ಮೈಸೂರು, ಅ.22(ಎಂಟಿವೈ)-ಚುನಾವಣಾ ಆಯೋ ಗದ ಸೂಚನೆ ಮೇರೆಗೆ ಮೈಸೂರು ಮತ್ತು ಚಾಮ ರಾಜನಗರ ಜಿಲ್ಲೆಗಳ 3901 ಮತಗಟ್ಟೆಗೆ ಕಾಂಗ್ರೆಸ್ ನಿಂದ ಅಧಿಕೃತ ಬೂತ್ ಏಜೆಂಟರನ್ನು (ಬಿಎಲ್‍ಒ-2) ನಿಯೋಜಿಸಲು ಕೆಪಿಸಿಸಿ ನನಗೆ ಜವಾಬ್ದಾರಿ ನೀಡಿದೆ. ಈ ಏಜೆಂಟರ ನೇಮಕ ಪ್ರಕ್ರಿಯೆ 15 ದಿನದೊಳಗೆ ಪೂರ್ಣಗೊಳ್ಳಲಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ ತಿಳಿಸಿದರು. ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮುಂಬರುವ ಚುನಾ ವಣೆಗಳಲ್ಲಿ ವಿವಿಧ ರಾಜಕೀಯ ಪಕ್ಷಗಳಿಂದ ಎಲ್ಲಾ ಮತಗಟ್ಟೆಗಳಿಗೆ ಅಧಿಕೃತವಾಗಿ ಏಜೆಂಟರನ್ನು ನಿಯೋಜಿ…
ಮಧುಮಲೆ ಕಾಡಿನಲ್ಲಿ ಆನೆ ದಾಳಿ: ಸ್ಕೂಟರ್ ಸವಾರ ಸ್ವಲ್ಪದರಲ್ಲಿ ಪಾರು
October 23, 2020ಗುಂಡ್ಲುಪೇಟೆ, ಅ.22- ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿ ರುವ ತಮಿಳುನಾಡಿನ ಮಧುಮಲೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿ ರುವ ಮಸಿನಗುಡಿ ತೆಪ್ಪಕಾಡು ರಸ್ತೆಯಲ್ಲಿ ಸಲಗವೊಂದು ದ್ವಿಚಕ್ರವಾಹನ ಸವಾರರೊಬ್ಬರ ಮೇಲೆ ಗುರುವಾರ ದಾಳಿ ಮಾಡಿದ್ದು, ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಬೃಹದಾಕಾರದ ಆನೆಯು ದಾಳಿ ನಡೆಸಿದಾಗ ಸ್ಕೂಟರ್ ಸವಾರ ರಸ್ತೆಯಲ್ಲಿ ಹೋಗುತ್ತಿದ್ದ ಜೀಪೆÇಂದನ್ನು ಏರಿ ಪಾರಾಗಿದ್ದಾರೆ. ಸವಾ ರರನ್ನು ರಕ್ಷಿಸಿದ ಜೀಪಿನಲ್ಲಿದ್ದವರು ಘಟನೆ ಯನ್ನು ಚಿತ್ರೀಕರಣ ಮಾಡಿದ್ದಾರೆ. ದಾಳಿ ನಡೆಸಿದ ನಂತರವೂ ಆನೆ ರಸ್ತೆ ಬದಿಯಲ್ಲೇ ಸುಮಾರು…
ವೃತ್ತಗಳಿಗೆ ಕಾರ್ಪೊರೇಟರ್‍ಗಳ ಹೆಸರು ನಾಮಕರಣ ಮಾಡದಂತೆ ಆಗ್ರಹ
October 23, 2020ಡಿಸಿ ರೋಹಿಣಿ ಸಿಂಧೂರಿ ಅವರಿಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಮಾಜಿ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಪತ್ರ ಮೈಸೂರು, ಅ.22-ಮೈಸೂರು ನಗರದ ಕೆಲವು ವೃತ್ತಗಳಿಗೆ ನಗರ ಪಾಲಿಕೆ ಸದಸ್ಯರ ಹಾಗೂ ಕೆಲವು ಮೃತಪಟ್ಟ ಗಣ್ಯರ ಹೆಸರಿಡುವ ಮೈಸೂರು ನಗರ ಪಾಲಿಕೆ ನಿರ್ಧಾರವನ್ನು ಬೆಂಗಳೂರು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹಾಗೂ ಚೇಂಬರ್ ಆಫ್ ಕಾಮರ್ಸ್‍ನ ಮಾಜಿ ಅಧ್ಯಕ್ಷರಾದ ಸುಧಾಕರ್ ಎಸ್.ಶೆಟ್ಟಿ ವಿರೋಧಿಸಿದ್ದಾರೆ. ಈ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಪತ್ರ…
ಮೈಸೂರು ಪೆÇಲೀಸ್ ಶ್ವಾನ ಪಡೆಯ ಬಾಂಬ್ ಪತ್ತೆ ದಳದ ‘ಲಕ್ಕಿ’ ಇನ್ನಿಲ
October 23, 2020ಮೈಸೂರು, ಅ.22- ಮೈಸೂರಿನ ಪೆÇಲೀಸ್ ಶ್ವಾನ ದಳದಲ್ಲಿದ್ದ ಹೆಣ್ಣು ನಾಯಿ ‘ಲಕ್ಕಿ’ ಸಾವಿಗೀಡಾಗಿದೆ. ಪೊಲೀಸ್ ಶ್ವಾನ ಪಡೆಯ ಸಿಬ್ಬಂದಿಯಾಗಿ 9 ಸಾವಿರ ರೂ ವೇತನ ಪಡೆಯುತ್ತಿದ್ದ ‘ಲಕ್ಕಿ’ ಬಹಳ ಚತುರ ನಾಯಿ ಎಂದೇ ಹೆಸರಾಗಿತ್ತು. ಹೆಡ್ ಕಾನ್‍ಸ್ಟೆಬಲ್‍ಗಳಾದ ಮಂಜುನಾಥ್ ಹಾಗೂ ಮೂರ್ತಿ ಉಸ್ತುವಾರಿಯಲ್ಲಿ ಲಕ್ಕಿ ಕಾರ್ಯ ನಿರ್ವಹಿಸುತ್ತಿತ್ತು. ನಗರದ ವ್ಯಕ್ತಿಯೊಬ್ಬರಿಂದ ಈ ಶ್ವಾನವನ್ನು ಖರೀದಿಸಿದ್ದ ಜಿಲ್ಲಾ ಶ್ವಾನ ದಳದ ಪೆÇಲೀಸರು, ಅದಕ್ಕೆ `ಲಕ್ಕಿ’ ಎಂದು ಹೆಸರಿಟ್ಟಿದ್ದರು. ಕಾರ್ಯ ಆರಂಭಿಸಿದ ಕೆಲವೇ ದಿನಗಳಲ್ಲಿ ಲಕ್ಕಿ ಕೇವಲ ಮೈಸೂರು ಮಾತ್ರವಲ್ಲ…
ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಿಗೆ ಪೂಜೆ ನಿಲುಗಡೆ: ಭಕ್ತರ ಬೇಸರ
October 23, 2020ಜೀರ್ಣೋದ್ಧಾರ ಉದ್ದೇಶದಿಂದ ಒಂದೂವರೆ ವರ್ಷದಿಂದ ದೇವಾಲಯ ಬಂದ್ ಆಗಿದೆ ಮೈಸೂರು, ಅ.22(ಎಸ್‍ಪಿಎನ್)- ಕಳೆದ ಒಂದೂವರೆ ವರ್ಷ ದಿಂದ ಮೈಸೂರಿನ ಮತ್ತೋರ್ವ ಶಕ್ತಿ ದೇವತೆ ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಿ(ಉತ್ತನಹಳ್ಳಿ ಮಾರಮ್ಮ) ಮೂಲ ವಿಗ್ರಹಕ್ಕೆ ಪೂಜೆ ಸಲ್ಲಿಸಲು ಅನುವು ಮಾಡಿಕೊಡದೇ ಇರುವುದಕ್ಕೆ ಭಕ್ತ ವೃಂದ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದರಿಂದ ನಾನಾ ರೀತಿಯ ಕಷ್ಟ-ನಷ್ಟ ಸಂಭವಿಸುತ್ತಿವೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಕಳೆದ 10 ವರ್ಷಗಳಿಂದಲೂ ಯಾವುದೇ ಅಹಿತಕರ ಘಟನೆಗಳು ನಡೆದಿರಲಿಲ್ಲ. ಆದರೆ, ಕಳೆದೆರಡು ವರ್ಷಗಳಿಂದ ನಂಜನ…
ದಸರಾ ಜನದಟ್ಟಣೆ ನಿರ್ವಹಣೆ ಸಂಬಂಧ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಇಂದು ಸಭೆ
