ಮೈಸೂರು, ಅ.23- ಮೈಸೂರಿನ ಹಿಂದೂಸ್ಥಾನ್ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಜನ್ಮ ದಿನದ ಅಂಗವಾಗಿ ವಿಶ್ವ ವಿದ್ಯಾರ್ಥಿ ದಿನಾಚರಣೆ ಆಚರಿಸಲಾಯಿತು. ಉದ್ಯಮಿ ಶ್ರೀಮತಿ ಚಂದ್ರ ಕೆ ಹರ್ಷ, ಪ್ರಿನ್ಸಿಪಾಲ್ ಡಾ.ಸಿ.ಜೆ.ಪ್ರಿಯ, ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಶ್ರೀಮತಿ ಸೂಕ್ಷ್ಮ ಆರ್.ಡಿ, ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಲ್ಲದೆ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಶ್ರೀಮತಿ ಚಂದ್ರ ಕೆ. ಹರ್ಷ ಅವರು ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ…
ಅರಮನೆ ಅಂಗಳದಲ್ಲಿ ಜಂಬೂಸವಾರಿ ಪೂರ್ಣ ತಾಲೀಮು
October 23, 2020ಮೈಸೂರು, ಅ.22(ಎಂಟಿವೈ)- ಕೊರೊನಾ ಹಿನ್ನೆಲೆಯಲ್ಲಿ ಸರಳ, ಸಾಂಪ್ರದಾಯಿಕ ಆಚರಣೆಗೆ ಸೀಮಿತಗೊಂಡಿರುವ ಪ್ರಸಕ್ತ ಸಾಲಿನ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯ ಪೂರ್ಣ ತಾಲೀಮು ಗುರು ವಾರ ಅರಮನೆ ಆವರಣದಲ್ಲಿ ನಡೆಯಿತು. ಚಿನ್ನದ ಅಂಬಾರಿ ಹೊರುವ ಅಭಿಮನ್ಯು, ಕುಮ್ಕಿ ಆನೆಗಳಾದ ಕಾವೇರಿ ಮತ್ತು ವಿಜಯ ಜತೆ ಗಾಂಭಿರ್ಯ ವಾಗಿ ಹೆಜ್ಜೆ ಹಾಕಿತು. ಆ ಮೂಲಕ ಜಂಬೂ ಸವಾರಿಗೆ ತಾನು ಸಜ್ಜಾಗಿರುವ ಸಂದೇಶ ನೀಡಿತು. ಇದರೊಂದಿಗೆ 2 ತುಕಡಿಗಳಲ್ಲಿ ಎಸಿಪಿ ನಾಗರಾಜು ನೇತೃತ್ವದಲ್ಲಿ 30 ಕುದುರೆಗಳು ಪಾಲ್ಗೊಂಡಿದ್ದವು. ಪೊಲೀಸ್ ಬ್ಯಾಂಡ್…
ಬ್ಲೇಡ್ ಕಂಪನಿಗಳಿಗೆ ಕಡಿವಾಣ ಹಾಕಲು ಹೊಸ ಕಾಯ್ದೆ
October 23, 2020ಬೆಂಗಳೂರು,ಅ.22(ಕೆಎಂಶಿ)-ಹೆಚ್ಚಿನ ಬಡ್ಡಿ ಆಸೆ ತೋರಿಸಿ, ಸಾರ್ವ ಜನಿಕರಿಗೆ ವಂಚಿಸುವ ಕಂಪನಿ ಅಥವಾ ಸಂಸ್ಥೆಗಳಿಗೆ ಕಡಿವಾಣ ಹಾಕಲು ಹೊಸ ಕಾಯ್ದೆ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಂಡಿದ್ದು, ಬಡ್ಡಿ ಹಾಗೂ ಲಾಭ ನೀಡುವ ಆಸೆ ಹುಟ್ಟಿಸಿ, ಜನರನ್ನು ವಂಚಿ ಸುವ ಕಂಪನಿಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ಬಡ್ಡಿಯ ಆಸೆಗಾಗಿ ಸಾರ್ವಜನಿಕರು ತಮ್ಮಲ್ಲಿರುವ ಹಣವನ್ನು ಹೂಡಿ, ನಂತರ ಕಂಪನಿಗಳಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ಕೊನೆಗಾಣಿಸಲು ಸಂಪುಟ ಸಭೆಯಲ್ಲಿ…
ಈರುಳ್ಳಿ; ದರ ಕೇಳಿದರೇ ಕಣ್ಣೀರು!
