ಮೈಸೂರು

ರಾಜ್ಯ ಸರ್ಕಾರದ ನಿರ್ಲಕ್ಷ್ಯ: ಕೊರೊನಾ 2ನೇ ಅಲೆಗೆ ಅಪಾರ ಜೀವಬಲಿ
ಮೈಸೂರು

ರಾಜ್ಯ ಸರ್ಕಾರದ ನಿರ್ಲಕ್ಷ್ಯ: ಕೊರೊನಾ 2ನೇ ಅಲೆಗೆ ಅಪಾರ ಜೀವಬಲಿ

May 1, 2021

ಮೈಸೂರು,ಏ.30(ಎಂಟಿವೈ)-ಕೊರೊನಾ 2ನೇ ಅಲೆಯ ತೀವ್ರತೆ ಬಗ್ಗೆ ಮುಂಚಿತವಾಗಿಯೇ ತಜ್ಞರ ಸಮಿತಿ ಎಚ್ಚರಿ ಸಿದ್ದರೂ, ಭ್ರಷ್ಟಾಚಾರ ನಡೆಸುವ ಏಕೈಕ ಉದ್ದೇಶ ದಿಂದ ರಾಜ್ಯ ಸರ್ಕಾರ ನಿರ್ಲಕ್ಷಿಸಿದ ಪರಿಣಾಮವಾಗಿ ಇಂದು ಜನರು ಸಂಕಷ್ಟ ಕ್ಕೀಡಾಗಿದ್ದಾರೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಭ್ರಷ್ಟಾಚಾರ ಹಾಗೂ ನಿರ್ಲಕ್ಷ್ಯದ ಪರಮಾವಧಿಯಿಂದಾಗಿ ಜನಸಾಮಾನ್ಯರು ಸೋಂಕಿಗೆ ಬಲಿಯಾಗುತ್ತಿದ್ದಾರೆ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿರುವುದನ್ನು ಆಡಳಿತ ಪಕ್ಷದ ಶಾಸಕರಾದ…

ಮೈಸೂರು ಸಂಪೂರ್ಣ ಸ್ತಬ್ಧ
ಮೈಸೂರು

ಮೈಸೂರು ಸಂಪೂರ್ಣ ಸ್ತಬ್ಧ

April 29, 2021

ಅಗತ್ಯ ಸೇವೆಗೂ ನೀರಸ ಪ್ರತಿಕ್ರಿಯ ವಾಹನ ಸಂಚಾರ ವಿರಳಾತಿ ವಿರಳ ಮೈಸೂರು, ಏ. 28(ಆರ್‍ಕೆ)- ಕೊರೊನಾ ಕಫ್ರ್ಯೂ ಜಾರಿಯಾದ ಮೊದಲ ದಿನವಾದ ಇಂದು ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಜನತೆ ಸ್ವಯಂ ಬಂದ್‍ಗೆ ಬೆಂಬಲಿಸಿದ್ದಾರೆ. ನಿರ್ಬಂಧಕ್ಕೆ ವಿನಾಯಿತಿ ನೀಡಿದ್ದ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಹಣ್ಣು, ಹಾಲು, ತರಕಾರಿ, ದಿನಸಿ, ಮದ್ಯದಂಗಡಿಗಳಿಗೆ ಮುಗಿಬಿದ್ದು ಅಗತ್ಯ ವಸ್ತು ಖರೀದಿಸಿದ ಜನರು, ರಾತ್ರಿ 9 ಗಂಟೆವರೆಗೂ ತೆರೆದಿದ್ದ ಕೆಲ ಅತ್ಯಗತ್ಯ ಸೇವೆಗಳಿಗೆ ನೀರಸ…

