ಇಸ್ಲಾಮಾಬಾದ್, ಅ.29- ಪಾಕಿಸ್ತಾನ ಸಂಸತ್ತಿನಲ್ಲಿ ಬಲೂಚಿಸ್ತಾನ್ ಸಂಸದರು ಜೋರು ಧ್ವನಿಯಲ್ಲಿ “ಮೋದಿ … ಮೋದಿ … ಮೋದಿ …” ಎಂದು ಘೋಷಣೆ ಕೂಗಿದ್ದಾರೆ. ಈಗಾಗಲೇ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ವಿಷಯದಲ್ಲಿ, ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಬಾಜ್ವಾ ಅವರ ಕಾಲು ಗಳು ನಡುಗಿದ್ದವು ಎಂಬ ಸುದ್ದಿ ಪಾಕಿಸ್ತಾನಕ್ಕೆ ತೀವ್ರ ಮುಜುಗರ ವನ್ನುಂಟು ಮಾಡಿದೆ. ಇದರ ನಡುವೆಯೇ ಪಾಕಿಸ್ತಾನ ಸಂಸತ್ ನಲ್ಲಿ ಕೆಲ ಸಂಸದರು ಮೋದಿ ಪರ ಘೋಷಣೆ ಕೂಗಿರುವುದು ಪ್ರಧಾನಿ ಇಮ್ರಾನ್ ಖಾನ್…
ಪಾಕ್ ಬಗ್ಗೆ ಇಡೀ ಜಗತ್ತಿಗೆ ಗೊತ್ತಿದೆ
October 30, 2020ನವದೆಹಲಿ,ಅ.29-ಪಾಕ್‍ನ ಪುಲ್ವಾಮ ದಾಳಿ ಹೇಳಿಕೆಗೆ ಭಾರತ ಕಟು ವಾಗಿ ಪ್ರತಿಕ್ರಿಯೆ ನೀಡಿದೆ. ಪಾಕಿಸ್ತಾನದ ಬಗೆಗಿನ ಸತ್ಯ ಇಡೀ ಜಗತ್ತಿಗೇ ಗೊತ್ತಿದೆ. ಭಯೋತ್ಪಾದಕರಿಗೆ ಆ ದೇಶ ಎಷ್ಟರಮಟ್ಟಿಗೆ ಬೆಂಬಲ ನೀಡು ತ್ತದೆ ಎಂಬುದು ಜಗಜ್ಜಾಹೀರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ಹೇಳಿದ್ದಾರೆ. ಪಾಕ್ ಉಗ್ರರಿಗೆ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂಬ ಸತ್ಯವನ್ನು ಅದರ ಯಾವ ನಿರಾಕರಣೆಗಳೂ ಮುಚ್ಚಿಡಲು ಸಾಧ್ಯವೇ ಇಲ್ಲ. ವಿಶ್ವಸಂಸ್ಥೆಯಿಂದ ನಿಷೇಧಿಸಲ್ಪಟ್ಟ ಅನೇಕ ಉಗ್ರಸಂಘಟನೆಗಳ ಭಯೋತ್ಪಾದಕರಿಗೆ ಆಶ್ರಯ ಕೊಟ್ಟಿರುವ ಪಾಕಿಸ್ತಾನ, ತನ್ನ ಕಾರ್ಯವನ್ನು ಸಮರ್ಥಿಸಿಕೊಳ್ಳುವ…
ಕುಕ್ಕರಹಳ್ಳಿ ಕೆರೆ ಬಳಿ ಮರಕ್ಕೆ ಕಾರು ಡಿಕ್ಕಿ: ಯುವಕ ಸಾವು, ಮತ್ತೊಬ್ಬ ಗಂಭೀರ
October 30, 2020ಮೈಸೂರು,ಅ.29(ವೈಡಿಎಸ್)-ಮೈಸೂರಿನ ಬೋಗಾದಿ ರಸ್ತೆಯ ಕುಕ್ಕರಹಳ್ಳಿ ಕೆರೆ ಬಳಿ ಬುಧವಾರ ತಡರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಯುವಕನೊಬ್ಬ ಮೃತಪಟ್ಟಿದ್ದಾನೆ. ಚನ್ನಪಟ್ಟಣ ನಿವಾಸಿ ಅರುಣ್‍ಕುಮಾರ್ (25) ಮೃತರು. ಚಾಲಕ ಶಿವಕುಮಾರ್, ಮೂವರು ಸ್ನೇಹಿತರೊಂದಿಗೆ ಬುಧವಾರ ತಡರಾತ್ರಿ ಕಾರಿ ನಲ್ಲಿ ಟಿ.ಕೆ.ಲೇಔಟ್‍ಗೆ ಹೋಗುತ್ತಿದ್ದಾಗ ಕುಕ್ಕರಹಳ್ಳಿ ಕೆರೆ ಬಳಿ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಅರುಣ್ ಕುಮಾರ್‍ಗೆ ತೀವ್ರ ಪೆಟ್ಟಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ…
ಮೈಸೂರು ಪಾಲಿಕೆ ವ್ಯಾಪ್ತಿಯ ಬೀದಿಬದಿ ವರ್ತಕರಿಗೆ 10 ಸಾವಿರ ರೂ. ಸಾಲ ಸೌಲಭ್ಯ
