ಮೈಸೂರು,ಮೇ 4(ಪಿಎಂ)- ಕೋವಿಡ್ ಕಫ್ರ್ಯೂನ ಮುಂದುವರೆದ ಪರಿಷ್ಕøತ ಮಾರ್ಗಸೂಚಿಯ ಆದೇಶದಂತೆ ಮೈಸೂರು ನಗರದ ದೇವರಾಜ, ಮಂಡಿ ಮತ್ತು ವಾಣಿವಿಲಾಸ ಹಾಗೂ ಎಂಜಿ ರಸ್ತೆಯ ಮಾರುಕಟ್ಟೆಗಳಲ್ಲಿ ವಹಿವಾಟು ನಡೆಸಲು ಸಂಪೂರ್ಣ ನಿರ್ಬಂಧ ವಿಧಿಸಿರುವ ಹಿನ್ನೆಲೆ ಯಲ್ಲಿ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಕೆಲವರು ತಮ್ಮ ಮಾರುಕಟ್ಟೆಗಳ ಸುತ್ತ ಮುತ್ತ ತಳ್ಳುವಗಾಡಿಗಳ ಮೂಲಕ ವಹಿ ವಾಟು ನಡೆಸಲು ಮುಂದಾಗಿದ್ದರೆ, ಹಲವು ವ್ಯಾಪಾರಿಗಳು ದಾರಿ ಕಾಣದಂತಾಗಿದ್ದಾರೆ. ಬಹುತೇಕ ವ್ಯಾಪಾರಸ್ಥರು ಈ ಹಿಂದಿ ನಂತೆ ಬೆಸ ಮತ್ತು ಸಮ ಸಂಖ್ಯೆ ಆಧಾರ ದಲ್ಲಿ ಮಳಿಗೆ ತೆರೆಯುವ…
ಕೌಟುಂಬಿಕ ಕಲಹ; ಪತ್ನಿ ಕೊಲೆ, ಆರೋಪಿ ಪತಿಗಾಗಿ ಶೋಧ
May 5, 2021ಮೈಸೂರು, ಮೇ4(ಎಂಕೆ)-ಮೈಸೂರಿನ ಜಯನಗರದಲ್ಲಿ ಸೋಮವಾರ ರಾತ್ರಿ ಕೌಟುಂಬಿಕ ಕಲಹದಲ್ಲಿ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಪತಿ ಆರೋಪಿ ಯಾಗಿದ್ದಾನೆ. ಮೈಸೂರು ತಾಲೂಕಿನ ಕಡಕೊಳ ಗ್ರಾಮದ ಮಾದಪ್ಪ ಎಂಬುವರ ಮಗಳು ನಳಿನಿ (32) ಕೊಲೆಯಾದ ದುರ್ದೈವಿ. ಮೃತಳ ಪತಿ ರಾಜೇಶ್‍ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕೌಟುಂಬಿಕ ಕಲಹದಿಂದ ಮನೆಯಲ್ಲಿ ಸೋಮವಾರ ರಾತ್ರಿ ರಾಜೇಶ್ ತನ್ನ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ, ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಮಂಗಳವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆ…
ಕಾಳಸಂತೆಯಲ್ಲಿ ಆಕ್ಸಿಜನ್ ಮಾರಾಟ ಯತ್ನ: ವ್ಯಕ್ತಿ ಬಂಧನ 47 ಲೀಟರ್ ಜಂಬೂ ಸಿಲಿಂಡರ್ ವಶ
May 5, 2021ಮೈಸೂರು,ಮೇ4(ಎಸ್‍ಬಿಡಿ)-ಆಕ್ಸಿಜನ್ ಕೊರತೆಯಿಂದ ಕೊರೊನಾ ಸೋಂಕಿ ತರ ಸಾವು ಸಂಭವಿಸುತ್ತಿರುವ ಸಂದರ್ಭದಲ್ಲಿ ಕಾಳಸಂತೆಯಲ್ಲಿ ವಾಣಿಜ್ಯ ಉದ್ದೇಶಕ್ಕೆ ಸಿಲಿಂಡರ್ ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನು ಮೈಸೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಂಜನಗೂಡು ತಾಲೂಕು, ಎಸ್.ಹೊಸಕೋಟೆ ಗ್ರಾಮದ ಮಧುಕುಮಾರ್(37) ಬಂಧಿತ ಆರೋಪಿ. ಈತ ಮಾರಾಟ ಮಾಡಲು ಇಟ್ಟುಕೊಂಡಿದ್ದ 47 ಲೀ. ಸಾಮಥ್ರ್ಯದ ಜಂಬೂ ಸಿಲಿಂಡರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಸರಕು ಸಾಗಣೆ ವಾಹನ ಹೊಂದಿರುವ ಮಧುಕುಮಾರ್, ಮೈಸೂರಿನಲ್ಲಿರುವ ಆಕ್ಸಿಜನ್ ರೀಫಿಲ್ಲಿಂಗ್ ಕಂಪನಿಯಿಂದ ಕಡಕೊಳದಲ್ಲಿರುವ ಖಾಸಗಿ ಆಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್‍ಗಳನ್ನು ಸಾಗಿಸುತ್ತಿದ್ದ. ಆದರೆ ಈತ…
