ಮೈಸೂರು,ಅ.26 (ಆರ್‍ಕೆ)- ನಾಡಿನ ಸಮಸ್ತ ಜನತೆಗೆ ಜಗ ನ್ಮಾತೆ ತಾಯಿ ಚಾಮುಂಡೇಶ್ವರಿ ದೇವಿಯು ಸಕಲ ಸನ್ಮಂಗಳ ವನ್ನು ಉಂಟುಮಾಡಲಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯದ ಜನತೆಗೆ ದಸರಾ ಮಹೋತ್ಸವದ ಸಂದೇಶ ನೀಡಿದ್ದಾರೆ. ಮೈಸೂರು ಅರಮನೆಯ ಉತ್ತರ ದ್ವಾರದ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಜಯದಶಮಿ ಮೆರವಣಿ ಗೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರದೊಂದಿಗೆ ಮಾತನಾಡಿ, ಕೋವಿಡ್-19 ಮತ್ತು ಪ್ರವಾಹದ ಸಂಕಷ್ಟಗಳಿಂದ ನಾಡಿನ ಜನತೆಯನ್ನು ಪಾರು ಮಾಡಿ,…
ಸರಳಾತಿ ಸರಳ ದಸರಾ ದಾಖಲೆ ಸೇರ್ಪಡೆ
October 27, 2020ಮೈಸೂರು, ಅ.26(ಆರ್‍ಕೆ)-ವಿಶ್ವ ವಿಖ್ಯಾತ ಮೈಸೂರು ದಸರೆಯನ್ನು ಸರ್ಕಾರದ ವತಿಯಿಂದ ಆಚರಿಸಲು ಪ್ರಾರಂಭಿಸಿದ ನಂತರ ನಾಲ್ಕು ಬಾರಿ ವಿವಿಧ ಕಾರಣಗಳಿಗಾಗಿ ಸರಳವಾಗಿ ದಸರಾ ಆಚರಿಸಲ್ಪಟ್ಟಿದ್ದರೂ, ಈ ಬಾರಿ ದಸರಾ ಹಿಂದಿನವುಗಳಿಗಿಂತ ಅತ್ಯಂತ ಸರಳ ಎಂಬ ದಾಖಲೆ ಸೇರಿದೆ. ದಸರಾ ಉತ್ಸವ ಮಾತ್ರವಲ್ಲ, ಜಂಬೂ ಸವಾರಿ ಮೆರವಣಿಗೆಯೂ ಅತ್ಯಂತ ಕಡಿಮೆ ದೂರ ಕ್ರಮಿಸಿ, ದಾಖಲೆ ನಿರ್ಮಿಸಿದೆ. ಈ ಹಿಂದೆ ಎರಡು ಬಾರಿ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಿ ದಾಗ ಸರ್ಕಾರದಿಂದ ದಸರೆಗೆ ವಿಶೇಷ ಅನುದಾನ ಬಿಡುಗಡೆ ಮಾಡಿರಲಿಲ್ಲ. ಆ ಕಾರಣದಿಂದಾಗಿ…
ಅರಮನೆಯಲ್ಲಿ ಗತವೈಭವ ಕಳೆಗಟ್ಟಿದ ವಿಜಯಯಾತ್ರೆ
October 27, 2020ಮೈಸೂರು, ಅ.26(ಪಿಎಂ)- `ವಿಜಯಯಾತ್ರೆ ಹಾಗೂ ಶಮೀ (ಬನ್ನಿ ಮರ) ಪೂಜೆ’ ಅರಮನೆ ಆವರಣದಲ್ಲಿ ಪ್ರತಿ ವರ್ಷ ನಡೆಯುವ ಸಾಂಸ್ಕøತಿಕ ಹಾಗೂ ಧಾರ್ಮಿಕ ದಿಬ್ಬಣ. ಈ ಬಾರಿ ಸರಳ ದಸರವಾದರೂ ಸೋಮವಾರ ಜಂಬೂ ಸವಾರಿಗೂ ಮುನ್ನ ಈ ಸಾಂಸ್ಕøತಿಕ ಹಾಗೂ ಧಾರ್ಮಿಕ ವಿಧಿ ವಿಧಾನ ನೆರವೇರುವ ಮೂಲಕ ಅರಮನೆ ಅಂಗಳದಲ್ಲಿ ಸಂಭ್ರಮ ಕಳೆಗಟ್ಟಿತು. ರಾಜ ಪೋಷಾಕು ಧರಿಸಿದ್ದ ರಾಜವಂಶಸ್ಥ ಯದು ವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಈ ವಿಜಯಯಾತ್ರೆ ಹಾಗೂ ಶಮೀ ಪೂಜೆ ನೆರವೇರಿಸಿ ದರು. ಅರಮನೆಯ ಆನೆ…
