ಮೈಸೂರು, ಫೆ.15(ಎಂಕೆ)- ಮೈಸೂರಿನ ಅಗ್ರಹಾರದ ಸಮೀಪದಲ್ಲಿರುವ ಶ್ರೀಮದ್ ಉತ್ತರಾದಿ ಮಠದ ಸಭಾಂಗಣದಲ್ಲಿ ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿ ಹಾಗೂ ಉತ್ತರಾದಿ ಮಠದ ಸಹಯೋಗದೊಂದಿಗೆ ಹಮ್ಮಿಕೊಂಡಿರುವ 7 ದಿನಗಳ `ಮಧ್ವ-ಪುರಂದರ ನಮನ’ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಶ್ರೀಮದ್ ಉತ್ತರಾದಿ ಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಂಡಿತ್ ವಿದ್ಯಾದೀ ಶಾಚಾರ್ ಗುತ್ತಲ್, `ಮಧ್ವ-ಪುರಂದರ ನಮನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಾವು ಮಾಡುವ ಎಲ್ಲಾ ಕಾರ್ಯಕ್ಕೂ ಭಗವಂತನ ಕೃಪೆಯಿದೆ. ನಾವು ಸಾಗುವ ದಾರಿತಪ್ಪದ್ದಂತೆ ನೋಡಿಕೊಳ್ಳುವ ಭಗವಂತನೆ ಧನ್ವಂತರಿ….
ಪೊಲೀಸ್ ನೇಮಕಾತಿ ಪರೀಕ್ಷೆ:ಬಡ ಅಭ್ಯರ್ಥಿಗಳಿಗೆ ತರಬೇತಿ
February 16, 2021ಮೈಸೂರು, ಫೆ.15(ಆರ್‍ಕೆಬಿ)- ಮೈಸೂರು ಕುವೆಂಪುನಗರದ ಅಪೊಲೊ ಆಸ್ಪತ್ರೆ ಬಳಿಯ ಇಂಡಿಯನ್ ಸಿವಿಲ್ ಸರ್ವೀಸಸ್ ಟ್ರೈನಿಂಗ್ ಅಕಾಡೆಮಿ ವತಿಯಿಂದ ರಾಜ್ಯ ಪೊಲೀಸ್ ಇಲಾಖೆ ನೇಮಕ ಮಾಡಿಕೊಳ್ಳಲಿರುವ 545 ಪಿಎಸ್‍ಐ ಹುದ್ದೆಯ ಬಡ ಆಕಾಂಕ್ಷಿಗಳಿಗೆ ತರಬೇತಿ ನೀಡಲಾಗುತ್ತದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಟೇಲ್ ಎಸ್. ರಮೇಶ್‍ಗೌಡ ತಿಳಿಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಭ್ಯರ್ಥಿಗಳ ಆರ್ಥಿಕ ಪರಿಸ್ಥಿತಿ ಆಧರಿಸಿ ಶಿಷ್ಯ ವೇತನದೊಡನೆ ತರಬೇತಿಗೆ ಆಯ್ಕೆ ಮಾಡಲಾಗು ತ್ತದೆ. ಇವರಿಗೆ ತಮ್ಮ ಸಂಸ್ಥೆಯಲ್ಲಿ ಶೈಕ್ಷಣಿಕ ತರಬೇತಿ, ಓವಲ್ ಮೈದಾನದಲ್ಲಿ…
ಅಕ್ರಮ ಬಿಪಿಎಲ್ ಕಾರ್ಡ್ ಹಿಂತಿರುಗಿಸಲು 15 ದಿನದ ಕಡೇ ಅವಕಾಶ
February 15, 2021ಬೆಂಗಳೂರು,ಫೆ.14-ಆರ್ಥಿಕವಾಗಿ ಸ್ಥಿತಿವಂತರಾದವರು ಅನಧಿಕೃತವಾಗಿ ಪಡೆದುಕೊಂಡಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಸ್ವಯಂಪ್ರೇರಣೆಯಿಂದ ಇಲಾಖೆಗೆ ಹಿಂದಿರು ಗಿಸಲು ಮತ್ತೊಮ್ಮೆ 15 ದಿನಗಳ ಕಾಲಾವಕಾಶ ನೀಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ಧರಿಸಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬ ಗಳಿಗೆ ನೀಡುವ ಬಿಪಿಎಲ್ ಪಡಿತರ ಚೀಟಿಯನ್ನು ಆರ್ಥಿಕವಾಗಿ ಸದೃಢ ವಾಗಿರುವ ಕುಟುಂಬಗಳು ಸುಳ್ಳು ಮಾಹಿತಿ ನೀಡಿ ಪಡೆದುಕೊಂಡಿರುವು ದನ್ನು ಸರ್ಕಾರ ಗಂಭೀರವಾಗಿ ಪರಿಗಣಿ ಸಿದೆ. ಸುಳ್ಳು ಮಾಹಿತಿ ನೀಡಿ ಕಾರ್ಡ್ ಪಡೆದಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದ್ದು, ಈಗಾಗಲೇ ಹಲವು…
ಬಿಜೆಪಿಗೆ ಮೊಟ್ಟ ಮೊದಲು ಮೈಸೂರು ಮೇಯರ್ ಗಾದಿ
February 15, 2021ಮೈಸೂರು,ಫೆ.14(ಪಿಎಂ)-ಮೈಸೂರು ಮಹಾನಗರ ಪಾಲಿಕೆ ಯಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಮೇಯರ್ ಸ್ಥಾನ ಅಲಂಕರಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಜೊತೆಗೆ ಮೈಸೂರು ಹಾಲು ಒಕ್ಕೂಟದ ಚುನಾ ವಣೆಯಲ್ಲೂ ಮೊದಲ ಬಾರಿಗೆ ಬಿಜೆಪಿ ಯವರೇ ಅಧ್ಯಕ್ಷರಾಗುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನಕ್ಕೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಮೈಸೂರಿನ ಚಾಮರಾಜಪುರಂನ ಬಿಜೆಪಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ 2021-22ನೇ ಸಾಲಿನ ಬಜೆಟ್ ಕುರಿತ ವಿಮರ್ಶೆ ಮತ್ತು ವಿಶ್ಲೇಷಣೆ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಮೈಸೂರು ಹಾಲು…
ಯಡಿಯೂರಪ್ಪಗೂ ನನಗೂ ಯಾವುದೇ ವೈಯಕ್ತಿಕ ದ್ವೇಷವಿಲ್ಲ
February 15, 2021ಬೆಂಗಳೂರು,ಫೆ.14-ಯಡಿಯೂರಪ್ಪಗೂ ನನಗೂ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಇದನ್ನು ವೀರಶೈವ ಸಮುದಾಯಕ್ಕೆ ನಾನು ಈ ವೇದಿಕೆಯಲ್ಲಿ ತಿಳಿಸಲು ಬಯಸುತ್ತೇನೆ. ಆದರೆ, ಯಡಿಯೂರಪ್ಪ ಅವರ ಸರ್ಕಾರ ದಲ್ಲಿ ಲೂಟಿ ನಡೆಯುತ್ತಿತ್ತು. ರಾಜ್ಯದ ಸಂಪತ್ತು ಲೂಟಿ ಹೊಡೆಯುತ್ತಿದ್ದಾಗ ನಾನು ದನಿ ಎತ್ತಿದೆ. ಬಿಜೆಪಿಯ ಭ್ರಷ್ಟ ಆಡಳಿತದ ಬಗ್ಗೆ ಮೊದಲು ಹೋರಾಟ ಮಾಡಿದ್ದು ಜೆಡಿಎಸ್. 2 ಸೂಟ್‍ಕೇಸ್‍ಗಳಲ್ಲಿ ದಾಖಲೆ ಗಳನ್ನು ವಿಧಾನಸೌಧಕ್ಕೆ ಕೊಂಡೊಯ್ದು ದಾಖಲೆ ಬಿಡುಗಡೆ ಮಾಡಿದೆವು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ತಿಳಿಸಿದ್ದಾರೆ. ಅರಮನೆ ಆವರಣ ದಲ್ಲಿ ಏರ್ಪಡಿಸಿದ್ದ…
