ಟ (ಆರ್‍ಎಂಎಸ್‍ಸಿ) ಆಶ್ರಯ ದಲ್ಲಿ ಮೈಸೂರು ತಾಲೂಕು ಉಂಡು ವಾಡಿ ಗ್ರಾಮದ ಬಳಿ ಕೆಆರ್‍ಎಸ್ ಹಿನ್ನೀರಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಮಟ್ಟದ ಜಲ ಸಾಹಸ ನೌಕಾ ಕ್ರೀಡೆ ಶನಿವಾರ ಕೆಲ ಗೊಂದಲಗಳ ನಡು ವೆಯೂ ಯಶಸ್ವಿಯಾಗಿ ನಡೆಯಿತು. ಈ ಕ್ರೀಡೆಗಾಗಿ ಮೈಸೂರು ಎನ್‍ಸಿಸಿ ಯಿಂದ 20 ಸ್ಪರ್ಧಿಗಳು ಸೇರಿದಂತೆ ಭೋಪಾಲ್, ಮುಂಬೈ, ಚೆನ್ನೈ, ಕೇರಳ ಮತ್ತು ಪಾಂಡಿಚೇರಿಯಿಂದ ಆಗಮಿ ಸಿದ್ದ…
ಕೋವಿಡ್ 3ನೇ ಅಲೆ ಆತಂಕ: ಮಿಟ್ಸುಬಿಶಿ ಕಂಪನಿಯಿಂದ ಜಿಲ್ಲಾಡಳಿತಕ್ಕೆ ಆಧುನಿಕ ವೈದ್ಯಕೀಯ ಉಪಕರಣಗಳ ಕೊಡುಗೆ
August 20, 2021ಮೈಸೂರು,ಆ.19(ಆರ್‍ಕೆಬಿ)- ಕೋವಿಡ್ 3ನೇ ಅಲೆ ಎದುರಿಸಲು ಅಗತ್ಯ ವೈದ್ಯ ಕೀಯ ಉಪಕರಣಗಳನ್ನು ಮಿಟ್ಸುಬಿಶಿ ಹೆವಿ ಇಂಡಸ್ಟ್ರೀಸ್ -ವಿಎಸ್‍ಟಿ ಡೀಸೆಲ್ ಇಂಜಿನ್ ಪ್ರೈವೆಟ್ ಲಿಮಿಟೆಡ್ ಕಂಪನಿಯು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‍ಆರ್ ಫಂಡ್) ನಿಧಿಯಡಿ ಆಧು ನಿಕ ವೈದ್ಯಕೀಯ ಉಪಕರಣಗಳನ್ನು ಗುರುವಾರ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ಹಸ್ತಾಂತರಿಸಿದರು. 10 ಲೀಟರ್ ಸಾಮಥ್ರ್ಯದ 20 ಸರ್ಜಿ ಕಲ್ ಆಕ್ಷಿಜನ್ ಕಾನ್ಸನ್‍ಟ್ರೇಟರ್, 12 ಇಸಿಜಿ ಯಂತ್ರ, 3 ಪೋರ್ಟಬಲ್ ಎಕ್ಸ್‍ರೇ ಯಂತ್ರ ಸೇರಿದಂತೆ ಹಲವು ಆಧುನಿಕ ವೈದ್ಯಕೀಯ ಉಪಕರಣಗಳನ್ನು ಕಂಪನಿಯ…
ನಗರಪಾಲಿಕೆ ಆಯುಕ್ತರಿಂದ 54ನೇ ವಾರ್ಡ್ ಕುಂದುಕೊರತೆ ಪರಿಶೀಲನೆ
August 20, 2021ಮೈಸೂರು, ಆ.19(ಆರ್‍ಕೆಬಿ)- ಮೈಸೂರು ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ ಗುರುವಾರ 54ನೇ ವಾರ್ಡ್ ವ್ಯಾಪ್ತಿಯ ಬಸವೇಶ್ವರ ರಸ್ತೆ, ಕಂಸಾಳೆ ಮಹದೇವಯ್ಯ ವೃತ್ತ ಇನ್ನಿತರೆ ಪ್ರದೇಶಗಳಿಗೆ ಭೇಟಿ ನೀಡಿ ಕುಂದುಕೊರತೆಗಳನ್ನು ಪರಿಶೀಲಿಸಿದರು. ಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್ ಮನವಿ ಮೇರೆಗೆ ವಾರ್ಡ್‍ಗೆ ಭೇಟಿ ನೀಡಿದ ಅವರು, ಬಸವೇಶ್ವರ ರಸ್ತೆಯಲ್ಲಿ ನಡೆಯುತ್ತಿರುವ ಪಾದಚಾರಿ ಮಾರ್ಗದ ಕಾಮಗಾರಿ ವೀಕ್ಷಿಸಿದರು. ನಂತರ ಕಂಸಾಳೆ ಮಹದೇವಯ್ಯ ವೃತ್ತದ ಬಳಿ ಸೆಂಟ್ ಮೇರಿಸ್ ಶಾಲೆಯ ಹಿಂಭಾಗದ ರಸ್ತೆಯಲ್ಲಿ ಕಸ ಸುರಿಯುತ್ತಿರುವುದು ಹಾಗೂ ಸಾರ್ವಜನಿ ಕರು ಮೂತ್ರ ವಿಸರ್ಜಿಸಿ…
ಮೈಸೂರು ವಿವಿ ವಿವಿಧ ಕಟ್ಟಡ, ಯೋಜನೆಗಳ ಉದ್ಘಾಟನೆ
August 20, 2021ಮೈಸೂರು,ಆ.19(ಆರ್‍ಕೆ)-ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್‍ನಾರಾಯಣ ಅವರು ಮೈಸೂರು ವಿಶ್ವವಿದ್ಯಾನಿಲಯ ನಿರ್ಮಿಸಿರುವ ವಿವಿಧ ಕಟ್ಟಡಗಳು ಹಾಗೂ ಜಾರಿಗೆ ತಂದಿ ರುವ ಹಲವು ಯೋಜನೆಗಳನ್ನು ನಾಳೆ(ಆ.20) ಉದ್ಘಾಟಿಸುವರು. ಕ್ರಾಫರ್ಡ್ ಭವನದಲ್ಲಿ ಇಂದು ಸುದ್ಧಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅವರು, ಶುಕ್ರವಾರ ಮಧ್ಯಾಹ್ನ 2.30 ಗಂಟೆಗೆ ಆಯೋಜಿಸಿರುವ ಸಮಾರಂಭದಲ್ಲಿ ಸಚಿವರು ಕೆರಿಯರ್ ಹಬ್, ನೂತನ ವಿದ್ಯಾರ್ಥಿನಿಲಯ, ಸೆಂಟರ್ ಆಫ್ ಎಕ್ಸ್‍ಲೆನ್ಸ್‍ನ ವಿಸ್ತರಣಾ ವಿಭಾಗ, ಹಾಸನ ಸ್ನಾತಕೋತ್ತರ ಕೇಂದ್ರದ ನೂತನ ಶೈಕ್ಷಣಿಕ ಭವನ ಸೇರಿದಂತೆ ವಿವಿಧ…
ಕೊರೊನಾ ಲೆಕ್ಕಿಸದೇ ಹೂ, ಪೂಜಾ ಸಾಮಗ್ರಿ ಖರೀದಿಗೆ ಮುಗಿಬಿದ್ದ ಜನರು
August 20, 2021ಮೈಸೂರು, ಆ.19 (ಆರ್‍ಕೆ)- ವರಮಹಾಲಕ್ಷ್ಮಿ ಹಬ್ಬಕ್ಕೆ ಪೂಜಾ ಸಾಮಗ್ರಿ ಖರೀದಿಸುವ ಭರದಲ್ಲಿ ಕೊರೊನಾ ಸೋಂಕನ್ನೂ ಲೆಕ್ಕಿಸದೇ ಸಾವಿರಾರು ಸಂಖ್ಯೆಯಲ್ಲಿ ಜನರು ಮುಗಿ ಬೀಳುತ್ತಿದ್ದರು. ದೇವರಾಜ ಮಾರುಕಟ್ಟೆಯಲ್ಲಿ ಹೆಚ್ಚು ಜನದಟ್ಟಣೆ ಉಂಟಾಗಿ ಕೊರೊನಾ ಸೋಂಕು ಹರಡಲಿದೆ ಎಂಬ ಕಾರಣಕ್ಕೆ ಅಲ್ಲಿನ ಹೂ ಮಾರಾಟವನ್ನು ವಿಶಾಲ ಪ್ರದೇಶ ಜೆಕೆ ಮೈದಾನಕ್ಕೆ ಸ್ಥಳಾಂತರಿಸಲಾಗಿದೆಯಾದರೂ, ಅಲ್ಲಿಯೂ ಸಾವಿರಾರು ಮಂದಿ ಜಮಾಯಿಸಿ ಹೂ, ಹಣ್ಣು, ಪೂಜಾ ಸಾಮಗ್ರಿ, ಬಾಳೆಕಂದು ಖರೀದಿ ಸುತ್ತಿದ್ದು, ಸಾಮಾಜಿಕ ಅಂತರ ಮಾಯವಾಗಿದೆ. ಅಲ್ಲಿಯೂ ಯಾವುದೇ ಕೋವಿಡ್ ಮಾರ್ಗಸೂಚಿ ಯನ್ನೂ ಪಾಲಿಸದೇ…
ಕೋವಿಡ್ 3ನೇ ಅಲೆ ಆತಂಕ; ಶಾಲಾ-ಕಾಲೇಜು ಆರಂಭಿಸುವ ಸರ್ಕಾರದ ನಿರ್ಧಾರ ಖಂಡಿಸಿ ಪ್ರತಿಭಟನೆ
August 19, 2021ಮೈಸೂರು,ಆ.18(ಪಿಎಂ)-ಕೋವಿಡ್ ಮೂರನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ಮುಂದಿನ ವಾರ ದಿಂದ ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭಿಸುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕೆಂದು ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾ ಯಿಸಿದ ಪ್ರತಿಭಟನಾಕಾರರು, ಈಗಾಗಲೇ ನೆರೆ ರಾಜ್ಯಗಳಲ್ಲಿ ಕೋವಿಡ್ 3ನೇ ಅಲೆ ರುದ್ರತಾಂಡವ ವಾಡುತ್ತಿದೆ. ಮಹಾರಾಷ್ಟ್ರ, ಕೇರಳ, ತಮಿಳುನಾಡಿ ನಲ್ಲಿ ಕೋವಿಡ್ ಅಟ್ಟಹಾಸ ಮುಂದುವರೆದಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಶಾಲಾ-ಕಾಲೇಜುಗಳನ್ನು ತರಾತುರಿಯಲ್ಲಿ ಆರಂಭಿಸಲು ಹೊರಟಿರುವುದು ಅತ್ಯಂತ ಅಪಾಯಕಾರಿ ಎಂದು ಆಕ್ರೋಶ…










