ಪಿರಿಯಾಪಟ್ಟಣ, ಮೇ 2(ವೀರೇಶ್)- ಜನತಾ ಕಫ್ರ್ಯೂ ಜಾರಿಯಲ್ಲಿದ್ದರೂ ಕುಂಟು ನೆಪವೊಡ್ಡಿ ಬೈಕ್‍ಗಳಲ್ಲಿ ರಸ್ತೆಗಿಳಿಯುವವರ ಬೈಕ್ ವಶಪಡಿಸಿಕೊಂಡು ಮತ್ತು ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಅಂಗಡಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಮೂಲಕ ಪೆÇಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ತಾಲೂಕಿನಲ್ಲಿ ಎರಡನೇ ಅಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲೇ ಹೆಚ್ಚಿನ ಸೋಂಕು ಪ್ರಕರಣಗಳು ಕಂಡು ಬರುತ್ತಿದ್ದು, ಈವರೆಗೆ 1914 ಪ್ರಕರಣಗಳು ಪತ್ತೆಯಾಗಿದ್ದು, 1411 ಜನ ಗುಣಮುಖರಾಗಿದ್ದಾರೆ. 503 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಒಟ್ಟು 149 ಸೋಂಕಿತರು ಪತ್ತೆಯಾಗಿ, ಅದರಲ್ಲಿ ಗ್ರಾಮೀಣ ಪ್ರದೇಶದವರೇ 149…
ಕೋವಿಡ್ ಕಫ್ರ್ಯೂ: ಕೊರಿಯರ್ ಸೇವೆಗೂ ಹೊಡೆತ ಶೇ.50ರಿಂದ 65ರಷ್ಟು ವಹಿವಾಟು ಕುಸಿತ
May 3, 2021ಮೈಸೂರು, ಮೇ2(ಆರ್‍ಕೆಬಿ)- ರಾಜ್ಯದಲ್ಲಿ 14 ದಿನಗಳ ಕೋವಿಡ್ ಕಫ್ರ್ಯೂನಿಂದಾಗಿ ಕೊರಿಯರ್ ಸೇವೆಗಳ ಮೇಲೂ ಪರಿಣಾಮ ಉಂಟಾಗಿದೆ. ಶೇ.50ರಿಂದ 65ರಷ್ಟು ವಹಿವಾಟು ಕುಸಿತಗೊಂಡಿದೆ ಎಂಬುದು ಕೊರಿಯರ್ ಸೇವೆ ನೀಡುತ್ತಿರುವ ಕಂಪನಿಗಳ ಸ್ಥಳೀಯ ಮುಖ್ಯಸ್ಥರ ಅಳಲು. ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ಕೊರಿ ಯರ್ ಸೇವಾ ಸಂಸ್ಥೆಗಳು ನಷ್ಟದ ನಡುವೆಯೂ ತಮ್ಮ ಸೇವೆ ಯನ್ನು ನಿಲ್ಲಿಸದೆ ಗ್ರಾಹಕರ ಸೇವೆಯಲ್ಲಿ ನಿರತವಾಗಿವೆ. ಜೊತೆಗೆ ಆನ್‍ಲೈನ್ ಸೇವೆ ಸಲ್ಲಿಸುವ ಫ್ಲಿಪ್‍ಕಾರ್ಟ್, ಅಮೆ ಜಾನ್ ಸೇರಿದಂತೆ ಹಲವು ಆನ್‍ಲೈನ್ ಸೇವಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ….
ಕೊರೊನಾ ಸೋಂಕಿಗೆ ಬಲಿಯಾದ ನಾಲ್ವರ ಮೃತದೇಹ ಸಾಗಿಸಿದ ಪಾಲಿಕೆ ಅಧಿಕಾರಿ
May 3, 2021ಮೈಸೂರು, ಮೇ 2(ಎಂಟಿವೈ)- ಕೊರೊನಾ ಸೋಂಕಿನಿಂದ ಮೃತಪಟ್ಟ ನಾಲ್ವರ ಮೃತದೇಹಗಳನ್ನು ಮುಕ್ತಿಧಾಮಕ್ಕೆ ಪಾಲಿಕೆಯ ಅಧಿಕಾರಿಯೊಬ್ಬರು ತಾವೇ ಸಾಗಿಸುವ ಮೂಲಕ ಸೇವಾ ದಕ್ಷತೆಯೊಂ ದಿಗೆ ಮಾನವೀಯತೆ ಪ್ರದರ್ಶಿಸಿರುವ ಘಟನೆ ತಡವಾಗಿ ವರದಿಯಾಗಿದೆ. ಮೈಸೂರು ಮಹಾನಗರ ಪಾಲಿಕೆಯ ಜನನ-ಮರಣ ವಿಭಾಗದ ಸಾಂಖ್ಯಿಕ ಅಧಿಕಾರಿಯೂ ಹಾಗೂ ಕೋವಿಡ್‍ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸುವ ನೋಡಲ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿ ರುವ ಅನಿಲ್ ಕ್ರಿಸ್ಟಿ ಎಂಬುವರೇ ಅಧಿಕಾರಿ ಎಂಬ ಅಹಂ ಇಲ್ಲದೇ ಸಾಮಾನ್ಯ ಚಾಲಕನಂತೆ ಪಾಲಿಕೆಯ ಶವ ಸಾಗಿಸುವ ವಾಹನ ಚಾಲನೆ ಮಾಡುವ ಮೂಲಕ…
ತಂದೆಗೆ ಮುದ್ದು ಮಕ್ಕಳ ಮುಖ ನೋಡಲು ಬಿಡದ ಕೊರೊನಾ…!
