ಮೈಸೂರು

ಅವರಪ್ಪನಾಣೆ ನಾನು ಸಿಎಂ ಆಗಲ್ಲ ಎಂದವರೇ ನಮ್ಮ ಮನೆ ಬಾಗಿಲಿಗೆ ಬಂದು ನೀವೇ ಸಿಎಂ ಆಗಿ ಎಂದು ದುಂಬಾಲು ಬಿದ್ದರು…!
ಮೈಸೂರು

ಅವರಪ್ಪನಾಣೆ ನಾನು ಸಿಎಂ ಆಗಲ್ಲ ಎಂದವರೇ ನಮ್ಮ ಮನೆ ಬಾಗಿಲಿಗೆ ಬಂದು ನೀವೇ ಸಿಎಂ ಆಗಿ ಎಂದು ದುಂಬಾಲು ಬಿದ್ದರು…!

October 29, 2020

ಬೆಂಗಳೂರು, ಅ.28(ಕೆಎಂಶಿ)- ಈಗ ಜೆಡಿಎಸ್ ಆಟ ಕ್ಕುಂಟು ಲೆಕ್ಕಕ್ಕಿಲ್ಲ ಎಂದು ಹೇಳುವ ನಾಯಕರೇ ಈ ಹಿಂದೆ ಅವರಪ್ಪನಾಣೆ ನಾನು ಸಿಎಂ ಆಗಲ್ಲ ಅಂತಾ ಹೇಳಿದ್ದರು. ಆದರೆ, ಅವರೇ 2018ರಲ್ಲಿ ನಮ್ಮ ಮನೆ ಬಾಗಿಲಿಗೆ ಬಂದು ನೀವೇ ಮುಖ್ಯಮಂತ್ರಿಯಾಗಿ ಎಂದು ದುಂಬಾಲು ಬಿದ್ದಿ ದ್ದನ್ನು ಇಡೀ ರಾಜ್ಯ ನೋಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು. ಜೆಡಿಎಸ್ ಪಕ್ಷದಿಂದ ಬೆಳೆದು ಬೆನ್ನಿಗೆ ಚೂರಿ ಹಾಕಿದ ಸಿದ್ದರಾಮಯ್ಯ ಜೆಡಿಎಸ್ ಪಕ್ಷಕ್ಕೆ ಹೀರೋ ಆಗಲು…

ವೇತನ ಪರಿಷ್ಕರಣೆಗೆ ಆಗ್ರಹಿಸಿ ವಿಮಾ ಕಂಪನಿ ನೌಕರರ ಪ್ರತಿಭಟನೆ
ಮೈಸೂರು

ವೇತನ ಪರಿಷ್ಕರಣೆಗೆ ಆಗ್ರಹಿಸಿ ವಿಮಾ ಕಂಪನಿ ನೌಕರರ ಪ್ರತಿಭಟನೆ

October 29, 2020

ಮೈಸೂರು, ಅ.28(ಪಿಎಂ)- ವೇತನ ಪರಿಷ್ಕರಣೆಗೆ ಒತ್ತಾಯಿಸಿ ಹಾಗೂ ನೂತನ ಪಿಂಚಣಿ ಯೋಜನೆ ಹಿಂಪಡೆಯಲು ಆಗ್ರಹಿಸಿ ಸರ್ಕಾರಿ ಸ್ವಾಮ್ಯದ ಸಾಮಾನ್ಯ ವಿಮಾ ಕಂಪನಿಗಳ ಸಿಬ್ಬಂದಿ ಹಾಗೂ ಅಧಿಕಾರಿಗಳ ಜಂಟಿ ವೇದಿಕೆಯಿಂದ ಬುಧ ವಾರ ಮೈಸೂರಿನ ರಾಮಸ್ವಾಮಿ ವೃತ್ತದ ಲ್ಲಿರುವ ನ್ಯಾಷನಲ್ ಇನ್ಷೂರೆನ್ಸ್ ಕಂಪ ನಿಯ ಮೈಸೂರು ವಿಭಾಗೀಯ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸರ್ಕಾರದ ಅಧೀನದ ಯುನೈ ಟೆಡ್ ಇಂಡಿಯಾ, ನ್ಯಾಷನಲ್ ಇನ್ಷೂರೆನ್ಸ್ ಕಂಪನಿ, ನ್ಯೂ ಇಂಡಿಯಾ, ಓರಿಯಂಟಲ್ ಇನ್ಷೂರೆನ್ಸ್ ಕಂಪನಿಗಳ ನೌಕರರ ವೇತನ ಪರಿಷ್ಕರಣೆ 2017…

