ಮೈಸೂರು

ಅಗ್ನಿಶಾಮಕ ಠಾಣೆಯಿಂದ ಸಕಾಲ ಸಪ್ತಾಹ
ಮೈಸೂರು

ಅಗ್ನಿಶಾಮಕ ಠಾಣೆಯಿಂದ ಸಕಾಲ ಸಪ್ತಾಹ

December 21, 2020

ಮೈಸೂರು, ಡಿ.20(ಎಂಕೆ)- ನಗರದ ಸರಸ್ವತಿಪುರಂ ಅಗ್ನಿಶಾಮಕ ಠಾಣೆಯಿಂದ `ಸಕಾಲ ಸಪ್ತಾಹ’ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಅಗ್ನಿ ಅವಘಡ, ಭೂ ಕುಸಿತ, ಕಟ್ಟಡ ಕುಸಿತ ಇನ್ನಿತರೆ ವಿಪತ್ತುಗಳು ಮತ್ತು ಕಟ್ಟಡ ನಿರ್ಮಾಣಕ್ಕೆ ಪಾಲಿಸಬೇಕಾದ ನಿಯಮಗಳು ಕುರಿತು ಕುವೆಂಪು ನಗರ, ನಗರ ಬಸ್ ನಿಲ್ದಾಣ ಸೇರಿದಂತೆ ನಗರದ ವಿವಿಧ ಸ್ಥಳಗಳಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಈ ವೇಳೆ ಸರಸ್ವತಿಪುರಂ ಅಗ್ನಿಶಾಮಕ ಠಾಣೆ ಅಧಿಕಾರಿ ನಾಗರಾಜು ಮಾತನಾಡಿ, ಚಿಕ್ಕ ಮಕ್ಕಳು ತೆರೆದ ಕೊಳವೆ ಬಾವಿಗಳಲ್ಲಿ ಬೀಳು ವುದು, ಅಗ್ನಿ ಅವಘಡ ಸಂಭವಿಸುವುದು, ಕಟ್ಟಡ…

`ಸಿದ್ದರಾಮಯ್ಯರ ಜನಮುಖಿ ಆಡಳಿತ- ಒಂದು ಚಿಂತನೆ’ಗೆ ಚಾಲನೆ ನೀಡಿ ಸಾಹಿತಿ ಬಂಜಗೆರೆ ಜಯಪ್ರಕಾಶ್
ಮೈಸೂರು

`ಸಿದ್ದರಾಮಯ್ಯರ ಜನಮುಖಿ ಆಡಳಿತ- ಒಂದು ಚಿಂತನೆ’ಗೆ ಚಾಲನೆ ನೀಡಿ ಸಾಹಿತಿ ಬಂಜಗೆರೆ ಜಯಪ್ರಕಾಶ್

December 21, 2020

ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡರ 69ನೇ ಹುಟ್ಟುಹಬ್ಬದ ಅಂಗವಾಗಿ ಅಭಿನಂದನಾ ಸಭೆದಿಕ್ಕೆಟ್ಟವರಿಗೆ ದಿಕ್ಕು ತೋರಿಸುವ ನಿಜವಾದ ನಾಯಕ ಸಿದ್ದರಾಮಯ್ಯ ಮೈಸೂರು, ಡಿ.20(ಆರ್‍ಕೆಬಿ)- ಕಳೆದ 25 ದಿನ ಗಳಿಂದ ರೈತರು ದೆಹಲಿನಲ್ಲಿ ಚಳುವಳಿ ಮಾಡುತ್ತಿ ದ್ದಾರೆ. ಪ್ರಧಾನಮಂತ್ರಿಯಾದವರು ಸಂಧಾನಕ್ಕೆ ಕಾಳಜಿ ವ್ಯಕ್ತಪಡಿಸದೆ ಇತರೆ ಕಾರ್ಯಕ್ರಮಗಳಲ್ಲಿ ಮಗ್ನರಾಗಿದ್ದಾರೆ ಎಂದು ಕನ್ನಡ ಪುಸ್ತಕ ಪ್ರಾಧಿಕಾ ರದ ಮಾಜಿ ಅಧ್ಯಕ್ಷರೂ ಆದ ಸಾಹಿತಿ ಬಂಜಗೆರೆ ಜಯಪ್ರಕಾಶ್ ಇಂದಿಲ್ಲಿ ಆರೋಪಿಸಿದರು. ಮೈಸೂರಿನ ಮಾನಸಗಂಗೋತ್ರಿ ರಾಣಿಬಹ ದ್ದೂರ್ ಸಭಾಂಗಣದಲ್ಲಿ ಭಾನುವಾರ ಕಾಂಗ್ರೆಸ್ ಮುಖಂಡ, ಜಿಲ್ಲಾ ಪಂಚಾಯತ್…

ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ
ಮೈಸೂರು

ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ

December 21, 2020

ಮೈಸೂರು, ಡಿ.20(ಎಸ್‍ಬಿಡಿ)- ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ರೋಟರಿ ರೋಟರಾಕ್ಟ್, ರೋಟರಿ ಐವರಿ ಸಿಟಿ, ರಕ್ತದಾನ್ ಮಹಾದಾನ್ ಗೋಭಕ್ತ್ ಸಂಘ್ತಾನ್ ಟ್ರಸ್ಟ್ ಹಾಗೂ ತೇರಾಪಂಥ್ ಯುವಕ್ ಪರಿಷದ್ ಸಹಯೋಗದೊಂದಿಗೆ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಜಯದೇವ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಸದಾನಂದ ಉದ್ಘಾಟಿಸಿ, ಬಡರೋಗಿಗಳ ಸೇವೆಗೆ ಸಹಕರಿಸಿದ ಸಂಘ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭ ದಲ್ಲಿ ಡಾ.ಸದಾನಂದ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಮೈಸೂರು,…

ಕ್ರಿಸ್‍ಮಸ್ ಹಿನ್ನೆಲೆ ನೃತ್ಯ, ನಾಟಕ ಪ್ರದರ್ಶನ
ಮೈಸೂರು

ಕ್ರಿಸ್‍ಮಸ್ ಹಿನ್ನೆಲೆ ನೃತ್ಯ, ನಾಟಕ ಪ್ರದರ್ಶನ

December 21, 2020

ಮೈಸೂರು, ಡಿ.20(ಎಂಕೆ)- ನಗರದ ಮೇದಾರ್ ಬ್ಲಾಕ್‍ನಲ್ಲಿರುವ ಯುನೈಟೆಡ್ ಚರ್ಚ್ ಆಫ್ ಗಾಡ್ ಸಭಾಂಗಣದಲ್ಲಿ ಕ್ರಿಸ್ ಮಸ್ ಹಬ್ಬದ ಹಿನ್ನೆಲೆ ಗಾಯನ, ನೃತ್ಯ ಮತ್ತು ನಾಟಕ ಪ್ರದರ್ಶನ ಕಾರ್ಯ ಕ್ರಮಗಳನ್ನು ಏರ್ಪಡಿಸಲಾಗಿತ್ತು. ಕ್ರೈಸ್ತ ಧರ್ಮಗುರುಗಳಾದ ವೆಲ್‍ಫಾರ್ಡ್, ನ್ಯೂಮನ್ ಸ್ಟೀಫನ್ ಅವರು ಯೇಸುವಿನ ಕುರಿ ತಾದ ಹಾಡುಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಬಣ್ಣ ಬಣ್ಣದ ಉಡುಗೆ ತೊಟ್ಟ ಪುಟಾಣಿಗಳು ಕುಣಿದು ಕುಪ್ಪಳಿಸಿದರೆ, ಸಾಂತಾಕ್ಲಾಸ್‍ನ ವೇಷತೊಟ್ಟ ಪುಟಾಣಿ ಎಲ್ಲರಿಗೂ ಸಿಹಿ ವಿತರಿಸಿ ಸಂಭ್ರಮಿಸಿದ. ಯೇಸು ಜೀವನ ಕುರಿತ…