ಅಲಮೇಲಮ್ಮನ ಶಾಪ; ವಿಜ್ಞಾನಕ್ಕೆ ದೊಡ್ಡ ಸವಾಲು
October 27, 2020ಮೈಸೂರು, ಅ.26(ಆರ್‍ಕೆಬಿ)- `ಮಾಲಂಗಿ ಮಡುವಾಗಲಿ, ತಲಕಾಡು ಮರುಳಾಗಲಿ, ಮೈಸೂರು ಅರಸರಿಗೆ ಮಕ್ಕ ಳಾಗದಿರಲಿ’ ಎಂದು ಅಲಮೇಲಮ್ಮ ಶಾಪ ನೀಡಿದಳೆಂಬುದನ್ನು ಹಿರಿಯರಿಂದ ಕೇಳಿ ತಿಳಿದಿದ್ದೇವೆ. ಆದರೆ ವಿಜ್ಞಾನಕ್ಕೆ ದೊಡ್ಡ ಸವಾಲಾಗಿರುವ ಈ ವಿಚಾರ ಕುರಿತು ಅಧ್ಯ ಯನ ನಡೆಯಬೇಕಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅಭಿಪ್ರಾಯಪಟ್ಟರು. ಮೈಸೂರಿನ ವಸ್ತು ಪ್ರದರ್ಶನ ಆವರಣ ದಲ್ಲಿರುವ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಭಾಂ ಗಣದಲ್ಲಿ ಸೋಮವಾರ ನಡೆದ ಪುಸ್ತಕ ಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು…
ಕೋವಿಡ್-19 ಸೋಂಕು ಚಿಕಿತ್ಸೆಗೆ “ರೆಮ್ಡೆಸಿವಿರ್” ಔಷಧ ಹೆಚ್ಚು ಪರಿಣಾಮಕಾರಿ
October 27, 2020ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಸಿ.ಎನ್.ಮಂಜುನಾಥ್ ಮೈಸೂರು, ಅ.26 ಕೋವಿಡ್-19 ಸೋಂಕಿನಿಂದ ಬಳಲುತ್ತಿರುವವರನ್ನು ಗುಣ ಪಡಿಸುವಲ್ಲಿ “ರೆಮ್ಡಿಸಿವಿರ್ ಮೆಡಿಸಿನ್” ಬಳಕೆ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಜಯದೇವ ಇನ್ಸ್‍ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ನಿರ್ದೇಶಕ ಮತ್ತು ಹೃದ್ರೋಗ ವಿಭಾ ಗದ ಪ್ರಾಧ್ಯಾಪಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ. ಎಲೆಟ್ಸ್ ಟೆಕ್ನೋ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಇ-ಹೆಲ್ತ್ ಮ್ಯಾಗಜೀನ್ ವತಿಯಿಂದ ಆಯೋಜಿಸಿದ್ದ ವರ್ಚು ವಲ್ ಪ್ಯಾನಲ್ ಚರ್ಚೆಯಲ್ಲಿ ಪಾಲ್ಗೊಂಡು, `ಸಾಂಕ್ರಾಮಿಕ ರೋಗಗಳ ನಿಯಂತ್ರಣ’ ಕುರಿತು ಮಂಜುನಾಥ್ ಅವರು ತಮ್ಮ ಅನುಭವ ಹಂಚಿಕೊಂಡರು. ಕೊರೊನಾ ಸೋಂಕಿಗೆ…
