ಮೈಸೂರು, ಅ.31(ಆರ್‍ಕೆಬಿ)- ಖ್ಯಾತ ವ್ಯಂಗ್ಯ ಚಿತ್ರಕಾರ ದಿ.ಆರ್.ಕೆ.ಲಕ್ಷ್ಮಣ್ ಜನ್ಮಶತಮಾನೋ ತ್ಸವ ಆಚರಣೆ ಪ್ರಯುಕ್ತ ಬೆಂಗಳೂರಿನ ಕರ್ನಾ ಟಕ ವ್ಯಂಗ್ಯಚಿತ್ರಕಾರರ ಸಂಘದ ಪ್ರಾಯೋಜಕತ್ವ ದಲ್ಲಿ ವ್ಯಂಗ್ಯಚಿತ್ರಕಾರ ಎಂ.ವಿ.ನಾಗೇಂದ್ರಬಾಬು ಅವರ `ಆರ್.ಕೆ.ಲಕ್ಷ್ಮಣ್ ಅವರೊಂದಿಗಿನ ಒಡ ನಾಟ’ (ಮೈ ಟೈಮ್ಸ್ ವಿತ್ ಆರ್.ಕೆ.ಲಕ್ಷ್ಮಣ್) ವ್ಯಂಗ್ಯ ಭಾವಚಿತ್ರ, ಫೋಟೊ ಹಾಗೂ ಲೇಖನ ಗಳ ಪ್ರದರ್ಶನ ಶನಿವಾರ ನಡೆಯಿತು. ಆರ್.ಕೆ.ಲಕ್ಷ್ಮಣ್ ಅವರೊಂದಿಗಿನ ಕ್ಷಣಗಳು, ಲಕ್ಷ್ಮಣ್ ಅವರ ವ್ಯಂಗ್ಯಭಾವಚಿತ್ರ ಮತ್ತು ಫೋಟೋ ಗಳು ರಾಮಾನುಜ ರಸ್ತೆಯ ಮೈಸೂರ್ ಆರ್ಟ್ ಗ್ಯಾಲರಿಯಲ್ಲಿ ಗಮನ ಸೆಳೆದವು. ಕಾರ್ಯಕ್ರಮ ದಲ್ಲಿ…
ಅಪರೂಪದ `ಕೆಮ್ಮಂಡೆ ಜೇನುನೊಣಬಾಕ’ ಪಕ್ಷಿ ಚಾಮುಂಡಿಬೆಟ್ಟದಲ್ಲಿ ಪ್ರತ್ಯಕ್ಷ
November 1, 2020ಮೈಸೂರು, ಅ.31(ಎಂಟಿವೈ)-ಪೂರ್ವ ಮತ್ತು ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಾಗಿ ಕಂಡುಬರುವ ಕೆಮ್ಮಂಡೆ ಜೇನುನೊಣ ಬಾಕ (ಚೆಸ್ಟ್‍ನೆಟ್ ಹೆಡೆಡ್ ಬಿ-ಈಟರ್) ಪಕ್ಷಿಗಳು ಚಾಮುಂಡಿಬೆಟ್ಟದಲ್ಲಿ ಗೋಚರಿಸಿವೆ. ಬೆಟ್ಟದ ತಾವರೆಕಟ್ಟೆ ಭಾಗದಲ್ಲಿ ಶುಕ್ರವಾರ ಸಂಜೆ 5 ಪಕ್ಷಿಗಳ ಗುಂಪು ಕಾಣಿಸಿದೆ. ಇದು ಪಕ್ಷಿ ಪ್ರಿಯರಲ್ಲಿ ಸಂತಸವನ್ನುಂಟು ಮಾಡಿದೆ. ಈ ಪಕ್ಷಿ ಈ ಭಾಗದಲ್ಲಿ ಗೋಚರಿಸುವುದು ಅಪರೂಪ. ಪೂರ್ವ ಮತ್ತು ಪಶ್ಚಿಮ ಘಟ್ಟ ಇವುಗಳ ಆವಾಸ. ಆಹಾರ ಅರಸಿ ಬಂದಿರುವ ಈ ಪಕ್ಷಿಗಳು ಕಳೆದೆರಡು ದಿನಗಳಿಂದ ತಾವರಕಟ್ಟೆ ಸುತ್ತಮುತ್ತ ಹಾರಾಡುತ್ತಿವೆ. ಮೈಸೂರು ಭಾಗದಲ್ಲಿ ಸಾಮಾನ್ಯವಾಗಿ…
ಉಡ ಮಾರಾಟಕ್ಕೆ ಯತ್ನ: ಒಬ್ಬನ ಬಂಧನ
November 1, 2020ಮೈಸೂರು,ಅ.31(ಎಂಟಿವೈ)- ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಉಡ ಮಾರಾಟ ಮಾಡುತ್ತಿದ್ದವನನ್ನು ಬಂಧಿಸಿದ ಮೈಸೂರು ಅರಣ್ಯ ಸಂಚಾರಿ ದಳ ಸಿಬ್ಬಂದಿ, ಉಡವನ್ನು ರಕ್ಷಿಸಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಬೋವಿ ಕಾಲೋನಿ ನಿವಾಸಿ ರಾಮಂಜಿ ಅಲಿ ಯಾಸ್ ರಾಮಚಾರಿ ಸೆರೆಯಾದವನು. ಈತ ಉಡ ಮಾರಲು