ಕೊರೊನಾ ವಾರಿಯರ್‍ಗಳ ಸನ್ಮಾನಿಸಿ ಅರ್ಥಪೂರ್ಣ ಜೆಪಿ ಜನ್ಮದಿನ ಆಚರಣೆ
ಮೈಸೂರು

ಕೊರೊನಾ ವಾರಿಯರ್‍ಗಳ ಸನ್ಮಾನಿಸಿ ಅರ್ಥಪೂರ್ಣ ಜೆಪಿ ಜನ್ಮದಿನ ಆಚರಣೆ

October 29, 2020

ಮೈಸೂರು, ಅ.28(ಪಿಎಂ)- ಬಿಜೆಪಿ ಮುಖಂಡ, ಮಾಜಿ ಸೆನೆಟ್ ಸದಸ್ಯ, ಚಲನ ಚಿತ್ರ ನಾಯಕ ನಟ, ಜೆಪಿ ಎಂದೇ ಖ್ಯಾತ ನಾಮರಾದ ಎಸ್.ಜಯಪ್ರಕಾಶ್ ಅವರ ಹುಟ್ಟುಹಬ್ಬದ ಅಂಗವಾಗಿ ಬುಧವಾರ ಕೊರೊನಾ ವಾರಿಯರ್‍ಗಳನ್ನು ಸನ್ಮಾನಿಸಲಾಯಿತು. ಮೈಸೂರಿನ ಜೆಎಲ್‍ಬಿ ರಸ್ತೆಯ ಎಂಜಿ ನಿಯರ್‍ಗಳ ಸಂಸ್ಥೆ ಸಭಾಂಗಣದಲ್ಲಿ ಏರ್ಪ ಡಿಸಿದ್ದ ಸಮಾರಂಭದಲ್ಲಿ ಆಶಾ ಕಾರ್ಯ ಕರ್ತೆಯರು, ನರ್ಸ್‍ಗಳು, ಪೌರಕಾರ್ಮಿ ಕರು, ಪೊಲೀಸರು ಹಾಗೂ ವೈದ್ಯರನ್ನು ಸನ್ಮಾನಿಸುವ ಮೂಲಕ ಎಸ್.ಜಯ ಪ್ರಕಾಶ್ ಅರ್ಥಪೂರ್ಣವಾಗಿ ಜನ್ಮದಿನ ವನ್ನು ಆಚರಿಸಿಕೊಂಡರು. ನಗರದ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಡಿಯಲ್ಲಿ…

ಕೆಜಿ ಕೊಪ್ಪಲಿನಲ್ಲಿ ಆಸ್ತಿ ಸರ್ವೇ ಕಾರ್ಯ ಆರಂಭಿಸಿದ ಪಾಲಿಕೆ
ಮೈಸೂರು

ಕೆಜಿ ಕೊಪ್ಪಲಿನಲ್ಲಿ ಆಸ್ತಿ ಸರ್ವೇ ಕಾರ್ಯ ಆರಂಭಿಸಿದ ಪಾಲಿಕೆ

October 29, 2020

ಮೈಸೂರು, ಅ.28(ಪಿಎಂ)- ಮೈಸೂರು ಮಹಾ ನಗರ ಪಾಲಿಕೆ ವಲಯ ಕಚೇರಿ 3ರ ವತಿಯಿಂದ ವಾರ್ಡ್ 42ರ ಕೆಜಿ ಕೊಪ್ಪಲಿನಲ್ಲಿ ಆಸ್ತಿ ತೆರಿಗೆ ಸಂಗ್ರಹ ಸಂಬಂಧ ನ.4ರಿಂದ 11ರವರೆಗೆ ಕಂದಾಯ ಅದಾಲತ್ ನಡೆಯಲಿದೆ. ಪೂರ್ವಭಾವಿಯಾಗಿ ಐದು ದಿನಗಳ ಆಸ್ತಿ ಸರ್ವೆ ಕಾರ್ಯಕ್ಕೆ ವಾರ್ಡಿನಲ್ಲಿ ಬುಧವಾರ ಚಾಲನೆ ನೀಡಲಾಯಿತು. `ಪಾಲಿಕೆ ನಡೆ-ಕೆಜಿ ಕೊಪ್ಪಲು ಕಡೆ’ ಶೀರ್ಷಿಕೆ ಯಡಿ ಕನ್ನೇಗೌಡನ ಕೊಪ್ಪಲು 5ನೇ ಕ್ರಾಸ್‍ನಲ್ಲಿರುವ ಶ್ರೀ ಸಿದ್ದಪ್ಪಾಜಿ ದೇವಸ್ಥಾನ ಆವರಣದಲ್ಲಿ ತಾತ್ಕಾ ಲಿಕವಾಗಿ ಕಚೇರಿ ತೆರೆದು ಕಂದಾಯ ಅದಾಲತ್‍ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ….