May 3, 2021ಮೈಸೂರು, ಮೇ 2(ಎಂಕೆ)- ತಂದೆಗೆ ತನ್ನ ಮುದ್ದು ಮಕ್ಕಳ ಮುಖ ನೋಡಲು ಬಿಡದ ಕೊರೊನಾ…, ನೂರಾರು ಕನಸು ಗಳ ಕಟ್ಟಿಕೊಂಡಿದ್ದ ಸುಂದರ ಸಂಸಾರಕ್ಕೆ ಕೊಳ್ಳಿ ಇಟ್ಟಿದೆ… ಮೈಸೂರಿನ ಮಂಚೇಗೌಡನ ಕೊಪ್ಪಲು ನಿವಾಸಿ ಚೇತನ್(35) ಕೊರೊನಾ ಸೋಂಕಿಗೆ ಏ.18ರಂದು ಬಲಿಯಾದರು. ಅವರ ಗರ್ಭಿಣಿ ಪತ್ನಿಗೆ ಪತಿ ಕಳೆದುಕೊಂಡ 11ನೇ ದಿನವೇ ಇಬ್ಬರು ಅವಳಿ ಪುತ್ರರು ಜನಿಸಿದ್ದು, ಮುದ್ದು ಮಕ್ಕಳು ಅಪ್ಪ ಇಲ್ಲದೇ ಅನಾಥವಾಗಿದ್ದಾರೆ. ಖಾಸಗಿ ಕಾರ್ಖಾನೆ ಕೆಲಸಗಾರ ಚೇತನ್, 7 ವರ್ಷಗಳ ಹಿಂದೆ ಮದುವೆ ಯಾಗಿದ್ದರು. ತಂದೆ-ತಾಯಿ, ಅಣ್ಣಂದಿರ…
ತಾವಾಗೇ ಕೊರೊನಾ ಅಪ್ಪಿಕೊಳ್ಳುತ್ತಿರುವ ಜನ
May 1, 2021ಮೈಸೂರು, ಏ.30(ಎಂಟಿವೈ)- ರಾಜ್ಯದಲ್ಲಿ ಕೊರೋನಾ 2ನೇ ಅಲೆಯ ಹಾವಳಿ ತೀವ್ರಗೊಂಡಿದ್ದು, ನಿಯಂತ್ರಣ ಕ್ರಮವಾಗಿ ರಾಜ್ಯಾದ್ಯಂತ 14 ದಿನ ಕೋವಿಡ್ ಕಫ್ರ್ಯೂ ಜಾರಿಗೊಳಿಸಿದ್ದರೂ ಜನರು ಮಾತ್ರ ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಸಾಮಾ ಜಿಕ ಅಂತರ ಮರೆತು ಗುಂಪುಗೂಡುತ್ತಿ ದ್ದಾರೆ. ಮೈಸೂರಿನ ಎಂಜಿ ರಸ್ತೆಯ ತರಕಾರಿ ಮಾರುಕಟ್ಟೆ, ಸಂತೇಪೇಟೆ, ಆನೆ ಸಾರೋಟು ರಸ್ತೆ, ಚಿಕ್ಕ ಗಡಿಯಾರದ ಸುತ್ತಲ ಪ್ರದೇಶ ಕೊರೊನಾ ಸೋಂಕು ಹರಡುವ ಹಾಟ್‍ಸ್ಪಾಟ್‍ಗಳಾಗುತ್ತಿವೆ ಎಂಬ ಆತಂಕವಿದೆ. ಸೋಂಕು ಹರಡು ವಿಕೆಯ ಸರಪಳಿ ತುಂಡರಿಸಿ ಜನರನ್ನು ಸೋಂಕಿನಿಂದ ಪಾರು…
ಯುವಕರು ಲಸಿಕೆ ಪಡೆಯುವ ಮೊದಲು ರಕ್ತದಾನ ಮಾಡಿ
May 1, 2021ಮೈಸೂರು,ಏ.30(ಆರ್‍ಕೆಬಿ)- ಕೋವಿಡ್ ತಡೆಗಟ್ಟಲು ರಾಜ್ಯದಲ್ಲಿ ಜನತಾ ಕಫ್ರ್ಯೂ ಜಾರಿಯಲ್ಲಿದ್ದು, ಇಂತಹ ಸಂದರ್ಭದಲ್ಲಿ ನಾಗರಿಕರ ಚಿಕಿತ್ಸೆಗೆ ಸಕಾಲಕ್ಕೆ ರಕ್ತ ಸಿಗದೇ ಗರ್ಭಿಣಿಯರು, ಹಿರಿಯ ನಾಗರಿಕರು ಮತ್ತು ಅಪಘಾತಗಳಲ್ಲಿ ಗಾಯಗೊಂಡವರಿಗೆ ರಕ್ತದ ಕೊರತೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಯುವಕರು ರಕ್ತ ನೀಡಲು ಮುಂದೆ ಬರಬೇಕು ಎಂಬ ಘೋಷ ಫಲಕದೊಡನೆ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್ ಸ್ವಯಂ ರಕ್ತದಾನ ಮಾಡುವ ಮೂಲಕ ರಕ್ತದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೈಸೂರಿನ ಜೀವಧಾರ ರಕ್ತನಿಧಿ ಕೇಂದ್ರ ಮತ್ತು ರಕ್ತದಾನ ಮಹಾದಾನ ಗೋಭಕ್ತ…
