ಮೈಸೂರು

ಜೋಡಿ ತೆಂಗಿನ ಮರ ರಸ್ತೆಯಲ್ಲಿ ವಾಹನ ಸವಾರರಿಗೆ ಚರಂಡಿ ನೀರಿನ ಅಭಿಷೇಕ
ಮೈಸೂರು

ಜೋಡಿ ತೆಂಗಿನ ಮರ ರಸ್ತೆಯಲ್ಲಿ ವಾಹನ ಸವಾರರಿಗೆ ಚರಂಡಿ ನೀರಿನ ಅಭಿಷೇಕ

December 18, 2020

ಮೈಸೂರು, ಡಿ.17(ಆರ್‍ಕೆಬಿ)- ಮೈಸೂರಿನ ಹಲವೆಡೆ ಉತ್ತಮ ರಸ್ತೆಗಳು ವಿದ್ಯುತ್ ಮತ್ತು ಫೋನ್ ಕೇಬಲ್‍ಗಳನ್ನು ಅಳವಡಿಸಲು ಗುತ್ತಿಗೆ ತೆಗೆದುಕೊಂಡಿರುವವರಿಂದ ಹಾಳಾ ಗುತ್ತಿವೆ. ತಮ್ಮ ಕಾಮಗಾರಿಗೆಂದು ಅಗೆದ ರಸ್ತೆಗಳನ್ನು ಅವರು ಸರಿಯಾದ ರೀತಿಯಲ್ಲಿ ಮುಚ್ಚದ ಕಾರಣ ಅವು ಗುಂಡಿ ಬಿದ್ದು ಸಾರ್ವಜನಿಕರು, ವಾಹನ ಸವಾರರು ಪ್ರತಿನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ. ಇದಕ್ಕೆ ಸ್ಪಷ್ಟ ನಿದರ್ಶನವೆಂದರೆ ನಗರದ ಹೈವೇ ವೃತ್ತ ದಿಂದ ಶಿವರಾತ್ರೀಶ್ವರನಗರ ಹಾಗೂ ಬನ್ನಿಮಂಟಪ ಕೈಗಾ ರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಜೋಡಿ ತೆಂಗಿನ ಮರ ರಸ್ತೆ. ಈ ರಸ್ತೆ…

ಹಾಲಿ ಗ್ರಾಪಂ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವು
ಮೈಸೂರು

ಹಾಲಿ ಗ್ರಾಪಂ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವು

December 17, 2020

ಮೈಸೂರು, ಡಿ.16(ಆರ್‍ಕೆಬಿ)- ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬ ಲಿತ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರಿನ ರಾಮಾನುಜ ರಸ್ತೆಯ ರಾಜೇಂದ್ರ ಕಲಾಮಂದಿರದಲ್ಲಿ ದಿ. ಅಶೋಕ್ ಗಸ್ತಿ ವೇದಿಕೆಯಲ್ಲಿ ಬುಧವಾರ ನಡೆದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಮೊದಲ ರಾಜ್ಯ ಕಾರ್ಯಕಾರಿಣಿ ಸಭೆ ಯನ್ನು ಗೋಪೂಜೆ ಮಾಡುವ ಮೂಲಕ ಉದ್ಘಾಟಿಸಿ, ಮಾತನಾಡಿದರು. ರಾಜ್ಯಾದ್ಯಂತ ಬಿಜೆಪಿಯ ಗ್ರಾಮ ಸ್ವರಾಜ್ಯ ಕಾರ್ಯಕ್ರಮ ಯಶಸ್ವಿಯಾಗಿದೆ. ಕೇಡರ್ ಆಧಾರಿತ ಪಕ್ಷ…