ಷಷ್ಠಿ ಹಬ್ಬದಂದು ಹಾವುಗಳ ರಕ್ಷಣೆ
ಮೈಸೂರು

ಷಷ್ಠಿ ಹಬ್ಬದಂದು ಹಾವುಗಳ ರಕ್ಷಣೆ

December 21, 2020

ಮೈಸೂರು, ಡಿ.20(ಎಸ್‍ಬಿಡಿ)- ಮೈಸೂರಲ್ಲಿ ಷಷ್ಠಿ ಹಬ್ಬದಂದು ಆರೇಳು ಹಾವುಗಳನ್ನು ಸ್ನೇಕ್ ಸೂರ್ಯಕೀರ್ತಿ ಸಂರಕ್ಷಿಸಿದ್ದಾರೆ. ಬಂಬೂಬಜಾರ್‍ನ ಮನೆಯೊಂದರ ಸಜ್ಜಾ ದಲ್ಲಿದ್ದ ಕಟ್ ಹಾವು, ಶ್ರೀರಾಂಪುರದ ಮನೆ ಯೊಂದರ ಅಡುಗೆ ಮನೆ ಹೊಕ್ಕಿದ್ದ ಕೇರೆ ಹಾವು ಸೇರಿದಂತೆ ಮೈಸೂರಿನ ವಿವಿಧೆಡೆ ಆರೇಳು ಹಾವುಗಳನ್ನು ಸಂರಕ್ಷಿಸಿದ ಸೂರ್ಯ ಕೀರ್ತಿ, ಹಾವುಗಳ ಸಂರಕ್ಷಣೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಪ್ರಾಣಿ- ಪಕ್ಷಿಗಳಿಗೆ ತೊಂದರೆಯಾಗಬಾರದು ಎಂಬ ಸದುದ್ದೇಶದಿಂದ ಅವುಗಳಿಗೆ ಹಿರಿಯರು ಪೂಜ್ಯ ಸ್ಥಾನ ನೀಡಿದ್ದಾರೆ. ಅದರಂತೆ ಷಷ್ಠಿ ದಿನದಂದು ಮಾತ್ರವಲ್ಲ ಯಾವಾಗಲೂ ಹಾವುಗಳಿಗೆ ತೊಂದರೆ…

ಗುಂಗ್ರಾಲ್‍ಛತ್ರ ಗ್ರಾಪಂ ಚುನಾವಣೆ; ಜಿಟಿಡಿ ಸೋದರ ಯದುವರ ಅಭ್ಯರ್ಥಿ
ಮೈಸೂರು

ಗುಂಗ್ರಾಲ್‍ಛತ್ರ ಗ್ರಾಪಂ ಚುನಾವಣೆ; ಜಿಟಿಡಿ ಸೋದರ ಯದುವರ ಅಭ್ಯರ್ಥಿ

December 18, 2020

ಮೈಸೂರು, ಡಿ.17- ಗ್ರಾಮ ಪಂಚಾಯಿತಿ ಚುನಾ ವಣಾ ಪ್ರಚಾರ ಗರಿಗೆದರಿದ್ದು, ಗ್ರಾಮೀಣ ಭಾಗದಲ್ಲಿ ರಿಯಲ್ ಫೈಟ್‍ಗೆ ವೇದಿಕೆ ಸಿದ್ಧಗೊಂಡಿದೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಂಗ್ರಾಲ್ ಛತ್ರದ ಗ್ರಾಪಂ ಚುನಾವಣೆ ರಂಗೇರಿದ್ದು, ಹೆಚ್ಚು ಮಂದಿ ಹೊಸಬರೇ ಅಖಾಡದಲ್ಲಿದ್ದಾರೆ. ಶಾಸಕ ಜಿ.ಟಿ.ದೇವೇ ಗೌಡರ ಸಹೋದರ ಜಿ.ಟಿ.ಯದುವರ ಮೊದಲ ಬಾರಿಗೆ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಕುತೂಹಲ ಹೆಚ್ಚಿಸಿದೆ. ಗುಂಗ್ರಾಲ್‍ಛತ್ರ ಗ್ರಾಪಂ ಚುನಾವಣೆಯಲ್ಲಿ ಜಿ.ಟಿ.ಯದು ವರ ಮತ್ತು ಅವರ ಬೆಂಬಲಿತರೇ ಗೆಲುವು ಸಾಧಿಸುತ್ತಾರೆ ಎಂಬ ಮಾತುಗಳು ಗ್ರಾಮದಲ್ಲಿ ಕೇಳಿಬರುತ್ತಿವೆ. ಯುವ ಕರು…

