ಮೈಸೂರು

ಇಂದಿನಿಂದ ಆ.30ರವರೆಗೆ ಸಾವರ್ಕರ್ ರಥಯಾತ್ರೆ
ಮೈಸೂರು

ಇಂದಿನಿಂದ ಆ.30ರವರೆಗೆ ಸಾವರ್ಕರ್ ರಥಯಾತ್ರೆ

August 23, 2022

ಮೈಸೂರು, ಆ.22 (ಪಿಎಂ)- ಸಾವರ್ಕರ್ ಪ್ರತಿಷ್ಠಾನ ಮೈಸೂರು ವತಿಯಿಂದ ಸ್ವಾತಂತ್ರ್ಯ ಹೋರಾಟದಲ್ಲಿ ವೀರ ಸಾವರ್ಕರ್ ಅವರ ತ್ಯಾಗ, ಸಂದೇಶದ ಕುರಿತು ಜನಸಾಮಾನ್ಯರಿಗೆ ತಿಳಿಸುವ ಸಲು ವಾಗಿ ಆ.23ರಿಂದ 30ರವರೆಗೆ ಮೈಸೂರು, ಮಂಡ್ಯ ಮತ್ತು ಚಾಮ ರಾಜನಗರ ಜಿಲ್ಲೆಗಳ ನಗರ, ಗ್ರಾಮಾಂತರ ಪ್ರದೇಶದಲ್ಲಿ `ಸಾವರ್ಕರ್ ರಥಯಾತ್ರೆ’ ಆಯೋಜಿಸಲಾಗಿದೆ ಎಂದು ಪ್ರತಿ ಷ್ಠಾನದ ಅಧ್ಯಕ್ಷೆ ಯಶಸ್ವಿನಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವರ್ಕರ್ ಅವರ ಜೀವನ, ಹೋರಾಟದ ಯಶೋಗಾಥೆಯನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ…

ಪೌರಕಾರ್ಮಿಕರ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ…
ಮೈಸೂರು

ಪೌರಕಾರ್ಮಿಕರ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ…

August 23, 2022

ಮೈಸೂರು, ಆ.22(ಆರ್‍ಕೆಬಿ)-ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಪೌರಕಾರ್ಮಿಕರ ಸಮಸ್ಯೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಗೋವಿಂದ ಕಾರಜೋಳ ಬೇಸರ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗವು ಜಿಲ್ಲಾಡಳಿತದ ಸಹಯೋಗದಲ್ಲಿ ಮೈಸೂರಿನ ಮುಕ್ತ ಗಂಗೋತ್ರಿ ಆವರಣದಲ್ಲಿರುವ ಘಟಿಕೋತ್ಸವ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಫಾಯಿ ಕರ್ಮಚಾರಿಗಳ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಇನ್ನೂ 5,000 ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಗಳಿ ರುವುದು ನಾಚಿಕೆಗೇಡಿನ ಸಂಗತಿ ಎಂದ ಅವರು,…

ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಅರಳಲಿದ್ದಾರೆ ಪುನೀತ್ ರಾಜ್‍ಕುಮಾರ್
ಮೈಸೂರು

ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಅರಳಲಿದ್ದಾರೆ ಪುನೀತ್ ರಾಜ್‍ಕುಮಾರ್

August 21, 2022

ಮೈಸೂರು, ಆ.20(ಜಿಎ)- ಈ ಬಾರಿ ದಸರಾ ಮಹೋತ್ಸ ವದ ಫಲಪುಷ್ಪ ಪ್ರದರ್ಶನದಲ್ಲಿ ಅರಳಲಿದ್ದಾರೆ ನಟ ಪುನೀತ್ ರಾಜ್‍ಕುಮಾರ್….! ಆಜಾದಿ ಕಾ ಅಮೃತ ಮಹೋತ್ಸವದ ಮಹತ್ವವೂ ಪುಷ್ಪ ಕಲಾಕೃತಿ ಮೂಲಕ ಎಲ್ಲರ ಗಮನ ಸೆಳೆಯಲಿದೆ. ಕೊರೊನಾ ಬಾಧೆಯಿಂದ ಕಳೆದ ಎರಡು ವರ್ಷಗಳಿಂದ ವಿಶ್ವವಿಖ್ಯಾತ ದಸರಾ ಮಹೋತ್ಸವ ಸರಳವಾಗಿ ಆಚರಿಸಲ್ಪಟ್ಟಿತ್ತು. ಆದರೆ, ಈ ಬಾರಿ ಅದ್ಧೂರಿ ದಸರಾ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈಗಾಗಲೇ ಮೈಸೂರಿಗೆ ಗಜಪಡೆ ಆಗಮನ ದಿಂದ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ…