ಸಾರೋಟಿನಲ್ಲಿ ಚಾಮುಂಡೇಶ್ವರಿ ಚಿತ್ರಪಟ ಮೆರವಣಿಗೆಗೆ ಮುಂದಾಗಿದ್ದ ವಾಟಾಳ್ ನಾಗರಾಜ್ ವಶಕ್ಕೆ ಪಡೆದು ಬಿಡುಗಡೆಗೊಳಿಸಿದ ಪೊಲೀಸರು
October 27, 2020ಮೈಸೂರು, ಅ.26(ಪಿಎಂ)- ಸರಳ ದಸರಾ ಮಹೋತ್ಸವ ಖಂಡಿಸಿ ಕನ್ನಡ ಚಳ ವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಸಲು ಉದ್ದೇ ಶಿಸಿದ್ದ ಚಾಮುಂಡೇಶ್ವರಿ ಚಿತ್ರಪಟ ಮೆರ ವಣಿಗೆಗೆ ಪೊಲೀಸರು ತಡೆಯೊಡ್ಡಿದ ರಲ್ಲದೆ, ವಾಟಾಳ್ ನಾಗರಾಜ್ ಅವರನ್ನು ವಶಕ್ಕೆ ಪಡೆದು ಬಿಡುಗಡೆಗೊಳಿಸಿದರು. ಅರಮನೆ ಉತ್ತರ ದ್ವಾರದಿಂದ ಬನ್ನಿ ಮಂಟಪದವರೆಗೆ ಸಾರೋಟಿನಲ್ಲಿ ತಾಯಿ ಚಾಮುಂಡೇಶ್ವರಿ ಚಿತ್ರಪಟ ಮೆರವಣಿಗೆ ಮಾಡಲಿದ್ದೇವೆ ಎಂದು ಈ ಹಿಂದೆಯೇ ವಾಟಾಳ್ ನಾಗರಾಜ್ ಘೋಷಣೆ ಮಾಡಿ ದ್ದರು. ಅದರಂತೆ ಸೋಮವಾರ ಸಾರೋಟು, ಚಾಮುಂಡೇಶ್ವರಿ ಚಿತ್ರಪಟ…
ಮೈಸೂರು ಮೌನ
October 27, 2020ಮೈಸೂರು, ಅ.26(ಆರ್‍ಕೆಬಿ)- ಕೋವಿಡ್-19 ಕಾರಣದಿಂದಾಗಿ ಸರಳ ದಸರಾ ಹಿನ್ನೆಲೆಯಲ್ಲಿ ಜಂಬೂಸವಾರಿ ಮೆರವಣಿಗೆ ಅರಮನೆ ಆವರಣಕ್ಕೆ ಸೀಮಿತಗೊಳಿಸಿದ್ದ ರಿಂದ ಸೋಮವಾರ ಮೈಸೂರಿನತ್ತ ಹೆಚ್ಚು ಜನ ಬರಲಿಲ್ಲ. ಗ್ರಾಮಾಂತರ ಮತ್ತು ನಗರ ಸಾರಿಗೆ ಬಸ್‍ಗಳೆಲ್ಲವೂ ಎಂದಿನಂತೆಯೇ ಓಡಾಡಿದರೂ ಜನರ ಒತ್ತಡ ಇರಲಿಲ್ಲ. ಪ್ರತೀ ವರ್ಷ ದಸರಾ ವಿಜಯದಶಮಿ ಜಂಬೂಸವಾರಿ ದಿನದಂದು ಮೈಸೂರಿಗೆ ಲಕ್ಷಾಂತರ ಮಂದಿ ಬಂದು ಸೇರುತ್ತಿದ್ದರು. ನಗರದ ತುಂಬೆಲ್ಲಾ ಜನ, ವಾಹನ. ಯಾವ ರಸ್ತೆಗಳಲ್ಲೂ ಜನರು ಪ್ರವಾಹದೋಪಾದಿಯಲ್ಲಿ ಬರುತ್ತಿದ್ದರು. ಆದರೆ ಈ ಬಾರಿಯ ವಿಜಯದಶಮಿ ಮೆರವಣಿಗೆಗೆ ಮೈಸೂರಲ್ಲಿ ಅಂತಹ…
ಕಲಾರಸಿಕರ ಮನಸೆಳೆದ ‘ಡೋರ್ ನಂಬರ್-8’
