ಮೈಸೂರು,ಜ.11(ಆರ್‍ಕೆ)-ಶ್ರೀ ಸುತ್ತೂರು ಮಠ ಜಾತಿ-ಮತ ಮೀರಿದ ಮಾನವೀಯ ಮೌಲ್ಯ ಹೊಂದಿದ ಧಾರ್ಮಿಕ ಕೇಂದ್ರ ವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಬಣ್ಣಿಸಿದ್ದಾರೆ. ಮೈಸೂರು ಜಿಲ್ಲೆಯ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಶ್ರೀಮತ್ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾ ಸಂಸ್ಥಾನ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಗಳವರ 1061ನೇ ಜಯಂತಿ ಮಹೋತ್ಸವ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಜಾತಿ-ಮತ ಮೀರಿದ ಮಾನವೀಯ ಬಾಂಧವ್ಯ ಹೊಂದಿರುವ ಮಠವು, ಬೇರೆ ಮಠ ಹಾಗೂ ಸಂಸ್ಥೆಗಳಿಗೆ ಮಾದರಿ ಯಾಗಿದೆ ಎಂದರು….
ನೂತನ ಕೃಷಿ ಕಾನೂನು ವಿರೋಧಿಸಿದ ಅರ್ಜಿಗಳ ಸಂಬಂಧ ಇಂದು ಸುಪ್ರೀಂ ಮಹತ್ವದ ಆದೇಶ
January 12, 2021ನವದೆಹಲಿ,ಜ.11-ನೂತನ ಕೃಷಿ ಕಾನೂನುಗಳ ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸುಪ್ರೀಂಕೋರ್ಟ್ ನಾಳೆ (ಮಂಗಳವಾರ) ತನ್ನ ಆದೇಶವನ್ನು ಪ್ರಕಟಿಸಲಿದೆ. ಈ ವೇಳೆ ಬಿಕ್ಕಟ್ಟಿನ ಪರಿಹಾರಕ್ಕೆ ಮಾರ್ಗಗಳನ್ನು ಕಂಡುಕೊಳ್ಳಲು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಸಮಿತಿಯೊಂದನ್ನು ರಚಿಸುವ ಬಗ್ಗೆ ನಿರ್ಧರಿಸಬಹುದು ಎಂದೆನ್ನಲಾಗಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ನ್ಯಾಯಪೀಠ, ಕೃಷಿ ಕಾನೂನು ಗಳು ಮತ್ತು ರೈತರ ಪ್ರತಿಭಟನೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಭಾಗಶಃ ಆದೇಶಗಳನ್ನು ನೀಡಬಹುದು ಎಂದು ವಿಚಾರಣೆಯ…
ಸೋಮವಾರ ಮೈಸೂರಲ್ಲಿ 36 ಮಂದಿಗೆ ಸೋಂಕು
January 12, 202138 ಜನ ಗುಣಮುಖ ಸೋಂಕಿನಿಂದ ಓರ್ವ ಸಾವು ಮೈಸೂರು, ಜ.11(ಎಂಕೆ)- ಮೈಸೂರು ಜಿಲ್ಲೆಯಲ್ಲಿ ಸೋಮವಾರ 36 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 38 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 52,828ಕ್ಕೆ ಏರಿಕೆಯಾದರೆ, 51,519 ಮಂದಿ ಗುಣಮುಖರಾಗಿದ್ದಾರೆ. ಇಂದು ಮೃತಪಟ್ಟಿರುವ ಒಬ್ಬರು ಸೇರಿ ಇಲ್ಲಿಯವರೆಗೆ 1,020 ಮಂದಿ ಸಾವನ್ನಪ್ಪಿದ್ದು, 289 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ. ರಾಜ್ಯದ ವಿವರ: ರಾಜ್ಯದಲ್ಲಿ ಇಂದು 496 ಮಂದಿಗೆ ಸೋಂಕು ತಗುಲಿದ್ದು, 797 ಮಂದಿ…
ಮೈಸೂರಿನ ಹೋಟೆಲ್‍ನಲ್ಲಿ ಬೆಂಗಳೂರು ಉದ್ಯಮಿ ಆತ್ಮಹತ್ಯೆ
January 12, 2021ಮೈಸೂರು,ಜ.11(ಎಂಕೆ)-ವ್ಯವಹಾರದಲ್ಲಾದ ನಷ್ಟದಿಂದ ಕಿನ್ನತೆಗೊಳಗಾದ ಬೆಂಗಳೂರಿನ ಉದ್ಯಮಿಯೊಬ್ಬರು ಮೈಸೂರಿನ ಖಾಸಗಿ ಹೋಟೆಲೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಬೆಂಗಳೂರಿನ ಯಲಹಂಕ ನಿವಾಸಿ ಬಸವರಾಜಪ್ಪ(55) ಆತ್ಮಹತ್ಯೆ ಮಾಡಿಕೊಂಡ ವರು. ಷೇರು ಮಾರುಕಟ್ಟೆ ಮತ್ತು ಇನ್ನಿತರೆ ವ್ಯವಹಾರದಲ್ಲಿ ಉಂಟಾದ ನಷ್ಟದಿಂದಾಗಿ ಮನನೊಂದ ಇವರು 3 ದಿನಗಳ ಹಿಂದೆಯೇ ಮನೆ ಬಿಟ್ಟು ಮೈಸೂರಿನ ಲಷ್ಕರ್ ಮೊಹಲ್ಲಾದ ಬೆಂಗಳೂರು-ಮೈಸೂರು ನೀಲಗಿರಿ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಭಾನುವಾರ ರಾತ್ರಿ ಸುಮಾರು 11 ಗಂಟೆಯಲ್ಲಿ ತಮ್ಮ ಹೆಂಡತಿಗೆ ಮಕ್ಕಳನ್ನು…
ತಾಳ್ಮೆ ಕಳೆದುಕೊಂಡವರು ತೊಂದರೆಗೆ ಸಿಲುಕಲೇಬೇಕಾಗುತ್ತದೆ
January 12, 2021ಮೈಸೂರು,ಜ.11(ಎಸ್‍ಪಿಎನ್)-ನಿತ್ಯ ಜೀವನದಲ್ಲಿ ತಾಳ್ಮೆ ಕಳೆದುಕೊಂಡ ವ್ಯಕ್ತಿಗಳು ಒಂದಿಲ್ಲೊಂದು ತೊಂದರೆ ಸಿಲುಕಬೇಕಾಗುತ್ತದೆ ಎಂದು ಹಿರಿಯ ಅಂಕಣ ಕಾರ ಡಾ.ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟರು. ಮೈಸೂರು ಜೆಎಸ್‍ಎಸ್ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ದಲ್ಲಿ ನಡೆದ ‘ಜ್ಞಾನವಾರಿಧಿ-6’ ಡಿಜಿಟಲ್ ಸಾಪ್ತಾ ಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ `ಮಹಾಭಾರತ ಸೂಕ್ಷ್ಮ ಅವಲೋಕನ’ ಕುರಿತು ಮಾತನಾಡಿದರು. ಜೀವನದಲ್ಲಿ ಎಲ್ಲರೂ ತಾಳ್ಮೆ ಕಳೆದುಕೊಂಡರೆ ಒಂದಿ ಲ್ಲೊಂದು ತೊಂದರೆಗೆ ಸಿಲುಕಲೇಬೇಕಾಗುತ್ತದೆ. ಹಾಗೆಯೇ ಮಹಾಭಾರತದಲ್ಲಿ ಬರುವ ಪಾತ್ರದ…
