ಮೈಸೂರು, ಅ. ೮(ಆರ್‌ಕೆ)-ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಿರುವುದರಿಂದ ಯಾವ ಪಕ್ಷಕ್ಕೂ ಚುನಾವಣೆಯಲ್ಲಿ ಅನುಕೂಲ ಆಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟಿ ದ್ದಾರೆ. ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್‌ನಲ್ಲಿ ಮಾಧ್ಯಮಗಳಿಗೆ ಇಂದು ಪ್ರತಿಕ್ರಿಯೆ ನೀಡಿದ ಅವರು, ಹಲವು ವರ್ಷಗಳ ಕಾಲ ಆರ್ಥಿಕವಾಗಿ ಹಿಂದುಳಿದಿರುವ ವರ್ಗಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿ ದ್ದವು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮೀಸ ಲಾತಿ ದೊರಕಿಸಿಕೊಟ್ಟಿದ್ದರಿಂದಾಗಿ ಎಂಎಲ್‌ಎ, ಎಂಪಿಗಳು ಮೀಸಲಾತಿ ಅವಕಾಶ ಪಡೆದು ವಿಧಾನಸಭೆ, ಲೋಕಸಭೆಗೆ ಪ್ರವೇಶ ಮಾಡಿದರು. ಆದರೆ…
ಸತತ ೨೪೧ ದಿನಗಳ ಹೋರಾಟ ಕೈಬಿಟ್ಟು ಮುಖ್ಯಮಂತ್ರಿ ಅಭಿನಂದಿಸಿದ ವಾಲ್ಮೀಕಿ ಶ್ರೀಗಳು
October 9, 2022ಬೆಂಗಳೂರು, ಅ.೮- ಎಸ್‌ಸಿ, ಎಸ್‌ಟಿಗೆ ಮೀಸಲಾತಿ ಹೆಚ್ಚಳ ಮಾಡಲು ರಾಜ್ಯ ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ. ಈ ಹಿನ್ನೆಲೆಯಲ್ಲಿ ಬರೋಬ್ಬರಿ ೨೪೧ ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದ ವಾಲ್ಮೀಕಿ ಸ್ವಾಮೀಜಿಗಳು ಧರಣಿಯನ್ನು ಕೈಬಿಟ್ಟಿದ್ದಾರೆ. ನಂತರ ವಾಲ್ಮೀಕಿ ಸಮಾಜದ ಮುಖಂಡರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನ ಭೇಟಿಯಾಗಿ ಅಭಿನಂದಿಸಿದರು. ಈ ವೇಳೆ ಮುಖ್ಯಮಂತ್ರಿ ಗಳಿಗೆ ಸ್ವಾಮೀಜಿ ಸಿಹಿ ತಿನ್ನಿಸಿ, ಖುಷಿಪಟ್ಟರು. ಈ ವೇಳೆ ಮಾತನಾಡಿದ ಸ್ವಾಮೀಜಿ, ಮೀಸಲಾತಿ ಹೆಚ್ಚಿಸಿರುವುದಕ್ಕೆ ಸಮುದಾಯದ ಒಂದೂವರೆ ಕೋಟಿ ಜನರ ಪರವಾಗಿ ಮುಖ್ಯಮಂತ್ರಿಗಳಿಗೆ ಹಾಗೂ…
ಮೈಸೂರಿನ ರಸ್ತೆ ಕಾಮಗಾರಿ ೩ ದಿನದಲ್ಲಿ ಆರಂಭ
October 9, 2022ದಸರಾ ಸಂದರ್ಭ ೧೫ ಕೋಟಿ ರೂ. ಕೆಲಸ ಮುಗಿದಿದೆ; ಉಳಿದ ೨೫೦ ಕೋಟಿ ಕಾಮಗಾರಿಗಳ ೨ ತಿಂಗಳೊಳಗೆ ಪೂರ್ಣಗೊಳಿಸುವ ಉದ್ದೇಶಮಳೆ ಮತ್ತು ದಸರಾ ಮಹೋತ್ಸವದಿಂದಾಗಿ ರಸ್ತೆ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಉಳಿದ ಎಲ್ಲಾ ರಸ್ತೆಗಳಿಗೂ ಡಾಂಬರ್ ಹಾಕುವ ಕೆಲಸವನ್ನು ಶೀಘ್ರ ಮತ್ತೆ ಆರಂಭಿಸುತ್ತೇವೆ. ಸೋಮವಾರ ಆಯುಕ್ತರ ಜೊತೆ ಪರಿಶೀಲನೆ ನಡೆಸಿ ಯಾವ ಯಾವ ರಸ್ತೆ ಗಳನ್ನು ಕೈಗೆತ್ತಿಕೊಳ್ಳ ಬೇಕೆಂಬುದನ್ನು ಗುರ್ತಿ ಸುತ್ತೇವೆ. ಕೆಲವೆಡೆ ಮಳೆ ನೀರು, ಚರಂಡಿ, ಉದ್ಯಾನ ವನಗಳ ಅಭಿವೃದ್ಧಿ ಕಾಮಗಾರಿ ಗಳಿಗೂ ಟೆಂಡರ್ ಮಾಡಲಾ…
ಈ ಬಾರಿಯ ದಸರಾ ಅದ್ಧೂರಿಯಾಗಿತ್ತು…! ಹಾಗೆಯೇ ಅಧ್ವಾನದಿಂದಲೂ ಕೂಡಿತ್ತು..!!
