ನಂಜನಗೂಡು, ಮೇ 3- ಕೋವಿಡ್ ಸೋಂಕಿ ತರಿಗೆ ಆಮ್ಲಜನಕ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ತಾಲೂಕಿನ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಲ್ಲಿರುವ ಆಮ್ಲಜನಕ ಸಿಲಿಂಡರ್‍ಗಳನ್ನು ವಿಪತ್ತು ಕಾಯ್ದೆ ಯನ್ವಯ ವಶಕ್ಕೆ ಪಡೆಯುವಂತೆ ತಹ ಶೀಲ್ದಾರ್ ಅವರಿಗೆ ಸೂಚಿಸಲಾಗಿದೆ ಎಂದು ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು. ನಗರದ ಶ್ರೀಕಂಠೇಶ್ವರ ದೇವಾಲಯದ ದಾಸೋಹ ಭವನಕ್ಕೆ ಸೋಮವಾರ ಭೇಟಿ ನೀಡಿ, ಕೋವಿಡ್ ಕೇರ್ ಕೇಂದ್ರ ಹಾಗೂ ಕೊರೊನಾ ವಾರಿಯರ್ಸ್‍ಗಳಿಗೆ ಆಹಾರ ವಿತರಣೆ ಸಂಬಂಧ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತಾಲೂಕಿನ ಸರ್ಕಾರಿ ಆಸ್ಪತ್ರೆ ಹಾಗೂ…
ಪಾಲಿಕೆ ಆಶ್ರಯ ಕೇಂದ್ರದಲ್ಲಿ ನಾಲ್ವರಿಗೆ ಕೊರೊನಾ ಪಾಸಿಟಿವ್
May 3, 2021ಮೈಸೂರು, ಮೇ2(ಆರ್‍ಕೆಬಿ)- ಮೈಸೂರಿನ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿ ನಗರಪಾಲಿಕೆ ವತಿ ಯಿಂದ ನಡೆಯುತ್ತಿರುವ ಶಾಶ್ವತ ನಗರ ವಸತಿರಹಿತ ಪುರುಷರ ಆಶ್ರಯ ಕೇಂದ್ರದಲ್ಲಿದ್ದ 34 ಮಂದಿ ವಸತಿರಹಿತರ ಪೈಕಿ ನಾಲ್ಕು ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಪಾಸಿಟಿವ್ ವರದಿ ಬರುತ್ತಿದ್ದಂತೆ ಅವರನ್ನು ಪ್ರತ್ಯೇಕವಾಗಿ ಇರಿಸಿ, ಶನಿವಾರವೇ ಕೋವಿಡ್ ಕೇರ್ ಕೇಂದ್ರಕ್ಕೆ ಸೇರಿಸಲಾಗಿದೆ. ಉಳಿದೆಲ್ಲಾ ನಿರಾಶ್ರಿತರ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ. ಹೀಗಾಗಿ ಭಾನುವಾರ ಆಶ್ರಯ ಕೇಂದ್ರವನ್ನು ನಗರ ಪಾಲಿಕೆ ವತಿಯಿಂದ ಸ್ಯಾನಿಟೈಜ್ ಮಾಡಲಾಯಿತು. ಮೈಸೂರು ನಗರಪಾಲಿಕೆ ಕೌಶಲ್ಯಾಭಿವೃದ್ಧಿ…
ನಂಜರಾಜ ಬಹದ್ದೂರ್ ಛತ್ರದಲ್ಲಿ ಇನ್ನೂ ಆರಂಭವಾಗದ ನಿರ್ಗತಿಕರ ಆಶ್ರಯ ಕೇಂದ್ರ