ಚಾಮುಂಡಿಬೆಟ್ಟದಲ್ಲಿಂದು ಸರಳ ರಥೋತ್ಸವ
ಮೈಸೂರು

ಚಾಮುಂಡಿಬೆಟ್ಟದಲ್ಲಿಂದು ಸರಳ ರಥೋತ್ಸವ

October 29, 2020

ಮೈಸೂರು, ಅ.28(ಎಂಟಿವೈ)- ನಾಡಹಬ್ಬ ದಸರಾ ಮಹೋತ್ಸವ ಮುಗಿದ ನಂತರ ಸಂಪ್ರ ದಾಯದಂತೆ ಚಾಮುಂಡಿಬೆಟ್ಟದಲ್ಲಿ ಅ.29ರ ಬೆಳಗ್ಗೆ 9.40ರಿಂದ 10.05ರೊಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಸರಳ ಹಾಗೂ ಸಾಂಪ್ರದಾಯಿಕ ರಥೋತ್ಸವ ಜರುಗಲಿದೆ. ಕೋವಿಡ್-19 ಮಾರ್ಗಸೂಚಿ ಹಿನ್ನೆಲೆಯಲ್ಲಿ ಬೆಟ್ಟದಲ್ಲಿ ಈ ಬಾರಿ ದೊಡ್ಡ ರಥ ಬಳಸುತ್ತಿಲ್ಲ. ಬದಲಾಗಿ ಸಂಪ್ರದಾಯಕ್ಕೆ ಅಡಚಣೆ ಉಂಟಾಗದಂತೆ ಸರಳವಾಗಿ ರಥೋತ್ಸವ ನಡೆಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಬೆಟ್ಟದ ದೇವಾಲಯಕ್ಕೆ ಸೇರಿದ ಚಿಕ್ಕರಥವನ್ನು ನಾಳಿನ ರಥೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೆಚ್ಚಿನ ಜನ ಜಂಗುಳಿ ನಿಯಂತ್ರಿಸುವ ನಿಟ್ಟಿನಲ್ಲಿ ನಾಳೆ…