ಮರಳಿ ಕಾಡಿಗೆ ಕುಶ: ಇನ್ನು ಸಂಗಾತಿ ಸಂಪ್ರೀತಿ
ಮೈಸೂರು

ಮರಳಿ ಕಾಡಿಗೆ ಕುಶ: ಇನ್ನು ಸಂಗಾತಿ ಸಂಪ್ರೀತಿ

April 29, 2021

ಕುಶಾಲನಗರ, ಏ.28-ಶಿಬಿರದಿಂದ ಪರಾರಿಯಾಗಿ ವರ್ಷದ ನಂತರ ಅರಣ್ಯ ಸಿಬ್ಬಂದಿಯಿಂದ ಸೆರೆ ಹಿಡಿಯಲ್ಪಟ್ಟಿರುವ `ಕುಶ’ ಆನೆಯನ್ನು ದುಬಾರೆ ಸಾಕಾನೆ ಶಿಬಿರದಿಂದ ಮತ್ತೆ ಅರಣ್ಯಕ್ಕೆ ಬಿಡ ಬೇಕೆಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಆದೇಶಿಸಿದ್ದಾರೆ. ಶಿಬಿರದಿಂದ ಪರಾರಿಯಾದ ನಂತರ ಕಾಡಾನೆಗಳ ಜೊತೆ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಕುಶನನ್ನು ಸೆರೆ ಹಿಡಿದು ದುಬಾರೆ ಸಾಕಾನೆ ಶಿಬಿರದ ಕ್ರಾಲ್‍ನಲ್ಲಿ ಬಂಧಿಸಿಟ್ಟು, ಹಿಂಸೆ ನೀಡಲಾಗುತ್ತಿದೆ ಎಂದು ಪ್ರಾಣಿಪ್ರಿಯರು ಆಕ್ಷೇಪ ವ್ಯಕ್ತ ಪಡಿಸಿದರು. ಹಾಲಿ ಸಂಸದರಾಗಿರುವ ಮಾಜಿ ಸಚಿವೆ ಮೇನಕಾಗಾಂಧಿ ಕೂಡ ಅದಕ್ಕೆ ಧನಿಗೂಡಿಸಿದ್ದರು. ಈ ಹಿನ್ನೆಲೆ…

ಆಧಾರಸ್ತಂಭವೂ ಸೇರಿ ಒಂದೇ ಕುಟುಂಬದ  ಐವರ ಬಲಿ ಪಡೆದ ‘ಕ್ರೂರಿ ಕೊರೊನಾ’
ಮೈಸೂರು

ಆಧಾರಸ್ತಂಭವೂ ಸೇರಿ ಒಂದೇ ಕುಟುಂಬದ ಐವರ ಬಲಿ ಪಡೆದ ‘ಕ್ರೂರಿ ಕೊರೊನಾ’

April 29, 2021

ಮೈಸೂರು,ಏ.28(ಎಂಕೆ)- ಕರುಣೆಯೇ ಇಲ್ಲದ ಕ್ರೂರಿ ಕೊರೊನಾ ಗಾರೆ ಕೆಲಸವನ್ನೇ ನಂಬಿ ಬದುಕುತ್ತಿದ್ದ ಒಂದೇ ಕುಟುಂಬ ಐವರನ್ನು ಬಲಿಪಡೆದುದಲ್ಲದೆ, ಕುಟುಂಬದ ಆಧಾರಸ್ತಂಭವನ್ನೇ ಕೆಡವಿದೆ. ಮೊನ್ನೆ(ಸೋಮವಾರ) ತಡ ರಾತ್ರಿ ಕೊರೊನಾ ಹೆಮ್ಮಾರಿಗೆ ಬಲಿಯಾದ ಮೈಸೂರಿನ ಕ್ಯಾತ ಮಾರನಹಳ್ಳಿ ನಿವಾಸಿ ಷಣ್ಮುಗಂ (51) ಅವರ ಕುಟುಂಬವನ್ನು ಪಿಶಾಚಿಯಂತೆ ಕಾಡಿದ ಕ್ರೂರಿ ಕೊರೊನಾ ಅವರದ್ದೇ ಕುಟುಂ ಬದ ಐವರನ್ನು ಬಲಿಪಡೆದಿದೆ. ಗಾರೆ ಕೆಲಸ ಮಾಡಿಕೊಂಡು ಸಂಸಾರಕ್ಕೆ ಆಧಾರಸ್ತಂಭವಾಗಿದ್ದ ಷಣ್ಮುಗಂ ಅವರ ಜೀವ ಕಿತ್ತುಕೊಂಡ ಕೊರೊನಾ, ಇಡೀ ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ….