ಯತ್ನಿಸುತ್ತಿರುವ ಮಾಹಿತಿ ತಿಳಿದ ಮೈಸೂರು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಶುಕ್ರವಾರ ಸಂಜೆ ದಾಳಿ ನಡೆಸಿದಾಗ ಗೋಣಿಚೀಲದಲ್ಲಿ ಉಡ ಇಟ್ಟು ಕೊಂಡಿರುವುದು ಪತ್ತೆಯಾಗಿದೆ. ಕೂಡಲೇ ಆರೋಪಿಯನ್ನು ಬಂಧಿಸಿದ್ದಾರೆ. ಕಳೆದ ವಾರ ಮನೆ ಸಮೀಪದ ಚರಂಡಿ ಯಲ್ಲಿ ಬರುತ್ತಿದ್ದ…
ನಾಳೆ `ಕೃಷಿ ಲೋಕದೊಳಗೆ’, `ಪ್ಲ್ಯಾಂಟ್ ಡಾಕ್ಟರ್’ ಕೃತಿ ಬಿಡುಗಡೆ
November 1, 2020ಮೈಸೂರು, ಅ.31(ಪಿಎಂ)-ಕೃಷಿ ವಿಜ್ಞಾನಿ ವಸಂತಕುಮಾರ್ ತಿಮಕಾಪುರ ಅವರ `ಕೃಷಿ ಲೋಕದೊಳಗೆ’ ಕನ್ನಡ ಕೃತಿ ಹಾಗೂ `ಪ್ಲ್ಯಾಂಟ್ ಡಾಕ್ಟರ್’ ಇಂಗ್ಲಿಷ್ ಕೃತಿ ನ.2ರಂದು ಸಂಜೆ 4ಕ್ಕೆ ಬಿಡುಗಡೆಯಾಗಲಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮೈಸೂರಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಸಾಪ ಜಿಲ್ಲಾ ಘಟಕ, ಕೃಷಿ ಜ್ಞಾನ ವಿಜ್ಞಾನ ವೇದಿಕೆ ಜಂಟಿ ಆಶ್ರಯದ ಕಾರ್ಯಕ್ರಮ ಮಾನಸ ಗಂಗೋ ತ್ರಿಯ ವಿಜ್ಞಾನ ಭವನದಲ್ಲಿ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ, ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮಾಜಿ ಶಾಸಕ…
ಕಾಂಗ್ರೆಸ್ ಇಲ್ಲದೇ ದೇಶದ ಅಭಿವೃದ್ಧಿ ಅಸಾಧ್ಯ
November 1, 2020ಮೈಸೂರು, ಅ.31(ಆರ್‍ಕೆಬಿ)- ದೇಶ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಕಾಂಗ್ರೆಸ್ ಕಾರಣ. ದೇಶಕ್ಕೆ ಉತ್ತಮ ಭವಿಷ್ಯ ರೂಪಿಸಿರುವ ಕಾಂಗ್ರೆಸ್ ಇಲ್ಲದೇ ದೇಶದ ಅಭಿವೃದ್ಧಿ ಅಸಾಧ್ಯ ಎಂದು ಕೃಷ್ಣ ರಾಜ ಕ್ಷೇತ್ರದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅಭಿಪ್ರಾಯಪಟ್ಟರು. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಜಿಲ್ಲಾ ಗ್ರಾಮಾಂತರ ಸಮಿತಿಯಿಂದ ಶನಿವಾರ ಆಯೋಜಿಸಿದ್ದ `ಕಿಸಾನ್ ಅಧಿ ಕಾರ ದಿವಸ್’, `ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನ’, `ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಲಿ ದಾನ ದಿನ’ ಮತ್ತು `ವಾಲ್ಮೀಕಿ ಜಯಂತಿ’…
