ಮೈಸೂರು

ಅ.15ರಂದು ಮಹಿಷಾ ದಸರಾ
ಮೈಸೂರು

ಅ.15ರಂದು ಮಹಿಷಾ ದಸರಾ

September 15, 2020

ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ನಿರ್ಧಾರ ಮೈಸೂರು, ಸೆ.14(ಪಿಎಂ)- ಪ್ರತಿ ವರ್ಷದಂತೆ ಈ ಬಾರಿಯೂ ಮಹಿಷಾ ದಸರಾ ಆಚರಿಸಲು ನಿರ್ಧರಿಸಿದ್ದು, ಕೊರೊನಾ ಹಿನ್ನೆಲೆ ಯಲ್ಲಿ ಸರಳವಾಗಿ ಆಚರಣೆ ಮಾಡಲಿದ್ದೇವೆ. ಇದಕ್ಕೆ ಸರ್ಕಾರ ತಡೆಯೊಡ್ಡದೇ ಅವಕಾಶ ಕಲ್ಪಿಸಬೇಕು ಎಂದು ಮಹಿಷಾ ದಸರಾ ಆಚರಣೆ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಪುರುಷೋತ್ತಮ್ ಒತ್ತಾಯಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದ ಆವರಣ ದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಅ.15ರ ಅಮಾವಾಸ್ಯೆ ದಿನದಂದು ಮಹಿಷಾ ದಸರಾ ಆಚರಿಸಲಾಗುವುದು. ಈ ಸಂಬಂಧ…

`ಅಂಬಾರಿ’ ಅರ್ಜುನನ ವೈಭೋಗ ಮರೆಯಲಾದೀತೆ…
ಮೈಸೂರು

`ಅಂಬಾರಿ’ ಅರ್ಜುನನ ವೈಭೋಗ ಮರೆಯಲಾದೀತೆ…

September 15, 2020

ಮೈಸೂರು, ಸೆ.14(ಎಸ್‍ಬಿಡಿ)- ಪಾರಂಪರಿಕ ಮೈಸೂರು ದಸರಾ ಮಹೋತ್ಸವದಲ್ಲಿ ಸತತ 8 ಬಾರಿ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಬಾಯಿಸಿದ್ದ ಅರ್ಜುನ, ಈ ಬಾರಿ ಬರುತ್ತಿಲ್ಲ ಎನ್ನುವುದೇ ಜನ ರಿಗೆ ಅತ್ಯಂತ ಬೇಸರದ ಸಂಗತಿ. ವಿಜಯದಶಮಿ ಮೆರವಣಿಗೆಯಲ್ಲಿ ತಾಯಿ ಚಾಮುಂಡೇಶ್ವರಿ ಪ್ರತಿಷ್ಠಾಪಿತ 750 ಕೆಜಿ ಚಿನ್ನದ ಅಂಬಾರಿ ಯನ್ನು ಹೊತ್ತು, ಅರಮನೆ ಅಂಗಳದಿಂದ ಬನ್ನಿಮಂಟಪ ದವರೆಗೆ ಗಾಂಭೀರ್ಯದಿಂದ ಸಾಗುವ ಅರ್ಜುನನನ್ನು ನೋಡುವುದೇ ಒಂದು ಚಂದ ವಾಗಿತ್ತು. 2012ರಿಂದ 2019 ರವರೆಗೆ ಸತತವಾಗಿ 8 ಬಾರಿ ಕಿಂಚಿತ್ತೂ ಲೋಪವಾಗದಂತೆ…

ಮೊಬೈಲ್ ಹೆಚ್ಚು ನೋಡಬೇಡ ಎಂದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ
ಮೈಸೂರು

ಮೊಬೈಲ್ ಹೆಚ್ಚು ನೋಡಬೇಡ ಎಂದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

September 15, 2020

ಮೈಸೂರು, ಸೆ.14(ಎಂಕೆ)- `ಅತಿಯಾಗಿ ಮೊಬೈಲ್ ನೋಡಬೇಡ’ ಎಂದು ಬುದ್ಧಿಮಾತು ಹೇಳಿದ್ದಕ್ಕೇ ದ್ವಿತೀಯ ಪಿಯು ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಎನ್.ಆರ್.ಮೊಹಲ್ಲಾದಲ್ಲಿ ಸೋಮವಾರ ನಡೆ ದಿದೆ. ಪೆÇೀಷಕರು ಬುದ್ಧಿ ಹೇಳಿದ್ದಕ್ಕೆ ಕೋಪಗೊಂಡು ವಿದ್ಯಾರ್ಥಿನಿ ಮನೆಯ ಕೊಠಡಿ ಯಲ್ಲಿ ಬಾಗಿಲು ಹಾಕಿಕೊಂಡು ನೇಣು ಹಾಕಿಕೊಂಡಿದ್ದಾಳೆ ಎಂದು ಪೆÇಲೀಸರು ತಿಳಿಸಿದ್ದಾರೆ. ಎನ್.ಆರ್.ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊನೆಗೂ 1 ರೂ. ದಂಡ ಕಟ್ಟಿದ ವಕೀಲ ಪ್ರಶಾಂತ್ ಭೂಷಣ್
ಮೈಸೂರು