ರಾಜೀನಾಮೆಗೂ ಒಂದು ಗೌರವ ತಂದುಕೊಟ್ಟವರು ಅರಸು!
ಮೈಸೂರು

ರಾಜೀನಾಮೆಗೂ ಒಂದು ಗೌರವ ತಂದುಕೊಟ್ಟವರು ಅರಸು!

August 21, 2022

ಮೈಸೂರು, ಆ.20(ಎಂಟಿವೈ)- ಲೋಕಸಭಾ ಚುನಾವಣೆಯಲ್ಲಿ ತನ್ನ ಪಕ್ಷಕ್ಕೆ ಹಿನ್ನಡೆಯಾದ ಕಾರಣ ಡಿ.ದೇವರಾಜ ಅರಸ್ ಅವರು ಹಿಂದೆ ಮುಂದೆ ನೋಡದೆ, ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ರಾಜೀನಾಮೆಯ ಮಹತ್ವವನ್ನೇ ಉತ್ತುಂಗಕ್ಕೆ ಏರಿಸಿದ್ದರು. ಆದರೆ ಇಂದು ಅಧಿಕಾರಕ್ಕಾಗಿ ಹಪಹಪಿ ಸುತ್ತಿರುವ ಜನಪ್ರತಿನಿಧಿಗಳು ಎಫ್‍ಐಆರ್ ದಾಖ ಲಾದರೂ ರಾಜೀನಾಮೆ ನೀಡುವುದಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ವಿಷಾದಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ರಾಣಿ ಬಹ ದ್ದೂರ್ ಸಭಾಂಗಣದಲ್ಲಿ ದೇವರಾಜ ಅರಸು ಪ್ರತಿಷ್ಠಾನ…

ಪ್ರಾಮಾಣಿಕತೆ ಬಗ್ಗೆ ಮಾತನಾಡುವವರನ್ನು ಹುಚ್ಚರಂತೆ ಕಾಣ್ತಾರೆ
ಮೈಸೂರು

ಪ್ರಾಮಾಣಿಕತೆ ಬಗ್ಗೆ ಮಾತನಾಡುವವರನ್ನು ಹುಚ್ಚರಂತೆ ಕಾಣ್ತಾರೆ

August 21, 2022

ಮೈಸೂರು,ಆ.20(ಎಂಟಿವೈ)- ಪ್ರಸ್ತುತ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಭ್ರಷ್ಟಾಚಾರವೂ ಸೇರಿ ದಂತೆ ಅನೀತಿಯ ಪರಿಸ್ಥಿತಿಗೆ ಸಮಾಜವೇ ಕಾರಣ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗಡೆ ವಿಷಾದಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ರಾಣಿ ಬಹ ದ್ದೂರ್ ಸಭಾಂಗಣದಲ್ಲಿ ಶನಿವಾರ ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ ವತಿಯಿಂದ ಏರ್ಪಡಿಸಿದ್ದ ಡಿ.ದೇವರಾಜ ಅರಸು ಜನ್ಮದಿನೋ ತ್ಸವ ಹಾಗೂ ‘ಅರಸು ಆದರ್ಶ ಭೂಷಣ’ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ಹಿಂದೆ ಅಪರಾಧ ಮಾಡಿದವರನ್ನು, ಜೈಲಿಗೆ ಹೋಗಿ ಬಂದವರನ್ನು…

