ಮೈಸೂರು

ಕೋವಿಡ್ ಸಂತ್ರಸ್ತರಿಗೆ ನೆರವಾಗಲು ಬಿಜೆಪಿಯಿಂದ ಸಹಾಯವಾಣಿ ತಂಡ ರಚನೆ
ಮೈಸೂರು

ಕೋವಿಡ್ ಸಂತ್ರಸ್ತರಿಗೆ ನೆರವಾಗಲು ಬಿಜೆಪಿಯಿಂದ ಸಹಾಯವಾಣಿ ತಂಡ ರಚನೆ

April 24, 2021

ಮೈಸೂರು, ಏ.23(ಆರ್‍ಕೆಬಿ)- ರಾಜ್ಯದಲ್ಲಿ ಹರಡುತ್ತಿರುವ ಕೋವಿಡ್-19 2ನೇ ಅಲೆಯ ದುಷ್ಪರಿಣಾಮಗಳನ್ನು ಮನಗಂಡು, ಬಿಜೆಪಿ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಕಾರ್ಯಕರ್ತರನ್ನು ಒಳಗೊಂಡ ಸಹಾಯವಾಣಿ ಸೇವಾ ತಂಡ ರಚಿಸಲಾಗಿದೆ. ಸಾರ್ವಜನಿಕರು ಆಸ್ಪತ್ರೆ, ರೆಮ್ಡಿಸಿವಿರ್, ವ್ಯಾಕ್ಸಿನೇಷನ್, ಔಷಧಿ, ಆಕ್ಸಿಜನ್ ಸಿಲಿಂಡರ್, ಅಂತಿಮ ಸಂಸ್ಕಾರಕ್ಕೆ ಸಂಬಂಧಿಸಿ ದಂತೆ ಈ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಬಿಜೆಪಿ ಮೈಸೂರು ನಗರ ಪ್ರಧಾನ ಕಾರ್ಯ ದರ್ಶಿ ಎಸ್.ವಾಣೀಶ್‍ಕುಮಾರ್ (98446 34559), ಎನ್.ಆರ್. ಕ್ಷೇತ್ರ ಮಾಜಿ ಅಧ್ಯಕ್ಷ ಜವರಪ್ಪ (9901958380) ಸಹಾಯವಾಣಿ ಪ್ರಮುಖರಾಗಿದ್ದಾರೆ. ಆಸ್ಪತ್ರೆಯ ಸಂಬಂಧಿತ…

ಸರ್ಕಾರಿ ಬಾಲಕರ ಬಾಲ ಮಂದಿರದಲ್ಲೇ ಮೂವರು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಕಾಮುಕನಿಗೆ 10 ವರ್ಷ ಜೈಲು
ಮೈಸೂರು

ಸರ್ಕಾರಿ ಬಾಲಕರ ಬಾಲ ಮಂದಿರದಲ್ಲೇ ಮೂವರು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಕಾಮುಕನಿಗೆ 10 ವರ್ಷ ಜೈಲು

April 24, 2021

ಮೈಸೂರು, ಏ.23-ಬಾಲಕರ ಬಾಲ ಮಂದಿರದಲ್ಲೇ ಮೂವರು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಕಾಮುಕನಿಗೆ 10 ವರ್ಷ ಜೈಲು ಮತ್ತು 11 ಸಾವಿರ ರೂ. ದಂಡ ವಿಧಿಸಿ ಮೈಸೂರಿನ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾ ಧೀಶರಾದ ಶ್ರೀಮತಿ ಬಿ.ಎಸ್.ಜಯಶ್ರೀಯವರು ತೀರ್ಪು ನೀಡಿದ್ದಾರೆ. ಮೈಸೂರಿನ ವಿಜಯನಗರ ನಾಲ್ಕನೇ ಹಂತದಲ್ಲಿರುವ ಸರ್ಕಾರಿ ಬಾಲಕರ ಬಾಲಮಂದಿರ ದಲ್ಲಿ ಆಶ್ರಯ ಪಡೆದಿದ್ದ ದರ್ಶನ್ (19) ಎಂಬಾತನೇ ಅಲ್ಲಿನ ಮೂವರು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಶಿಕ್ಷೆಗೆ ಗುರಿಯಾದ ಕಾಮುಕ. ಈತ 2019ರ ಮೇ 23ರಂದು…