ಕೊನೆಗೂ 1 ರೂ. ದಂಡ ಕಟ್ಟಿದ ವಕೀಲ ಪ್ರಶಾಂತ್ ಭೂಷಣ್

September 15, 2020

ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕ ರಣದಲ್ಲಿ ತಪ್ಪಿತಸ್ಥ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು ಸರಿಯಲ್ಲ ಎಂದು ವಾದಿಸುತ್ತಾ ಬಂದಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಕೊನೆಗೂ ಕೋರ್ಟ್ ತೀರ್ಪಿನಂತೆ 1 ರೂ. ದಂಡ ಪಾವತಿ ಮಾಡಿದ್ದಾರೆ. ಆದರೆ ತಮ್ಮನ್ನು ತಪ್ಪಿತಸ್ಥರು ಎಂದು ತೀರ್ಪಿತ್ತ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ವಿಸ್ಕೃತ ಪೀಠಕ್ಕೆ ಮನವಿ ಸಲ್ಲಿಸಲು ಬಯಸಿರುವ ಭೂಷಣ್, ಕಳೆದ ಶನಿವಾರ, ಇದಕ್ಕೆ ಅನು ಮತಿ ನೀಡುವಂತೆ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಪ್ರಕರಣ ವಿಚಾ ರಣೆಯನ್ನು…

ರಾಜ್ಯದಲ್ಲಿ ವೈದ್ಯರ ಅಸಹಕಾರ ಚಳುವಳಿ ಆರಂಭ
ಮೈಸೂರು

ರಾಜ್ಯದಲ್ಲಿ ವೈದ್ಯರ ಅಸಹಕಾರ ಚಳುವಳಿ ಆರಂಭ

September 15, 2020

ಮೈಸೂರು, ಸೆ.14(ಆರ್‍ಕೆ)- ಗುತ್ತಿಗೆ ಆಧಾ ರದ ವೈದ್ಯರ ಸೇವೆ ಖಾಯಂ, ವೇತನ ತಾರತಮ್ಯ ನಿವಾರಣೆ, ಸುರಕ್ಷತಾ ಕ್ರಮ ಸೇರಿದಂತೆ ತಮ್ಮ ಬಾಕಿ ಇರುವ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದಾದ್ಯಂತ ಸರ್ಕಾರಿ ವೈದ್ಯರು ಇಂದಿ ನಿಂದ ಅಸಹಕಾರ ಚಳುವಳಿ ಆರಂಭಿಸಿದ್ದಾರೆ. ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ (KGMOA)ದ ನಿರ್ಧಾರ ಹಾಗೂ ಕರೆಯ ಮೇರೆಗೆ ಕೋವಿಡ್-19 ಹಾಗೂ ನಾನ್ ಕೋವಿಡ್ ಸಂಬಂಧ ಮಾಹಿತಿ ಹಾಗೂ ಪರೀಕ್ಷಾ ವರದಿಯನ್ನು ಸರ್ಕಾ ರಕ್ಕೆ ನೀಡದೇ ಅಸಹಕಾರ ಚಳುವಳಿಗೆ ವೈದ್ಯರು ಮುಂದಾಗಿದ್ದಾರೆ. ಇಂದಿನಿಂದ…

