ಮೈಸೂರು,ಏ.23(ವೈಡಿಎಸ್)- ಮೈಸೂ ರಲ್ಲಿ ಕೊರೊನಾ ಸೋಂಕಿನ ಪ್ರಕರಣ ಹೆಚ್ಚು ವುದರ ಜೊತೆಗೇ ವೈದ್ಯಕೀಯ ಆಮ್ಲಜನಕ ಅವಶ್ಯವಿರುವವರ ಸಂಖ್ಯೆಯೂ ಹೆಚ್ಚು ತ್ತಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ಮೈಸೂರು ನಗರಾಭಿ ವೃದ್ಧಿ ಪ್ರಾಧಿಕಾರವು(ಮುಡಾ) ಆಮ್ಲಜನಕ ಸೌಲಭ್ಯವಿರುವ 500 ಹಾಸಿಗೆಗಳನ್ನು ಸಿದ್ಧಪಡಿಸಲು ತೀರ್ಮಾನಿಸಲಾಯಿತು. ಮುಡಾ ಸಭಾಂಗಣದಲ್ಲಿ ಅಧ್ಯಕ್ಷ ಹೆಚ್.ವಿ.ರಾಜೀವ್ ಅಧ್ಯಕ್ಷತೆಯಲ್ಲಿ ಶುಕ್ರ ವಾರ ನಡೆದ ಖಾಸಗಿ ಆಸ್ಪತ್ರೆ ವೈದ್ಯರೊಂದಿ ಗಿನ ಕೋವಿಡ್ ಸಂಬಂಧಿತ ಸಭೆಯಲ್ಲಿ, `ಆಮ್ಲಜನಕ ಅವಶ್ಯವಿರುವವರ ಸಂಖ್ಯೆ ನಗರ ದಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ತುರ್ತಾಗಿ ಆಮ್ಲಜನಕ…
ಏ.26ರಂದು ಎನ್‍ಆರ್ ಕ್ಷೇತ್ರದಲ್ಲಿ ಕೋವಿಡ್ ಕೇರ್ ಕೇಂದ್ರ ಆರಂಭ
April 24, 2021ಶಾಂತಿನಗರದ ಬೀಡಿ ಕಾರ್ಮಿಕ ಆಸ್ಪತ್ರೆಯಲ್ಲಿ ವ್ಯವಸ್ಥೆ ಶಾಸಕ ತನ್ವೀರ್ ಸೇಠ್, ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಪರಿಶೀಲನೆ ಕೋವಿಡ್ ವ್ಯಾಕ್ಸಿನ್ ತೆಗೆದುಕೊಂಡರೆ ತೊಂದರೆಯಾಗುತ್ತದೆ ಎಂದು ಜನರಲ್ಲಿ ತಪ್ಪು ಕಲ್ಪನೆ ಇದೆ. ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ಜನ ಲಸಿಕೆ ಪಡೆದಿದ್ದು, ಅವರಿಗೆ ಯಾವ ಸಮಸ್ಯೆಯೂ ಆಗಿಲ್ಲ. ಕೋವಿಡ್ ಸೋಂಕಿನಿಂದ ಮುಕ್ತವಾಗಲು ಈ ಲಸಿಕೆ ಸಹಕಾರಿಯಾಗಲಿದೆ. ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಲಸಿಕೆ ಕೊರತೆಯಾದಾಗ ಪರದಾಡುವ ಬದಲು ಸರ್ಕಾರ ಉಚಿತವಾಗಿ ನೀಡುತ್ತಿರುವುದನ್ನು…
ಸೌದಿ ಅರೇಬಿಯಾ ಪಠ್ಯದಲ್ಲಿ ರಾಮಾಯಣ, ಮಹಾಭಾರತ ವಿದೇಶಿ ವಿದ್ಯಾರ್ಥಿಗಳಿಂದಲೂ ಭಾರತೀಯ ಸಂಸ್ಕೃತಿ ಅಧ್ಯಯನ
April 24, 2021ರಿಯಾದ್: ಸೌದಿ ಅರೇಬಿಯಾದ ಶಿಕ್ಷಣ ಕ್ಷೇತ್ರದಲ್ಲಿ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಮಹತ್ವದ ಬದಲಾವಣೆಯನ್ನು ತಂದಿ ದ್ದಾರೆ. ವಿಷನ್ 2030 ಅಡಿ ಯಲ್ಲಿ ಪ್ರಿನ್ಸ್ ಮೊಹಮ್ಮದ್, ಸೌದಿ ರಾಷ್ಟ್ರದ ವಿದ್ಯಾರ್ಥಿಗಳಿಗೆ ವಿವಿಧ ದೇಶದ ಸಂಸ್ಕೃತಿಯ ಬಗ್ಗೆ ಜ್ಞಾನ ತುಂಬಲು ಮುಂದಾಗಿದ್ದಾರೆ. ಈ ಪ್ರಯೋಗದ ಭಾಗ ವಾಗಿ ಸೌದಿ ಅರೇಬಿಯಾದ ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮದಲ್ಲಿ ರಾಮಾಯಣ ಹಾಗೂ ಮಹಾಭಾರತವನ್ನೂ ಅಭ್ಯಸಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ವಿವಿಧ ದೇಶದ ಸಂಸ್ಕೃತಿಯ ಬಗ್ಗೆ ಇರುವ ಜ್ಞಾನವನ್ನು ಹೆಚ್ಚಿಸಲು ಹಾಗೂ ಭಾರತೀಯ ಸಂಸ್ಕೃತಿ ಗಳಾದ ಯೋಗ…
ಪುತ್ರಿ ನಿಶ್ಚಿತಾರ್ಥದಲ್ಲಿ ನಿಯಮ ಉಲ್ಲಂಘನೆ ಮಾಜಿ ಮೇಯರ್ ಪತಿ, ಕಲ್ಯಾಣಮಂಟಪ ಆಯೋಜಕರ ವಿರುದ್ಧ ಪ್ರಕರಣ
April 24, 2021ಮೈಸೂರು, ಏ.23(ಆರ್‍ಕೆ)-ಪುತ್ರಿಯ ವಿವಾಹ ನಿಶ್ಚಿತಾರ್ಥ ವೇಳೆ ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಮಾಜಿ ಮೇಯರ್ ಪತಿ ಹಾಗೂ ಕಲ್ಯಾಣ ಮಂಟಪದ ಆಯೋಜಕರ ವಿರುದ್ಧ ಸರಸ್ವತಿಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೈಸೂರಿನ ವಿಜಯನಗರ 3ನೇ ಹಂತದ ನಿವಾಸಿ, ಮಾಜಿ ಮೇಯರ್ ರಾಜೇಶ್ವರಿ ಅವರ ಪತಿ ಟಿ.ಸೋಮು ಮತ್ತು ನಿವೇದಿತನಗರದ ಸೆಲೆಬ್ರೇಷನ್ ಕನ್‍ವೆನ್ಷನ್ ಸೆಂಟರ್ ಆಯೋಜಕ ರಾಮಚಂದ್ರೇಗೌಡ, ಕೋವಿಡ್ ಮಾರ್ಗಸೂಚಿ ನಿಯಮ ಉಲ್ಲಂಘಿಸಿದವರಾಗಿದ್ದು, ಅವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ನಿವೇದಿತನಗರದ ಸೆಲೆಬ್ರೇಷನ್ ಕನ್‍ವೆನ್ಷನ್…
ಅರಣ್ಯಕ್ಕೆ ಬೆಂಕಿ ಇಟ್ಟಿದ್ದ ಮೂವರ ಬಂಧನ
April 24, 2021ಗುಂಡ್ಲುಪೇಟೆ,ಏ.23(ಸೋಮ್.ಜಿ)-ಇತ್ತೀಚಿಗೆ ಬಂಡೀಪುರ ಹುಲಿ ಯೋಜನೆಯ ಮದ್ದೂರು ಅರಣ್ಯಕ್ಕೆ ಬೆಂಕಿಯಿಟ್ಟಿದ್ದ ಮೂವರು ಆರೋಪಿಗಳನ್ನು ಆರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಮದ್ದೂರು, ಮೂಲೆಹೊಳೆ ಹಾಗೂ ಹಿಮವದ್ ಗೋಪಾಲ ಸ್ವಾಮಿಬೆಟ್ಟ ವಲಯದ ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿದ್ದ ಲಕ್ಕೀಪುರ ಕಾಲೋನಿಯ ನಿವಾಸಿ ಚಲುವ ಬಿನ್ ದೊಡ್ಡ ಕರಿಯ(48), ಮಣಿ ಬಿನ್ ಮೂರ್ತಿ(16), ಹಾಗೂ ಕೇರಳದ ಕೊಂಕಳಿಯ ಗಣೇಶ ಬಿನ್ ಬೊಮ್ಮ(38) ಬಂಧಿತರು. ಇನ್ನೂ 6 ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ನಟೇಶ್ ಪತ್ರಿಕಾ ಪ್ರಕಟಣೆಯಲ್ಲಿ…
ಪ್ರೇಯಸಿಯನ್ನು ಚಾಕುವಿನಿಂದ ಇರಿದ ಪ್ರೇಮಿ ಬಂಧನ
