ಮೈಸೂರು

ರೈತರು ಕೃಷಿ ಕ್ಷೇತ್ರದಲ್ಲೇ ಪ್ರಗತಿ ಕಾಣಲು ಕಾರ್ಯಯೋಜನೆ
ಮೈಸೂರು

ರೈತರು ಕೃಷಿ ಕ್ಷೇತ್ರದಲ್ಲೇ ಪ್ರಗತಿ ಕಾಣಲು ಕಾರ್ಯಯೋಜನೆ

August 18, 2021

ಮೈಸೂರು, ಆ.17(ಎಂಟಿವೈ)- ದೇಶದ ಒಟ್ಟು ಜನಸಂಖ್ಯೆಯ ಶೇ.80ರಷ್ಟು ಇರುವ ರೈತರ ಹಿತವನ್ನು ನಾವು ಕಾಯಬೇಕಿದೆ. ರೈತರು ಕೃಷಿಯಲ್ಲೇ ಉಳಿದು, ಪ್ರಗತಿ ಸಾಧಿಸು ವಂತೆ ನೋಡಿಕೊಳ್ಳಬೇಕಿದೆ. ಕೃಷಿ ಕ್ಷೇತ್ರ ವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕಿದೆ. ಈ ದಿಸೆಯಲ್ಲಿ ನಮ್ಮ ಇಲಾಖೆಯಿಂದ ಉತ್ತಮ ಕಾರ್ಯಯೋಜನೆ ರೂಪಿಸುವೆ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ತಮ್ಮ ಚಿಂತನೆಗಳನ್ನು ಹಂಚಿಕೊಂಡರು. ಕೇಂದ್ರ ಸಚಿವೆಯಾದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಶೋಭಾ, ಮಂಗಳವಾರ ಬೆಳಗ್ಗೆ ಚಾಮುಂಡಿಬೆಟ್ಟಕ್ಕೆ ತೆರಳಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ…

ಆಫ್ಘಾನ್ ವಿದ್ಯಾರ್ಥಿಗಳಿಗೆ ಮೈಸೂರು ವಿವಿ  ಕುಲಪತಿ ಪ್ರೊ.ಹೇಮಂತ್‍ಕುಮಾರ್ ಅಭಯ
ಮೈಸೂರು

ಆಫ್ಘಾನ್ ವಿದ್ಯಾರ್ಥಿಗಳಿಗೆ ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್‍ಕುಮಾರ್ ಅಭಯ

August 18, 2021

ಮೈಸೂರು, ಆ.17(ಆರ್‍ಕೆ)-ಆಫ್ಘಾನಿಸ್ಥಾನ್‍ನಲ್ಲಿ ಉಂಟಾಗಿರುವ ಅರಾಜಕತೆ ಯಿಂದ ಆತಂಕಗೊಂಡಿರುವ ಆಫ್ಘಾನ್ ವಿದ್ಯಾರ್ಥಿಗಳಿಗೆ ಮೈಸೂರು ವಿಶ್ವವಿದ್ಯಾ ನಿಲಯದ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಅಭಯ ನೀಡಿದ್ದಾರೆ. ಆಫ್ಘಾನಿಸ್ಥಾನ್‍ನಲ್ಲಿ ನಡೆಯುತ್ತಿರುವ ಹಿಂಸಾಕೃತ್ಯದಿಂದ ಭಯಭೀತರಾಗಿರುವ ಮೈಸೂರು ವಿಶ್ವವಿದ್ಯಾನಿಲಯದ 90 ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಅವರು, ನಿಮ್ಮ ಪೋಷಕರಂತೆ ನಾವು ನಿಮ್ಮನ್ನು ನೋಡಿಕೊಳ್ಳುತ್ತೇವೆ, ಚಿಂತಿಸದೇ ವಿದ್ಯಾಭ್ಯಾಸ ಮುಂದುವರಿಸಿ ಎಂದರು. ತಮ್ಮ ಕಚೇರಿಗೆ ಇಂದು ಆಫ್ಘಾನಿ ವಿದ್ಯಾರ್ಥಿಗಳನ್ನು ಕರೆಸಿಕೊಂಡಿದ್ದ ಅವರು, ಇಲ್ಲಿ ನೀವು ವ್ಯಾಸಂಗ ಮಾಡಲು, ವಾಸ್ತವ್ಯಕ್ಕೆ ಏನೂ ತೊಂದರೆಯಾಗದ ಹಾಗೆ ನಮ್ಮ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ನಿಮ್ಮ ಪೋಷಕರನ್ನೂ…