ಸ್ಮಶಾನದಲ್ಲಿರುವ ಗೋರಿಗಳನ್ನು ತೆರವು ಮಾಡುವಂತೆ ಮನವಿ
ಮೈಸೂರು

ಸ್ಮಶಾನದಲ್ಲಿರುವ ಗೋರಿಗಳನ್ನು ತೆರವು ಮಾಡುವಂತೆ ಮನವಿ

April 24, 2021

ಮೈಸೂರು,ಏ.23-ಮೈಸೂರಿನ ಚಾಮುಂಡಿಬೆಟ್ಟ ತಪ್ಪಲಿನಲ್ಲಿರುವ ಸ್ಮಶಾನದಲ್ಲಿ ದಶಕಗಳ ಹಿಂದೆ ನಿರ್ಮಿಸಲಾದ ಗೋರಿಗಳು ಭವಿಷ್ಯದ ದಿನಗಳಲ್ಲಿ ಮೈಸೂರಿನ ಜನತೆಯ ಅಂತಿಮ ಸಂಸ್ಕಾರಕ್ಕೆ ಅವಕಾಶವನ್ನೇ ನೀಡ ದಿರುವ ಸಾಧ್ಯತೆ ಇದೆ. ಆದ ಕಾರಣ ಬೆಟ್ಟದ ತಪ್ಪಲಿನ ಸ್ಮಶಾನ ಸೇರಿದಂತೆ ಮೈಸೂರಿನ ಎಲ್ಲಾ ಸ್ಮಶಾನಗಳಲ್ಲಿರುವ ಗೋರಿಗಳನ್ನು ತೆರವು ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಮೈಸೂರಿನ ಜನತೆಗೆ ನೆಮ್ಮದಿಯ ಅಂತಿಮ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಮೈಸೂರು ಮಹಾನಗರ ಪಾಲಿಕೆ ಸದಸ್ಯ ಕೆ.ವಿ.ಮಲ್ಲೇಶ್ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೈಸೂರಿನ ನಿರ್ಮಾತೃ…

ಕೊರೊನಾ ಸೋಂಕಿತರ ಜೀವ ಉಳಿಸಲು ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹ
ಮೈಸೂರು

ಕೊರೊನಾ ಸೋಂಕಿತರ ಜೀವ ಉಳಿಸಲು ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹ

April 24, 2021

ಮೈಸೂರು, ಏ.23(ಆರ್‍ಕೆಬಿ)- ಹೆಚ್ಚುತ್ತಿ ರುವ ಕೊರೊನಾ ಸೋಂಕು ತಡೆಗಟ್ಟುವ ಜೊತೆಗೆ ಸೋಂಕಿನಿಂದ ರೋಗಿಗಳ ಜೀವ ಉಳಿಸಲು ಸರ್ಕಾರ ಕೂಡಲೇ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಬೇಕು. ರೋಗಿ ಗಳ ಜೀವ ಉಳಿಸಲು ಸಮರೋಪಾದಿ ಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಇಂದಿಲ್ಲಿ ಸರ್ಕಾರವನ್ನು ಆಗ್ರಹಿಸಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಖಾಲಿ ಇರುವ ಅಪಾರ್ಟ್ ಮೆಂಟ್‍ಗಳು, ಸರ್ಕಾರಿ ಜಾಗಗಳನ್ನು ಸರ್ಕಾರ…

