ಮೈಸೂರು, 19(ಎಂಟಿವೈ)- ಭೂ ಸುಧಾ ರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದು ಪಡಿ ಮಾಡಿ ಸುಗ್ರೀವಾಜ್ಞೆ ಮೂಲಕ ಅನು ಷ್ಠಾನಕ್ಕೆ ಮುಂದಾಗಿರುವ ರಾಜ್ಯ ಸರ್ಕಾ ರದ ಕ್ರಮ ಖಂಡಿಸಿ ರೈತ-ದಲಿತ-ಕಾರ್ಮಿಕ ಐಕ್ಯ ಸಮಿತಿ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಘೆರಾವ್ ಹಾಕಿದರು. ರೈತರಿಗೆ ಮರಣ ಶಾಸನವಾಗಿರುವ ತಿದ್ದುಪಡಿ ಕಾಯ್ದೆ ಜಾರಿಗೊಳಿಸದಂತೆ ಆಗ್ರಹಿಸಿದರು. ಸಚಿವರು ಮೈಸೂರಿನ ಗನ್‍ಹೌಸ್ ವೃತ್ತದ ಶಂಕರಮಠದಲ್ಲಿ ಕಾರ್ಯಕ್ರಮ ವೊಂದರಲ್ಲಿ ಪಾಲ್ಗೊಳ್ಳಲು…
ಜಯಪುರ ಪೊಲೀಸರಿಂದ ಇಬ್ಬರು ಸರಗಳ್ಳರ ಬಂಧನ ವಿಚಾರಣೆ ವೇಳೆ ಐದು ಪ್ರಕರಣ ಬಯಲು
September 20, 2020ಮೈಸೂರು, ಸೆ.19(ಆರ್‍ಕೆ)- ಮಹಿಳೆಯಿಂದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಖದೀಮರನ್ನು ಬಂಧಿಸಿರುವ ಜಯಪುರ ಠಾಣೆ ಪೊಲೀಸರು, 5 ಚಿನ್ನದ ಸರ ಹಾಗೂ ಒಂದು ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಆರ್.ಎಸ್ ನಾಯ್ಡುನಗರ 3ನೇ ಕ್ರಾಸ್, 3ನೇ ಮೇನ್ ನಿವಾಸಿ ಡೇವಿಡ್ ರಾಜಶೇಖರ್ ಅವರ ಮಗ ಸನ್ನಿ ಡೊನಾಲ್ಡ್(28) ಹಾಗೂ ಹಿನಕಲ್ ಗ್ರಾಮದ ಬೈರವೇಶ್ವರ ದೇವಸ್ಥಾನ ಬಳಿಯ ನಿವಾಸಿ ಲೇಟ್ ಪ್ರಕಾಶ್ ಅವರ ಮಗ ಕಿರಣ್ ಅಲಿಯಾಸ್ ಬಾಂಡ್(22) ಬಂಧಿತ ಆರೋಪಿಗಳು. ಸೆಪ್ಟೆಂಬರ್ 17ರಂದು ಬೆಳಿಗ್ಗೆ 8 ಗಂಟೆಯ…
55 ಲಕ್ಷ ರೂ. ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್.ಎ.ರಾಮದಾಸ್ ಚಾಲನೆ
September 20, 2020ಮೈಸೂರು, ಸೆ.19(ಪಿಎಂ)- ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಪಾಲಿಕೆಯ ವಾರ್ಡ್ 52 ಮತ್ತು 53ರಲ್ಲಿÀ ಅಭಿವೃದ್ಧಿ ಕಾಮಗಾರಿ ಗಳಿಗೆ ಶಾಸಕ ಎಸ್.ಎ.ರಾಮದಾಸ್ ಶನಿವಾರ ಚಾಲನೆ ನೀಡಿದರು. ಪಾಲಿಕೆ ಅನುದಾನದ 25 ಲಕ್ಷ ರೂ. ವೆಚ್ಚದಲ್ಲಿ ಸಿದ್ಧಾರ್ಥ ನಗರದ ದಾಮೋ ದರ್ ಬಡಾವಣೆಯ ಒಳಚರಂಡಿ ಕಾಮ ಗಾರಿಗೆ ಇಲ್ಲಿನ ಮೆಗಾಡೈರಿ ಬಳಿ ಶಾಸ ಕರು ಗುದ್ದಲಿಪೂಜೆ ನೆರವೇರಿಸಿದರು. ಪಾಲಿಕೆ ಅನುದಾನದ 10 ಲಕ್ಷ ರೂ. ವೆಚ್ಚದಲ್ಲಿ ಜೆಸಿ ನಗರದ ಚಾಮುಂಡೇಶ್ವರಿ ದೇವಸ್ಥಾನ ಮುಂಭಾಗ ಶುದ್ಧ ಕುಡಿ ಯುವ ನೀರಿನ ಘಟಕ…
