ಮೈಸೂರು

ಒಕ್ಕಲಿಗರ ಸಂಘದ ಚುನಾವಣೆ ಮುಂದೂಡಿ ರಾಜ್ಯ ಸರ್ಕಾರ ಆದೇಶ
ಮೈಸೂರು

ಒಕ್ಕಲಿಗರ ಸಂಘದ ಚುನಾವಣೆ ಮುಂದೂಡಿ ರಾಜ್ಯ ಸರ್ಕಾರ ಆದೇಶ

April 24, 2021

ಬೆಂಗಳೂರು : ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸೋಂಕು ವ್ಯಾಪಕವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಮುಂದೂಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಚುನಾವಣಾಧಿಕಾರಿ, ರಾಜ್ಯ ಒಕ್ಕಲಿಗರ ಸಂಘ ಇವರ ಕೋರಿಕೆಯಂತೆ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಕೋವಿಡ್ ರೋಗ ಕಡಿಮೆ ಯಾಗುವವರೆಗೂ ಚುನಾವಣೆಯನ್ನು ಮುಂದೂಡುವುದು ಅನಿವಾರ್ಯವೆಂದು ಸರ್ಕಾರ ಮನಗಂಡಿದ್ದು, ಅದರಂತೆ ಚುನಾವಣೆಯನ್ನು ಮುಂದೂಡಲು ವಿನಂತಿಸಿ ಉಚ್ಛ ನ್ಯಾಯಾಲಯದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಚುನಾವಣೆ ಮುಂದೂಡುವಂತೆ ಆದೇಶಿಸಿರುತ್ತದೆ ಎಂದು…

ಅಪೊಲೋ ಆಸ್ಪತ್ರೆಯಲ್ಲಿ ಹಾಸಿಗೆಗಾಗಿ ಪರದಾಡಿದ ಸಾಲುಮರದ ತಿಮ್ಮಕ್ಕ
ಮೈಸೂರು

ಅಪೊಲೋ ಆಸ್ಪತ್ರೆಯಲ್ಲಿ ಹಾಸಿಗೆಗಾಗಿ ಪರದಾಡಿದ ಸಾಲುಮರದ ತಿಮ್ಮಕ್ಕ

April 24, 2021

ಬೆಂಗಳೂರು: ಬೆನ್ನು ನೋವಿನ ಹಿನ್ನೆಲೆ ಯಲ್ಲಿ ಚಿಕಿತ್ಸೆಗೆಂದು ಅಪೊಲೋ ಆಸ್ಪತ್ರೆಗೆ ದಾಖಲಾಗಿರುವ ಸಾಲುಮರದ ತಿಮ್ಮಕ್ಕ ನವರಿಗೆ ಬೆಡ್ ಸಮಸ್ಯೆ ಎದುರಾಗಿದ್ದು ಪರದಾಡಿರುವ ಘಟನೆ ನಡೆದಿದೆ. ಬಚ್ಚಲುಮನೆಯಲ್ಲಿ ಬಿದ್ದು ಬೆನ್ನುಮೂಳೆ ಮುರಿತವಾಗಿದ್ದ ಸಾಲು ಮರದ ತಿಮ್ಮಕ್ಕ ನವರಿಗೆ ಇತ್ತೀಚೆಗೆ ಶಸ್ತ್ರಚಿಕಿತ್ಸೆಯಾಗಿತ್ತು. ಇದೇ ಹಿನ್ನೆಲೆಯಲ್ಲಿ ಸದ್ಯ ಬೆನ್ನು ನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಾಗಿ ದ್ದಾರೆ. ಆದರೆ ಆಸ್ಪತ್ರೆಯಲ್ಲಿ ನಾನ್ ಕೋವಿಡ್ ರೋಗಿಗಳಿಗೆ ಬೆಡ್ ಸಮಸ್ಯೆ ಎದುರಾ ಗಿದ್ದು, ಸಾಲುಮರದ ತಿಮ್ಮಕ್ಕ ಕೂಡ ಹಾಸಿಗೆಗಾಗಿ ಪರದಾಡುವಂತಾಗಿದೆ. ತಿಮ್ಮಕ್ಕನವರು ಎರಡು ಗಂಟೆಗಳ ಕಾಲ…