ವಲ್ಲಭಭಾಯ್ ಪಟೇಲ್, ಇಂದಿರಾಗಾಂಧಿ ನಮಗೆ ಸದಾ ಸ್ಫೂರ್ತಿದಾಯಕರು
November 1, 2020ಬೆಂಗಳೂರು, ಅ.31(ಕೆಎಂಶಿ)- ದೇಶದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲರು ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಕೊಟ್ಟಿರುವ ಸ್ಫೂರ್ತಿ ಹಾಗೂ ಮಾರ್ಗದರ್ಶನ ನಮಗೆ ಅಗತ್ಯ ವಾಗಿದೆ. ಪ್ರತಿಯೊಬ್ಬರೂ ಅವರ ಒಂದು ಅಂಶವನ್ನಾದರೂ ರೂಢಿಸಿ ಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯತಿಥಿ ಹಾಗೂ ಸರ್ದಾರ್ ವಲ್ಲಭಭಾಯ್ ಪಟೇಲರ ಜನ್ಮದಿನದ ಅಂಗವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶನಿವಾರ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಪಕ್ಷದ ಕಚೇರಿಯಲ್ಲಿ ಇಬ್ಬರು ನಾಯಕರ…
ಪಾಲಿಕೆ ವ್ಯಾಪ್ತಿ ಗೋವುಗಳಿಗೆ ಉಚಿತ ಥೈಲೇರಿಯಾ ಚುಚ್ಚುಮದ್ದು
November 1, 2020ಮೈಸೂರು,ಅ.31(ಎಂಟಿವೈ)-ಮೈಸೂರು ಮಹಾ ನಗರ ಪಾಲಿಕೆ ವ್ಯಾಪ್ತಿ ಯಲ್ಲಿರುವ ಜಾನುವಾರುಗಳನ್ನು ಥೈಲೇ ರಿಯಾ ಖಾಯಿಲೆಯಿಂದ ರಕ್ಷಿಸಲು ಇದೇ ಮೊದಲ ಬಾರಿಗೆ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿಯು 10 ಲಕ್ಷ ರೂ. ಮೌಲ್ಯದ ಚುಚ್ಚುಮದ್ದು ನೀಡುವ ಮೂಲಕ ಗೋಪಾಲಕರ ಮೆಚ್ಚುಗೆಗೆ ಪಾತ್ರವಾಗಿದೆ. ರಾಜ್ಯದಲ್ಲಿ ಇತ್ತೀಚೆಗೆ ಜಾನುವಾರು ಗಳನ್ನು ಥೈಲೇರಿಯಾ ಹೆಚ್ಚು ಕಾಡಲಾ ರಂಭಿಸಿದೆ. ಕಾಲು-ಬಾಯಿ ಜ್ವರದೊಂದಿಗೆ ಥೈಲೇರಿಯಾ ಖಾಯಿಲೆಯೂ ಸೇರಿಕೊಂಡು ಗೋಪಾಲಕರನ್ನು ಚಿಂತೆಗೀಡು ಮಾಡಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದ ಕಾರಣ ಬಹುತೇಕ ಗೋಪಾಲಕರು ದುಬಾರಿ ವೆಚ್ಚದ ಚುಚ್ಚುಮದ್ದು ಕೊಡಿಸಲಾಗದೇ ಪರದಾಡು…
4 ಕ್ಷೇತ್ರಗಳ ಪರಿಷತ್ ಚುನಾವಣೆ: ಮತ ಎಣಿಕೆ ನ.10ಕ್ಕೆ ಮುಂದೂಡಿಕೆ
