ಮೈಸೂರು

ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ  ಪ್ರಯುಕ್ತ ಏ.14ರಂದು ಮ್ಯಾರಥಾನ್
ಮೈಸೂರು

ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಏ.14ರಂದು ಮ್ಯಾರಥಾನ್

March 30, 2021

ಮೈಸೂರು, ಮಾ.29(ಆರ್‍ಕೆಬಿ)- ಡಾ.ಬಿ.ಆರ್.ಅಂಬೇಡ್ಕರ್ 130ನೇ ಜನ್ಮ ದಿನಾಚರಣೆ ಅಂಗವಾಗಿ ವಿಶ್ವಜ್ಞಾನಿ ಚಾರಿಟಬಲ್ ಟ್ರಸ್ಟ್, ಭಾರತೀಯ ಪರಿವರ್ತನಾ ಸಂಘ, ಭಾರತೀಯ ವಿದ್ಯಾರ್ಥಿ ಸಂಘ, ದಲಿತ ಸಂಘಟನೆಗಳ ಒಕ್ಕೂಟ, ಸಂಶೋಧಕರ ಸಂಘದ ಜಂಟಿ ಆಶ್ರಯದಲ್ಲಿ ಏ.14ರಂದು ಬೆಳಿಗ್ಗೆ 6.30 ಗಂಟೆಗೆ ಮೈಸೂರಿನಲ್ಲಿ ಮ್ಯಾರಥಾನ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಭಾರತೀಯ ಪರಿ ವರ್ತನಾ ಸಂಘದ ಸಂಚಾಲಕ ಸೋಸಲೆ ಸಿದ್ದರಾಜು ತಿಳಿಸಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುರಭವನದಿಂದ ಆರಂಭವಾಗುವ ಮ್ಯಾರ ಥಾನ್, ಜಯಚಾಮರಾಜ ಒಡೆಯರ್ ವೃತ್ತ (ಹಾರ್ಡಿಂಜ್ ವೃತ್ತ)ದ ಮೂಲಕ…

ವಿದ್ಯಾರ್ಥಿಗಳಿಗೆ ಭವಿಷ್ಯದ ಮಾರ್ಗಸೂಚಿ ಅಗತ್ಯ
ಮೈಸೂರು

ವಿದ್ಯಾರ್ಥಿಗಳಿಗೆ ಭವಿಷ್ಯದ ಮಾರ್ಗಸೂಚಿ ಅಗತ್ಯ

March 30, 2021

ಮೈಸೂರು, ಮಾ.29(ಎಂಕೆ)- ವಿದ್ಯಾರ್ಥಿಗಳಿಗೆ ಭವಿಷ್ಯದ ಮಾರ್ಗಸೂಚಿ ಅಗತ್ಯ. ಪಠ್ಯದ ಜೊತೆಗೆ ಕೌಶಲಗಳ ತರಬೇತಿ ನೀಡುವ ಮೂಲಕ ಅವರು ಉದ್ಯೋಗ ಪಡೆದುಕೊಳ್ಳಲು ಸಿದ್ಧಗೊಳಿಸಬೇಕು ಎಂದು ಮೈಸೂರು ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪೆÇ್ರ.ಕೆ.ಎಸ್.ರಂಗಪ್ಪ ಸಲಹೆ ನೀಡಿದರು. ಮೈಸೂರಿನ ಮಾನಸಗಂಗೋತ್ರಿ ರಸಾಯನಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಸೋಮವಾರ ಆಯೋಜಿಸಿದ್ದ `ರಾಸಾಯನಿಕ ಸಮಾಜ 2020-21’ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು. ಶೈಕ್ಷಣಿಕ ಉತ್ಸವ ವಾಗಿರುವ `ರಾಸಾಯನಿಕ ಸಮಾಜ’ದಲ್ಲಿ ವಿದ್ಯಾರ್ಥಿ ಗಳು, ಸಂಶೋಧಕರು, ಪ್ರಾಧ್ಯಾಪಕರು ಭಾಗವಹಿಸ ಬೇಕು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರ್ತಿಸಿ, ಪೆÇ್ರೀತ್ಸಾಹಿಸುವ ಕೆಲಸ…

