ಮೈಸೂರು,ಆ.16(ಆರ್‍ಕೆ)-ಬಿಜೆಪಿ ದೇಶಾದ್ಯಂತ ಕೈಗೊಂಡಿರುವ ಜನಾಶೀರ್ವಾದ ಯಾತ್ರೆ ಕಾರ್ಯಕರ್ತರ ಸಭೆಯು ನಾಳೆ (ಆ.17) ಮೈಸೂರಿನ ಹೈವೇ ಸರ್ಕಲ್ ಬಳಿಯ ರಿಯೋ ಮೆರಿಡಿಯನ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ. ಈ ಕುರಿತು ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಅವರು, ಮಂಗಳವಾರ ಬೆಳಗ್ಗೆ 11 ಗಂಟೆಗೆ ನಡೆಯ ಲಿರುವ ಬಿಜೆಪಿ ಕಾರ್ಯಕರ್ತರ ಸಭೆ (ಜನಾಶೀರ್ವಾದ ಯಾತ್ರೆ)ಯಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕ್ಷೇಮಾಭಿವೃದ್ಧಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಭಾಗವಹಿಸುವರು ಎಂದರು. ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ನಡೆಯುವ…
ಡಾ.ಅಂಬೇಡ್ಕರ್ ಹೆಸರೇಳಿ ಗೆದ್ದವರು ಈಗ ಚಡ್ಡಿ ಹಾಕುತ್ತಿದ್ದಾರೆ! ಉಡುದಾರವನ್ನು ಜನಿವಾರ ಮಾಡಿಕೊಳ್ಳುತ್ತಿದ್ದಾರೆ!!
August 17, 2021ಮೈಸೂರು,ಆ.16(ಪಿಎಂ)-ಡಾ.ಅಂಬೇಡ್ಕರ್ ಹೆಸರು ಹೇಳಿ ಗೆದ್ದವರು ಈಗ ಚಡ್ಡಿ ಹಾಕಿಕೊಳ್ಳು ತ್ತಿದ್ದಾರೆ. ಉಡುದಾರವನ್ನು ಜನಿವಾರ ಮಾಡಿಕೊಳ್ಳು ತ್ತಿದ್ದಾರೆ ಎಂದು ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ ಟೀಕಿಸಿದರು. ಮೈಸೂರಿನ ವಿಶ್ವಮೈತ್ರಿ ಬುದ್ಧವಿಹಾರದ ಸಭಾಂ ಗಣದಲ್ಲಿ ದಲಿತ ಸಂಘರ್ಷ ಸಮಿತಿ (ದಸಂಸ) ವತಿಯಿಂದ 75ನೇ ಅಮೃತ ಮಹೋತ್ಸವ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸೋಮವಾರ ಹಮ್ಮಿ ಕೊಂಡಿದ್ದ `ಯಾರಿಗೆ ಬಂತು! ಎಲ್ಲಿಗೆ ಬಂತು! 47ರ ಸ್ವಾತಂತ್ರ್ಯ?’ ಕುರಿತ ವಿಚಾರ ಸಂಕಿರಣ ಉದ್ಘಾ ಟಿಸಿ, ನಂತರ ಅವರು ಮಾತನಾಡಿದರು. ಕಳೆದ 7 ವರ್ಷಗಳಲ್ಲಿ…
ಸೆ.1ರಿಂದಲೇ ಕೆರೆಗಳಿಗೆ ನೀರು ಹರಿಸಲು ಶಾಸಕ ಸೂಚನೆ
August 14, 2021ಗುಂಡ್ಲುಪೇಟೆ,ಆ.13(ಸೋಮ್.ಜಿ)-ತಾಲೂಕಿನ ಉದ್ದೇಶಿತ ಕೆರೆಗಳಿಗೆ ಸೆ.1ರಿಂದಲೇ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಶಾಸಕ ಸಿ.ಎಸ್.ನಿರಂಜನಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ತಾಲೂಕು ಕಚೇರಿ ಸಭಾಂಗಣ ದಲ್ಲಿ ಏರ್ಪಡಿಸಿದ್ದ ತ್ರೈಮಾಸಿಕ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದಿನ ತಿಂಗಳ ಮೊದಲ ದಿನ ದಿಂದಲೇ ತಾಲೂಕಿನ ಉದ್ದೇಶಿತ ಕೆರೆಗಳಿಗೆ ನೀರು ತುಂಬಿಸಿಸಲು ಮುಂದಾಗುವಂತೆ ಎಂದು ಕಾವೇರಿ ನೀರಾವರಿ ನಿಗಮದ ಇಂಜಿನಿ ಯರ್ ಮಹೇಶ್ ಅವರಿಗೆ ತಿಳಿಸಿದರು. ನದಿ ನೀರು ತುಂಬಿಸುವ ಯೋಜನೆ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್ ಮಹೇಶ್ ಸೆ.15ರಿಂದ…
ಮೈಸೂರು ಪಾಲಿಕೆ 36ನೇ ವಾರ್ಡ್‍ಗೆ ಉಪಚುನಾವಣೆ ಘೋಷಣೆ
August 13, 2021ಮೈಸೂರು, ಆ.12(ಎಂಟಿವೈ)- ಕಳೆದ ಚುನಾವಣೆ ವೇಳೆ ಸಲ್ಲಿಸಿದ್ದ ದಾಖಲೆಯಲ್ಲಿ ಆದಾಯ ಸಂಬಂಧ ತಪ್ಪು ಮಾಹಿತಿ ನೀಡಿದ್ದ ಮೈಸೂರು ಮಹಾನಗರ ಪಾಲಿಕೆಯ 36ನೇ ವಾರ್ಡ್ ಸದಸ್ಯೆ (ಮೇಯರ್ ಕೂಡಾ ಆಗಿದ್ದ) ರುಕ್ಮಿಣಿ ಮಾದೇಗೌಡ ಅವರ ಸದಸ್ಯತ್ವವನ್ನು ನ್ಯಾಯಾಲಯ ಅಸಿಂಧುಗೊಳಿಸಿದ್ದರಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಸೆ.3ರಂದು ಮತದಾನ ನಡೆಯಲಿದೆ. ರಾಜ್ಯ ಚುನಾವಣಾ ಆಯೋಗ ಇಂದು (ಗುರುವಾರ) ಬೆಳಗ್ಗೆ ಉಪ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ. ಉಪಚುನಾವಣೆಗೆ ಆ.16ರಂದು ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದಲೇ…
ಬಡತನ, ಅಸ್ಪøಶ್ಯತೆ ನಿವಾರಿಸಬಹುದು
August 12, 2021ಮೈಸೂರು,ಆ.11(ಪಿಎಂ)-ದೇಶದಲ್ಲಿ ಬಡತನ ಮತ್ತು ಅಸ್ಪøಶ್ಯತೆ ನಿವಾರಿಸುವ ಸಂಬಂಧ ಸೂಕ್ತ ಕಾರ್ಯಕ್ರಮ ರೂಪಿಸಲು ಜಾತಿ ಜನಗಣತಿಯಿಂದ ಸಾಧ್ಯವಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಾತಿ ಜನಗಣತಿ ಏಕೆ ಮಾಡಬಾರದು? ಎಂದು ಮಾಜಿ ಮುಖ್ಯ ಮಂತ್ರಿಗಳೂ ಆದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು. ಮೈಸೂರಿನ ತಮ್ಮ ನಿವಾಸದಲ್ಲಿ ಬುಧವಾರ ಮಾಧ್ಯಮದವ ರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಮಾಡಿದರೆ ಬಡತನ ಮತ್ತು ಅಸ್ಪøಶ್ಯತೆ ತೊಡೆದು ಹಾಕಲು ಅನುಕೂಲವಾಗಲಿದೆ ಎಂದು ಹೇಳಿದರು. ಅಟಲ್ ಬಿಹಾರಿ ವಾಜಪೇಯಿ ಆರು ವರ್ಷಗಳು ಪ್ರಧಾನಿಯಾಗಿದ್ದರು. ಈಗ…
ಪಿಯು ಕಾಲೇಜುಗಳಲ್ಲಿ ಪ್ರವೇಶಾತಿ ಪ್ರಕ್ರಿಯೆ ಆರಂಭ
