ಮೈಸೂರು

ಸೌರಶಕ್ತಿ: ವಿದ್ಯುತ್ ಸ್ವಾವಲಂಬನೆಯತ್ತ ಮೈಸೂರು ಜಿಪಂ ಕಾರ್ಯಾಲಯ
ಮೈಸೂರು

ಸೌರಶಕ್ತಿ: ವಿದ್ಯುತ್ ಸ್ವಾವಲಂಬನೆಯತ್ತ ಮೈಸೂರು ಜಿಪಂ ಕಾರ್ಯಾಲಯ

September 15, 2020

ಮೈಸೂರು, ಸೆ.14(ಪಿಎಂ)- ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸಿ ಸ್ವಾವಲಂಬನೆಯತ್ತ ಹೆಜ್ಜೆ ಹಾಕಲಿರುವ ಮೈಸೂರು ಜಿಲ್ಲಾ ಪಂಚಾಯಿತಿ ಕಾರ್ಯಾಲಯ, ವಿದ್ಯುತ್ ಉಳಿತಾಯಕ್ಕಾಗಿ ಉದ್ದೇಶಿತ ಯೋಜನೆ ಸಿದ್ಧಗೊಳಿಸಿದೆ. ಕಾರ್ಯಾಲಯದ ಮೇಲ್ಛಾವಣಿಯಲ್ಲಿ 32 ಲಕ್ಷ ರೂ. ವೆಚ್ಚದಲ್ಲಿ 50 ಕಿಲೋವ್ಯಾಟ್ ಸೋಲಾರ್ ಪವರ್ (ಸೌರಶಕ್ತಿ) ಪ್ಲಾಂಟ್ ಅಳವಡಿಕೆ ಕಾರ್ಯ ಅಂತಿಮ ಹಂತ ತಲುಪಿದೆ. ಇದರ ಬಳಕೆಯ ಪ್ರಯೋಜನ ಪಡೆಯಲು ದಿನಗಣನೆ ಆರಂಭವಾಗಿರುವಾಗಲೇ ಜಿಪಂ ಕಾರ್ಯಾಲಯಕ್ಕೆ ಎಲ್‍ಇಡಿ ಬಲ್ಬ್‍ಗಳ ಅಳವಡಿಕೆ ಸೇರಿದಂತೆ ವಿದ್ಯುತ್ ಉಳಿತಾಯಕ್ಕೆ ಅಗತ್ಯ ಕಾರ್ಯಗಳ ಅನುಷ್ಠಾನಕ್ಕಾಗಿ ಯೋಜನೆ ಹಾಕಿಕೊಳ್ಳಲಾಗುತ್ತಿದೆ. ಜಿಪಂ ಕಾರ್ಯಾಲಯಕ್ಕೆ…

ಅಂಬಾರಿ ಆನೆ ಮುನ್ನಡೆಸುವುದು ನನ್ನ ಪುಣ್ಯ
ಮೈಸೂರು

ಅಂಬಾರಿ ಆನೆ ಮುನ್ನಡೆಸುವುದು ನನ್ನ ಪುಣ್ಯ

September 15, 2020

ಮೈಸೂರು, ಸೆ.14-ಕಾಡಂಚಿನ ಗ್ರಾಮ ಗಳಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆ ಹಾಗೂ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಸೈ ಎನಿಸಿಕೊಂಡು ಮನೆ ಮಾತಾಗಿರುವ  ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಈ ಬಾರಿ ಅಂಬಾರಿ ಹೊರುವ ಹೊಸ ಜವಾಬ್ದಾರಿ ಯನ್ನು ಹೆಗಲಿಗೇರಿಸಿಕೊಂಡಿದ್ದು, ಸರ್ಕಾರ ನೀಡುವ ಯಾವುದೇ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ಅಭಿಮನ್ಯು ನಿಭಾಯಿ ಸಲಿದ್ದಾನೆ. ಇದು ನಮ್ಮ ಪುಣ್ಯದ ಕೆಲಸ ಎಂದು ಅಭಿಮನ್ಯುವಿನ ಮಾವುತ ವಸಂತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಅರಮನೆ ಆವರಣದಲ್ಲಿಯೇ ಜಂಬೂ ಸವಾರಿ ನಡೆಯಲಿದ್ದು, ರಾಜ್ಯ…