October 27, 2020ಮೈಸೂರು, ಅ.26(ಎಂಕೆ)- ಕೊರೊನಾ ಆತಂಕದ ನಡುವೆಯೂ ಕಲಾಭಿಮಾನಿ ಗಳಿಗೆ ಕಚಗುಳಿ ಹಿಟ್ಟು ನಕ್ಕು ನಗಿಸಿದ ಡೋರ್ ನಂ-8…! ಮೈಸೂರು ರಂಗಾಯಣದಲ್ಲಿ ಭಾನುವಾರ ಕಾವ್ಯ ಕಡಮೆ ನಾಗರಕಟ್ಟೆ ಅವರ ರಚನೆ, ಕಲಾವಿದ ಆರ್.ಧನಂಜಯ ಅವರ ನಿರ್ದೇಶನದಲ್ಲಿ ಮೂಡಿಬಂದ ‘ಡೋರ್ ನಂ-8’ ವಾರಾಂತ್ಯ ನಾಟಕ ಪ್ರದರ್ಶನ ಕಲಾರಸಿಕರ ಮನಗೆದ್ದಿತು. ತೀರ ಸರಳ, ಸಾಮಾನ್ಯ ರೀತಿಯಲ್ಲಿ ಬದುಕನ್ನು ‘ಬೇಕು-ಬೇಡ’ ಎನ್ನುವ ಹಾಗೂ ಹಾಸ್ಯಭರಿತ ಸಂಭಾ ಷಣೆಯಿಂದ ಕೂಡಿರುವ ‘ಡೋರ್ ನಂಬರ್ -8’ ನಾಟಕ ವನ್ನು ಕಲಾವಿದರಾದ ಮಹೇಶ್ ಕಲ್ಲತಿ, ಆರ್.ಧನಂ ಜಯ…
ನಾಳೆ ಸರಳ ಜಂಬೂಸವಾರಿ
October 25, 2020ಮೈಸೂರು, ಅ.24(ಎಂಟಿವೈ)- ಈ ಬಾರಿಯ ಸರಳ ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿಗೆ ಮೈಸೂರು ಅರಮನೆ ಆವ ರಣದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಗಾಂಭೀರ್ಯದಿಂದ ಹೆಜ್ಜೆ ಹಾಕಲು `ಅಭಿಮನ್ಯು’ ನೇತೃತ್ವದ ಗಜಪಡೆ ಸನ್ನದ್ಧಗೊಂಡಿದೆ. ಕೊರೊನಾ ಹಿನ್ನೆಲೆಯಲ್ಲಿ ಈ ಸಾಲಿನ ದಸರಾ ಮಹೋತ್ಸವವನ್ನು ಸರಳ ಹಾಗೂ ಸಾಂಪ್ರದಾಯಿಕ ವಾಗಿ ಆಚರಿಸಲಾಗುತ್ತಿದ್ದು, ಜಂಬೂಸವಾರಿ ಮೆರ ವಣಿಗೆಯನ್ನು ಅರಮನೆ ಆವರಣಕ್ಕೆ ಸೀಮಿತ ಗೊಳಿಸಲಾಗಿದೆ. ಸೋಮವಾರ ಮಧ್ಯಾಹ್ನ 2.59 ರಿಂದ 3.20ರ ನಡುವೆ ಸಲ್ಲುವ ಶುಭ…
ಸಾಲಗಾರರಿಗೆ ದೀಪಾವಳಿ ಉಡುಗೊರೆ: 2 ಕೋಟಿ ರೂ.ವರೆಗಿನ ಚಕ್ರಬಡ್ಡಿ ಮನ್ನಾ
October 25, 2020ನವದೆಹಲಿ, ಅ.24- ಕೇಂದ್ರ ಸರ್ಕಾರದ ಸಾಲಗಾರರಿಗೆ ದೀಪಾವಳಿ ಉಡುಗೊರೆ ನೀಡಿದ್ದು, 2 ಕೋಟಿ ರೂ.ವರೆಗಿನ ಸಾಲದ ಮೇಲಿನ ಚಕ್ರಬಡ್ಡಿ ಯನ್ನು ಮನ್ನಾ ಮಾಡುವುದಾಗಿ ಶುಕ್ರವಾರ ರಾತ್ರಿ ಘೋಷಣೆ ಮಾಡಿದೆ. ಕೊರೊನಾ ಲಾಕ್‍ಡೌನ್ ವೇಳೆ ಪ್ರಕಟಿಸಲಾಗಿದ್ದ ಆರು ತಿಂಗಳ ಮೊರಟೋರಿಯಂ ಅವಧಿಯ ಸಾಲದ ಕಂತುಗಳ ಮೇಲಿನ ಚಕ್ರ ಬಡ್ಡಿ ಹಣವನ್ನು ತಾನೇ ಭರಿಸಲು ಕೇಂದ್ರ ಸರ್ಕಾರ ಒಪ್ಪಿದೆ. ಸುಪ್ರೀಂ ಕೋರ್ಟ್ ಅಕ್ಟೋಬರ್ 14ರಂದು ಶೀಘ್ರದಲ್ಲಿ ಚಕ್ರಬಡ್ಡಿ ಮನ್ನಾ ಯೋಜನೆ ಜಾರಿಗೊಳಿಸಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು. ಈ ಹಿನ್ನೆಲೆಯಲ್ಲಿ…