ಸಿಡಿಲಿನಿಂದ ರಕ್ಷಿಸಲು  ಗಂಟೆ ಎಚ್ಚರಿಕೆ ಸಂದೇಶ
ಮೈಸೂರು

ಸಿಡಿಲಿನಿಂದ ರಕ್ಷಿಸಲು ಗಂಟೆ ಎಚ್ಚರಿಕೆ ಸಂದೇಶ

August 18, 2021

ಬೆಂಗಳೂರು, ಆ.17(ಕೆಎಂಶಿ)-ಗುಡುಗು ಸಿಡಿಲಿನಿಂದ ಜನ ಸಾಯುವುದನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಎಚ್ಚರಿಕೆ ಘಂಟೆ ನೀಡುವ ತಂತ್ರ ಜ್ಞಾನವನ್ನು ಅಳವಡಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನೆರವಿ ನಿಂದ ಪ್ರತಿ ಪಂಚಾಯಿತಿಯಲ್ಲೂ ಎಚ್ಚ ರಿಕೆ ಘಂಟೆ ಅಳವಡಿಸಿ, ಗುಡುಗು ಸಿಡಿಲಿಗೂ ಮುನ್ನ ಅಂದರೆ 30 ನಿಮಿಷಗಳ ಮುಂಚೆ ಸಾರ್ವಜನಿಕರಿಗೆ ಘಂಟೆ ಮೂಲಕ ಸಂದೇಶ ರವಾನಿಸಲಾಗುವುದು. ಘಂಟೆಯ ಸಂದೇಶ ಒಂದೂ ವರೆ ಕಿಲೋಮೀಟರ್ ವ್ಯಾಪ್ತಿಗೆ ತಲುಪುತ್ತಿದ್ದು, ಈ ಶಬ್ದ…

ವರ್ತಕರಿಂದ ಸುಲಿಗೆ: ನಕಲಿ  ಹೆಲ್ತ್ ಇನ್ಸ್‍ಪೆಕ್ಟರ್ ಬಂಧನ
ಮೈಸೂರು

ವರ್ತಕರಿಂದ ಸುಲಿಗೆ: ನಕಲಿ ಹೆಲ್ತ್ ಇನ್ಸ್‍ಪೆಕ್ಟರ್ ಬಂಧನ

August 18, 2021

ಮೈಸೂರು,ಆ.17(ಆರ್‍ಕೆ)- ಮೈಸೂರು ಮಹಾನಗರ ಪಾಲಿಕೆ ಹೆಲ್ತ್ ಇನ್ಸ್‍ಪೆಕ್ಟರ್ ಎಂದು ಹೇಳಿಕೊಂಡು ಅಂಗಡಿ ವರ್ತಕರಿಂದ ಹಣ ವಸೂಲಿ ಮಾಡುತ್ತಿದ್ದ ಯುವಕನನ್ನು ಪಾಲಿಕೆ ವಲಯ ಕಚೇರಿ-5ರ ಅಧಿಕಾರಿಗಳು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಮೈಸೂರಿನ ವಿದ್ಯಾರಣ್ಯಪುರಂ, ಸಿವೇಜ್ ಫಾರಂ ರಸ್ತೆ ನಿವಾಸಿ ವರದರಾಜು ಅವರ ಮಗ ವಿ. ಕಾರ್ತಿಕ್ ಬಂಧಿತ ನಕಲಿ ಪಾಲಿಕೆ ಹೆಲ್ತ್ ಇನ್ಸ್‍ಪೆಕ್ಟರ್, ಎಂಬಿಎ ಪದವಿ ಪಡೆದು ಖಾಸಗಿ ಬ್ಯಾಂಕೊಂದರಲ್ಲಿ ಕೆಲಸ ಮಾಡು ತ್ತಿದ್ದ ಆತ, ಮೈಸೂರು ಮಹಾನಗರ ಪಾಲಿಕೆ ಹೆಲ್ತ್ ಇನ್ಸ್‍ಪೆಕ್ಟರ್ ಎಂದು ಹೇಳಿ ಕೊಂಡು ನಕಲಿ ಗುರುತಿನ…

