ಮೈಸೂರು

ವರಮಹಾಲಕ್ಷ್ಮಿ ಹಬ್ಬ: ಮೈಸೂರು ಮಾರುಕಟ್ಟೆಯಲ್ಲಿ ಜನ ಜಾತ್ರೆ
ಮೈಸೂರು

ವರಮಹಾಲಕ್ಷ್ಮಿ ಹಬ್ಬ: ಮೈಸೂರು ಮಾರುಕಟ್ಟೆಯಲ್ಲಿ ಜನ ಜಾತ್ರೆ

August 19, 2021

ಮೈಸೂರು,ಆ.18(ಆರ್‍ಕೆ)- ವರಮಹಾ ಲಕ್ಷ್ಮಿ ಹಬ್ಬಕ್ಕೆ ಕೊರೊನಾ ಸೋಂಕನ್ನೂ ಲೆಕ್ಕಿಸದೇ ಜನರು ಪೂಜಾ ಸಾಮಗ್ರಿ ಖರೀದಿಸಲು ಮುಗಿ ಬೀಳುತ್ತಿದ್ದಾರೆ. ಹಬ್ಬಕ್ಕೆ ಭರದ ಸಿದ್ಧತೆ ಮಾಡಿಕೊಳ್ಳು ತ್ತಿರುವ ಜನರು, ಹೂ, ಹಣ್ಣು, ಪೂಜಾ ಸಾಮಗ್ರಿ ಖರೀದಿಸಲು ಇಂದು ಮೈಸೂರಿನ ದೇವರಾಜ ಮಾರುಕಟ್ಟೆ, ಚಿಕ್ಕಗಡಿಯಾರ, ಶಿವರಾಂಪೇಟೆಯಲ್ಲಿ ಭಾರೀ ಪ್ರಮಾಣದ ಜನಜಂಗುಳಿ. ಜೀವವಿದ್ದರೆ ಜೀವನ ಎಂಬ ಎಚ್ಚರಿಕೆ ಸಂದೇಶವನ್ನು ಧಿಕ್ಕರಿಸಿ, ಹಬ್ಬ ಆಚರಣೆಗೆ ಸಾಮಗ್ರಿ ಖರೀದಿಗೆ ನಿಂತಿ ದ್ದರು. ಇಂತಹ ಜನರಿಗೆ ಪರಿಸ್ಥಿತಿಯ ಅರಿವೇ ಇರಲಿಲ್ಲ. ಪೊಲೀಸರೂ ಸಹ ಇತ್ತ ಸುಳಿ ಯಲಿಲ್ಲ….

