ಮೈಸೂರು

ಮೈಸೂರಲ್ಲಿ ದಾಖಲೆಯ 2042 ಜನರಿಗೆ ಸೋಂಕು
ಮೈಸೂರು

ಮೈಸೂರಲ್ಲಿ ದಾಖಲೆಯ 2042 ಜನರಿಗೆ ಸೋಂಕು

April 28, 2021

ಮೈಸೂರು, ಏ.27(ಎಸ್‍ಬಿಡಿ)- ಮೈಸೂರು ಜಿಲ್ಲೆ ಯಲ್ಲಿ ಕೊರೊನಾ ಸೋಂಕು ನಿಯಂತ್ರಣ ಮೀರಿ ವ್ಯಾಪಿಸುತ್ತಿದ್ದು, ಮಂಗಳವಾರ 2 ಸಾವಿರಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣ ವರದಿಯಾಗಿವೆ. ಮೈಸೂರು ನಗರದಲ್ಲಿ 1,151, ತಿ.ನರಸೀ ಪುರ 222, ಮೈಸೂರು ತಾಲೂಕು 179, ನಂಜನಗೂಡು 155, ಕೆ.ಆರ್.ನಗರ 107, ಹೆಚ್.ಡಿ.ಕೋಟೆ 97, ಹುಣಸೂರು 81 ಹಾಗೂ ಪಿರಿಯಾಪಟ್ಟಣ ತಾಲೂಕಿನಲ್ಲಿ 50 ಪ್ರಕರಣ ಸೇರಿ ಮಂಗಳವಾರ ಜಿಲ್ಲೆ ಯಲ್ಲಿ 2042 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇವರಲ್ಲಿ 1573 ಜನ ಸೋಂಕಿ ತರ ಸಂಪರ್ಕಿತರಾಗಿದ್ದು, ವಿಷಮ…

ದಿ ಕಾಸ್ಮೊಪಾಲಿಟನ್ ಕ್ಲಬ್ ಅಧ್ಯಕ್ಷರಾಗಿ ಸಿ.ನಾರಾಯಣಗೌಡ ಸೇರಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರ ಪದಗ್ರಹಣ
ಮೈಸೂರು

ದಿ ಕಾಸ್ಮೊಪಾಲಿಟನ್ ಕ್ಲಬ್ ಅಧ್ಯಕ್ಷರಾಗಿ ಸಿ.ನಾರಾಯಣಗೌಡ ಸೇರಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರ ಪದಗ್ರಹಣ

April 28, 2021

ಮೈಸೂರು,ಏ.27(ಪಿಎಂ)-ಮೈಸೂರಿನ ದಿ ಕಾಸ್ಮೊಪಾಲಿಟನ್ ಕ್ಲಬ್ ಅಧ್ಯಕ್ಷರಾಗಿ ಸಿ.ನಾರಾಯಣಗೌಡ ಸೇರಿದಂತೆ ನೂತನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು. ಏ.18ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿ.ನಾರಾಯಣಗೌಡರು ಪುನರಾಯ್ಕೆಗೊಂಡರೆ, ಉಳಿದ ಪದಾಧಿ ಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿ ದ್ದರು. ಇತ್ತೀಚೆಗೆ ಕ್ಲಬ್‍ನ ಆವರಣದಲ್ಲಿ ನೂತನ ಪದಾಧಿಕಾರಿಗಳು ಮತ್ತು ಕಾರ್ಯ ಕಾರಿ ಸಮಿತಿ ಸದಸ್ಯರು ಅಧಿಕಾರ ಸ್ವೀಕರಿಸಿ ದರು. ಅಧ್ಯಕ್ಷ ಸಿ.ನಾರಾಯಣಗೌಡ, ಉಪಾ ಧ್ಯಕ್ಷ ಎಸ್.ದ್ವಾರಕಿ, ಕಾರ್ಯದರ್ಶಿ ಹೆಚ್. ಎನ್.ಜಯಪಾಲ್, ಖಜಾಂಚಿ ವೀರೇಶ್, ಕಾರ್ಯಕಾರಿ…

ಮೈಸೂರಲ್ಲಿ ಆರ್‍ಟಿ-ಪಿಸಿಆರ್ ಟೆಸ್ಟ್, ಕೊರೊನಾ ಲಸಿಕೆಗೂ ಭಾರೀ ಬೇಡಿಕೆ
ಮೈಸೂರು

ಮೈಸೂರಲ್ಲಿ ಆರ್‍ಟಿ-ಪಿಸಿಆರ್ ಟೆಸ್ಟ್, ಕೊರೊನಾ ಲಸಿಕೆಗೂ ಭಾರೀ ಬೇಡಿಕೆ

April 28, 2021

ಮೈಸೂರು,ಏ.27(ಆರ್‍ಕೆ)- ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣ ಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗು ತ್ತಿರುವುದರಿಂದ ಆತಂಕಗೊಂಡಿರುವ ಜನ ಆರ್‍ಟಿ-ಪಿಸಿಆರ್ ಪರೀಕ್ಷೆ ಮತ್ತು ಕೊರೊನಾ ಲಸಿಕೆ ಪಡೆಯಲು ದಿನಗಳೆ ದಂತೆ ಮುಗಿಬೀಳುತ್ತಿದ್ದಾರೆ. ಪ್ರತಿ ನಿತ್ಯ ಸಾವಿರಾರು ಪಾಸಿಟಿವ್ ಪ್ರಕ ರಣ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿರುವ 45 ವರ್ಷ ಮೇಲ್ಪಟ್ಟ ನಾಗರಿಕರು ಇಂದು ತಮ್ಮ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ತೆರಳಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಮುಂದಾಗಿದ್ದರು. ಮೈಸೂರಿನ ಪುರಭವನ, ಚಿಕ್ಕಗಡಿ ಯಾರ, ಕೆ.ಆರ್. ಆಸ್ಪತ್ರೆ, ಜಿಲ್ಲಾ ಕೋವಿಡ್ ಆಸ್ಪತ್ರೆ ಸೇರಿದಂತೆ…

ಕೋವಿಡ್ ಕಫ್ರ್ಯೂ ಕಟ್ಟುನಿಟ್ಟಿನ ಪಾಲನೆಗಾಗಿ ಮೈಸೂರು ನಗರ-ಜಿಲ್ಲೆಯಲ್ಲಿ ನಾಕಾಬಂದಿ
ಮೈಸೂರು

ಕೋವಿಡ್ ಕಫ್ರ್ಯೂ ಕಟ್ಟುನಿಟ್ಟಿನ ಪಾಲನೆಗಾಗಿ ಮೈಸೂರು ನಗರ-ಜಿಲ್ಲೆಯಲ್ಲಿ ನಾಕಾಬಂದಿ

April 28, 2021

ಮೈಸೂರು, ಏ.27(ಎಂಕೆ)- ಕೋವಿಡ್-19 ಎರಡನೇ ಅಲೆ ತಡೆಗಾಗಿ ರಾಜ್ಯ ಸರ್ಕಾರ 14 ದಿನಗಳ ಕಠಿಣ ಕೊರೊನಾ ಕಫ್ರ್ಯೂ ಜಾರಿಗೊಳಿಸಿದ ಹಿನ್ನೆಲೆ ಮೈಸೂರು ನಗರ ಮತ್ತು ಜಿಲ್ಲೆಯ ವಿವಿಧೆಡೆ ಪೊಲೀಸರು ಮಂಗಳವಾರ ರಾತ್ರಿಯಿಂದಲೇ ನಾಕಾಬಂದಿ ಬ್ಯಾರಿಕೇಡ್ ಅಳವಡಿಸಿ ಪ್ರತಿಯೊಂದು ವಾಹನವನ್ನೂ ತಡೆದು ತಪಾಸಣೆ ನಡೆಸಿದರು. ರಾಜ್ಯದಲ್ಲಿ ಮಂಗಳವಾರ ರಾತ್ರಿ 9ರ ಬಳಿಕ ಜಾರಿಗೆ ಬಂದ `ಕೋವಿಡ್ ಕಫ್ರ್ಯೂ’ವನ್ನು ಕಟ್ಟುನಿಟ್ಟಾಗಿ ಜಿಲ್ಲೆಯಲ್ಲಿ ಜಾರಿಗೊಳಿಸಿದ ಪೊಲೀಸರು, ಈ ವೇಳೆ ಅನಗತ್ಯ ವಾಹನ ಸಂಚಾರಕ್ಕೆ ಕಡಿವಾಣ ಹಾಕಿದರು. ನಗರದಲ್ಲಿ ಮಂಗಳವಾರ ರಾತ್ರಿ ಕಾರ್ಯಾಚರಣೆ…

ಎಲ್ಲರನ್ನೂ ಪ್ರೀತಿಸುವ ಹೃದಯ ವೈಶಾಲ್ಯತೆ  ಬೆಳೆಸಿಕೊಳ್ಳಬೇಕು: ಡಾ.ಈಶ್ವರ ಮಂಟೂರ
ಮೈಸೂರು

ಎಲ್ಲರನ್ನೂ ಪ್ರೀತಿಸುವ ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳಬೇಕು: ಡಾ.ಈಶ್ವರ ಮಂಟೂರ

April 28, 2021

ಮೈಸೂರು,ಏ.27-ಎಲ್ಲರನ್ನೂ ಪ್ರೀತಿಸುವ ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳಬೇಕು ಎಂದು ಖ್ಯಾತ ಪ್ರವಚನ ಕಾರರಾದ ಡಾ.ಈಶ್ವರ ಮಂಟೂರ ಹೇಳಿದರು. ಮೈಸೂರು ಜೆಎಸ್‍ಎಸ್ ಮಹಾವಿದ್ಯಾಪೀಠದ ಶ್ರೀ ಶಿವ ರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಏರ್ಪಡಿಸಿದ್ದ ‘ಜ್ಞಾನವಾರಿಧಿ-21’ ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮಾನವೀಯ ಮೌಲ್ಯಗಳು’ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಇಂದಿನ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕಿಲುಬುಗಟ್ಟಿ ಹೋಗಿ ಎಲ್ಲೆಡೆ ಅಶಾಂತಿ ತುಂಬಿದೆ. ಅನುಕಂಪ ಕಡಿಮೆಯಾಗಿ ಅಮಾನ ವೀಯತೆ ಹೆಚ್ಚುತ್ತಿದೆ. ಪ್ರೀತಿ, ತ್ಯಾಗ,…

ಮೈಸೂರು ಸಹವಾಸ ಸಾಕಪ್ಪಾ ಸಾಕು
ಮೈಸೂರು

ಮೈಸೂರು ಸಹವಾಸ ಸಾಕಪ್ಪಾ ಸಾಕು

April 28, 2021

ಮೈಸೂರು, ಏ.27(ವೈಡಿಎಸ್)- `ಹುಟ್ಟೂರಲ್ಲೇ ಕೂಲಿ ಕೆಲಸ ಮಾಡಿ ಯಾದರೂ ಜೀವನ ಸಾಗಿಸುತ್ತೇವೆ. ಮತ್ತೆ ಮೈಸೂರಿಗೆ ಬರುವುದಿಲ್ಲ’… ಹೀಗೆ ಹತಾಶೆ, ಬೇಸರ, ನೋವಿನಿಂದ ಪ್ರತಿಕ್ರಿಯಿಸಿದವರು ತಮಿಳುನಾಡು ಮೂಲದ ಒಬ್ಬ ಕೂಲಿ ಕಾರ್ಮಿಕ. `ಮೂರು ವರ್ಷಗಳ ಹಿಂದೆ ಕೆಲಸ ಹುಡುಕಿ ಕೊಂಡು ಕುಟುಂಬ ಸಮೇತ ಮೈಸೂರಿಗೆ ಬಂದೆವು. ಹೆಬ್ಬಾಳ್‍ನ ಬಾಡಿಗೆ ಮನೆ ಯಲ್ಲಿ ವಾಸವಾಗಿದ್ದೆವು. ಕಳೆದ ವರ್ಷ ಲಾಕ್‍ಡೌನ್ ಆದಾಗ ವಾಪಸ್ ಊರಿಗೆ ಹೋಗಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದೆವು. ಕೊರೊನಾ ಹಾವಳಿ ಕಡಿಮೆ ಯಾಗಿದ್ದರಿಂದ ನಾಲ್ಕು ತಿಂಗಳ…

ಮೈಸೂರಿಂದ ಅಪಾರ ಸಂಖ್ಯೆಯಲ್ಲಿ  ನಿರ್ಗಮನ-ಆಗಮನ!
ಮೈಸೂರು

ಮೈಸೂರಿಂದ ಅಪಾರ ಸಂಖ್ಯೆಯಲ್ಲಿ ನಿರ್ಗಮನ-ಆಗಮನ!

April 28, 2021

ಮೈಸೂರು,ಏ.27(ಎಂಟಿವೈ)- ಕೊರೊನಾ 2ನೇ ಅಲೆಯಿಂದಾಗಿ ಸೋಂಕಿಗೆ ಒಳ ಗಾಗುವವರ ಹಾಗೂ ಜೀವ ಕಳೆದು ಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ತಡೆಯಲು ಸರ್ಕಾರ ರಾಜ್ಯಾದ್ಯಂತ 14 ದಿನಗಳ `ಕೋವಿಡ್ ಕಫ್ರ್ಯೂ’ (ಲಾಕ್ ಡೌನ್) ಘೋಷಿಸಿದ ಹಿನ್ನೆಲೆಯಲ್ಲಿ ಮೈಸೂ ರಲ್ಲಿ ನೆಲೆಸಿದ್ದ ಅನ್ಯ ರಾಜ್ಯಗಳ ಹಾಗೂ ಜಿಲ್ಲೆಗಳ ವಿದ್ಯಾರ್ಥಿ ಸಮೂಹ, ಅಸಂಘ ಟಿತ ವಲಯದ ಕಾರ್ಮಿಕರು ಹಾಗೂ ಐಟಿ ಕಂಪನಿಗಳ ಉದ್ಯೋಗಿಗಳು ಮರಳಿ ತವರೂರಿನತ್ತ ಪ್ರಯಾಣಿಸಲು ಬಸ್‍ಗಳಿಗೆ ಮುಗಿಬಿದ್ದರು. ಇದೇ ವೇಳೆ, ಬೆಂಗಳೂರು ಸೇರಿದಂತೆ ವಿವಿಧೆಡೆ ನೆಲೆಸಿದ್ದ…

ಕೋವಿಡ್ ಲಸಿಕಾ ಕೇಂದ್ರಕ್ಕೆ ದಿಢೀರ್ ಭೇಟಿ
ಮೈಸೂರು

ಕೋವಿಡ್ ಲಸಿಕಾ ಕೇಂದ್ರಕ್ಕೆ ದಿಢೀರ್ ಭೇಟಿ

April 28, 2021

ಗುಂಡ್ಲುಪೇಟೆ, ಏ.27(ಸೋಮ್.ಜಿ)-ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಕೋವಿಡ್ ಲಸಿಕಾ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ನಿಗ ಮದ ಅಧ್ಯಕ್ಷ ಸಿ.ಎಸ್.ನಿರಂಜನಕುಮಾರ್ ಆಡಳಿತ ವೈದ್ಯಾಧಿಕಾರಿ ಡಾ.ಮಂಜು ನಾಥ್‍ರಿಂದ ಮಾಹಿತಿ ಪಡೆದರು. ಪಟ್ಟಣ ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಹಾಗೂ ಇಷ್ಟು ದಿನ ಎಷ್ಟು ಮಂದಿ ಲಸಿಕೆ ಪಡೆದಿದ್ದಾರೆ ಎಂಬ ವಿವರ ಪಡೆದರು. ನಂತರ ಕೋವಿಡ್ ಬೆಡ್‍ಗಳು, ಆಕ್ಸಿಜನ್ ಲಭ್ಯತೆ ಹಾಗೂ ಔಷಧ ದಾಸ್ತಾನು ಸೇರಿದಂತೆ ಕೋವಿಡ್…

`ಎನ್‍ಆರ್ ಕೋವಿಡ್ ಕೇರ್ ಸೆಂಟರ್’ಗೆ ಸಚಿವ ಎಸ್‍ಟಿಎಸ್ ಚಾಲನೆ
ಮೈಸೂರು

`ಎನ್‍ಆರ್ ಕೋವಿಡ್ ಕೇರ್ ಸೆಂಟರ್’ಗೆ ಸಚಿವ ಎಸ್‍ಟಿಎಸ್ ಚಾಲನೆ

April 28, 2021

ಮೈಸೂರು, ಏ.27(ಎಂಕೆ)- ಮೈಸೂರಿನ ಅಜೀಜ್‍ಸೇಠ್ ನಗರ ದಲ್ಲಿರುವ `ಬೀಡಿ ಕಾರ್ಮಿಕರ ಕಲ್ಯಾಣ ನಿಧಿ ಕೇಂದ್ರೀಯ ಆಸ್ಪತ್ರೆ’ಯಲ್ಲಿ ತೆರೆದಿ ರುವ `ಎನ್‍ಆರ್ ಕೋವಿಡ್ ಕೇರ್ ಸೆಂಟರ್’ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಮಂಗಳವಾರ ಚಾಲನೆ ನೀಡಿದರು. ಬಳಿಕ ಸೋಂಕಿತರ ಚಿಕಿತ್ಸೆ ಗಾಗಿ ಸಿದ್ಧಪಡಿಸಿರುವ ಹಾಸಿಗೆಗಳು ಮತ್ತು ಆಮ್ಲಜನಕ ಸೌಲಭ್ಯವುಳ್ಳ ಹಾಸಿಗೆ ಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಅಗತ್ಯ ಸಲಕರಣೆಗಳನ್ನು ತ್ವರಿತವಾಗಿ ಪೂರೈಸುವಂತೆ ಸಂಬಂಧಪಟ್ಟ ಅಧಿ ಕಾರಿಗಳಿಗೆ ಸೂಚನೆ ನೀಡಿದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಅಜೀಜ್ ಸೇಠ್…

ಅಂಬೇಡ್ಕರ್ ಪ್ರತಿಮೆ ಅನಾವರಣ
ಮೈಸೂರು

ಅಂಬೇಡ್ಕರ್ ಪ್ರತಿಮೆ ಅನಾವರಣ

April 28, 2021

ಅಂತರಸಂತೆ, ಏ.27- ಅಖಂಡ ಭಾರತದ ಅಡಿಪಾಯ ಯಾರು ಅಂದರೆ ಡಾ. ಅಂಬೇಡ್ಕರ್ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದರು. ಅಂತರಸಂತೆ ಗ್ರಾಮದ ಸ್ವಾಭಿಮಾನಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದಿಂದ ನಡೆದ ಅಂಬೇಡ್ಕರ್ ಪ್ರತಿಮೆ ಅನಾವರಣ ಹಾಗೂ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ತಮ್ಮ ಪೆನ್ನಿನ ಮೂಲಕ ದೇಶ ಕಟ್ಟಿದರೆ ವಿನಹ ಗನ್ ಹಾಗೂ ಆಯುಧಗಳಿಂದಲ್ಲ. ನಮ್ಮದು ಪೆನ್ನುಗಳ ಭಾರತವಾಗಬೇಕೇ ಹೊರತು ಗನ್‍ಗಳ ಭಾರತವಾಗಬಾರದು ಎಂದರು. ಶಾಸಕ ಅನಿಲ್ ಮಾತನಾಡಿ, ಅಂಬೇಡ್ಕರ್…

1 245 246 247 248 249 1,611
Translate »