ಕೇಂದ್ರದ ಅನುಮತಿ ಬಳಿಕ ಮೇಕೆದಾಟು ಅಣೆಕಟ್ಟು ನಿರ್ಮಾಣ
ಮೈಸೂರು

ಕೇಂದ್ರದ ಅನುಮತಿ ಬಳಿಕ ಮೇಕೆದಾಟು ಅಣೆಕಟ್ಟು ನಿರ್ಮಾಣ

September 15, 2020

ರಾಮನಗರ,ಸೆ.14-ಪ್ರಸ್ತಾಪಿತ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ರುವ 9000 ಕೋಟಿ ರೂ.ಗಳ ವೆಚ್ಚದ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಅನುಮೋದನೆ ಪಡೆದುಕೊಂಡ ಬಳಿಕ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು. ಯೋಜನೆಗೆ ಸಂಬಂಧಿಸಿದಂತೆ ಅರ್ಕಾವತಿ ಮತ್ತು ಕಾವೇರಿ ಸೇರುವ ಸಂಗಮ ಹಾಗೂ ಜಲಾಶಯ ನಿರ್ಮಿಸಲಾಗುವ ಉದ್ದೇಶಿತ ಒಂಟಿಗುಂಡ್ಲು ಪ್ರದೇಶಕ್ಕೆ ಇಂದು ಭೇಟಿ ನೀಡಿ, ಸ್ಥಳ ಪರಿಶೀಲಿಸಿದ ಬಳಿಕ ಮಾತನಾಡಿದ ಸಚಿವರು, ಅಣೆಕಟ್ಟು ನಿರ್ಮಾಣವಾಗುವುದರಿಂದ ಸುಮಾರು 5051 ಹೆಕ್ಟೇರ್ ಅರಣ್ಯ…

ನ.1, ದೇಶಾದ್ಯಂತ ಕನ್ನಡ ದಿನವಾಗಿ ಆಚರಿಸಿ
ಮೈಸೂರು

ನ.1, ದೇಶಾದ್ಯಂತ ಕನ್ನಡ ದಿನವಾಗಿ ಆಚರಿಸಿ

September 15, 2020

ಬೆಂಗಳೂರು,ಸೆ.14(ಕೆಎಂಶಿ)- ನವೆಂಬರ್ 1 ಅನ್ನು ದೇಶದಾ ದ್ಯಂತ ಕನ್ನಡ ದಿನವಾಗಿ ಆಚರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಅನ್ಯ ಭಾಷಿಕರಿಗೆ ನಿರರ್ಥಕವಾಗಿರುವ ಹಿಂದಿ ದಿವಸವನ್ನು ಆಚರಿಸುವುದೇ ಆದರೆ, ಹಿಂದಿ ಯೊಂದಿಗೆ ಅಧಿಕೃತ ಭಾಷೆಗಳೆನಿಸಿರುವ ಕನ್ನಡವೂ ಸೇರಿದಂತೆ ಎಲ್ಲಾ ಭಾಷೆಗಳ ದಿನವನ್ನು ಕೇಂದ್ರ ಸರ್ಕಾರವೇ ದೇಶದಾದ್ಯಂತ ಆಚರಣೆ ಮಾಡಬೇಕು. ಇದಕ್ಕಾಗಿ ಪ್ರತ್ಯೇಕ ದಿನವನ್ನೂ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ವಿವಿಧ ಭಾಷೆ, ವಿಭಿನ್ನ ಸಂಸ್ಕೃತಿ, ಪರಂಪರೆಗಳನ್ನು…

ಮಿಸ್ಟರ್ ಏಷ್ಯಾ ಈಗ ಕೃಷಿ ಕಾರ್ಯನಿರತ!
ಮೈಸೂರು

ಮಿಸ್ಟರ್ ಏಷ್ಯಾ ಈಗ ಕೃಷಿ ಕಾರ್ಯನಿರತ!

September 14, 2020

ಮೈಸೂರು, ಸೆ.13 (ವೈಡಿಎಸ್)- ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ಬಂದ ದಾರಿಯನ್ನು ಎಂದಿಗೂ ಮರೆಯ ಬಾರ ದಂತೆ. ಇದಕ್ಕೆ ಅನ್ವರ್ಥಕ ಎಂಬಂತೆ ಮೈಸೂರಿನ ಮಾಡೆಲ್‍ವೊಬ್ಬರು ಅಂತರರಾಷ್ಟ್ರೀಯ ಮಟ್ಟದ ಫ್ಯಾಷನ್ ಶೋನಲ್ಲಿ ಮಿಂಚಿ `ಮಿಸ್ಟರ್ ಏಷ್ಯಾ’ ಆಗಿ ಹೊರ ಹೊಮ್ಮಿದರೂ ಎಲ್ಲಾ ಹಿರಿಮೆ ಗಳನ್ನು ಬದಿಗೊತ್ತಿ ತಮ್ಮ ಜಮೀನಿನಲ್ಲಿ ಕೃಷಿ ಕಾಯಕದಲ್ಲಿ ನಿರತರಾಗಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ದೇವನೂರು ನಿವಾಸಿ ರೈತ ಚಿನ್ನಬುದ್ದಿ ಮತ್ತು ರೇಣುಕಾ ದಂಪತಿ ಪುತ್ರ ನಾಗೇಶ್, ನೇಪಾಳದ ಕಠ್ಮಂಡು ವಿನಲ್ಲಿ ಮಂಜರಿ ನೇಪಾಳ್…