October 30, 2020ಮೈಸೂರು,ಅ.29-ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡು ತ್ತಿರುವ ಬೀದಿ ಬದಿ ವರ್ತಕರಿಗೆ ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಿ ಗಳ ಆತ್ಮನಿರ್ಭರ್ ನಿಧಿ (Pಒ Sಗಿಂ ಓIಆಊI) ‘ವಿಶೇಷ ಕಿರು ಸಾಲ ಸೌಲಭ್ಯ ಯೋಜನೆಯನ್ನು ಅನುಷ್ಠಾನಗೊಳಿಸ ಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಲ ಮರುಪಾವ ತಿಗೆ ಉತ್ತೇಜನ ನೀಡುವ ಮೂಲಕ ಡಿಜಿಟಲ್ ವಹಿವಾಟಿಗೆ ಉತ್ತೇಜನ ಮತ್ತು ಬಹುಮಾನ ನೀಡುವ ಉದ್ದೇಶ ಈ ಯೋಜನೆಯದಾಗಿದ್ದು, ಈ ಯೋಜನೆಯಲ್ಲಿ ಬೀದಿಬದಿ ವ್ಯಾಪಾ ರಸ್ಥರಿಗೆ ಕೈಗೆಟಕುವ ದರದಲ್ಲಿ 10 ಸಾವಿರದವರೆಗೆ ಸಾಲ ಸೌಲಭ್ಯ…
ದೇಶದ ಅಣೆಕಟ್ಟುಗಳ ನರ್ವಹಣೆಗೆ ಕೇಂದ್ರ ಸರ್ಕಾರದಿಂದ 10 ಸಾವಿರ ಕೋಟಿ. ರೂ. ಯೋಜನೆ ಜಾರಿ
October 30, 2020ನವದೆಹಲಿ, ಅ.29- ಕೇಂದ್ರ ಸರ್ಕಾರ ಅಣೆಕಟ್ಟುಗಳ ನಿರ್ವಹಣೆಗಾಗಿ ಹೊಸ ಯೋಜನೆ ಜಾರಿಗೊಳಿಸಲು ಮುಂದಾಗಿದ್ದು, ಈ ಹೊಸ ಯೋಜನೆಗೆ ಕೇಂದ್ರ ಸಚಿವ ಸಂಪುಟ ಸಭೆ ಅನು ಮೋದನೆ ನೀಡಿದೆ. 19 ರಾಜ್ಯಗಳಲ್ಲಿರುವ 736 ಡ್ಯಾಮ್‍ಗಳ ನಿರ್ವ ಹಣೆಗಾಗಿ ಯೋಜನೆ ಯನ್ನು ರೂಪಿಸಲಾಗಿದೆ. ಮುಂದಿನ 10 ವರ್ಷಗಳ ಕಾಲ ಡ್ಯಾಂಗಳನ್ನು ನಿರ್ವ ಹಣೆ ಮಾಡಲು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕಾಗಿ 10,211 ಕೋಟಿ ರೂ. ನೆರವು ನೀಡಲಾಗುವುದು. ಸಿಸ್ಟಮ್ ವೈಡ್ ಮ್ಯಾನೇಜ್ಮೆಂಟ್ ವಿಧಾನದೊಂದಿಗೆ…
ಸರಳ ಚಾಮುಂಡೇಶ್ವರಿ ರಥೋತ್ಸವ
October 30, 2020ಮೈಸೂರು,ಅ.29(ಎಂಟಿವೈ)-ದಸರಾ ಮಹೋತ್ಸವ ಸರಳವಾಗಿ ಸಂಪನ್ನಗೊಂಡ ನಂತರ ಆಶ್ವೀಜ ಮಾಸ ಉತ್ತರಭಾದ್ರ ನಕ್ಷತ್ರದ ದಿನ ಚಾಮುಂಡಿಬೆಟ್ಟದಲ್ಲಿ ಜರು ಗುವ ಶ್ರೀ ಚಾಮುಂಡೇಶ್ವರಿ ರಥೋತ್ಸವ ಕೊರೊನಾ ವೈರಸ್ ಭೀತಿ ನಡುವೆಯೇ ಗುರುವಾರ ಸರಳ ಹಾಗೂ ಸಾಂಪ್ರ ದಾಯಿಕವಾಗಿ ನೆರವೇರಿತು. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಿದ್ದರೂ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಚಿಕ್ಕರಥದಲ್ಲಿ ಶ್ರೀ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ದೇವಾಲಯದ ಸುತ್ತಲೂ ಮಂಗಳ ವಾದ್ಯ ದೊಂದಿಗೆ ಮೆರವಣಿಗೆ ನಡೆಸಲಾಯಿತು. ನಾಡದೇವತೆಯ ಗೌರವಾರ್ಥ 21 ಸುತ್ತು ಕುಶಾಲತೋಪು ಸಿಡಿಸಲಾಯಿತು….