ಕಾರು ಅಪಘಾತ: ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಪತ್ನಿ, ಪಿಎ ದುರ್ಮರಣ
January 12, 2021ಅಂಕೋಲ,ಜ.11-ಕೇಂದ್ರ ಸಚಿವ ಶ್ರೀಪಾದ ನಾಯಕ್ ಕಾರು ಪಲ್ಟಿಯಾಗಿ ಅವರ ಪತ್ನಿ ಮತ್ತು ಆಪ್ತ ಕಾರ್ಯದರ್ಶಿ ದುರ್ಮ ರಣಕ್ಕೀ ಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಉತ್ತರ ಕನ್ನಡ ಅಂಕೋಲ ತಾಲೂಕು ಹೊಸಕಂಬಿ ಯಲ್ಲಿ ನಡೆದ ಅಪಘಾತದಲ್ಲಿ ಸಚಿವರ ಕಾರು ಅಪ ಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಸಚಿವರ ಪತ್ನಿ ವಿಜಯಾ ಶ್ರೀಪಾದ್ ನಾಯಕ್ ಸಾವಿಗೀಡಾಗಿದ್ದಾರೆ. ಕೇಂದ್ರ ಆಯುಶ್ ಸಚಿವ ಶ್ರೀಪಾದ್ ನಾಯಕ್ ಸೇರಿದಂತೆ ನಾಲ್ವರಿಗೆ ಗಾಯಗಳಾಗಿದೆ. ಗಾಯಾಳು ಗಳನ್ನು ಅಂಕೋಲದ ಖಾಸಗಿ ಆಸ್ಪತ್ರೆಗೆ…
ಮೈಸೂರು ಲಾಡ್ಜ್‍ನಲ್ಲಿ ಹಣಕಾಸು ಸಂಸ್ಥೆ ಉದ್ಯೋಗಿ ನಿಗೂಢ ಸಾವು ಪ್ರಕರಣ ಕಣ್ಮರೆಯಾದ ಪತ್ನಿ 10 ದಿನವಾದರೂ ಪತ್ತೆಯಿಲ್ಲ
January 12, 2021ಮೈಸೂರು,ಜ.11(ಆರ್‍ಕೆ)-ಮೈಸೂರಿನ ಲಾಡ್ಜ್‍ವೊಂದರಲ್ಲಿ ಬೆಂಗಳೂರು ಹಣಕಾಸು ಸಂಸ್ಥೆಯ ಉದ್ಯೋಗಿ ಎಸ್.ಉಮಾಶಂಕರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣದಲ್ಲಿ ಅದೇ ದಿನ ಕಣ್ಮರೆಯಾದ ಅವರ ಪತ್ನಿ ಶ್ರೀಮತಿ ಎ.ಎಂ.ಕವಿತಾ ಅವರು 10 ದಿನವಾದರೂ ಪತ್ತೆಯಾಗದಿರುವುದು ಮತ್ತಷ್ಟು ಸಂಶಯಕ್ಕೆ ಕಾರಣವಾಗಿದೆ. 2021ರ ಜ.1ರಂದು ಪ್ರಥಮ ಪಿಯುಸಿ ಓದುತ್ತಿರುವ ಪುತ್ರಿಯನ್ನು ಮೈಸೂರಿಗೆ ಕರೆತಂದು ಜಯನಗರದ ತಾಯಿ ಮನೆಗೆ ಬಿಟ್ಟು ಅದೇ ದಿನ ಬೆಂಗಳೂರಿಗೆ ಹೋಗು ವುದಾಗಿ ಹೇಳಿ ಪತ್ನಿ ಉಮಾಶಂಕರ್‍ರೊಂದಿಗೆ ಬಂದು ಇಲ್ಲಿನ ಸಯ್ಯಾಜಿರಾವ್ ರಸ್ತೆಯ ಲಾಡ್ಜ್‍ವೊಂದರಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದ ಕವಿತಾ, ಡೆತ್‍ನೋಟ್‍ಗೆ ಇಬ್ಬರೂ…
ಕಾನೂನುಬಾಹಿರವಾಗಿ ಕೆಲಸದಿಂದ ವಜಾ ಆರೋಪ; ಕಾರ್ಮಿಕರ ಪ್ರತಿಭಟನೆ
