ಬೆಂಗಳೂರು, ಅ. 31- ವಾಲ್ಮೀಕಿ ಸಮು ದಾಯದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಲ್ಮೀಕಿ ಸಮುದಾಯದ ಮೀಸಲಾತಿ ಕುರಿತು ಪ್ರತಿ ಕ್ರಿಯೆ ನೀಡಿದ್ದಾರೆ. ಇಂದು ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಾಸಕರ ಭವನದ ವಾಲ್ಮೀಕಿ ತಪೆÇೀವನದಲ್ಲಿರುವ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ವಾಲ್ಮೀಕಿ ಸಮು ದಾಯದ ಮೀಸಲಾತಿ ಹೆಚ್ಚಳ ಕುರಿತು ಸುದ್ದಿ ಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಯಡಿಯೂರಪ್ಪ, ವಾಲ್ಮೀಕಿ ಸಮುದಾಯದ…
ನನ್ನ ಅಪ್ಪನನ್ನು ಕೆಳಗಿಳಿಸಲು ಸಾಧ್ಯವಿಲ್ಲ
November 1, 2020ಬೆಂಗಳೂರು, ಅ.31 (ಕೆಎಂಶಿ)- ಮುಖ್ಯಮಂತ್ರಿ ಸ್ಥಾನದಿಂದ ನನ್ನ ಅಪ್ಪ ನನ್ನು (ಯಡಿಯೂರಪ್ಪ) ಕೆಳಗಿಳಿಸಲು ಸಾಧ್ಯವಿಲ್ಲ ಎಂದು ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಸಂಘಟನೆ, ಬಲವರ್ಧ ನೆಗೆ ಅವರ ಕೊಡುಗೆ ಅನನ್ಯ. ಅವರೇ ಪಕ್ಷ ಸಂಘ ಟಿಸುವ ಮೂಲಕ ಸರ್ಕಾರವನ್ನು ಅಧಿಕಾರಕ್ಕೆ ತಂದಿ ದ್ದಾರೆ. ಇದು ಎಲ್ಲರಿಗೂ ತಿಳಿದಿರುವ ವಿಚಾರ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದ ಲಾವಣೆ ಇಲ್ಲ ಎಂದು ಪಕ್ಷದ ರಾಜ್ಯಾ ಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರು ಸ್ಪಷ್ಟಪಡಿಸಿದ್ದಾರೆ. ಇದಾದ ನಂತರವೂ…
ಮೈಸೂರು ನಗರ ಪಾಲಿಕೆ ವ್ಯಾಪ್ತಿಗೆ ಚಾಮುಂಡಿಬೆಟ್ಟ, ಆಲನಹಳ್ಳಿ, ಶ್ರೀರಾಂಪುರ, ಹಿನಕಲ್ ಗ್ರಾಪಂ ಸೇರಿಸಿಯೇ ಸಿದ್ಧ: ಜಿಟಿಡಿ ಶಪಥ
November 1, 2020ಮೈಸೂರು,ಅ.31(ಎಂಟಿವೈ)- ಮೈಸೂರು ನಗರದ ಸೌಂದರ್ಯಕ್ಕೆ ಧಕ್ಕೆಯುಂಟು ಮಾಡುತ್ತಿರುವ ರಿಂಗ್ ರಸ್ತೆ ಸುತ್ತಮುತ್ತಲಿನ ವಾತಾವರಣ ಸುಧಾರಿಸಿ, ಸುಂದರಗೊಳಿ ಸಲು 4 ಗ್ರಾಮ ಪಂಚಾಯಿತಿಗಳನ್ನು ಮಹಾ ನಗರ ಪಾಲಿಕೆ ವ್ಯಾಪ್ತಿಗೆ ತರುವ ಮಹತ್ತರ ಯೋಜನೆಗೆ ನಗರದಾಚೆಗಿನ ಜೆಡಿಎಸ್ ಶಾಸಕ ಅಡ್ಡಿಪಡಿಸುತ್ತಿರುವುದು ತಿಳಿದು ಬಂದಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಪರೋಕ್ಷ ವಾಗಿ ಕೆ.ಆರ್.ನಗರದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ವಿರುದ್ಧ ಕಿಡಿಕಾರಿದ್ದಾರೆ. ಮೈಸೂರಲ್ಲಿ ಶನಿವಾರ ಪತ್ರಕರ್ತರೊಂ ದಿಗೆ ಮಾತನಾಡಿದ ಜಿಟಿಡಿ, ಮೈಸೂರು ಸಾಂಸ್ಕøತಿಕ ನಗರ ಎಂದು ಪ್ರಸಿದ್ಧಿಯಾಗಿದೆ. ಪ್ರಮುಖ ಪ್ರವಾಸಿ ತಾಣ ಹಾಗೂ…