ಮೈಸೂರು ಸಂತೇಪೇಟೆಯಲ್ಲಿ ವೀಕೆಂಡ್ ಜನಜಂಗುಳಿ
ಮೈಸೂರು

ಮೈಸೂರು ಸಂತೇಪೇಟೆಯಲ್ಲಿ ವೀಕೆಂಡ್ ಜನಜಂಗುಳಿ

April 24, 2021

ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನತೆ-ಸಂತೇಪೇಟೆ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಅಂತರ ಕಾಯ್ದುಕೊಳ್ಳದ ಗ್ರಾಹಕರು; ಪೊಲೀಸರ ಕಟ್ಟುನಿಟ್ಟಿನ ಸೂಚನೆ ಬಳಿಕ ಸುಧಾರಣೆ ಮೈಸೂರು,ಏ.23(ಎಂಟಿವೈ)- ಕೊರೊನಾ ವೈರಸ್ ವ್ಯಾಪಕವಾಗಿ ಹರಡುವುದನ್ನು ತಡೆ ಯಲು ಸರ್ಕಾರ ಹೊರಡಿ ಸಿರುವ `ವಾರಾಂತ್ಯ ಕಫ್ರ್ಯೂ’ ಹಿನ್ನೆಲೆಯಲ್ಲಿ ದಿನಸಿ ಸೇರಿದಂತೆ ಅಗತ್ಯ ವಸ್ತು ಖರೀದಿಗೆ ಜನ ಶುಕ್ರವಾರ ಸಂತೇಪೇಟೆಯಲ್ಲಿ ಮುಗಿಬಿದ್ದರು. ಕೊರೊನಾ 2ನೇ ಅಲೆ ತೀವ್ರಗೊಂ ಡಿದ್ದು, ಸೋಂಕಿತರು ಹಾಗೂ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾ ಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯಾ ದ್ಯಂತ ಇಂದು…

ಕಫ್ರ್ಯೂ; ಬಹುತೇಕ ಸಾರಿಗೆ ಬಸ್‍ಗಳಿಗೂ ವಾರಾಂತ್ಯ ವಿಶ್ರಾಂತಿ!
ಮೈಸೂರು

ಕಫ್ರ್ಯೂ; ಬಹುತೇಕ ಸಾರಿಗೆ ಬಸ್‍ಗಳಿಗೂ ವಾರಾಂತ್ಯ ವಿಶ್ರಾಂತಿ!

April 24, 2021

ಮೈಸೂರು, ಏ.23(ಎಂಟಿವೈ)- ಆರನೇ ವೇತನ ಆಯೋಗದ ವರದಿ ಜಾರಿಗೆ ಒತ್ತಾಯಿಸಿ 15 ದಿನ ಮುಷ್ಕರ ನಡೆಸಿ, ಕಳೆದೆರಡು ದಿನದಿಂದಷ್ಟೆ ಕರ್ತವ್ಯಕ್ಕೆ ಹಾಜರಾದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಈಗ ವೀಕೆಂಡ್ ಕಫ್ರ್ಯೂ ಹಿನ್ನೆಲೆಯಲ್ಲಿ ಮತ್ತೆ 4 ದಿನ ವಿಶ್ರಾಂತಿ ಲಭಿಸಲಿದೆ. ಶನಿವಾರ ಮತ್ತು ಭಾನುವಾರ ಸಾರಿಗೆ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ. ವೀಕೆಂಡ್ ಕಫ್ರ್ಯೂ ಜಾರಿ ಜತೆಗೆ ಮೇ 4ರವರೆಗೂ ಕಟ್ಟುನಿಟ್ಟಿನ ನಿಯಮ ಪಾಲನೆಗೆ ಸೂಚಿಸಿರುವುದು ಸಾರಿಗೆ ಸಂಸ್ಥೆಯ ಬಸ್ ಸಂಚಾರಕ್ಕೂ ಅನ್ವಯವಾಗಲಿದೆ. 30 ಬಸ್…

