ಮೈಸೂರು

ಪಾಲಿಕೆ ಸೇರ್ಪಡೆ ಮುಂದೂಡಿ ಗ್ರಾಪಂ ಚುನಾವಣೆ ನಡೆಸಿ: ಹಿನಕಲ್ ಗ್ರಾಪಂ ಮಾಜಿ ಉಪಾಧ್ಯಕ್ಷ ಒತ್ತಾಯ
ಮೈಸೂರು

ಪಾಲಿಕೆ ಸೇರ್ಪಡೆ ಮುಂದೂಡಿ ಗ್ರಾಪಂ ಚುನಾವಣೆ ನಡೆಸಿ: ಹಿನಕಲ್ ಗ್ರಾಪಂ ಮಾಜಿ ಉಪಾಧ್ಯಕ್ಷ ಒತ್ತಾಯ

November 4, 2020

ಮೈಸೂರು, ನ.3(ಆರ್‍ಕೆಬಿ)- ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಹಿನಕಲ್ ಗ್ರಾಮ ಸೇರ್ಪಡೆಗೆ ನಮ್ಮ ವಿರೋಧ ವಿಲ್ಲ. ಆದರೆ ಈಗ ಅದಕ್ಕೆ ಸೂಕ್ತ ಸಮಯ ವಲ್ಲ. ಏಕೆಂದರೆ ಪಾಲಿಕೆ ಚುನಾವಣೆ ಇನ್ನೂ 3 ವರ್ಷಗಳಿಗೂ ಹೆಚ್ಚು ಸಮಯವಿದೆ. ಈಗಲೇ ಪಾಲಿಕೆ ವ್ಯಾಪ್ತಿಗೆ ಸೇರಿಸಿಬಿಟ್ಟರೆ ಇತ್ತ ಗ್ರಾಮ ಪಂಚಾಯಿತಿಗೂ ಒಳಪಡದೆ, ಅತ್ತ ಸಂಪೂರ್ಣ ಪಾಲಿಕೆಗೂ ಸೇರ್ಪಡೆ ಗೊಳ್ಳದೇ ಅತಂತ್ರವಾಗುವ ಆತಂಕವಿದೆ. ಹೀಗಾಗಿ ಹಿನಕಲ್ ಗ್ರಾಮ ಪಂಚಾಯಿತಿಗೆ ಚುನಾವಣೆ ನಡೆಸಬೇಕು ಎಂದು ಗ್ರಾಪಂ ಮಾಜಿ ಉಪಾಧ್ಯಕ್ಷ ಎಸ್.ಹೊನ್ನಪ್ಪ ಮತ್ತಿ ತರರು ಮೈಸೂರು…

