ಮೈಸೂರು

ಕೊರೊನಾ ಹಾಟ್‍ಸ್ಪಾಟ್‍ಗಳಾಗುತ್ತಿವೆ ಸಬ್‍ರಿಜಿಸ್ಟ್ರಾರ್ ಕಚೇರಿಗಳು
ಮೈಸೂರು

ಕೊರೊನಾ ಹಾಟ್‍ಸ್ಪಾಟ್‍ಗಳಾಗುತ್ತಿವೆ ಸಬ್‍ರಿಜಿಸ್ಟ್ರಾರ್ ಕಚೇರಿಗಳು

May 4, 2021

ಮೈಸೂರು ನಗರದ 5 ಸೇರಿ ಜಿಲ್ಲೆಯ 14 ಕಚೇರಿಗಳಿಗೆ ನಿತ್ಯ ಸರಾಸರಿ 7,000 ಮಂದಿ ಭೇಟಿ  ಮೈಸೂರಿನ ಉತ್ತರ ಉಪನೋಂದಣಾಧಿಕಾರಿ ಕಚೇರಿವೊಂದರಲ್ಲೇ ಎಂಟು ಸಿಬ್ಬಂದಿಗೆ ಕೊರೊನಾ ಸೋಂಕು ದೃಢ  ಫೋಟೋಗಾಗಿ ಮಾಸ್ಕ್ ತೆಗೆಯಲೇಬೇಕು, ಥಂಬ್ ಇಂಪ್ರೆಷನ್, ಡಾಕ್ಯುಮೆಂಟೇಷನ್ ಮಾಡುವಾಗ ಸೋಂಕು ಹರಡುವ ಸಾಧ್ಯತೆ ಎಸ್.ಟಿ.ರವಿಕುಮಾರ್ ಮೈಸೂರು, ಮೇ 3- ಇಡೀ ವಿಶ್ವವನ್ನೇ ತಲ್ಲಣ ಗೊಳಿಸಿರುವ ಮಹಾಮಾರಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರಗಳು ಲಾಕ್‍ಡೌನ್, ಕಫ್ರ್ಯೂಗಳಂತಹ ಅಸ್ತ್ರಗಳನ್ನು ಬಳಸುತ್ತಿವೆ. ಡೆಡ್ಲಿ ಕೊರೊನಾ ಮಣಿಸಲು ಕರ್ನಾಟಕದಲ್ಲಿ 14…

ವೈದ್ಯಕೀಯ ಮೂಲಸೌಕರ್ಯ  ಕಲ್ಪಿಸಲು ಕೈಗಾರಿಕೆಗಳಿಗೆ ಡಿಸಿ ಮನವಿ
ಮೈಸೂರು

ವೈದ್ಯಕೀಯ ಮೂಲಸೌಕರ್ಯ ಕಲ್ಪಿಸಲು ಕೈಗಾರಿಕೆಗಳಿಗೆ ಡಿಸಿ ಮನವಿ

May 4, 2021

ಮೈಸೂರು, ಮೇ3(ಎಂಕೆ)- ಕೋವಿಡ್-19 ನಿರ್ವಹಣೆಗೆ ಬೇಕಾಗುವ ವೈದ್ಯಕೀಯ ಮತ್ತು ತಾಂತ್ರಿಕ ಸಲಕರಣೆ ಒದಗಿಸಲು ಸಿ.ಎಸ್.ಆರ್.ಯೋಜನೆಯಡಿ ಕೈಗಾರಿಕೆಗಳು ನೆರವಾಗುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮನವಿ ಮಾಡಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಜಿಲ್ಲೆಯ ಕೈಗಾರಿಕಾ ಪ್ರತಿನಿಧಿ ಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಸಿ.ಎಸ್.ಆರ್. ಯೋಜನೆಯಡಿ ಹಲವು ಕೈಗಾರಿಕೆಗಳು ಮಾಸ್ಕ್, ಸ್ಯಾನಿಟೈಸರ್‍ಗಳನ್ನು ನೀಡಿವೆ. ಆದರೆ, ಈ ವರ್ಷ ಮಾಸ್ಕ್, ಸ್ಯಾನಿಟೈಸರ್‍ಗೆ ಬೇಡಿಕೆ ಇಲ್ಲ. ಬದಲಿಗೆ ವೈದ್ಯಕೀಯ ಮೂಲಸೌಕರ್ಯದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೈಗಾರಿಕೆಗಳು ಮೈಸೂರಿನಲ್ಲಿ ಮೂರು ಕಡೆ…