ಮೈಸೂರಿನ ಸಸ್ಯ ಸಂರಕ್ಷಕ ರಘುಲಾಲ್ ರಾಘವನ್
ಮೈಸೂರು

ಮೈಸೂರಿನ ಸಸ್ಯ ಸಂರಕ್ಷಕ ರಘುಲಾಲ್ ರಾಘವನ್

April 24, 2021

 ಗಿಡಗಳ ನೆಡುವುದು ಮಾತ್ರವಲ್ಲದೆ, ಅವುಗಳ ಪಾಲನೆ-ಪೋಷಣೆಗೆ ಕಂಕಣ ಕಟ್ಟಿರುವ ರಘುಲಾಲ್ ರಾಘವನ್ ಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ನೆಟ್ಟ ಗಿಡಗಳಿಗೂ ರಕ್ಷಾಕವಚ  ಈವರೆಗೆ ಸಾವಿರಾರು ಗಿಡ ನೆಟ್ಟು ಪೋಷಿಸಿ, ಅವುಗಳ ರಕ್ಷಣೆಗಾಗಿ 27,500 ಗಾರ್ಡ್‍ಗಳ ಕೊಡುಗೆ ನೀಡಿದ್ದಾರೆ ಮೈಸೂರು,ಏ.22(ಪಿಎಂ)- ಮೈಸೂರಿನ ಪ್ರಾಕೃತಿಕ ಸೌಂದರ್ಯದ ತಾಣ ಚಾಮುಂಡಿ ಬೆಟ್ಟ. ಇಲ್ಲಿನ ಶ್ರೀಚಾಮುಂಡೇಶ್ವರಿ ದೇವ ಸ್ಥಾನದ ಆಸುಪಾಸಿನ ನಿಸರ್ಗದ ಪ್ರಶಾಂತ ಮಯ ವಾತಾವರಣ ಇಮ್ಮಡಿಗೊಳಿಸಲು ದೇವಸ್ಥಾನದ ವತಿಯಿಂದ ವಿವಿಧ ಜಾತಿ ಗಿಡಗಳನ್ನು ನೆಡಲಾಗಿದ್ದು, ಈ ಎಲ್ಲಾ ಗಿಡ…

ಡಾ.ರಾಜ್‍ಕುಮಾರ್ ಜನ್ಮ ದಿನಾಚರಣೆ  ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ 
ಮೈಸೂರು

ಡಾ.ರಾಜ್‍ಕುಮಾರ್ ಜನ್ಮ ದಿನಾಚರಣೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ 

April 24, 2021

ಮೈಸೂರು, ಏ.23(ಆರ್‍ಕೆಬಿ)- ಶನಿವಾರ ಏ.24ರಂದು ಕನ್ನಡದ ವರನಟ, ಡಾ.ರಾಜ್ ಕುಮಾರ್ ಅವರ 93ನೇ ಜನ್ಮ ದಿನ. ಆದರೆ ಶನಿವಾರ ಮತ್ತು ಭಾನುವಾರ ಕೊರೊನಾ ಕಫ್ರ್ಯೂ ಇರುವ ಹಿನ್ನೆಲೆಯಲ್ಲಿ ಮೈಸೂರಿನ ವಿವಿಧ ಕನ್ನಡ ಪರ ಸಂಘಟನೆಗಳು ಶುಕ್ರವಾರವೇ ಡಾ.ರಾಜ್ ಕುಮಾರ್ ಜನ್ಮ ದಿನವನ್ನು ಆಚರಿಸಿದವು. ಡಾ.ರಾಜ್‍ಕುಮಾರ್ ಸೇವಾ ಸಮಿತಿ ವತಿಯಿಂದ ಕರ್ನಾಟಕ ವಸ್ತು ಪ್ರದರ್ಶನ ಆವರಣದಲ್ಲಿರುವ ಡಾ.ರಾಜ್ ಪುತ್ಥಳಿಗೆ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತಕುಮಾರ್‍ಗೌಡ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಅಧ್ಯಕ್ಷ ರಘು ಕೌಟಿಲ್ಯ ಅವರು…