ಸಮಾಜವನ್ನು ಒಗ್ಗೂಡಿಸಬೇಕೇ ಹೊರತು ಒಡೆಯುವ ಕೆಲಸ ಯಾರೂ ಮಾಡಬಾರದು
February 15, 2021ಮೈಸೂರು, ಫೆ.14(ಆರ್‍ಕೆಬಿ)- ನಾವು ಆಡುವ ಮಾತಿನ ಬಗ್ಗೆ ಹೆಚ್ಚು ನಿಗಾ ಇಡಬೇಕು. ನಾಲಿಗೆ ಜಾರಿದರೆ ಸಮಾಜಕ್ಕಾಗುವ ನಷ್ಟವನ್ನು ಸರಿ ಪಡಿಸಲಾಗುವುದಿಲ್ಲ ಎಂಬುದನ್ನು ನೆನಪಿಟ್ಟುಕೊಂಡು ರಾಜಕೀಯ ಹೋರಾಟ ಮಾಡಲಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ವೈ.ವಿಜ ಯೇಂದ್ರ ಹೋರಾಟಗಾರರು, ರಾಜಕೀಯ ಪಕ್ಷದ ಮುಖಂಡರಲ್ಲಿ ಮನವಿ ಮಾಡಿದರು. ಮೈಸೂರಿನ ಜೆಎಸ್‍ಎಸ್ ಬಡಾ ವಣೆಯ ಮೊದಲ ಹಂತದಲ್ಲಿ ರಾಜ್‍ಕುಮಾರ್ ರಸ್ತೆ ಬಸವೇಶ್ವರ ವೃತ್ತದಲ್ಲಿ ಅಖಿಲ ಭಾರತ ವೀರ ಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕ ಭಾನುವಾರ ಆಯೋ ಜಿಸಿದ್ದ ಮಹಾಸಭಾ ಕಟ್ಟಡದ…
ಯಾವೊಬ್ಬ ಭಾರತೀಯನೂ ಫೆ.14 ಮರೆಯಲ್ಲ
February 15, 2021ಚೆನ್ನೈ, ಫೆ.14-ಫೆಬ್ರವರಿ 14ರ ಈ ದಿನವನ್ನು ಯಾವ ಭಾರತೀಯನೂ ಮರೆಯಲು ಸಾಧ್ಯವಿಲ್ಲ. 2 ವರ್ಷಗಳ ಹಿಂದೆ (2019ರ ಫೆಬ್ರವರಿ 14) ಜಮ್ಮು-ಕಾಶ್ಮೀರದ ಪುಲ್ವಾಮಾ ಮೇಲೆ ಭಯೋತ್ಪಾದಕ ದಾಳಿ ನಡೆಯಿತು. ಆ ದಾಳಿಯಲ್ಲಿ ಹುತಾತ್ಮರಾದ ಎಲ್ಲಾ ಯೋಧರಿಗೆ ನಾವು ಶ್ರದ್ಧಾಂಜಲಿ ಸಲ್ಲಿಸುತ್ತೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ನಮ್ಮ ಸೇನಾಪಡೆಯ ಮೇಲೆ ನಮಗೆ ಹೆಮ್ಮೆಯಿದೆ. ಸೈನಿಕರ ಶೌರ್ಯ, ಸಾಹಸ ತಲೆಮಾರುಗಳವರೆಗೆ ದೇಶದ ಜನತೆಗೆ ಅದರಲ್ಲೂ ಯುವಪಡೆಗೆ ಸ್ಫೂರ್ತಿದಾಯಕವಾಗಲಿದೆ ಎಂದು ಪುಲ್ವಾಮಾ ದಾಳಿ ಬಗ್ಗೆ ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ….
ಜಮ್ಮು ಬಸ್ ನಿಲ್ದಾಣದಲ್ಲಿ 7 ಕೆಜಿ ಐಇಡಿ ಸ್ಫೋಟಕ ಪತ್ತೆ