ಇಂದು ಆನ್‍ಲೈನ್ ಮೂಲಕ ಪಾಲಿಕೆ ಬಜೆಟ್ ಮಂಡನೆ
ಮೈಸೂರು

ಇಂದು ಆನ್‍ಲೈನ್ ಮೂಲಕ ಪಾಲಿಕೆ ಬಜೆಟ್ ಮಂಡನೆ

April 29, 2021

ಮೈಸೂರು, ಏ.28(ಆರ್‍ಕೆ)-ನಾಳೆ (ಏ.29) ಬೆಳಿಗ್ಗೆ 11.30 ಗಂಟೆಗೆ ಮೈಸೂರು ಮಹಾನಗರ ಪಾಲಿಕೆಯ 2021-22ನೇ ಸಾಲಿನ ವಾರ್ಷಿಕ ಬಜೆಟ್ ಮಂಡನೆಯಾಗಲಿದೆ. ಪಾಲಿಕೆ ಕಚೇರಿ ಕೌನ್ಸಿಲ್ ಸಭಾಂಗಣದಲ್ಲಿ ಮೇಯರ್ ರುಕ್ಮಿಣಿ ಮಾದೇಗೌಡರು ಅಧ್ಯಕ್ಷತೆ ವಹಿಸಲಿರುವ ವಿಶೇಷ ಕೌನ್ಸಿಲ್ ಸಭೆಯಲ್ಲಿ ತೆರಿಗೆ, ಹಣಕಾಸು ಮತ್ತು ಅಪೀಲುಗಳಿಗಾಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ.ಎಸ್.ಶೋಭಾ ಅವರು ಆನ್‍ಲೈನ್ ಮೂಲಕ ಆಯ-ವ್ಯಯ ಮಂಡಿಸುವರು. ಯು-ಟ್ಯೂಬ್, ಫೇಸ್‍ಬುಕ್ ಲಿಂಕ್ ಮೂಲಕ ಬಜೆಟ್ ಮಂಡನೆಯ ಕಲಾಪಗಳನ್ನು ಬಿತ್ತರಿಸಲು ಪಾಲಿಕೆಯು ವ್ಯವಸ್ಥೆ ಮಾಡಿದೆ. ಕೊರೊನಾ ಪ್ರಕರಣಗಳು ಹೆಚ್ಚಾಗಿರುವುದರಿಂದ ಸೋಂಕಿತರ ಚಿಕಿತ್ಸೆಗಾಗಿ…

ದೇವರಾಜ, ವಾಣಿವಿಲಾಸ, ಮಂಡಿ  ಮಾರುಕಟ್ಟೆಯಲ್ಲಿ ಬೆಸ-ಸಮ ಸಂಖ್ಯೆ ವ್ಯವಸ್ಥೆ
ಮೈಸೂರು

ದೇವರಾಜ, ವಾಣಿವಿಲಾಸ, ಮಂಡಿ ಮಾರುಕಟ್ಟೆಯಲ್ಲಿ ಬೆಸ-ಸಮ ಸಂಖ್ಯೆ ವ್ಯವಸ್ಥೆ

April 29, 2021

ಮೈಸೂರು,ಏ.28(ಪಿಎಂ)- ಮೈಸೂರಿನ ದೇವ ರಾಜ, ವಾಣಿವಿಲಾಸ ಹಾಗೂ ಮಂಡಿ ಮಾರು ಕಟ್ಟೆಗಳಲ್ಲಿ ಅಗತ್ಯ ವಸ್ತು ಮಳಿಗೆಗಳು ಬೆಸ ಮತ್ತು ಸಮ ಸಂಖ್ಯೆ ಆಧಾರದಲ್ಲಿ ಬುಧವಾರ ಬೆಳಗ್ಗೆ 6ರಿಂದ 10ರವರೆಗೆ ತೆರೆದು ವಹಿವಾಟು ನಡೆಸಿದ್ದು, ಜೊತೆಗೆ ಬೆಸ ಮತ್ತು ಸಮ ಸಂಖ್ಯೆ ವ್ಯವಸ್ಥೆ ಸಂಬಂಧ ವ್ಯಾಪಾರಸ್ಥರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯ ಸರ್ಕಾರ 14 ದಿನಗಳ ಕೋವಿಡ್ ಕಫ್ರ್ಯೂ ಅವಧಿಯಲ್ಲಿ ಅಗತ್ಯ ವಸ್ತುಗಳ ಮಳಿಗೆ ತೆರೆಯಲು ಬೆಳಗಿನ 4 ಗಂಟೆ ಮಾತ್ರ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಸ…