ಸೈಯದ್ ಇಸಾಕ್ ಗ್ರಂಥಾಲಯಕ್ಕೆ ದೇಣಿಗೆ ನೀಡುವವರು ಹಣದ ಬದಲು ಪುಸ್ತಕ, ಪೀಠೋಪಕರಣ ಇತ್ಯಾದಿ ನೀಡಲು ಮನವಿ
ಮೈಸೂರು

ಸೈಯದ್ ಇಸಾಕ್ ಗ್ರಂಥಾಲಯಕ್ಕೆ ದೇಣಿಗೆ ನೀಡುವವರು ಹಣದ ಬದಲು ಪುಸ್ತಕ, ಪೀಠೋಪಕರಣ ಇತ್ಯಾದಿ ನೀಡಲು ಮನವಿ

April 22, 2021

ಮೈಸೂರು,ಏ.21(ಆರ್‍ಕೆಬಿ)- ಮೈಸೂ ರಿನ ರಾಜೀವ್‍ನಗರ 2ನೇ ಹಂತದಲ್ಲಿ ಬೆಂಕಿ ಗಾಹುತಿಯಾದ ಸೈಯದ್ ಇಸಾಕ್ ಸಾರ್ವ ಜನಿಕ ಗ್ರಂಥಾಲಯಕ್ಕೆ ಸಂಬಂಧಿಸಿದಂತೆ ದೇಣಿಗೆ ನೀಡಬಯಸುವವರು ಹಣದ ಬದಲಾಗಿ ಪುಸ್ತಕ, ಪೀಠೋಪಕರಣ, ಕಂಪ್ಯೂ ಟರ್, ಉಪಕರಣ ಇತ್ಯಾದಿ ನೀಡಬಹುದಾಗಿದೆ ಎಂದು ಮೈಸೂರು ನಗರಪಾಲಿಕೆ ಆಯು ಕ್ತರು, ಮುಡಾ ಆಯುಕ್ತರು ಹಾಗೂ ಮೈಸೂರು ನಗರ ಗ್ರಂಥಾಲಯದ ಉಪನಿರ್ದೇಶಕರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗ್ರಂಥಾಲಯವನ್ನು ಅದೇ ಸ್ಥಳದಲ್ಲಿ ಮೈಸೂರು ನಿರ್ಮಿತಿ ಕೇಂದ್ರದ ವತಿ ಯಿಂದ ಮೈಸೂರು ನಗರಪಾಲಿಕೆ, ಮುಡಾ ಮತ್ತು ನಗರ ಗ್ರಂಥಾಲಯ ಪ್ರಾಧಿಕಾರಗಳ…

ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಡಿಸಿಪಿ ಗೀತಾ ಪ್ರಸನ್ನ ನೇತೃತ್ವದಲ್ಲಿ  ಕೋವಿಡ್ ನಿಯಮ ಉಲ್ಲಂಘನೆ ವಿರುದ್ಧ  ಪಾಲಿಕೆ-ಪೊಲೀಸ್ ಜಂಟಿ ಕಾರ್ಯಾಚರಣೆ
ಮೈಸೂರು

ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಡಿಸಿಪಿ ಗೀತಾ ಪ್ರಸನ್ನ ನೇತೃತ್ವದಲ್ಲಿ ಕೋವಿಡ್ ನಿಯಮ ಉಲ್ಲಂಘನೆ ವಿರುದ್ಧ ಪಾಲಿಕೆ-ಪೊಲೀಸ್ ಜಂಟಿ ಕಾರ್ಯಾಚರಣೆ

