ಮೈಸೂರು, ಫೆ.14(ವೈಡಿಎಸ್)- ಮೈಸೂ ರಿನ ಜಯನಗರದ ನೇಗಿಲಯೋಗಿ ಮರು ಳೇಶ್ವರ ಸೇವಾ ಭವನದಲ್ಲಿ ಭಾನುವಾರ `ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಜಯಂತ್ಯುತ್ಸವ’ವನ್ನು ಭಾನುವಾರ ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಆದಿ ಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಅವರು ಕೆಂಗಲ್ ಹನುಮಂತಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯ ಕ್ರಮ ಉದ್ಘಾಟಿಸಿದರು. `ಕೆಂಗಲ್ ಹನುಮಂತಯ್ಯ ರೈಲ್ವೆ ಒಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ’ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್‍ಗಳಾದ ಕುವೆಂಪುನಗರ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ರಾಜು,…
ಸರಸ್ವತಿಪುರಂ ಪೊಲೀಸರಿಂದ 2 ಯಶಸ್ವಿ ಕಾರ್ಯಾಚರಣೆ
February 15, 2021ಮೈಸೂರು,ಫೆ.14(ಎಂಟಿವೈ)-ಇತ್ತೀಚೆಗೆ ಮೈಸೂ ರಿನ ಸರಸ್ವತಿಪುರಂ ಠಾಣೆ ಪೊಲೀಸರು 2 ಯಶಸ್ವಿ ಕಾರ್ಯಾಚರಣೆಗಳಲ್ಲಿ ಇಬ್ಬರು ಸುಲಿಗೆಕೋರರು ಮತ್ತು ಒಬ್ಬ ಮೊಬೈಲ್‍ಫೋನ್ ಚೋರನನ್ನು ಬಂಧಿಸಿ, ಕಳವು ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರು ನಗರದಲ್ಲಿ ರಾತ್ರಿ ವೇಳೆ ದಾರಿಹೋಕ ರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು, ಆರೋಪಿಗಳಿಂದ 2 ಮೋಟಾರ್ ಬೈಕ್, 1 ಮೊಬೈಲ್‍ಫೋನ್ ಹಾಗೂ 400 ರೂ. ನಗದು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಸರಸ್ವತಿಪುರಂ 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ ನಿವಾಸಿ ಭರತ್ ಬಿನ್ ಸುರೇಶ್(24), ಕುವೆಂಪು ನಗರ ಕೆ.ಬ್ಲಾಕ್…
ಕ್ಯಾನ್ಸರ್ ತಡೆಗೆ ವಾಕಥಾನ್ ಮೂಲಕ ಜಾಗೃತಿ
February 15, 2021ಮೈಸೂರು,ಫೆ.14(ಪಿಎಂ)- ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಕಾವೇರಿ ಹಾರ್ಟ್ ಅಂಡ್ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ವತಿಯಿಂದ ಭಾನುವಾರ ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಿಂದ ಮೈಸೂರು ವಿವಿ ಓವಲ್ ಮೈದಾನದವರೆಗೆ ವಾಕಥಾನ್ ನಡೆಸಲಾಯಿತು. ಕೋಟೆ ಆಂಜನೇಯಸ್ವಾಮಿ ದೇವಾಲಯದ ಎದುರು ನಿಕಟಪೂರ್ವ ಮೇಯರ್ ತಸ್ನೀಂ ವಾಕಥಾನ್‍ಗೆ ಹಸಿರು ನಿಶಾನೆ ತೋರಿದರು. ಬಳಿಕ ಮಾತನಾಡಿದ ಅವರು, ಕ್ಯಾನ್ಸರ್ ತಡೆಯಲು ಆರೋಗ್ಯ ಪೂರ್ಣ ಜೀವನಶೈಲಿ ಪಾಲಿಸಲು ಹಾಗೂ ಯಾವುದೇ ಭಯವಿಲ್ಲದೆ ಶೀಘ್ರವಾಗಿ ಪರಿಣಿತರಲ್ಲಿ ಪರೀಕ್ಷಿಸಿಕೊಳ್ಳಲು ಸಾರ್ವಜನಿಕರನ್ನು ಕೋರಿದರು. ಹಾಸ್ಪಿಟಲ್‍ನ ಅಧ್ಯಕ್ಷ ಡಾ.ಜಿ.ಆರ್.ಚಂದ್ರಶೇಖರ್…
ಕಾರ್ಖಾನೆಯ ಖಾಸಗೀಕರಣ ಹುನ್ನಾರ ವಿರೋಧಿಸಿ ಇಂದಿನಿಂದ ಬೆಮೆಲ್ ನೌಕರರ ಪ್ರತಿಭಟನೆ
February 15, 2021ಮೈಸೂರು, ಫೆ.14(ಆರ್‍ಕೆಬಿ)- ಸರ್ಕಾರಿ ವಲಯದ ಬಿಇಎಂಎಲ್ ಕಾರ್ಖಾನೆಯ ಶೇ.26ರಷ್ಟು ಷೇರನ್ನು ಖಾಸಗಿ ಕಾರ್ಪೊರೇಟ್ ಸಂಸ್ಥೆಗಳಿಗೆ ಮಾರಾಟ ಮಾಡುವ ಮೂಲಕ ಕಾರ್ಖಾನೆ ಅಸ್ತಿತ್ವಕ್ಕೆ ಧಕ್ಕೆ ತರಲು ಕೇಂದ್ರ ಸರ್ಕಾರ ಹೊರಟಿದೆ. ಹೀಗಾಗಿ ಈ ರೀತಿಯ ಯಾವುದೇ ಕ್ರಮ ಕೈಗೊಳ್ಳಲು ಬಿಡುವುದಿಲ್ಲ ಎಂದು ಕಾರ್ಖಾನೆ ಕಾರ್ಮಿಕರ ಸಂಘ ಸ್ಪಷ್ಟವಾಗಿ ಎಚ್ಚರಿಕೆ ನೀಡಿದೆ. ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಚ್.ವೈ. ಮುನಿರೆಡ್ಡಿ, ಕಾರ್ಖಾನೆಯ ಶೇ.26ರಷ್ಟು ಷೇರನ್ನು ಖಾಸಗಿ ಯವರಿಗೆ ಮಾರಾಟ ಮಾಡಲು ಇ…
ಮೈಸೂರು ಬ್ಯೂಟಿ ಅಸೋಸಿಯೇಷನ್‍ನಿಂದ ಸದಸ್ಯರಿಗೆ ಉಚಿತ ವಿಚಾರ ಸಂಕಿರಣ
February 15, 2021ಮೈಸೂರು, ಫೆ.14- ಮೈಸೂರು ಹೇರ್ ಮತ್ತು ಬ್ಯೂಟಿ ಅಸೋಸಿ ಯೇಷನ್ ವತಿಯಿಂದ ಇತ್ತೀಚೆಗೆ ನಗರದ ಖಾಸಗಿ ಹೋಟೆಲ್ ನಲ್ಲಿ ವಿನೂತನ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ವಧುವಿನ ಅಲಂಕಾರದ ಬಗ್ಗೆ ಉಚಿತ ಸೆಮಿನಾರ್ ಆಯೋಜಿಸಲಾಗಿತ್ತು. ಎಐಹೆಚ್‍ಬಿಎ ಮೈಸೂರು ಘಟಕದ ಅಧ್ಯಕ್ಷೆ ಉಮಾ ಜಾಧವ್ ಸೆಮಿನಾರ್ ನಡೆಸಿಕೊಟ್ಟರು. ಸುಮಾರು 125 ಸದಸ್ಯರು ಭಾಗವಹಿ ಸಿದ್ದು, ಸೆಮಿನಾರ್‍ನ ಪ್ರಯೋಜನ ಪಡೆದುಕೊಂಡರು. ರೂಪದರ್ಶಿಯ ರಾದ ಮನುಶ್ರೀ, ರೋಹಿಣಿ, ನೊರೈನ್ ಮತ್ತಿತರರು ಹಾಜರಿದ್ದರು. ಹೊಸ ಸದಸ್ಯತ್ವ ಪಡೆದುಕೊಳ್ಳುವವರು ಅಧ್ಯಕ್ಷೆ (99860-32650), ಕಾರ್ಯದರ್ಶಿ (98804-90664) ಸಂಪರ್ಕಿಸಲು…
ಧರ್ಮ ಕಾಲಂನಲ್ಲಿ `ಲಿಂಗಾಯತ’ ಎಂದು ನಮೂದಿಸುವಂತೆ ಮನವಿ