ಕೋವಿಡ್ ಕೇರ್ ಸೆಂಟರ್‍ಗೆ ಶಾಸಕ ನಿರಂಜನಕುಮಾರ್ ಭೇಟಿ
ಮೈಸೂರು

ಕೋವಿಡ್ ಕೇರ್ ಸೆಂಟರ್‍ಗೆ ಶಾಸಕ ನಿರಂಜನಕುಮಾರ್ ಭೇಟಿ

May 4, 2021

ಗುಂಡ್ಲುಪೇಟೆ, ಮೇ 3 (ಸೋಮ್.ಜಿ)- ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿ ರುವ ಹಿನ್ನೆಲೆಯಲ್ಲಿ ಶಾಸಕ ಸಿ.ಎಸ್.ನಿರಂ ಜನಕುಮಾರ್ ತಾಲೂಕಿನ ವೀರನಪುರ ಗೇಟ್ ಬಳಿಯ ಮೊರಾರ್ಜಿ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್‍ನಲ್ಲಿ ಅಧಿಕಾರಿಗಳ ಸಭೆ ನಡೆಸಿ, ವಿವರ ಪಡೆದರು. ಶಾಸಕರಿಗೆ ಮಾಹಿತಿ ನೀಡಿದ ತಹಸೀ ಲ್ದಾರ್ ರವಿಶಂಕರ್, ತಾಲೂಕಿನ ವೀರನ ಪುರ ಗೇಟ್, ಮೇಲುಕಾಮನಹಳ್ಳಿಯ ಮೊರಾರ್ಜಿ ವಸತಿ ಶಾಲೆಗಳು ಹಾಗೂ ಬೇಗೂರಿನ ಕಿತ್ತೂರು ಚೆನ್ನಮ್ಮ ಶಾಲೆಯಲ್ಲಿ ತಲಾ 100 ಬೆಡ್ ಸಾಮರ್ಥ್ಯದ ಕೋವಿಡ್…

ಮೈಸೂರಿನ ವೈಹೆಚ್‍ಎ ಕಟ್ಟಡದಲ್ಲಿ ಕೋವಿಡ್ ಐಸೋಲೇಷನ್ ಕೇರ್ ಸೆಂಟರ್
ಮೈಸೂರು

ಮೈಸೂರಿನ ವೈಹೆಚ್‍ಎ ಕಟ್ಟಡದಲ್ಲಿ ಕೋವಿಡ್ ಐಸೋಲೇಷನ್ ಕೇರ್ ಸೆಂಟರ್

May 4, 2021

ಮೈಸೂರು, ಮೇ 3 (ಆರ್‍ಕೆಬಿ)- ಮೈಸೂರಿನ ಗೋಕುಲಂನಲ್ಲಿರುವ ಅಂತಾರಾಷ್ಟ್ರೀಯ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಅನ್ನು 64 ಬೆಡ್ ಗಳುಳ್ಳ ಕೋವಿಡ್ ಐಸೋಲೇಷನ್ ಕೇರ್ ಸೆಂಟರ್ (ಕೋವಿಡ್ ಪ್ರತ್ಯೇಕ ಆರೈಕೆ ಕೇಂದ್ರ) ಆಗಿ ಪರಿವರ್ತಿ ಸಲಾಗಿದೆ. ಮೈಸೂರಿನ ಸ್ಪಂದನಾ ಆಸ್ಪತ್ರೆ, ಬೃಂದಾ ವನ ಆಸ್ಪತ್ರೆ ಸಹಯೋಗದಲ್ಲಿ ಆರಂಭಿಸಲಾಗಿರುವ ಐಸೋಲೇಷನ್ ಕೇರ್ ಸೆಂಟರ್‍ಗೆ ಮೈಸೂರು-ಕೊಡಗು ಸಂಸದ ಪ್ರತಾಪ್‍ಸಿಂಹ ಸೋಮವಾರ ಚಾಲನೆ ನೀಡಿದರು. ಕೋವಿಡ್‍ನ ಸೌಮ್ಯ ರೋಗ ಲಕ್ಷಣಗಳನ್ನು ಹೊಂದಿರುವವರಿಗಾಗಿ ಈ ಐಸೋಲೇಷನ್ ಕೇರ್ ಸೆಂಟರ್ ತೆರೆಯಲಾಗಿದ್ದು, 8 ಕೊಠಡಿ, 16…