ಜಿ.ಟಿ.ದೇವೇಗೌಡರ ಬಣ ಜಯಭೇರಿ
ಮೈಸೂರು

ಜಿ.ಟಿ.ದೇವೇಗೌಡರ ಬಣ ಜಯಭೇರಿ

March 29, 2021

ಮೈಸೂರು,ಮಾ.28(ಆರ್‍ಕೆಬಿ)- ಕರ್ನಾ ಟಕ ರಾಜ್ಯ ಸಹಕಾರ ಮಹಾಮಂಡಳದ 13 ನಿರ್ದೇಶಕ ಸ್ಥಾನಗಳಿಗೆ ಮುಂದಿನ 5 ವರ್ಷಗಳ ಅವಧಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಶಾಸಕ ಜಿ.ಟಿ.ದೇವೇ ಗೌಡರ ನೇತೃತ್ವದ ತಂಡದ ಎಲ್ಲಾ ಅಭ್ಯರ್ಥಿ ಗಳು ಜಯಭೇರಿ ಬಾರಿಸಿದ್ದಾರೆ. ಬೆಂಗ ಳೂರಿನ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ಆವರಣದಲ್ಲಿ ನಡೆದ ಚುನಾವಣೆ ಯಲ್ಲಿ 29 ಜಿಲ್ಲಾ ಯೂನಿಯನ್‍ಗಳಿಂದ 13 ಸ್ಥಾನಗಳಿಗೆ 26 ಅಭ್ಯರ್ಥಿಗಳು ಚುನಾ ವಣಾ ಕಣದಲ್ಲಿದ್ದರು. ಇತರೆ ವಲಯ ದಿಂದ 1 ಸ್ಥಾನಕ್ಕೆ ನಾಲ್ವರು ಸ್ಪರ್ಧಿಸಿದ್ದರು. ಮೈಸೂರು…

ಬಿಸಿಲಿನ ಝಳಕ್ಕೆ ತತ್ತರಿಸಿದ ಜನತೆ: ಎಳನೀರು, ತಂಪು ಪಾನೀಯ ಮೊರೆ
ಮೈಸೂರು

ಬಿಸಿಲಿನ ಝಳಕ್ಕೆ ತತ್ತರಿಸಿದ ಜನತೆ: ಎಳನೀರು, ತಂಪು ಪಾನೀಯ ಮೊರೆ

March 29, 2021

ಮೈಸೂರು,ಮಾ.28(ಎಂಟಿವೈ) ವಾಡಿಕೆ ಮಳೆಯ ಕೊರತೆ ಹಾಗೂ ಫೆಬ್ರವರಿಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಮೈಸೂರು ಜಿಲ್ಲೆಯಲ್ಲಿ ರಣರೌದ್ರ ಬಿಸಿಲು ಜನ-ಜಾನುವಾರುಗಳನ್ನು ತತ್ತರಿಸುವಂತೆ ಮಾಡಿದೆ. ಈ ಬಿಸಿಲಿನ ಬೇಗೆಯಿಂದ ಜನರು ಪಾರಾಗಲು ತಂಪು ಪಾನೀಯ ಹಾಗೂ ಎಳ ನೀರಿನ ಮೊರೆ ಹೋಗುತ್ತಿದ್ದಾರೆ. ಬೇಸಿಗೆ ಆರಂಭಕ್ಕೂ ಮುನ್ನವೇ ಸುಡುವ ಬಿಸಿಲಿನ ಝಳ ಜನರನ್ನು ಅಕ್ಷರಶಃ ಹೈರಾಣಾಗಿಸುತ್ತಿದೆ. ಮಕ್ಕಳು, ವಯೋವೃದ್ಧರನ್ನು ಹಿಂಡಿ ಹಿಪ್ಪೆಯಾಗಿಸುತ್ತಿದೆ. ಪ್ರಸಕ್ತ ಫೆಬ್ರವರಿ ತಿಂಗಳಲ್ಲಿಯೇ ಬಿಸಿಲಿನ ತಾಪ ಹೆಚ್ಚಾಗಿತ್ತಾದರೂ ಮೂರು ದಿನ ಸುರಿದ ಅಕಾಲಿಕ ಆಲಿಕಲ್ಲು ಮಳೆ ಸ್ವಲ್ಪಮಟ್ಟಿಗೆ ಇಳೆಯನ್ನು…

