ಮೈಸೂರು, ಏ.26(ಎಂಕೆ)- ರಾಜ್ಯ ದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಮಂಗಳವಾರ (ಏ.27) ರಾತ್ರಿಯಿಂದ 14 ದಿನಗಳ ಕಠಿಣ ಕೊರೊನಾ ಕಫ್ರ್ಯೂ ಘೋಷಣೆ ಮಾಡುತ್ತಿದ್ದಂತೆ ವಿದ್ಯಾರ್ಥಿ ಗಳು, ವಲಸೆ ಕಾರ್ಮಿಕರು ಸೋಮವಾರ ಸಂಜೆಯಿಂದಲೇ ತಮ್ಮ ತಮ್ಮ ಊರಿನತ್ತ ತೆರಳಲು ಮುಂದಾದರು. ಮೈಸೂರು ನಗರದ ಸಬರ್ಬನ್ ಬಸ್ ನಿಲ್ದಾಣದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವ ರೆಗೆ ವಿರಳವಾಗಿದ್ದ ಪ್ರಯಾಣಿಕರ ಸಂಖ್ಯೆ ಸಂಜೆಯಾಗುತ್ತಿದ್ದಂತೆ ಹೆಚ್ಚಾಯಿತು. ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಕಡಿ ವಾಣ ಹಾಕಲು ರಾಜ್ಯ ಸರ್ಕಾರ ಏ.27ರ ರಾತ್ರಿ…
ಕಠಿಣ ಕಫ್ರ್ಯೂ: ಮಾರುಕಟ್ಟೆಗಳಲ್ಲಿ ಗ್ರಾಹಕರ ಜಾತ್ರೆ
April 27, 2021ಮೈಸೂರು,ಏ.26(ಎಂಕೆ)- ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮತ್ತೆ ಕಠಿಣ ಕಫ್ರ್ಯೂ ಘೋಷಣೆ ಮಾಡುತ್ತಿದ್ದಂತೆ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಮೈಸೂರಿನ ವಿವಿಧ ಮಾರುಕಟ್ಟೆಗಳಿಗೆ ಸೋಮವಾರ ಸಂಜೆ ಜನಸಾಗರವೇ ಹರಿದುಬಂದಿತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬೆರ ಳಣಿಕೆಯಷ್ಟು ಜನರು ಕಾಣುತ್ತಿದ್ದ ದೇವ ರಾಜ ಮಾರುಕಟ್ಟೆ, ವಾಣಿವಿಲಾಸ ಮಾರುಕಟ್ಟೆ, ಎಂಜಿ ರಸ್ತೆ ಮಾರುಕಟ್ಟೆ, ಮೀನಾ ಬಜಾರ್ ಇನ್ನಿತರೆ ಮಾರುಕಟ್ಟೆ ಗಳು, ಕಫ್ರ್ಯೂ ಘೋಷಣೆ ಬಳಿಕ ಜನ ಜಂಗುಳಿಯಿಂದ ತುಂಬಿ ತುಳುಕಿದವು. 14 ದಿನಗಳ ಕಫ್ರ್ಯೂ ಅವಧಿಗಾಗು ವಷ್ಟು ಹಣ್ಣು-ತರಕಾರಿ, ದಿನಸಿ…
ಮಹಾವೀರರ ಸಂದೇಶ ಮಾನವ ಕಲ್ಯಾಣಕ್ಕೆ ಪೂರಕ
April 27, 2021ಮೈಸೂರು,ಏ.26-ಮೈಸೂರು ಜೈನ್ ಸಂಘಟನೆ ವತಿಯಿಂದ ದೇವರಾಜ ಮೊಹಲ್ಲಾದ ಡಿ. ಸುಬ್ಬಯ್ಯ ರಸ್ತೆಯಲ್ಲಿ ರುವ ಜೈನ್ ಅಪಾರ್ಟ್‍ಮೆಂಟ್ ಮುಂಭಾಗ ಮಹಾವೀರ 1422ನೇ ಜಯಂತಿಯನ್ನು ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಮತ್ತು ಅರ್ಥಗರ್ಭಿತವಾಗಿ ಅಸಹಾಯ ಕರಿಗೆ ದಿನನಿತ್ಯ ಬಳಸುವ ಆಹಾರ ಪದಾರ್ಥಗಳನ್ನು ವಿತರಿಸಿ ಮಹಾವೀರ್ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಮೈಸೂರು ಜೈನ್ ಸಂಘಟನೆ ಮುಖಂಡ ರಾದ ಕಾಂತಿಲಾಲ್ ಜೈನ್ ಮಾತನಾಡಿ, ಭಗವಾನ್ ಮಹಾವೀರರು ಅಹಿಂಸಾ ಮಾರ್ಗದ ಪ್ರತಿಪಾದಕರು, ರಾಜ ಮನೆತ ದಲ್ಲಿ ಜನಿಸಿದ ಅವರು ಸಕಲ ಭೋಗ…
ಹಳಿ ತಪ್ಪಿರುವ ಕಸಾಪ ಸರಿ ದಾರಿಗೆಳೆಯುವ ಹೊಣೆ ಶಿಕ್ಷಕರದ್ದು
April 27, 2021ಪಿರಿಯಾಪಟ್ಟಣ, ಏ. 26(ವೀರೇಶ್)- ಶಿಕ್ಷಕರೆಂದರೆ ತಪ್ಪನ್ನು ಸರಿಪಡಿಸುವ, ತಿದ್ದಿ ತೀಡುವ ಶಿಲ್ಪಿಗಳು. ಶಿಕ್ಷಕರು ಮನಸು ಪಟ್ಟರೆ ಏನು ಬೇಕಾದರೂ ಮಾಡಬಲ್ಲವರಾಗಿದ್ದು ಪ್ರಸ್ತುತ ಹಳಿ ತಪ್ಪಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಸರಿದಾರಿಗೆ ತರುವ ಹೊಣೆ ಅವರದ್ದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಮೈಸೂರು ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ, ಸಾಹಿತಿ ಬನ್ನೂರು ಕೆ.ರಾಜು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯ ಹಿನ್ನೆಲೆಯಲ್ಲಿ ತಾಲೂಕಿನ ಶಿಕ್ಷಕರ ಭವನದ ಸಭಾಂಗಣದಲ್ಲಿ ನಡೆದ ಶಿಕ್ಷಕರ ಸಭೆಯಲ್ಲಿ ಮತ ಕೋರಿದ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು….
ಸರ್ಕಾರದ ಮಾರ್ಗಸೂಚಿ ಪಾಲಿಸಲು ಸೂಚನೆ
April 27, 2021ಹುಣಸೂರು, ಏ.26(ಕೆಕೆ)- ಕೊರೊನಾ ದಿನೇ ದಿನೆ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿ ಯನ್ನು ಅನುಸರಿಸಲು ಎಚ್ಚರಿಕೆ ನೀಡುತ್ತಿ ದ್ದರೂ ಸಾರ್ವಜನಿಕರು ಸರಿಯಾಗಿ ಪಾಲಿಸುತ್ತಿಲ್ಲ ಎಂದು ತಹಸೀಲ್ದಾರ್ ಬಸವರಾಜು ತಿಳಿಸಿದರು. ಪಟ್ಟಣದ ನಗರಸಭಾ ಸಭಾಂಗಣದಲ್ಲಿ ಕರೆಯಲಾಗಿದ್ದ ಹೊಟೇಲ್ ಮಾಲೀಕರು, ರಸ್ತೆ ಬದಿ ವ್ಯಾಪಾರಿಗಳು, ಅಂಗಡಿ ಹಾಗೂ ಬೇಕರಿ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ನೀವುಗಳೇ ಸರಿಯಾಗಿ ಸರ್ಕಾ ರದ ಮಾರ್ಗಸೂಚಿಯನ್ನು ಪಾಲಿಸುತ್ತಿಲ್ಲ. ಇನ್ನು ಗ್ರಾಹಕರನ್ನು ಹೇಗೆ ನಿಬಾಯಿಸು ತ್ತಿರಾ? ಮೊದಲು ನೀವು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ…
ಮೈಸೂರಲ್ಲಿ ಹೊಸದಾಗಿ 2 ಕೊರೊನಾ ಚಿಕಿತ್ಸಾ ಕೇಂದ್ರ ಆರಂಭಕ್ಕೆ ಅನುಮತಿ ಕೋರಿ ಸರ್ಕಾರಕ್ಕೆ ಡಿಸಿ ಪತ್ರ
April 26, 2021ಟ್ರಾಮಾ ಕೇರ್ ಸೆಂಟರ್‍ನ 300 ಸೇರಿ ಹೊಸದಾಗಿ ಒಟ್ಟು 700 ಹಾಸಿಗೆ ಸೌಲಭ್ಯಕ್ಕೆ ಸಿದ್ಧತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 300 ಹಾಸಿಗೆ ಮತ್ತು 20 ಸಾವಿರ ಲೀ. ಆಮ್ಲಜನಕ ಘಟಕ ಒಟ್ಟು ಆಮ್ಲಜನಕ ಸೌಲಭ್ಯದ 600, ಆಮ್ಲಜನಕ ಸಹಿತ ಐಸಿಯು ಘಟಕದಲ್ಲಿ 100 ಹಾಸಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಡಿಸಿ ರೋಹಿಣಿ ಸಿಂಧೂರಿ ಪ್ರಸ್ತಾವನೆ ಕೃತಕವಾಗಿ ಹಾಸಿಗೆ ಅಭಾವ ಸೃಷ್ಟಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ: ಡಿಸಿ ಎಚ್ಚರಿಕೆ ಮೈಸೂರು,ಏ.25-ಕೋವಿಡ್-19 ಚಿಕಿತ್ಸೆಗಾಗಿ ಖಾಸಗಿ…
ವೀಕೆಂಡ್ ಕಫ್ರ್ಯೂಗೆ 2ನೇ ದಿನವೂ ಮೈಸೂರು ಸ್ತಬ್ಧ
April 26, 2021ಮೈಸೂರು,ಏ.25(ಎಂಟಿವೈ)-ತೀವ್ರ ಸ್ವರೂಪ ಪಡೆದು ಎಡೆಬಿಡದೆ ಕಾಡುತ್ತಿರುವ ಕೊರೊನಾ ಎರಡನೇ ಅಲೆಯ ವೇಗಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ರಾಜ್ಯದಾದ್ಯಂತ ಜಾರಿಗೊಳಿಸಿರುವ ವೀಕೆಂಡ್ ಕಫ್ರ್ಯೂಗೆ ಮೈಸೂರಲ್ಲಿ ಎರಡನೇ ದಿನವಾದ ಭಾನು ವಾರವೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನರು ಸ್ವಯಂ ಪ್ರೇರಣೆಯಿಂದ ಮನೆಯಲ್ಲಿಯೇ ಕ್ವಾರಂಟೈನ್ ಆಗುವ ಮೂಲಕ ಕೊರೊನಾ ಸೋಂಕು ಹರಡುವಿಕೆ ತಡೆಗೆ ಜಿಲ್ಲಾಡಳಿತಕ್ಕೆ ಸಹಕರಿಸಿದರು. ರೂಪಾಂತರಗೊಂಡಿರುವ ಕೊರೊನಾ ವೈರಾಣು ಎರಡನೇ ಅಲೆ ಮೂಲಕ ತೀವ್ರ ಸ್ವರೂಪದಲ್ಲಿ ಜನರನ್ನು ಕಾಡುತ್ತಿದ್ದು, ಪರಿಸ್ಥಿತಿ ಹತೋಟಿಗೆ ಬಾರದಂತಹ ಸಂದಿಗ್ಧ ಪರಿಸ್ಥಿತಿ ನಿರ್ಮಿ ಸುತ್ತಿದೆ….
