ಮೈಸೂರು, ಸೆ.19- ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ) ‘ನಿರುದ್ಯೋಗ ಹಠಾವೋ, ವಿದ್ಯಾ ವಂತ ಯುವಕರ ಬಚಾವೋ’ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದು ಪಕ್ಷದ ಸಂಸ್ಥಾಪಕ ಅಧ್ಯಕ್ಷ ಡಾ.ಬಿ.ಶಿವಣ್ಣ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದಲ್ಲಿ ಕಳೆದ 50 ವರ್ಷಗಳಲ್ಲಿ ಯಾರೂ ಕಂಡು ಕೇಳರಿಯದಂತಹ ನಿರುದ್ಯೋಗ ಸಮಸ್ಯೆ ತಾಂಡವ ವಾಡುತ್ತಿದೆ. ವಿದ್ಯಾವಂತ ಯುವಕರು ತಮ್ಮ ಸ್ನಾತಕೋತ್ತರ ಮತ್ತು ಪದವಿ ಸರ್ಟಿಫಿಕೇಟ್‍ಗಳನ್ನು ಹಿಡಿದು ಉದ್ಯೋಗಕ್ಕಾಗಿ ರಸ್ತೆಯಲ್ಲಿ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ದೇಶದ…
ಮೈಸೂರು ಅರಮನೆಗೆ ಪ್ರವಾಸಿಗರ ಆಗಮನ
September 18, 2020ಮೈಸೂರು,ಸೆ.17(ಆರ್‍ಕೆ)- ಕೋವಿಡ್ -19 ಸಂಕಷ್ಟ ಪರಿಸ್ಥಿತಿ ನಡುವೆಯೂ, ಮೈಸೂರು ಅರಮನೆಯತ್ತ ಪ್ರವಾಸಿಗರು ಮುಖ ಮಾಡಿರುವುದು ಸ್ಥಳೀಯ ಪ್ರವಾ ಸೋದ್ಯಮಕ್ಕೆ ಹೊಸ ಭರವಸೆ ಮೂಡಿ ಸಿದೆ. ಲಾಕ್‍ಡೌನ್ ನಿರ್ಬಂಧದಿಂದಾಗಿ ಕಳೆಗುಂದಿದ್ದ ಅಂಬಾ ವಿಲಾಸ ಅರಮನೆÀ ನಿರ್ಬಂಧ ತೆರವುಗೊಂಡ ನಂತರ ಈಗ ಚಟುವಟಿಕೆ ತಾಣವಾಗಿದ್ದು, ಇದರಿಂದ ಮೈಸೂರು ಪ್ರವಾಸೋದ್ಯಮ ಚೇತರಿಕೆ ಕಾಣುವ ಲಕ್ಷಣ ಕಂಡುಬಂದಿದೆ. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಲಾಕ್‍ಡೌನ್‍ನಿಂದಾಗಿ ವಿಶ್ವವಿಖ್ಯಾತ ಮೈಸೂರು ಅರಮನೆ ಕಳೆದ 70-80 ದಿನ ಗಳಿಂದ ಬಂದ್ ಆಗಿತ್ತು. ಪ್ರವಾಸಿ ಸ್ಥಳ ಗಳ ಮೇಲಿನ ನಿರ್ಬಂಧ…
ದಸರಾ ವೇಳೆ ಅರಮನೆ ಅಲಂಕಾರಕ್ಕೆ 5,000 ಕುಂಡಗಳಲ್ಲಿ ಸಿದ್ಧಗೊಳ್ಳುತ್ತಿರುವ ಹೂಗಿಡಗಳು!