ಮೈಸೂರಲ್ಲಿ ಸೋಂಕು ಇಳಿಕೆ
ಮೈಸೂರು

ಮೈಸೂರಲ್ಲಿ ಸೋಂಕು ಇಳಿಕೆ

August 18, 2021

ಮೈಸೂರು, ಆ.17(ವೈಡಿಎಸ್)- ಮೈಸೂರು ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಇಳಿಮುಖವಾಗಿದ್ದು, ಮಂಗಳವಾರ 88 ಮಂದಿಗೆ ಸೋಂಕು ತಗುಲಿದೆ. ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಮಂಗಳವಾರ 131 ಮಂದಿ ಗುಣಮುಖರಾಗಿದ್ದು, ಈವರೆಗೆ 1,71,340 ಮಂದಿ ಗುಣ ಕಂಡಿದ್ದಾರೆ. ಈವರೆಗೆ 1,74,767 ಮಂದಿಗೆ ಸೋಂಕು ತಗುಲಿದೆ. ಈವರೆಗೆ 2,340 ಮಂದಿ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿನ್ನೂ 1,087 ಸಕ್ರಿಯ ಪ್ರಕರಣಗಳಿವೆ. ರಾಜ್ಯ: ಬಳ್ಳಾರಿ 5, ಬೆಳಗಾವಿ 27, ಬೆಂಗಳೂರು ಗ್ರಾಮಾಂ ತರ 30, ಬೆಂಗಳೂರು ನಗರ 340, ಚಾಮರಾಜನಗರ 7, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು…

ನಮ್ಮ ರೈತರೇ ಎಣ್ಣೆಕಾಳು ಬೆಳೆದರೆ ಖಾದ್ಯತೈಲ ಕೊರತೆ ನಿವಾರಣೆ
ಮೈಸೂರು

ನಮ್ಮ ರೈತರೇ ಎಣ್ಣೆಕಾಳು ಬೆಳೆದರೆ ಖಾದ್ಯತೈಲ ಕೊರತೆ ನಿವಾರಣೆ

August 18, 2021

ಮೈಸೂರು,ಆ.17(ಆರ್‍ಕೆಬಿ)-ಭಾರತದಲ್ಲಿ ಆಹಾರದ ಕೊರತೆ ಇಲ್ಲ. ಆದರೆ ಖಾದ್ಯ ತೈಲದ ಕೊರತೆ ಎದು ರಾಗಿದೆ. ಶೇ.70ರಷ್ಟು ಮಲೇಷಿಯಾ ಇನ್ನಿತರೆ ದೇಶ ಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ನಾವು ಖಾದ್ಯ ತೈಲ ಖರೀದಿಗೆ ಹೆಚ್ಚು ಹಣ ವ್ಯಯ ಮಾಡು ತ್ತಿದ್ದೇವೆ. ಪಾಮ್ ಆಯಿಲ್ ಆರೋಗ್ಯಕರವಲ್ಲ. ಹಾಗಾಗಿ ಖಾದ್ಯ ತೈಲ ಕೊರತೆ ನೀಗಿಸಲು ನಮ್ಮ ರೈತರೇ ಎಣ್ಣೆ ಕಾಳುಗಳನ್ನು ಬೆಳೆಯಲು ಪ್ರಧಾನಿ ನರೇಂದ್ರ ಮೋದಿ ಆದ್ಯತೆ ನೀಡಿದ್ದಾರೆ ಎಂದು ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. ಮೈಸೂರಿನ…