November 1, 2020ಬೆಂಗಳೂರು,ಅ.31-ನಾಲ್ಕು ಕ್ಷೇತ್ರಗಳ ಪರಿಷತ್ ಚುನಾವಣೆ ಮತ ಎಣಿಕೆ ನ.10ಕ್ಕೆ ಮುಂದೂಡಿಕೆಯಾಗಿದ್ದು, ಚುನಾವಣಾ ಆಯೋಗ ತಿದ್ದುಪಡಿ ಅಧಿಸೂಚನೆ ಹೊರ ಡಿಸಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ, ಆಗ್ನೇಯ ಪದ ವೀಧರ ಕ್ಷೇತ್ರ, ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಅ.28ರಂದು ಮತದಾನ ನಡೆ ದಿದೆ. ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಣೆಗೆ ಕೆಲವೇ ಗಂಟೆಗಳು ಬಾಕಿ ಇತ್ತು. ಅಷ್ಟರಲ್ಲಿ ಅಧಿಸೂಚನೆಗೆ ತಿದ್ದು ಪಡಿ ಮಾಡಿರುವ ಚುನಾವಣಾ ಆಯೋಗ, ಮತ ಎಣಿಕೆಗೆ ದಿನಾಂಕ ಮುಂದೂಡಿದೆ. ನ.2ರ ಬದಲು ನ.10 ರಂದು…
ಪುಲ್ವಾಮಾ ದಾಳಿ: ಪಾಕ್ ಕೃತ್ಯ
October 30, 2020ಇಸ್ಲಾಮಾಬಾದ್, ಅ.29-ಭಾರತದ ಗಡಿಯೊಳಗೆ ನುಗ್ಗಿ ಹೊಡೆದಿದ್ದೇವೆ. ಪುಲ್ವಾಮಾ ದಾಳಿ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದ ಬಹು ದೊಡ್ಡ ಸಾಧನೆ ಎಂದು ಸಂಸತ್ತಿನಲ್ಲಿ ಪಾಕ್ ಸಚಿವ ಫವಾದ್ ಚೌಧರಿ ಹೇಳಿದ್ದಾರೆ. ಪುಲ್ವಾಮಾ ದಾಳಿಯ ಯೋಜನೆ ಪಾಕಿಸ್ತಾನದಲ್ಲೇ ಸಿದ್ಧವಾಗಿತ್ತು. ಹೀಗಾಗಿ ಪುಲ್ವಾಮಾ ದಾಳಿಯ ಕೀರ್ತಿ ಇಮ್ರಾನ್ ಖಾನ್ ಸರ್ಕಾರಕ್ಕೆ ನೀಡಬೇಕು ಎಂದು ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ ಹೇಳಿದ್ದಾರೆ. ಇಮ್ರಾನ್ ಖಾನ್ ಸರ್ಕಾರ ದೇಶವನ್ನು ಯಶಸ್ಸಿನ ಪಥದಲ್ಲಿ ಕೊಂಡೊಯ್ಯುವಲ್ಲಿ ವಿಫಲವಾಗಿದೆ ಎಂದು ವಿಪಕ್ಷಗಳು ಆರೋಪಿಸಿದ ಹಿನ್ನೆಲೆಯಲ್ಲಿ…
ಭಾರತದ ದಾಳಿ ಭೀತಿ; ತರಾತುರಿಯಲ್ಲಿ ಅಭಿನಂದನ್ ಬಿಡುಗಡೆ ಮಾಡಿದ್ದ ಪಾಕ್!
October 30, 2020ನವದೆಹಲಿ, ಅ.29- ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪ್ರಕರಣ ಸುಲಭದಲ್ಲಿ ಮರೆಯು ವಂತಹುದಲ್ಲ. ವೈಮಾ ನಿಕ ದಾಳಿಯ ವೇಳೆ ಪಾಕಿ ಸ್ತಾನ ಭೂಭಾಗ ಸೇರಿದ್ದ ಅಭಿನಂದನ್ ವರ್ಧಮಾನ್ ರನ್ನು ಪಾಕಿಸ್ತಾನ 60 ಗಂಟೆಗಳ ಒಳಗೆ ಭಾರತಕ್ಕೆ ಮರಳಿ ಕಳು ಹಿಸಿತ್ತು. ಆದರೆ ವಿಂಗ್ ಕಮಾಂಡರ್ ಬಿಡುಗಡೆಯ ಹಿಂದಿನ ಕಥೆ ಈಗ ಬಯಲಾಗಿದೆ. ಒಂದು ವೇಳೆ ಪಾಕಿಸ್ತಾನ, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‍ರನ್ನು ಬಿಡುಗಡೆ ಮಾಡದೇ ಇದ್ದರೆ ಭಾರತವು ಅದರ ಮೇಲೆ ದಾಳಿ ನಡೆಸ ಬಹುದು ಎಂಬ ಭೀತಿಯಿಂದ…










