ಮೈಸೂರು

ಕುಳಿತಲ್ಲೇ ನಿಮ್ಮ ‘ಶ್ರವಣ’ ಸಮಸ್ಯೆ ಅರಿಯಿರಿ ಆಯಿಷ್‍ನಿಂದ ನೂತನ ಮೊಬೈಲ್ ಆ್ಯಪ್
ಮೈಸೂರು

ಕುಳಿತಲ್ಲೇ ನಿಮ್ಮ ‘ಶ್ರವಣ’ ಸಮಸ್ಯೆ ಅರಿಯಿರಿ ಆಯಿಷ್‍ನಿಂದ ನೂತನ ಮೊಬೈಲ್ ಆ್ಯಪ್

August 24, 2021

ಮೈಸೂರು, ಆ.23- ನಿಮ್ಮ ಕಿವಿ (ಶ್ರವಣ) ಸರಿಯಾಗಿ ಕೇಳುತ್ತಿದೆಯೇ, ಇಲ್ಲವೇ? ಎಂಬುದನ್ನು 5 ನಿಮಿಷದಲ್ಲಿ ಖಾತರಿಪಡಿಸಿಕೊಳ್ಳಿ… ಅದು ನಿಮ್ಮ ಮೊಬೈಲ್‍ನಲ್ಲೇ…! ಹೌದು! ಪರಿಣಾಮಕಾರಿ ಸಂವ ಹನಕ್ಕೆ ಶ್ರವಣ ಒಂದು ಅವಶ್ಯ ಅಂಗ. ಶ್ರವಣದಲ್ಲಿ ಸಣ್ಣ ದೋಷವೂ ಪರಿಣಾಮ ಕಾರಿ ಸಂವಹನಕ್ಕೆ ಅಡ್ಡಿಯುಂಟು ಮಾಡು ತ್ತದೆ. ಕೆಲಸದ ಸ್ಥಳದಲ್ಲಿ, ಶೈಕ್ಷಣಿಕ ಸಾಧನೆ ಜೊತೆಗೆ ಭಾವನಾತ್ಮಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಶ್ರವಣ ದೋಷವನ್ನು ಆರಂಭದಲ್ಲೇ ಪತ್ತೆ ಹಚ್ಚಲು ಮೈಸೂರಿನಲ್ಲಿರುವ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ (ಆಯಿಷ್)ಯು ‘ಆ್ಯಪ್’(ಆಯಿಷ್ ಹಿಯರಿಂಗ್…

ಯಾವುದೇ ಸಾಧನೆಗೆ ತಾರತಮ್ಯವಿಲ್ಲ,  ಅದಕ್ಕೆ ಅಗತ್ಯವಿರುವ ತಯಾರಿ ಮುಖ್ಯ
ಮೈಸೂರು

ಯಾವುದೇ ಸಾಧನೆಗೆ ತಾರತಮ್ಯವಿಲ್ಲ, ಅದಕ್ಕೆ ಅಗತ್ಯವಿರುವ ತಯಾರಿ ಮುಖ್ಯ

August 24, 2021

ಮೈಸೂರು,ಆ.23-ಸಾಧನೆ ಎನ್ನುವುದು ಸುಲಭವಾಗಿ ಬರುವುದಿಲ್ಲ. ಅದಕ್ಕೆ ನಗರ ಪ್ರದೇಶ, ಗ್ರಾಮೀಣ ಎನ್ನುವ ತಾರತಮ್ಯವಿಲ್ಲ. ಸತತವಾಗಿ ಅಧ್ಯಯನ ಮಾಡಿ ಗುರಿ ಸಾಧನೆಯಿಂದ ಹಿಂದೆ ಸರಿಯದವರು ಖಂಡಿತಾ ಯಶಸ್ವಿ ಯಾಗುತ್ತಾರೆ ಎಂದು ಮೈಸೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಕಾರಿ ಟಿ.ಹೀರಾಲಾಲ್ ಕಿವಿಮಾತು ಹೇಳಿದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾ ತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಜ್ಞಾನೋದಯ ಪದವಿ ಪೂರ್ವ ಕಾಲೇ ಜಿನ (ಜ್ಞಾನಶಾರದಾ) ಶ್ರೀ ವಿದ್ಯಾ ತೀರ್ಥ ಇನ್ಸಿಟಿಟ್ಯೂಟ್ ಆಫ್ ಕಲ್ಚರ್ ಸಹಯೋಗದಲ್ಲಿ ಆಯೋಜಿಸಿದ್ದ 26 ದಿನಗಳ ಪಿಯು-ಸಿಇಟಿ…