ಡಿಜಿಟಲ್ ಜೀವಿತ ಪ್ರಮಾಣಪತ್ರ ಸಲ್ಲಿಸಲು ಪಿಂಚಣಿದಾರರಿಗೆ ಇಪಿಎಫ್ ಸಂಸ್ಥೆ ಸೂಚನೆ
ಮೈಸೂರು

ಡಿಜಿಟಲ್ ಜೀವಿತ ಪ್ರಮಾಣಪತ್ರ ಸಲ್ಲಿಸಲು ಪಿಂಚಣಿದಾರರಿಗೆ ಇಪಿಎಫ್ ಸಂಸ್ಥೆ ಸೂಚನೆ

November 4, 2020

ಮೈಸೂರು, ನ.3- ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ(ಇಪಿಎಫ್‍ಒ) ಪಿಂಚಣಿ ದಾರರು ಪ್ರತಿವರ್ಷದಂತೆ ನವೆಂಬರ್, ಡಿಸೆಂಬರ್‍ನಲ್ಲಿ ಜೀವಿತ ಪ್ರಮಾಣಪತ್ರ ಸಲ್ಲಿಸಬೇಕಿದೆ. ಸದ್ಯ ಕೊರೊನಾ ಭೀತಿ ಇರುವುದ ರಿಂದ ಅದಕ್ಕಾಗಿ ಭವಿಷ್ಯನಿಧಿ ಸಂಸ್ಥೆಗೆ ಭೇಟಿ ನೀಡಬೇಕಿಲ್ಲ. ಇಪಿಎಫ್ ಸಂಸ್ಥೆಯು `ಕಾಮನ್ ಸರ್ವಿಸ್ ಸೆಂಟರ್’(ಸಿಎಸ್‍ಸಿ) ಜತೆ ಒಪ್ಪಂದ ಮಾಡಿಕೊಂಡಿದ್ದು, ಪಿಂಚಣಿದಾರರು ಈ ಬಾರಿ ಡಿಜಿಟಲ್ ರೀತಿ ಜೀವಿತ ಪ್ರಮಾಣಪತ್ರ ಸಲ್ಲಿಸಬಹುದಾಗಿದೆ. ಇಲ್ಲವಾದರೆ, ತಮ್ಮ ಖಾತೆ ಇರುವ ಬ್ಯಾಂಕ್ ಶಾಖೆ, ಸಮೀಪದ ಅಂಚೆ ಕಚೇರಿಯಲ್ಲಿಯೂ ಪ್ರಮಾಣಪತ್ರ ಸಲ್ಲಿಸಬಹುದು. ಅದೂ ಸಾಧ್ಯವಾಗದಿದ್ದರೆ ತಮ್ಮ ಭಾಗದ…

ಮಲೆ ಮಹದೇಶ್ವರ ಬೆಟ್ಟದಲ್ಲಿ ದೇವರ ದರ್ಶನ, ಸೇವೆಗೆ ಅವಕಾಶ
ಮೈಸೂರು

ಮಲೆ ಮಹದೇಶ್ವರ ಬೆಟ್ಟದಲ್ಲಿ ದೇವರ ದರ್ಶನ, ಸೇವೆಗೆ ಅವಕಾಶ

November 3, 2020

ಹನೂರು, ನ.2(ಸೋಮು)- ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರಸ್ವಾಮಿ ಬೆಟ್ಟದಲ್ಲಿ ಮಾದ ಪ್ಪನ ವಿಶೇಷ ದರ್ಶನ, ರಾತ್ರಿ ವಾಸ್ತವ್ಯ ಹಾಗೂ ವಿವಿಧ ಸೇವೆಗಳಿಗೆ ಹೇರಲಾಗಿದ್ದ ನಿರ್ಬಂಧ ವನ್ನು ಸಡಿಲಿಕೆ ಮಾಡಿ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ. ಮುಡಿಸೇವೆ ಸೇರಿದಂತೆ ವಿವಿಧ ಸೇವೆಗಳು, ವಸತಿ ಗೃಹಗಳಲ್ಲಿ ರಾತ್ರಿ ವಾಸ್ತವ್ಯ ಹಾಗೂ ವಿವಿಧ ಉತ್ಸವಗಳನ್ನು ನಡೆಸಲು ಅನುಮತಿ ನೀಡ ಲಾಗಿದ್ದು, ಆದರೆ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂಬ ಷರತ್ತನ್ನು…

ಇಂದು ಶಿರಾ, ರಾಜರಾಜೇಶ್ವರಿನಗರ ಉಪ ಸಮರ
ಮೈಸೂರು

ಇಂದು ಶಿರಾ, ರಾಜರಾಜೇಶ್ವರಿನಗರ ಉಪ ಸಮರ

November 3, 2020

ಬೆಂಗಳೂರು, ನ.2(ಕೆಎಂಶಿ)-ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾಯಕತ್ವಕ್ಕೆ ಪ್ರತಿಷ್ಟೆಯಾಗಿರುವ ರಾಜರಾಜೇಶ್ವರಿನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಉಪಚುನಾವಣೆ ನಡೆಯಲಿದೆ. ಎರಡೂ ಕ್ಷೇತ್ರಗಳ ಫಲಿತಾಂಶದಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಆಡಳಿತ ಪಕ್ಷ ಬಿಜೆಪಿ ಅಭ್ಯರ್ಥಿಗಳು ಚುನಾವಣೆಯಲ್ಲಿ ಪರಾಭವ ಗೊಂಡರೆ, ಯಡಿಯೂರಪ್ಪ ಅವರ ನಾಯಕತ್ವ ಬದ ಲಾವಣೆಗೆ ಪಕ್ಷದ ಶಾಸಕ ರಿಂದಲೇ ಕೂಗು ಹೇಳುವ ಸಾಧ್ಯತೆ ಇದೆ. ಈಗಾಗಲೇ ನಾಯಕತ್ವ ಬದಲಾವಣೆ ಯಾಗಲಿದೆ ಎಂದು ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ್…