ಷಷ್ಠಿ ದಿನ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತಾದಿಗಳ ಪ್ರವೇಶ ನಿಷೇಧ
ಮೈಸೂರು

ಷಷ್ಠಿ ದಿನ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತಾದಿಗಳ ಪ್ರವೇಶ ನಿಷೇಧ

December 18, 2020

ಮೈಸೂರು,ಡಿ.17(ಆರ್‍ಕೆ)- ಕೊರೊನಾ ಹಿನ್ನೆಲೆಯಲ್ಲಿ ಡಿಸೆಂಬರ್ 20ರಂದು ನಡೆಯ ಲಿರುವ ಷಷ್ಠಿಗೆ ಮೈಸೂರು-ಬೆಂಗಳೂರು ಹೆದ್ದಾರಿಯ ಸಿದ್ದಲಿಂಗಪುರ ಬಳಿಯ ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯಕ್ಕೆ ಭಕ್ತಾದಿಗಳ ಪ್ರವೇಶ ನಿಷೇಧಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಅಂದು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮೈಸೂರು ತಾಲೂಕು ತಹಸೀ ಲ್ದಾರ್ ರಕ್ಷಿತ್ ಅವರು ದೇವಸ್ಥಾನದ ಆವರಣ ದಲ್ಲಿ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳೊಂ ದಿಗೆ ಗುರುವಾರ ಸಭೆ ನಡೆಸಿದರು. ಶನಿವಾರ ಸಂಜೆಯಿಂದಲೇ ಕಂದಾಯ ಇಲಾಖೆಯ ರೆವಿನ್ಯೂ ಇನ್‍ಸ್ಪೆಕ್ಟರ್,…

ಎಸ್ಸೆಸ್ಸೆಲ್ಸಿ, ಐಟಿಐ ಪಾಸಾದವರಿಗೆ ನೈರುತ್ಯ ರೈಲ್ವೆಯಲ್ಲಿ 1004 ನೌಕರಿ
ಮೈಸೂರು

ಎಸ್ಸೆಸ್ಸೆಲ್ಸಿ, ಐಟಿಐ ಪಾಸಾದವರಿಗೆ ನೈರುತ್ಯ ರೈಲ್ವೆಯಲ್ಲಿ 1004 ನೌಕರಿ

December 18, 2020

ರೈಲ್ವೆ-ಮೈಸೂರಲ್ಲಿ 177, ಮೈಸೂರು ವರ್ಕ್‍ಷಾಪ್‍ನಲ್ಲಿ 43 ಹುದ್ದೆ ಆನ್‍ಲೈನ್‍ನಲ್ಲಿ ಅರ್ಜಿ ಕಡ್ಡಾಯ- ಅರ್ಜಿ ಸಲ್ಲಿಕೆಗೆ ಜ.9 ಕಡೆ ದಿನ ಬೆಂಗಳೂರು,ಡಿ.17-ಭಾರತೀಯ ರೈಲ್ವೆಯ ನೈರುತ್ಯ ವಿಭಾಗದಲ್ಲಿ ಖಾಲಿ ಇರುವ 1004 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ನೇಮಕ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಫಿಟ್ಟರ್, ಟರ್ನರ್, ಎಲೆಕ್ಟ್ರಿಷಿಯನ್, ಮೆಕ್ಯಾನಿಸ್ಟ್, ಪ್ಲಂಬರ್, ಪೇಂಟರ್, ಕೊಪರ್ ಹುದ್ದೆಗಳ ನೇಮಕವಾಗಲಿದೆ. ಮೈಸೂರಲ್ಲಿ 177, ಮೈಸೂರು ವರ್ಕ್‍ಶಾಪ್ 43, ಬೆಂಗಳೂರು 280, ಹುಬ್ಬಳ್ಳಿ 287, ಹುಬ್ಬಳ್ಳಿ ವರ್ಕ್‍ಶಾಪ್‍ನಲ್ಲಿ 217 ಸೇರಿದಂತೆ ಒಟ್ಟು 1004…