May 3, 2021ಮೈಸೂರು, ಮೇ2(ಆರ್‍ಕೆಬಿ)- ಕೋವಿಡ್-19 ವೈರಾಣು ಹರಡುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಕಫ್ರ್ಯೂ ವೇಳೆ ನಿರ್ಗತಿಕರು, ಕೂಲಿ ಕಾರ್ಮಿಕರು, ಅನಾ ಥರು, ವಸತಿ ರಹಿತರಿಗೆ ಮೈಸೂರಿನ ಮೆಟ್ರೋ ಪೋಲ್ ವೃತ್ತದ ಬಳಿಯ ನಂಜರಾಜ ಬಹದ್ದೂರ್ ಛತ್ರದಲ್ಲಿ ನಿರ್ಗತಿಕರ ಆಶ್ರಯ ಕೇಂದ್ರ ಪ್ರಾರಂಭ ಮಾಡಿರುವುದಾಗಿ 2 ದಿನಗಳ ಹಿಂದೆ (ಶುಕ್ರವಾರ) ಪ್ರಕಟಣೆ ಹೊರ ಡಿಸಿದ್ದ ಮೈಸೂರು ಮಹಾನಗರಪಾಲಿಕೆ ಮೂರು ದಿನಗಳಾದÀರೂ ಇನ್ನೂ ಅಂತಹ ಕೇಂದ್ರವನ್ನು ತೆರೆದಿಲ್ಲ. ನಂಜರಾಜ ಬಹದ್ದೂರ್ ಛತ್ರದಲ್ಲಿ ಅಂತಹ ಯಾವುದೇ ಸಿದ್ಧತೆಗಳು ಕೈಗೊಂಡಿಲ್ಲದಿ ರುವ ಬಗ್ಗೆ `ಮೈಸೂರು ಮಿತ್ರ’…
ಕೋವಿಡ್ ಶಿಷ್ಟಾಚಾರ ಪಾಲನೆ ಆಗುತ್ತಿಲ್ಲ
May 3, 2021ಮೈಸೂರು,ಮೇ 2(ಪಿಎಂ)- ಮೈಸೂರು ಜಿಲ್ಲೆಯಲ್ಲಿ ವಾರಸುದಾರರಿಗೆ ಮೃತದೇಹ ನೀಡುವಲ್ಲಿ ಕೋವಿಡ್ ಶಿಷ್ಟಾಚಾರ ಪಾಲನೆ ಯಾಗುತ್ತಿಲ್ಲ. ಸೋಂಕಿತರ ಮೇಲೆ ನಿಗಾ ವಿಟ್ಟು ಮೇಲ್ವಿಚಾರಣೆ ಮಾಡುವ ಕೆಲಸವೂ ಆಗುತ್ತಿಲ್ಲ. ಜಿಲ್ಲಾಡಳಿತದ ಇಂತಹ ವೈಫಲ್ಯ ದಿಂದ ಕೋವಿಡ್ ಸೋಂಕು ಜಿಲ್ಲೆಯಲ್ಲಿ ವ್ಯಾಪಕವಾಗುತ್ತಿದೆ ಎಂದು ಶಾಸಕ ಸಾ.ರಾ.ಮಹೇಶ್ ಆರೋಪಿಸಿದರು. ಮೈಸೂರಿನ ತಮ್ಮ ಕಚೇರಿ ಆವರಣ ದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಜಿಲ್ಲಾಡಳಿ ತದ ವೈಫಲ್ಯವೇ ಕಾರಣ. ಮೊನ್ನೆ ಕೋವಿಡ್ ನಿಂದ ಕೆಆರ್ ನಗರ…
ಕೊರೊನಾ ಹರಡುವಿಕೆ ತಡೆಯಲು ಮೈಸೂರಿನ ಮಾರುಕಟ್ಟೆಗಳು ಬಂದ್
May 3, 2021ಮೈಸೂರು,ಮೇ2(ಎಂಟಿವೈ)-ಜನಜಂಗುಳಿ ಹೆಚ್ಚಾಗಿ ಕೊರೊನಾ ಸೋಂಕು ಹರಡುವಿಕೆ ಆತಂಕದಿಂದ ಸರ್ಕಾರದ ಆದೇಶದ ಮೇರೆಗೆ ಭಾನುವಾರದಿಂದ ಮೈಸೂರಿನ ದೇವರಾಜ, ವಾಣಿವಿಲಾಸ, ಮಂಡಿ ಹಾಗೂ ಎಂ.ಜಿ.ರಸ್ತೆ ತರಕಾರಿ ಮಾರುಕಟ್ಟೆಯನ್ನು ಮೈಸೂರು ನಗರ ಪಾಲಿಕೆ ಹಾಗೂ ಪೊಲೀಸರು ಬಂದ್ ಮಾಡಿಸಿದ್ದಾರೆ. ಕೊರೊನಾ 2ನೇ ಅಲೆ ತೀವ್ರಗೊಂಡಿದ್ದು, ಕಳೆದೊಂದು ತಿಂಗ ಳಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುವುದಲ್ಲದೆ ಸಾವಿಗೀಡಾ ಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಆತಂಕವನ್ನುಂಟು ಮಾಡಿದೆ. ರಾಜ್ಯ ಸರ್ಕಾರ ವೀಕೆಂಡ್ ಕಫ್ರ್ಯೂ ಜಾರಿಗೊಳಿಸಿದ ನಂತರ 14 ದಿನ ಕೋವಿಡ್ ಕಫ್ರ್ಯೂ ಜಾರಿಗೊಳಿಸಿದೆ. ಹಣ್ಣು-ತರಕಾರಿ ಸೇರಿದಂತೆ ಅಗತ್ಯ…
ಆಕ್ಸಿಜನ್ ರೀ-ಫಿಲ್ಲಿಂಗ್ ಘಟಕಕ್ಕೆ 24ಘಿ7 ಪೊಲೀಸರ ಕಣ್ಗಾವಲು
