ಬೆಂಗಳೂರು,ಅ.21(ಕೆಎಂಶಿ)-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನಾಯಕತ್ವ ಬದಲಾವಣೆ ಸುದ್ದಿ ಇದೀಗ ಭಾರೀ ಕೋಲಾ ಹಲ ಸೃಷ್ಟಿಸಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಮುಂದಿನ 3 ವರ್ಷಗಳ ಕಾಲ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಸ್ಪಷ್ಟ ಪಡಿಸಿದ್ದಾರೆ. ಟ್ವೀಟ್ ಮೂಲಕ ನಾಯಕತ್ವದ ವಿರುದ್ಧ ಅಶಿಸ್ತು ಪ್ರದರ್ಶಿಸಿದರೆ, ಅಂತಹವರ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲ, ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆಗೆ ಹೋಗಲಿದ್ದೇವೆ. ಪಕ್ಷ ಮತ್ತು ಸರ್ಕಾರದ ವಿರುದ್ಧ ಅಶಿಸ್ತಿನಿಂದ ನಡೆದುಕೊಂಡರೆ ಅಂತಹವರ ವಿರುದ್ಧ…
ನ.5ರಿಂದಲೇ ಶಿಕ್ಷಕರ ವರ್ಗಾವಣೆ ಆರಂಭ
October 22, 2020ಬೆಂಗಳೂರು: ಶಿಕ್ಷಕರು ಮತ್ತು ಉಪನ್ಯಾಸಕರ ವರ್ಗಾವಣೆ ವಿಳಂಬ ವಾಗಿದ್ದು, ಆ ಪ್ರಕ್ರಿಯೆಯನ್ನು ತಡಮಾಡದೇ ಶುರು ಮಾಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಇಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಆದೇ ಶಿಸಿದ್ದರು. ಇದರ ಬೆನ್ನಿಗೇ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಫೇಸ್‍ಬುಕ್/ಟ್ವಿಟರ್ ಖಾತೆಯಲ್ಲಿ ಈ ಸಂಬಂಧ ಅಪ್ಡೇಟ್ ನೀಡಿದ್ದಾರೆ. ಇದರಂತೆ, ನ.5ರಿಂದ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆ ಪ್ರಾರಂಭವಾಗಲಿದೆ. ಈಗಾಗಲೇ ಭರವಸೆ ನೀಡಿರುವಂತೆ ಕಳೆದ ಸಾಲಿನಲ್ಲಿ ಕಡ್ಡಾಯ ಹಾಗೂ ಹೆಚ್ಚುವರಿ ವರ್ಗಾವಣಾ ಶಿಕ್ಷೆಗೆ ಒಳಗಾದ ಶಿಕ್ಷಕರಿಗೆ…
ದಸರಾ ಸಾಂಸ್ಕøತಿಕ ವೇದಿಕೆಯಲ್ಲಿ ಎಸ್‍ಪಿಬಿಗೆ ಗೀತ ನಮನ
October 22, 2020ಮೈಸೂರು, ಅ.21(ಎಸ್‍ಪಿಎನ್)- ಇತ್ತೀಚೆಗೆ ನಿಧನರಾದ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಭಾವಚಿತ್ರಕ್ಕೆ ಆರೋಗ್ಯ-ಕುಟುಂಬ ಕಲ್ಯಾಣ ಮತ್ತು ವೈದ್ಯ ಕೀಯ ಶಿಕ್ಷಣ ಖಾತೆ ಸಚಿವ ಡಾ.ಕೆ.ಸುಧಾಕರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪುಷ್ಪಾರ್ಚನೆ ಸಲ್ಲಿಸಿ ಗೌರವ ಅರ್ಪಿಸಿದರು. ನಾಡಹಬ್ಬ ದಸರಾ ಮಹೋತ್ಸವದಂಗ ವಾಗಿ ಮೈಸೂರಿನಲ್ಲಿ ಅಂಬಾವಿಲಾಸ ಅರಮನೆ ಆವರಣದಲ್ಲಿ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಸ್ಮರ ಣಾರ್ಥ ಬುಧವಾರ ಆಯೋಜಿಸಿದ್ದ ಗಾಯಕ ರಾಜೇಶ್ ಕೃಷ್ಣನ್ ನೇತೃತ್ವದ ತಂಡದ ಗಾಯನ ಕಾರ್ಯಕ್ರಮದಲ್ಲಿ ಸಚಿವರಿಬ್ಬರೂ ಪಾಲ್ಗೊಂಡಿದ್ದರು. ನಂತರ ಮಾತನಾಡಿದ…
ಟ್ರಾಮಾ ಕೇರ್ ಸೆಂಟರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಪರಿಶೀಲಿಸಿದ ಶಾಸಕ ಎಲ್.ನಾಗೇಂದ್ರ
October 22, 2020ಮೈಸೂರು, ಅ.21(ಎಸ್‍ಪಿಎನ್)- ನಗರದ ಪಿಕೆಟಿಬಿ ಆಸ್ಪತ್ರೆ ಆವರಣದಲ್ಲಿ 33 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಟ್ರಾಮಾ ಕೇರ್ ಸೆಂಟರ್ ಹಾಗೂ ಸೂಪರ್ ಸ್ಪೆಷಾಲಿಟಿ ಅಸ್ಪತ್ರೆ ಕಟ್ಟಡದ ಕಾಮಗಾರಿ ಸ್ಥಳಕ್ಕೆ ಶಾಸಕ ಎಲ್.ನಾಗೇಂದ್ರ ಅಧಿಕಾರಿಗಳೊಂದಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಟ್ರಾಮಾಕೇರ್ ಸೆಂಟರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ಕಾಮಗಾರಿ ಅಂತಿಮ ಹಂತದಲ್ಲಿದೆ. ಸಾರ್ವಜನಿಕ ಸೇವೆಗೆ ಬಳಸಿಕೊಳ್ಳಲು ಬೇಕಾದ ಅನುದಾನ, ಸಲಕರಣೆ, ಉಪಕರಣ, ಯಂತ್ರೋಪಕರಣದ ಪ್ರತಿಷ್ಠಾಪನೆಗಳನ್ನು ಖುದ್ದು ಪರಿಶೀಲಿ ಸಲು ಶಾಸಕರು ಭೇಟಿ ನೀಡಿದರು. ನಂತರ…
ದೇಶದ ಉಸಿರಾಗಿರುವ ರಾಜಕಾರಣ ಕುರಿತು ಹೆಚ್ಚು ಹೆಚ್ಚು ಸಾಹಿತ್ಯ ಕೃಷಿಯಾಗಬೇಕು
October 22, 2020ಮೈಸೂರು, ಅ.21(ಪಿಎಂ)- ನಮ್ಮ ದೇಶದ ಉಸಿರೇ ರಾಜಕಾರಣ. ಅದು ಮಾಲಿನ್ಯ ವಾಗದೇ ಶುಚಿತ್ವದಿಂದ ಇರಬೇಕಾದರೆ ರಾಜಕೀಯ ಸಂಬಂಧಿತ ಸಾಹಿತ್ಯ ಕೃಷಿ ಹೆಚ್ಚಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎ.ಹೆಚ್.ವಿಶ್ವನಾಥ್ ಅಭಿಪ್ರಾಯಪಟ್ಟರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಪತ್ರಕರ್ತರ ಸಂಘ, ತನು ಮನು ಪ್ರಕಾಶನ ಜಂಟಿ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರ `ಮತಭಿಕ್ಷೆ (2019ರ ಮಂಡ್ಯ ಲೋಕಸಭಾ ಚುನಾವಣೆ ಕುರಿತು)’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಶಿಶು ಸಾಹಿತ್ಯ, ಬಂಡಾಯ ಸಾಹಿತ್ಯ, ದಲಿತ…