ಮೈಸೂರು ನಗರದಲ್ಲಿ ಈ ಬಾರಿ 110 ಕಿ.ಮೀ. ವಿದ್ಯುತ್ ದೀಪಾಲಂಕಾರ
ಮೈಸೂರು

ಮೈಸೂರು ನಗರದಲ್ಲಿ ಈ ಬಾರಿ 110 ಕಿ.ಮೀ. ವಿದ್ಯುತ್ ದೀಪಾಲಂಕಾರ

August 20, 2022

ಮೈಸೂರು, ಆ. 19(ಆರ್‍ಕೆ)- ಪ್ರಸಕ್ತ ಸಾಲಿನ ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿರುವ ಸರ್ಕಾರ, ಸಾಂಸ್ಕøತಿಕ ನಗರಿ ಮೈಸೂರು ನಗರದಾದ್ಯಂತ ರಸ್ತೆ, ಸರ್ಕಲ್, ಜಂಕ್ಷನ್, ಉದ್ಯಾನವನ ಸೇರಿದಂತೆ 110 ಕಿ.ಮೀ. ವಿದ್ಯುತ್ ದೀಪಾಲಂಕಾರಕ್ಕೆ ತಯಾರಿ ನಡೆಸಿದೆ. ದೇಶ-ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸಿ, ಇಲ್ಲಿನ ಪ್ರತಿಯೊಂದು ಉದ್ದಿಮೆಯ ಬೆಳವಣಿಗೆಗೆ ದಸರಾ ಮಹೋತ್ಸವವನ್ನು ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ನಿಗಮ ನಿಯಮಿತದ (ಚೆಸ್ಕಾಂ) ಅಧಿಕಾರಿ ಗಳು ವಿದ್ಯುದ್ದೀಪಾಲಂಕಾರವನ್ನು ಈ ಬಾರಿ ಅತ್ಯಾ ಕರ್ಷಕವಾಗಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ….

ಜಂಬೂ ಸವಾರಿಯಲ್ಲಿ ಭಾಗವಹಿಸಲು  ಕಲಾತಂಡಗಳಿಂದ ಅರ್ಜಿ ಆಹ್ವಾನ
ಮೈಸೂರು

ಜಂಬೂ ಸವಾರಿಯಲ್ಲಿ ಭಾಗವಹಿಸಲು ಕಲಾತಂಡಗಳಿಂದ ಅರ್ಜಿ ಆಹ್ವಾನ

August 20, 2022

ಮೈಸೂರು, ಆ.19(ಎಸ್‍ಬಿಡಿ)-ಮೈಸೂರು ದಸರಾ ಮಹೋ ತ್ಸವದ ಅತ್ಯಾಕರ್ಷಕ ಜಂಬೂ ಸವಾರಿಯಲ್ಲಿ ಭಾಗವಹಿಸಲು ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಬಾರಿ ಅತ್ಯಂತ ವೈಭವದಿಂದ ದಸರಾ ಮಹೋತ್ಸವ ಆಚರಿಸಲು ಸರ್ಕಾರ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಚಟುವಟಿಕೆ ಗಳು ಗರಿಗೆದರಿವೆ. ಮುಖ್ಯವಾಗಿ ನವರಾತ್ರಿ ನಂತರ ವಿಜಯ ದಶಮಿ ಯಂದು ನೆರವೇರುವ ಜಂಬೂಸವಾರಿ ಮೆರುಗು ಹೆಚ್ಚಿಸುವುದಕ್ಕೆ ಆದ್ಯತೆ ನೀಡಲಾಗಿದೆ. ಇದಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲೆಗಳ ಕಲಾತಂಡಗಳಿಂದ ಅರ್ಜಿ ಆಹ್ವಾನಿಸಿದ್ದು, ತಜ್ಞ ಸಮಿತಿ ಮೂಲಕ ಆಯ್ಕೆ ಮಾಡಿ ಅಂತಿಮ ಪಟ್ಟಿ ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಸೆ.10ರ…