ಪ್ರತಿನಿತ್ಯ ಹಸಿದ ಹೊಟ್ಟೆಗಳ ಸರತಿಯ ಸಾಲು ಜನತಾ ಕಫ್ರ್ಯೂ ನಡುವೆಯೂ ಅನ್ನದಾನಿಗಳ ಮಾನವೀಯ ಕಾರ್ಯ
May 1, 2021ಮೈಸೂರು, ಏ.30(ಆರ್‍ಕೆಬಿ)- ಕೈಯ್ಯಲ್ಲಿ ಕಾಸಿಲ್ಲ, ಮಾಡಲು ಕೆಲಸವಿಲ್ಲ, ಊರಿಗೆ ತೆರಳಲು ಬಸ್‍ಗಳಿಲ್ಲ. ಹೀಗಾಗಿ ಹಸಿದ ಹೊಟ್ಟೆಗಳು ಪ್ರತಿನಿತ್ಯ ಎಲ್ಲಾದರೂ ಹೊಟ್ಟೆಗೆ ಏನಾದರೂ ಸಿಗಬಹುದೇನೋ ಎಂಬ ಸ್ಥಿತಿಯಲ್ಲಿ ಅಲೆಯುವಂತಾಗಿದೆ. ಅಂಥದೊದ್ದು ಚಿತ್ರಣ ಮೈಸೂರಿನ ಕೆ.ಆರ್ ಆಸ್ಪತ್ರೆ ವೃತ್ತದ ಬಳಿ, ರೈಲ್ವೆ ನಿಲ್ದಾಣದ ಬಳಿ, ಜಗನ್ಮೋಹನ ಅರಮನೆ ಎದುರು ಕಂಡು ಬರುತ್ತದೆ. ಇದು ದಿನನಿತ್ಯದ ಚಿತ್ರಣ. ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಘೋಷಿಸಲಾಗಿರುವ 14 ದಿನಗಳ ಜನತಾ ಕಫ್ರ್ಯೂ ಮೈಸೂರಿನ ಬೀದಿ ಬೀದಿಗಳಲ್ಲಿ ನಿರಾಶ್ರಿತರ ಸಂಖ್ಯೆಯೂ ಹೆಚ್ಚುವಂತೆ ಮಾಡಿದೆ. ನಿರಾಶ್ರಿತರು, ಕೂಲಿ…
ಜನರ ಸಂಕಷ್ಟ ನಿವಾರಣೆಗೆ ಮುಂದಾಗದ ಸರ್ಕಾರಗಳ ವಿರುದ್ಧ ರೈತ ನಾಯಕನ ಆಕ್ರೋಶ
May 1, 2021ಮೈಸೂರು,ಏ.30-ದೇಶದಲ್ಲಿ ಕೋವಿಡ್ 19 ಕಾಣಿಸಿಕೊಂಡು ಒಂದು ವರ್ಷದ ಮೇಲಾಗಿದ್ದರೂ ಆಮ್ಲಜನಕದ ಕೊರತೆ, ರೆಮ್ಡಿಸಿವಿರ್ ಚುಚ್ಚುಮದ್ದಿನ ಕೊರತೆ, ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ, ಹಾಸಿಗೆಯ ಕೊರತೆ ಹೀಗಾಗಿ ನಾನಾ ಕೊರತೆಗಳಿಂ ದಾಗಿ ದೇಶದಲ್ಲಿ ಸಾವಿರಾರು ಜನರು ಸಾಯುತ್ತಿದ್ದಾರೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಮತ್ತು ಹೊಣೆ ಗೇಡಿತನ ಕಾರಣ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಎನ್.ನಂಜೇಗೌಡ ದೂರಿದ್ದಾರೆ. ಮೃತಪಟ್ಟ ಜನರ ಶವಸಂಸ್ಕಾರಕ್ಕೂ ಗಂಟೆಗಟ್ಟಲೆ ದಿನಗಟ್ಟಲೆ, ಕಾಯುವ ಸ್ಥಿತಿ ಬಂದಿದ್ದು ಜನರು…