April 24, 2021ಮೈಸೂರು, ಏ.23(ಆರ್‍ಕೆ)-ಪ್ರೇಯಸಿಯನ್ನು ಚಾಕುವಿನಿಂದ ಇರಿದು ಪರಾರಿಯಾಗುತ್ತಿದ್ದ ಯುವಕನೋರ್ವನನ್ನು ಸಾರ್ವ ಜನಿಕರು ಹಿಡಿದು ಪೊಲೀಸರಿಗೊಪ್ಪಿಸಿರುವ ಘಟನೆ ಬುಧ ವಾರ ಸಂಜೆ ಮೈಸೂರಿನಲ್ಲಿ ಸಂಭವಿಸಿದೆ. ಹೆಚ್.ಡಿ.ಕೋಟೆ ತಾಲೂಕು ಅಂತರಸಂತೆ ಗ್ರಾಮದ ರಮೇಶ ಬಂಧಿತನಾಗಿದ್ದು, ಹಲ್ಲೆಗೊಳಗಾಗಿ ಗಾಯ ಗೊಂಡಿರುವ ಯುವತಿಯನ್ನು ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೈಸೂರಿನ ಮಾಲ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ ರಮೇಶ್, ಬುಧವಾರ ಸಂಜೆ ಲಷ್ಕರ್ ಮೊಹಲ್ಲಾದ ಶ್ರೀಹರ್ಷ ರಸ್ತೆಯ ಪಾರ್ಕ್‍ನಲ್ಲಿ ಕುಳಿತು ಆಕೆಯ ಜೊತೆ ಮಾತನಾಡುತ್ತಿದ್ದಾಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಪ್ರೇಯಸಿಯ ಮೊಬೈಲ್‍ಗೆ ಬರುತ್ತಿದ್ದ…
ತಜ್ಞರ ಮುನ್ಸೂಚನೆ ಲೆಕ್ಕಿಸದ ಬಿಜೆಪಿ ಸರ್ಕಾರ ಜನರ ಬೀದಿ ಹೆಣ ಮಾಡುತ್ತಿದೆ
April 24, 2021ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ತಮ್ಮ ಪಕ್ಷದ ಶಾಸಕರಿಗೆ ಪರಿಸ್ಥಿತಿ ಅವಲೋಕನ ಪತ್ರ ತಜ್ಞರ ಸಲಹೆ ಪಾಲಿಸಿದ್ದರೆ ಜನರಿಗೆ ಇಂತಹ ದಯನೀಯ ಸ್ಥಿತಿ ಬರುತ್ತಿರಲಿಲ್ಲ ಬೆಂಗಳೂರು, ಏ.23(ಕೆಎಂಶಿ)- ಕೋವಿಡ್ ಎರಡನೇ ಅಲೆ ಬಗ್ಗೆ ತಜ್ಞರು ಮುನ್ಸೂಚನೆ ನೀಡಿ ದ್ದರೂ, ಭ್ರಷ್ಟ, ಅದಕ್ಷ ಜನ ವಿರೋಧಿ ಬಿಜೆಪಿ ಸರ್ಕಾರ ಅದನ್ನು ಕಡೆಗಾಣಿಸಿ, ಜನರನ್ನು ಇಂತಹ ದಯಾನೀಯ ಸ್ಥಿತಿಗೆ ತಂದಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ತಮ್ಮ ಪಕ್ಷದ ಶಾಸಕರುಗಳಿಗೆ ಪತ್ರ ಬರೆದು, ಇಂತಹ ಸಮಯದಲ್ಲಿ ಜನರ…
ಸೂಕ್ತ ಚಿಕಿತ್ಸೆ ಇಲ್ಲದೆ ದಯನೀಯ ರೀತಿ ಸಾವಿಗೀಡಾದವರ ಗೌರವಯುತ ಅಂತ್ಯಕ್ರಿಯೆಗೆ ಅವಕಾಶ ಕಲ್ಪಿಸಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಗ್ರಹ
April 24, 2021ಬೆಂಗಳೂರು, ಏ.23(ಕೆಎಂಶಿ)- ಚಿಕಿತ್ಸೆ ದಕ್ಕದೆ ಅತ್ಯಂತ ಅಮಾನವೀಯವಾಗಿ ಸಾವನ್ನಪ್ಪಿದ ಕೊರೊನಾ ಸೋಂಕಿತರ ಶವಗಳ ಗೌರವಯುತ ಅಂತ್ಯ ಸಂಸ್ಕಾರಕ್ಕೆ ಕನಿಷ್ಠ ವ್ಯವಸ್ಥೆಯನ್ನು ಮಾಡುವಲ್ಲಿ ಕೈ ಚೆಲ್ಲಿ ಕುಳಿತಿರುವ ರಾಜ್ಯ ಸರ್ಕಾರದ ವೈಫಲ್ಯ ಅತ್ಯಂತ ಬೇಜವ್ದಾರಿತನದ ನಿರ್ದಯಿ ವರ್ತನೆ ಎಂದು ಮಾಜಿ ಮುಖ್ಯಮಂತ್ತಿ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಕೊರೊನಾ ಮಹಾಮಾರಿಯಿಂದ ಜೀವ ತೆತ್ತ ವ್ಯಕ್ತಿಗಳ ಶವಸಂಸ್ಕಾರಕ್ಕೆ ಬೆಂಗಳೂರಿನ ಅಷ್ಟ ದಿಕ್ಕುಗಳಲ್ಲಿನ ಡೀಮ್ಡ್ ಅರಣ್ಯ ಪ್ರದೇಶದಲ್ಲಿ ದಿನವೊಂದಕ್ಕೆ ಸುಮಾರು 25 ಶವಗಳನ್ನು…
ಮೃಗಾಲಯ, ಅರಮನೆ, ದೇಗುಲ ಪ್ರವೇಶ ನಿಷಿದ್ಧ ಏ.24-25, ಮೇ 1-2ರಂದು ಪ್ರವಾಸಿಗರಿಗೆ ಪ್ರವೇಶವಿಲ್ಲ
April 24, 2021ಮೈಸೂರು,ಏ.23(ಎಂಟಿವೈ)-ಕೊರೊನಾ 2ನೇ ಅಲೆ ತೀವ್ರವಾಗಿ ಹರಡುತ್ತಿದ್ದು, ಅದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ವೀಕೆಂಡ್ ಕಫ್ರ್ಯೂ ಘೋಷಿಸಿದ ಹಿನ್ನೆಲೆಯಲ್ಲಿ ಅರಮನೆ, ಚಾಮರಾಜೇಂದ್ರ ಮೃಗಾಲಯ, ಕಾರಂಜಿಕೆರೆ ಸೇರಿದಂತೆ ಮೈಸೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಶನಿವಾರ, ಭಾನುವಾರ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. ಮೇ 23ರಿಂದ ಮೇ 4ರವರೆಗೆ ರಾಜ್ಯಾದ್ಯಂತ ಸೆಕ್ಷನ್ 144 ಜಾರಿ ಇರಲಿದೆ. ಜೊತೆಗೆ ಏ.24-25 ಹಾಗೂ ಮೇ 1-2ರಂದು ವಾರಾಂತ್ಯ ಕಫ್ರ್ಯೂ ಸಹ ಇರಲಿದೆ. ಶ್ರೀರಂಗಪಟ್ಟಣ ಬಳಿಯ ರಂಗನತಿಟ್ಟು ಪಕ್ಷಿಧಾಮಕ್ಕೂ ಪ್ರವೇಶ ನಿಷೇಧವಿದೆ. ಸಫಾರಿ ಬಂದ್: ಬಂಡೀಪುರ,…
ಕೊರೊನಾ ಮುಕ್ತ ಪ್ರತಿಜ್ಞಾವಿಧಿ ಸ್ವೀಕರಿಸುವ ಮೂಲಕ ಶ್ರೀರಾಮನವಮಿ ಆಚರಣೆ
April 24, 2021ಮೈಸೂರು, ಏ. 23- ಮೈಸೂರಿನ ವಿವೇಕಾನಂದನಗರ ವೃತ್ತದಲ್ಲಿ ಶ್ರೀರಾಮ ನವಮಿಯ ಅಂಗವಾಗಿ ರಾಷ್ಟ್ರೀಯ ಹಿಂದೂ ಸಮಿತಿ ಹಾಗೂ ವಿ.ಕೆ.ಎಸ್ ಫೌಂಡೇಶನ್ ವತಿಯಿಂದ ಸಾರ್ವಜನಿ ಕರು ತಮ್ಮನ್ನು ಕೊರೊನಾದಿಂದ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ನಿಯಮಾನುಸಾರ ಪಾಲಿಸುವಂತೆ “ಮಾಸ್ಕ್ ಧರಿಸಿ ಕೊರೊನಾ ಓಡಿಸಿ” ಕೊರೊನಾ ಮುಕ್ತ ಪ್ರತಿಜ್ಞಾವಿಧಿಯನ್ನು ಪದಾಧಿ ಕಾರಿಗಳು ಸ್ವೀಕರಿಸುವ ಮೂಲಕ ಅರ್ಥ ಪೂರ್ಣವಾಗಿ ಆಚರಿಸಿದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹಿಂದೂ ಸಮಿತಿ ಅಧ್ಯಕ್ಷ ವಿಕಾಸ್ ಶಾಸ್ತ್ರಿ ಮಾತ ನಾಡಿ, ಮೈಸೂರು ಕೊರೊನಾ ಮುಕ್ತ ಮಾಡಲು ಪ್ರತಿಯೊಬ್ಬ ನಾಗರಿಕನೂ…