February 15, 2021ಮೈಸೂರು, ಫೆ.14-ಸರ್ಕಾರಿ ನೇಮಕಾತಿ ಮತ್ತು ಹುದ್ದೆಗಳಲ್ಲಿ ಬಡ್ತಿ ಹೊಂದುವುದರ ಜೊತೆಗೆ ವಿಶೇಷ ಮೀಸಲಾತಿ ಪಡೆಯುವ ನಿಟ್ಟಿನಲ್ಲಿ ಲಿಂಗಾಯತ ಸಮುದಾಯದವರು ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ನಮೂದಿಸುವಂತೆ ಕರ್ನಾಟಕ ಲಿಂಗಾಯತ ಗೌಡ ಮಹಾಸಭಾದ ಸಂಚಾಲಕ ಆಲನಹಳ್ಳಿ ಪುಟ್ಟಸ್ವಾಮಿ ಮನವಿ ಮಾಡಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರ ನಡೆಸುವ ಜಾತಿಗಣತಿ ಸೇರಿದಂತೆ ಎಲ್ಲಾ ಕಾಲಂಗಳಲ್ಲಿ ಕಡ್ಡಾಯವಾಗಿ ಲಿಂಗಾಯತ ಎಂದು ನಮೂದಿಸಬೇಕು. ಇಲ್ಲವಾದಲ್ಲಿ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯ ಪಡೆಯಲು ಆಗುವುದಿಲ್ಲ. ಲಿಂಗಾಯತ ಸಮಾಜದವರು ರಾಜಕೀಯವಾಗಿ ಮೈಸೂರು…
ಚಾಮುಂಡೇಶ್ವರಿ ಉತ್ಸವ ಮೂರ್ತಿ ಸುರಕ್ಷಿತ ಪ್ರತಿಷ್ಠಾಪನೆಗೆ ಹೊಸ ಲಿಫ್ಟ್
February 15, 2021ಮೈಸೂರು, ಫೆ.14(ಎಸ್‍ಬಿಡಿ)- ದಸರಾ ಮಹೋತ್ಸವದ ವೇಳೆ ಚಾಮುಂಡಿ ಬೆಟ್ಟದಲ್ಲಿ ನಡೆಯಲಿರುವ ರಥೋತ್ಸವ ದಲ್ಲಿ ನಾಡದೇವಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಸುರಕ್ಷಿತವಾಗಿ ರಥದ ಮೇಲೆ ಪ್ರತಿಷ್ಠಾಪಿಸಲು ನೂತನ ಲಿಫ್ಟ್(ಕ್ರೇನ್) ಸಿದ್ಧಗೊಂಡಿದ್ದು, ಕೆಲ ದಿನಗಳಲ್ಲೇ ರೈಲ್ವೆ ಇಲಾಖೆಯಿಂದ ಚಾಮುಂಡೇಶ್ವರಿ ದೇವಾಲಯ ಆಡಳಿತ ಮಂಡಳಿಗೆ ಹಸ್ತಾಂತರವಾಗಲಿದೆ. ಸುಮಾರು 35 ರಿಂದ 40 ಅಡಿ ಎತ್ತರ ವಿರುವ ರಥದ ಮಧ್ಯ ಚಾಮುಂಡೇಶ್ವರಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲು ಪೀಠದ ವ್ಯವಸ್ಥೆ ಮಾಡಲಾಗಿದೆ. ಆಭರಣ ಗಳಿಂದ ಅಲಂಕೃತಗೊಂಡ ಉತ್ಸವ ಮೂರ್ತಿಯನ್ನು ಸುಮಾರು 20 ಅಡಿ ಮೇಲೆತ್ತಿ…
ನಿರಹಂಕಾರ ಗುಣದ ಕವಿಗಳ ಅಗತ್ಯವಿದೆ
February 15, 2021ಮೈಸೂರು, ಫೆ.14(ಎಂಟಿವೈ)- `ಕಾವ್ಯ ಬರೆದ ಕವಿಯಲ್ಲಿ ಅಹಂಕಾರ ತುಂಬಿದರೆ, ಕಾವ್ಯವೇ ಹುಟ್ಟುಹಾಕುವ ಕವಿಯಲ್ಲಿ ನಿರ ಹಂಕಾರ ಇರಲಿದೆ. ಪ್ರಸ್ತುತ ಸಂದರ್ಭ ನಿರಹಂಕಾರ ಗುಣದ ಕವಿಗಳ ಅವಶ್ಯಕತೆ ಹೆಚ್ಚಿದೆ ಎಂದು ಕರ್ನಾಟಕ ಸಾಹಿತ್ಯ ಅಕಾ ಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಅಭಿಪ್ರಾಯಪಟ್ಟರು. ಮೈಸೂರಿನ ಇನ್‍ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಕಸಾಪ ಜಿಲ್ಲಾ ಘಟಕ, ಕನ್ನಡ ಸಾಹಿತ್ಯ ಕಲಾಕೂಟ ದಿಂದ ಭಾನುವಾರ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಕವಿ ಪಿ.ಎಸ್.ಸಿದ್ದಾಚಾರ್ ಅವರ `ಶ್ರೀಮನ್ಮಹಾರಾಜ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಕವಿ ಸಿದ್ದಾಚಾರ್…
ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು
February 15, 2021ಮೈಸೂರು,ಫೆ.14(ಆರ್‍ಕೆ)-ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೈಸೂರಿನ ಹೆಬ್ಬಾಳು 2ನೇ ಹಂತದ ನೀವಾಗಿ ನಿಂಗಪ್ಪ ಅವರ ಮಗ ಮಲ್ಲಿಕಾರ್ಜುನ(54) ಸಾವನ್ನಪ್ಪಿದವರು. ಹೆಬ್ಬಾಳು ಕೈಗಾರಿಕಾ ಬಡಾವಣೆಯ ಖಾಸಗಿ ಇಂಜಿನಿಯರಿಂಗ್ ಕಂಪನಿ ಉದ್ಯೋಗಿಯಾಗಿದ್ದ ಅವರು ರಾತ್ರಿ ಪಾಳಿ ಕೆಲಸ ಮುಗಿಸಿಕೊಂಡು ಸಹೋದ್ಯೋಗಿ ನಾಗರಾಜ್ ಎಂಬುವರ ಬೈಕಿನಲ್ಲಿ ಬರುತ್ತಿದ್ದಾಗ ಜನವರಿ 31ರ ಬೆಳಿಗ್ಗೆ 8 ಗಂಟೆಯಲ್ಲಿ ಕೆಆರ್‍ಎಸ್ ರಸ್ತೆಯ ರಿಂಗ್ ರೋಡ್ ಜಂಕ್ಷನ್ (ರಾಯಲ್ ಇನ್ ಜಂಕ್ಷನ್)ನಲ್ಲಿ ಹಿಂದಿನಿಂದ ಬಂದ ಮಾರುತಿ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿತ್ತು….
ಮೈಸೂರಲ್ಲಿ ಗಾನಸಿರಿ-ವೇದಾಂತ ಲಹರಿ ಭಾಗ-7 ಇಂದಿನಿಂದ ‘ಮಧ್ವ-ಪುರಂದರ ನಮನ’
February 15, 2021ಮೈಸೂರು, ಫೆ.14-ಅಗ್ರಹಾರದ ಸಮೀಪ ಇರುವ ಶ್ರೀಮದ್ ಉತ್ತರಾದಿ ಮಠದ ಸಭಾಂಗಣದಲ್ಲಿ ಫೆ.15ರಿಂದ 21ರವರೆಗೆ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅನುಗ್ರಹದಿಂದ ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿಯು ಉತ್ತರಾದಿ ಮಠದ ಸಹಯೋಗದೊಂದಿಗೆ ‘ಮಧ್ವ ಪುರಂದರ ನಮನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭ ವಿಮರ್ಶೆ, ಗಾಯನ, ಪ್ರವಚನ, ಸಂವಾದ ಹಾಗೂ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ. ಫೆ.15ರಂದು ಸಂಜೆ 5ಕ್ಕೆ ಶ್ರೀಮದ್ ಉತ್ತರಾದಿ ಮಠದ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಪಂಡಿತ್ ವಿದ್ಯಾದೀಶಾಚಾರ್ ಗುತ್ತಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿ ದ್ದಾರೆ. ಅಂದು ಸಂಜೆ 6ರಿಂದ 8.30ರವರೆಗೆ…