ಕೊರೊನಾ ಸೋಂಕಿತರಿಗೆ ನೆರವಾಗಲು `ಆರೋಗ್ಯ ಸಹಾಯವಾಣಿ’
May 1, 2021ಇಂದಿನಿಂದ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಾರಂಭ 350 ವೈದ್ಯರಿಂದ ಸೋಂಕಿತರಿಗೆ `ಆನ್‍ಲೈನ್’ ಮಾರ್ಗದರ್ಶನ ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಧ್ರುವನಾರಾಯಣ್ ಸುದ್ದಿಗೋಷ್ಠಿ ಮೈಸೂರು, ಏ.30(ಎಂಟಿವೈ)- ಕೊರೊನಾ ಸೋಂಕಿತರಿಗೆ ನೆರವಾಗಲು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಮೇ 1ರಿಂದ `ಆರೋಗ್ಯ ಸಹಾಯವಾಣಿ’ ಆರಂಭಿಸುತ್ತಿರುವುದಾಗಿ ಮಾಜಿ ಸಂಸದ ಆರ್.ಧ್ರುವನಾರಾಯಣ್ ಹೇಳಿದ್ದಾರೆ. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಶುಕ್ರ ವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕಳೆದ ವರ್ಷ ಕೊರೊನಾ ಕಾಡುತ್ತಿದ್ದ ವೇಳೆ ಕೆಪಿಸಿಸಿ ಆದೇಶದಂತೆ ರಾಜ್ಯಾದ್ಯಂತ `ಆರೋಗ್ಯ ಹಸ್ತ’ ಕಾರ್ಯಕ್ರಮ ಜಾರಿಗೊಳಿಸಲಾಗಿತ್ತು. ಪಕ್ಷದಿಂದ…
ಕೊರೊನಾ ವಿಚಾರದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿರುವ ಕಾಂಗ್ರೆಸ್
May 1, 2021ಮೈಸೂರು, ಏ.30(ಆರ್‍ಕೆಬಿ)- ದೇಶದಲ್ಲಿ ಕಾಡುತ್ತಿ ರುವ ಕೋವಿಡ್-19 ನಿರ್ನಾಮಕ್ಕೆ ಸರ್ಕಾರದೊಂ ದಿಗೆ ಸಹಕಾರ ನೀಡುವುದನ್ನು ಬಿಟ್ಟು ಕಾಂಗ್ರೆಸ್ ಕೊರೊನಾ ವಿಚಾರವನ್ನು ಅಸ್ತ್ರ ಮಾಡಿಕೊಂಡು ದೇಶದ ಜನರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜೆ.ಮಹೇಶ್ ಇಂದಿಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು. ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ಬಿಜೆಪಿ ಕಚೇರಿ ಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಜಗತ್ತು ಕೋವ್ಯಾಕ್ಸಿನ್ ಒಪ್ಪುವುದಾದರೆ ಅದನ್ನು ಕಾಂಗ್ರೆಸ್ ವಿರೋಧಿಸುತ್ತಿದೆ. ಕೋವಿಡ್ ಸಂದರ್ಭದಲ್ಲಿ ಜನರಲ್ಲಿರುವ ಆತಂಕವನ್ನು ದೂರ ಮಾಡಬೇಕಾದ ಜವಾಬ್ದಾರಿಯುತವಾದ ಪಕ್ಷ…