April 22, 2021

ಮೈಸೂರು,ಏ.21(ಪಿಎಂ)- ಕೋವಿಡ್ ನಿಯಮ ಉಲ್ಲಂಘನೆ ವಿರುದ್ಧ ದಂಡ ವಿಧಿಸುವುದೂ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಹಾಗೂ ಡಿಸಿಪಿ ಗೀತಾ ಪ್ರಸನ್ನ ನೇತೃತ್ವದಲ್ಲಿ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಬುಧವಾರ ನಗರದ ಚಿಕ್ಕ ಗಡಿಯಾರ ವೃತ್ತ ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಲಾಯಿತು. ಚಿಕ್ಕ ಗಡಿಯಾರ ವೃತ್ತದಿಂದ ಕಾರ್ಯಾ ಚರಣೆ ಆರಂಭಿಸಿ, ಶಿವರಾಂಪೇಟೆಯ ವಿನೋಬಾ ರಸ್ತೆ, ಮನ್ನಾರ್ಸ್ ಮಾರ್ಕೆಟ್, ಡಿ.ದೇವರಾಜ ಅರಸು ರಸ್ತೆ, ಹಳೇ ಸಂತೆಪೇಟೆ…

ವೆಂಟಿಲೇಟರ್ ಸಹಿತ 100 ಬೆಡ್ ವ್ಯವಸ್ಥೆ: ತಹಸೀಲ್ದಾರ್
ಮೈಸೂರು

ವೆಂಟಿಲೇಟರ್ ಸಹಿತ 100 ಬೆಡ್ ವ್ಯವಸ್ಥೆ: ತಹಸೀಲ್ದಾರ್

April 22, 2021

ಹುಣಸೂರು,ಏ.21(ಕೆಕೆ)-ಕೊರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‍ನಲ್ಲೂ ತಲಾ 50 ಬೆಡ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಚಿಕಿತ್ಸೆಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಕೋವಿಡ್ ಟಾಸ್ಕ್‍ಫೋರ್ಸ್ ಸಮಿತಿ ಅಧ್ಯಕ್ಷರೂ ಆದ ತಹಸೀಲ್ದಾರ್ ಬಸವರಾಜ್ ಸ್ಪಷ್ಟಪಡಿಸಿದರು. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿನ ವೆಂಟಿಲೇಟರ್ ಸಹಿತ 50 ಬೆಡ್‍ಗಳ ವ್ಯವಸ್ಥೆ ವೀಕ್ಷಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೂ ಕೊರೊನಾ ಎರಡನೇ ಅಲೆ…

ಕೆ.ಆರ್.ನಗರ: ಅಗ್ನಿಶಾಮಕ ದಳದಿಂದ ಸೇವಾ ಸಪ್ತಾಹ
ಮೈಸೂರು

ಕೆ.ಆರ್.ನಗರ: ಅಗ್ನಿಶಾಮಕ ದಳದಿಂದ ಸೇವಾ ಸಪ್ತಾಹ

April 22, 2021

ಕೆ.ಆರ್.ನಗರ, ಏ.21(ಕೆಟಿಆರ್)-ಅಗ್ನಿಶಾಮಕ ದಳ ಸೇವಾ ಸಪ್ತಾಹ ಅಂಗವಾಗಿ ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಅಗ್ನಿಶಾಮಕ ದಳದಿಂದ ಖಾಸಗಿ ವಾಹನಗಳ ಚಾಲಕರು, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರಿಗೆ ಕರಪತ್ರ ವಿತರಿಸುವ ಮೂಲಕ ಅಗ್ನಿ ಸುರಕ್ಷತೆ ಬಗ್ಗೆ ಅರಿವು ಮೂಡಿಸಲಾಯಿತು. ಈ ವೇಳೆ ಮಾತನಾಡಿದ ಅಗ್ನಿಶಾಮಕ ಠಾಣಾಧಿಕಾರಿ ಬಿ.ಸಿ.ರಾಮಚಂದ್ರ, ಅಗ್ನಿ ಶಾಮಕ ದಳದಿಂದ ದೇಶಾದ್ಯಂತ ಸಪ್ತಾಹ ಆಚರಿಸುವ ಮೂಲಕ ಸಾರ್ವಜನಿಕರ ಪ್ರಾಣ ಮತ್ತು ಆಸ್ತಿ ರಕ್ಷಣಾ ಕಾರ್ಯದಲ್ಲಿ ತಮ್ಮ ಪ್ರಾಣವನ್ನು ಬಲಿ ದಾನಗೈದ ಅಗ್ನಿ ಶಾಮಕ ಸಿಬ್ಬಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಗುತ್ತದೆ ಎಂದರು….