ಪಾಲಿಕೆ ಅಸಹಕಾರ ಆಕ್ಷೇಪಿಸಿ ಕೌನ್ಸಿಲ್ ಸಭೆ ಬಹಿಷ್ಕರಿಸಿದ ಜಿಟಿಡಿ
October 30, 2020ಮೈಸೂರು, ಅ.29(ಎಸ್‍ಬಿಡಿ)-ಮೈಸೂರು ನಗರದ ರಿಂಗ್‍ರಸ್ತೆ ಒಳಭಾಗಕ್ಕಿರುವ 4 ಗ್ರಾಮ ಪಂಚಾಯ್ತಿ ಗಳನ್ನು ನಗರಪಾಲಿಕೆ ವ್ಯಾಪ್ತಿಗೆ ಸೇರಿಸಬೇಕೆಂಬ ಜನಪ್ರತಿ ನಿಧಿಗಳ ಒತ್ತಾಸೆಗೆ ಪಾಲಿಕೆ ಅಸಹಕಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮಾಜಿ ಸಚಿವರೂ ಆದ ಶಾಸಕ ಜಿ.ಟಿ.ದೇವೇ ಗೌಡರು ಕೌನ್ಸಿಲ್ ಸಭೆಯನ್ನು ಬಹಿಷ್ಕರಿಸಿ, ಹೊರ ನಡೆದ ಪ್ರಸಂಗ ಗುರುವಾರ ನಡೆಯಿತು. ಮೇಯರ್ ಪೀಠದಲ್ಲಿ ಆಸೀನರಾಗಿ, ಉಪಮೇಯರ್ ಸಿ.ಶ್ರೀಧರ್ ಗುರುವಾರ ನಡೆಸಿದ ಕೌನ್ಸಿಲ್ ಸಭೆಯಲ್ಲಿ, ರಿಂಗ್ ರಸ್ತೆ ಒಳಗಿರುವ ಚಾಮುಂಡಿ ಬೆಟ್ಟ, ಆಲನಹಳ್ಳಿ, ಶ್ರೀರಾಂಪುರ ಹಾಗೂ ಹಿನಕಲ್ ಗ್ರಾಪಂ ವ್ಯಾಪ್ತಿಯ ಪ್ರದೇಶಗಳನ್ನು ಮೈಸೂರು…
ಮನೆ ಮೇಲೆ ಬಿದ್ದ ವಿದ್ಯುತ್ ಕಂಬ; ಸ್ವಲ್ಪದರಲ್ಲಿ ತಪ್ಪಿದ ಅನಾಹುತ
October 30, 2020ಮೈಸೂರು, ಅ.29(ಆರ್‍ಕೆಬಿ)- ರಸ್ತೆ ಕಾಮಗಾರಿ ವೇಳೆ ವಿದ್ಯುತ್ ಕಂಬವೊಂದು ಮನೆ ಮೇಲೆ ಉರುಳಿದ ಪರಿಣಾಮ ನಿವಾಸಿಗಳು ತಲ್ಲಣಿಸಿದ ಘಟನೆ ಗುರುವಾರ ಮಂಡಿಮೊಹಲ್ಲಾದ ಅಕ್ಬರ್ ರಸ್ತೆ ಕ್ರಾಸ್‍ನ ರತನ್‍ಸಿಂಗ್ ಬೀದಿಯಲ್ಲಿ ನಡೆದಿದೆ. 3 ದಿನಗಳ ಹಿಂದೆ ಸೆಸ್ಕ್ ಕಾಮಗಾರಿ ಕೈಗೊಂಡಿದ್ದ ಕಾರ್ಮಿಕರು ಭೂಗತ ಕೇಬಲ್ ಹಾಕಲು ನೆಲವನ್ನು ಅಗೆದಿದ್ದರು. ನೆಲ ಸಡಿಲಗೊಂಡಿದ್ದರಿಂದ ಬಿಗಿ ಕಳೆದು ಕೊಂಡ ವಿದ್ಯುತ್ ಕಂಬ ಗುರುವಾರ ಬೆಳಗ್ಗೆ ಮನೆ ಯೊಂದರ ಮೇಲೆ ಉರುಳಿಬಿದ್ದಿತು. ಸೆಸ್ಕ್‍ಗೆ ಮಾಹಿತಿ ನೀಡಿದ ತಕ್ಷಣವೇ ವಿದ್ಯುತ್ ಸರಬ ರಾಜು ಸ್ಥಗಿತಗೊಳಿಸಿದ್ದ…
ಮಲಬಾರ್ ಗೋಲ್ಡ್‍ನಿಂದ `ಒನ್ ಇಂಡಿಯಾ ಒನ್ ಗೋಲ್ಡ್ ರೇಟ್’ ಯೋಜನೆ ಜಾರಿ