ಆರ್‍ಆರ್ ನಗರದಲ್ಲಿ ಸೆಟಾಪ್ ಬಾಕ್ಸ್, ಹಣ ಹಂಚಿಕೆ; ಮುನಿರತ್ನ ಅನರ್ಹಗೊಳಿಸಲು ಡಿಕೆಶಿ ಆಗ್ರಹ
ಮೈಸೂರು

ಆರ್‍ಆರ್ ನಗರದಲ್ಲಿ ಸೆಟಾಪ್ ಬಾಕ್ಸ್, ಹಣ ಹಂಚಿಕೆ; ಮುನಿರತ್ನ ಅನರ್ಹಗೊಳಿಸಲು ಡಿಕೆಶಿ ಆಗ್ರಹ

November 3, 2020

ಬೆಂಗಳೂರು, ನ.2- ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಯ್ಡು ಅವರನ್ನು ವೆಚ್ಚ ಮಿತಿ ದಾಟಿ ಸೆಟ್ ಅಪ್ ಬಾಕ್ಸ್ ವಿತರಣೆ, ನಕಲಿ ಮತದಾರರ ಸೃಷ್ಟಿ, ಅಕ್ರಮ ಹಣ ಹಂಚಿಕೆ ಹಿನ್ನೆಲೆಯಲ್ಲಿ ಈ ಉಪಚುನಾವಣೆ ಕಣದಿಂದ ತಕ್ಷಣ ಅನರ್ಹಗೊಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ. ಸೋಮವಾರ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಶಿವಕುಮಾರ್ ಅವರು ಈ ಎಲ್ಲ ಅಕ್ರಮಗಳ ದಾಖಲೆಗಳನ್ನು ಬಿಡು ಗಡೆ…

ಕಬ್ಬಿನ ಎಫ್‍ಆರ್‍ಪಿ ದರ ಹೆಚ್ಚಳ, ಎಸ್‍ಎಪಿ ದರ ನಿಗದಿಗೆ ಆಗ್ರಹಿಸಿ ಮೈಸೂರಲ್ಲಿ ಪ್ರತಿಭಟನೆ
ಮೈಸೂರು

ಕಬ್ಬಿನ ಎಫ್‍ಆರ್‍ಪಿ ದರ ಹೆಚ್ಚಳ, ಎಸ್‍ಎಪಿ ದರ ನಿಗದಿಗೆ ಆಗ್ರಹಿಸಿ ಮೈಸೂರಲ್ಲಿ ಪ್ರತಿಭಟನೆ

November 3, 2020

ಮೈಸೂರು,ನ.2(ಪಿಎಂ)-ಕಬ್ಬಿಗೆ ಕೇಂದ್ರ ಸರ್ಕಾರ ಅವೈಜ್ಞಾನಿಕವಾಗಿ ಎಫ್‍ಆರ್‍ಪಿ ದರ ನಿಗದಿಗೊಳಿಸಿದೆ ಹಾಗೂ ರಾಜ್ಯ ಸರ್ಕಾರ ಎಸ್‍ಎಪಿ ದರ ನಿಗದಿ ಮಾಡದೇ ನಿರ್ಲಕ್ಷ್ಯ ತಾಳಿದೆ ಎಂದು ಆರೋಪಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಆಶ್ರಯದಲ್ಲಿ ಜಿಲ್ಲಾ ಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದ ಕಬ್ಬು ಬೆಳೆಗಾರರು, ಒಂದು ಹಂತದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಸಂಘದ ಅಧ್ಯಕ್ಷ ಕುರುಬೂರು ಶಾಂತ ಕುಮಾರ್ ನೇತೃತ್ವದಲ್ಲಿ ಕಬ್ಬಿನ ಜಲ್ಲೆ ಹಿಡಿದು ಪ್ರತಿಭಟನೆ ನಡೆಸಿದ ಕಬ್ಬು ಬೆಳೆಗಾರರು, ಭಾರತೀಯ ಕಬ್ಬು ಸಂಶೋಧನಾ…