October 9, 2022ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತೀವ್ರ ಬೇಸರ ಲೋಪದೋಷಗಳ ಬಗ್ಗೆ ಶ್ವೇತಪತ್ರಕ್ಕೆ ಆಗ್ರಹ ಜನರ ಆಕರ್ಷಿಸುವ ಯಾವೊಂದು ಕಾರ್ಯಕ್ರಮವಿಲ್ಲ ಸ್ಥಳೀಯ ನಾಯಕರ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ದಸರಾ ಅರ್ಥಪೂರ್ಣ ಆಚರಣೆಗೆ ಪ್ರಾಧಿಕಾರ ರಚನೆ ಆಗಬೇಕು ದಸರಾ ಕವಿಗೋಷ್ಠಿ ಸತ್ತ ಗೋಷ್ಠಿಯಾಗಿತ್ತು! ಮೈಸೂರು,ಅ.೮(ಎಂಟಿವೈ)- ಈ ಬಾರಿ ನಾಡ ಹಬ್ಬ ದಸರಾ ಅದ್ಧೂರಿ ಯಾಗಿಯೂ ಇತ್ತು. ಅಧ್ವಾನವೂ ಆಗಿತ್ತು. ಪೂರ್ಣ ಪ್ರಮಾಣದಲ್ಲಿ ಪುನರ್ ವಿಮರ್ಶೆಗೆ ಒಳಪಡಿಸುವುದರೊಂದಿಗೆ ಆಗಿರುವ ಲೋಪದೋಷಗಳ ಕುರಿತಂತೆಯೂ ಶ್ವೇತ ಪತ್ರ ಹೊರಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು…
ದಸರಾ ಮುಗಿದರೂ ಮೈಸೂರಿಗೆ ಹರಿದು ಬರುತ್ತಿದೆ ಪ್ರವಾಸಿಗರ ದಂಡು
October 9, 2022ಎಲ್ಲಾ ಪ್ರವಾಸಿ ತಾಣಗಳಲ್ಲಿ ಜನವೋ ಜನ ಅರಮನೆ ಸುತ್ತಮುತ್ತ ಕಾಲಿಡುವುದು ಕಷ್ಟ ಕಷ್ಟ ದೀಪಾಲಂಕಾರಕ್ಕೆ ಮಾರು ಹೋದ ಪ್ರವಾಸಿಗರು ಎಲ್ಲೆಡೆ ವಾಹನ ದಟ್ಟಣೆ; ಆದರೂ ಸಂಭ್ರಮಾಚರಣೆ ವಸ್ತುಪ್ರದರ್ಶನ, ಅರಮನೆ, ಮೃಗಾಲಯ, ಚಾಮುಂಡಿಬೆಟ್ಟದಲ್ಲಿ ಜನಜಾತ್ರೆ ದೀಪಾಲಂಕಾರಕ್ಕೆ ಮುಗಿಬಿದ್ದ ಜನ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಲ್ಲೊಂದಾದ ಜಗಮಗಿ ಸುವ ದೀಪಾಲಂಕಾರ ಅವಧಿಯನ್ನು ಅ.೧೦ರವರೆಗೆ ವಿಸ್ತರಣೆ ಮಾಡಿದ್ದು, ಶನಿವಾರವೂ ಲಕ್ಷಾಂತರ ಜನ ದೀಪಾ ಲಂಕಾರ ಸವಿದರು. ವಾಹನಗಳÀ ಮೂಲಕ ರಸ್ತೆಗಳನ್ನು ಸುತ್ತುಹಾಕಿ ಪ್ರಮುಖ ವೃತ್ತ ಗಳು ಸೇರಿದಂತೆ ಅತ್ಯಾಕರ್ಷಕ ದೀಪಾ ಲಂಕಾರವಿರುವ…
ಸಾರ್ವಜನಿಕರ ಸುಲಿಗೆ ಮಾಡುವ ಓಲಾ, ಊಬರ್ ವಾಹನ ಸೀಜ್