February 15, 2021ಜಮ್ಮು, ಫೆ.14- ಇತ್ತೀಚೆಗಷ್ಟೇ ಲೋಕಾರ್ಪಣೆ ಯಾದ ಜಮ್ಮು ಬಸ್ ನಿಲ್ದಾಣದಲ್ಲಿ ಭಾನು ವಾರ ಬರೋಬ್ಬರಿ ಏಳು ಕೆಜಿ ತೂಕದ ಐಇಡಿ ಸ್ಫೋಟಕ ಪತ್ತೆಯಾಗಿದೆ. ಜಮ್ಮು ನಗರದ ಅತ್ಯಂತ ಜನಸಂದಣಿ ಇರುವ ಬಸ್ ನಿಲ್ದಾಣ ಪ್ರದೇಶ ದಲ್ಲಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆಯಾ ಗಿದ್ದು, ಈ ಮೂಲಕ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಜಮ್ಮು ಐಜಿ ಮುಖೇಶ್ ಸಿಂಗ್ ಅವರು, `ಪುಲ್ವಾಮಾ ದಾಳಿಯ ವಾರ್ಷಿ ಕೋತ್ಸವದಂದು ಅಂತಾರಾಷ್ಟ್ರೀಯ ಭಯೋ ತ್ಪಾದಕ ಗುಂಪುಗಳು ದಾಳಿ…
ಮಾಘ ಮಾಸದ 3ನೇ ದಿನ ಎಲ್ಲೆಲ್ಲೂ ಮದುವೆ-ಮಂಗಳ ಕಾರ್ಯಗಳ ಭರಾಟೆ
February 15, 2021ಮೈಸೂರು, ಫೆ.14(ಎಂಟಿವೈ)- ಮಾಘÀ ಮಾಸದ ತೃತೀಯ ದಿನ, ಮೊದಲ ಭಾನುವಾರ ಬಲು ಶುಭದಿನ. ಹಾಗಾಗಿ ಇಂದು ಮೈಸೂರಲ್ಲಿ ಮದುವೆ, ನಾಮಕರಣ, ಗೃಹಪ್ರವೇಶ, ಸತ್ಯನಾರಾಯಣ ಪೂಜೆ ಸೇರಿದಂತೆ ಶುಭಕಾರ್ಯಗಳ ಭರಾಟೆ ಹೆಚ್ಚಾಗಿತ್ತು. ಫೆ.14, ಒಂದೆಡೆ `ಪ್ರೇಮಿಗಳ ದಿನ’ದ ಸಂಭ್ರಮ ಯುವಜೋಡಿಗಳಲ್ಲಿ ಮನೆ ಮಾಡಿದ್ದರೆ, ಮತ್ತೊಂದೆಡೆ ಶುಭಕಾರ್ಯಗಳ ಸಡಗರ ಹೆಚ್ಚಾಗಿತ್ತು. ಇಂದು ಶುಭ ಮುಹೂರ್ತವಿದ್ದಿದ್ದರಿಂದ ಬಹಳಷ್ಟು ಮಂದಿ ಶುಭ ಸಮಾರಂಭ ಮಾತ್ರವಲ್ಲದೆ, ಧಾರ್ಮಿಕ ಆಚರಣೆಯಲ್ಲೂ ಪಾಲ್ಗೊಂಡು ಭಕ್ತಿಭಾವ ಪ್ರದರ್ಶಿಸಿದರು. 130 ಕಲ್ಯಾಣ ಮಂಟಪಗಳಲ್ಲೂ ವಿವಾಹ: ಶುಭದಿನ-ಒಳ್ಳೆಯ ಮುಹೂರ್ತವಿದ್ದ ಕಾರಣ ಇಂದೇ…
ಮೈಸೂರಲ್ಲಿ ಈ ಬಾರಿ `ಪ್ರೇಮಿಗಳ ದಿನ’ ಮಂಕು ಮಂಕು…!
February 15, 2021ಮೈಸೂರು, ಫೆ.14(ಎಂಟಿವೈ)- ಪ್ರತಿವರ್ಷ ಫೆ.14ರಂದು (ಪ್ರೇಮಿಗಳ ದಿನ) ಮೈಸೂರಿನ ವಿವಿಧ ಪ್ರವಾಸಿತಾಣಗಳಲ್ಲಿ ಗರಿ ಬಿಚ್ಚಿದ ನವಿಲಂತೆ ವಿಹರಿಸುತ್ತಿದ್ದ ಮೈಸೂರು ಜಿಲ್ಲೆಯ ಪ್ರೇಮಿ ಗಳು ಈ ಬಾರಿ ಮನೆಯಿಂದ ಹೊರಬರಲು ಹಿಂದೇಟು ಹಾಕಿ ದರು. ವಿವಿಧ ಕಾರಣಗಳಿಂದಾಗಿ ಸಾಂಸ್ಕøತಿಕ ನಗರಿ ಮೈಸೂರಲ್ಲಿ ಈ ಬಾರಿ ಪ್ರೇಮಿಗಳ ದಿನದ ಸಡಗರವಿರಲಿಲ್ಲ. ಕೆಲವೆಡೆ ಕಂಡೂ ಕಾಣದಂತಿದ್ದ ಆಚರಣೆ ತುಸು ಮಂಕಾಗಿತ್ತು. ಫೆ.14 ಬಂತೆಂದರೆ ಕೆಆರ್‍ಎಸ್, ಅರಮನೆ, ಚಾಮುಂಡಿಬೆಟ್ಟ, ಶ್ರೀರಂಗಪಟ್ಟಣ, ಬಂಡೀ ಪುರ ಮೊದಲಾದ ಪ್ರವಾಸಿ ತಾಣಗಳಿಗೆ ತೆರಳಿ ವಿಹರಿಸುತ್ತಿದ್ದ ಜೋಡಿಗಳಿಗೆ ಈ…