ಮೈಸೂರು ಮೃಗಾಲಯ ಸೇರಿದಂತೆ ರಾಜ್ಯದ 9  ಮೃಗಾಲಯ ನಿರ್ವಹಣೆ ನೆರವಿಗೆ ಸರ್ಕಾರಕ್ಕೆ ಮನವಿ
ಮೈಸೂರು

ಮೈಸೂರು ಮೃಗಾಲಯ ಸೇರಿದಂತೆ ರಾಜ್ಯದ 9 ಮೃಗಾಲಯ ನಿರ್ವಹಣೆ ನೆರವಿಗೆ ಸರ್ಕಾರಕ್ಕೆ ಮನವಿ

April 29, 2021

ಮೈಸೂರು,ಏ.28(ಎಂಟಿವೈ)- ಕೊರೊನಾ ಹಾವಳಿಯಿಂದಾಗಿ ಕಳೆದ 1 ವರ್ಷದಿಂದ ಮೈಸೂರು ಮೃಗಾಲಯ ಸೇರಿದಂತೆ ರಾಜ್ಯದ 9 ಮೃಗಾಲಯಗಳು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದು, ಪ್ರಸಕ್ತ ಸಾಲಿನಲ್ಲಿ ಪ್ರಾಣಿಗಳ ಪಾಲನೆ-ಆರೈಕೆಗಾಗಿ 17 ಕೋಟಿ ಅಗತ್ಯವಿದ್ದು, ಸರ್ಕಾರದ ಅನುದಾನದ ನಿರೀಕ್ಷೆಯಲ್ಲಿವೆ. ಮೈಸೂರಿನ ಚಾಮರಾಜೇಂದ್ರ ಮೃಗಾ ಲಯ ಹಾಗೂ ಬೆಂಗಳೂರಿನ ಬನ್ನೇರು ಘಟ್ಟ ಜೈವಿಕ ಉದ್ಯಾನವನ ಸ್ವಾಯತ್ತ ಸಂಸ್ಥೆ ಯಾಗಿದ್ದು, ಇವುಗಳೊಂದಿಗೆ ಕರ್ನಾಟಕ ಮೃಗಾಲಯ ಪ್ರಾಧಿಕಾರ ರಾಜ್ಯದ ಇತರೆ ಜಿಲ್ಲೆಗಳಲ್ಲಿರುವ ಇನ್ನೂ 7 ಮೃಗಾಲಯ ಗಳನ್ನು ಪೋಷಿಸಬೇಕಾದ ಹೊಣೆಗಾರಿಕೆ ಯನ್ನು ನಿಭಾಯಿಸುತ್ತಾ ಬಂದಿದೆ. ಏಷ್ಯಾದ…

ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗೆ  ಸೂಕ್ತ ವೈದ್ಯಕೀಯ ಸೇವೆ ಲಭ್ಯವಿಲ್ಲ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗೆ ಸೂಕ್ತ ವೈದ್ಯಕೀಯ ಸೇವೆ ಲಭ್ಯವಿಲ್ಲ

April 29, 2021

ಶಾಸಕ ಸಾ.ರಾ.ಮಹೇಶ್ ಆತಂಕ  ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹೇಳುತ್ತಿರುವುದೆಲ್ಲಾ ಸುಳ್ಳು… ಸುಳ್ಳು… ಸುಳ್ಳು…; ವಾಗ್ದಾಳಿ  ವೆಂಟಿಲೇಟರ್ ದೊರಕದೇ 36 ವರ್ಷದ ಮಹಿಳೆ ಸಾವು  ಈ ಸಾವು ಒಂದು ಉದಾಹರಣೆ ಅಷ್ಟೇ  ಒಬ್ಬರು ಸತ್ತ ಮೇಲೆ ಮತ್ತೊಬ್ಬರಿಗೆ ವೆಂಟಿಲೇಟರ್ ಹಾಕುವ ಪರಿಸ್ಥಿತಿ ಇದೆ ಮೈಸೂರು,ಏ.28(ಪಿಎಂ)- ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆ ಸಂಬಂಧ ವೆಂಟಿಲೇಟರ್ ಸೇರಿದಂತೆ ಸೂಕ್ತ ವೈದ್ಯ ಕೀಯ ಸೌಲಭ್ಯ ಇಲ್ಲ. ನಿನ್ನೆ ರಾತ್ರಿ ಕೆಆರ್ ನಗರ ತಾಲೂಕಿನ 36 ವರ್ಷದ…