ಕೊರೊನಾ ವೇಳೆ ಸೇವೆ; ಟಿವಿ ಕ್ಯಾಮರಾಮನ್, ಪತ್ರಿಕಾ ಛಾಯಾಗ್ರಾಹಕರಿಗೆ ಸನ್ಮಾನ
September 20, 2020ಮೈಸೂರು, ಸೆ.19 (ಎಂಟಿವೈ)- ಕೊರೊನಾ ಭೀತಿ ನಡುವೆಯೂ ಕರ್ತವ್ಯ ನಿರ್ವಹಿಸುತ್ತಿರುವ ಸುದ್ದಿವಾಹಿನಿಗಳ ವಿಡಿಯೋ ಗ್ರಾಫರ್ಸ್ ಹಾಗೂ ಪತ್ರಿಕೆಗಳ ಛಾಯಾ ಗ್ರಾಹಕರಿಗೆ ಬಿಜೆಪಿ ಮೈಸೂರು ನಗರ ಮಾಧ್ಯಮ ಘಟಕದಿಂದ ಸನ್ಮಾನಿಸಲಾಯಿತು. ಮೈಸೂರಿನ ಗನ್‍ಹೌಸ್ ಬಳಿಯ ಶಂಕರ ಮಠ ಸಭಾಂಗಣದಲ್ಲಿ ಶನಿವಾರ ಬೆಳಗ್ಗೆ ನಡೆದ `ಮಾಧÀ್ಯಮ ಸೇನಾನಿಗಳಿಗೆ ಅಭಿ ನಂದÀನೆ’ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್ ಸನ್ಮಾನಿಸಿ, ಅಭಿನಂದಿಸಿದರು. ಕೊರೊನಾ ವೇಳೆ ಜನಜಾಗೃತಿಗೆ ಪತ್ರಕರ್ತರ ಸೇವೆ ಶ್ಲಾಘನೀಯ. ಅವರ ಸೇವೆ ಗುರುತಿಸಿ ಸನ್ಮಾನಿ ಸುತ್ತಿರುವುದು ಒಳ್ಳೆ ಬೆಳವಣಿಗೆ…
ಕೇಂದ್ರ ಸರ್ಕಾರ ರೈತ-ಕಾರ್ಮಿಕ ವಿರೋಧಿ ಎಂದು ಖಂಡಿಸಿ ಸಂಸದರ ಕಚೇರಿ ಬಳಿ ಕಮ್ಯುನಿಸ್ಟ್ ಪಕ್ಷ ಪ್ರತಿಭಟನೆ
September 20, 2020ಮೈಸೂರು, ಸೆ.19(ಎಂಟಿವೈ)- ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಕಾಯ್ದೆ ರೈತ ಮತ್ತು ಕಾರ್ಮಿಕರ ವಿರುದ್ದವಾಗಿದೆ. ಇದನ್ನು ಸಂಸತ್ ಅಧಿವೇಶನದಲ್ಲಿ ವಿರೋಧಿಸುವಂತೆ ಆಗ್ರಹಿಸಿ ಭಾರತೀಯ ಕಮ್ಯುನಿಸ್ಟ್ ಪಕ್ಷ(ಮಾಕ್ಸ್‍ವಾದ)ದ ಜಿಲ್ಲಾ ಸಮಿತಿ ಕಾರ್ಯ ಕರ್ತರು ಮೈಸೂರು ಜಲದರ್ಶಿನಿ ಆವರಣದಲ್ಲಿರುವ ಸಂಸದ ಪ್ರತಾಪ ಸಿಂಹ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸರ್ಕಾರವು ಕೋವಿಡ್ ಸಂಕಷ್ಟದ ಅವಧಿಯಲ್ಲೇ ರೈತ, ಕಾರ್ಮಿಕ ವಿರೋಧಿ ಯಾದ 11 ಸುಗ್ರೀವಾಜ್ಞೆಗಳನ್ನು ಜಾರಿಗೊಳಿಸಿದೆ. ಎಲ್ಲವನ್ನೂ ವಾಪಸ್ ಪಡೆಯುವಂತೆ ಒತ್ತಾಯಿಸಬೇಕು. ರಾಜ್ಯಕ್ಕೆ ಬರಬೇಕಿರುವ…
ನಾಳೆ ಹಾಸ್ಯನಟ ರತ್ನಾಕರ್ 10ನೇ ವರ್ಷದ ನೆನಪು
