ಮೈಸೂರು

ಹೊಸೂರಲ್ಲಿ ಪ್ರಜಾಪಾರ್ಟಿ ಸದಸ್ಯತ್ವ ಅಭಿಯಾನ
ಮೈಸೂರು

ಹೊಸೂರಲ್ಲಿ ಪ್ರಜಾಪಾರ್ಟಿ ಸದಸ್ಯತ್ವ ಅಭಿಯಾನ

January 12, 2021

ಮೈಸೂರು,ಜ.11(ವೈಡಿಎಸ್)-ಕರ್ನಾಟಕ ಪ್ರಜಾ ಪಾರ್ಟಿಯನ್ನು ಸ್ಥಳೀಯ ಮಟ್ಟದಿಂದ ಸಂಘಟಿಸುವ ನಿಟ್ಟಿನಲ್ಲಿ ಹುಣಸೂರು ತಾಲೂಕು ನಲ್ಲೂರು ಪಾಲ ಹೊಸೂರಿನಲ್ಲಿ ಸದಸ್ಯತ್ವ ಅಭಿಯಾನ ನಡೆಯಿತು. ಪಾರ್ಟಿ ಸಂಸ್ಥಾಪಕ ಅಧ್ಯಕ್ಷ ಬಿ.ಶಿವಣ್ಣ ನೇತೃತ್ವದಲ್ಲಿ ವರಲಕ್ಷ್ಮಿ ಅವರನ್ನು ಹುಣಸೂರು ತಾಲೂಕು ಮಹಿಳಾ ಘಟಕದ ಅಧ್ಯಕ್ಷೆಯನ್ನಾಗಿ ನೇಮಕ ಮಾಡಲಾಯಿತು. ಈ ವೇಳೆ ಮುಖಂಡರಾದ ನಾಗರಾಜು, ಅರುಣ್ ಕುಮಾರ, ಪ್ರಶಾಂತ್ ಸೇರಿದಂತೆ ನೂರಾರು ಮಂದಿ ಸದಸ್ಯತ್ವ ಪಡೆದು ಪಕ್ಷಕ್ಕೆ ಸೇರ್ಪಡೆಗೊಂಡರು. ಈ ವೇಳೆ ಮಾತನಾಡಿದ ಬಿ.ಶಿವಣ್ಣ ಅವರು, ಹುಣಸೂರು ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ಬಾಕಿ ಉಳಿದಿರುವ ಸಾಗುವಳಿ…

ಇಂದು ಜಿಲ್ಲಾ ಕಸಾಪದಿಂದ ಮಾಜಿ ಸಿಎಂ ದಿ.ರಾಮಕೃಷ್ಣ ಹೆಗಡೆ-ಒಂದು ನೆನಪು
ಮೈಸೂರು

ಇಂದು ಜಿಲ್ಲಾ ಕಸಾಪದಿಂದ ಮಾಜಿ ಸಿಎಂ ದಿ.ರಾಮಕೃಷ್ಣ ಹೆಗಡೆ-ಒಂದು ನೆನಪು

January 12, 2021

ಮೈಸೂರು,ಜ.11(ಎಂಟಿವೈ)-ಮೈಸೂರಿನ ವಿಜಯನಗರದ 1ನೇ ಹಂತದಲ್ಲಿರುವ ಜಿಲ್ಲಾ ಸಾಹಿತ್ಯ ಭವನದಲ್ಲಿ ನಾಳೆ (ಜ.12) ಸಂಜೆ 5ಕ್ಕೆ ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಸಿಎಂ ದಿ.ರಾಮಕೃಷ್ಣ ಹೆಗಡೆ- ಒಂದು ನೆನಪು ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಅಭಿ ನಂದನಾ ಸಮಾರಂಭವನ್ನು ಆಯೋಜಿ ಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಡಾ.ಕೆ.ಎಸ್. ಗೌಡಯ್ಯ ಪ್ರತಿಷ್ಠಾನದ ಸಹಯೋಗದಲ್ಲಿ ನಾಳೆ…