ಗಜಪಡೆಗೆ ಇಂದಿನಿಂದ ಭಾರ  ಹೊರುವ ತಾಲೀಮು ಆರಂಭ
ಮೈಸೂರು

ಗಜಪಡೆಗೆ ಇಂದಿನಿಂದ ಭಾರ ಹೊರುವ ತಾಲೀಮು ಆರಂಭ

August 18, 2022

ಮೈಸೂರು, ಆ.17(ಎಂಟಿವೈ)-ನಾಡ ಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊ ಳ್ಳಲು ಆಗಮಿಸಿ ಆರಮನೆ ಆವರಣ ದಲ್ಲಿ ವಾಸ್ತವ್ಯ ಹೂಡಿರುವ ಗಜಪಡೆಯ ನಾಯಕ ಅಭಿಮನ್ಯುವಿಗೆ ನಾಳೆ (ಆ.18) ಭಾರ ಹೊರಿಸುವ ತಾಲೀಮನ್ನು ಆರಂಭಿ ಸಲು ನಿರ್ಧರಿಸಲಾಗಿದೆ. ಪ್ರಸಕ್ತ ಸಾಲಿನ ದಸರಾ ಮಹೋತ್ಸವ ದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿರುವ 14 ಆನೆಗಳಲ್ಲಿ ಮೊದಲ ತಂಡದಲ್ಲಿ 9 ಆನೆಗಳು ಆ.7ರಂದು ಗಜ ಪಯಣದ ಮೂಲಕ ಮೈಸೂರಿಗೆ ಆಗಮಿಸಿ ಆ.10 ರಂದು ಅರಮನೆಗೆ ಪ್ರವೇಶಿಸಿದವು. ಆ.14ರಿಂದ ಜಂಬೂ ಸವಾರಿ ಮಾರ್ಗ ದಲ್ಲಿ ತಾಲೀಮು ಆರಂಭಿಸಿದ್ದವು. ನಾಳೆಯಿಂದ…

ಅಕ್ರಮ, ಅವ್ಯವಹಾರ ಆರೋಪ ತಾಂತ್ರಿಕ ಸಮಿತಿಯಿಂದ ಮುಡಾ  ಕಚೇರಿಯಲ್ಲಿ ತನಿಖೆ ಆರಂಭ
ಮೈಸೂರು

ಅಕ್ರಮ, ಅವ್ಯವಹಾರ ಆರೋಪ ತಾಂತ್ರಿಕ ಸಮಿತಿಯಿಂದ ಮುಡಾ ಕಚೇರಿಯಲ್ಲಿ ತನಿಖೆ ಆರಂಭ

August 18, 2022

ಮೈಸೂರು, ಆ.17(ಆರ್‍ಕೆ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಲ್ಲಿ ನಡೆದಿದೆ ಎನ್ನಲಾದ ಭಾರೀ ಅಕ್ರಮ, ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ರಚನೆಯಾ ಗಿರುವ ತಾಂತ್ರಿಕ ಸಮಿತಿ ಸದಸ್ಯರು ಇಂದಿನಿಂದ (ಬುಧವಾರ) ತನಿಖೆ ಆರಂಭಿಸಿದ್ದಾರೆ. ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಹೆಚ್ಚುವರಿ ನಿರ್ದೇಶಕ ಟಿ.ವಿ. ಮುರಳಿ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ತಾಂತ್ರಿಕ ಸಮಿತಿಯ ಮೂವರು ಅಧಿಕಾರಿಗಳು ಇಂದು ಬೆಳಗ್ಗೆ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿ, ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್ ಅವರನ್ನು ಡಿಸಿ ಕಚೇರಿಯಲ್ಲಿ ಭೇಟಿ ಮಾಡಿದ ನಂತರ ಮಧ್ಯಾಹ್ನ ಮುಡಾ ಕಚೇರಿಗೆ…

ಪುರಭನವದ ಆವರಣದ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ಡಿಸೆಂಬರ್ ವೇಳೆಗೆ ಪೂರ್ಣ
ಮೈಸೂರು

ಪುರಭನವದ ಆವರಣದ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ಡಿಸೆಂಬರ್ ವೇಳೆಗೆ ಪೂರ್ಣ

August 18, 2022

ಮೈಸೂರು, ಆ.17- ಸಾಂಸ್ಕøತಿಕ ನಗರಿ ಮೈಸೂರಿನ ಹೃದಯ ಭಾಗದಲ್ಲಿ ವಾಹನ ನಿಲುಗಡೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ 2011ರಲ್ಲಿ ಪುರಭವನದ ಆವರಣದಲ್ಲಿ 18.28 ಕೋಟಿ ರೂ ವೆಚ್ಚದಲ್ಲಿ ಆರಂಭಿಸಿದ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ಕಾಮಗಾರಿ ದಶಕಗಳ ಸುದೀರ್ಘ ಅವಧಿಯ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ದಸರಾ ಸಂದರ್ಭ ದಲ್ಲಿ ತಾತ್ಕಾಲಿಕವಾಗಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ. ದೇಶ-ವಿದೇ ಶದ ವಿವಿಧೆಡೆಯಿಂದ ಪ್ರವಾಸಿಗರನ್ನು ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿರುವ ಮೈಸೂರು ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು,…

1 35 36 37 38 39 1,611
Translate »