September 20, 2020ಮೈಸೂರು, ಸೆ. 19- ಹಾಸ್ಯನಟ ರತ್ನಾಕರ್ ಅಭಿಮಾನಿಗಳ ಬಳಗದ ವತಿಯಿಂದ ಸೆ.21ರಂದು ಬೆಳಿಗ್ಗೆ 11 ಗಂಟೆಗೆ ನಗರದ ತ್ಯಾಗರಾಜ ರಸ್ತೆಯಲ್ಲಿ ರುವ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಹಾಸ್ಯನಟ ರತ್ನಾಕರ್ 10ನೇ ವರ್ಷದ ನೆನಪು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಇಳೈ ಆಳ್ವಾರ್ ಸ್ವಾಮೀಜಿ, ಸಮಾಜ ಸೇವಕ ರಘುರಾಂ ವಾಜಪೇಯಿ, ಮಡ್ಡೀಕೆರೆ ಗೋಪಾಲ್, ಎಂ.ಡಿ. ಪಾರ್ಥಸಾರಥಿ, ಮಾ.ವಿ.ರಾಮಪ್ರಸಾದ್, ಕುಪ್ಯ ವೆಂಕಟರಾಮು, ಗೋಪಾಲರಾವ್, ಎಸ್.ರಾಮಪ್ರಸಾದ್ ಭಾಗ ವಹಿಸುವರು. ರತ್ನಾಕರ್ ಅವರ ಪರಿಚಯವನ್ನು ಸಾಹಿತಿ ಬನ್ನೂರು ರಾಜು ನಡೆಸಿ ಕೊಡಲಿದ್ದಾರೆ. ಕುಪ್ಯ ವೆಂಕಟರಾಮ್…
ರಂಗಭೀಷ್ಮ ಬಿ.ವಿ.ಕಾರಂತ ಜನ್ಮದಿನ ಇನ್ನು `ಭಾರತೀಯ ರಂಗಸಂಗೀತ ದಿನ’
September 20, 2020ಮೈಸೂರು, ಸೆ.19(ಎಸ್‍ಪಿಎನ್)- ಪದ್ಮಶ್ರೀ ಪುರಸ್ಕøತ, ಹಿರಿಯ ರಂಗಕರ್ಮಿ ಬಿ.ವಿ.ಕಾರಂತರ ಹುಟ್ಟುಹಬ್ಬದಂದು `ಭಾರ ತೀಯ ರಂಗಸಂಗೀತ ದಿನ’ ಎಂದು ರಂಗಾ ಯಣ ಘೋಷಿಸಲಿರುವುದು ಉತ್ತಮ ನಿರ್ಧಾರ ಎಂದು ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಅಭಿಪ್ರಾಯಪಟ್ಟರು. ಮೈಸೂರು ರಂಗಾಯಣದ ಭೂಮಿ ಗೀತದಲ್ಲಿ ಶನಿವಾರ ನಡೆದ ಸರಳ ಸಮಾ ರಂಭದಲ್ಲಿ ಹಿರಿಯ ರಂಗಕರ್ಮಿ ಬಿ.ವಿ. ಕಾರಂತರ ಜನ್ಮದಿನ ಆಚರಣೆಯಂದು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತ ನಾಡಿದ ಅವರು, `ಭಾರತೀಯ ರಂಗ ಸಂಗೀತ ದಿನ’ವನ್ನು ಸಚಿವ ಸಂಪುಟದಲ್ಲಿ ಅನು ಮೋದಿಸಿ ಅಧಿಕೃತಗೊಳಿಸುವ ಬಗ್ಗೆ…
ಮುಕ್ತ ವಿವಿ ಆವರಣದಲ್ಲಿ ಕೋವಿಡ್-19 ಆಯುಷ್ ಆರೈಕೆ ಕೇಂದ್ರ ಆರಂಭ
September 20, 2020ಮೈಸೂರು, ಸೆ.19(ಎಂಟಿವೈ)- ಸಾಂಸ್ಕøತಿಕ ನಗರಿ ಮೈಸೂರಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆಯಾಗು ತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(ಕರಾಮುವಿ) ಆವ ರಣದಲ್ಲಿ ಆಯುಷ್ ಇಲಾಖೆ ಕೋವಿಡ್ -19 ಆಯುಷ್ ಆರೈಕೆ ಕೇಂದ್ರ ಆರಂಭಿಸಿದೆ. ನೂತನ ಆಯುಷ್ ಕೋವಿಡ್-19 ಆರೈಕೆ ಕೇಂದ್ರವನ್ನು ಶನಿವಾರ ಬೆಳಗ್ಗೆ ಶಾಸಕ ಎಲ್.