October 22, 2020ಮೈಸೂರು,ಅ.21(ಎಸ್‍ಬಿಡಿ)-ಮೈಸೂರು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಪರಿಣಾಮಕಾರಿಯಾಗಿದ್ದು, ದಸರಾ ಸಂದರ್ಭದಲ್ಲಿ ಜನದಟ್ಟಣೆ ನಿರ್ವಹಣೆ ಸಂಬಂಧ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಚರ್ಚಿಸಿ, ನಾಳೆ(ಗುರುವಾರ) ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಬುಧವಾರ ಕೊರೊನಾ ನಿರ್ವಹಣೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಅವರೊಂದಿಗೆ ಉನ್ನತ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯಲ್ಲಿ ಕಳೆದ 8 ದಿನಗಳಿಂದ ಕೊರೊನಾ ನಿಯಂತ್ರಣ ಸಾಕಷ್ಟು ಯಶಸ್ವಿಯಾಗಿದೆ. ಪಾಸಿಟಿವ್…
ಮೈಸೂರಲ್ಲಿ ಸೋಂಕು ಇಳಿಮುಖ ಬುಧವಾರ 220 ಮಂದಿಗೆ ಕೊರೊನಾ
October 22, 2020ರಾಜ್ಯದಲ್ಲಿ 5872 ಜನರಿಗೆ ಜಾಡ್ಯ ಮೈಸೂರು, ಅ.21-ಮೈಸೂರು ಜಿಲ್ಲೆಯಲ್ಲಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಕುಗ್ಗುತ್ತಿದೆ. ಬುಧವಾರ 220 ಮಂದಿಗೆ ಸೋಂಕು ತಗುಲಿದ್ದರೆ, 1147 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 45,864 ಮಂದಿಗೆ ಸೋಂಕು ತಗುಲಿದ್ದು, ಅವರಲ್ಲಿ 39,886 ಮಂದಿ ಗುಣಮುಖರಾಗಿದ್ದಾರೆ. ಒಟ್ಟಾರೆ ಮೈಸೂರು ಜಿಲ್ಲೆಯಲ್ಲಿ ಶೇ.86.90ರಷ್ಟು ಸೋಂಕಿತರು ಗುಣಮುಖರಾಗಿರುವುದು ಸಮಾ ಧಾನಕರ ಸಂಗತಿಯಾಗಿದೆ. ಇಂದು 3 ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ 932ಕ್ಕೆ ಏರಿದೆ. 5046 ಸಕ್ರಿಯ ಸೋಂಕಿತರ ಪೈಕಿ ಕೋವಿಡ್ ಆಸ್ಪತ್ರೆಯಲ್ಲಿ 239, ಕೋವಿಡ್…
ಚಾಮುಂಡಿಬೆಟ್ಟಕ್ಕೆ ಸಂಜೆ 6ರ ನಂತರ ಪ್ರವೇಶ ನಿರ್ಬಂಧ; ಜನರ ಆಕ್ಷೇಪ
October 22, 2020ಮೈಸೂರು, ಅ.21(ಎಂಟಿವೈ)- ದಸರಾ ಮಹೋತ್ಸವ ವೇಳೆ ಲಕ್ಷಾಂತರ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿರುವ ಮೈಸೂ ರಿನ ಸೌಂದರ್ಯವನ್ನು ಚಾಮುಂಡಿಬೆಟ್ಟದ ಮೇಲಿನಿಂದ ವೀಕ್ಷಿಸಿ ಸಂಭ್ರಮಿಸಲು ಮುಂದಾ ಗಿದ್ದವರಿಗೆ ನಿರಾಸೆ ಕಾದಿದೆ. ಜಿಲ್ಲಾಡಳಿತ ಸಂಜೆ 6ರ ಬಳಿಕ ಚಾಮುಂಡಿಬೆಟ್ಟಕ್ಕೆ ಸಾರ್ವ ಜನಿಕರ ಪ್ರವೇಶವನ್ನು ನಿರ್ಬಂಧಿಸಿದೆ. ನವರಾತ್ರಿಯ ವೇಳೆ ವಿವಿಧ ಬಣ್ಣಬಣ್ಣದ ವಿದ್ಯುದ್ದೀಪಗಳಿಂದ ಮೈಸೂರು ನಗರ ಝಗ ಮಗಿಸುತ್ತಿದೆ. ಸಂಜೆಯಾಗುತ್ತಿದ್ದಂತೆಯೇ ಬೆಟ್ಟಕ್ಕೆ ತೆರಳಿ ರಾತ್ರಿ ವೇಳೆ ಕಾಣುವ ಮೈಸೂ ರಿನ ಸೊಬಗನ್ನು ಸವಿಯಲು ಮುಂದಾಗು ವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ವರ್ಷವೂ…
ಉಪ ಚುನಾವಣೆ ನಂತರ ಬಂಡೆ ಛಿದ್ರ ! ಹುಲಿಯಾ ಕಾಡಿಗೆ !!