May 3, 2021ಮೈಸೂರು, ಮೇ 2(ಎಂಟಿವೈ)-ಕೊರೊನಾ ಎರಡನೇ ಹಂತದ ಅಲೆಯ ತೀವ್ರತೆಯಿಂದಾಗಿ ದಿನದಿಂದ ದಿನಕ್ಕೆ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಕ್ಸಿಜನ್ ಕೊರತೆ ಉಂಟಾಗದಂತೆ ಕಟ್ಟೆಚ್ಚರ ವಹಿ ಸಲು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಆಕ್ಸಿಜನ್ ಘಟಕಗಳ ಮಾಲೀ ಕರಿಗೆ ಕೈಗಾರಿಕೆಗಳಿಗೆ ಆಮ್ಲಜನಕ ಸರಬ ರಾಜು ಮಾಡುವುದನ್ನು ಸ್ಥಗಿತಗೊಳಿಸು ವಂತೆ ಸೂಚಿಸಿದ್ದಾರೆ. ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶ ದಲ್ಲಿರುವ ಆಕ್ಸಿಜನ್ ರೀ-ಫಿಲ್ಲಿಂಗ್ ಕೈಗಾ ರಿಕೆಗೆ ಜಿಲ್ಲಾಧಿಕಾರಿ…
ನಿರಾಶ್ರಿತರಿಗೆ ಆಹಾರ ನೀಡುವ ಮುಂದುವರಿದ ಮಾನವೀಯ ಕಾರ್ಯ
May 3, 2021ಮೈಸೂರು, ಮೇ2(ಆರ್‍ಕೆಬಿ)- ಕೋವಿಡ್ ಕಫ್ರ್ಯೂ ನಡುವೆಯೂ ಹಸಿದವರಿಗೆ ಅನ್ನ ನೀಡುವ ಕಾರ್ಯ ಮುಂದುವರಿದಿದೆ. ಹಲವು ಸಂಘ ಟನೆಗಳು ವಲಸೆ ಕಾರ್ಮಿಕರು, ನಿರಾಶ್ರಿ ತರಿಗೆ ಭಾನುವಾರವೂ ಊಟ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಕ್ಷಯ ಆಹಾರ ಫೌಂಡೇಷನ್ ಭಾನು ವಾರವೂ ಕೆ.ಆರ್.ಆಸ್ಪತ್ರೆ ಎದುರು, ಎಲ್ಲಮ್ಮ ಕಾಲೋನಿ, ಕೇಂದ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಹಲವು ಕಡೆಗಳಲ್ಲಿ ತೆರಳಿ 13 ದೊಡ್ಡ ಕ್ಯಾರಿಯರ್ ಪಾತ್ರೆಗಳಲ್ಲಿ ತಯಾರಿಸಿ ತಂದಿದ್ದ ಬಿಸಿ ಬೇಳೆಬಾತ್, ರೈಸ್‍ಬಾತ್, ಅನ್ನ ಸಾಂಬಾರ್ ವಿತರಿಸಿದರು. ಪ್ರತಿದಿನದಂತೆ ಇಂದೂ…
ಮೈಸೂರು ಜಿಲ್ಲಾ ಪತ್ರಕರ್ತರಿಗೆ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ಆರಂಭಿಸಿ ಅಧಿಕಾರಿಗಳಿಗೆ ಆರೋಗ್ಯ ಸಚಿವ ಡಾ.ಸುಧಾಕರ್ ಸೂಚನೆ
May 3, 2021ಮೈಸೂರು,ಮೇ 2(ಪಿಎಂ)- ಮೈಸೂರು ಜಿಲ್ಲೆಯ ಎಲ್ಲಾ ಪತ್ರಕರ್ತರಿಗೂ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ಆರಂಭಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾ ಕರ್ ಸೂಚನೆ ನೀಡಿದ್ದು, ಆ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಅವರ ಪತ್ರಕ್ಕೆ ಸ್ಪಂದಿಸಿದ್ದಾರೆ. ಶನಿವಾರವಷ್ಟೇ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದ ಸಚಿವ ಎಸ್.