ಮೈಸೂರಿನ ಪ್ರಮುಖ ರಸ್ತೆ, ವೃತ್ತಗಳಲ್ಲಿ `ಮಾರ್ಗದರ್ಶಿಕೆ’ ಅಳವಡಿಕೆ
ಮೈಸೂರು

ಮೈಸೂರಿನ ಪ್ರಮುಖ ರಸ್ತೆ, ವೃತ್ತಗಳಲ್ಲಿ `ಮಾರ್ಗದರ್ಶಿಕೆ’ ಅಳವಡಿಕೆ

September 15, 2020

ಮೈಸೂರು, ಸೆ.14(ಎಂಕೆ)- ಮೈಸೂರು ದಸರಾ ಮಹೋತ್ಸವ ಸಮೀ ಪಿಸುತ್ತಿದ್ದು, ವಾಹನ ದಟ್ಟಣೆ ಹೆಚ್ಚಲಿದೆ. ಹಾಗಾಗಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನಗರದ ವಿವಿಧ ರಸ್ತೆ, ವೃತ್ತಗಳಲ್ಲಿ ಸಂಚಾರ ಪೊಲೀಸರಿಂದ ಸೂಚನಾ ಫಲಕಗಳು, ಪ್ರತಿಫಲಕಗಳು ಹಾಗೂ ಮಾರ್ಗದರ್ಶಿ ಸಾಧನಗಳನ್ನು ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ವಿವಿಪುರಂ, ದೇವರಾಜ, ನರಸಿಂಹರಾಜ, ಸಿದ್ದಾರ್ಥನಗರ ಮತ್ತು ಕೆ.ಆರ್.ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯ ರಸ್ತೆ ಮತ್ತು ವೃತ್ತಗಳಲ್ಲಿ ಈ ಸಾಧನಗಳನ್ನು ಅಳವಡಿಸಲಾಗು ತ್ತಿದೆ. ದೇವರಾಜ ಸಂಚಾರ ಠಾಣೆ ವ್ಯಾಪ್ತಿಯಲ್ಲಿಯ ಬೆಂಗ ಳೂರು-ನೀಲಗಿರಿ ರಸ್ತೆಯ ಬಿಷಪ್…

ಫೆ.24ಕ್ಕೆ ಎಸ್.ಎಂ.ಕೃಷ್ಣರ ಮೊಮ್ಮಗ ಅಮಥ್ರ್ಯ, ಡಿಕೆಶಿ ಪುತ್ರಿ ಐಶ್ವರ್ಯ ವಿವಾಹ
ಮೈಸೂರು

ಫೆ.24ಕ್ಕೆ ಎಸ್.ಎಂ.ಕೃಷ್ಣರ ಮೊಮ್ಮಗ ಅಮಥ್ರ್ಯ, ಡಿಕೆಶಿ ಪುತ್ರಿ ಐಶ್ವರ್ಯ ವಿವಾಹ

September 15, 2020

ಬೆಂಗಳೂರು, ಸೆ.14 (ಕೆಎಂಶಿ)- ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣಾ ಮೊಮ್ಮಗ ಅಮಥ್ರ್ಯ ಹೆಗಡೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ಅವರ ವಿವಾಹ 2021ರ ಫೆಬ್ರ ವರಿ 24ರಂದು ಜರುಗಲಿದೆ. ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ಧಾರ್ಥ ಅವರ ಪುತ್ರ ಅಮಥ್ರ್ಯ ಹೆಗಡೆ, ತಂದೆಯ ಅಕಾಲಿಕ ಮರಣದ ನಂತರ ತಾಯಿ ಜೊತೆಗೂಡಿ, ಸಂಸ್ಥೆಯ ಹೊಣೆ ಗಾರಿಕೆ ವಹಿಸಿಕೊಂಡಿದ್ದಾರೆ. ರಾಜ್ಯದ ಎರಡು ಬಲಿಷ್ಠ ರಾಜಕೀಯ ಮತ್ತು ಉದ್ಯಮಿ ಗಳ ಕುಟುಂಬದ ನಡುವೆ ಸಂಬಂಧ ಏರ್ಪಡುತ್ತಿದೆ. ಈ…