August 12, 2021ಮೈಸೂರು, ಆ. 11(ಆರ್‍ಕೆ)- ಈಗ ತಾನೆ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು, ಮೈಸೂರಿನ ಪದವಿಪೂರ್ವ ಕಾಲೇಜು ಗಳಲ್ಲಿ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ. ಪಿಯುಸಿಗೆ ಪ್ರವೇಶ ಅರ್ಜಿ ಪಡೆಯಲು ವಿದ್ಯಾರ್ಥಿಗಳು ಮತ್ತು ಪೋಷಕರು ಮೈಸೂರಿನ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಉದ್ದುದ್ದ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಈ ಬಾರಿ ಅತೀ ಹೆಚ್ಚು ಮಂದಿ ಪರೀಕ್ಷೆಯಲ್ಲಿ ಪಾಸಾಗಿ ರುವುದರಿಂದ ಕಳೆದ ವರ್ಷಕ್ಕಿಂತ ಹೆಚ್ಚಿನ ಬೇಡಿಕೆ ಪಿಯು ಕಾಲೇಜು ಗಳಿಗೆ ಬಂದಿರುವುದರಿಂದ ಸೀಟು ಪಡೆಯಲು ವಿದ್ಯಾರ್ಥಿಗಳು, ಪೋಷಕರು ಪರದಾಡುತ್ತಿದ್ದಾರೆ. ಮಹಾರಾಜ, ಮಹಾರಾಣಿ, ವಿಭಜಿತ…
ಮೈಸೂರು ವಿವಿ ನೇತೃತ್ವದಲ್ಲಿ ನಡೆದ ಕೆ-ಸೆಟ್‍ನಲ್ಲಿ ಭಾರೀ ಅವ್ಯವಹಾರ: ಹುಚ್ಚಾಪಟ್ಟೆ ಪ್ರಶ್ನೆ, ಉತ್ತರ ನಮೂನೆ ಬಗ್ಗೆ ಸಂಸದ ಪ್ರತಾಪ್‍ಸಿಂಹ ಎಚ್ಚರಿಕೆ
August 12, 2021ಮೈಸೂರು, ಆ.11-ಮೈಸೂರು ವಿಶ್ವವಿದ್ಯಾನಿಲಯ ಇತ್ತೀಚೆಗೆ ನಡೆಸಿದ 2021ನೇ ಸಾಲಿನ ಕೆ-ಸೆಟ್‍ನಲ್ಲಿ ಗಂಭೀರವಾದ ಅಕ್ರಮಗಳನ್ನು ಎಸಗಲಾಗಿದೆ. ವಿವಿ ಬಿಡುಗಡೆ ಮಾಡಿರುವ ಕೆ-ಸೆಟ್ ಪರೀಕ್ಷೆಯ ಕೀ ಉತ್ತರ ಗಳನ್ನು ಗಮನಿಸಿದಾಗ ಪ್ರಶ್ನೆಪತ್ರಿಕೆಯಲ್ಲಿ ನೀಡಿರುವ ಉತ್ತರಗಳ ಆಯ್ಕೆಯಲ್ಲೇ ಗಂಭೀರ ಲೋಪವಿರುವುದು ಎದ್ದು ಕಾಣುತ್ತಿದೆ ಎಂದು ಮೈಸೂರು ವಿವಿ ಕುಲಪತಿ ಗಳಿಗೆ ಸಂಸದ ಪ್ರತಾಪ್‍ಸಿಂಹ ಪತ್ರ ಬರೆದಿದ್ದಾರೆ. ಭವಿಷ್ಯದ ಪದವೀಧರರನ್ನು ತಯಾರು ಮಾಡುವ ಉಪನ್ಯಾಸಕರು ಮತ್ತು ಪ್ರಾಧ್ಯಾಪಕರ ಅರ್ಹತೆಯನ್ನು ಅಳೆಯುವ ಕೆ-ಸೆಟ್ ನಡೆಸುವ ಜವಾಬ್ದಾರಿಯನ್ನು ಮೈಸೂರು ವಿವಿಗೆ ನೀಡಲಾಗಿದೆ. ಈ ಹಿಂದೆ ಕೆ-ಸೆಟ್…
ಮುಡಾದಿಂದ ಮೈಸೂರಿನ 3 ಕಡೆ ಬಹುಮಹಡಿ ವಸತಿ ಸಮುಚ್ಛಯ