ಕಾಂಗ್ರೆಸ್ ಭಿನ್ನಮತೀಯರಿಂದ ಶನಿವಾರ ಸೋನಿಯಾ ಭೇಟಿ
ಮೈಸೂರು

ಕಾಂಗ್ರೆಸ್ ಭಿನ್ನಮತೀಯರಿಂದ ಶನಿವಾರ ಸೋನಿಯಾ ಭೇಟಿ

December 18, 2020

ಹೊಸದಿಲ್ಲಿ, ಡಿ.17- ಕಾಂಗ್ರೆಸ್ ನಾಯಕತ್ವವನ್ನು ಪ್ರಶ್ನಿಸಿ ಪತ್ರ ಬರೆದಿದ್ದ 23 ಭಿನ್ನಮತೀಯ ನಾಯಕರು ಶನಿವಾರ ಸೋನಿಯಾ ಗಾಂಧಿಯವರನ್ನು ಭೇಟಿ ಯಾಗಲಿದ್ದಾರೆ ಎಂದು ಮೂಲಗಳು ಹೇಳಿವೆ. ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್‍ನಾಥ್ ಈ ಭೇಟಿ ಆಯೋಜಿಸಿದ್ದಾರೆ ಎನ್ನಲಾಗಿದೆ. ಸೋನಿಯಾ ಗಾಂಧಿ ಜೊತೆ ಅವರ ಪುತ್ರ ರಾಹುಲ್ ಗಾಂಧಿಯೂ ಸಭೆಯಲ್ಲಿ ಇರಲಿದ್ದಾರೆ ಎಂದು ಹೇಳಲಾಗಿದೆ. ಪಕ್ಷದ ಗಣನೀಯ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಹಾಗೂ ಸಕ್ರಿಯ ನಾಯಕತ್ವಕ್ಕೆ ಒತ್ತಾಯಿಸಿದ್ದ ಭಿನ್ನಮತೀಯರನ್ನು ಕಮಲ್‍ನಾಥ್ ಒಂದುಗೂಡಿಸಿದ್ದಾರೆ ಎಂದು ತಿಳಿದು ಬಂದಿದೆ. ಕಮಲ್‍ನಾಥ್…

ಮಕ್ಕಳಿಗೆ ಹಣ್ಣು, ತರಕಾರಿ ಆಹಾರವೇ ಔಷಧ: ಡಿಸಿ
ಮೈಸೂರು

ಮಕ್ಕಳಿಗೆ ಹಣ್ಣು, ತರಕಾರಿ ಆಹಾರವೇ ಔಷಧ: ಡಿಸಿ

December 18, 2020

ಮೈಸೂರು, ಡಿ.17- ಮಕ್ಕಳಿಗೆ ಆಹಾ ರವೇ ಔಷಧ. ಮಕ್ಕಳ ಆರೋಗ್ಯ ವೃದ್ಧಿ ಸಲು ಅವರಿಗೆ ಆಹಾರದ ಮಹತ್ವವನ್ನು ತಿಳಿಸಿ, ಜೊತೆಗೆ ಹಣ್ಣು ಮತ್ತು ತರಕಾರಿ ಗಳನ್ನು ಸೇವಿಸುವಂತೆ ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು. ಜಿಲ್ಲಾ ಪಂಚಾಯತ್ ಮತ್ತು ಆಯುಷ್ ಇಲಾಖೆ ವತಿಯಿಂದ 2020-21ನೇ ಸಾಲಿನ ಎಸ್‍ಸಿಪಿ ಯೋಜನೆಯಡಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳ ಮೇಲ್ವಿಚಾರಕರಿಗೆ ಆಹಾರ ಪದ್ಧತಿಯಲ್ಲಿ ಪೌಷ್ಟಿಕ ಆಹಾರಗಳ ಅಳವಡಿಕೆ ಕುರಿತು ಗುರುವಾರ ಆಯೋಜಿಸಿದ್ದ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿನಿಲಯದ ವಾರ್ಡನ್‍ಗಳು…

1 343 344 345 346 347 1,611
Translate »