ಮುಡಾ ಸಿಎ ನಿವೇಶನ ಹಂಚಿಕೆ ಸಂಬಂಧ ಉಪ ಸಮಿತಿ ರಚನೆ
ಮೈಸೂರು

ಮುಡಾ ಸಿಎ ನಿವೇಶನ ಹಂಚಿಕೆ ಸಂಬಂಧ ಉಪ ಸಮಿತಿ ರಚನೆ

September 15, 2020

ಮೈಸೂರು, ಸೆ.14(ಎಸ್‍ಬಿಡಿ)- ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರ(ಮುಡಾ) ವ್ಯಾಪ್ತಿಯ ನಾಗರಿಕ ಸೌಲಭ್ಯ(ಸಿಎ) ನಿವೇಶನ ಹಂಚಿಕೆ ಪ್ರಕ್ರಿಯೆಗೆ ಉಪ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಮುಡಾ ನೂತನ ಅಧ್ಯಕ್ಷ ಹೆಚ್.ವಿ.ರಾಜೀವ್ ಅಧ್ಯಕ್ಷತೆ ಯಲ್ಲಿ ಸೋಮವಾರ ನಡೆದ ಆಡಳಿತ ಮಂಡಳಿಯ ಮೊದಲ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಹೊಸದಾಗಿ ಗುರುತಿಸಲಾಗಿರುವ 256 ಸಿಎ ನಿವೇ ಶನಗಳ ಹಂಚಿಕೆಯಲ್ಲಿ ಯಾವುದೇ ಗೊಂದಲವಾಗ ದಂತೆ ನಿರ್ವಹಿಸುವ ನಿಟ್ಟಿನಲ್ಲಿ ಉಪ ಸಮಿತಿ ರಚಿಸ ಬೇಕು. ನಿವೇಶನಕ್ಕೆ ಅರ್ಜಿ ಕರೆಯುವುದರಿಂದ ಹಿಡಿದು ಎಲ್ಲಾ ಪ್ರಕ್ರಿಯೆಯನ್ನೂ ಉಪಸಮಿತಿಯೇ ನಿರ್ವಹಿಸಿ,…

ಖಾರೀಫ್ ಬೆಳೆಗೆ ಕಬಿನಿಯಿಂದ ಎಡ-ಬಲದಂಡೆ ನಾಲೆಗೆ ನೀರು ಬಿಡುಗಡೆ
ಮೈಸೂರು

ಖಾರೀಫ್ ಬೆಳೆಗೆ ಕಬಿನಿಯಿಂದ ಎಡ-ಬಲದಂಡೆ ನಾಲೆಗೆ ನೀರು ಬಿಡುಗಡೆ

September 15, 2020

ಮೈಸೂರು,ಸೆ.14-ಕಬಿನಿ ಜಲಾಶಯದಿಂದ 2020ನೇ ಸಾಲಿನ ಖಾರೀಫ್ ಬೆಳೆಗೆ ನೀರು ಹರಿ ಸುವ ಉದ್ದೇಶದಿಂದ ಕಬಿನಿ ಎಡ ಮತ್ತು ಬಲದಂಡೆ ನಾಲೆಗೆ ನೀರು ಹರಿಸಲಾಗುತ್ತಿದೆ ಎಂದು ಕಬಿನಿ ನೀರಾ ವರಿ ಸಲಹಾ ಸಮಿತಿ ಹಾಗೂ ಸದಸ್ಯ ಕಾರ್ಯದರ್ಶಿಗಳು, ಕಬಿನಿ ಮತ್ತು ವರುಣಾ ನಾಲಾ ವೃತ್ತದ ಅಧೀಕ್ಷಕ ಇಂಜಿನಿಯರ್ ತಿಳಿಸಿದ್ದಾರೆ. ಜಲಾಶಯದ ಅಚ್ಚುಕಟ್ಟು ಪ್ರದೇಶ ದಲ್ಲಿರುವ ಕೆರೆಗಳಿಗೆ ನೀರು ತುಂಬಿಸಲು ಈಗಾಗಲೇ ಕಬಿನಿ ಬಲದಂಡೆ ನಾಲೆಗೆ ಜು.28ರ ಸಂಜೆ 6ರಿಂದ ಆ.8ರ ಸಂಜೆ 6ವರೆಗೆ, ಆ8ರ ಸಂಜೆ 6ರಿಂದ ಡಿ.6ರ…