ಕೊರೊನಾ ಸೋಂಕು ತಡೆಗಾಗಿ 3 ದಿನ ದೇವರಾಜ ಮಾರುಕಟ್ಟೆ ಬಂದ್
October 22, 2020ಮೈಸೂರು, ಅ.21(ಎಂಟಿವೈ)- ದಸರಾ ಮಹೋತ್ಸವದ ಆಯುಧ ಪೂಜೆ ಹಾಗೂ ವಿಜಯ ದಶಮಿ ಹಿನ್ನೆಲೆಯಲ್ಲಿ ಪೂಜಾ ಸಾಮಗ್ರಿ ಖರೀದಿಗಾಗಿ ಗ್ರಾಹಕರು ಮುಗಿಬೀಳುವ ಮೂಲಕ ಕೊರೊನಾ ಸೋಂಕು ಸ್ಫೋಟಗೊಳ್ಳುವುದನ್ನು ತಡೆಗಟ್ಟಲು ಮೈಸೂರಿನ ದೇವರಾಜ ಮಾರು ಕಟ್ಟೆಯಲ್ಲಿನ ಹೂವಿನ ಮಳಿಗೆಗಳನ್ನು ಅ.23 ರಿಂದ 25ರವರೆಗೆ ಮೂರು ದಿನ ಬಂದ್ ಮಾಡಿ, ಹೂವು ಮತ್ತು ಚಿಲ್ಲರೆ ವ್ಯಾಪಾರ ಮಳಿಗೆಯನ್ನು ಜೆ.ಕೆ.ಮೈದಾನಕ್ಕೆ ಸ್ಥಳಾಂತರ ಗೊಳಿಸುವಂತೆ ಮೈಸೂರು ನಗರ ಪಾಲಿಕೆ ಆದೇಶಿಸಿದೆ. ಕೆಲವು ದಿನಗಳಿಂದ ಮೈಸೂರು ನಗರದಲ್ಲಿ ಪ್ರತಿದಿನ ಸರಾಸರಿ 400ಕ್ಕೂ ಹೆಚ್ಚು ಕೊರೊನಾ ಸೋಂಕಿತರು…
ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ, ಬಿಎಸ್‍ವೈ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ
October 22, 2020ಮೈಸೂರು, ಅ.21(ಪಿಎಂ)- ಬಿ.ಎಸ್.ಯಡಿ ಯೂರಪ್ಪನವರೇ ರಾಜ್ಯದ ಮುಖ್ಯ ಮಂತ್ರಿಗಳಾಗಿ ಮುಂದುವರೆಯ ಲಿದ್ದು, ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗು ತ್ತಿಲ್ಲ. ನಮ್ಮ ಪಕ್ಷದ ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತಮ್ಮ ಅನಿಸಿಕೆ ತಿಳಿಸಿದ್ದು, ಅದು ಬಿಜೆಪಿ ಅನಿಸಿಕೆ ಆಗುವುದಿಲ್ಲ. ಅದು ಅವರ ವೈಯ ಕ್ತಿಕ ಹೇಳಿಕೆಯಷ್ಟೇ ಎಂದು ವಿಧಾನ ಪರಿಷತ್ ಸದಸ್ಯ ಎ.ಹೆಚ್.ವಿಶ್ವನಾಥ್ ತಿಳಿಸಿದರು. ರಾಜ್ಯದಲ್ಲಿ ಸಿಎಂ ಬದಲಾ ವಣೆ ಆಗಲಿದೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಸಂಬಂಧ ಮೈಸೂರು ಜಿಲ್ಲಾ…
ಪುರಾಣನಾಮ ಚೂಡಾಮಣಿ ಪುಸ್ತಕದ ಆನ್‍ಲೈನ್ ಅವತರಣಿಕೆ ಬಿಡುಗಡೆ
