ಮೈಸೂರು,ಏ.24-ಕೊರೊನಾ ಸೋಂಕಿತರು ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳ ಮಾರ್ಗಸೂಚಿಗಳನ್ನು ಚಾಚೂ ತಪ್ಪದೆ ಪಾಲಿಸುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ಮಾಜಿ ಸಚಿವರೂ ಆದ ಶಾಸಕ ಜಿ.ಟಿ.ದೇವೇಗೌಡ ಜನತೆಯಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕೋವಿಡ್-19 ಎರಡನೇ ಅಲೆ ಅತ್ಯಂತ ಅಪಾಯ ಕಾರಿ ಯಾಗಿ ಪರಿಣಮಿಸುತ್ತಿದೆ. ಇಡೀ ವಿಶ್ವವೇ ಈ ಮಹಾಮಾರಿ ಯಿಂದ ತತ್ತರಿಸಿ ಹೋಗಿದೆ. ನಮ್ಮ ದೇಶದಲ್ಲಿಯೂ ಈ ಸಾಂಕ್ರಾಮಿಕ ಸೋಂಕನ್ನು ತಡೆಯುವ ಸಲುವಾಗಿ ಕೇಂದ್ರ…
ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ..!
April 25, 2021ಸೈಕಲ್‍ನಲ್ಲಿ ಕಟ್ಟಿಗೆ ಸಾಗಿಸಿ ಜೀವನ ಸಾಗಿಸುವ ಸೋಮಣ್ಣನ ಕಥೆ-ವ್ಯಥೆ ಮೈಸೂರು, ಏ. 24- ಜಗತ್ತಿನಲ್ಲಿ ತಂತ್ರಜ್ಞಾನ ಅಭಿವೃದ್ಧಿಯಾದರೂ, ಬಡ ಜನರ ಬದುಕು ಮಾತ್ರ ಬದಲಾಗಲಿಲ್ಲ, ಅದರಲ್ಲೂ ಕೊರೊನಾ ಆಘಾತದಲ್ಲಿ ನಿರ್ಗತಿಕರ ಬದುಕು ಬೀದಿಗೆ ಬಿದ್ದಿದೆ. ಅದಕ್ಕೆ ಮೈಸೂರು ಈ ಶ್ರಮಿಕನ ಕಥೆ-ವ್ಯಥೆ ನಿದರ್ಶನವಾಗಿದೆ. ‘ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ’ ಎಂಬ ‘ಮಂಕುತಿಮ್ಮ’ನ (ಡಿವಿಜಿ) ಮಾತಿಗೆ ಮೈಸೂರಿನ ಗಾಂಧಿನಗರದಲ್ಲಿ ‘ಫೋರಂ’ ಮಾಲ್ ಎದುರಿನ ನಿವಾಸಿ ಸೋಮಣ್ಣ ಅವರ ಬದುಕು ಉತ್ತಮ ನಿದರ್ಶನ. ಕೊರೊನಾದಂತಹ ಸಂಕಷ್ಟ ಪರಿಸ್ಥಿತಿಯಿಂದಾಗಿ…
ಮೈಸೂರು ಕೈಗಾರಿಕೆಯಿಂದ ವೈದ್ಯಕೀಯ ಆಮ್ಲಜನಕ ಪೂರೈಕೆ
April 25, 2021ಮೈಸೂರು,ಏ.24(ಎಸ್‍ಪಿಎನ್)-ಮೈಸೂರಿನ ಕೈಗಾರಿಕೆಗಳಿಗೆ ಮಾಮೂಲಿ ದಿನಗಳಲ್ಲಿ ನಿತ್ಯ 40-50 ಆಕ್ಸಿಜನ್ ಸಿಲಿಂಡರ್‍ಗಳ ಬೇಡಿಕೆ ಇರುತ್ತದೆ. ರಾಜ್ಯಾದ್ಯಂತ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ಮೈಸೂರಿನಲ್ಲೂ ಆಸ್ಪತ್ರೆಗಳಿಂದ ನಿತ್ಯ 50-60 (ಕೆ.ಬಿ) ಮೆಡಿಕಲ್ ಆಕ್ಸಿಜನ್ ಸಿಲಿಂಡರ್‍ಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎಂದು ಪೀಣ್ಯಾ ಇಂಡಸ್ಟ್ರಿ ಯಲ್ ಗ್ಯಾಸ್ ಸಪ್ಲೈಯರ್ಸ್‍ನÀ ಅಸಿಸ್ಟೆಂಟ್ ಬ್ರ್ಯಾಂಚ್ ಮ್ಯಾನೇಜರ್ ಹರೀಶ್ ತಿಳಿಸಿದರು. ಬೆಂಗಳೂರಿನ ಪೀಣ್ಯಾ ಕೈಗಾರಿಕೆ ಪ್ರದೇಶದಲ್ಲಿ ಕೇಂದ್ರ ಕಚೇರಿ, ಮೈಸೂರಿನಲ್ಲಿ ಶಾಖೆ ಇದೆ. ಸರ್ಕಾ ರದ ನಿರ್ದೇಶನದಂತೆ ಆಸ್ಪತ್ರೆಗಳಿಗೆ ಆಕ್ಸಿಜನ್ ಸಿಲಿಂಡರ್‍ಗಳನ್ನು ತಾತ್ಕಾಲಿಕವಾಗಿ ವಿತರಣೆ ಮಾಡ ಲಾಗುತ್ತಿದೆ. ಈ…