ಮೈಸೂರು `ಬಾಲಭವನ’ಕ್ಕೆ ಸಿಗಲಿದೆ ಕಾಯಕಲ್ಪ!
ಮೈಸೂರು

ಮೈಸೂರು `ಬಾಲಭವನ’ಕ್ಕೆ ಸಿಗಲಿದೆ ಕಾಯಕಲ್ಪ!

September 15, 2020

ಮೈಸೂರು, ಸೆ.14(ಆರ್‍ಕೆಬಿ)- ಕಳೆದ 13 ವರ್ಷಗಳಿಂದ ಶಿಥಿಲಗೊಂಡು ಪಾಳು ಬಿದ್ದಿದ್ದ ಮೈಸೂರಿನ ಬನ್ನಿಮಂಟಪದಲ್ಲಿ ರುವ `ಬಾಲಭವನಕ್ಕೆ’ ಕಾಯಕಲ್ಪ ಸಿಗುವ ಕಾಲ ಸನ್ನಿಹಿತವಾಗಿದೆ. ಬಾಲಭವನ ಸೊಸೈಟಿ ಅಧ್ಯಕ್ಷೆ ಚಿಕ್ಕಮ್ಮಾ ಬಸವರಾಜು ಅವರ ಕೋರಿಕೆ ಮೇರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಧ್ಯಕ್ಷ ಹೆಚ್.ವಿ.ರಾಜೀವ್ ಸೋಮವಾರ ಬಾಲಭವನಕ್ಕೆ ಭೇಟಿ ನೀಡಿ ಶಿಥಿಲಗೊಂಡಿದ್ದ ಮಕ್ಕಳಾಟದ ರೈಲು, ದೋಣಿ ವಿಹಾರ, ರೈಲು ಬೋಗಿಗಳ ಸ್ಥಳ ಪರಿಶೀಲಿಸಿದರು. ಮುಡಾದಿಂದ 1977ರಲ್ಲಿ 30 ವರ್ಷ ಗಳ ಅವಧಿಗೆ ಬಾಲಭವನಕ್ಕೆ 10 ಎಕರೆ ಯನ್ನು ಗುತ್ತಿಗೆಯಾಗಿ ನೀಡಲಾಗಿತ್ತು….

ನ್ಯಾ.ಸದಾಶಿವ ಆಯೋಗದ ವರದಿ; ಒಳಮೀಸಲಾತಿ ಮೊದಲು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಲಿ
ಮೈಸೂರು

ನ್ಯಾ.ಸದಾಶಿವ ಆಯೋಗದ ವರದಿ; ಒಳಮೀಸಲಾತಿ ಮೊದಲು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಲಿ

September 15, 2020

ಮೈಸೂರು, ಸೆ.14(ಪಿಎಂ)-ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಹಾಗೂ ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ತರಾತುರಿಯಲ್ಲಿ ಮುಂದಾಗದೇ, ಮೊದಲು ಈ ಸಂಬಂಧ ಕನಿಷ್ಠ 6 ತಿಂಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಲು ಅವಕಾಶ ಕಲ್ಪಿಸಬೇಕು ಎಂದು ರಾಜ್ಯ ಆದಿಕರ್ನಾಟಕ ಮಹಾಸಭಾ ಒತ್ತಾಯಿಸಿದೆ. ಈ ಸಂಬಂಧ ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಮಾಜಿ ಮೇಯರ್ ಹಾಗೂ ಮಹಾಸಭಾದ ಅಧ್ಯಕ್ಷ ಪುರುಷೋತ್ತಮ್, ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿಯಾಗಬೇಕೆಂದು ರಾಜ್ಯದ ಉದ್ದಗಲಕ್ಕೂ ಇಂದು ಚರ್ಚೆಯಾಗುತ್ತಿದೆ. ಈ ವಿಚಾರ ಮುಂದಿಟ್ಟುಕೊಂಡು…