October 22, 2020ಮೈಸೂರು, ಅ.21(ಆರ್‍ಕೆಬಿ)- ಮೈಸೂ ರಿನ ಮಾನಸ ಗಂಗೋತ್ರಿಯಲ್ಲಿ ಮೈಸೂರು ವಿವಿಯ ಯುಜಿಸಿ-ಮಾನವ ಸಂಪ ನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ `ರಾಷ್ಟ್ರೀಯ ಉಚ್ಛತಾ ಶಿಕ್ಷಾ ಅಭಿಯಾನ’ (ರೂಸಾ) ಪ್ರಾಯೋಜಿಸಿ ಹೊಸದಾಗಿ ನಿರ್ಮಿಸಿದ ವಿಡಿಯೊ ಕಾನ್ಫರೆನ್ಸ್ ಹಾಲ್ ಮತ್ತು ವಾಣಿಜ್ಯ ಶಾಸ್ತ್ರ ಪುನಶ್ಚೇತನ ಶಿಬಿರದ ಉದ್ಘಾ ಟನೆಯನ್ನು ಬೆಂಗಳೂರಿನ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾ ಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಶಿ ಬುಧವಾರ ನೆರವೇರಿಸಿದರು. ಇದೇ ವೇಳೆ, ಪುರಾಣನಾಮ ಚೂಡಾಮಣಿ ಪುಸ್ತಕದ ಆನ್‍ಲೈನ್ ಅವತರಣಿಕೆಯನ್ನು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿ,…
ತೋಪಿನಮಠದ ಶ್ರೀಗಳಿಗೆ ಸುತ್ತೂರು ಶ್ರೀ ಸಂತಾಪ
October 22, 2020ಮೈಸೂರು, ಅ.21- ತಿ.ನರಸೀಪುರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮುಡುಕು ತೊರೆಯ ಶ್ರೀ ತೋಪಿನ ಮಠದ ಮಹಾಲಿಂಗ ಶಿವಾಚಾರ್ಯ ಸ್ವಾಮಿಗಳ ನಿಧನಕ್ಕೆ ಸುತ್ತೂರು ಶ್ರೀಗಳು ತೀವ್ರ ಸಂತಾಪ ಸೂಚಿಸಿದ್ದಾರೆ. `ಶ್ರೀ ಮಹಾಲಿಂಗ ಶಿವಾಚಾರ್ಯ ಸ್ವಾಮಿಗಳು ಭಾನುವಾರ ಶಿವ ಸಾಯುಜ್ಯ ಹೊಂದಿದುದು ವಿಷಾದದ ಸಂಗತಿ. 98 ವಸಂತಗಳನ್ನು ಶಿವ ಕಾರುಣ್ಯದಲ್ಲಿಯೇ ಕಳೆದರು. 20ನೇ ವಯಸ್ಸಿನಲ್ಲಿಯೇ ಮಳ ವಳ್ಳಿ ತಾಲೂಕು ಹೊನ್ನಲಗೆರೆಯ ಚಂದೂಪುರದ ಮಠದ ಪಟ್ಟಾ ಧಿಕಾರ ಸ್ವೀಕರಿಸಿ, ಮಠದ ಧಾರ್ಮಿಕ ಕೈಂಕರ್ಯವನ್ನು ನಿಷ್ಠೆಯಿಂದ ನಡೆಸುತ್ತಾ ಬಂದರು. ನಂತರ ಮುಡುಕುತೊರೆ…
ಅಪರಾಧಿಗಳಿಗೆ ಕ್ಷಮೆ ಇಲ್ಲ: ಉಪ್ರ ಸಿಎಂ ಯೋಗಿ ಆದಿತ್ಯನಾಥ್
October 22, 202024 ಗಂಟೆಗಳಲ್ಲಿ 23 ಮಂದಿಗೆ ಜೀವಾವಧಿ ಶಿಕ್ಷೆ, ವರ್ಷದಲ್ಲಿ 14 ಮಂದಿಗೆ ಗಲ್ಲು, 3 ವರ್ಷದಲ್ಲಿ 125 ಎನ್‍ಕೌಂಟರ್ ಲಖನೌ, ಅ.21- ಉತ್ತರ ಪ್ರದೇಶ ಹಿಂದಿನಿಂದಲೂ ಅಪರಾಧಿಕ ಚಟುವಟಿಕೆಯ ತಾಣ, ಗೂಂಡಾ ರಾಜ್ಯ ಎಂದೇ ಕುಖ್ಯಾತಿ ಗಳಿಸಿದೆ. ಆದರೆ ಇತ್ತೀಚೆಗೆ ನಡೆಯುತ್ತಿರುವ ಅಪರಾಧ ಘಟನೆಗಳು ದೇಶಾದ್ಯಂತ ಭಾರೀ ಸುದ್ದಿ ಮಾಡುತ್ತಿವೆ. ಇದರ ಬೆನ್ನಲ್ಲೇ ಅಪರಾಧಿಗಳಿಗೆ ನಡುಕ ಹುಟ್ಟಿಸುವ ಸುದ್ದಿ ರಾಜ್ಯ ಸರ್ಕಾರದಿಂದ ಹೊರಬಿದ್ದಿದೆ. ಅತ್ಯಂತ ಗಮನಾರ್ಹ ಸಂಗತಿ ಎಂದರೆ, ಕಳೆದ 24 ಗಂಟೆ ಗಳಲ್ಲಿ 23 ಆರೋಪಿಗಳಿಗೆ…