ಡಾ.ಸಿಪಿಕೆ `ಚಿಂತನ ಚಿಂತಾಮಣಿ’ ಓದುವಂತೆ  ಪ್ರೇರೇಪಿಸುವ `ಚಿಂತನ ಚಿಂತಾಮಣಿ ಸಾರ’
ಮೈಸೂರು

ಡಾ.ಸಿಪಿಕೆ `ಚಿಂತನ ಚಿಂತಾಮಣಿ’ ಓದುವಂತೆ ಪ್ರೇರೇಪಿಸುವ `ಚಿಂತನ ಚಿಂತಾಮಣಿ ಸಾರ’

March 29, 2021

ಮೈಸೂರು, ಮಾ.28(ಆರ್‍ಕೆಬಿ)- ಓದಲು ಸಮಯವಿಲ್ಲದವರಿಗಾಗಿ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅವರ `ಚಿಂತನ ಚಿಂತಾಮಣಿ’ ಕೃತಿಯನ್ನು ಓದುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಪ್ರೊ.ಕೆ.ಭೈರವ ಮೂರ್ತಿ `ಚಿಂತನ ಚಿಂತಾಮಣಿ ಸಾರ’ ವನ್ನು ಸಂಪಾದಿಸಿದ್ದಾರೆ ಎಂದು ವಿದ್ವಾಂಸ ಡಾ.ಕೆ.ಅನಂತರಾಮು ಅಭಿಪ್ರಾಯಪಟ್ಟರು. ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಆವ ರಣದಲ್ಲಿರುವ ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಸಂವಹನ ಪ್ರಕಾಶನ, ಅಖಿಲ ಭಾರತ ಸರ್ವಜ್ಞ ಸಾಂಸ್ಕøತಿಕ ಪ್ರತಿಷ್ಠಾನ ಭಾನುವಾರ ಏರ್ಪಡಿಸಿದ್ದ ಪ್ರೊ.ಕೆ.ಭೈರವ ಮೂರ್ತಿ ಸಂಪಾದಿತ `ಚಿಂತನ ಚಿಂತಾ ಮಣಿ ಸಾರ’ ಕೃತಿ ಬಿಡುಗಡೆ ಮಾಡಿ, ಅವರು ಮಾತನಾಡಿದರು. ಪಿಕೆ…

ಮಡಿವಾಳ ಮಹಿಳಾ ಸಬಲೀಕರಣಕ್ಕೆ ನೋಂದಣಿ ಅಭಿಯಾನ ಆರಂಭ
ಮೈಸೂರು

ಮಡಿವಾಳ ಮಹಿಳಾ ಸಬಲೀಕರಣಕ್ಕೆ ನೋಂದಣಿ ಅಭಿಯಾನ ಆರಂಭ

March 29, 2021

ಮೈಸೂರು,ಮಾ.28(ಎಂಟಿವೈ)- ಮಡಿವಾಳ ಸಮುದಾಯದ ಮಹಿಳೆಯರ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಡಿವಾಳರ ಮಹಿಳಾ ಸಂಘಕ್ಕೆ ಸಮುದಾಯದ ಮಹಿಳೆಯರ ನೊಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಮಡಿವಾಳರ ಮಹಿಳಾ ಸಂಘ ಸಂಸ್ಥಾಪಕ ರಾಜ್ಯಾಧ್ಯಕ್ಷೆ ಎನ್.ಆರ್.ವಿಜಯಲಕ್ಷ್ಮೀ ಆಂಜನಪ್ಪ ತಿಳಿಸಿದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿವಾಳ ಸಮುದಾಯ ಹಿಂದುಳಿದ ವರ್ಗಕ್ಕೆ ಸೇರಿದ್ದು, ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿ ದಿದೆ. ಅದರಲ್ಲೂ ಸಮುದಾಯ ಮಹಿಳೆಯರು ಸಂಘಟನೆಯಿಂದ ದೂರವುಳಿದಿ ದ್ದಾರೆ. ಈ ಹಿನ್ನೆಲೆಯಲ್ಲಿ ಮಡಿವಾಳ ಸಮುದಾಯ ಮಹಿಳೆಯರನ್ನು ಸಂಘಟಿಸಿ,…