ಐರ್ಲೆಂಡ್‍ನಲ್ಲಿ ಮೈಸೂರು ಮಹಿಳೆ, ಆಕೆಯ ಇಬ್ಬರು ಮಕ್ಕಳ ಭೀಕರ ಹತ್ಯೆ
November 1, 2020ಮೈಸೂರು, ಅ.31-ಐರ್ಲೆಂಡ್‍ನಲ್ಲಿ ಮೈಸೂರು ಮಹಿಳೆ, ತನ್ನ ಇಬ್ಬರು ಮಕ್ಕಳೊಂದಿಗೆ ಭೀಕರವಾಗಿ ಹತ್ಯೆಯಾಗಿರುವುದು ವರದಿಯಾಗಿದೆ. ಐರ್ಲೆಂಡ್‍ನ ಉಪ ನಗರಿ ಬಲ್ಲಿಂಟಿರ್‍ನ ಲೈವೆಲ್ಲೆನ್ ಕೋರ್ಟ್‍ನಲ್ಲಿರುವ ತನ್ನ ನಿವಾಸದಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ. ಪಿರಿಯಾಪಟ್ಟಣ ತಾಲೂಕು ಹಲಗನಹಳ್ಳಿ ಗ್ರಾಮದ ಅಬ್ದುಲ್ ಗಫಾರ್ ಮತ್ತು ಖುರ್ಷಿದ್ ಉನ್ನೀಸಾ ದಂಪತಿ ಪುತ್ರಿ ಸೀಮಾ ಬಾನು ಸಯ್ಯದ್(37), ಈಕೆಯ ಪುತ್ರಿ ಅಸ್ಫಿರಾ ರಿಝಾ(11) ಮತ್ತು ಪುತ್ರ ಫೈಝಾನ್ ಸಯ್ಯದ್(6) ಹತ್ಯೆಗೀಡಾದವರಾಗಿದ್ದು, ಮನೆಯ ಒಂದು ಕೊಠಡಿಯಲ್ಲಿ ಮಕ್ಕಳ ಮೃತದೇಹಗಳು ದೊರೆತರೆ, ಮತ್ತೊಂದು…
ಕುವೆಂಪು ನಿವಾಸಕ್ಕೆ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ
November 1, 2020ಮೈಸೂರು,ಅ.31-ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚನೆ ಕುರಿತು ಸರ್ಕಾ ರದ ಮಟ್ಟದಲ್ಲಿ ಯಾವುದೇ ರೀತಿಯ ಚರ್ಚೆ ನಡೆದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದರು. ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಒಂಟಿಕೊಪ್ಪಲಿನಲ್ಲಿರುವ ರಾಷ್ಟ್ರಕವಿ ಕುವೆಂಪು ಅವರ ನಿವಾಸ `ಉದಯ ರವಿ’ಗೆ ಶನಿವಾರ ಭೇಟಿ ನೀಡಿ ಕುವೆಂಪು ಅವರ ಪುತ್ರಿ ತಾರಣಿ ಮತ್ತು ಅಳಿಯ ವಿಶ್ರಾಂತ ಕುಲಪತಿ ಪ್ರೊ. ಚಿದಾನಂದಗೌಡ ಅವರ ಕುಶಲೋಪರಿ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು. ಬೃಹತ್ ಮೈಸೂರು ಮಹಾನಗರ ಪಾಲಿಕೆ ಬಗ್ಗೆ ಯಾವುದೇ…
ಕನ್ನಡ ಕಲಿಕೆಗಾಗಿ ಇ-ಲರ್ನಿಂಗ್ ಪೆÇೀರ್ಟಲ್‍ಗೆ ಶೀಘ್ರವೇ ಚಾಲನೆ
November 1, 2020ಬೆಂಗಳೂರು, ಅ. 31- ಕನ್ನಡ ಕಲಿಯಲು ಇಚ್ಛಿಸುವ ಜನರು ಇ-ಲರ್ನಿಂಗ್ ಪೆÇೀರ್ಟಲ್ ಮೂಲಕ ಕನ್ನಡ ಭಾಷೆಯನ್ನು ಸುಲಭವಾಗಿ ಕಲಿಯಬಹುದಾಗಿದೆ. ಇ-ಕಲಿಕೆ ಪೆÇೀರ್ಟಲ್‍ಗೆ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನದಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಚಾಲನೆ ನೀಡಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಈ ಉಪಕ್ರಮವು ರಾಜ್ಯದಲ್ಲಿ ನೆಲೆಸಿರುವ ಕನ್ನಡಿಗರಲ್ಲದವರಿಗೆ ಭಾಷೆಯನ್ನು ಕಲಿಯಲು ಅನುವು ಮಾಡಿಕೊಡುತ್ತದೆ ಮತ್ತು ವಿದೇಶದಲ್ಲಿ ವಾಸಿಸುವ ಕನ್ನಡಿಗರು ತಮ್ಮ ಮುಂದಿನ ಪೀಳಿಗೆ ಕನ್ನಡದ ಮೂಲ ಸಂಪರ್ಕ ಕಳೆದುಕೊಳ್ಳದಂತೆಯೂ ಸಹಾಯ ಮಾಡಲಿದೆ. ಕನ್ನಡವನ್ನು ಕಲಿಸಲು…
ಮದುವೆಗಾಗಿ ಮತಾಂತರ ಸ್ವೀಕಾರಾರ್ಹವಲ್ಲ ಅಲಹಾಬಾದ್ ಹೈಕೋರ್ಟ್
November 1, 2020ಲಖನೌ,ಅ.31-ಕೇವಲ ಮದುವೆ ಗಾಗಿ ಮತಾಂತರ ಸ್ವೀಕಾರಾರ್ಹವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ಅಭಿಪ್ರಾಯ ಪ್ರಕಟಿಸಿದೆ. ಅಂತರ್ಧರ್ಮೀಯ ವಿವಾಹವಾದ ಜೋಡಿಗಳು ತಮಗೆ ಪೆÇಲೀಸ್ ರಕ್ಷಣೆ ನೀಡಬೇಕೆಂದು ಕೋರ್ಟ್‍ಗೆ ಮನವಿ ಸಲ್ಲಿಸಿದ್ದವು. ವಿಚಾರಣೆ ನಡೆಸಿದ ನ್ಯಾಯಾ ಲಯ, ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಪಶ್ಚಿಮ ಉತ್ತರ ಪ್ರದೇಶದ ಮುಜಾ ಫರ್ ನಗರದ ಜೋಡಿ ಪೆÇಲೀಸ್ ಭದ್ರತೆಗೆ ಮನವಿ ಮಾಡಿತ್ತಷ್ಟೇ ಅಲ್ಲದೇ ಮಹಿಳೆಯ ತಂದೆ ತಮ್ಮ ವಿವಾಹದಲ್ಲಿ ಹಸ್ತಕ್ಷೇಪ ಮಾಡದಂತೆ ನಿರ್ದೇಶನ ನೀಡುವುದಕ್ಕೆ ಕೋರಿತ್ತು. ಪ್ರಿಯಾಂಶಿ ಅಲಿಯಾಸ್ ಸಮ್ರೀನ್ ಹಾಗೂ ಆಕೆಯ ಪತಿ…
ಉಚಿತ ಲಸಿಕೆ ಘೋಷಣೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಲ್ಲ
November 1, 2020ನವದೆಹಲಿ,ಅ.31-ಉಚಿತ ಕೊರೊನಾ ಲಸಿಕೆ ವಿತರಣಾ ಘೋಷಣೆ ಚುನಾ ವಣಾ ನೀತಿ ಸಂಹಿತಿ ಉಲ್ಲಂಘನೆಯಾಗು ವುದಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಬಿಹಾರ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಬಿಜೆಪಿ ಉಚಿತ ಕೊರೊನಾ ಲಸಿಕೆ ವಿತ ರಣೆ ಮಾಡುವ ಘೋಷಿಸಿತ್ತು. ಬಿಜೆಪಿ ಈ ನಡೆಯನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿದ್ದವು. ಆಡಳಿತಾ ರೂಢ ಸರ್ಕಾರವು ಮತದಾರರಿಗೆ ಆಮಿಷ ಒಡ್ಡುತ್ತಿದೆ. ಹೀಗಾಗಿ ಬಿಜೆಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಚುನಾವಣಾ ಆಯೋಗ ವನ್ನು ಒತ್ತಾಯಿಸಿದ್ದವು. ಅಂತೆಯೇ ಬಿಜೆಪಿಯ ಈ ಘೋಷಣೆಯನ್ನು…
ನಡುರಸ್ತೆಯಲ್ಲೇ ಪತ್ನಿಯ ಕತ್ತುಸೀಳಿ ಕೊಂದ ಪತಿ!