ಹೆಚ್‍ಡಿ ಕೋಟೆ ಹಾಡಿಗೆ ನೋಟು ಮುದ್ರಣ ಸಂಸ್ಥೆಯಿಂದ 2 ಆಂಬ್ಯುಲೆನ್ಸ್ ಕೊಡುಗೆ
ಮೈಸೂರು

ಹೆಚ್‍ಡಿ ಕೋಟೆ ಹಾಡಿಗೆ ನೋಟು ಮುದ್ರಣ ಸಂಸ್ಥೆಯಿಂದ 2 ಆಂಬ್ಯುಲೆನ್ಸ್ ಕೊಡುಗೆ

October 29, 2020

ಮೈಸೂರು, ಅ.28(ವೈಡಿಎಸ್)- ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಹಾಡಿ ಪ್ರದೇಶದ ಜನರಿಗೆ ಅನುಕೂಲವಾಗಲೆಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ನೋಟು ಮುದ್ರಣ ಸಂಸ್ಥೆಯ ಮೈಸೂರು ಶಾಖೆಯು ಜಿಲ್ಲಾಡಳಿತಕ್ಕೆ ದೇಣಿಗೆಯಾಗಿ ನೀಡಿದ ಎರಡು ಆಂಬ್ಯುಲೆನ್ಸ್ ವಾಹನಗಳಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬುಧವಾರ ಹಸ್ತಾಂತರಿಸಿದರು. ಈ ವೇಳೆ ಜಿಲ್ಲಾ ಆರೋಗ್ಯ-ಕುಟುಂಬ ಕಲ್ಯಾಣ ಅಧಿಕಾರಿ ಡಾ.ಟಿ.ಅಮರನಾಥ್ ಮಾತನಾಡಿ, ಎರಡೂ ವಾಹನಗಳನ್ನು ಹಾಡಿ ಜನರಿಗೆ ಅನುಕೂಲವಾಗುವಂತೆ ಬಳಸಿಕೊಳ್ಳಲಾಗುವುದು ಎಂದು ಹೇಳಿದರು. ಆರ್‍ಬಿಐ ನೋಟು ಮುದ್ರಣ ಸಂಸ್ಥೆ ವ್ಯವಸ್ಥಾಪಕ ಎನ್.ಜಿ.ಮುರುಳಿ ಮಾತನಾಡಿ, ಸಾಮಾನ್ಯ ಜನರಿಗೆ…

ದಸರಾ: ಮೃಗಾಲಯ ವೀಕ್ಷಕರ ವೀಕ್ಷಣಾ ವಿವರ
ಮೈಸೂರು

ದಸರಾ: ಮೃಗಾಲಯ ವೀಕ್ಷಕರ ವೀಕ್ಷಣಾ ವಿವರ

October 29, 2020

ಮೈಸೂರು,ಅ.28-ನಾಡಹಬ್ಬ ಮೈಸೂರು ದಸರಾದ ವಿಜಯದಶಮಿ ದಿನದಂದು (ಅಕ್ಟೋ ಬರ್ 26) ಮೈಸೂರು ಮೃಗಾಲಯಕ್ಕೆ 7,264 ವೀಕ್ಷಕರು ಭೇಟಿ ನೀಡಿದ್ದು, 7,33,950 ರೂ. ಆದಾಯ ಸಂಗ್ರಹವಾಗಿದೆ ಎಂದು ಮೈಸೂರು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ. ಕಳೆದ 2017ರಲ್ಲಿ ಮೃಗಾಲಯಕ್ಕೆ ಆಯುಧ ಪೂಜೆಯಂದು 15,449 ಮಂದಿ ಭೇಟಿ ನೀಡಿದ್ದು, ಆದಾಯವು 9.61 ಲಕ್ಷ ಹಾಗೂ ವಿಜಯ ದಶಮಿಯಂದು 31,722 ಮಂದಿ ವೀಕ್ಷಿಸಿದ್ದು, 18.81 ಕೋಟಿ ಆದಾಯ ಹರಿದು ಬಂದಿತ್ತು. ದಸರಾದ 10 ದಿನಗಳ ಅವಧಿಯಲ್ಲಿ 1.23…

`ಡಾ.ರಾಜೇಂದ್ರ ಶ್ರೀಗಳವರ ಜೀವನ ಸಂದೇಶ’ ಭಾಷಣ ಸ್ಪರ್ಧೆ ವಿಜೇತರು
ಮೈಸೂರು

`ಡಾ.ರಾಜೇಂದ್ರ ಶ್ರೀಗಳವರ ಜೀವನ ಸಂದೇಶ’ ಭಾಷಣ ಸ್ಪರ್ಧೆ ವಿಜೇತರು

October 29, 2020

ಮೈಸೂರು, ಅ.28-ಮೈಸೂರಿನ ಕುವೆಂಪುನಗರದಲ್ಲಿರುವ ಸ್ಪಂದನಾ ಸಂಸ್ಥೆ ಏರ್ಪಡಿಸಿದ್ದ `ಡಾ. ರಾಜೇಂದ್ರ ಶ್ರೀಗಳವರ ಜೀವನ ಸಂದೇಶ’ ಭಾಷಣ ಸ್ಪರ್ಧೆಯ ವಿಜೇತರ ಪಟ್ಟಿಯನ್ನು ಸಂಸ್ಥೆಯ ಅಧ್ಯಕ್ಷ ಎಂ.ಜಯಶಂಕರ್ ಬಿಡುಗಡೆ ಮಾಡಿದ್ದಾರೆ. 10ರಿಂದ 14 ವರ್ಷದೊಳಗಿನ ತಂಡದಲ್ಲಿ ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ಜೆಎಸ್‍ಎಸ್ ಪಬ್ಲಿಕ್ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಎಸ್.ವಿನೀತ್ ಪ್ರಥಮ ಹಾಗೂ ಶಿವಮೊಗ್ಗದ ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್‍ನ 6ನೇ ತರಗತಿ ವಿದ್ಯಾರ್ಥಿನಿ ಅಕ್ಷತಾ ದ್ವಿತೀಯ ಬಹುಮಾನ ಪಡೆದಿದ್ದಾರೆ. 15ರಿಂದ 25 ವರ್ಷದೊಳಗಿ ನವರ ತಂಡದಲ್ಲಿ ಚಾಮರಾಜನಗರ ಜೆಎಸ್‍ಎಸ್ ಮಹಿಳಾ…