August 12, 2021ಮೈಸೂರು,ಆ.11-ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರ (ಮುಡಾ)ದ ಮಹತ್ವಾಕಾಂಕ್ಷಿ ಗುಂಪು ಮನೆ ಯೋಜನೆಗೆ ಡಿಪಿಆರ್ ಸಿದ್ಧವಾಗಿದೆ. ಕೈಗೆಟಕುವ ದರದಲ್ಲಿ ಸಾರ್ವಜನಿಕರಿಗೆ ಸೂರು ಕಲ್ಪಿಸುವ ಮಹದುದ್ದೇಶದಿಂದ ಮೈಸೂರು ನಗರಾಭಿ ವೃದ್ಧಿ ಪ್ರಾಧಿಕಾರವು ನಾಲ್ಕು ವರ್ಷದ ಹಿಂದೆಯೇ ಯೋಜನೆ ರೂಪಿಸಿತ್ತಾದರೂ, ಮನೆ ಹಂಚಿಕೆ, ದರ ನಿಗದಿ ಸಂಬಂಧ ಪ್ರತ್ಯೇಕ ಮಾರ್ಗಸೂಚಿ ನಿಗದಿ ಪಡಿಸುವ ಪ್ರಕ್ರಿಯೆ ವಿಳಂಬವಾದ ಕಾರಣ, ಸರ್ಕಾರದ ಹಂತದಲ್ಲಿ ಅನುಮೋದನೆ ಪಡೆಯುವುದು ತಡವಾಯಿತು. ಮುಡಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಹೆಚ್.ವಿ. ರಾಜೀವ್, ಆಸಕ್ತಿ ವಹಿಸಿ ವಸತಿ ಬಡಾ ವಣೆ ರಚಿಸಿ…
ಮೈಸೂರಿನ ಫುಟ್ಸಲ್ ಪಟು ಯಶವಂತ ಕುಮಾರ್ ರೋಮ್‍ನಲ್ಲಿ ದುರಂತ ಸಾವು
August 11, 2021ಮೈಸೂರು, ಆ.10(ಎಸ್‍ಬಿಡಿ)- ಭಾರತದ ಅತ್ಯುತ್ತಮ ಫುಟ್ಸಲ್ ಗೋಲ್ ಕೀಪರ್ ಆಗಬೇಕೆಂಬ ಗುರಿ ಹೊಂದಿದ್ದ ಮೈಸೂರಿನ ಪ್ರತಿಭಾನ್ವಿತ ಯುವ ಕ್ರೀಡಾಪಟು, ದೂರದ ಇಟಲಿ ದೇಶದ ರೋಮ್ ನಗರದಲ್ಲಿ ದುರಂತ ಸಾವಿಗೀಡಾ ಗಿದ್ದಾರೆ. ಮೈಸೂರಿನ ಎನ್.ಆರ್.ಮೊಹಲ್ಲಾದ ನಿವಾಸಿ, ಕರಕುಶಲ ಕಲಾವಿದ ಎನ್.ಕುಮಾರ್ ಹಾಗೂ ಎನ್. ರೂಪಾ ದಂಪತಿ ಪುತ್ರ ಯಶವಂತ ಕುಮಾರ್(23) ಇಟಲಿಯಲ್ಲಿ ಮೃತಪಟ್ಟಿರುವ ಫುಟ್ಸಲ್ ಆಟಗಾರ. ವಿದ್ಯಾ ವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿ, `ಸೀರೀ ಬಿ ಫುಟ್ಸಲ್ ಲೀಗ್’ ನಲ್ಲಿ `ಕ್ಯಾಲ್ಸಿಯೊ ಸಿ 5 ತಂಡದೊಂದಿಗೆ…
ಪೌರಕಾರ್ಮಿಕರ ವಿಚಾರಕ್ಕೆ ಗದ್ದಲ: ಆಡಳಿತ-ವಿಪಕ್ಷ ಸದಸ್ಯರ ವಾಕ್ಸಮರ
August 11, 2021ಮೈಸೂರು, ಆ.10(ಆರ್‍ಕೆ)- ಪೌರಕಾರ್ಮಿಕರ ಹಾಜರಾತಿ ಪಡೆ ಯುವಲ್ಲಿ ಅಧಿಕಾರಿಗಳು ಲೋಪವೆಸ ಗಿದ್ದಾರೆ ಎಂಬ ಆರೋಪದ ಸಂಬಂಧ ಗಂಭೀರ ಚರ್ಚೆ ನಡೆದು, ಓರ್ವ ಮಹಿಳಾ ಸದಸ್ಯೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಇಂದು ನಡೆದ ಪಾಲಿಕೆ ಮುಂದುವರೆದ ಕೌನ್ಸಿಲ್ ಸಭೆಯಲ್ಲಿ ಗದ್ದಲ, ಆಡಳಿತ ಮತ್ತು ವಿಪಕ್ಷ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿ, ಪರಸ್ಪರ ಕೆಸರೆರಚಿ ಕೊಂಡ ಪ್ರಸಂಗ ನಡೆಯಿತು. ಮೈಸೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಬೆಳಗ್ಗೆ 11.40 ಗಂಟೆಗೆ ಆರಂಭವಾದ ಕೌನ್ಸಿಲ್ ಸಭೆಯಲ್ಲಿ ಪೌರಕಾರ್ಮಿಕರ ಸಮಸ್ಯೆ ಬಗ್ಗೆ ಪ್ರಮೀಳಾ ಭರತ್, ಸುನಂದ…