September 18, 2020ಮೈಸೂರು, ಸೆ.17- ಕೊರೊನಾ ಪಿಡುಗಿ ನಿಂದಾಗಿ ಈ ಬಾರಿ ದಸರಾ ಸರಳವಾಗಿ, ಆದರೆ ಸಾಂಪ್ರದಾಯಿಕ ರೀತಿ ಆಚರಣೆಗೆ ಸೀಮಿತವಾಗಿ ದ್ದರೂ, ಮೈಸೂರಿನ ಪ್ರಮುಖ ವೃತ್ತ ಹಾಗೂ ಅರಮನೆಯ ಸೌಂದÀರ್ಯ ದೀಪಾಲಂಕಾರದಿಂದ ಕಂಗೊಳಿಸಲಿದೆ. ಇದರ ಜತೆಗೇ ಅರಮನೆ ಮತ್ತು ನಗರದ ಸೌಂದರ್ಯ ಇಮ್ಮಡಿಗೊಳಿಸಲು ಹೂವಿನ ಲೋಕವೂ ಎಂದಿನಂತೆ ಕಂಗೊಳಿಸಲಿದೆ. ದಸರಾ ಸರಳ ಆಚರಣೆ ನಿರ್ಧಾರ ಹೊರಬಿದ್ದ ಬಳಿಕ ತೋಟಗಾರಿಕಾ ಇಲಾಖೆ ಹೂವಿನ ಲೋಕ ಸೃಷ್ಟಿಗೆ ಸಿದ್ಧತೆ ನಡೆಸಿದೆ. ಫಲಪುಷ್ಪ ಪ್ರದರ್ಶನ ರದ್ದಾಗಿದ್ದರೂ ಅರಮನೆ ಅಂಗಳ ಹಾಗೂ ನಗ ರದ…
ಅರಮನೆಯಲ್ಲಿ ಇಂದು ಸಿಂಹಾಸನ ಜೋಡಣೆ ಮಧ್ಯಾಹ್ನ 2ರವರೆಗೂ ಪ್ರವೇಶ ನಿರ್ಬಂಧ
September 18, 2020ಮೈಸೂರು, 17(ಎಂಟಿವೈ)- ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಅ.17ರಿಂದ ಖಾಸಗಿ ದರ್ಬಾರ್ ಆರಂಭವಾಗಲಿದೆ. ಅದಕ್ಕೂ ಮುನ್ನ ಸೆ.18ರ ಬೆಳಗ್ಗೆ ರತ್ನ ಖಚಿತ ಸಿಂಹಾಸನ ವನ್ನು ದರ್ಬಾರ್ ಹಾಲ್‍ನಲ್ಲಿ ಜೋಡಿಸುವ ಪ್ರಕ್ರಿಯೆ ನಡೆಯ ಲಿದೆ. ಶುಕ್ರವಾರ ಬೆಳಗ್ಗೆ ಅರ ಮನೆಯ ನೆಲಮಾಳಿಗೆಯ ಸ್ಟ್ರಾಂಗ್‍ರೂಮ್‍ನಿಂದ ಬಂಗಾ ರದ ಸಿಂಹಾಸನದ ಬಿಡಿಭಾಗ ಗಳನ್ನು ಬಿಗಿಭದ್ರತೆಯಲ್ಲಿ ತಂದು ಸಿಂಹಾಸನದ ಜೋಡಣಾ ಕಾರ್ಯ ನಡೆಸಲಾಗುತ್ತದೆ. ಹಾಗಾಗಿ, ಬೆಳಗ್ಗೆಯಿಂದ ಮಧ್ಯಾಹ್ನ 2ರವ ರೆಗೂ ಅರಮನೆಗೆ ಪ್ರವಾಸಿ ಗರು, ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಯದುವಂಶದ ಪರಂಪರೆ ಗಳಲ್ಲಿ…
ಮಳೆಗಾಲದ ಅಧಿವೇಶನಕ್ಕೆ ಭರದ ಸಿದ್ಧತೆ: ಕೊರೊನಾ ಹಿನ್ನೆಲೆಯಲ್ಲಿ ವಿಶೇಷ ವ್ಯವಸ್ಥೆ
September 18, 2020ಬೆಂಗಳೂರು, ಸೆ.17- ವಿಧಾನ ಮಂಡಲದ ಮಳೆಗಾಲದ ಅಧಿವೇಶನ ಸೋಮ ವಾರದಿಂದ ಆರಂಭವಾಗಲಿದ್ದು, ಕಾರ್ಯಾಂಗ ಸಕಲ ಸಿದ್ಧತೆ ಆರಂಭಿಸಿದೆ. ಕೊರೊನಾ ಹಾವಳಿಯಿಂದ ಈ ಅಧಿವೇಶನವನ್ನು ವಿಶೇಷ ಸುರಕ್ಷತಾ ಕ್ರಮಗಳೊಂದಿಗೆ ನಡೆಸಲು ಪೂರ್ವ ಸಿದ್ಧತೆಗಳು ಭರ ದಿಂದ ಸಾಗಿವೆ. ವಿಧಾನಸೌಧದಲ್ಲೇ ಅಧಿವೇಶನ ನಡೆ ಸಲು ತೀರ್ಮಾನಿ ಸಿದ್ದು, ವಿಧಾನಸಭೆ ಹಾಗೂ ವಿಧಾನ ಪರಿಷತ್ತು ನಡೆಯುವ ಸಭಾಂಗಣಗಳ ಆಸನಗಳಿಗೆ ಗಾಜಿನ ಪರದೆ ಅಳವಡಿಸಿ ಸದಸ್ಯರನ್ನು ಪ್ರತ್ಯೇಕಿಸುವ ವ್ಯವಸ್ಥೆ ಮಾಡ ಲಾಗಿದೆ. ಕಾಲ-ಕಾಲಕ್ಕೆ ಸಭಾಂಗಣಗಳನ್ನು ಸ್ಯಾನಿಟೈಸ್ ಮಾಡಲು ಯೋಜನೆ ರೂಪಿಸಲಾಗಿದೆ. ಶಾಸಕರು, ವಿಧಾನ…