ವಾರಾಂತ್ಯ ಕಫ್ರ್ಯೂ; ಹಸಿದವರ ಹೊಟ್ಟೆ ತುಂಬಿಸಿದ ಅಕ್ಷಯ ಆಹಾರ ಫೌಂಡೇಷನ್
April 26, 2021ಮೈಸೂರು, ಏ.25(ಆರ್‍ಕೆಬಿ)- ಹಸಿದ ಹೊಟ್ಟೆಗೆ ಆಹಾರ ನೀಡುವ ಅಕ್ಷಯ ಆಹಾರ ಫೌಂಡೇಷನ್ ವಾರಾಂತ್ಯ ಕಫ್ರ್ಯೂ ಸಂದರ್ಭದಲ್ಲಿ ಹಸಿದ ಹೊಟ್ಟೆಗಳಿಗೆ ಅನ್ನ ನೀಡಿ ಸಂತೈಸಿದೆ. ವಾರಾಂತ್ಯ ಕಫ್ರ್ಯೂ ಹಿನ್ನೆಲೆ ಬಸ್‍ಗಳಿಲ್ಲದೆ ಹಲವು ಕೂಲಿ ಕಾರ್ಮಿಕರು ಅತ್ತ ಊರಿಗೂ ಹೋಗಲಾಗದೇ ಮೈಸೂರಿನ ಬಸ್ ಶೆಲ್ಟರ್ ಗಳನ್ನೇ ಆಶ್ರಯಿಸಿಕೊಂಡಿದ್ದರು. ಹುಣಸೂರು, ಚಾಮರಾಜನಗರ, ಗುಂಡ್ಲುಪೇಟೆ, ಮಳವಳ್ಳಿ, ತಮಿಳು ನಾಡಿನ ತಾಳವಾಡಿ ಇನ್ನಿತರೆ ಊರುಗಳಿಗೆ ಶನಿವಾರ ಕೆಲಸ ಮುಗಿಸಿ ಮರಳಬೇಕಾಗಿತ್ತು. ಆದರೆ ಶನಿವಾರ ವಾರಾಂತ್ಯ ಕಫ್ರ್ಯೂ ಹಿನ್ನೆಲೆ ಬಸ್‍ಗಳಿಲ್ಲದೆ ಕಾರ್ಮಿಕರು ಊರಿಗೆ ಹೋಗಲಾಗದೆ ಮೈಸೂರಿನ…
ಇಂದು ಶಾಸಕ ನಾಗೇಂದ್ರರಿಂದ ಫೋನ್ ಇನ್ ಕಾರ್ಯಕ್ರಮ
April 26, 2021ಬೆಳಗ್ಗೆ 10.30ರಿಂದ ಮಧ್ಯಾಹ್ನ 12ರವರೆಗೆ ಕುಂದುಕೊರತೆ ಆಲಿಕೆ ಮೈಸೂರು,ಏ.25(ಪಿಎಂ)- ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರ ಸಂಬಂಧ ಕೋವಿಡ್-19 ಸೇರಿದಂತೆ ಸಾರ್ವಜನಿಕರ ಕುಂದು ಕೊರತೆ ಆಲಿಸಿ, ಪರಿಹರಿಸುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ಏಪ್ರಿಲ್ 26ರಂದು ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 12ರವರೆಗೆ ಶಾಸಕರು ಫೋನ್ ಇನ್ ಕಾರ್ಯಕ್ರಮ ಆಯೋಜಿಸಿದ್ದಾರೆ. ಶಾಸಕರ ಕಚೇರಿ ದೂರವಾಣಿ ಸಂಖ್ಯೆ 0821-2416199 ಅನ್ನು ಸಂಪರ್ಕಿಸಿ ಸಾರ್ವಜನಿಕರು ಕುಂದುಕೊರತೆಗಳನ್ನು ಹೇಳಿಕೊಳ್ಳಬಹುದು. ಕೋವಿಡ್-19 ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶಾಸಕರು…
ಭಾನುವಾರ ಮೈಸೂರಲ್ಲಿ 700 ಮಂದಿಗೆ ಸೋಂಕು; 9 ಮಂದಿ ಸಾವು
April 26, 2021ಮೈಸೂರು, ಏ.25(ಎಸ್‍ಬಿಡಿ)- ಮೈಸೂರು ಜಿಲ್ಲೆ ಯಲ್ಲಿ ಸೋಂಕು ಪ್ರಮಾಣ ಸ್ವಲ್ಪ ಮಟ್ಟಿಗೆ ತಗ್ಗಿತ್ತಾದರೂ ಭಾನುವಾರ ಪುನಃ ಜಾಸ್ತಿಯಾಗಿದೆ. ಒಂದೇ ದಿನ 700 ಜನರಿಗೆ ಸೋಂಕು ದೃಢಪಟ್ಟಿದ್ದು, 9 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಳ: ಮೈಸೂರಿನಲ್ಲಿ 45, 60, 65, 77 ಹಾಗೂ 85 ವರ್ಷದ ಮಹಿಳೆಯರು, 61, 67, 68 ಹಾಗೂ 81 ವರ್ಷದ ಪುರುಷರು ಸೇರಿ ಒಟ್ಟು 9 ಸೋಂಕಿತರು ಸಾವನ್ನಪ್ಪಿರುವುದಾಗಿ ಭಾನು ವಾರದ ಬುಲೆಟಿನ್ ತಿಳಿಸಿದೆ. ಇದರೊಂದಿಗೆ ಜಿಲ್ಲೆಯ ಒಟ್ಟು ಸಾವಿನ…