October 23, 2020ಮೈಸೂರು,ಅ.22(ಪಿಎಂ)- ಮೈಸೂ ರಿನ ಮಾರುಕಟ್ಟೆ, ದಿನಸಿ-ತರಕಾರಿ ಅಂಗಡಿಗಳಲ್ಲಿ ಈರುಳ್ಳಿ ದರ ಕೆಜಿಗೆ 100 ರೂ. ಗಡಿ ದಾಟಿದೆ. ಈರುಳ್ಳಿ ಹಚ್ಚಿ ದರೆ ಅಲ್ಲ, ಬೆಲೆ ಕೇಳಿದರೇ ಕಣ್ಣೀರಿ ಡುವ ಸನ್ನಿವೇಶ ಬಂದೊದಗಿದೆ! ಹೆಚ್ಚು ಈರುಳ್ಳಿ ಬೆಳೆಯುವ ಮಹಾ ರಾಷ್ಟ್ರ ಹಾಗೂ ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಬೆಳೆಗೆ ಹಾನಿಯಾದ ಪರಿಣಾಮ ಪೂರೈಕೆಯಲ್ಲಿ ಭಾರೀ ಇಳಿಕೆ ಯಾಗಿದೆ. ಈ ಹಿನ್ನೆಲೆಯಲ್ಲಿ ಕೆಜಿ ಈರುಳ್ಳಿ ಬೆಲೆ ಶತಕ ಭಾರಿಸಿ ಮುನ್ನುಗ್ಗುತ್ತಿದೆ. ದೇವರಾಜ ಮಾರುಕಟ್ಟೆ ಈರುಳ್ಳಿ ವ್ಯಾಪಾ ರಸ್ಥರ ಪ್ರಕಾರ ನವೆಂಬರ್-ಡಿಸೆಂಬರ್ ವರೆಗೂ…
ರಾಜ್ಯದಲ್ಲಿ 1ರಿಂದ 12ನೇ ತರಗತಿಯ ಶೇ.30ರಷ್ಟು ಪಠ್ಯ ಕಡಿತ
October 23, 2020ಬೆಂಗಳೂರು,ಅ.22(ಕೆಎಂಶಿ)- ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ 1ರಿಂದ 12ನೇ ತರಗತಿವರೆಗೆ ಶೇ.30ರಷ್ಟು ಪಠ್ಯವನ್ನು ಕಡಿತಗೊಳಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಳೆದ ಜೂನ್ ಮೊದಲ ವಾರದಿಂ ದಲೇ ಶಾಲಾ ಕಾಲೇಜುಗಳನ್ನು ಆರಂ ಭಿಸಬೇಕಿತ್ತು. ಆದರೆ ಸಾಂಕ್ರಾಮಿಕ ರೋಗ ಹಿಡಿತಕ್ಕೆ ಬಾರದ ಕಾರಣ ಇದುವರೆಗೂ ತರಗತಿಗಳನ್ನು ಆರಂಭಿಸಲು ಸಾಧ್ಯವಾ ಗಿಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ತೊಂದರೆ ಯಾಗಬಾರದೆಂಬ ಉದ್ದೇಶದಿಂದ ತಜ್ಞರ ವರದಿಯನ್ನು ಆಧರಿಸಿ, ದ್ವಿತೀಯ ಪಿಯುಸಿ ವರೆಗೂ ಶೇ.30ರಷ್ಟು ಪಠ್ಯವನ್ನು ಕಡಿತ ಗೊಳಿಸಲಾಗಿದೆ. ಶಾಲಾ ಕಾಲೇಜುಗಳು ಮತ್ತೆ ಎಂದು…
ರಾಜ್ಯದಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಚಾಲನೆ
October 23, 2020ಬೆಂಗಳೂರು,ಅ.22(ಕೆಎಂಶಿ)- ಮುಂದು ವರೆದ ರಾಷ್ಟ್ರದಲ್ಲಿರುವಂತೆ ಕರ್ನಾಟಕದಲ್ಲೂ ಎಲೆಕ್ಟ್ರಿಕ್ ಬಸ್‍ಗಳು ಬೀದಿಗಿಳಿಯಲಿವೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಅತ್ಯಾಧುನಿಕ ಹವಾ ನಿಯಂತ್ರಿತ ಪರಿಸರ ಸ್ನೇಹಿ ಬಸ್‍ಗಳು ಇನ್ನು ಮುಂದೆ ಸಂಚರಿಸಲಿವೆ. ಎಲೆಕ್ಟ್ರಿಕ್ ಬಸ್‍ಗಳ ಪ್ರಾಯೋಗಿಕ ಓಡಾಟಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸೌಧದ ಮುಂದೆ ಹಸಿರು ನಿಶಾನೆ ತೋರಿದರು. ಸಾರಿಗೆ ಇಲಾಖೆ ಹೊಣೆ ಹೊತ್ತಿರುವ ಉಪಮುಖ್ಯ ಮಂತ್ರಿ ಲಕ್ಷ್ಮಣ್ ಸವದಿ ಮಾತ್ರ ಬಸ್‍ನಲ್ಲಿ ಕುಳಿತು, ಸ್ವಲ್ಪ ಬೆಂಗ ಳೂರು ಸುತ್ತಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಸವದಿ ಅವರು,…
ಕೆಲ ಸಚಿವರ ಕಾರ್ಯವೈಖರಿಗೆ ಸಿಎಂ ತೀವ್ರ ಬೇಸರ
October 23, 2020ಬೆಂಗಳೂರು,ಅ.22(ಕೆಎಂಶಿ)-ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಇಂದಿಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ ನಮ್ಮ ಶಾಸಕರೂ ಸರಿ ಯಾಗಿ ನಡೆದುಕೊಳ್ಳುತ್ತಿಲ್ಲ ಎಂದಿ ದ್ದಾರೆ. ಇಂದು ನಡೆದ ಸಂಪುಟ ಸಭೆಯ ನಂತರ ಸಚಿವರ ಜೊತೆ ಅನೌಪಚಾರಿಕವಾಗಿ ವಿಧಾನಸಭೆ ಉಪ ಚುನಾವಣೆ, ಪ್ರಸಕ್ತ ರಾಜಕಾರಣ, ಕೋವಿಡ್-19 ಸಾಂಕ್ರಾ ಮಿಕ ರೋಗ ಹಾಗೂ ಅತಿವೃಷ್ಟಿಯ ಬಗ್ಗೆ ಪ್ರಸ್ತಾಪ ಮಾಡಿದ ಮುಖ್ಯಮಂತ್ರಿಯವರು ಬೆರಳಣಿಕೆಯಷ್ಟು ಸಚಿವರನ್ನು ಹೊರತುಪಡಿಸಿದರೆ, ಉಳಿದವರು ನಿಮ್ಮ ಜವಾಬ್ದಾರಿ ಅರಿತು ಕೆಲಸ ಮಾಡುತ್ತಿಲ್ಲ…
ಶುಕ್ರವಾರ ದೇವರಾಜ ಮಾರುಕಟ್ಟೆಯಲ್ಲೇ ಹೂ ಮಾರಾಟಕ್ಕೆ ಅವಕಾಶ
October 23, 2020ಮೈಸೂರು, ಅ.22(ಪಿಎಂ)- ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಖರೀದಿ ವೇಳೆ ದೇವರಾಜ ಮಾರುಕಟ್ಟೆಯಲ್ಲಿ ಜನದಟ್ಟಣೆಯಾಗಿ ಕೊರೊನಾ ಸೋಂಕು ಹರಡುವ ಅಪಾಯ ಇರುವುದರಿಂದ ಅ.23ರಿಂದ 25ರವರೆಗೆ (3 ದಿನ) ಹೂ ವ್ಯಾಪಾರ ಮಳಿಗೆಗಳನ್ನು ಎಂದಿನಂತೆ ಜೆಕೆ ಮೈದಾನಕ್ಕೆ ಸ್ಥಳಾಂತರ ಮಾಡಿದ್ದ ಮಹಾನಗರ ಪಾಲಿಕೆ, ಈಗ ಹೂ ವ್ಯಾಪಾರಿಗಳ ಮನವಿ ಮೇರೆಗೆ ಶುಕ್ರವಾರ ಒಂದು ದಿನ ಸ್ಥಳಾಂತರಕ್ಕೆ ವಿನಾಯಿತಿ ನೀಡಿದೆ. ಹಾಗಾಗಿ ಅ.24 ಮತ್ತು 25 ರಂದು ಮಾತ್ರ ಹೂವಿನ ಮಾರುಕಟ್ಟೆ ಜೆಕೆ ಮೈದಾನಕ್ಕೆ ಸ್ಥಳಾಂತರಗೊಳ್ಳಲಿದೆ. ಬುಧವಾರ ಪಾಲಿಕೆಗೆ…