ಕಾರ್ಮಿಕರು ಸಂಘಟಿತರಾಗದಿದ್ದರೆ ಸರ್ಕಾರಿ ಸವಲತ್ತು ಪಡೆಯುವುದು ಅಸಾಧ್ಯ: ರಂಗರಾಜು
ಮೈಸೂರು

ಕಾರ್ಮಿಕರು ಸಂಘಟಿತರಾಗದಿದ್ದರೆ ಸರ್ಕಾರಿ ಸವಲತ್ತು ಪಡೆಯುವುದು ಅಸಾಧ್ಯ: ರಂಗರಾಜು

January 12, 2021

ಮೈಸೂರು, ಜ.11(ಎಸ್‍ಪಿಎನ್)- ಅಸಂಘಟಿತ ವಲಯದ ಕಾರ್ಮಿಕರು ಸಂಘಟಿತರಾಗದಿದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಮೈಸೂರು ನಗರದ ಕುಟುಂಬ ಪ್ರಭೋಧನ ಸಂಯೋಜಕ ಎಸ್.ಎಲ್.ರಂಗರಾಜು ಅಭಿಪ್ರಾಯಪಟ್ಟರು. ಮೈಸೂರು ಜೆಎಲ್‍ಬಿ ರಸ್ತೆಯಲ್ಲಿರುವ ಆರ್‍ಎಸ್‍ಎಸ್ ಕಾರ್ಯಾಲಯ `ಮಾಧವ ಕೃಪ’ದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರು ಸಂಘ ಮೈಸೂರು ಜಿಲ್ಲಾ ಮತ್ತು ನಗರ ಘಟಕ ಹಾಗೂ ಮೈಸೂರು ಜಿಲ್ಲಾ ಮತ್ತು ನಗರ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ `ಶ್ರೀ ದತ್ತೋಪಂತ್…

ಉತ್ತರ ಪ್ರದೇಶದ ಬದೌನ್ ಅತ್ಯಾಚಾರ ಪ್ರಕರಣ ಖಂಡಿಸಿ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಪ್ರತಿಭಟನೆ
ಮೈಸೂರು

ಉತ್ತರ ಪ್ರದೇಶದ ಬದೌನ್ ಅತ್ಯಾಚಾರ ಪ್ರಕರಣ ಖಂಡಿಸಿ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಪ್ರತಿಭಟನೆ

January 12, 2021

ಮೈಸೂರು,ಜ.11(ಪಿಎಂ)-ಉತ್ತರಪ್ರದೇಶದ ಬದೌನ್ ಜಿಲ್ಲೆಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಹತ್ಯೆಗೈದ ಘಟನೆ ಖಂಡಿಸಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಮೈಸೂರು ಡಿಸಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಬದೌನ್ ಜಿಲ್ಲೆಯ ದೇವಸ್ಥಾನವೊಂದರಲ್ಲಿ 50 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಮಾತ್ರವಲ್ಲದೆ, ಆಕೆಗೆ ಚಿತ್ರಹಿಂಸೆ ನೀಡಿ, ಹತ್ಯೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇವಸ್ಥಾನದ ಅರ್ಚಕ ಸೇರಿದಂತೆ ಮೂವರು ಈ ಕೃತ್ಯ ನಡೆಸಿದ್ದಾರೆ. ಅತ್ಯಾಚಾರ ನಡೆಸಿ, ಆಕೆಯ…

ರಂಗಾಯಣದಲ್ಲಿ ವಿಶೇಷ ‘ತ್ರಯಸ್ಥ’ ನಾಟಕ ಪ್ರದರ್ಶನ
ಮೈಸೂರು

ರಂಗಾಯಣದಲ್ಲಿ ವಿಶೇಷ ‘ತ್ರಯಸ್ಥ’ ನಾಟಕ ಪ್ರದರ್ಶನ

January 12, 2021

ಮೈಸೂರು, ಜ11(ಎಂಕೆ)- ಬಾಲ್ಯದ ಚೇಷ್ಟೆಗಳು, ಯೌವ್ವನದಲ್ಲಿ ಪ್ರೀತಿ-ಪ್ರೇಮದ ಆಕರ್ಷಣೆ, ಸಂಸಾರದ ಜಂಜಾಟ ಮತ್ತು ಮುಪ್ಪಿನ ಜೀವನ ಸೇರಿದಂತೆ ಬದುಕಿನ ಪಯಣವನ್ನು ಮೆಲುಕು ಹಾಕುವ ಕಥಾ ವಸ್ತುವುಳ್ಳ ‘ತ್ರಯಸ್ಥ’ ನಾಟಕವನ್ನು ಕಲಬುರಗಿ ರಂಗಾಯಣದ ಕಲಾವಿದರು ಅಚ್ಚುಕಟ್ಟಾಗಿ ಪ್ರಸ್ತುತ ಪಡಿಸಿದರು. ಕಲಾಮಂದಿರದ ಕಿರುರಂಗಮಂದಿರ ದಲ್ಲಿ ಮೈಸೂರು ರಂಗಾಯಣ ಸೋಮ ವಾರ ಆಯೋಜಿಸಿದ್ದ `ತ್ರಯಸ್ಥ’ ನಾಟಕ ಪ್ರದರ್ಶನದಲ್ಲಿ ಕಲಬುರಗಿ ರಂಗಾ ಯಣದ ಕಲಾವಿದರು ತಮ್ಮ ಅಮೋಘ ಅಭಿನಯದ ಮೂಲಕ ಎಲ್ಲರನ್ನು ಸೆಳೆ ದರು. ಶ್ರೀನಿವಾಸ ವೈದ್ಯರ ‘ಮನಸುಖ ರಾಯನ ಮನಸು’ ಕೃತಿಯಿಂದ…

ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್
ಮೈಸೂರು

ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್

January 11, 2021

ಬೆಂಗಳೂರು,ಜ.10-ರಾಜ್ಯ ಸಚಿವ ಸಂಪುಟ ವಿಸ್ತ ರಣೆಗೆ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಗ್ರೀನ್ ಸಿಗ್ನಲ್ ನೀಡಿದ್ದು, 7 ಶಾಸಕರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಅನು ಮತಿ ನೀಡಲಾಗಿದೆ. ನೂತನ ಸಚಿವರು ಸಂಕ್ರಾಂತಿಗೂ ಮುನ್ನಾ ದಿನ ಅಂದರೆ ಜನವರಿ 13ರಂದು ಮಧ್ಯಾಹ್ನ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಹೈಕಮಾಂಡ್ ಬುಲಾವ್ ಮೇರೆಗೆ ಭಾನುವಾರ ಬೆಳಗ್ಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿಗಳು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ,…

88 ಲಸಿಕೆ ಮಳಿಗೆಗಳೊಂದಿಗೆ ಕೋವಿಡ್ ವಿರುದ್ಧ ಹೋರಾಟಕ್ಕೆ ರಾಜ್ಯ ತಯಾರಿ
ಮೈಸೂರು

88 ಲಸಿಕೆ ಮಳಿಗೆಗಳೊಂದಿಗೆ ಕೋವಿಡ್ ವಿರುದ್ಧ ಹೋರಾಟಕ್ಕೆ ರಾಜ್ಯ ತಯಾರಿ

January 11, 2021

ಬೆಂಗಳೂರು,ಜ.10-ಬೆಂಗಳೂರಿನ ಆನಂದ್ ರಾವ್ ಸರ್ಕಲ್‍ನಲ್ಲಿರುವ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಹಳೆಯ ಕಚೇರಿಯಲ್ಲಿ ಕೋವಿಡ್-19 ಲಸಿಕೆ ಬಾಟಲುಗಳನ್ನು ಸುರಕ್ಷಿತ ವಾಗಿ ಸರಬರಾಜು ಹಾಗೂ ಸಂಗ್ರಹಿಸುವ ವ್ಯವಸ್ಥೆಯನ್ನು ಕರ್ನಾಟಕ ಆರೋಗ್ಯ ಸಚಿವ ಕೆ.ಸುಧಾಕರ್ ಪರಿಶೀಲಿಸಿದ್ದಾರೆ. ಸಚಿವರ ಪ್ರಕಾರ, ರಾಜ್ಯದಲ್ಲಿ ಕೊರೊನಾ ವಿರುದ್ಧ ಹೋರಾಟದ ಚೈನ್ ನೆಟ್‍ವರ್ಕ್ ನಲ್ಲಿ 88 ಲಸಿಕೆ ಮಳಿಗೆಗಳಿದೆ. ಎರಡು ದೊಡ್ಡ ಶೇಖರಣಾ ಘಟಕಗಳು-ಬೆಂಗ ಳೂರು ಮತ್ತು ಬೆಳಗಾವಿಯಲ್ಲಿರಲಿದೆ. ಚಿತ್ರದುರ್ಗ, ಕಲಬುರಗಿ, ದಕ್ಷಿಣ ಕನ್ನಡ, ಮೈಸೂರು ಮತ್ತು ಬಾಗಲಕೋಟೆಯಲ್ಲಿ ಐದು ಪ್ರಾದೇಶಿಕ ಘಟಕಗಳಿರಲಿದೆ. ಬಿಬಿ ಎಂಪಿ…