ಆ.26ರಿಂದ ಸೆ.30ರವರೆಗೆ ರಾಜ್ಯಾದ್ಯಂತ ಬೃಹತ್ ಅಭಿಯಾನ
ಮೈಸೂರು

ಆ.26ರಿಂದ ಸೆ.30ರವರೆಗೆ ರಾಜ್ಯಾದ್ಯಂತ ಬೃಹತ್ ಅಭಿಯಾನ

August 24, 2021

ಮೈಸೂರು,ಆ.23(ಪಿಎಂ)-ಲಿಂಗಾಯತ ಪಂಚಮ ಸಾಲಿ, ಲಿಂಗಾಯತ ಗೌಡ, ಮಲೆಗೌಡ ಲಿಂಗಾಯತ ಮತ್ತು ದೀಕ್ಷಾ ಲಿಂಗಾಯತ ಸಮುದಾಯಕ್ಕೆ `2ಎ’ ಮೀಸಲಾತಿ ಸೌಲಭ್ಯ ನೀಡಬೇಕೆಂದು ಆಗ್ರಹಿಸಿ ಹಾಗೂ ಈ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿ ಸುವ ಸಲುವಾಗಿ ಆ.26ರಿಂದ ಸೆ.30ರವರೆಗೆ `ಪ್ರತಿಜ್ಞಾ ಪಂಚಾಯತ್’ ಶೀರ್ಷಿಕೆಯಡಿ ರಾಜ್ಯಾದ್ಯಂತ ಬೃಹತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಉತ್ತರ ಕರ್ನಾಟಕದಲ್ಲಿರುವ ಬಹು…

ಕೆರೆ ಏರಿ ಒಡೆದು ಜಮೀನಿಗೆ ನುಗ್ಗಿದ ನೀರು
ಮೈಸೂರು

ಕೆರೆ ಏರಿ ಒಡೆದು ಜಮೀನಿಗೆ ನುಗ್ಗಿದ ನೀರು

August 23, 2021

ಬೇಗೂರು,ಆ.22(ನಾಗೇಶ್/ ಕಿರಣ್)- ಗುಂಡ್ಲು ಪೇಟೆ ತಾಲೂಕಿನ ಬೇಗೂರು ಸಮೀಪದ ಬೆಳಚಲ ವಾಡಿ ಕೆರೆ ಏರಿ ಒಡೆದು ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಸುತ್ತಮುತ್ತಲಿನ ಬೆಳೆಗಳು ನಾಶವಾಗಿರುವ ಘಟನೆ ಭಾನುವಾರ ನಡೆದಿದೆ. ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸುವ ಯೋಜನೆಯಲ್ಲಿ ಸೇರಿರುವ ಬೆಳಚಲವಾಡಿ ಕೆರೆಯ ಏರಿಯಲ್ಲಿ ಅಲ್ಲಲ್ಲಿ ಸಣ್ಣ-ಸಣ್ಣ ಬಿರುಕುಗಳು ಇದ್ದರೂ ಯಾವುದೇ ದುರಸ್ತಿ ಮಾಡದೇ ನೀರು ತುಂಬಿಸಿದ ಪರಿಣಾಮ ಕೆರೆ ಏರಿ ಒಡೆದಿದೆ. ಗಾಂಧಿ ಗ್ರಾಮ ಏತ ನೀರಾವರಿ ಯೋಜ ನೆಗೆ ಸೇರಿದ ಬೆಳಚಲವಾಡಿ ಕೆರೆಗೆ…