November 1, 2020ಬೆಚ್ಚಿಬಿದ್ದ ಹಾಸನ ಜನತೆ ಹಾಸನ,ಅ.31-ಹೊಳೆನರಸೀಪುರದ ಕೊಂಗಲುಬೀಡು ಗ್ರಾಮದ ಕ್ರೂರಿ ಪತಿಯೊಬ್ಬ ಹಳ್ಳಿಮೈಸೂರು ರಸ್ತೆಯಲ್ಲೇ ಶನಿವಾರ ತನ್ನ ಪತ್ನಿಯ ಕತ್ತುಸೀಳಿ ಬರ್ಬರವಾಗಿ ಕೊಂದು ಹಾಕಿದ್ದಾನೆ. ದುರ್ಘಟನೆ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಶಾಲಿನಿ ಕೊಲೆಯಾದ ದುರ್ದೈವಿ. ಪತಿ ಪುನೀತ್ ಕೊಲೆ ಆರೋಪಿ. ದಂಪತಿಗೆ 1 ವರ್ಷದ ಗಂಡು ಮಗು ಇದೆ. ಹೊಳಬಿಲ್ಲೆನಹಳ್ಳಿಯ ಶಾಲಿನಿ ಯನ್ನು 2 ವರ್ಷಗಳ ಹಿಂದೆ ಕವಿನ ಕೋಟೆ ಗ್ರಾಮದ ಪುನೀತ್‍ಗೆ ಮದುವೆ ಮಾಡಿಕೊಡಲಾಗಿತ್ತು. ಕೊಂಗಲು ಬೀಡುಗ್ರಾಮದ ಹಳ್ಳಿಮೈಸೂರು ರಸ್ತೆ ಮಧ್ಯೆ ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದ…
ಮೈಸೂರು ಜಿಲ್ಲೆ: ಶನಿವಾರ 161 ಮಂದಿಗೆ ಕೊರೊನಾ ಸೋಂಕು, ದುಪ್ಪಟ್ಟು ಗುಣಮುಖ
November 1, 2020ಮೈಸೂರು, 31(ವೈಡಿಎಸ್)- ಮೈಸೂರು ಜಿಲ್ಲೆಯಲ್ಲಿ ಶನಿವಾರ 161 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 47,684ಕ್ಕೆ ಏರಿಕೆಯಾಗಿದೆ. 307 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 45,093 ಮಂದಿ ಗುಣಮುಖರಾದಂತಾಗಿದೆ. ಇನ್ನೂ 1,633 ಜನರಲ್ಲಿ ಸೋಂಕು ಸಕ್ರಿಯವಾಗಿದೆ. ಇಂದು ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. ಈವರೆಗೆ ಒಟ್ಟು 958 ಮಂದಿ ಸೋಂಕಿಗೆ ಬಲಿಯಾದಂತಾಗಿದೆ. ರಾಜ್ಯದ ವಿವರ: ರಾಜ್ಯದಲ್ಲಿ ಶನಿವಾರ 3,014 ಮಂದಿಗೆ ಸೋಂಕು ತಗುಲಿದ್ದು, ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ…