ಡಾ.ರಾಜ್‍ಕುಮಾರ್ ಪ್ರತಿಮೆ ಸ್ವಚ್ಛಗೊಳಿಸಿದ ಅಭಿಮಾನಿಗಳು
ಮೈಸೂರು

ಡಾ.ರಾಜ್‍ಕುಮಾರ್ ಪ್ರತಿಮೆ ಸ್ವಚ್ಛಗೊಳಿಸಿದ ಅಭಿಮಾನಿಗಳು

April 24, 2021

ಮೈಸೂರು,ಏ.23-ನಾಳೆ (ಏ.24) ವರ ನಟ ಡಾ.ರಾಜ್‍ಕುಮಾರ್ ಅವರ ಹುಟ್ಟು ಹಬ್ಬ. ಪ್ರತಿವರ್ಷ ಸಂಭ್ರಮದಿಂದ ಅವರ ಹುಟ್ಟುಹಬ್ಬ ಆಚರಿಸುತ್ತಿದ್ದ ಅಭಿ ಮಾನಿ ಗಳಿಗೆ ಕೊರೊನಾ ಕಫ್ರ್ಯೂ ಅಡ್ಡಿಯಾಗಿದೆ. ಆದರೂ ರಾಜ್‍ಕುಮಾರ್ ಅವರ ಮೇಲಿನ ಪ್ರೀತಿಯಿಂದ ಅವರ ಅಭಿಮಾನಿಗಳು ಮೈಸೂ ರಿನ ಡಾ.ರಾಜ್‍ಕುಮಾರ್ ಉದ್ಯಾನವನ ದಲ್ಲಿರುವ ಅವರ ಪ್ರತಿಮೆಯನ್ನು ನಗರ ಪಾಲಿಕೆ ಸಿಬ್ಬಂದಿಯೊಡಗೂಡಿ ಸ್ವಚ್ಛಗೊಳಿಸಿ, ಪ್ರತಿಮೆಗೆ ಬಣ್ಣ ಹಚ್ಚಿದ್ದಲ್ಲದೆ, ಆವರಣ ಸ್ವಚ್ಛ ಗೊಳಿಸುವ ಮೂಲಕ ತಮ್ಮ ಅಭಿಮಾನ ವನ್ನು ವ್ಯಕ್ತಪಡಿಸಿದ್ದಾರೆ. ಕೊರೊನಾ ಕಫ್ರ್ಯೂ ಹಿನ್ನೆಲೆಯಲ್ಲಿ ಡಾ.ರಾಜ್ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು…

ಮೈಸೂರು ವಿವಿ ಘಟಿಕೋತ್ಸವ ಮುಂದೂಡಿಕೆ
ಮೈಸೂರು

ಮೈಸೂರು ವಿವಿ ಘಟಿಕೋತ್ಸವ ಮುಂದೂಡಿಕೆ

April 24, 2021

ಮೈಸೂರು : ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗು ತ್ತಿರುವ ಹಿನ್ನೆಲೆ ಮೈಸೂರು ವಿಶ್ವ ವಿದ್ಯಾಲಯದ ಘಟಿಕೋತ್ಸವ ಸಮಾ ರಂಭ ಮುಂದೂಡಿಕೆಯಾಗಿದೆ. ಕೊರೊನಾ ಹಿನ್ನೆಲೆ ಏ.29ರಂದು ನಡೆಸಲು ನಿರ್ಧರಿಸಿದ್ದ ಮೈಸೂರು ವಿವಿ 101ನೇ ಘಟಿಕೋತ್ಸವ ಸಮಾರಂಭ ಮುಂದೂಡಿಕೆಯಾಗಿದೆ. ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಹಾಗೂ ವಿವಿ ಉಲ್ಲೇಖಿತ ಸುತ್ತೋಲೆ ಅನ್ವಯ 101ನೇ ವಾರ್ಷಿಕ ಘಟಿಕೋತ್ಸವವನ್ನು ಮುಂದೂಡಲಾಗಿದ ಎಂದು ಮೈಸೂರು ವಿವಿ ಕುಲಸಚಿವರು ಆದೇಶ ಹೊರಡಿಸಿದ್ದಾರೆ.  

1 252 253 254 255 256 1,611
Translate »