ನಾವು ಕೇಳಿದ್ದು ಸ್ವಲ್ಪ… ಆದರೆ, ಕೇಂದ್ರ ನೀಡಿದ್ದೇ ಹೆಚ್ಚು
ಮೈಸೂರು

ನಾವು ಕೇಳಿದ್ದು ಸ್ವಲ್ಪ… ಆದರೆ, ಕೇಂದ್ರ ನೀಡಿದ್ದೇ ಹೆಚ್ಚು

August 17, 2021

ಮೈಸೂರು, ಆ.16(ಆರ್‍ಕೆಬಿ)- ನಾವು ಕೇಳಿದ್ದು ಸ್ವಲ್ಪ, ಆದರೆ ಕೇಂದ್ರ ಸರ್ಕಾರ ನಮಗೆ ನೀಡಿದ್ದೇ ಹೆಚ್ಚು ಎಂದು ಕರ್ನಾ ಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹ ಕಾರಿ ಸಂಘದÀ ಅಧ್ಯಕ್ಷ ಬಿ.ಹೆಚ್‍ಕೃಷ್ಣಾರೆಡ್ಡಿ ಸಹಕಾರಿಗಳ ಸಂಘಗಳ ಪರವಾಗಿ ಕೇಂದ್ರ ಸರ್ಕಾರವನ್ನು ಅಭಿನಂದಿಸಿದರು. ಮೈಸೂರಿನ ಎಂ.ಜಿ.ರಸ್ತೆಯ ಖಾಸಗಿ ಹೋಟೆಲ್‍ನಲ್ಲಿ ಸೋಮವಾರ ಆಯೋಜಿ ಸಿದ್ದ ಮೈಸೂರು, ಮಂಡ್ಯ, ಚಾಮರಾಜ ನಗರ ಮತ್ತು ಕೊಡಗು ಜಿಲ್ಲೆಗಳ ಸೌಹಾರ್ದ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮಾಲೋಚನಾ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸ್ವಾತಂತ್ರ್ಯದ…

ಕಾವೇರಿ ನದಿಯಲ್ಲಿ ಮುಳುಗುತ್ತಿದ್ದ ವೃದ್ಧ, ಯುವಕನನ್ನು  ರಕ್ಷಿಸಿದ ಮೈಸೂರಿನ ಫೋಟೋಗ್ರಫಿ ತರಬೇತುದಾರ
ಮೈಸೂರು

ಕಾವೇರಿ ನದಿಯಲ್ಲಿ ಮುಳುಗುತ್ತಿದ್ದ ವೃದ್ಧ, ಯುವಕನನ್ನು ರಕ್ಷಿಸಿದ ಮೈಸೂರಿನ ಫೋಟೋಗ್ರಫಿ ತರಬೇತುದಾರ

August 17, 2021

ಮೈಸೂರು, ಆ. 16(ಆರ್‍ಕೆ)- ಹಾಸನ ಜಿಲ್ಲೆಯ ಕೊಣನೂರು ಬಳಿ ಕಾವೇರಿ ನದಿ ಯಲ್ಲಿ ಮುಳುಗುತ್ತಿದ್ದ ವೃದ್ಧನನ್ನು ರಕ್ಷಿಸ ಲೆತ್ನಿಸಿ, ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ಮೈಸೂರಿನ ಫೋಟೋ ಗ್ರಫಿ ತರಬೇತುದಾರ ಗಿರಿಮಂಜು ಭಾನು ವಾರ ರಕ್ಷಿಸಿದ್ದಾರೆ. ಚಿಕ್ಕ ಅರಕಲಗೂಡು ನಿವಾಸಿ 94 ವರ್ಷದ ದಾಸೇಗೌಡ ಹಾಗೂ ಹಾಸನದ ಯುವಕ ನವೀನ್(23) ಅವರನ್ನು ಗಿರಿ ಮಂಜು ಸಮಯಪ್ರಜ್ಞೆಯಿಂದ ರಕ್ಷಿಸಿ ದ್ದಾರೆ. ಮೈಸೂರಿನ ನ್ಯಾಷನಲ್ ಅಕಾ ಡೆಮಿ ಆಫ್ ರುಡ್‍ಸೆಟ್‍ನಲ್ಲಿ ಫೋಟೋ ಗ್ರಫಿ ಉಪನ್ಯಾಸಕರಾಗಿ ಕೆಲಸ ಮಾಡು ತ್ತಿರುವ ಮಂಜು,…