ಮೈಸೂರಿನ 3 ಕೇಂದ್ರಗಳಲ್ಲಿ ಎಪಿಪಿ ಹುದ್ದೆಗೆ ಸುಲಲಿತವಾಗಿ ನಡೆದ ಪರೀಕ್ಷೆ
ಮೈಸೂರು

ಮೈಸೂರಿನ 3 ಕೇಂದ್ರಗಳಲ್ಲಿ ಎಪಿಪಿ ಹುದ್ದೆಗೆ ಸುಲಲಿತವಾಗಿ ನಡೆದ ಪರೀಕ್ಷೆ

March 29, 2021

ಮೈಸೂರು,ಮಾ.28(ಆರ್‍ಕೆಬಿ)-ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು ಸಹಾಯಕ ಸರ್ಕಾರಿ ವಕೀಲರ 124 ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಭಾನುವಾರ ಮೈಸೂ ರಿನ ಮೂರು ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಪರೀಕ್ಷೆ ನಡೆಯಿತು. ಜಿಲ್ಲೆಯಲ್ಲಿ ಒಟ್ಟು 1,176 ಅಭ್ಯರ್ಥಿ ಗಳು ಪರೀಕ್ಷೆಗೆ ನೊಂದಾಯಿಸಿ ಕೊಂಡಿದ್ದರು. ಲಕ್ಷ್ಮೀಪುರಂ ಜೆಎಲ್‍ಬಿ ರಸ್ತೆ ಮಹಾರಾಜ ಸರ್ಕಾರಿ ಪಿಯು ಕಾಲೇಜು, ನಾರಾಯಣಶಾಸ್ತ್ರಿ ಮಹಾರಾಣಿ ಪಿಯು ಕಾಲೇಜು, ಒಂಟಿಕೊಪ್ಪಲು ಸರ್ಕಾರಿ ಪಿಯು ಕಾಲೇಜಿನಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30 ಮತ್ತು ಮಧ್ಯಾಹ್ನ 2ರಿಂದ…

‘ದಾಸ ಸಾಹಿತ್ಯ’ಕ್ಕೆ ವಿಶ್ವದ ಯಾವ ಭಾಷೆ ಸಾಹಿತ್ಯವೂ ಸಮವಲ್ಲ
ಮೈಸೂರು

‘ದಾಸ ಸಾಹಿತ್ಯ’ಕ್ಕೆ ವಿಶ್ವದ ಯಾವ ಭಾಷೆ ಸಾಹಿತ್ಯವೂ ಸಮವಲ್ಲ

March 29, 2021

ಮೈಸೂರು,ಮಾ.28(ಪಿಎಂ)-`ದಾಸ ಸಾಹಿತ್ಯ’ದ ಹಿನ್ನೆಲೆಯಲ್ಲಿ ಕನ್ನಡಿಗರಾದ ನಾವು ಹೆಮ್ಮೆ ಪಡಬೇಕು. ಇಡೀ ವಿಶ್ವದ ಯಾವ ಭಾಷೆಯಲ್ಲೂ ಇದಕ್ಕೆ ಸಮನಾದ ಸಾಹಿತ್ಯ ಇಲ್ಲ ಎಂದು ರಾಷ್ಟ್ರಪತಿ ಪ್ರಶಸ್ತಿ ಪುರಸ್ಕøತ ಹಿರಿಯ ಸಂಸ್ಕøತ ವಿದ್ವಾಂಸ ಡಾ.ಹೆಚ್.ವಿ. ನಾಗರಾಜರಾವ್ ಅಭಿಪ್ರಾಯಪಟ್ಟರು. ಮೈಸೂರಿನ ಜೆಎಲ್‍ಬಿ ರಸ್ತೆಯ ನಾದ ಬ್ರಹ್ಮ ಸಂಗೀತ ಸಭಾ ಸಭಾಂಗಣದಲ್ಲಿ ಪರಂಪರೆ, ಡಾ.ಟಿ.ಎನ್.ಎನ್.ಅಭಿನಂದನಾ ಸಮಿತಿ ಜಂಟಿ ಆಶ್ರಯದಲ್ಲಿ ಹರಿದಾಸ ಸಾಹಿತ್ಯ ಕ್ಷೇತ್ರದ ಹಿರಿಯ ವಿದ್ವಾಂಸರಾದ ಡಾ.ಟಿ.ಎನ್.ನಾಗರತ್ನ ಅವರ 75ನೇ ಹುಟ್ಟುಹಬ್ಬದ ಅಂಗವಾಗಿ `ಡಾ.ಟಿ.ಎನ್. ನಾಗರತ್ನ-75’ ಶೀರ್ಷಿಕೆಯಡಿ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ…