ವಾರಾಂತ್ಯ ಕಫ್ರ್ಯೂ ಅನಿವಾರ್ಯ: ಸಭಾಪತಿ ಬಸವರಾಜ ಹೊರಟ್ಟಿ
April 25, 2021ಮೈಸೂರು, ಏ.24(ವೈಡಿಎಸ್)- ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಎಲ್ಲ ಪ್ರಯತ್ನ ಮಾಡುತ್ತಾ ಬಂದಿದೆ. ಆದರೆ ಪರಿಸ್ಥಿತಿ ಕೈಮೀರಿ ದಾಗ ಅನ್ಯಮಾರ್ಗವಿಲ್ಲದೆ ವಾರಾಂತ್ಯದ ಕಫ್ರ್ಯೂ ಜಾರಿ ಗೊಳಿಸಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಇಂದಿಲ್ಲಿ ಅಭಿಪ್ರಾಯಪಟ್ಟರು. ವಿಜಯನಗರದ ಸಪ್ತಪದಿ ಕಲ್ಯಾಣ ಮಂಟಪದಲ್ಲಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಫ್ರ್ಯೂ ಮಾಡದಿದ್ದರೆ ಜನರು ಸಾಯು ತ್ತಾರೆ. ಮಧ್ಯಮ ವರ್ಗದ ಜನರು ಅರ್ಧ ಊಟ ಮಾಡಿ ಯಾದರೂ ಬದುಕಬಹುದು. ಕೆಲಸ ಇಲ್ಲದಿದ್ದರೂ ಹೇಗಾದರೂ ಮಾಡಿ ಜೀವನ ಸಾಗಿಸಬಹುದು….
ಡಾ.ರಾಜ್ ಜನ್ಮದಿನ ಮೈಸೂರಲ್ಲಿ ಸರಳ ಆಚರಣೆ
April 25, 2021ಮೈಸೂರು, ಏ.24(ಎಂಟಿವೈ)- ವಾರಾಂತ್ಯ ಕಫ್ರ್ಯೂ ಜಾರಿಯಲ್ಲಿದ್ದರಿಂದ ವರನಟ ಡಾ.ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಮೈಸೂರಲ್ಲಿ ಅತ್ಯಂತ ಸರಳವಾಗಿ ಆಚರಿಸಲಾಯಿತು. ಮಹಾನಗರ ಪಾಲಿಕೆ, ವಾರ್ತಾ ಇಲಾಖೆ ಮತ್ತು ಡಾ.ರಾಜ್ ಅಭಿಮಾನಿ ಬಳಗದ ಸಂಯುಕ್ತಾಶ್ರಯದಲ್ಲಿ ಶನಿವಾರ ಬೆಳಿಗ್ಗೆ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದ ಉದ್ಯಾ ನದಲ್ಲಿ ಇರುವ ಡಾ.ರಾಜ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿ ಸಲಾಯಿತು. ಮಾಲಾರ್ಪಣೆ ಮಾಡಿ ಮಾತನಾಡಿದ ಶಾಸಕ ಎಲ್.ನಾಗೇಂದ್ರ, ವಾರಾಂತ್ಯ ಕಫ್ರ್ಯೂ ನಡುವೆಯೂ ಡಾ. ರಾಜಕುಮಾರ್ ಹುಟ್ಟುಹಬ್ಬ ಆಚರಿಸಿ ದ್ದೇವೆ ಎಂದರು. ಅವರೊಬ್ಬ ಸಾರ್ವ ಕಾಲಿಕ…
ವಾರಾಂತ್ಯ ಕಫ್ರ್ಯೂ; ಮೈಸೂರಿಂದ ಬೆರಳೆಣಿಕೆ ಬಸ್ ಸಂಚಾರ
April 25, 2021ಗ್ರಾಮಾಂತರ ಬಸ್ ನಿಲ್ದಾಣದಿಂದ 60, ನಗರ ಸಾರಿಗೆ ವ್ಯಾಪ್ತಿಯಲ್ಲಿ ಕೆಲವೇ ಬಸ್ ಸಂಚಾರ ಮೈಸೂರು, ಏ.24(ಎಂಟಿವೈ)- ಕೊರೊನಾ 2ನೇ ಅಲೆಯ ತೀವ್ರತೆ ನಿವಾ ರಿಸಲು ರಾಜ್ಯ ಸರ್ಕಾರ ವೀಕೆಂಡ್ ಕಫ್ರ್ಯೂ ಘೋಷಿಸಿದ್ದು, ಮೊದಲ ದಿನವಾದ ಶನಿವಾರ ಮೈಸೂರು ಪೂರ್ಣ ಸ್ತಬ್ಧ ವಾಗಿತ್ತು. ನಗರದಿಂದ ಸಾರಿಗೆ ಸಂಸ್ಥೆಯ ಬೆರಳೆಣಿಕೆ ಬಸ್‍ಗಳು ಸಂಚರಿಸಿದವು. ವೀಕೆಂಡ್ ಕಫ್ರ್ಯೂ ಜಾರಿ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಅಗತ್ಯ ವಸ್ತುಗಳ ಖರೀದಿಗೆ ಬೆÀಳಗ್ಗೆ 6ರಿಂದ 10 ಗಂಟೆವರೆಗಷ್ಟೇ ಅವಕಾಶ ನೀಡಲಾಗಿತ್ತು. ಬೆಳಗ್ಗೆ 10.30ರ ನಂತರ…
ಖಾಲಿ ರಸ್ತೆಯಲ್ಲಿ ಯುವ ಪಡ್ಡೆ ಭರ್ಜರಿ ಫೋಟೊಶೂಟ್!
April 25, 2021ಮೈಸೂರು, ಏ.24(ಎಂಕೆ)- ಕೊರೊನಾ 2ನೇ ಅಲೆಯ ನಿಯಂತ್ರಣಕ್ಕೆ ಸರ್ಕಾರ ವಾರಾಂತ್ಯ ಕಫ್ರ್ಯೂ ಜಾರಿಗೊಳಿಸಿರುವುದು, `ನಮಗೆ ಸಿಕ್ಕಿದ ಸುವರ್ಣಾವಕಾಶ’ ಎಂಬಂತೆ ಮೈಸೂರಿನ ಖಾಲಿ ರಸ್ತೆಗಳಲ್ಲಿ ಪಡ್ಡೆ ಹುಡುಗರು ಶನಿವಾರ ಫೋಟೋಶೂಟ್ ನಡೆಸಿ ಖುಷಿಪಟ್ಟರು. ನಗರದ ಫೋರಂ ಮಾಲ್ ಎದುರು ಖಾಲಿ ರಸ್ತೆಗೆ ಐಷಾರಾಮಿ ಬೈಕ್‍ನಲ್ಲಿ ಬಂದ ಪಡ್ಡೆ ಹುಡುಗರು ಫೋಟೋ ಕ್ಲಿಕ್ಕಿಸಿಕೊಂಡರು. ಓರ್ವ ಬೈಕ್ ಮೇಲೆ ಕುಳಿತಿದ್ದರೆ, ಇನ್ನಿಬ್ಬರು ಮೊಬೈಲ್‍ನಲ್ಲಿ ಫೋಟೊ ಕ್ಲಿಕ್ಕಿಸಿ ಸಂಭ್ರಮಿಸಿದರು.
ಮುಖ್ಯಮಂತ್ರಿಗಳಿಗೆ ಪಾಠ ಮಾಡಲು ನೀವು ಹೆಡ್ ಮಾಸ್ಟರ್ ಅಲ್ಲ
April 25, 2021ಬೆಂಗಳೂರು, ಏ. 24- ಕರ್ನಾಟಕ ಸೇರಿದಂತೆ ದೇಶದಲ್ಲಿ ಕೊರೊನಾ ರಣಕೇಕೆ ಮುಂದುವರಿದಿದೆ. ಈ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ, ಆಕ್ಸಿಜನ್ ಕೊರತೆಯುಂಟಾಗಿದೆ, ಬೆಡ್ ಸಮಸ್ಯೆ ಬಗ್ಗೆ ಸಾಕಷ್ಟು ಸುದ್ದಿಗಳು ಬರುತ್ತಿವೆ. ಇನ್ನು ಚಿಕಿತ್ಸೆ ಸರಿಯಾಗಿ ಸಿಗದೆ ಮೃತಪಟ್ಟವರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಬೆಂಗಳೂರು ಮಹಾನಗರದಲ್ಲಿ ಮೃತರ ಶವಸಂಸ್ಕಾರಕ್ಕೆ ಸಹ ಸಮಸ್ಯೆ ಯುಂಟಾಗಿದೆ. ಹೀಗಿರುವಾಗ ಕರ್ನಾಟಕ ಸರ್ಕಾರ ಸೇರಿದಂತೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಜನಸಾಮಾನ್ಯ ರಿಂದ, ವಿರೋಧ ಪಕ್ಷದ ನಾಯಕರಿಂದಲೂ ಕೇಳಿಬರುತ್ತಿದೆ….