October 9, 2022ಸಾರಿಗೆ ಸಚಿವ ಶ್ರೀರಾಮುಲು ಸೂಚನೆ ಷರತ್ತು ಉಲ್ಲಂಘನೆ ಸಹಿಸಲಾಗದು ಬೆಂಗಳೂರು,ಅ.೮(ಕೆಎAಶಿ)-ಲೈಸೆನ್ಸ್ ನೀಡುವಾಗ ಸಾರಿಗೆ ಇಲಾಖೆ ವಿಧಿಸಿರುವ ಷರತ್ತು ಉಲ್ಲಂಘಿಸಿ ಪ್ರಯಾಣಿಕರಿಂದ ದುಬಾರಿ ದರ ಪಡೆಯುವ ಓಲಾ, ಊಬರ್ ವಾಹನಗಳನ್ನು ಸೀಜ್ ಮಾಡಲು ಆದೇಶ ನೀಡಲಾಗಿದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ಇಲಾಖೆ ನಿಯಮ ಉಲ್ಲಂಘಿಸಿರುವ ವಾಹಗಳನ್ನು ಸೀಜ್ ಮಾಡಿ, ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ದುಬಾರಿ…
ಈ ಸಲದ ಅದ್ಧೂರಿ ಜಂಬೂಸವಾರಿಯನ್ನು ಪ್ರತ್ಯಕ್ಷವಾಗಿ 15 ಲಕ್ಷ ಜನ ವೀಕ್ಷಿಸಿದ್ದಾರೆ
October 7, 2022ಮೈಸೂರು, ಅ.6(ಆರ್‍ಕೆ)- ಈ ಬಾರಿಯ ವಿಶ್ವ ಪ್ರಸಿದ್ಧ ದಸರಾ ಮಹೋತ್ಸವದ ಅಭೂತಪೂರ್ವ ಯಶಸ್ಸಿಗೆ ಶ್ರಮಿಸಿದ ಮೈಸೂರಿನ ಸರ್ವರಿಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಧನ್ಯ ವಾದ ಅರ್ಪಿಸಿದ್ದಾರೆ. ಮೈಸೂರಿನ ಜೆ.ಪಿ.ನಗರ ದಲ್ಲಿರುವ ಸಿಂಧೂರ ಕನ್ವೆನ್ಷನ್ ಹಾಲ್‍ನಲ್ಲಿ ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ ಅವರು, ನಾಡ ಹಬ್ಬ ಮೈಸೂರು ದಸರಾ ಉತ್ಸವವು ಯಾವುದೇ ವಿಘ್ನಗಳಿಲ್ಲದೆ ಯಶಸ್ವಿಯಾಗಿದೆ. 15 ಲಕ್ಷಕ್ಕೂ ಅಧಿಕ ಜನರು ವಿಜಯದಶಮಿ ಮೆರವಣಿಗೆಯನ್ನು ಪ್ರತ್ಯಕ್ಷವಾಗಿ ನೋಡಿ ಆನಂದಿಸಿದ್ದಾರೆ ಎಂದರು. ನವರಾತ್ರಿ ಉತ್ಸವದ ಯಶಸ್ಸಿಗೆ ಕಾರಣರಾದ ಸಚಿವರು, ಸಂಸದರಾದ…
ದಸರಾ ಸಂದರ್ಭದಲ್ಲಿ ದಾಖಲೆ ಪ್ರಮಾಣದಲ್ಲಿ ಅರಮನೆ ವೀಕ್ಷಣೆ
October 7, 2022ಮೈಸೂರು, ಅ.6(ಎಸ್‍ಬಿಡಿ)- ನಾಡಹಬ್ಬ ದಸರಾ ಸಂದರ್ಭದಲ್ಲಿ ವಿಶ್ವ ಪ್ರಸಿದ್ಧ ಅಂಬಾವಿಲಾಸ ಅರಮನೆಗೆ ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಅದರಲ್ಲೂ ಕಳೆದ ನಾಲ್ಕು ದಿನಗಳಲ್ಲಿ ಅತೀ ಹೆಚ್ಚು ಮಂದಿ ಅರಮನೆ ಸೌಂದರ್ಯ ಆಸ್ವಾದಿಸಿದ್ದಾರೆ. ದಸರಾ ಮಹೋತ್ಸವಕ್ಕೆ ಸೆ.26ರಂದು ಚಾಲನೆ ದೊರಕಿತು. ಅಂದು 4099, ಸೆ.27ರಂದು 5799, ಸೆ.28ರಂದು 5798, ಸೆ.29ರಂದು 7,600, ಸೆ.30ರಂದು 7,547, ಅ.1ರಂದು 15,242, ಅ.2ರಂದು 21,062, ಅ.3ರಂದು 18,119, ಅ.4ರಂದು(ಮಧ್ಯಾಹ್ನ 2ರಿಂದ) 12,876 ಸೇರಿ 9 ದಿನದಲ್ಲಿ ಒಟ್ಟು 98,142 ವೀಕ್ಷಕರು ಅರಮನೆಗೆ ಭೇಟಿ…