ವಿಶ್ವಕರ್ಮ ಜಯಂತಿ; ಮೈಸೂರಲ್ಲಿ ಸರಳ ಆಚರಣೆ
September 18, 2020ಮೈಸೂರು,ಸೆ.17(ಎಂಟಿವೈ)- ಕೊರೊನಾ ಹಿನ್ನೆಲೆಯಲ್ಲಿ ವಿಶ್ವಕರ್ಮ ಜಯಂತಿಯನ್ನು ಗುರುವಾರ ಮೈಸೂರಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು. ಜಿಲ್ಲಾಡಳಿತ ಹಾಗೂ ಕನ್ನಡ-ಸಂಸ್ಕøತಿ ಇಲಾಖೆಯಿಂದ ಕಲಾಮಂದಿರದ ಮನೆಯಂಗಳದಲ್ಲಿ ಗುರುವಾರ ಆಯೋ ಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ ಶ್ರೀ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ನೆರೆದಿದ್ದವರಿಗೆ ಶುಭಕೋರಿದರು. ಪ್ರತಿವರ್ಷ ವಿಶ್ವಕರ್ಮ ಜಯಂತಿಯನ್ನು ಜಿಲ್ಲಾಡ ಳಿತ ಮತ್ತು ನಗರದಲ್ಲಿನ ವಿಶ್ವಕರ್ಮ ಸಮುದಾಯದ ವಿವಿಧ ಸಂಘಟನೆಗಳ ವತಿಯಿಂದ ಜಂಟಿಯಾಗಿ ಬಹಳ ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. ಈ ಬಾರಿ…
ಪ್ರಯಾಣಿಕ ಟೆಂಪೊಗೆ ದಂಡ ವಿಧಿಸದಂತೆ ಜಿಟಿಡಿ ಸೂಚನೆ
September 18, 2020ಮೈಸೂರು, ಸೆ.17(ಎಂಟಿವೈ)- ಮೈಸೂರು ತಾಲೂಕಿನ ಇಲವಾಲದಿಂದ ಮೈಸೂರಿಗೆ ಪ್ರಯಾಣಿಕರನ್ನು ಕರೆ ತರುವ ಟೆಂಪೋಗಳಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‍ಆರ್‍ಟಿಸಿ) ಅಧಿಕಾರಿ ಗಳು ದಂಡ ವಿಧಿಸುತ್ತಿರುವುದನ್ನು ತಪ್ಪಿಸು ವಂತೆ ಶಾಸಕ ಜಿ.ಟಿ.ದೇವೇಗೌಡರ ಬಳಿ ಟೆಂಪೋ ಚಾಲಕರು ಮನವಿ ಸಲ್ಲಿಸಿ, ಕಿರುಕುಳ ನೀಡದಂತೆ ಸಾರಿಗೆ ಅಧಿಕಾರಿ ಗಳಿಗೆ ಸೂಚಿಸುವಂತೆ ಕೋರಿದರು. ಮೈಸೂರಿನ ಕಲಾಮಂದಿರದಲ್ಲಿ ಗುರು ವಾರ ಮಧ್ಯಾಹ್ನ ಕಾರ್ಯಕ್ರಮವೊಂದ ರಲ್ಲಿ ಪಾಲ್ಗೊಂಡಿದ್ದ ಶಾಸಕ ಜಿ.ಟಿ.ದೇವೇ ಗೌಡ ಅವರನ್ನು ಭೇಟಿ ಮಾಡಿದ 30ಕ್ಕೂ ಹೆಚ್ಚು ಮಂದಿಯ ಪ್ರಯಾಣಿಕ ಟೆಂಪೋ ಚಾಲಕರ…
ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಓಡಿಪಿಯಿಂದ 160 ಮಹಿಳೆಯರ ಆರೋಗ್ಯ ತಪಾಸಣೆ
September 18, 2020ಮೈಸೂರು,ಸೆ.17(ಎಂಟಿವೈ)- ಮೈಸೂರಿನ ಸೌತ್ ಕಿರಿಯ ಪುಷ್ಪಾ ಟ್ರಸ್ಟ್‍ನಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ 160ಕ್ಕೂ ಹೆಚ್ಚು ಮಹಿಳೆ ಯರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದರು. ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಓಡಿಪಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಸೆ.14 ರಿಂದ 17ರವರೆಗೆ 4 ದಿನ ನಡೆದ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸ್ಪರ್ಶ ಕ್ಯಾನ್ಸರ್ ಪತ್ತೆ ಅಭಿಯಾನದಲ್ಲಿ ಉಚಿತವಾಗಿ ಮಹಿಳೆ ಯರ ಆರೋಗ್ಯ ತಪಾಸಣೆ ನಡೆಸಲಾಯಿತು. ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ `ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ’ (ಸಿಎಸ್‍ಆರ್)…
ಇಂದು ಕುಂಬಾರಕೊಪ್ಪಲಿನಲ್ಲಿ 3.10 ಕೋಟಿ ವೆಚ್ಚದ ಕಾಮಗಾರಿಗೆ ಸಚಿವ ಎಸ್‍ಟಿಎಸ್‍ರಿಂದ ಚಾಲನೆ
September 18, 2020ಮೈಸೂರು, ಸೆ.17 (ಆರ್‍ಕೆಬಿ)- ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಂಬಾರಕೊಪ್ಪಲು ಮಾರ್ಗದಲ್ಲಿ 3.10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳಲಾಗುತ್ತಿದೆ. ಕೆಆರ್‍ಎಸ್ ರಸ್ತೆಯಿಂದ ಸೂರ್ಯ ಬೇಕರಿವರೆಗೆ 2400 ಮೀ. ಉದ್ದದ ಬಾಕ್ಸ್ ಚರಂಡಿ ನಿರ್ಮಾಣ, 1240 ಮೀ. ಉದ್ದ ರಸ್ತೆ ಪುನರ್ ನಿರ್ಮಾಣ ಹಾಗೂ 600 ಮೀ. ಉದ್ದ ಜೋಡಿ ರಸ್ತೆ ಅಗಲೀಕರಣ, ಡಾಂಬರೀಕರಣ ಕಾಮಗಾರಿಗೆ ಶುಕ್ರವಾರ ಚಾಲನೆ ದೊರೆಯಲಿದೆ. ಕುಂಬಾರಕೊಪ್ಪಲು ಆದಿಶಕ್ತಿ ದೇವಸ್ಥಾನದ 1ನೇ ಬಸ್ ನಿಲ್ದಾಣ ಬಳಿ ಬೆಳಗ್ಗೆ 9 ಗಂಟೆಗೆ ಜಿಲ್ಲಾ…
ಮೈಸೂರಲ್ಲಿ ಯುಜಿ ಕೇಬಲ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿ
September 18, 2020ಬನ್ನಿಮಂಟಪದ ಜೋಡಿ ತೆಂಗಿನಮರ ರಸ್ತೆ, ಮೇದರ್ ಬ್ಲಾಕ್, ಯಾದವಗಿರಿ, ಮಂಜುನಾಥಪುರ ಬಡಾವಣೆಗಳಲ್ಲಿ ಬಿರುಸಿನ ಕಾಮಗಾರಿ ಮೈಸೂರು, ಸೆ.17(ಆರ್‍ಕೆ)- ಕೋವಿಡ್-19 ನಡುವೆಯೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಚೆಸ್ಕಾಂ)ವು ಯುಜಿ ಕೇಬಲ್ ಅಳವಡಿಸುವ ಯೋಜನೆ ಯನ್ನು ತೀವ್ರಗತಿಯಿಂದ ಅನುಷ್ಠಾನಗೊಳಿಸುತ್ತಿದೆ. ಮೊದಲ ಹಂತದಲ್ಲಿ ಶೇ.50ರಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದ್ದು, ಮೈಸೂರಿನ ಎನ್.ಆರ್ ಉಪ ವಿಭಾಗದಿಂದ ಬನ್ನಿಮಂಟಪ, ಸಯ್ಯಾಜಿರಾವ್ ರಸ್ತೆ, ಯಾದವಗಿರಿ, ಮೇದರ್ ಬ್ಲಾಕ್, ಮಂಜುನಾಥಪುರ, ಶಿವ ರಾತ್ರೀಶ್ವರ ನಗರ ಸೇರಿದಂತೆ ಸುತ್ತಮುತ್ತಲ ರಸ್ತೆಗಳಲ್ಲಿ ವಿದ್ಯುತ್ ಸಂಪರ್ಕ ಜಾಲವನ್ನು ಭೂಮಿ ಒಳಗೆ ಅಳವಡಿಸುವ ಕಾರ್ಯ…