ಎನ್‍ಆರ್ ಕ್ಷೇತ್ರದಲ್ಲಿ ಸಂಜೆ ದಿಢೀರ್ ವಾಹನ ದಟ್ಟಣೆ!
April 25, 2021ಮೈಸೂರು, ಏ.24(ಎಂಕೆ)- ವಾರಾಂತ್ಯ ಲಾಕ್‍ಡೌನ್ ನಡುವೆಯೂ ಮೈಸೂರು ಎನ್.ಆರ್.ಕ್ಷೇತ್ರ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ಹೆಚ್ಚಾಗಿತ್ತು. ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೂ ಖಾಲಿಯಾಗಿದ್ದ ಎನ್.ಆರ್.ಕ್ಷೇತ್ರ ವ್ಯಾಪ್ತಿಯ ಉದಯಗಿರಿ, ರಾಜೀವ್‍ನಗರ, ಕಲ್ಯಾಣಗಿರಿಯ ಪ್ರಮುಖ ರಸ್ತೆಗಳಲ್ಲಿ ಸಂಜೆಯಾಗು ತ್ತಿದ್ದಂತೆ ದಿಢೀರನೆ ವಾಹನಗಳ ದಟ್ಟಣೆ ಹೆಚ್ಚಿತು. ಮಹದೇವಪುರ ಮುಖ್ಯರಸ್ತೆ (ಅಜೀಜ್ ಸೇಠ್ ಮುಖ್ಯರಸ್ತೆ), ರಾಜಕುಮಾರ್ ರಸ್ತೆ ಮತ್ತಿತರೆ ಪ್ರಮುಖ ರಸ್ತೆಗಳಲ್ಲಿ ಸಂಜೆ 4 ಗಂಟೆ ಬಳಿಕ ದ್ವಿಚಕ್ರ ವಾಹನಗಳ ಓಡಾಟ ಹೆಚ್ಚಾಯಿತು. ತಕ್ಷಣ ಎಚ್ಚೆತ್ತ ಉದಯಗಿರಿ ಠಾಣೆ ಪೊಲೀಸರು…
ಮೊದಲಿಗಿಂತ ಎರಡನೇ ಅಲೆ ಬಹಳ ತೀಕ್ಷ್ಣವಾಗಿದೆ
April 25, 2021ಬೆಂಗಳೂರು, ಏ.24(ಕೆಎಂಶಿ)- ರೂಪಾಂತರ ಗೊಂಡಿರುವ ವೈರಸ್ ಸ್ವಭಾವ ವೈದ್ಯಕೀಯ ಸಮೂಹವನ್ನೇ ದಾರಿ ತಪ್ಪಿಸಿವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದ ಲಿನ ಅಲೆಗೆ ಹೋಲಿಸಿದರೆ, ಎರಡನೇ ಅಲೆ ಬಹಳ ತೀಕ್ಷ್ಣವಾಗಿದೆ ಹಾಗೂ ವೇಗವಾಗಿ ಹರಡುತ್ತಿದೆ. ಇದು ರೂಪಾಂತರಗೊಂಡಿರುವ ವೈರಸ್ಸಿನ ಸ್ವಭಾವ ಎಂದರು. ಎರಡನೇ ಅಲೆಯಿಂದ ಹೆಚ್ಚು ಜನರು ಸೋಂಕಿಗೆ ಒಳಗಾಗಿ ದ್ದಾರೆ. ಇದರಿಂದ ಸಾವಿನ ಪ್ರಮಾಣವು ಹೆಚ್ಚಿದೆ. ಯಾವುದೇ ವೈರಸ್ ನಿರಂತರವಾಗಿ ಬದಲಾವಣೆ ಆಗುತ್ತಲೇ ಇರುತ್ತದೆ. ಇದೆಲ್ಲದಕ್ಕೂ ಲಸಿಕೆ ಮದ್ದು….