ಬೆಟ್ಟದಪುರದಲ್ಲಿ ಕೋವಿಡ್ ಸೆಂಟರ್ ತೆರೆಯಲು ಒತ್ತಾಯ
ಮೈಸೂರು

ಬೆಟ್ಟದಪುರದಲ್ಲಿ ಕೋವಿಡ್ ಸೆಂಟರ್ ತೆರೆಯಲು ಒತ್ತಾಯ

May 4, 2021

ಬೆಟ್ಟದಪುರ, ಮೇ 3(ಶಿವದೇವ)- ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಬೆಟ್ಟದಪುರ ಹೋಬಳಿಗೆ ಸುಮಾರು 40 ಸಾವಿರ ಜನರು ಸೇರ್ಪಡೆಗೊಳ್ಳುತ್ತಾರೆ. ಆದರೆ ಇಲ್ಲಿರುವ ಒಬ್ಬರೇ ವೈದ್ಯರು ಹಾಗೂ ಬೆರಳೆಣಿಕೆಯಷ್ಟು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ಅನಾರೋಗ್ಯಕ್ಕೆ ತುತ್ತಾದರೆ ದೂರದ ಪಿರಿಯಾಪಟ್ಟಣ, ಕುಶಾಲ ನಗರ ಆಸ್ಪತ್ರೆಗಳಿಗೆ ತಲುಪಬೇಕು. ಆದುದ ರಿಂದ ತಕ್ಷಣ ಶಾಸಕ ಕೆ.ಮಹದೇವ್ ಹಾಗೂ ತಹಶೀಲ್ದಾರ್, ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಅಧಿಕಾರಿಗಳು ಇತ್ತ ಗಮನ ಹರಿಸಿ ಬೆಟ್ಟದಪುರದಲ್ಲಿ ಕೋವಿಡ್ ಸೆಂಟರ್ ತೆರೆಯಬೇಕಾಗಿ ಹಾಗೂ ಆರೋಗ್ಯ…

ಹಾಲು ಉತ್ಪಾದಕರಿಗೆ ಮೈಸೂರು ಜಿಲ್ಲಾ ಹಾಲು ಒಕ್ಕೂಟ ಬೆನ್ನೆಲುಬು
ಮೈಸೂರು

ಹಾಲು ಉತ್ಪಾದಕರಿಗೆ ಮೈಸೂರು ಜಿಲ್ಲಾ ಹಾಲು ಒಕ್ಕೂಟ ಬೆನ್ನೆಲುಬು

May 4, 2021

ಭೇರ್ಯ, ಮೇ 3(ಮಹೇಶ್)- ರೈತರಿಗೆ ಹಾಗೂ ಹಾಲು ಉತ್ಪಾದಕರಿಗೆ ಬೆನ್ನಲುಬಾಗಿ ಮೈಸೂರು ಜಿಲ್ಲಾ ಹಾಲು ಒಕ್ಕೂಟವು ಯಾವಾಗಲೂ ಇರುತ್ತದೆ ಎಂದು ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಪಿ.ಎಂ. ಪ್ರಸನ್ನ ಹೇಳಿದರು. ಕೆ.ಆರ್.ನಗರ ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ನೂತನ ವಾಗಿ ನಿರ್ಮಿಸಿರುವ ಹಾಲು ಉತ್ಪಾದಕರ ಕಟ್ಟಡ ಹಾಗೂ ಬಿ.ಎಂ.ಸಿ. ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೈಸೂರು ಡೈರಿ ಬೆಳೆÀದಿದೆ ಎಂದರೆ ಅದು ರೈತರಿಂದಲೇ ಎಂದ ಅವರು, ಹಾಲು ಉತ್ಪಾದಕರ ಸಹಕಾರ ಮತ್ತು…