ಸುಜೀವ್ ಸಂಸ್ಥೆಯಿಂದ ಪಿಕೆಟಿಬಿ ರೋಗಿಗಳಿಗೆ ಹಣ್ಣು ವಿತರಣೆ
ಮೈಸೂರು

ಸುಜೀವ್ ಸಂಸ್ಥೆಯಿಂದ ಪಿಕೆಟಿಬಿ ರೋಗಿಗಳಿಗೆ ಹಣ್ಣು ವಿತರಣೆ

March 26, 2021

ಮೈಸೂರು,ಮಾ.25(ಪಿಎಂ)- ವಿಶ್ವ ಕ್ಷಯರೋಗ ದಿನದ ಅಂಗವಾಗಿ ಸುಜೀವ್ ಸಂಸ್ಥೆ ವತಿಯಿಂದ ಮೈಸೂರಿನ ಪಿಕೆಟಿಬಿ ಸ್ಯಾನಿಟೋರಿಯಂ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬುಧವಾರ ಹಣ್ಣು-ಹಂಪಲು ಹಾಗೂ ಬ್ರೆಡ್ ವಿತರಣೆ ಮಾಡಲಾಯಿತು. ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಣೆ ಮಾಡಿದ ಸುಜೀವ್ ಸಂಸ್ಥೆ ಅಧ್ಯಕ್ಷ ರಾಜಾರಾಂ ಇದೇ ವೇಳೆ ಮಾತನಾಡಿ, ಇಲ್ಲಿನ ರೋಗಿಗಳಿಗೆ ಸಂಸ್ಥೆಯಿಂದ ಸಾಧ್ಯವಾಗುವ ಎಲ್ಲಾ ಸಹಾಯ ನೀಡಲು ನಿರ್ಧರಿಸಲಾಗಿದೆ. ರೋಗದಿಂದ ಗುಣಮುಖ ವಾಗಲು ಪೌಷ್ಟಿಕ ಆಹಾರ ಸೇವನೆಯೂ ಮುಖ್ಯವಾಗುತ್ತದೆ. ಹೀಗಾಗಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗುವ ರೋಗಿಗಳಿಗೆ ತಿಂಗಳ ಮಟ್ಟಿಗೆ…

‘ವಿಶ್ವ ಶ್ರವಣ ದಿನ’ ಕಿವಿ  ಆರೈಕೆ ಕುರಿತು ಜನಜಾಗೃತಿ
ಮೈಸೂರು

‘ವಿಶ್ವ ಶ್ರವಣ ದಿನ’ ಕಿವಿ ಆರೈಕೆ ಕುರಿತು ಜನಜಾಗೃತಿ

March 26, 2021

ಮೈಸೂರು,ಮಾ.25(ಎಂಟಿವೈ)- `ವಿಶ್ವ ಶ್ರವಣ ದಿನ’ ಹಿನ್ನೆಲೆಯಲ್ಲಿ ಕಿವಿ ಆರೈಕೆ ಕುರಿತಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ವಿವಿಧ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮೈಸೂರಿನ ನಜರ್‍ಬಾದ್‍ನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಿಂದ ಜಾಥಾ ನಡೆಸಿ ಜನಜಾಗೃತಿ ಮೂಡಿಸಿದರು. ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಮರನಾಥ್ ಚಾಲನೆ ನೀಡಿದರು. ನಜರಬಾದ್‍ನ ವಿವಿಧ ರಸ್ತೆಗಳಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು ಭಿತ್ತಿ ಫಲಕ ಪ್ರದರ್ಶಿಸಿ ಗಮನ ಸೆಳೆದರು….

1 264 265 266 267 268 1,611
Translate »