ಬೆಡ್ ಬುಕ್ಕಿಂಗ್ ಮಾಫಿಯಾ ಬಯಲಿಗೆಳೆದ ಸಂಸದ ತೇಜಸ್ವಿ ಸೂರ್ಯ
May 5, 2021ಬೆಂಗಳೂರು, ಮೇ 4- ಕೊರೊನಾ ಕಾಲದಲ್ಲೂ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ, ಅಕ್ರಮವಾಗಿ ಬೆಡ್ ಬುಕ್ಕಿಂಗ್ ಮಾಡು ತ್ತಿದ್ದ ಮಾಫಿಯಾ ವನ್ನು ಸಂಸದ ತೇಜಸ್ವಿ ಸೂರ್ಯ ಬಹಿರಂಗ ಪಡಿಸಿದ್ದಾರೆ. ಇಂದು ಸುದ್ದಿಗೋಷ್ಠಿ ಯನ್ನು ಉದ್ದೇಶಿಸಿ ಮಾತ ನಾಡಿರುವ ಸಂಸದ ತೇಜಸ್ವಿ ಸೂರ್ಯ, ಅಕ್ರಮವಾಗಿ ಬಿಬಿಎಂಪಿ ಬೆಡ್‍ಗಳು ಬುಕ್ ಆಗುತ್ತಿರುವುದನ್ನು ಬಹಿರಂಗಪಡಿಸಿದ್ದು, ಇದರಲ್ಲಿ ಶಾಮೀಲಾಗಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಆಗ್ರಹಿ ಸಿದ್ದಾರೆ. ಬೆಂಗಳೂರಿನಲ್ಲಿ ವಾರ್ ರೂಮ್ ಗಳಿಂದಲೇ ಈವರೆಗೂ ಪ್ರಭಾವಿಗಳಿಂದ 4,065 ಬೆಡ್‍ಗಳನ್ನು ಬುಕ್ ಮಾಡಿದ್ದಾರೆ. ಬಿಬಿಎಂಪಿ…
ಕೆಆರ್ ಆಸ್ಪತ್ರೆ ಲಿಕ್ವಿಡ್ ಆಕ್ಸಿಜನ್ ಘಟಕ ಫ್ರೀಜ್: ಅಗ್ನಿಶಾಮಕ ದಳದಿಂದಾಗಿ ತಪ್ಪಿದ ಅನಾಹುತ
May 5, 2021ಮೈಸೂರು, ಮೇ 4(ವೈಡಿಎಸ್)- ಫ್ರೀಜ್ ಆಗಿದ್ದ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಟ್ಯಾಂಕ್‍ನ ಪೈಪ್‍ಗೆ ಅಗ್ನಿಶಾಮಕ ದಳ ಸಿಬ್ಬಂದಿ ನೀರನ್ನು ಸಿಂಪಡಿಸಿ ಕರಗಿಸಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಕಳೆದ ಬಾರಿ ಕೊರೊನಾ ಸಂದರ್ಭ ಮೈಸೂರಿನ ಕೆ.ಅರ್.ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಕಂಡಬಂದ ಹಿನ್ನೆಲೆಯಲ್ಲಿ ಆಸ್ಪತ್ರೆ ಆವರಣದಲ್ಲಿ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಟ್ಯಾಂಕ್ ನಿರ್ಮಿಸಲಾಗಿತ್ತು. ಇದರಿಂದ ಕೆ.ಆರ್.ಆಸ್ಪತ್ರೆಯ ಸೋಂಕಿತರಿಗೆ ಆಕ್ಸಿಜನ್ ನೀಡಲಾಗುತ್ತಿತ್ತು. ಆದರೆ, ಆಕ್ಸಿಜನ್ ಸರಬ ರಾಜು ಮಾಡುವ ಯಂತ್ರದ ಪೈಪ್ ಸುತ್ತ ಐಸ್ ಕಟ್ಟಿಕೊಂಡಿತ್ತು. ಇದರಿಂದ ಮುಂದಿನ ದಿನಗಳಲ್ಲಿ ಆಕ್ಸಿಜನ್…
ಕೆ.ಆರ್.ಆಸ್ಪತ್ರೆವೊಂದಕ್ಕೇ ನಿತ್ಯ 12 ಟನ್ ಲಿಕ್ವಿಡ್ ಆಕ್ಸಿಜನ್ ಬೇಕು!
May 5, 2021ಮೈಸೂರು, ಮೇ 4(ಆರ್‍ಕೆ)-ಉಸಿ ರಾಟದ ತೊಂದರೆ ಹಾಗೂ ಶ್ವಾಸಕೋಶ ಸೋಂಕಿರುವ ಕೊರೊನಾ ರೋಗಿಗಳಿಗೆ ಜೀವವಾಯು ಆಮ್ಲಜನಕ. ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಸಕಾಲಕ್ಕೆ ಆಕ್ಸಿಜನ್ ಪೂರೈಕೆಯಾಗದೇ 24 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ ಘಟನೆಯಿಂದÀ ಲಿಕ್ವಿಡ್ ಆಕ್ಸಿ ಜನ್ ಅಗತ್ಯತೆ ಇದೀಗ ಅರ್ಥವಾಗುತ್ತಿದೆ. ಕೊರೊನಾ ವೈರಸ್ ಸೋಂಕಿನ ಎರ ಡನೇ ಅಲೆ ರಣಘೋರವಾಗಿದ್ದು, ಇದೀಗ ಮೈಸೂರಲ್ಲಿ ಪ್ರತೀ ದಿನ 10 ರಿಂದ 12 ಮಂದಿಯನ್ನು ಬಲಿ ತೆಗೆದುಕೊಳ್ಳುತ್ತಿರು ವುದು ಸರ್ಕಾರ ಹಾಗೂ ಜಿಲ್ಲಾಡಳಿತದ ನಿದ್ದೆಗೆಡಿಸಿದೆ. ದಿನದಿಂದ ದಿನಕ್ಕೆ ಕೊರೊನಾ…
ಗುಂಡ್ಲುಪೇಟೆಯಲ್ಲಿ ಸ್ಯಾನಿಟೈಸಿಂಗ್ ಕಾರ್ಯಕ್ಕೆ ಚಾಲನೆ
May 5, 2021ಗುಂಡ್ಲುಪೇಟೆ,ಮೇ4 (ಸೋಮ್.ಜಿ)-ಕೊರೊನಾ ಬಗ್ಗೆ ಭಯ ಬೇಡ, ಜಾಗೃತಿ ಇರಲಿ. ತಾಲೂಕಿನಲ್ಲಿ ಕೋವಿಡ್ ಕೇರ್ ಆಸ್ಪತ್ರೆ ಹಾಗೂ ಸೆಂಟರ್‍ನ್ನು ತೆರೆದು ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜನತೆ ಯಾವುದೇ ಕಾರಣಕ್ಕೂ ಭಯಭೀತ ರಾಗಬಾರದು ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಮನವಿ ಮಾಡಿದರು. ಪಟ್ಟಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಪುರಸಭೆ ವ್ಯಾಪ್ತಿಯಲ್ಲಿ ನಡೆಸುತ್ತಿರುವ ಸ್ಯಾನಿ ಟೈಸಿಂಗ್ ಕಾರ್ಯಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು. ಕೊರೊನಾ ಬಗ್ಗೆ ಜನ ರಲ್ಲಿ ಅರಿವಿದೆ. ಈ ಬಗ್ಗೆ ಯಾವುದೇ ಕಾರ ಣಕ್ಕೂ ಭಯಬೇಡ. ಆದಷ್ಟು ಜಾಗ್ರತೆಯಿಂದ ಇರಬೇಕು….
ವ್ಯಕ್ತಿಯ ಭಾವನೆ, ಯೋಚನೆಗಳು ಹೋಮಿಯೋಪತಿಯಲ್ಲಿ ಮುಖ್ಯ
May 5, 2021ಮೈಸೂರು, ಮೇ 4 – ವ್ಯಕ್ತಿಯ ಭಾವನೆ ಮತ್ತು ಯೋಚನೆ ಗಳು ಹೋಮಿಯೋಪತಿಯಲ್ಲಿ ಮುಖ್ಯ ಎಂದು ಖ್ಯಾತ ಹೋಮಿಯೋಪತಿ ವೈದ್ಯರಾದ ಡಾ. ಎಂ.ಸಿ. ಮನೋಹರ್ ಹೇಳಿದರು. ಮೇ 3 ರಂದು ಮೈಸೂರು ಜೆಎಸ್‍ಎಸ್ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಏರ್ಪಡಿಸಿದ್ದ ‘ಜ್ಞಾನವಾರಿಧಿ-22’ ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಯೋಚನೆ, ಭಾವನೆ ಮತ್ತು ಹೋಮಿಯೋಪತಿ’ ವಿಷಯ ಕುರಿತು ಉಪನ್ಯಾಸ ನೀಡಿದರು. ಯಾವ ವಸ್ತು ಆರೋಗ್ಯವಂತ ಮನುಷ್ಯನು…
ಸೋಂಕು ನಿಯಂತ್ರಣಕ್ಕೆ ಮೈಸೂರಿನ ಪ್ರಮುಖ ರಸ್ತೆಗಳಿಗೆ ರಸಾಯನಿಕ ಸಿಂಪಡಣೆ
May 5, 2021ಮೈಸೂರು, ಮೇ 4(ಎಂಟಿವೈ)- ಕೊರೊನಾ 2ನೇ ಅಲೆಯ ತೀವ್ರತೆಗೆ ಮೈಸೂರು ನಗರ ತತ್ತರಿಸಿದೆ. ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗರೂಕತಾ ಕ್ರಮವಾಗಿ ಮೈಸೂರಿನ ಪ್ರಮುಖ ರಸ್ತೆಗಳು, ಮಾರುಕಟ್ಟೆ ಪ್ರದೇಶ ಸೇರಿದಂತೆ ಜನ ದಟ್ಟಣೆಯ ಸ್ಥಳಗಳಲ್ಲಿ ಸೋಂಕು ನಿವಾ ರಕ ರಾಸಾಯನಿಕ ದ್ರಾವಣವನ್ನು ಸಿಂಪಡಿಸಲಾಯಿತು. ಆ ಮೂಲಕ ಸ್ಯಾನಿಟೈಸ್ ಪ್ರಕ್ರಿಯೆ ನಡೆಸಲಾಯಿತು. ಕಳೆದ ಕೆಲ ದಿನಗಳಿಂದ ಹೊಸದಾಗಿ ಸೋಂಕಿತರು ಅಪಾರ ಸಂಖ್ಯೆಯಲ್ಲಿ ಪತ್ತೆ ಯಾಗುತ್ತಿದ್ದಾರೆ. ಸಾವಿಗೀಡಾಗುವವರ ಸಂಖ್ಯೆಯೂ ಹೆಚ್ಚೇ ಇದೆ. ಸೋಂಕು ತಡೆಗಾಗಿ ಜನದಟ್ಟಣೆಯ ಸ್ಥಳಗಳಲ್ಲಿ…
ಸಮಗ್ರ ತನಿಖೆಗೆ ಶಾಸಕ ಸಾ.ರಾ.ಮಹೇಶ್ ಆಗ್ರಹ
May 5, 2021ಮೈಸೂರು, ಮೇ 4(ಆರ್‍ಕೆಬಿ)- ಚಾಮರಾಜ ನಗರದಲ್ಲಿ ಆಕ್ಸಿಜನ್ ಇಲ್ಲದೆ 24 ಮಂದಿ ಸಾವನ್ನಪ್ಪಿದ ದುರಂತಕ್ಕೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಡಳಿತದ ನಡುವೆ ಸಮನ್ವಯತೆಯ ಕೊರತೆಯೇ ಕಾರಣ. ಸರ್ಕಾರ (ಜಿಲ್ಲಾಡಳಿತ) ದೊಂದಿಗೆ ಆಕ್ಸಿಜನ್ ಕಂಪನಿ ಅಗ್ರಿಮೆಂಟ್ ಮಾಡಿ ಕೊಂಡಿರುವ ವಾರ್ಷಿಕ ಅಗ್ರಿಮೆಂಟ್ ಪ್ರಕಾರ ಪ್ರತಿನಿತ್ಯ 300ರಿಂದ 350 ಸಿಲಿಂಡರ್ ಪೂರೈಕೆ ಯಾಗಬೇಕು. ಆದರೆ ಕಡಿಮೆ ಸಂಖ್ಯೆಯಲ್ಲಿ ಆಕ್ಸಿಜನ್ ಪೂರೈಕೆಗೆ ಕಾರಣವೇನು? ಇದರ ಹಿಂದೆ ಏನು ನಡೆದಿದೆ ಎಂಬುದರ ಬಗ್ಗೆ ಹಿರಿಯ ಅಧಿಕಾರಿ ಯಿಂದ ತನಿಖೆಯಾಗಬೇಕು. ಕೂಡಲೇ ಡ್ರಗ್ ಕಂಟ್ರೋಲರ್…