ನಾಮದ ಬಲ ಮತ್ತು ಪಾದಪೂಜೆಯ ಮಹತ್ವ
ಮೈಸೂರು

ನಾಮದ ಬಲ ಮತ್ತು ಪಾದಪೂಜೆಯ ಮಹತ್ವ

April 29, 2021

`ನೀನ್ಯಾಕೋ ನಿನ್ನ ಹಂಗ್ಯಾಕೋ, ನಿನ್ನ ನಾಮದ ಬಲವೊಂದಿದ್ದರೆ ಸಾಕೋ’ ಎನ್ನುವ ಪುರಂದರ ದಾಸರ ಹಾಡನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ಇದು `ನಾಮದ ಮಹತ್ವವನ್ನು’ ತಿಳಿಸುವ ಸಲುವಾಗಿ ಬರೆದ ಹಾಡು ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ ಮತ್ತು ಇದು ಸರಳವಾಗಿಯೂ ಇದೆ. ಅಂದರೆ ದೊಡ್ಡ ಮನುಷ್ಯರಿಗಿಂತ, ಅವರ ಹೆಸರನ್ನು ಹೇಳಿದರೇ ನಮ್ಮ ಕೆಲಸ ಬೇಗನೇ ಆಗಿ ಬಿಡುತ್ತದೆ. ಹೀಗಾಗಿ ನಮ್ಮ ಕೆಲಸಗಳನ್ನು ಅಧಿಕಾರಿಗಳಿಂದ ಬೇಗನೇ ಮಾಡಿಸಿಕೊಂಡು ಇಂದಿಗೂ ನಾವು ಬೀಗುತ್ತೇವೆ. ನಾಮವು ಶ್ರೀ ವೈಷ್ಣವರ ಸಂಕೇತ. ಇದು ಪವಿತ್ರವಾದುದರಿಂದ ಇದನ್ನು…

ಭಾರತದ ರೂಪಾಂತರಿ ಕೊರೊನಾ  ವೈರಸ್ ಕನಿಷ್ಠ 17 ದೇಶಗಳಲ್ಲಿ ಪತ್ತೆ
ಮೈಸೂರು

ಭಾರತದ ರೂಪಾಂತರಿ ಕೊರೊನಾ ವೈರಸ್ ಕನಿಷ್ಠ 17 ದೇಶಗಳಲ್ಲಿ ಪತ್ತೆ

April 29, 2021

ಜಿನಿವಾ,ಏ.28-ಕೊರೊನಾ ಸೋಂಕು ಹೆಚ್ಚಾಗಿ 2ನೇ ಅಲೆ ವ್ಯಾಪಕವಾಗಿ ಹರಡಲು ಕಾರಣವಾಗಿರುವ ಭಾರತದಲ್ಲಿ ಪತ್ತೆಯಾದ ರೂಪಾಂತರಿ ಕೊರೊನಾ ವೈರಸ್ 12ಕ್ಕೂ ಹೆಚ್ಚು ದೇಶಗಳಲ್ಲಿ ಕಂಡುಬಂದಿದೆ. ಕೋವಿಡ್-19ನ ಬಿ.1.617 ಕೊರೊನಾ ರೂಪಾಂತರಿ ಮೊದಲಿಗೆ ಭಾರತದಲ್ಲಿ ಪತ್ತೆಯಾದ ನಂತರ ನಿನ್ನೆಯ ಹೊತ್ತಿಗೆ ಕನಿಷ್ಠ 17 ದೇಶಗಳಲ್ಲಿ 1,200ಕ್ಕೂ ಹೆಚ್ಚು ಅನುಕ್ರಮಗಳಲ್ಲಿ ಪತ್ತೆಯಾಗಿದೆ, ಇದು ಬೇರೆ ರೂಪಾಂತರಿ ಕೊರೊನಾಕ್ಕಿಂತ ಹೆಚ್ಚು ಅಪಾಯ ಕಾರಿ ಮತ್ತು ವೇಗವಾಗಿ ಹರಡುತ್ತಿದೆ. ಅವುಗಳಲ್ಲಿ ಅತಿ ಹೆಚ್ಚು ಭಾರತ, ಇಂಗ್ಲೆಂಡ್, ಅಮೆರಿಕ ಮತ್ತು ಸಿಂಗಾಪುರ ಗಳಲ್ಲಿ ಪತ್ತೆಯಾಗಿದೆ ಎಂದು…

1 243 244 245 246 247 1,611
Translate »