ರಸಗೊಬ್ಬರ ಬೆಲೆ ಏರಿಕೆ ಖಂಡಿಸಿ ರೈತ ಸಂಘ ಪ್ರತಿಭಟನೆ
ಮೈಸೂರು

ರಸಗೊಬ್ಬರ ಬೆಲೆ ಏರಿಕೆ ಖಂಡಿಸಿ ರೈತ ಸಂಘ ಪ್ರತಿಭಟನೆ

April 21, 2021

ಮೈಸೂರು,ಏ.20(ಪಿಎಂ)- ರಾಸಾ ಯನಿಕ ಗೊಬ್ಬರದ ಬೆಲೆ ಹೆಚ್ಚಳದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘದ ಮೈಸೂರು ತಾಲೂಕು ಘಟಕದ ವತಿಯಿಂದ ಮಂಗಳ ವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ತಾಲೂಕು ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಪ್ರಧಾನಿ ನರೇಂದ್ರ ಮೋದಿಯವರು ರಾಸಾಯನಿಕ ಗೊಬ್ಬರದ ಬೆಲೆ ಹೆಚ್ಚಿ ಸುವ ಮೂಲಕ ಕೃಷಿಯಿಂದ ರೈತರು ವಿಮುಖರಾಗುವಂತೆ ಮಾಡುತ್ತಿದ್ದಾರೆ. ರೈತರ ಆದಾಯ ದ್ವಿಗುಣಗೊಳಿಸುವು ದಾಗಿ ಕೇವಲ ಹೇಳುತ್ತಲೇ ಪ್ರತಿ ವರ್ಷ ಕೃಷಿ ಉತ್ಪನ್ನ ವೆಚ್ಚವನ್ನು ಹೆಚ್ಚಿಸುತ್ತಲೇ ಬರುತ್ತಿದ್ದಾರೆ. ಈಗ ರಸಗೊಬ್ಬರ ಬೆಲೆ ದುಬಾರಿ…

ಕೊರೊನಾ ಸೋಂಕು ಹೆಚ್ಚಳ; ಜನರನ್ನೇ ದೂಷಿಸುವ ಸರ್ಕಾರದ್ದು ಬೇಜವಾಬ್ದಾರಿತನ
ಮೈಸೂರು

ಕೊರೊನಾ ಸೋಂಕು ಹೆಚ್ಚಳ; ಜನರನ್ನೇ ದೂಷಿಸುವ ಸರ್ಕಾರದ್ದು ಬೇಜವಾಬ್ದಾರಿತನ

April 21, 2021

ಮೈಸೂರು, ಏ.20(ಆರ್‍ಕೆಬಿ)- ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳಕ್ಕೆ ಜನರನ್ನೇ ದೂಷಿಸು ವುದು ಸರ್ಕಾರದ ಬೇಜವಾಬ್ದಾರಿತನ ಎಂದು ಎಂಎಲ್‍ಸಿ ಹೆಚ್.ವಿಶ್ವನಾಥ್ ಇಂದಿಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಮಾಧ್ಯಮ ಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಮುಖ್ಯ ಮಂತ್ರಿ, ಉಪಮುಖ್ಯಮಂತ್ರಿಗಳು ಮತ್ತು ಸಚಿವರ ನಡುವೆ ಯಾವುದೇ ಸಹಕಾರ ಇಲ್ಲ. ಸಹಕಾರ ಇಲ್ಲದಿದ್ದರಿಂದಲೇ ಇಂದು ಈ ಪರಿಸ್ಥಿತಿ ಬಂದಿದೆ. ಒಂದು ವಾರದಿಂದ ಬರೀ ಸಭೆಗಳನ್ನು ನಡೆಸುತ್ತಿದ್ದಾರೆ. ಯಾವ ತೀರ್ಮಾನ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಈ ವೈಪರೀತ್ಯಗಳನ್ನು ತಡೆಗಟ್ಟುವಲ್ಲಿ ಸರ್ಕಾರ…

ಇಂದಿನಿಂದ ಬೃಂದಾವನ ಪಂಚಕರ್ಮ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ
ಮೈಸೂರು