ನಕಲಿ ಆರ್‍ಟಿ-ಪಿಸಿಆರ್ ವರದಿ ತಂದು ರಾಜ್ಯ ಪ್ರವೇಶಕ್ಕೆ ಯತ್ನ ಮೂವರು ಕೇರಳಿಗರ ಬಂಧನ
ಮೈಸೂರು

ನಕಲಿ ಆರ್‍ಟಿ-ಪಿಸಿಆರ್ ವರದಿ ತಂದು ರಾಜ್ಯ ಪ್ರವೇಶಕ್ಕೆ ಯತ್ನ ಮೂವರು ಕೇರಳಿಗರ ಬಂಧನ

August 23, 2021

ಹೆಚ್.ಡಿ.ಕೋಟೆ, ಆ.22-ನಕಲಿ ಆರ್‍ಟಿ-ಪಿಸಿಆರ್ ವರದಿ ಯೊಂದಿಗೆ ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಶನಿವಾರ ಸಂಜೆ ನಕಲಿ ಆರ್‍ಟಿ-ಪಿಸಿಆರ್ ವರದಿ ಯೊಂದಿಗೆ ಕೇರಳದಿಂದ ರಾಜ್ಯ ಪ್ರವೇಶಿಸಲು ಪ್ರಯತ್ನಿಸಿದ ಪ್ರಕರಣವನ್ನು ಹೆಚ್.ಡಿ.ಕೋಟೆ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ನಕಲಿ ಕೋವಿಡ್ ವರದಿ ಯೊಂದಿಗೆ ಆಗಮಿಸಿದ ಇಬ್ಬರು ಹಾಗೂ ಇವರಿಗೆ ನಕಲಿ ಆರ್‍ಟಿ -ಪಿಸಿಆರ್ ವರದಿ ಸಿದ್ಧಪಡಿಸಿಕೊಟ್ಟ ಓರ್ವ ಸೇರಿದಂತೆ ಮೂವರನ್ನು ಬಂಧಿಸಿ ನಕಲಿ ವರದಿ ಸಿದ್ಧಪಡಿಸಲು ಉಪಯೋಗಿಸುತ್ತಿದ್ದ ಕಂಪ್ಯೂಟರ್ ಮತ್ತಿತರ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಕೇರಳದ ವೈನಾಡ್ ಜಿಲ್ಲೆ ವೆಲ್ಲಿಮುಂಡ…

ನಿರಾತಂಕವಾಗಿ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆ
ಮೈಸೂರು

ನಿರಾತಂಕವಾಗಿ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆ

August 23, 2021

ಮೈಸೂರು, ಆ.22(ಆರ್‍ಕೆಬಿ)- ವಾರಾಂತ್ಯ ಕಫ್ರ್ಯೂ ನಡುವೆಯೂ ಭಾನು ವಾರ ಮೈಸೂರಿನಲ್ಲಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಕೆಎಆರ್‍ಟಿಇಟಿ) ಪರೀಕ್ಷೆಗಳು ಸುಗಮವಾಗಿ ನಡೆಯಿತು. ಬೆಳಿಗ್ಗೆ ಮೊದಲ ಪತ್ರಿಕೆ, ಮಧ್ಯಾಹ್ನ 2ನೇ ಪತ್ರಿಕೆಯ ಪರೀಕ್ಷೆ ನಿರಾತಂಕವಾಗಿ ನಡೆಯಿತು. ಒಟ್ಟು 17 ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12ರವರೆಗೆ ನಡೆದ ಮೊದಲ ಪತ್ರಿಕೆಯಲ್ಲಿ ನೋಂದಾಯಿಸಿ ಕೊಂಡಿದ್ದ 4248 ಅಭ್ಯರ್ಥಿಗಳ ಪೈಕಿ 3815 ಮಂದಿ ಪರೀಕ್ಷೆ ಬರೆದರು. 383 ಮಂದಿ ಗೈರು ಹಾಜರಾಗಿದ್ದರು. ಅಲ್ಲದೆ ನೋಂದಾಯಿಸಿಕೊಂಡಿದ್ದರೂ ಪರೀಕ್ಷಾ ಶುಲ್ಕ ಕಟ್ಟಿಲ್ಲದ 50…

ಗ್ರಾಮೀಣ ಪ್ರದೇಶದ ಶಾಲಾ-ಕಾಲೇಜುಗಳಲ್ಲಿ  ಕೋವಿಡ್ ಮುನ್ನೆಚ್ಚರಿಕೆ ಕ್ರಮಕ್ಕೆ ನಿಗಾ ವಹಿಸಬೇಕು
ಮೈಸೂರು