ಹಿಂದುಳಿದ ವರ್ಗಕ್ಕೆ ಮುಸ್ಲಿಮರ ಸೇರ್ಪಡೆಗೆ ವಿರೋಧ
ಮೈಸೂರು

ಹಿಂದುಳಿದ ವರ್ಗಕ್ಕೆ ಮುಸ್ಲಿಮರ ಸೇರ್ಪಡೆಗೆ ವಿರೋಧ

December 17, 2020

ಮೈಸೂರು, ಡಿ.16(ಆರ್‍ಕೆಬಿ)- ಹಿಂದುಳಿದ ವರ್ಗಕ್ಕೆ ಮುಸ್ಲಿಮರನ್ನು ಸೇರ್ಪಡೆ ಮಾಡುವುದಕ್ಕೆ ನಮ್ಮ ವಿರೋಧವಿದೆ ಎಂದು ಬಿಜೆಪಿ ಹಿಂದು ಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಡಾ.ಕೆ.ಲಕ್ಷ್ಮಣ್ ಹೇಳಿದರು. ಮೈಸೂರಿನಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಮೊದಲ ರಾಜ್ಯ ಕಾರ್ಯಕಾರಿಣಿ ಸಭೆಗೂ ಮುನ್ನ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದ ಎಲ್ಲಾ ಸಮುದಾಯದ ಬಡವರಿಗೆ ಶೇ.10ರಷ್ಟು ಮೀಸಲಾತಿ ನೀಡಲು ಕೇಂದ್ರ ಸರ್ಕಾರ ಚಿಂತಿಸಿದೆ ಎಂದು ಹೇಳಿದರು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ 6 ವರ್ಷಗಳ ಅವಧಿಯಲ್ಲಿ ಹಿಂದು ಳಿದ…

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಗ್ರಾಮೀಣ ಜನರಿಗೆ ಸುರಕ್ಷಿತ ಸರ್ವಿಸ್ ರಸ್ತೆ
ಮೈಸೂರು

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಗ್ರಾಮೀಣ ಜನರಿಗೆ ಸುರಕ್ಷಿತ ಸರ್ವಿಸ್ ರಸ್ತೆ

December 17, 2020

ಮೈಸೂರು,ಡಿ.16-ಬೆಂಗಳೂರು-ಮೈಸೂರು ನಡುವಿನ ಹೆದ್ದಾರಿ -275 ಅಗಲೀಕರಣ ಹಾಗೂ 6 ಪಥಗಳ ಸೇರ್ಪಡೆ ವೇಳೆ ಆ ಭಾಗದ ಗ್ರಾಮೀಣ ಜನರ ಸುರಕ್ಷಿತ ಸಂಚಾರಕ್ಕಾಗಿ ಸರ್ವಿಸ್ ರಸ್ತೆಗಳನ್ನು ನಿರ್ಮಿಸುವಾಗ ಸುರಕ್ಷತೆಗೆ ಹೆಚ್ಚು ಗಮನ ಹರಿಸಬೇ ಕಿದೆ. ಅದರಲ್ಲೂ ಅಂಡರ್‍ಪಾಸ್‍ಗಳಲ್ಲಿ ಸರಾಗ ಪ್ರವೇಶ-ನಿರ್ಗ ಮನಕ್ಕೆ ಅಗತ್ಯವಾದ ಕಾಮಗಾರಿ ಕೈಗೊಳ್ಳಬೇಕಿದೆ. ಒಟ್ಟಿನಲ್ಲಿ ಆ ಭಾಗದ ಹಳ್ಳಿಗಾಡಿನ ಜನರ ಸುರಕ್ಷಿತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕಿದೆ ಎಂದು ಮೈಸೂರು-ಕೊಡುಗು ಸಂಸದ ಪ್ರತಾಪ್ ಸಿಂಹ ಅವರು, ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ…

ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 50 ರೂ. ಹೆಚ್ಚಳ
ಮೈಸೂರು

ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 50 ರೂ. ಹೆಚ್ಚಳ

December 17, 2020

ನವದೆಹಲಿ: ಗೃಹ ಬಳಕೆ ಸಬ್ಸಿಡಿ ರಹಿತ ಎಲ್‍ಪಿಜಿ ದರವನ್ನು ಪ್ರತಿ ಸಿಲಿಂಡರ್‍ಗೆ 50 ರೂ. ಹೆಚ್ಚಿಸಲಾಗಿದ್ದು ಕೇಂದ್ರ ಮತ್ತೆ ಗ್ರಾಹಕ ರಿಗೆ ಬೆಲೆ ಏರಿಕೆಯ ಶಾಕ್ ನೀಡಿದೆ. ಇದು ಅಂತಾ ರಾಷ್ಟ್ರೀಯ ದರ ದೃಢೀಕರಣದ ನಂತರ ಡಿಸೆಂಬರ್ ನಲ್ಲೇ 2ನೇ ಬಾರಿ ಬೆಲೆ ಏರಿಕೆಯಾಗಿರುವುದು. ಅಲ್ಲದೆ, ವಾಯುಯಾನ ಟರ್ಬೈನ್ ಇಂಧನ (ಎಟಿಎಫ್) ಬೆಲೆಯನ್ನು ಶೇ.6.3ರಷ್ಟು ಏರಿಸಲಾಗಿದೆ. ರಾಜ್ಯ ಇಂಧನ ಮಾರುಕಟ್ಟೆ ಕಂಪನಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಸಬ್ಸಿಡಿ ರಹಿತ ಗೃಹ ಬಳಕೆ 14.2 ಕೆಜಿ ಸಿಲಿಂಡರ್ ಬೆಲೆಯನ್ನು…

ಡಿ. 20, 27ರಂದು ರಂಗಾಯಣದಲ್ಲಿ `ಚಿರೇಬಂದಿ ವಾಡೆ’ ನಾಟಕ ಪ್ರದರ್ಶನ
ಮೈಸೂರು

ಡಿ. 20, 27ರಂದು ರಂಗಾಯಣದಲ್ಲಿ `ಚಿರೇಬಂದಿ ವಾಡೆ’ ನಾಟಕ ಪ್ರದರ್ಶನ

December 17, 2020

ಮೈಸೂರು,ಡಿ.16-ಪ್ರಬುದ್ಧತೆಯ ಪ್ರದರ್ಶನ, ತುಂಬಿದ ರಂಗಮಂದಿರ, ಎದ್ದು ನಿಂತು ದೀರ್ಘ ಚಪ್ಪಾಳೆ. ಇದು ಕಳೆದ ಭಾನುವಾರ ರಂಗಾಯಣದ ವಾರಾಂತ್ಯ ನಾಟಕದಲ್ಲಿ ಕಂಡುಬಂದ ದೃಶ್ಯ. ಮಾರ್ಚ್ 5ರಂದು ಮಣಿಪುರದಲ್ಲಿ ‘ಶೂದ್ರ ತಪಸ್ವಿ’ ನಾಟಕ ಪ್ರದರ್ಶನ ನೀಡಿದ ನಂತರ ರಂಗಾ ಯಣ ಪ್ರಧಾನ ರೆಪರ್ಟರಿ ತನ್ನ ಪೂರ್ಣ ಪ್ರಮಾಣ ನಾಟಕ ಪ್ರದರ್ಶನ ನೀಡಿರ ಲಿಲ್ಲ. ಇದಕ್ಕೆ ಕೋವಿಡ್-19ರ ಕಾರಣವಾಗಿತ್ತು. ‘ಪರ್ವ’ ನಾಟಕದ ತಾಲೀಮಿನ ನಡುವೆ 2008ರಲ್ಲಿ ಸಿದ್ಧಗೊಂಡು ರಂಗಾಯಣ ಪ್ರದರ್ಶನ ನೀಡಿದ್ದ ‘ಚಿರೇಬಂದಿ ವಾಡೆ’ ನಾಟಕ 2020 ಡಿ.13ರಂದು ಮತ್ತೆ ಭೂಮಿ…

ಬೇಡಿಕೆ ಈಡೇರಿಸುವ ಭರವಸೆ ನೀಡಿದ ಎಂ.ಶಿವಣ್ಣ; ಮುಷ್ಕರ ಕೈಬಿಟ್ಟ ಒಳಚರಂಡಿ ಪೌರಕಾರ್ಮಿಕರು
ಮೈಸೂರು