ಅನಂತಕುಮಾರ್ ಹೆಗಡೆ ಸೇರಿದಂತೆ ದೇಶದ 30 ಸಂಸದರಿಗೆ ಕೊರೊನಾ ಸೋಂಕು ದೃಢ!
ಮೈಸೂರು

ಅನಂತಕುಮಾರ್ ಹೆಗಡೆ ಸೇರಿದಂತೆ ದೇಶದ 30 ಸಂಸದರಿಗೆ ಕೊರೊನಾ ಸೋಂಕು ದೃಢ!

September 15, 2020

ನವದೆಹಲಿ, ಸೆ.14-ದೇಶದಲ್ಲಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗು ತ್ತಿದ್ದು, ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಸೇರಿದಂತೆ ಕನಿಷ್ಠ 30 ಲೋಕಸಭಾ ಸದಸ್ಯರಿಗೆ ಮಾರಣಾಂತಿಕ ಕೊರೊನಾ ಸೋಂಕು ತಗುಲಿ ರುವುದು ದೃಢಪಟ್ಟಿದೆ. ಇಂದು ಪ್ರಾರಂಭವಾದ ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಮುಂಚಿತವಾಗಿ ನಡೆಸಲಾದ ಕಡ್ಡಾಯ ಕೊರೊನಾ ಪರೀಕ್ಷೆಗಳಲ್ಲಿ 30 ಸಂಸದರಿಗೆ ಕೊರೊನಾ ತಗುಲಿರುವುದು ಖಚಿತ ವಾಗಿದೆ ಎನ್ನಲಾಗುತ್ತಿದೆ. ಸೋಂಕಿತರ ಪೈಕಿ 12 ಜನ ಬಿಜೆಪಿ ಸಂಸದರಾದರೆ, ವೈಎಸ್‍ಆರ್ ಕಾಂಗ್ರೆಸ್ ಪಕ್ಷದ 2, ಶಿವಸೇನೆಯ 2 ಹಾಗೂ ಓರ್ವ…

ಡ್ರಗ್ಸ್ ದಂಧೆ: ಮೈಸೂರು ನಗರ, ಜಿಲ್ಲೆಯಾದ್ಯಂತ ಕಟ್ಟೆಚ್ಚರ
ಮೈಸೂರು

ಡ್ರಗ್ಸ್ ದಂಧೆ: ಮೈಸೂರು ನಗರ, ಜಿಲ್ಲೆಯಾದ್ಯಂತ ಕಟ್ಟೆಚ್ಚರ

September 15, 2020

ಮೈಸೂರು, ಸೆ.14(ಆರ್‍ಕೆ)- ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದ ತನಿಖೆ ತೀವ್ರಗೊಂಡಿ ರುವ ಹಿನ್ನೆಲೆಯಲ್ಲಿ ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ರೆಸಾರ್ಟ್ ಮತ್ತು ರೆಸ್ಟೋರೆಂಟ್‍ಗಳ ಮೇಲೆ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತ ನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರು, ಕೇರಳ-ಕರ್ನಾಟಕ ಗಡಿಯ ಬಾವಲಿ ಚೆಕ್‍ಪೋಸ್ಟ್‍ನಲ್ಲಿ ವಾಹನಗಳ ತಪಾಸಣೆ ತೀವ್ರಗೊಳಿಸಿರುವುದಲ್ಲದೆ, ರೆಸಾರ್ಟ್‍ಗಳ ಮೇಲೆ ನಿಗಾ ಇಟ್ಟಿದ್ದೇವೆ ