ಮೈಸೂರು

ಮೈಸೂರು ಜಿಲ್ಲೆಯಲ್ಲಿ ಶಾಲಾ-ಕಾಲೇಜು,  ಚಿತ್ರಮಂದಿರಗಳೇ ಕೊರೊನಾ ಕೇಂದ್ರಗಳಾಗಿವೆ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಶಾಲಾ-ಕಾಲೇಜು, ಚಿತ್ರಮಂದಿರಗಳೇ ಕೊರೊನಾ ಕೇಂದ್ರಗಳಾಗಿವೆ

March 25, 2021

ಮೈಸೂರು, ಮಾ.24(ಆರ್‍ಕೆಬಿ)- ಮೈಸೂರು ಜಿಲ್ಲೆಯಲ್ಲಿ ಕೊರೊನಾ ಪಾಸಿ ಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಶಾಲಾ-ಕಾಲೇಜು ಮತ್ತು ಚಿತ್ರಮಂದಿರ ಗಳಿಂದಲೇ ಹೆಚ್ಚಾಗಿ ಕೊರೊನಾ ಸೋಂಕು ಹರಡುತ್ತಿರುವುದಾಗಿ ವಿಶ್ಲೇಷಿಸಿದ್ದೇವೆ. ಇದನ್ನು ನಿಯಂತ್ರಿಸದೆ ಹೀಗೆ ಬಿಟ್ಟರೆ ಪ್ರಕರಣಗಳ ಸಂಖ್ಯೆ ದಿನೇದಿನೆ ದ್ವಿಗುಣ ಗೊಳ್ಳುವ ಸಾಧ್ಯತೆಗಳಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ.ಟಿ.ಅಮರ್‍ನಾಥ್ ಇಂದಿಲ್ಲಿ ಆತಂಕ ವ್ಯಕ್ತಪಡಿಸಿದರು. ಮೈಸೂರು ಜಿಪಂ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಅಧ್ಯಕ್ಷೆ ಪರಿ ಮಳಾ ಶ್ಯಾಂ ಅಧ್ಯಕ್ಷತೆಯಲ್ಲಿ ನಡೆದ ಕರ್ನಾ ಟಕ ಅಭಿವೃದ್ಧಿ…

ನಿರಂತರ ನಾಟಕೋತ್ಸವಕ್ಕೆ ಚಾಲನೆ
ಮೈಸೂರು

ನಿರಂತರ ನಾಟಕೋತ್ಸವಕ್ಕೆ ಚಾಲನೆ

March 25, 2021

ಮೈಸೂರು, ಮಾ.24(ಎಸ್‍ಪಿಎನ್)- ಆಧುನಿಕ ರಂಗಭೂಮಿ ನಾಟಕಗಳನ್ನು ಗ್ರಾಮೀಣ ಪ್ರದೇಶದ ಜನರಿಗೂ ಪರಿಚಯಿಸಬೇಕು. ಇದಕ್ಕೆ ನಗರ ಪ್ರದೇಶದ ಸಂಘ-ಸಂಸ್ಥೆಗಳ ಕಾರ್ಯ ಚಟುವಟಿಕೆಗಳು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಣೆಯಾಗಬೇಕು ಎಂದು ಸಾಮಾಜಿಕ ಹೋರಾಟಗಾರ ಪ.ಮಲ್ಲೇಶ್ ಸಲಹೆ ನೀಡಿದರು. ಮೈಸೂರಿನ ರಮಾಗೋವಿಂದÀ ರಂಗಮಂದಿರ ದಲ್ಲಿ `ನಿರಂತರ ಫೌಂಡೇಶನ್’ ಆಯೋಜಿಸಿದ್ದ 5 ದಿನಗಳ `ನಿರಂತರ ನಾಟಕೋತ್ಸವ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಿರಂತರ ಸಾಂಸ್ಕøತಿಕ ತಂಡದ ಸದಸ್ಯರು 30 ವರ್ಷಗಳಿಂದ ಹಲವು ಸಾಮಾ ಜಿಕ ಬದಲಾವಣೆ ತರುವ ನಾಟಕಗಳನ್ನು ಪ್ರದರ್ಶಿಸುತ್ತಿ ದ್ದಾರೆ. ವಿದ್ಯಾರ್ಥಿಗಳು ರಂಗಭೂಮಿಯಲ್ಲಿ…

ಜುವೆಲರಿಯಲ್ಲಿ ದೋಚಿದ್ದ ಚಿನ್ನಾಭರಣ ಪೊಲೀಸರ ವಶಕ್ಕೆ
ಮೈಸೂರು

ಜುವೆಲರಿಯಲ್ಲಿ ದೋಚಿದ್ದ ಚಿನ್ನಾಭರಣ ಪೊಲೀಸರ ವಶಕ್ಕೆ

March 25, 2021

ಮೈಸೂರು,ಮಾ.24(ವೈಡಿಎಸ್)- ಚಿನ್ನವನ್ನು ಖರೀದಿಸುವ ನೆಪದಲ್ಲಿ ಖದೀಮನೋರ್ವ ಜುವೆಲರಿಗೆ ಹೋಗಿ, ಅಲ್ಲಿನ ಕೆಲಸಗಾರನ ಕಣ್ಣಿಗೆ ಕಾರದಪುಡಿ ಎರಚಿ ಚಿನ್ನಾಭರಣಗಳನ್ನು ದೋಚಿದ್ದ ಪ್ರಕರಣವನ್ನು ಮೇಟಗಳ್ಳಿ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಮೂಲಕ 4.20 ಲಕ್ಷ ರೂ.ಮೌಲ್ಯದ 14 ಚಿನ್ನದ ಚೈನು ಮತ್ತು 1 ಉಂಗುರ ವಶಪಡಿಸಿಕೊಂಡಿದ್ದಾರೆ. 2020ರ ಡಿ.18ರಂದು ಸಂಜೆ.7.30ರ ವೇಳೆಗೆ ವ್ಯಕ್ತಿಯೊಬ್ಬ ಚಿನ್ನವನ್ನು ಖರೀದಿ ಸುವ ನೆಪದಲ್ಲಿ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಬ್ಬಾಳ್ ಮುಖ್ಯ ರಸ್ತೆ ಯಲ್ಲಿರುವ ಕೈಲಾಸ್ ಬ್ಯಾಂಕರ್ಸ್ ಅಂಡ್ ಜುವೆಲರಿಗೆ ಹೋಗಿದ್ದಾನೆ. ಕೆಲಸಗಾರನ ಕಣ್ಣಿಗೆ ಕಾರದಪುಡಿ…

ಅರಮನೆ ತೋಟಗಾರಿಕೆ ವಿಭಾಗದ ನಿವೃತ್ತ,  ಹಾಲಿ ಸೇವೆಯಲ್ಲಿರುವ 7 ಮಂದಿ ಸಿಬ್ಬಂದಿಗೆ ಸನ್ಮಾನ
ಮೈಸೂರು

ಅರಮನೆ ತೋಟಗಾರಿಕೆ ವಿಭಾಗದ ನಿವೃತ್ತ, ಹಾಲಿ ಸೇವೆಯಲ್ಲಿರುವ 7 ಮಂದಿ ಸಿಬ್ಬಂದಿಗೆ ಸನ್ಮಾನ

March 25, 2021

ಮೈಸೂರು,ಮಾ.24(ಪಿಎಂ)- ಅನ್ವೇಷಣಾ ಸೇವಾ ಟ್ರಸ್ಟ್ ವತಿಯಿಂದ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ 29ನೇ ಹುಟ್ಟು ಹಬ್ಬದ ಅಂಗವಾಗಿ ಮೈಸೂರು ಅರಮನೆ ತೋಟಗಾರಿಕೆ ವಿಭಾಗದ ನಿವೃತ್ತ ಹಾಗೂ ಹಾಲಿ ಸೇವೆಯಲ್ಲಿರುವ 7 ಮಂದಿ ಸಿಬ್ಬಂದಿಯನ್ನು ಬುಧವಾರ ಸನ್ಮಾನಿಸಲಾಯಿತು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ರಾಮೇಗೌಡ, ಮಹದೇವ, ಚಿಕ್ಕ ಮಲ್ಲಯ್ಯ, ಸಿದ್ದಯ್ಯ, ರಾಜಣ್ಣ, ಗೌಡಯ್ಯ ಹಾಗೂ ಬಸವಯ್ಯ ಅವರನ್ನು ಸನ್ಮಾನಿಸಲಾಯಿತು. ಸಮಾರಂಭ ಉದ್ಘಾಟಿ ಸಿದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಎಸ್.ಟಿ….

ಎಸ್‍ಪಿಬಿ ಸ್ಮರಣಾರ್ಥ `ನೂರೊಂದು ನೆನಪು’ ಗೀತ ನಮನ
ಮೈಸೂರು

ಎಸ್‍ಪಿಬಿ ಸ್ಮರಣಾರ್ಥ `ನೂರೊಂದು ನೆನಪು’ ಗೀತ ನಮನ

March 25, 2021

ಮೈಸೂರು,ಮಾ.24(ವೈಡಿಎಸ್)- ನಗ ರದ ನಾದಬ್ರಹ್ಮ ಸಂಗೀತ ಸಭಾದಲ್ಲಿ `ಜನ ಚೈತನ್ಯ ಫೌಂಡೇಷನ್’ ಆಯೋಜಿಸಿದ್ದ ಗಾನ ಗಂಧರ್ವ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಸ್ಮರಣಾರ್ಥ `ನೂರೊಂದು ನೆನಪು ಹಾಡಾಗಿ ಬಂತು’ ಚಿತ್ರಗೀತೆ ಗಾಯನ ನಮನ ಹಾಗೂ ಕಲಾವಿದರು-ಸಾಧಕರಿಗೆ `ಜನ ಚೈತನ್ಯ’ ಪುರಸ್ಕಾರ ಪ್ರದಾನ ಕಾರ್ಯಕ್ರಮ ದಲ್ಲಿ ಗಾಯಕರಾದ ಆರ್.ಮುತ್ತುರಾಜ್, ಆರ್.ಲಕ್ಷ್ಮಣ್, ಮಹದೇವಯ್ಯ, ಸಯ್ಯದ್ ಮುಜಾಮಿಲ್, ಉಮೇಶ್, ಸಿದ್ದರಾಜು, ಇಂಚರ, ಆನಂದಪ್ಪ ಅವರ ಕಂಠದಿಂದ ಹೊರಹೊಮ್ಮಿದ ಹಾಡುಗಳು ಸಂಗೀತ ಪ್ರಿಯರಿಗೆ ಮುದ ನೀಡಿದವು. ಕೀಬೋರ್ಡ್ ವಾದಕ ಗಣೇಶ್ ಈಶ್ವರ್ ಭಟ್ಟ, ಸಂಗೀತ ನಿರ್ದೇಶಕ ಗಾಡ್ವಿನ್…

ಮೈಸೂರು ಜಿಲ್ಲೆಯಲ್ಲಿ ಕ್ಷಯರೋಗದಿಂದ  3 ನಿಮಿಷಕ್ಕೆ 1 ಸಾವು: ರೋಹಿಣಿ ಸಿಂಧೂರಿ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಕ್ಷಯರೋಗದಿಂದ 3 ನಿಮಿಷಕ್ಕೆ 1 ಸಾವು: ರೋಹಿಣಿ ಸಿಂಧೂರಿ

March 25, 2021

ಮೈಸೂರು, ಮಾ.24- ಕ್ಷಯರೋಗಕ್ಕೆ ತುತ್ತಾಗಿ ಜಿಲ್ಲೆಯಲ್ಲಿ ಪ್ರತಿ 3 ನಿಮಿಷಕ್ಕೆ 1 ಸಾವು ಸಂಭವಿಸುತ್ತಿದೆ ಎಂದು ಮೈಸೂರು ಜಿಲ್ಲಾ ಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬುಧವಾರದಂದು ವೈದ್ಯರ ಭವನದಲ್ಲಿ ಕ್ಷಯರೋಗದ ನಿರ್ಮೂ ಲನೆಗೆ ಕಾಲ ಘಟಿಸುತ್ತಿದೆ ಘೋಷಣೆ ಯೊಂದಿಗೆ ನಡೆದ ವಿಶ್ವ ಕ್ಷಯರೋಗ ದಿನಾಚರಣೆಯಲ್ಲಿ ಮಾತನಾಡಿದರು. ಕ್ಷಯರೋಗ ಒಂದು ಸೈಲೆಂಟ್ ಕಿಲ್ಲರ್ ಆಗಿದ್ದು, ಕೊರೊನಾಗಿಂತ ಭಯಾನಕವಾಗಿದೆ. ಆದ್ದರಿಂದ ಇದನ್ನು ಎದುರಿಸುವ ಸವಾಲು ನಮ್ಮ ಮುಂದಿದೆ. ಜಿಲ್ಲೆಯಲ್ಲಿ ಕ್ಷಯರೋಗ…

ಕನ್ನಡ  ಪ್ರೇಮವನ್ನು ಉದ್ದೀಪನಗೊಳಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ: ಡಾ.ಪ್ರಭಾಕರ ಶಿಶಿಲ
ಮೈಸೂರು

ಕನ್ನಡ ಪ್ರೇಮವನ್ನು ಉದ್ದೀಪನಗೊಳಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ: ಡಾ.ಪ್ರಭಾಕರ ಶಿಶಿಲ

March 24, 2021

ಮೈಸೂರು, ಮಾ.23 – ಕನ್ನಡ ಪ್ರೇಮವನ್ನು ಉದ್ಧೀಪನಗೊಳಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಲೇಖಕ ರಾದ ಡಾ.ಬಿ.ಪ್ರಭಾಕರ ಶಿಶಿಲ ಅವರು ಹೇಳಿದರು. ಮೈಸೂರು ಜೆಎಸ್‍ಎಸ್ ಮಹಾ ವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ ಜಗದ್ಗುರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾ ಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಏರ್ಪಡಿಸಿದ್ದ ‘ಜ್ಞಾನವಾರಿಧಿ-16’ ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಕ್ಷೀಣಿಸಬಾರದು ಕನ್ನಡ ಪ್ರೀತಿ’ ಕುರಿತು ಉಪನ್ಯಾಸ ನೀಡುತ್ತಾ ಆಡುನುಡಿ ನಿಜವಾದ ಕನ್ನಡವಲ್ಲ. ಗ್ರಾಂಥಿಕ ಭಾಷೆ ನಿಜವಾದ…

ಮೈಸೂರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ‘ಯುವರತ್ನ’ ಸಿನಿಮಾ ಪ್ರಚಾರ
ಮೈಸೂರು

ಮೈಸೂರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ‘ಯುವರತ್ನ’ ಸಿನಿಮಾ ಪ್ರಚಾರ

March 24, 2021

ಮೈಸೂರು,ಮಾ.23(ಪಿಎಂ)- ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ತಮ್ಮ ಅಭಿ ನಯದ `ಯುವರತ್ನ’ ಸಿನಿಮಾದ ಬಗ್ಗೆ ಮಂಗಳ ವಾರ ಮೈಸೂರಿನಲ್ಲಿ ಭರ್ಜರಿ ಪ್ರಚಾರ ಕೈಗೊಂಡರು. ಈ ವೇಳೆ ಪವರ್ ಸ್ಟಾರ್ ಅಭಿಮಾನಿಗಳು, ಯುವ ಸಮೂಹ ಹುಚ್ಚೆದ್ದು ಕುಣಿದು ಕುಪ್ಪಳಿಸಿತು. ಸಿನಿಮಾದ ನಾಯಕ ನಟ ಪುನೀತ್ ರಾಜ್ ಕುಮಾರ್ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂ ಡಿದ್ದ ಹಿನ್ನೆಲೆಯಲ್ಲಿ ನೆಚ್ಚಿನ ನಟನ ಕಂಡ ಅಭಿ ಮಾನಿಗಳು ಸಂಭ್ರಮದಲ್ಲಿ ತೇಲಿದರು. ಬಹುತೇಕ ಯುವ ಜನರೇ ಇದ್ದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಮೈಸೂರು ಮಾನಸ…

ನಾಳೆಯಿಂದ 4 ದಿನ ಪರ್ವ ರಂಗಪ್ರಸ್ತುತಿ
ಮೈಸೂರು

ನಾಳೆಯಿಂದ 4 ದಿನ ಪರ್ವ ರಂಗಪ್ರಸ್ತುತಿ

March 24, 2021

ಆಗಲೇ ಎರಡು ದಿನದ ಪ್ರದರ್ಶನಕ್ಕೆ ಟಿಕೆಟ್ ಮಾರಾಟ ಪೂರ್ಣ ಮೈಸೂರು, ಮಾ.23(ಎಂಕೆ)- ಮೈಸೂರು ರಂಗಾಯಣದ ಭೂಮಿಗೀತದಲ್ಲಿ ಹೆಸರಾಂತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರ ‘ಪರ್ವ’ ಕಾದಂಬರಿಯ ರಂಗಪ್ರಸ್ತುತಿಯನ್ನು ಮಾ.25 ರಿಂದ 28ರವರೆಗೆ ಹಮ್ಮಿಕೊಳ್ಳಲಾಗಿದೆ. ಮಾ.25ರ ಸಂಜೆ 6.30ಕ್ಕೆ ‘ಆದಿ ಪರ್ವ’(2 ಗಂಟೆ 45 ನಿಮಿಷ), ಮಾ.26ರ ಸಂಜೆ 6.30ಕ್ಕೆ ‘ನಿಯೋಗ ಪರ್ವ’(2 ಗಂಟೆ 15 ನಿಮಿಷ) ಹಾಗೂ ಮಾ.27ರಂದು ಸಂಜೆ 6.30ಕ್ಕೆ ‘ಯುದ್ಧ ಪರ್ವ’(3 ಗಂಟೆ) ನಾಟಕ ಪ್ರದರ್ಶನವಿರಲಿದ್ದು, 3 ಸಂಚಿಕೆಗಳ ನಾಟಕದ ಪ್ರದರ್ಶನಗಳ ಮಧ್ಯೆ 10 ನಿಮಿಷ…

ಕೋವಿಡ್ ಲಸಿಕೆ ಪಡೆಯಲು ಹಿರಿಯ ನಾಗರಿಕರಿಗೆ  ನಗರ ಪಾಲಿಕೆಯಿಂದ ಉಚಿತ ವಾಹನ ವ್ಯವಸ್ಥೆ
ಮೈಸೂರು

ಕೋವಿಡ್ ಲಸಿಕೆ ಪಡೆಯಲು ಹಿರಿಯ ನಾಗರಿಕರಿಗೆ ನಗರ ಪಾಲಿಕೆಯಿಂದ ಉಚಿತ ವಾಹನ ವ್ಯವಸ್ಥೆ

March 24, 2021

ಮೈಸೂರು,ಮಾ.23(ಪಿಎಂ)- ಹಿರಿಯ ನಾಗರಿಕ ರನ್ನು ಮನೆಯಿಂದ ಕರೆತಂದು ಕೋವಿಡ್ ಲಸಿಕೆ ಹಾಕಿಸಿ, ಮತ್ತೆ ಮನೆಗೆ ತಲುಪಿಸಲು ಮೈಸೂರು ಮಹಾ ನಗರ ಪಾಲಿಕೆ ಉಚಿತ ವಾಹನ ಸೌಲಭ್ಯ ಕಲ್ಪಿಸಿದೆ. ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಈ ಸೌಲಭ್ಯ ಕಲ್ಪಿಸಲು ಮುಂದಾಗಿರುವ ನಗರ ಪಾಲಿಕೆ, ಜೆಎಸ್‍ಎಸ್ ವತಿಯಿಂದ ನೀಡಿರುವ ವ್ಯಾನ್‍ನಲ್ಲಿ ಮಂಗಳವಾರ ಆಲನಹಳ್ಳಿಯ ಅನಾಥಾಶ್ರಮವೊಂದರ 40 ಹಿರಿಯ ನಾಗರಿಕರನ್ನು ಟ್ರಾಮಾ ಕೇರ್ ಸೆಂಟರ್‍ಗೆ ಕರೆದೊಯ್ದು ಲಸಿಕೆ ಕೊಡಿಸಿ, ಮತ್ತೆ ಅವರ ಸ್ಥಳಕ್ಕೆ ತಲುಪಿಸಲಾಯಿತು. ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಈ ಸೌಲಭ್ಯ ವಿಸ್ತರಿಸಲು…

1 266 267 268 269 270 1,611
Translate »