ಬೇಡಿಕೆ ಈಡೇರಿಸುವ ಭರವಸೆ ನೀಡಿದ ಎಂ.ಶಿವಣ್ಣ; ಮುಷ್ಕರ ಕೈಬಿಟ್ಟ ಒಳಚರಂಡಿ ಪೌರಕಾರ್ಮಿಕರು

December 17, 2020

ಮೈಸೂರು,ಡಿ.16(ಆರ್‍ಕೆ)-ಕೆಲಸ ಖಾಯಂ ಮಾಡು ವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನ ನಡೆಸುವುದಾಗಿ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಒಳಚರಂಡಿ ಪೌರಕಾರ್ಮಿಕರು ಮುಷ್ಕರವನ್ನು ಕೈಬಿಟ್ಟಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ಒಳಚರಂಡಿ ಸಹಾಯಕರು ಹಾಗೂ ಪೌರಕಾರ್ಮಿಕರ ಸಂಘದ ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಅವರು ‘ಮೈಸೂರು ಮಿತ್ರ’ನಿಗೆ ಬುಧವಾರ ಸಂಜೆ ಈ ವಿಷಯ ತಿಳಿಸಿದರು. `ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಅವರು ನಾವು ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಬಂದು…

ಒಳಚರಂಡಿ ಸ್ವಚ್ಛತಾ ಗುತ್ತಿಗೆ ಕಾರ್ಮಿಕರ ಬೇಡಿಕೆ ಶೀಘ್ರ ಈಡೇರಿಕೆ
ಮೈಸೂರು

ಒಳಚರಂಡಿ ಸ್ವಚ್ಛತಾ ಗುತ್ತಿಗೆ ಕಾರ್ಮಿಕರ ಬೇಡಿಕೆ ಶೀಘ್ರ ಈಡೇರಿಕೆ

December 17, 2020

ಮೈಸೂರು, ಡಿ.16(ಎಂಕೆ)- ಮೈಸೂರು ಮಹಾನಗರ ಪಾಲಿಕೆಯ ಒಳಚರಂಡಿ ಸ್ವಚ್ಛತಾ ಗುತ್ತಿಗೆ ಕಾರ್ಮಿಕರ ಬೇಡಿಕೆಗಳನ್ನು ಶೀಘ್ರದಲ್ಲಿಯೇ ಈಡೇರಿಸಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಹೇಳಿದರು. ಬೆಳಗಿನ ಉಪಾಹಾರಕ್ಕಾಗಿ ಮತ್ತು 231 ಮಂದಿ ಒಳಚರಂಡಿ ಗುತ್ತಿಗೆ ಕಾರ್ಮಿಕರ ಖಾಯಂಗೆ ಒತ್ತಾಯಿಸಿ 3 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಒಳಚರಂಡಿ ಸ್ವಚ್ಛತಾ ಗುತ್ತಿಗೆ ಕಾರ್ಮಿಕರೊಂದಿಗೆ ಮೇಯರ್ ತಸ್ನೀಂ ಅವರ ಅಧ್ಯಕ್ಷತೆಯಲ್ಲಿ ಪಾಲಿಕೆ ಸಭಾಂಗಣ ದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಆಯುಕ್ತರು, 24.10 ಕಾರ್ಯಕ್ರಮದಡಿ ಬೆಳಗಿನ ಉಪಹಾರ ಭತ್ಯೆ ಕೊಡಲು…