ವೈದ್ಯರ ಚೀಟಿ ಇಲ್ಲದೆ ನಿದ್ದೆ ಮಾತ್ರೆ ಮಾರಾಟ ಮೆಡಿಕಲ್ ಶಾಪ್ ಮಾಲೀಕ ಸೇರಿ ಮೂವರ ಬಂಧನ
ಮೈಸೂರು

ವೈದ್ಯರ ಚೀಟಿ ಇಲ್ಲದೆ ನಿದ್ದೆ ಮಾತ್ರೆ ಮಾರಾಟ ಮೆಡಿಕಲ್ ಶಾಪ್ ಮಾಲೀಕ ಸೇರಿ ಮೂವರ ಬಂಧನ

May 4, 2021

ಕೆ.ಆರ್.ನಗರ, ಮೇ 3(ಕೆಟಿಆರ್)- ವೈದ್ಯರ ಸಲಹೆ ಚೀಟಿ ಇಲ್ಲದೆ ಗ್ರಾಹಕರು ಕೇಳಿದಷ್ಟು ನಿದ್ದೆ ಮಾತ್ರೆ ನೀಡುತ್ತಿದ್ದ ಮೆಡಿಕಲ್ ಸ್ಟೋರ್ ಮಾಲೀಕ ಸೇರಿದಂತೆ ಮೂವರು ಆರೋಪಿಗಳನ್ನು ಮೈಸೂರು ಅಬಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಕೆ.ಆರ್.ನಗರದ ಬಾಲಾಜಿ ಮೆಡಿಕಲ್ಸ್ ಸ್ಟೋರ್ ಮಾಲೀಕ ಶಿವಕುಮಾರ್(44), ಮೈಸೂರಿನ ಶ್ರೀಕಂಠ (46), ರಾಜೇಶ್(49) ಬಂಧಿತರು. ಈ ಆರೋಪಿಗಳು ವೈದ್ಯ ಸಲಹೆ ಚೀಟಿ ಇಲ್ಲದೆ, ಯುವಕರು ಕೇಳಿದಷ್ಟು ನಿದ್ದೆ ಮಾತ್ರೆಗಳನ್ನು ನೀಡುತ್ತಿದ್ದ ಮಾಹಿತಿ ಹಿನ್ನೆಲೆಯಲ್ಲಿ ಶನಿವಾರ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಮೈಸೂರು (ಗ್ರಾಮಾಂತರ)…