ವಿದ್ಯಾರ್ಥಿ ಹತ್ಯೆ ಯತ್ನ
ಮೈಸೂರು

ವಿದ್ಯಾರ್ಥಿ ಹತ್ಯೆ ಯತ್ನ

November 3, 2020

ನಂ.ಗೂಡು ಬಳಿ ಪಂಚಳ್ಳಿಹುಂಡಿ ಗ್ರಾಮದಲ್ಲಿ ಘಟನೆ ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನಂಜನಗೂಡು,ನ.2-ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಆತನ ಸ್ನೇಹಿತನೇ ಚಾಕುವಿ ನಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಘಟನೆ ನಂಜನಗೂಡು ತಾಲೂಕು ಪಂಚಳ್ಳಿಹುಂಡಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಪಂಚಳ್ಳಿಹುಂಡಿ ಗ್ರಾಮದ ಮಂಜುನಾಥ್ ಎಂಬುವರ ಪುತ್ರ ರೋಹನ್(19) ಮಾರಣಾಂತಿಕ ಹಲ್ಲೆಗೆ ಒಳಗಾದವ ನಾಗಿದ್ದು, ಆತನ ಸ್ನೇಹಿತ ತಾಂಡವಪುರ ನಿವಾಸಿ ಇರ್ಷಾದ್ ಎಂಬುವರ ಪುತ್ರ ದಿಲ್‍ಶಾದ್(19) ಹತ್ಯೆಗೆ ಯತ್ನಿಸಿದವ ನಾಗಿದ್ದಾನೆ. ಇವರಿಬ್ಬರೂ ಬಾಲ್ಯ ಸ್ನೇಹಿತರಾಗಿದ್ದು, ಇಂದು…

ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿ ನಿರೀಕ್ಷೆಯಲ್ಲಿ ಪಾಲಿಕೆ
ಮೈಸೂರು

ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿ ನಿರೀಕ್ಷೆಯಲ್ಲಿ ಪಾಲಿಕೆ

November 3, 2020

ಮೈಸೂರು, ನ.2(ಆರ್‍ಕೆಬಿ)- ದೀಪಾವಳಿ ಹಬ್ಬ ಸಮೀಪಿಸು ತ್ತಿದ್ದು, ಕೋವಿಡ್ ನಡುವೆಯೇ ಪಟಾಕಿ ಮಾರಾಟ ಮಾಡುವ ಕುರಿತಂತೆ ಮೈಸೂರು ಮಹಾನಗರಪಾಲಿಕೆ ಕೇಂದ್ರ ಸರ್ಕಾರದ ಮಾರ್ಗಸೂಚಿಯ ನಿರೀಕ್ಷೆಯಲ್ಲಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ಕೋವಿಡ್ ರೋಗಿಗಳು ಮತ್ತು ಚೇತ ರಿಸಿಕೊಳ್ಳುತ್ತಿರುವ ರೋಗಿಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತವೆ ಮತ್ತು ಉಸಿರಾಟದ ತೊಂದರೆಯಿಂದ ಬಳಲು ತ್ತಿರುವ ಇತರರ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾ ಗುತ್ತವೆ ಎಂಬ ಅಂಶ ಆಧರಿಸಿ, ಕೇಂದ್ರ ಆರೋಗ್ಯ ಸಚಿವಾಲ ಯದ ಮಾರ್ಗಸೂಚಿಯನ್ನು ಎದುರು ನೋಡುತ್ತಿದ್ದೇವೆ ಎಂದು ಅವರು…

ಮೈಸೂರಿನ ಪ್ರೊ. ಕೆ.ಎಸ್.ರಂಗಪ್ಪ ಈಗ ವಿಶ್ವದ ಅತ್ಯುನ್ನತ ವಿಜ್ಞಾನಿಗಳಲ್ಲಿ ಒಬ್ಬರು
ಮೈಸೂರು

ಮೈಸೂರಿನ ಪ್ರೊ. ಕೆ.ಎಸ್.ರಂಗಪ್ಪ ಈಗ ವಿಶ್ವದ ಅತ್ಯುನ್ನತ ವಿಜ್ಞಾನಿಗಳಲ್ಲಿ ಒಬ್ಬರು

November 3, 2020

ಮೈಸೂರು, ನ.2(ಆರ್‍ಕೆಬಿ)- ಖ್ಯಾತ ರಸಾಯನ ಶಾಸ್ತ್ರಜ್ಞ, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ (ಕಂಚ ಗಾರನಕೊಪ್ಪಲು ಎಸ್.ರಂಗಪ್ಪ) ಇದೀಗ ವಿಶ್ವದ ಅತ್ಯು ನ್ನತ ವಿಜ್ಞಾನಿ (WORLD TOP SCIENTIST) ಹಿರಿಮೆಗೆ ಪಾತ್ರರಾಗಿದ್ದಾರೆ. ಅಮೆರಿಕಾದ ಸ್ಟ್ಯಾನ್‍ಫೋರ್ಡ್ ವಿಶ್ವ ವಿದ್ಯಾನಿಲಯ (STANFORD UNIVERSITY) ಬಿಡುಗಡೆ ಮಾಡಿರುವ ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪೈಕಿ ಪ್ರೊ.ಕೆ.ಎಸ್.ರಂಗಪ್ಪ ಅವರು ಸ್ಥಾನ ಪಡೆದಿರುವುದು ವಿಶೇಷ. ಈ ಸಂಬಂಧ 25 ಪುಟಗಳ ಪಟ್ಟಿಯನ್ನು ಅಮೆರಿಕಾದ ವಿವಿ ಬಿಡುಗಡೆ ಮಾಡಿದೆ. ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪೈಕಿ ಭಾರತದ ಶೇ.2 ರಷ್ಟು ವಿಜ್ಞಾನಿಗಳನ್ನು…

ಪ್ರವಾಸಿ ತಾಣ, ಜಿಲ್ಲಾ ಗಡಿ ಬಂದ್ ಮಾಡಲು ಸಾಧ್ಯವೇ ಇಲ್ಲ: ಜಿಲ್ಲಾಧಿಕಾರಿ ರೋಹಿಣಿ
ಮೈಸೂರು

ಪ್ರವಾಸಿ ತಾಣ, ಜಿಲ್ಲಾ ಗಡಿ ಬಂದ್ ಮಾಡಲು ಸಾಧ್ಯವೇ ಇಲ್ಲ: ಜಿಲ್ಲಾಧಿಕಾರಿ ರೋಹಿಣಿ

November 3, 2020

ಮೈಸೂರು,ನ.2(ಎಂಟಿವೈ)- ಕೊರೊನಾ ಹರಡುವಿಕೆ ತಡೆಗಟ್ಟಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆಯಾದರೂ, ಮುಂದಿನ ದಿನಗಳಲ್ಲಿ ಕೊರೊನಾ ಸ್ಫೋಟಗೊಳ್ಳುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನರೇ ಸ್ವಯಂ ಪ್ರೇರಣೆಯಿಂದ ಕೋವಿಡ್-19 ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮನವಿ ಮಾಡಿದ್ದಾರೆ. ಮೈಸೂರಲ್ಲಿ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಈ ಹಿಂದೆ ಮೈಸೂರಲ್ಲಿ ಕೊರೊನಾ ಸಂಪೂರ್ಣ ವಾಗಿ ನಿಯಂತ್ರಣದಲ್ಲಿತ್ತು. ನಂತರ ಸೋಂಕಿತರ ಸಂಖ್ಯೆ ಹೆಚ್ಚಾಗ ತೊಡಗಿತು. ಆದರೆ ಕಳೆದ 1 ತಿಂಗಳಿಂದ ಸೋಂಕಿ ತರ ಸಂಖ್ಯೆ ಕ್ಷೀಣಿಸಿದೆ. ಡಿಸೆಂಬರ್‍ನಲ್ಲಿ ಸೋಂಕಿ ತರ ಸಂಖ್ಯೆ…

1 380 381 382 383 384 1,611
Translate »