ಕುವೆಂಪುನಗರದಲ್ಲಿ ಭಾರೀ ಗಾತ್ರದ ಹೆಬ್ಬಾವು ಪ್ರತ್ಯಕ್ಷ: ಸ್ನೇಕ್ ಶ್ಯಾಮ್‍ರಿಂದ ರಕ್ಷಣೆ
ಮೈಸೂರು

ಕುವೆಂಪುನಗರದಲ್ಲಿ ಭಾರೀ ಗಾತ್ರದ ಹೆಬ್ಬಾವು ಪ್ರತ್ಯಕ್ಷ: ಸ್ನೇಕ್ ಶ್ಯಾಮ್‍ರಿಂದ ರಕ್ಷಣೆ

September 14, 2020

ಮೈಸೂರು, ಸೆ.13(ಎಂಟಿವೈ)- ಮೈಸೂರಿನ ಕುವೆಂಪುನರದ ಇ ಅಂಡ್ ಎಫ್ ಬ್ಲಾಕ್‍ನಲ್ಲಿ ಶನಿವಾರ ರಾತ್ರಿ ಬಾರಿ ಗಾತ್ರ ಹೆಬ್ಬಾವು ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆಶ್ಚರ್ಯದೊಂದಿಗೆ ಆತಂಕ ಸೃಷ್ಟಿಸಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಉರಗ ತಜ್ಞ ಸ್ನೇಕ್ ಶ್ಯಾಮ್ ಖಾಲಿ ನಿವೇಶನದ ಪೊದೆಯಲ್ಲಿ ಅಡಗಿದ್ದ ಹೆಬ್ಬಾವನ್ನು ರಕ್ಷಿಸಿ ಸ್ಥಳೀಯರಲ್ಲಿ ಮನೆ ಮಾಡಿದ್ದ ಆತಂಕ ನಿವಾರಿಸಿದರು. ಕುವೆಂಪುನಗರದ ಇ ಅಂಡ್ ಎಫ್ ಬ್ಲಾಕ್‍ನಲ್ಲಿ ಅಕ್ಷಯ್ ಬಂಡಾರದಿಂದ ಶಾಂತಿಸಾಗರ್‍ಗೆ ಹೋಗುವ ರಸ್ತೆಯಲ್ಲಿ ಕಳೆದ ರಾತ್ರಿ 9.45ರಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ಬಿಜೆಪಿ ಮುಖಂಡ ರಮೇಶ್(ಬಣ್ಣ) ಸ್ನೇಹಿತ…

ಕೊರೊನಾ ನಿಯಂತ್ರಿಸದ ಬಿಎಸ್‍ವೈ ಸರ್ಕಾರಕ್ಕೆ ಅಧಿಕಾರದಲ್ಲಿರಲು ಅರ್ಹತೆ ಇಲ್ಲ: ವಾಟಾಳ್ ನಾಗರಾಜ್ ಖಂಡನೆ
ಮೈಸೂರು

ಕೊರೊನಾ ನಿಯಂತ್ರಿಸದ ಬಿಎಸ್‍ವೈ ಸರ್ಕಾರಕ್ಕೆ ಅಧಿಕಾರದಲ್ಲಿರಲು ಅರ್ಹತೆ ಇಲ್ಲ: ವಾಟಾಳ್ ನಾಗರಾಜ್ ಖಂಡನೆ

September 14, 2020

ಮೈಸೂರು, ಸೆ.13(ಪಿಎಂ)- ರಾಜ್ಯದಲ್ಲಿ ಈವರೆಗೆ 7 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ ಎಂದರೆ ರಾಜ್ಯದಲ್ಲಿ ಸರ್ಕಾರ ಇದೆಯೋ? ಇಲ್ಲ ಸತ್ತು ಹೋಗಿದೆಯೋ? ಎಂದು ಆಕ್ರೋಶ ವ್ಯಕ್ತ ಪಡಿಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಮುಖ್ಯ ಮಂತ್ರಿ ಯಡಿಯೂರಪ್ಪ ಸರ್ಕಾರಕ್ಕೆ ಅಧಿ ಕಾರದಲ್ಲಿರಲು ಅರ್ಹತೆ ಇಲ್ಲ. ರಾಜೀ ನಾಮೆ ಕೊಟ್ಟು ರಾಜ್ಯಪಾಲರ ಆಡಳಿತ ಜಾರಿ ಗೊಳಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂ ತ್ರಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಪೂರ್ಣ ವಿಫಲವಾಗಿದೆ…

1 434 435 436 437 438 1,611
Translate »