ಅಪೋಲೊದಲ್ಲಿ `ಪೋಸ್ಟ್ ಕೋವಿಡ್ ರಿಕವರಿ ಕ್ಲಿನಿಕ್’
October 23, 2020ಮೈಸೂರು, ಅ.22(ಪಿಎಂ)- ಕೊರೊನಾ ಸೋಂಕಿನಿಂದ ಮುಕ್ತ ರಾದ (ಗುಣಮುಖರಾದ) ಬಳಿಕವೂ ಎದುರಾಗಬಹುದಾದ ಇತರೆ ಅನಾರೋಗ್ಯ ಸಮಸ್ಯೆಗಳಿಗೆ ಅಗತ್ಯ ಚಿಕಿತ್ಸೆ ನೀಡಲು ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ `ಪೋಸ್ಟ್ ಕೋವಿಡ್ ರಿಕವರಿ ಕ್ಲಿನಿಕ್’ ಗುರುವಾರ ಕಾರ್ಯಾರಂಭ ಮಾಡಿದೆ. ಈ ಸಂಬಂಧ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಆಸ್ಪತ್ರೆಯ ಡಾ. ಸಂಜೀವ್ ರಾವ್ ಗಿರಿಮಾಜಿ, ಕೊರೊನಾದಿಂದ ಮುಕ್ತರಾದ ಬಳಿಕವೂ ಶೇ.50ರಷ್ಟು ಮಂದಿಯಲ್ಲಿ ವಿವಿಧ ರೀತಿಯ ಅನಾರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿವೆ. ಎದೆನೋವು, ಹೃದಯ ಸಂಬಂಧಿ ಸಮಸ್ಯೆ, ಶ್ವಾಸಕೋಶ…
ಎಲ್‍ಇಡಿ ಬಲ್ಬ್ ಅಳವಡಿಕೆ ಯೋಜನೆಗೆ 15 ದಿನದಲ್ಲಿ ಟೆಂಡರ್: ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ
October 23, 2020ಮೈಸೂರು, ಅ.22(ಪಿಎಂ)- ಮೈಸೂರು ನಗರದ ಬೀದಿದೀಪಗಳಿಗೆ 109.91 ಕೋಟಿ ರೂ. ವೆಚ್ಚದಲ್ಲಿ ಎಲ್‍ಇಡಿ ಬಲ್ಬ್ ಅಳವಡಿಸುವ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದ್ದು, ಮುಂದಿನ 10-15 ದಿನಗಳಲ್ಲಿ ಟೆಂಡರ್ ಕರೆಯುವ ಸಾಧ್ಯತೆ ಇದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ತಿಳಿಸಿದರು. ತಮ್ಮ ಕಚೇರಿಯಲ್ಲಿ ಗುರುವಾರ ಮಾಧ್ಯಮದ ಜತೆ ಮಾತನಾಡಿದ ಅವರು, ಬೀದಿದೀಪಗಳಿಗೆ ಎಲ್‍ಇಡಿ ಬಲ್ಬ್ ಅಳವಡಿಕೆಯಿಂದ ಯಾವ ರೀತಿ ಸುಧಾರಣೆ ಆಗಲಿದೆ ಎಂಬ ಬಗ್ಗೆ ಮೇಯರ್ ಮತ್ತು ಪಾಲಿಕೆ ಸ್ಥಾಯಿ ಸಮಿತಿಗಳ ಸದಸ್ಯರಿಗೆ ಪಿಪಿಟಿ…