ನಾಗೇಂದ್ರ ಉದ್ಘಾಟಿಸಿದರು. ಬಳಿಕ ಕೇಂದ್ರವನ್ನು ಪರಿಶೀಲನೆ ನಡೆಸಿ ಸುದ್ದಿಗಾರರ ಜತೆ ಮಾತನಾಡಿದರು. ರಾಜ್ಯದಲ್ಲೇ ಮೊದಲ ಬಾರಿಗೆ ಮೈಸೂ ರಲ್ಲಿ ಆಯುಷ್ ಕೋವಿಡ್-19 ಆರೈಕೆ…
ಒಕ್ಕಲಿಗರ ಸಂಘದಿಂದ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್‍ಗೆ ಸನ್ಮಾನ
September 20, 2020ಮೈಸೂರು,ಸೆ.19-ಮುಡಾ ನೂತನ ಅಧ್ಯಕ್ಷ ಹೆಚ್.ವಿ. ರಾಜೀವ್ ಮತ್ತು ಪ್ರಾಧಿಕಾರದ ಸದಸ್ಯೆ ಲಕ್ಷ್ಮಿದೇವಿ ಅವರನ್ನು ಮೈಸೂರು (ಚಾಮರಾಜ ನಗರ)ಜಿಲ್ಲಾ ಒಕ್ಕಲಿ ಗರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜೀವ್, ಮೈಸೂರು ನಗರವನ್ನು ಮಹಾರಾಜರು ವಿನೂತನವಾಗಿ ಕಟ್ಟಿದ್ದಾರೆ. ಅದಕ್ಕೆ ಧಕ್ಕೆ ಬಾರದ ಹಾಗೆ ನಗರವನ್ನು ಕಾಪಾಡುವ ಜವಾಬ್ದಾರಿ ನಮ್ಮದಾಗಿದೆ. ಇದರ ಜೊತೆಯಲ್ಲಿ ಹೊರ ವರ್ತುಲ ರಸ್ತೆ ಒಳಭಾಗದಲ್ಲಿ ನಗರ ಬೆಳೆದು ನಿಂತಿದೆ. ವರ್ತುಲ ರಸ್ತೆಯ ಹೊರಭಾಗದಲ್ಲಿ ಇನ್ನೂ ಹೆಚ್ಚು ಅಭಿ ವೃದ್ಧಿ ಕಾರ್ಯಗಳು ಮುಂದುವರಿಯಬೇಕಿದೆ. ಇತ್ತೀಚೆಗೆ ನಾನು…
ಚಿತ್ರರಂಗಕ್ಕೂ, ಭಯೋತ್ಪಾದನೆಗೂ ಸಂಬಂಧವಿದೆ: ನಟಿ ಕಂಗನಾ
September 20, 2020ನವದೆಹಲಿ, ಸೆ.19- ಚಿತ್ರರಂಗಕ್ಕೂ-ಭಯೋ ತ್ಪಾದನೆಗೂ ಸಂಬಂಧವಿದೆ ಎಂದು ಬಾಲಿವುಡ್‍ನ ಸ್ಟಾರ್ ನಟಿ ಕಂಗನಾ ರನೌತ್ ನೇರ ಆರೋಪ ಮಾಡಿದ್ದಾರೆ. ಭಾರ ತೀಯ ಚಿತ್ರರಂಗಕ್ಕೆ 8 ಮಾದರಿ ಭಯೋತ್ಪಾದನೆಗಳು ಕಂಟಕ ವಾಗಿ ಪರಿಣಮಿಸಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಬಾಲಿವುಡ್‍ಗೆ ನೆಪೆÇೀ ಟಿಸಂ ಟೆರರಿಸಂ, ಡ್ರಗ್ಸ್ ಮಾಫಿಯಾ ಟೆರರಿಸಂ, ಸೆಕ್ಸ್ ಟೆರರಿಸಂ, ಧರ್ಮ ಮತ್ತು ಪ್ರಾದೇಶಿಕತೆಯ ಟೆರರಿಸಂ, ಫಾರಿನ್ ಫಿಲ್ಮ್ ಟೆರರಿಸಂ, ಪೈರಸಿ ಟೆರರಿಸಂ, ಕಾರ್ಮಿಕರ ಶೋಷಣೆಯ ಟೆರರಿಸಂ, ಪ್ರತಿಭೆಯ ಶೋಷಣೆಯ ಟೆರರಿಸಂ ಕಾಡುತ್ತಿವೆ. ಈ ಎಲ್ಲ ಭಯೋ ತ್ಪಾದನೆಗಳಿಂದಲೂ…