ಅ.10ರವರೆಗೆ ದಸರಾ ದೀಪಾಲಂಕಾರ ವಿಸ್ತರಣೆ
October 7, 2022ಮೈಸೂರು, ಅ.6(ಆರ್‍ಕೆ)-ಮೈಸೂರಲ್ಲಿ ದಸರಾ ವಿದ್ಯುದ್ದೀಪಾಲಂಕಾರವನ್ನು ಅಕ್ಟೋಬರ್ 10ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ಮೈಸೂರಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 10 ದಿನಗಳ ಕಾಲ ದೀಪಾಲಂಕಾರ ವಿಸ್ತರಿಸುವಂತೆ ಕೋರಲಾಗಿತ್ತು. ಆದರೆ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು 5 ದಿನ ವಿಸ್ತರಿಸುತ್ತೇವೆಂದು ತಿಳಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು, ಇಂಧನ ಸಚಿವರೊಂದಿಗೆ ಮಾತನಾಡಿ, ಅಕ್ಟೋಬರ್ 15ರವರೆಗೆ ವಿಸ್ತರಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದರು. ಈ ಬಾರಿ 124 ಕಿ.ಮೀ.ವರೆಗೆ ವಿಶೇಷ ರೀತಿಯಲ್ಲಿ ವಿದ್ಯುದ್ದೀ ಪಾಲಂಕಾರ ಮಾಡಲಾಗಿದ್ದು,…
ಮೈಸೂರು ಪ್ರವೇಶಿಸಿದ `ಭಾರತ್ ಐಕ್ಯತಾ ಯಾತ್ರೆ’ ಅರಮನೆ ಎದುರು ರಾಹುಲ್ ವಾಸ್ತವ್ಯ
October 3, 2022ಮೈಸೂರು, ಅ.2(ಎಸ್‍ಬಿಡಿ)- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾರಥ್ಯದ `ಭಾರತ ಐಕ್ಯತಾ ಯಾತ್ರೆ’ ಭಾನುವಾರ ಸಂಜೆ ಮೈಸೂರು ನಗರ ತಲುಪಿತು. ನಂಜನಗೂಡಿನಲ್ಲಿ ಶ್ರೀಕಂಠೇಶ್ವರ ಸ್ವಾಮಿ ದೇವಾಲಯ ದಲ್ಲಿ ಪೂಜೆ ಸಲ್ಲಿಸಿದ ಬಳಿಕ ಕಾರಿನಲ್ಲಿ ಮೈಸೂರು ತಾಲೂಕು ಕಡಕೊಳಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅಲ್ಲಿನ ಕಾಳಿ ಬೀರಮ್ಮ ದೇವಸ್ಥಾನದ ಬಳಿಯಿಂದ ಪಕ್ಷದ ಮುಖಂಡರು, ಸಾವಿರಾರು ಕಾರ್ಯಕರ್ತರೊಂದಿಗೆ ಪಾದಯಾತ್ರೆ ಆರಂಭಿಸಿದರು. ಸಂಜೆ 4.45ಕ್ಕೆ ಅರಂಭ ಗೊಂಡ ಯಾತ್ರೆ ಸಂಜೆ 6.48ಕ್ಕೆ ಮೈಸೂರಿನ ಬಂಡಿಪಾಳ್ಯ ತಲುಪಿತು. ಅಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತ ನಾಡಲು…