ಪಾಲಿಕೆಯ ‘ಸಫಾಯಿಮಿತ್ರ’ ಸಮವಸ್ತ್ರ ಸ್ಪರ್ಧೆಯಲ್ಲಿ ಮೈಸೂರು ಮಹಿಳೆಗೆ ಪ್ರಥಮ ಬಹುಮಾನ
ಮೈಸೂರು

ಪಾಲಿಕೆಯ ‘ಸಫಾಯಿಮಿತ್ರ’ ಸಮವಸ್ತ್ರ ಸ್ಪರ್ಧೆಯಲ್ಲಿ ಮೈಸೂರು ಮಹಿಳೆಗೆ ಪ್ರಥಮ ಬಹುಮಾನ

December 17, 2020

ಮೈಸೂರು,ಡಿ.16(ಆರ್‍ಕೆ)- ಮೈಸೂರು ಮಹಾನಗರ ಪಾಲಿಕೆಯು ಇತ್ತೀಚೆಗೆ ನಡೆ ಸಿದ ‘ಸಫಾಯಿಮಿತ್ರ’ ಸಮವಸ್ತ್ರ ಡಿಸೈನ್ ಸ್ಪರ್ಧೆಯಲ್ಲಿ ಮೈಸೂರಿನ ಕುವೆಂಪುನಗ ರದ ‘ಕ್ವೀನ್ಸ್ ಸ್ಕೂಲ್ ಆಫ್ ಡಿಸೈನ್’ ಪ್ರಾಂಶು ಪಾಲರಾದ ಆಶಾ ಜಯಕೃಷ್ಣನ್ ಅವರು ಮೊದಲ ಬಹುಮಾನ ಪಡೆದಿದ್ದಾರೆ. ರಾಷ್ಟ್ರಮಟ್ಟದಲ್ಲಿ ಕೇವಲ 7 ನಗರ ಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಕರ್ನಾ ಟಕದಿಂದ ಮೈಸೂರು ನಗರ ಮಾತ್ರ ವಿಶೇಷ ಕಾಸ್ಟ್ಯೂಮ್ ಅನ್ನು ಸಲ್ಲಿಸಿದೆ. ಸಫಾಯಿಮಿತ್ರ ಸಮವಸ್ತ್ರಗಳ ಉತ್ತಮ ವಿನ್ಯಾಸ ಪಡೆಯಲೆಂದು ಮೈಸೂರು ಮಹಾ ನಗರ ಪಾಲಿಕೆಯು ಏರ್ಪಡಿಸಿದ್ದ ಸ್ಪರ್ಧೆ ಯಲ್ಲಿ ಮೈಸೂರಿನವರೇ…

ಪೌರಕಾರ್ಮಿಕರ ಪ್ರತಿಭಟನೆಗೆ ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿ ಬೆಂಬಲ
ಮೈಸೂರು

ಪೌರಕಾರ್ಮಿಕರ ಪ್ರತಿಭಟನೆಗೆ ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿ ಬೆಂಬಲ

December 17, 2020

ಮೈಸೂರು,ಡಿ.16-ಮೈಸೂರು ಮಹಾನಗರ ಪಾಲಿಕೆ ಒಳಚರಂಡಿ ಸ್ವಚ್ಛತೆ ಸಹಾಯ ಕರು ಹಾಗೂ ಪೌರಕಾರ್ಮಿಕರ ಸಂಘ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಪಾಲಿಕೆ ಮುಂಭಾಗ 3 ದಿನಗಳಿಂದ ಪ್ರತಿಭಟನೆ ನಡೆಸುತ್ತಿದೆ. ಆದರೆ ಇದಕ್ಕೆ ಸ್ಪಂದಿಸದೇ ನಗರ ಪಾಲಿಕೆ ಮೌನವಾಗಿರುವುದನ್ನು ಖಂಡಿಸಿರುವ ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿ, ಕನ್ನಡ ಸಾಹಿತ್ಯ ಕಲಾಕೂಟ ಪೌರಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿವೆ. ದೇಶದಲ್ಲಿ ಸ್ವಚ್ಛ ನಗರಿ ಖ್ಯಾತಿಗೆ ಪಾತ್ರವಾಗಿರುವ ಮೈಸೂರಿಗೆ ಆ ಸ್ವಚ್ಛತೆಯನ್ನು ನಿರ್ವಹಿಸುವ ಒಳಚರಂಡಿ ಹಾಗೂ ಪೌರಕಾರ್ಮಿಕರ ಬಗ್ಗೆ ಪಾಲಿಕೆ ಆಡಳಿತ ನಿರ್ಲಕ್ಷ್ಯ ಧೋರಣೆ ತಳೆದಿರುವುದು…

1 344 345 346 347 348 1,611
Translate »