January 12, 2021ಮೈಸೂರು, ಜ.11(ಪಿಎಂ)- ಕಾನೂನುಬಾಹಿರ ವಾಗಿ 250 ಖಾಯಂ ಕಾರ್ಮಿಕರನ್ನು ಕೆಲಸ ದಿಂದ ವಜಾ ಮಾಡಲಾಗಿದೆ ಎಂದು ಆರೋಪಿಸಿ ರೀಡ್ ಅಂಡ್ ಟೇಲರ್ (ಕ್ರಿಹಾನ್ ಟೆಕ್ಸ್‍ಕೆಮ್) ಕಾರ್ಖಾನೆಯ ಕೆಲಸ ಕಳೆದುಕೊಂಡ ಕಾರ್ಮಿಕರು ಸೋಮವಾರ ಪ್ರತಿಭಟನೆ ನಡೆಸಿದರು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ರೀಡ್ ಅಂಡ್ ಟೇಲರ್ ಎಂಪ್ಲಾಯಿಸ್ ಯೂನಿ ಯನ್‍ನಡಿ ಜಮಾಯಿಸಿದ ಕಾರ್ಮಿಕರು, ಸುಮಾರು 820 ಕಾರ್ಮಿಕರು 22 ವರ್ಷಗಳಿಂದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಆಡಳಿತ ವರ್ಗ 2020ರ ಮಾ.17ರಂದು ಕೋವಿಡ್ ನೆಪ ದಲ್ಲಿ ವೇತನ ಸಹಿತ ರಜೆ…
ಏಷ್ಯನ್ ಪೇಂಟ್ಸ್-ಭೂಮಿ ಕೊಟ್ಟ ರೈತರ ಸಮಸ್ಯೆ ನಿವಾರಿಸುವಲ್ಲಿ ಕೈಗಾರಿಕಾ ಸಚಿವರು ವಿಫಲ: ರೈತ ಸಂಘ ಆರೋಪ
January 12, 2021ಮೈಸೂರು, ಜ.11(ಎಂಟಿವೈ)- ಕೇಂದ್ರ ಸರ್ಕಾರ ಕೃಷಿ ಚಟುವಟಿಕೆಗೆ ಮಾರಕವಾದ ಹಾಗೂ ರೈತರ ಹತ್ತಿಕ್ಕುವ ಹುನ್ನಾರದಿಂದ ತಿದ್ದುಪಡಿ ಮಾಡಿರುವ ಕೃಷಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಗಣ ರಾಜ್ಯೋತ್ಸವ ದಿನದಂದು ದೆಹಲಿ ಸೇರಿದಂತೆ ರಾಜ್ಯ ದಾದ್ಯಂತ ರೈತ ಸಂಘಟನೆಗಳ ಹೋರಾಟ ಸಮಿತಿ ವತಿಯಿಂದ ಬೃಹತ್ ಕಿಸಾನ್ ಮಜ್ದೂರ್ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾ ಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ…
ಜಡ ಸಮಾಜದ ಉದ್ದೀಪನಕ್ಕೆ ದಾರ್ಶನಿಕರ ಚಿಂತನೆ ಅಗತ್ಯ
January 12, 2021ಮೈಸೂರು, ಜ.11(ವೈಡಿಎಸ್)- `ಸಮಾಜದ ಜಡತ್ವ ಹೋಗಲಾಡಿಸಲು ದಾರ್ಶನಿಕರ ಚಿಂತನೆ ಗಳು ಅಗತ್ಯ’ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ತಿಳಿಸಿದರು. ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪ ದಲ್ಲಿ `ಬ್ರಹ್ಮೀಭೂತ ಶ್ರೀ ವಾಸುದೇವ ಮಹಾರಾಜ್ ಫೌಂಡೇಷನ್’ ವತಿಯಿಂದ ದಾಸ ಶ್ರೇಷ್ಠ ಶ್ರೀ ಕನಕ ದಾಸರ ಜಯಂತಿ ಪ್ರಯುಕ್ತ ಆಯೋಜಿಸಿದ್ದ `ಶ್ರೀ ಕನಕದಾಸರ ಕೀರ್ತನೆಗಳ ಹಾಡುಗಾರಿಕೆ ಸ್ಪರ್ಧೆ’ ಉದ್ಘಾಟಿಸಿ ಅವರು ಮಾತನಾಡಿದರು. ಕನಕದಾಸರ ಕೀರ್ತನೆಗಳ ಹಾಡುಗಾರಿಕೆ ಸ್ಪರ್ಧೆ ಆಯೋಜಿಸಿರುವುದು ಸಂತೋಷದ ವಿಷಯ. ಕನಕದಾಸರ ಕೀರ್ತನೆಗಳು ಸಂಗೀತ ಕ್ಷೇತ್ರಕ್ಕೆ ಹೊಸ ಮಾರ್ಗಗಳನ್ನೇ ಸೃಷ್ಟಿಸಿದವು….