ಇಂದಿನಿಂದ ಬೃಂದಾವನ ಪಂಚಕರ್ಮ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ

April 21, 2021

ಮೈಸೂರು,ಏ.20(ಆರ್‍ಕೆ)-ಮೈಸೂ ರಿನ ಕೆಆರ್‍ಎಸ್ ರಸ್ತೆಯ ಬೃಂದಾವನ ಬಡಾವಣೆಯ ಸರ್ಕಾರಿ ಆಯುರ್ವೇದ ಪಂಚಕರ್ಮ ಹೈಟೆಕ್ ಆಸ್ಪತ್ರೆ ಕಟ್ಟಡದಲ್ಲಿ ನಾಳೆ (ಏ.21)ಯಿಂದ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಈವರೆಗೆ ಲಸಿಕೆ ನೀಡುತ್ತಿದ್ದ ಪಿಕೆಟಿಬಿ ಆಸ್ಪತ್ರೆ ಆವರಣದ ಟ್ರಾಮಾ ಕೇರ್ ಸೆಂಟರ್ ಕಟ್ಟಡದಲ್ಲಿ ಕೊರೊನಾ ಸೋಂಕಿತರನ್ನು ದಾಖಲಿಸಿಕೊಳ್ಳುತ್ತಿರುವುದರಿಂದ 45 ವರ್ಷ ಮೇಲ್ಪಟ್ಟವರಿಗೆ ಚಿಕಿತ್ಸೆ ನೀಡುವ ಪ್ರಕ್ರಿಯೆಯನ್ನು ಬುಧವಾರದಿಂದ ಸರ್ಕಾರಿ ಆಯುರ್ವೇದ ಪಂಚಕರ್ಮ ಆಸ್ಪತ್ರೆ ಯಲ್ಲಿ ಮುಂದುವರಿಸಲಾಗುವುದು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಂಗಳ ವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ…

ಟ್ರಾಮಾ ಕೇರ್ ಸೆಂಟರ್‍ನಲ್ಲಿ ಈಗ ಕೊರೊನಾ ಸೋಂಕಿತರಿಗೆ ಚಿಕಿತ್ಸೆ
ಮೈಸೂರು

ಟ್ರಾಮಾ ಕೇರ್ ಸೆಂಟರ್‍ನಲ್ಲಿ ಈಗ ಕೊರೊನಾ ಸೋಂಕಿತರಿಗೆ ಚಿಕಿತ್ಸೆ

April 21, 2021

ಮೈಸೂರು,ಏ.20(ಆರ್‍ಕೆ)- ಮೈಸೂ ರಿನ ಕೆಆರ್‍ಎಸ್ ರಸ್ತೆಯ ಪಿಕೆಟಿಬಿ ಆಸ್ಪತ್ರೆ ಆವರಣದಲ್ಲಿರುವ ಟ್ರಾಮಾ ಕೇರ್ ಸೆಂಟರ್ ನಲ್ಲಿ ನಾಳೆ (ಏ.21)ಯಿಂದ ಕೊರೊನಾ ಸೋಂಕಿ ತರಿಗೆ ಚಿಕಿತ್ಸಾ ವ್ಯವಸ್ಥೆ ಆರಂಭವಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮ ಶೇಖರ್, ಮಂಗಳವಾರ ಸಂಸದ ಪ್ರತಾಪ್ ಸಿಂಹ, ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್ ಅವರೊಂದಿಗೆ ಟ್ರಾಮಾ ಕೇರ್ ಸೆಂಟರ್‍ಗೆ ಭೇಟಿ ನೀಡಿ, ಸಿದ್ಧತೆಯನ್ನು ಪರಿಶೀಲಿಸಿದರು. ಕಟ್ಟಡದ ಎರಡನೇ ಮಹಡಿಯ 5 ವಾರ್ಡ್‍ಗಳಲ್ಲಿ ಕೋವಿಡ್ ಸೋಂಕಿತರಿಗಾಗಿ 100 ಹಾಸಿಗೆಗಳ, ಸೆಂಟ್ರಲ್ ಆಕ್ಸಿಜನ್ ಸಿಸ್ಟಂನೊಂದಿಗೆ ಸಜ್ಜು…

1 253 254 255 256 257 1,611
Translate »