ಟಿ.ಸೋಮ ಶೇಖರ್, ಮೈಸೂರು ಜಿಲ್ಲೆಯಲ್ಲಿ ಸ್ಥಳೀಯ ಮಟ್ಟದ, ಜಿಲ್ಲಾ ಮಟ್ಟದ, ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟದ ಮಾಧ್ಯಮಗಳಲ್ಲಿ ಮಾಧ್ಯಮ ಮಿತ್ರರು ಕಾರ್ಯನಿರ್ವಹಿಸುತ್ತಿ ದ್ದಾರೆ. ಇವರು…
3 `ಕೋವಿಡ್-ಮಿತ್ರ’ ಕೇಂದ್ರಗಳ ಸಿದ್ಧತೆ ಪರಿಶೀಲಿಸಿದ ಡಿಸಿ, ಪಾಲಿಕೆ ಆಯುಕ್ತೆ
May 3, 2021ಕೋವಿಡ್ ವಾರ್ ರೂಂ ಸಹಾಯವಾಣಿಗೆ ಈವರೆಗೆ 2 ಸಾವಿರ ಕರೆ ನಗರದ 3 ವಿಧಾನಸಭೆ ಕ್ಷೇತ್ರಗಳಿಗೂ ಪ್ರತ್ಯೇಕ ಕೋವಿಡ್-ಮಿತ್ರ ಸಂಖ್ಯೆ ಮೈಸೂರು, ಮೇ 2(ವೈಡಿಎಸ್)- ಕೋವಿಡ್ ಕುರಿತು ಜನರಲ್ಲಿರುವ ಆತಂಕ, ಗೊಂದಲ ನಿವಾರಣೆಗೆ ಮೈಸೂರಿನ 3 ಕಡೆ ಜಿಲ್ಲಾಡಳಿತ ಆರಂಭಿಸುತ್ತಿರುವ `ಕೋವಿಡ್-ಮಿತ್ರ’ ಟ್ರಯೇಜ್ (ಚಿಕಿತ್ಸಾ ಸರದಿ ನಿರ್ಧಾರ) ಮತ್ತು ಸಲಹಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪಾಲಿಕೆ ಆಯುಕ್ತರಾದ ಶಿಲ್ಪಾನಾಗ್ ಭಾನುವಾರ ಭೇಟಿ ನೀಡಿ ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದರು. ಈ ಸಂದರ್ಭ ಸುದ್ದಿಗಾರರ ಜತೆ…
ಮೈಸೂರು ಕೋವಿಡ್-ಮಿತ್ರ ಕೇಂದ್ರಕ್ಕೆ 180 ಮಂದಿ ಸ್ವಯಂ ಸೇವಕರು
May 3, 2021ಮೈಸೂರು, ಮೇ 2(ಎಂಟಿವೈ)-ಕೊರೊನಾ ಸೋಂಕಿತರ ನೆರವಿಗಾಗಿ ಮೈಸೂರಿನ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾಡಳಿತ ತೆರೆಯುತ್ತಿರುವ `ಕೋವಿಡ್-ಮಿತ್ರ’ ಚಿಕಿತ್ಸಾ ಮತ್ತು ಸಲಹಾ ಕೇಂದ್ರದಲ್ಲಿ ಕಾರ್ಯ ನಿರ್ವ ಹಿಸಲು 30 ಮಂದಿ ವೈದ್ಯಕೀಯ ಹಾಗೂ 150 ಮಂದಿ ವೈದ್ಯಕೀಯೇತರ ಸ್ವಯಂ ಸೇವಕರು ಮುಂದೆ ಬಂದಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ 2ನೇ ಅಲೆಯ ತೀವ್ರತೆ ಹೆಚ್ಚಾಗಿದ್ದು, ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಹಾಗೂ ಸೋಂಕಿಗೆ ಬಲಿಯಾಗುತ್ತಿರುವ ಸಂಖ್ಯೆ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣ ಮಿಸಿದೆ. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯಕೀಯ ಮತ್ತು ವೈದ್ಯಕೀ…