ಆಯುರ್ವೇದ ಅಂಶಗಳಿರುವ ಆಹಾರ   ಕುರಿತು ಅರಿವು ಅಗತ್ಯ: ಡಾ.ಚಂದ್ರಶೇಖರ್
ಮೈಸೂರು

ಆಯುರ್ವೇದ ಅಂಶಗಳಿರುವ ಆಹಾರ  ಕುರಿತು ಅರಿವು ಅಗತ್ಯ: ಡಾ.ಚಂದ್ರಶೇಖರ್

October 29, 2020

ಮೈಸೂರು, ಅ.28-ಆರೋಗ್ಯ ಭಾರತಿ ಮತ್ತು ಅಪೂರ್ವ ಸ್ನೇಹ ಬಳಗದ ವತಿ ಯಿಂದ ಚಾಮುಂಡಿಪುರಂನಲ್ಲಿರುವ ಅಪೂರ್ವ ಹೋಟೆಲ್ ಮುಂಭಾಗ ಆಯುರ್ವೇದ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಉಚಿತವಾಗಿ 500 ವಿವಿಧ ಜಾತಿಯ  ಆಯು ರ್ವೇದದ ಸಸಿಗಳನ್ನು ನೀಡುವ ಮೂಲಕ ಆಯುಷ್ಯ ಆಯುರ್ವೇದ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಯುರ್ವೇದ ವೈದ್ಯ ಡಾ. ಚಂದ್ರಶೇಖರ್, ಆಯುರ್ವೇದ ಭಾರತದ ಪ್ರಾಚೀನ ಚಿಕಿತ್ಸಾ ಪದ್ಧತಿಯಾಗಿದ್ದು, ಇಂದು ವಿಶ್ವದ ಗಮನ ಸೆಳೆದಿದೆ. ಸಹಜ ಬದುಕಿನ ಆಹಾರ ಶೈಲಿ ಯಲ್ಲಿ ಆಯುರ್ವೇದದ ಚಿಕಿತ್ಸೆ ಗುಣಗಳ…

ವರ್ಷಾರಂಭಕ್ಕೆ ಲಸಿಕೆ
ಮೈಸೂರು

ವರ್ಷಾರಂಭಕ್ಕೆ ಲಸಿಕೆ

October 28, 2020

ಬೆಂಗಳೂರು,ಅ.27(ಕೆಎಂಶಿ)- ಕೊರೊನಾ ಮಹಾಮಾರಿಗೆ ಹೊಸ ವರ್ಷದ ಆರಂಭ ದಲ್ಲೇ ಕೋವಿಡ್ ಲಸಿಕೆ ದೊರೆಯಲಿದೆ. ರಾಜ್ಯದ ಎಲ್ಲರಿಗೂ ಲಸಿಕೆ ನೀಡಲಾಗುವುದು. ಉಚಿತವಾಗಿ ನೀಡುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಆಸ್ಟ್ರಾಜನಿಕಾ ಸಂಸ್ಥೆಯ ಪ್ರತಿನಿಧಿಗಳೊಂ ದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಪುಣೆಯ ಸೇರಂ ಸಂಸ್ಥೆ ಜೊತೆ ಆಸ್ಟ್ರಾಜನಿಕಾ ಸಂಸ್ಥೆಯು ಒಡಂಬಡಿಕೆ ಮಾಡಿಕೊಂಡು ಲಸಿಕೆಯ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿದೆ ಎಂದರು….

1 386 387 388 389 390 1,611
Translate »