ಹಿರಿಯ ವಕೀಲ ಎಸ್.ಜೆ.ಲಕ್ಷ್ಮೇಗೌಡರಿಂದ  ಅತ್ಯಂತ ನಿಷ್ಠೆಯ ನ್ಯಾಯಪರ ವಾದ ಮಂಡನೆ
ಮೈಸೂರು

ಹಿರಿಯ ವಕೀಲ ಎಸ್.ಜೆ.ಲಕ್ಷ್ಮೇಗೌಡರಿಂದ ಅತ್ಯಂತ ನಿಷ್ಠೆಯ ನ್ಯಾಯಪರ ವಾದ ಮಂಡನೆ

August 19, 2021

ಮೈಸೂರು,ಆ.18(ಪಿಎಂ)-ಹಿರಿಯ ವಕೀಲ ಎಸ್.ಜೆ.ಲಕ್ಷ್ಮೇಗೌಡ ಅವರು ಅತ್ಯಂತ ನಿಷ್ಠೆಯಿಂದ ನ್ಯಾಯಪರ ವಾದ ಮಂಡಿಸುತ್ತಿದ್ದರು ಎಂದು ಮಾಜಿ ಸಚಿವರೂ ಆದ ಶಾಸಕ ಜಿ.ಟಿ.ದೇವೇಗೌಡ ಸ್ಮರಿಸಿದರು. ಮೈಸೂರಿನ ಖಾಸಗಿ ಹೋಟೆಲ್ ಆವರಣದಲ್ಲಿ ಲಾಗೈಡ್ ಕನ್ನಡ ಕಾನೂನು ಮಾಸ ಪತ್ರಿಕೆ ಬಳಗದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಇತ್ತೀಚೆಗೆ ನಿಧನ ಹೊಂದಿದ ಹಿರಿಯ ವಕೀಲ ಎಸ್.ಜೆ. ಲಕ್ಷ್ಮೇಗೌಡ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾವೆಲ್ಲರೂ ನೋಡಿದ ರೀತಿಯಲ್ಲಿ ವಕೀಲ ವೃತ್ತಿ ಕಷ್ಟಮಯವಿದೆ. ಇದರ ನಡುವೆಯೂ ಅತ್ಯಂತ ನಿಷ್ಠೆ ಯಿಂದ ನ್ಯಾಯಪರ ವಾದ…

ಅನಧಿಕೃತ ಯುಜಿಡಿ ಸಂಪರ್ಕಕ್ಕಾಗಿ ರಸ್ತೆ  ಅಗೆದ ಡೆವಲಪರ್‍ಗೆ ಪಾಲಿಕೆ ನೋಟೀಸ್
ಮೈಸೂರು

ಅನಧಿಕೃತ ಯುಜಿಡಿ ಸಂಪರ್ಕಕ್ಕಾಗಿ ರಸ್ತೆ ಅಗೆದ ಡೆವಲಪರ್‍ಗೆ ಪಾಲಿಕೆ ನೋಟೀಸ್

August 19, 2021

ಮೈಸೂರು, ಆ.18(ಎಸ್‍ಪಿಎನ್)-ಮೈಸೂರು ನಗರ ಪಾಲಿಕೆ ಅನುಮತಿ ಪಡೆ ಯದೇ ಖಾಸಗಿ ಬಡಾವಣೆಗೆ ಯುಜಿಡಿ ಸಂಪರ್ಕ ಕೊಡಲು ಅನಧಿಕೃತವಾಗಿ ರಸ್ತೆ ಅಗೆಯುತ್ತಿದ್ದ ಖಾಸಗಿ ಡೆವಲಪರ್‍ಗೆ ವಲಯ ಕಚೇರಿ 5ರ ಆಯುಕ್ತರು, ಬುಧ ವಾರ ನೋಟೀಸ್ ಜಾರಿ ಮಾಡಿದ್ದಾರೆ. ಮಥುರಾ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದಲ್ಲಿ (ಕಣ್ವ ಕಾರ್ಖಾನೆ ಸಮೀಪ) ಈ ಸಂಸ್ಥೆಯು (ಎಲೈಟ್ ಪ್ರಾಡಕ್ಟ್ ಸಂಸ್ಥೆ) ಹೊಸದಾಗಿ ನಿರ್ಮಿಸುತ್ತಿರುವ ಬಡಾವಣೆ ಕಾಮಗಾರಿ ಪ್ರಗತಿಯಲ್ಲಿದೆ. ಈ ಬಡಾವಣೆಯ ದಕ್ಷಿಣ ಭಾಗದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ರಸ್ತೆ ಇದೆ(ಮಥುರಾ…

ಫಲಿತಾಂಶ ತಿರಸ್ಕರಿಸಿರುವ ವಿದ್ಯಾರ್ಥಿಗಳಿಗಾಗಿ ಇಂದಿನಿಂದ ದ್ವಿತೀಯ  ಪಿಯುಸಿ ವಾರ್ಷಿಕ ಪರೀಕ್ಷೆ
ಮೈಸೂರು

ಫಲಿತಾಂಶ ತಿರಸ್ಕರಿಸಿರುವ ವಿದ್ಯಾರ್ಥಿಗಳಿಗಾಗಿ ಇಂದಿನಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ

August 19, 2021

ಮೈಸೂರು, ಆ.18(ಆರ್‍ಕೆ)-ಸರ್ಕಾರ ಪ್ರಕಟಿಸಿರುವ ಫಲಿತಾಂಶ ತೃಪ್ತಿಕರವಾಗಿಲ್ಲ ವೆಂದು ತಿರಸ್ಕರಿಸಿರುವ ವಿದ್ಯಾರ್ಥಿಗಳಿಗಾಗಿ ನಾಳೆ (ಆ.19)ಯಿಂದ ಸೆಪ್ಟೆಂಬರ್ 3ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಮೈಸೂರಿನ ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜು, ನಾರಾಯಣಶಾಸ್ತ್ರಿ ರಸ್ತೆಯ ಮಹಾರಾಣಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಜಿಲ್ಲೆಯ ಎಲ್ಲಾ 6 ತಾಲೂಕುಗಳಲ್ಲಿ ತಲಾ ಒಂದೊಂದು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ವಿಷಯವಾರು ಒಟ್ಟು 949 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದು, ಮೊದಲ ದಿನವಾದ ನಾಳೆ (ಆ.19) ಮೈಸೂರಿನ…

ಮಹಾರಾಜ ಪಿಯು ಕಾಲೇಜು ಪ್ರಥಮ ಪಿಯು ಪ್ರವೇಶಕ್ಕೆ ಭಾರೀ ಡಿಮ್ಯಾಂಡ್
ಮೈಸೂರು

ಮಹಾರಾಜ ಪಿಯು ಕಾಲೇಜು ಪ್ರಥಮ ಪಿಯು ಪ್ರವೇಶಕ್ಕೆ ಭಾರೀ ಡಿಮ್ಯಾಂಡ್

August 19, 2021

ಮೈಸೂರು,ಆ.18(ಎಂಟಿವೈ)-ಕೋವಿಡ್-19 ಕರಿನೆರಳು ಕಳೆದ ಒಂದೂವರೆ ವರ್ಷದಿಂದ ಶಿಕ್ಷಣ ವ್ಯವಸ್ಥೆಯ ಮೇಲೆ ಬಿದ್ದಿದ್ದು, ಇದೀಗ ಸೋಂಕಿನ ಆತಂಕದ ನಡುವೆಯೂ ಪದವಿ ಹಾಗೂ ಪದವಿ ಪೂರ್ವ ಶಿಕ್ಷಣ ಪ್ರವೇಶಕ್ಕೆ ಮುಗಿ ಬೀಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಮೈಸೂರಿನ ಪ್ರತಿಷ್ಠಿತ ಕಾಲೇಜು ಮಹಾರಾಜ ಪದವಿ ಪೂರ್ವ ಕಾಲೇಜಲ್ಲಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಕ್ಕೆ ದಾಖ ಲಾಗಲು ಮೈಸೂರು ಮತ್ತು ಮಂಡ್ಯ ಜಿಲ್ಲೆಯ ವಿವಿಧೆಡೆಯಿಂದ ನೂರಾರು ಮಂದಿ ಅರ್ಜಿ ಸಲ್ಲಿಸಿದ್ದು, ಪ್ರಥಮ ಪಿಯುಸಿ ದಾಖಲಾತಿಗಾಗಿ ವಿದ್ಯಾರ್ಥಿಗಳ ಮೊದಲ ಪಟ್ಟಿ ಪ್ರಕಟಿಸಲಾಗಿದೆ. ಕಾಲೇಜಲ್ಲಿ ಮೂರು…

ನಾಳೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ  ರಾಷ್ಟ್ರೀಯ ಶಿಕ್ಷಣ ನೀತಿ ಅನಾವರಣ
ಮೈಸೂರು

ನಾಳೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನಾವರಣ

August 19, 2021

ಮೈಸೂರು, ಆ.18(ಆರ್‍ಕೆ)-ಮಾನವ ಸಂಪನ್ಮೂಲ ಸಚಿವಾಲಯವು ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020 ಕಾರ್ಯಕ್ರಮಕ್ಕೆ ಆಗಸ್ಟ್ 20ರಂದು ಮೈಸೂರಿನ ವಿಶ್ವವಿದ್ಯಾನಿಲಯವು ಚಾಲನೆ ನೀಡಲಿದೆ. ಕ್ರಾಫರ್ಡ್ ಭವನದಲ್ಲಿ ಶುಕ್ರವಾರ ಮಧ್ಯಾಹ್ನ 3.30 ಗಂಟೆಗೆ ಸುತ್ತೂರು ಮಠಾಧೀಶ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರು ರಾಷ್ಟ್ರೀಯ ಶಿಕ್ಷಣ ನೀತಿ (ಓಇP)ಯನ್ನು ಅನಾವರಣಗೊಳಿಸುವರು. ಅದಕ್ಕೂ ಮುಂಚೆ ಬೆಳಗ್ಗೆ 11 ಗಂಟೆಗೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್…

ಆ.25ಕ್ಕೆ ಮೈಸೂರು ಮೇಯರ್ ಚುನಾವಣೆ
ಮೈಸೂರು

ಆ.25ಕ್ಕೆ ಮೈಸೂರು ಮೇಯರ್ ಚುನಾವಣೆ

August 18, 2021

ಮೈಸೂರು, ಆ.೧೭(ಎಸ್‌ಬಿಡಿ)- ಮೈಸೂರು ನಗರ ಪಾಲಿಕೆ ಮೇಯರ್ ಚುನಾವಣೆಗೆ ಅಂತೂ ಇಂತೂ ಮುಹೂರ್ತ ನಿಗದಿಯಾಗಿದ್ದು, ೩೬ನೇ ವಾರ್ಡ್ ಉಪಚುನಾವಣೆಗೂ ಮುನ್ನವೇ ನೂತನ ಮೇಯರ್ ಆಯ್ಕೆಯಾಗಲಿದ್ದಾರೆ. ಮೇಯರ್ ಚುನಾವಣೆಯನ್ನು ಆ.೨೫ಕ್ಕೆ ನಿಗದಿ ಪಡಿಸಲಾಗಿದ್ದು, ಅಂದು ಮಧ್ಯಾಹ್ನ ೧೨ಕ್ಕೆ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಚುನಾವಣಾ ಸಭೆ ನಡೆಯಲಿದೆ. ಸರ್ಕಾರಿ ರಜಾದಿನ ಹೊರತು ಪಡಿಸಿ ಆ.೧೭ರಿಂದ ೨೪ರವರೆಗೆ ಕಚೇರಿ ವೇಳೆಯಲ್ಲಿ ಹಾಗೂ ಆ.೨೫ರಂದು ಚುನಾವಣಾ ಸಭೆ ಆರಂಭ ವಾಗುವ ೨ ಗಂಟೆ ಮುಂಚಿತವಾಗಿ ಸ್ಪರ್ಧಾಕಾಂಕ್ಷಿ…