ನಾಳೆ ಮುಡಾ ಎದುರು `ಮುಡಾ ಭ್ರಷ್ಟಮುಕ್ತಗೊಳಿಸಿ’ ಶೀರ್ಷಿಕೆಯಡಿ ಸಹಿ ಸಂಗ್ರಹ ಅಭಿಯಾನ
ಮೈಸೂರು

ನಾಳೆ ಮುಡಾ ಎದುರು `ಮುಡಾ ಭ್ರಷ್ಟಮುಕ್ತಗೊಳಿಸಿ’ ಶೀರ್ಷಿಕೆಯಡಿ ಸಹಿ ಸಂಗ್ರಹ ಅಭಿಯಾನ

January 11, 2021

ಮೈಸೂರು,ಜ.10(ಪಿಎಂ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಕಬಳಿಕೆ ಪ್ರಕರಣಗಳ ಸಂಬಂಧ ತನಿಖೆ ನಡೆಸುವಂತೆ ಲೋಕಾಯುಕ್ತ ಹಾಗೂ ಆದಾಯ ತೆರಿಗೆ ಇಲಾಖೆಗೆ ದೂರು ನೀಡುವುದಾಗಿ ತಿಳಿಸಿದ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಜೊತೆಗೆ ಜನವರಿ 12ರಂದು ಮುಡಾ ಎದುರು `ಮುಡಾ ಭ್ರಷ್ಟ ಮುಕ್ತಗೊಳಿಸಿ’ ಶೀರ್ಷಿಕೆ ಯಡಿ ಸಹಿ ಸಂಗ್ರಹ ಅಭಿಯಾನ ನಡೆಸ ಲಾಗುವುದು ಎಂದು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯನಗರ 4ನೇ ಹಂತದ…

ಮೈಸೂರು, ಮಂಡ್ಯ, ಚಾ.ನಗರ ಸೇರಿ ರಾಜ್ಯಾದ್ಯಂತ ‘ಧಮ್ಮ ಜಾಗೃತಿ ಅಭಿಯಾನ’
ಮೈಸೂರು

ಮೈಸೂರು, ಮಂಡ್ಯ, ಚಾ.ನಗರ ಸೇರಿ ರಾಜ್ಯಾದ್ಯಂತ ‘ಧಮ್ಮ ಜಾಗೃತಿ ಅಭಿಯಾನ’

January 11, 2021

ಮೈಸೂರು, ಜ.10(ಎಂಕೆ)- ವಿಶ್ವ ಬುದ್ಧ ಧಮ್ಮ ಸಂಘದ ವತಿಯಿಂದ ಜ.24 ರಿಂದ ಮೈಸೂರು, ಮಂಡ್ಯ, ಚಾ.ನಗರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ‘ಧಮ್ಮ ಜಾಗೃತಿ ಅಭಿಮಾನ’ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮತಾ ಸೈನಿಕ ದಳ, ದಲಿತ ಸಂಘ ಟನೆಗಳ ಒಕ್ಕೂಟ, ವಿಶ್ವ ಬುದ್ಧ ಧಮ್ಮ ಸಂಘ, ಬುದ್ಧಿಷ್ಟ್ ಸೊಸೈಟಿ ಆಫ್ ಇಂಡಿಯಾ ಸಹಕಾರದೊಂದಿಗೆ ಮೈಸೂರಿನಲ್ಲಿ ಜ.24 ರಂದು ಮೈಸೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ…

ರಾಜ್ಯದ ಎಲ್ಲಾ ಮೃಗಾಲಯಗಳ ಉನ್ನತಿಗೆ ಕ್ರಮ
ಮೈಸೂರು

ರಾಜ್ಯದ ಎಲ್ಲಾ ಮೃಗಾಲಯಗಳ ಉನ್ನತಿಗೆ ಕ್ರಮ

January 11, 2021

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಮೈಸೂರು,ಜ.10-ಸರ್ಕಾರ ಹಾಗೂ ಸಾರ್ವಜನಿಕರ ಸಹಕಾರ ದಿಂದ ಮೈಸೂರು ಮೃಗಾಲಯ ಸೇರಿದಂತೆ ರಾಜ್ಯ ದಲ್ಲಿರುವ ಎಲ್ಲಾ ಮೃಗಾಲಯಗಳ ಉನ್ನತಿಗೆ ಕ್ರಮ ವಹಿಸ ಲಾಗು ತ್ತಿದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ತಿಳಿಸಿದ್ದಾರೆ. ಮೈಸೂರಿನಲ್ಲಿ ಯಶಸ್ವಿಯಾಗಿರುವ `ಪ್ರಾಣಿ ದತ್ತು ಸ್ವೀಕಾರ ಯೋಜನೆ’ಯನ್ನು ಈಗಾಗಲೇ ರಾಜ್ಯದ ಎಲ್ಲಾ ಮೃಗಾಲಯ ಗಳ ವ್ಯಾಪ್ತಿಗೂ ವಿಸ್ತರಿಸಲಾಗಿದೆ. ಚಾಮರಾಜೇಂದ್ರ ಮೃಗಾಲಯ ಸೇರಿದಂತೆ ಪ್ರಾಧಿಕಾರ ವ್ಯಾಪ್ತಿಯಲ್ಲಿರುವ ಎಲ್ಲಾ ಮೃಗಾಲಯಗಳಲ್ಲಿ ರುವ 5247 ಪ್ರಾಣಿ- ಪಕ್ಷಿ ಮತ್ತು ಸರಿಸೃಪಗಳಲ್ಲಿ…

1 322 323 324 325 326 1,611
Translate »