20 ಅಂಗಡಿ ಮಾಲೀಕರ ಮೇಲೆ ಕೇಸ್, 35 ಬೈಕ್ ವಶ
ಮೈಸೂರು

20 ಅಂಗಡಿ ಮಾಲೀಕರ ಮೇಲೆ ಕೇಸ್, 35 ಬೈಕ್ ವಶ

May 4, 2021

ತಿ.ನರಸೀಪುರ, ಮೇ 3(ಎಸ್‍ಕೆ)- ಪಟ್ಟಣದಲ್ಲಿ ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿ ವ್ಯಾಪಾರದಲ್ಲಿ ನಿರತರಾಗಿದ್ದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿದ ಪೆÇಲೀಸರು ಅವರ ಮೇಲೆ ಕೋವಿಡ್ ನಿಯಮ ಉಲ್ಲಂಘನೆ ಕೇಸ್ ದಾಖಲಿಸಿದ್ದಾರೆ. ಪಟ್ಟಣ ಠಾಣೆಯ ಪಿಎಸ್‍ಐ ಹೆಚ್.ಡಿ. ಮಂಜು ನೇತೃತ್ವದಲ್ಲಿ ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆಗಿಳಿದ ಪೆÇಲೀಸರು ತಾಲೂಕು ಆಡಳಿತದ ಆದೇಶ ಉಲ್ಲಂಘಿಸಿ ಅಗತ್ಯ ವಸ್ತುಗಳಲ್ಲದ ಅಂಗಡಿಗಳನ್ನು ತೆರೆದು ಮಾರಾಟದಲ್ಲಿ ನಿರತರಾಗಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿ ಅಂಗಡಿ ಮಾಲೀಕರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಕೊರೊನಾ ಸೋಂಕು ದಿನದಿಂದ ದಿನಕ್ಕೆ…

ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಿ
ಮೈಸೂರು

ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಿ

May 4, 2021

ಹುಣಸೂರು, ಮೇ 3(ಕೆಕೆ)- ತಾಲೂಕಿ ನಲ್ಲಿ ಹೆಚ್ಚುತ್ತಿರುವ ಕೊರೊನಾ ನಿಯಂತ್ರಿಸಲು ಸಾರ್ವಜನಿಕರು ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಜೊತೆಗೆ ತಾಲೂಕು ಆಡಳಿತದೊಂದಿಗೆ ಕೈ ಜೋಡಿಸಬೇಕು ಎಂದು ತಹಶೀಲ್ದಾರ್ ಬಸವರಾಜ್ ಮನವಿ ಮಾಡಿದ್ದಾರೆ. ಪಟ್ಟಣದ ತಾಪಂ ಸಭಾಂಗಣದಲ್ಲಿ ಪತ್ರ ಕರ್ತರ ಸಂಘದಿಂದ ಆಯೋಜಿಸಿದ್ದ ತಾಲೂಕಿ ನಲ್ಲಿ ಹೆಚ್ಚುತ್ತಿರುವ ಕೊರೊನಾ ನಿಯಂತ್ರಣ ಸಂಬಂಧ ತಾಲೂಕು ಆಡಳಿತ ಹಾಗೂ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದ…

ತಾಲೂಕಿನಲ್ಲಿ ಕೊರೊನಾ ಪ್ರಕರಣ ಗಣನೀಯ ಹೆಚ್ಚಳ ತಾಲೂಕು ಆಡಳಿತದ ಕಾರ್ಯವೈಖರಿಗೆ ಶಾಸಕರ ಅಸಮಾಧಾನ
ಮೈಸೂರು

ತಾಲೂಕಿನಲ್ಲಿ ಕೊರೊನಾ ಪ್ರಕರಣ ಗಣನೀಯ ಹೆಚ್ಚಳ ತಾಲೂಕು ಆಡಳಿತದ ಕಾರ್ಯವೈಖರಿಗೆ ಶಾಸಕರ ಅಸಮಾಧಾನ

May 4, 2021

ತಿ.ನರಸೀಪುರ, ಮೇ 3(ಎಸ್‍ಕೆ)- ತಾಲೂಕಿನಲ್ಲಿ ಕೊರೊನಾ ಪ್ರಕರಣ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಯಾವುದೇ ಕ್ರಮಕ್ಕೆ ಮುಂದಾಗದ ತಾಲೂಕು ಆಡಳಿತದ ಕಾರ್ಯವೈಖರಿಗೆ ಶಾಸಕ ಎಂ.ಅಶ್ವಿನ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ತಾಲೂಕಿನಲ್ಲಿ ಹೆಚ್ಚುತ್ತಿರುವ ಕೊರೊನಾ ನಿಯಂತ್ರಣಕ್ಕೆ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದಿರುವ ಬಗ್ಗೆ ಬೇಸರ ವ್ಯಕ್ತ ಪಡಿಸಿದ ಅವರು, ತಾಲೂಕಿನಲ್ಲಿ ದಿನ ದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿವೆ. ತಾಲೂಕು ಆಡಳಿತ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ….

1 239 240 241 242 243 1,611
Translate »