ರಾಜ್ಯಾದ್ಯಂತ ಬರುವ ವರ್ಷದಿಂದಲೇ ಟೆಕ್ನಿಕಲ್ ಶಾಲೆಗಳ ಆರಂಭ
ಮೈಸೂರು

ರಾಜ್ಯಾದ್ಯಂತ ಬರುವ ವರ್ಷದಿಂದಲೇ ಟೆಕ್ನಿಕಲ್ ಶಾಲೆಗಳ ಆರಂಭ

August 18, 2021

ಬೆAಗಳೂರು, ಆ.೧೭ (ಕೆಎಂಶಿ)- ಮುಂಬರುವ ಶೈಕ್ಷಣಿಕ ವರ್ಷದಿಂದಲೇ ಟೆಕ್ನಿಕಲ್ ಶಾಲೆಗಳನ್ನು ರಾಜ್ಯಾದ್ಯಂತ ಪ್ರಾರಂಭಿಸಲು ರಾಜ್ಯ ಸರ್ಕಾರ ಇಂದಿಲ್ಲಿ ಮಹತ್ವದ ತೀರ್ಮಾನ ಕೈಗೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಟೆಕ್ನಿಕಲ್ ಶಾಲೆಗಳನ್ನು ಅರಂಭಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿ ಸಿದರು. ಅಭಿವೃದ್ಧಿ ಹೊಂದಿದ ರಾಷ್ಟçಗಳಲ್ಲಿ ಇಂತಹ ಶಾಲೆಗಳನ್ನು ನಡೆಸುತ್ತಿದ್ದು, ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಶಾಲೆಗಳನ್ನು ತೆರೆಯಬೇಕು. ಗ್ರಾಮೀಣ ಮಕ್ಕಳಿಗೆ ಪ್ರೌಢ ಶಿಕ್ಷಣ ದಲ್ಲೇ ತಂತ್ರಜ್ಞಾನ ಅಧ್ಯ ಯನ ಶಿಕ್ಷಣ…

ಪ್ರಧಾನಿ ಮೋದಿ ಸ್ವಂತಕ್ಕಾಗಿ ಏನು ಮಾಡುತ್ತಿಲ್ಲ; ದೇಶಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ
ಮೈಸೂರು

ಪ್ರಧಾನಿ ಮೋದಿ ಸ್ವಂತಕ್ಕಾಗಿ ಏನು ಮಾಡುತ್ತಿಲ್ಲ; ದೇಶಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ

August 18, 2021

ಮೈಸೂರು,ಆ.೧೭(ಆರ್‌ಕೆಬಿ)-ಪ್ರಧಾನಿ ಮೋದಿ ಸ್ವಂತಕ್ಕಾಗಿ ಏನು ಮಾಡಿಲ್ಲ, ದೇಶಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಬಣ್ಣಿಸಿದರು. ಮೈಸೂರಿನ ಮೇದರ ಬ್ಲಾಕ್‌ನ ಅಬ್ದುಲ್ ಕಲಾಂ ವೃತ್ತದ ಬಳಿ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ನಗರ ಮತ್ತು ಜಿಲ್ಲಾ ಗ್ರಾಮಾಂತರದ ವತಿಯಿಂದ ಮಂಗಳವಾರ ಆಯೋಜಿಸಿದ್ದ `ಜನಾಶೀರ್ವಾದ ಯಾತ್ರೆ’ಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಸ್ವಂತಕ್ಕಾಗಿ ಏನೂ ಮಾಡುತ್ತಿಲ್ಲ. ದೇಶಕ್ಕಾಗಿ, ದೇಶದ ಭದ್ರತೆಗಾಗಿ, ಗೌರವಕ್ಕಾಗಿ ಶ್ರಮಿಸುತ್ತಿದ್ದಾರೆ. ಆದರೆ ವಿಪಕ್ಷಗಳು, ಭ್ರಷ್ಟಾಚಾರಕ್ಕಾಗಿ ಮಾರಿಕೊಂಡವರು, ಲಕ್ಷಾಂತರ ಕೋಟಿ…

ಮುಂದುವರೆದ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
ಮೈಸೂರು

ಮುಂದುವರೆದ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

August 18, 2021

ಮೈಸೂರು,ಆ.17(ಪಿಎಂ)-ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ನೇತೃತ್ವದಲ್ಲಿ ಅಂಗನ ವಾಡಿ ಕಾರ್ಯಕರ್ತೆಯರು ಮಂಗಳ ವಾರವೂ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸೇವಾ ಜೇಷ್ಠತೆಯ ಆಧಾರದ ಗೌರವ ಧನ ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಫಾರಸ್ಸಿನಂತೆ 339.48 ಕೋಟಿ ರೂ. ಅನುದಾನ ಬಿಡುಗಡೆಗೊಳಿಸುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರ ಗಳಲ್ಲಿ…

1 200 201 202 203 204 1,611
Translate »