October 22, 2020ಬೆಂಗಳೂರು,ಅ.21(ಕೆಎಂಶಿ)- ರಾಜ್ಯ ದಲ್ಲಿ ನಡೆಯುತ್ತಿರುವ ವಿಧಾನಸಭಾ ಉಪ ಚುನಾವಣೆಯ ಬಳಿಕ ಬಂಡೆ (ಶಿವಕುಮಾರ್) ಛಿದ್ರವಾಗುತ್ತದೆ. ಹುಲಿಯಾ (ಸಿದ್ದ ರಾಮಯ್ಯ) ಕಾಡಿಗೆ ಹೋಗಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಲೇವಡಿ ಮಾಡಿ ದ್ದಾರೆ. ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನ ಈ ನಾಯಕರ ಮಧ್ಯೆ ಸಮನ್ವಯತೆ ಇಲ್ಲದೆ, ಆ ಪಕ್ಷ ದಿಕ್ಕೆಟ್ಟು ಹೋಗಿದೆ ಎಂದರು. ಎರಡೂ ಕ್ಷೇತ್ರ ದಲ್ಲೂ ಬಿಜೆಪಿಯ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದ ಅವರು, ಸಿದ್ದರಾಮಯ್ಯ ಅವರಿಗೆ ಬಹು ಮತ…
ಸರ್ಕಾರಿ ನೌಕರರ ನಿವೇಶನ ಪರಿಹಾರದ ಹಣ 11.32 ಕೋಟಿ ವಂಚನೆ
October 22, 2020ಮಂಡ್ಯ, ಅ.21-ರಾಷ್ಟ್ರೀಯ ಹೆದ್ದಾರಿ 275ರ ಕಾಮಗಾರಿಗಾಗಿ ಭೂ ಸ್ವಾಧೀನವಾಗಿರುವ ಸರ್ಕಾರಿ ನೌಕರರ ಸಂಘದ ನಿವೇಶನಗಳ ಪರಿಹಾರದ ಮೊತ್ತ 11,32,42,375 ರೂ.ಗಳನ್ನು ಸಂಘದ ಮಾಜಿ ಅಧ್ಯಕ್ಷ ಮತ್ತು ಖಜಾಂಚಿ ತಮ್ಮ ಖಾತೆಗಳಿಗೆ ವರ್ಗಾ ವಣೆ ಮಾಡಿಕೊಂಡು ವಂಚಿಸಿದ್ದಾರೆ ಎಂದು ಸರ್ಕಾರಿ ನೌಕರರ ಸಂಘದ ಮಂಡ್ಯ ಶಾಖೆ ಅಧ್ಯಕ್ಷ ಎಸ್. ಶಂಭುಗೌಡ ಅವರು ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂಘದ ಮಾಜಿ ಅಧ್ಯಕ್ಷ ಟಿ.ಹೆಚ್.ರಾಮಕೃಷ್ಣ, ಮಾಜಿ ಖಜಾಂಚಿ ಸಾಕಮ್ಮ, ರಾಷ್ಟ್ರೀಯ ಹೆದ್ದಾರಿ 275, ಬೆಂಗಳೂರು-ಮೈಸೂರು ವಿಭಾಗದ ಮಂಡ್ಯ…