ಸಿ.ಟಿ.ರವಿ, ಪ್ರಿಯಾಂಕ ಖರ್ಗೆಗೆ ಬುದ್ಧಿ ಇದೆಯೇ?
ಮೈಸೂರು

ಸಿ.ಟಿ.ರವಿ, ಪ್ರಿಯಾಂಕ ಖರ್ಗೆಗೆ ಬುದ್ಧಿ ಇದೆಯೇ?

August 17, 2021

ಮೈಸೂರು, ಆ.16(ಆರ್‍ಕೆಬಿ)- ದೇಶದ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಮತ್ತು ಅಟಲ್‍ಬಿಹಾರಿ ವಾಜಪೇಯಿ ಅವರ ಬಗ್ಗೆ ಅವಹೇಳನ ಕಾರಿ ಹಾಗೂ ಬಾಲಿಶವಾಗಿ ಹೇಳಿಕೆ ನೀಡುತ್ತಿರುವ ಸಿ.ಟಿ.ರವಿ ಮತ್ತು ಪ್ರಿಯಾಂಕ ಖರ್ಗೆ ಅವರಿಗೆ ಬುದ್ದಿ ಇದೆಯೇ? ಅವರನ್ನು ಹೀಗೆಲ್ಲಾ ಹೇಳಬೇಡ `ಬಾಯಿ ಮುಚ್ಚಿ’ ಎಂದು ಹೇಳುವಷ್ಟು ನೈತಿಕತೆ ಮಾಜಿ ಸಿಎಂಗಳಿಗಿದೆಯೇ? ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಇಂದಿಲ್ಲಿ ಪ್ರಶ್ನಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಡಿತ್ ಜವಾಹರಲಾಲ್ ನೆಹರು ಮತ್ತು…

ಆಗಸ್ಟ್ ಕಡೇ ವಾರ ಮೈಸೂರಲ್ಲಿ ದಸರಾ ಸಭೆ
ಮೈಸೂರು

ಆಗಸ್ಟ್ ಕಡೇ ವಾರ ಮೈಸೂರಲ್ಲಿ ದಸರಾ ಸಭೆ

August 17, 2021

ಮೈಸೂರು, ಆ. 16(ಆರ್‍ಕೆ)- ದಸರಾ ಆಚರಣೆ ಸಂಬಂಧ ಆಗಸ್ಟ್ ಕಡೇ ವಾರ ಮೈಸೂರಲ್ಲಿ ಸಭೆ ನಡೆಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮ ಶೇಖರ್ ತಿಳಿಸಿದ್ದಾರೆ. ಭಾನುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಕೋವಿಡ್ ಸೋಂಕು ಇನ್ನೂ ಸಂಪೂರ್ಣ ವಾಗಿ ನಿರ್ನಾಮವಾಗದ ಹಿನ್ನೆಲೆಯಲ್ಲಿ ಈ ಬಾರಿಯೂ ನಾಡಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಾಧ್ಯವಾಗ ದಿರಬಹುದು. ಈ ಸಂಬಂಧ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪ್ರಮುಖರು ಹಾಗೂ ಅಧಿಕಾರಿ ಗಳೊಂದಿಗೆ ಸಭೆ ನಡೆಸಿ ಅಭಿಪ್ರಾಯ, ಸಲಹೆಗಳನ್ನು ಪಡೆದು ಅದರಂತೆ ಕಾರ್ಯಕ್ರಮದ ರೂಪು-ರೇಷೆ ಸಿದ್ಧಪಡಿಸಲಾಗುವುದು…

1 201 202 203 204 205 1,611
Translate »