ಗ್ರಾಮೀಣ ಪ್ರದೇಶದ ಶಾಲಾ-ಕಾಲೇಜುಗಳಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಕ್ಕೆ ನಿಗಾ ವಹಿಸಬೇಕು

August 23, 2021

ಮೈಸೂರು,ಆ.22(ಪಿಎಂ)- ಕೋವಿಡ್ ಮುನ್ನೆಚ್ಚರಿಕೆ ಯೊಂದಿಗೆ 9ರಿಂದ 12ನೇ ತರಗತಿವರೆಗೆ ಶಾಲಾ-ಕಾಲೇಜು ಪುನರಾರಂಭದ ಸರ್ಕಾರದ ಕ್ರಮ ಸ್ವಾಗತಿಸಿ ರುವ ವಿಧಾನಪರಿಷತ್ ಸದಸ್ಯ ಎ.ಹೆಚ್.ವಿಶ್ವನಾಥ್, ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಕೇವಲ ನಗರ ಪ್ರದೇಶದಲ್ಲಿ ಮಾತ್ರವಲ್ಲದೇ, ಗ್ರಾಮೀಣ ಪ್ರದೇಶದ ಶಾಲಾ-ಕಾಲೇಜುಗಳಲ್ಲೂ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲು ಹೆಚ್ಚು ನಿಗಾ ವಹಿಸಬೇಕೆಂದು ಒತ್ತಾಯಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಯಿಂದ ರಾಜ್ಯದ ಶಾಲಾ-ಕಾಲೇಜು ಪ್ರಾರಂಭಿಸುತ್ತಿದ್ದು, ಇದು ಸ್ವಾಗತಾರ್ಹ. ಮುಖ್ಯಮಂತ್ರಿಗಳು ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು…

ಮೈಸೂರು ನಗರ ಪಾಲಿಕೆ ತೆರಿಗೆ ನೀತಿ ವಿರುದ್ಧ  ಕೋರ್ಟ್ ಮೆಟ್ಟಿಲೇರಲು ತೆರಿಗೆದಾರರ ನಿರ್ಧಾರ
ಮೈಸೂರು

ಮೈಸೂರು ನಗರ ಪಾಲಿಕೆ ತೆರಿಗೆ ನೀತಿ ವಿರುದ್ಧ ಕೋರ್ಟ್ ಮೆಟ್ಟಿಲೇರಲು ತೆರಿಗೆದಾರರ ನಿರ್ಧಾರ

August 23, 2021

ಮೈಸೂರು,ಆ.22(ಆರ್‍ಕೆಬಿ)- ವಾಣಿಜ್ಯ ಸ್ವತ್ತುಗಳಿಗೆ ಸಂಬಂಧಿಸಿದಂತೆ ಮೈಸೂರು ಮಹಾನಗರಪಾಲಿಕೆಯ ತೆರಿಗೆ ಪದ್ಧತಿಗೆ ತಡೆ ನೀಡುವಂತೆ ಕೋರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಲು ಭಾನುವಾರ ಮೈಸೂರಿನ ವಿಜಯನಗರ ಒಂದನೇ ಹಂತದಲ್ಲಿರುವ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ನಡೆದ ನಗರಪಾಲಿಕೆ ತೆರಿಗೆ ಪಾವತಿದಾರರ ಸಭೆಯಲ್ಲಿ ನಿರ್ಧರಿಸಲಾಯಿತು. ಹೋಟೆಲ್ ಮಾಲೀಕರು, ಕಲ್ಯಾಣ ಮಂಟಪಗಳ ಮಾಲೀಕರು, ಚಿತ್ರಮಂದಿರ ಗಳ ಮಾಲೀಕರ ಸಂಘಗಳ ಪದಾಧಿಕಾರಿ ಗಳು, ಕಟ್ಟಡಗಳ ಮಾಲೀಕರು ಸೇರಿದಂತೆ ಒಟ್ಟು 40ಕ್ಕೂ ಹೆಚ್ಚು ಮಂದಿ ತೆರಿಗೆ ಪಾವತಿ ದಾರರು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿದ್ದ ಹೈಕೋರ್ಟ್…