October 30, 2020ಮೈಸೂರು,ಅ.29-ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಯು `ಒನ್ ಇಂಡಿಯಾ ಒನ್ ಗೋಲ್ಡ್ ರೇಟ್’ ಯೋಜನೆಯನ್ನು ಆರಂಭಿಸಿದೆ ಎಂದು ಮಲಬಾರ್ ಗ್ರೂಪ್ ಅಧ್ಯಕ್ಷ ಎಂ.ಪಿ.ಅಹ್ಮದ್ ತಿಳಿಸಿದ್ದಾರೆ. ಭಾರತದಲ್ಲಿ ರಾಜ್ಯಗಳ ನಡುವೆ ಚಿನ್ನದ ಮಾರಾಟ ದರದಲ್ಲಿ ವ್ಯತ್ಯಾಸವಿದೆ. ಒಂದು ರಾಜ್ಯದಲ್ಲಿ ಕಡಿಮೆ ಬೆಲೆ ಇದ್ದರೆ ಮತ್ತೊಂದು ರಾಜ್ಯದಲ್ಲಿ ಹೆಚ್ಚು ಬೆಲೆಗೆ ಚಿನ್ನ ಮಾರಾಟ ಮಾಡಲಾಗುತ್ತಿದೆ. ಪ್ರತಿ ಗ್ರಾಂಗೆ 400 ರೂ.ವರೆಗೆ ವ್ಯತ್ಯಾಸ ಕಂಡುಬರುತ್ತಿದ್ದು, ಇದು ಗ್ರಾಹಕ ಸ್ನೇಹಿಯಾ ಗಿಲ್ಲ ಎಂಬುದನ್ನು ಮನಗಂಡಿರುವ ಮಲಬಾರ್ ಗ್ರೂಪ್, ಗ್ರಾಹಕರ ಹಿತ ಕಾಯುವ ನಿಟ್ಟಿನಲ್ಲಿ…
49 ಲಕ್ಷ ರೂ. ವೆಚ್ಚದ ಒಳಚರಂಡಿ ಮರು ನಿರ್ಮಾಣ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಗುದ್ದಲಿ ಪೂಜೆ
October 30, 2020ಮೈಸೂರು, ಅ.29(ಆರ್‍ಕೆಬಿ)- ಮೈಸೂರಿನ ಒಂಟಿಕೊಪ್ಪಲು ಮಾತೃಮಂಡಳಿ ವೃತ್ತ (ಚಂದ್ರಮೌಳೇಶ್ವರ ದೇವಸ್ಥಾನ)ದಿಂದ ಚಂದ್ರಕಲಾ ಆಸ್ಪತ್ರೆವರೆಗೆ ಕಾಳಿದಾಸ ರಸ್ತೆಯಲ್ಲಿ ಒಳಚರಂಡಿ ಮರು ನಿರ್ಮಾಣ ಕಾಮಗಾರಿಗೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಇಂದು ಗುದ್ದಲಿ ಪೂಜೆ ನೆರವೇರಿಸಿದರು. 19ನೇ ವಾರ್ಡ್‍ನಲ್ಲಿ ಜಯಲಕ್ಷ್ಮಿಪುರಂನ ಕಾಳಿದಾಸ ರಸ್ತೆಯ ಲ್ಲಿರುವ ಮಹಾರಾಷ್ಟ್ರ ಬ್ಯಾಂಕ್ ಮುಂಭಾಗ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, 45 ವರ್ಷ ಹಳೆಯದಾದ ಒಳಚರಂಡಿಯನ್ನು ಮರುನಿರ್ಮಾಣ ಮಾಡಲಾಗುವುದು. ಒಟ್ಟು 26 ಮ್ಯಾನ್‍ಹೋಲ್, 1000 ಮೀ.ಗಳಷ್ಟು ಉದ್ದ ಆರ್‍ಸಿಸಿ ಕೊಳವೆ ಮಾರ್ಗದ ಕಾಮಗಾರಿ ಇದಾಗಿದ್ದು,…