ಇಂದಿನ ಕೌಟುಂಬಿಕ ವ್ಯವಸ್ಥೆ ಕುಸಿಯುವುದರ ಹಿಂದೆ ಹಿರಿಯರ ನಿರ್ಲಕ್ಷ್ಯ ಅಡಗಿದೆ
ಮೈಸೂರು

ಇಂದಿನ ಕೌಟುಂಬಿಕ ವ್ಯವಸ್ಥೆ ಕುಸಿಯುವುದರ ಹಿಂದೆ ಹಿರಿಯರ ನಿರ್ಲಕ್ಷ್ಯ ಅಡಗಿದೆ

August 22, 2021

ಮೈಸೂರು,ಆ.21-ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಕನಕಗಿರಿಯಲ್ಲಿರುವ ಭಾರತಿ ವೃದ್ಧಾಶ್ರಮ ದಲ್ಲಿ ಹಿರಿಯ ನಾಗರಿಕರಿಗೆ ಹಣ್ಣು ಹಂಪಲು ವಿತರಿ ಸುವ ಮೂಲಕ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಇಂದಿನ ಕೌಟುಂಬಿಕ ವ್ಯವಸ್ಥೆ ಕುಸಿಯು ವುದರ ಹಿಂದೆ ಹಿರಿಯರ ನಿರ್ಲಕ್ಷ್ಯ ಅಡಗಿದೆ. ಮನೆ ಯಲ್ಲಿ ಹಿರಿಯರಿದ್ದರೆ ಸಂಬಂಧಗಳು ಗಟ್ಟಿಯಾಗು ತ್ತವೆ. ಗಂಡ-ಹೆಂಡತಿ ಬಹಳಷ್ಟು ಸಮಸ್ಯೆಗಳು ಅವರ ಸಲಹೆಗಳಿಂದ ಪರಿಹಾರ ಕಾಣುತ್ತವೆ….

ವರ್ಷದಲ್ಲಿ ಕೆ.ಆರ್.ಕ್ಷೇತ್ರ `ಸೇಫ್ಟಿ ರೋಡ್’ ಶಾಸಕ ರಾಮದಾಸ್ ಕಾರ್ಯ ಯೋಜನೆ
ಮೈಸೂರು

ವರ್ಷದಲ್ಲಿ ಕೆ.ಆರ್.ಕ್ಷೇತ್ರ `ಸೇಫ್ಟಿ ರೋಡ್’ ಶಾಸಕ ರಾಮದಾಸ್ ಕಾರ್ಯ ಯೋಜನೆ

August 22, 2021

ಮೈಸೂರು,ಆ.21(ಎಂಟಿವೈ)- ಮೈಸೂ ರಿನ ಕೆ.ಆರ್.ವಿಧಾನಸಭಾ ಕ್ಷೇತ್ರವನ್ನು ಸಮಗ್ರ ವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶಾಸಕ ಎಸ್.ಎ.ರಾಮದಾಸ್ ಶನಿವಾರ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪರಿಸ್ಥಿತಿ ಗನುಗುಣವಾಗಿ ಆದ್ಯತೆ ಮೇರೆಗೆ ತುರ್ತಾಗಿ ಕಾಮಗಾರಿ ಆರಂಭಿಸುವಂತೆ ಸೂಚಿಸಿದರು. ಮೈಸೂರು ಮಹಾನಗರ ಪಾಲಿಕೆಯ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಶನಿವಾರ ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ ಸೇರಿ ದಂತೆ ಇನ್ನಿತರ ಅಧಿಕಾರಿಗಳೊಂದಿಗೆ ಕೆ.ಆರ್. ಕ್ಷೇತ್ರದ ಅಭಿವೃದ್ಧಿ ಸಂಬಂಧ ಚರ್ಚಿಸಿದರು. ಸಭೆಯಲ್ಲಿ ಮಾತನಾಡಿದ ರಾಮದಾಸ್, 75ನೇ ಸ್ವಾತಂತ್ರ್ಯೋತ್ಸವÀದ ವಿಶೇಷ ಸಂದರ್ಭ ದಲ್ಲಿ ಕೆ.ಆರ್ ಕ್ಷೇತ್ರ ಅಭಿವೃದ್ಧಿಗೆ…

1 198 199 200 201 202 1,611
Translate »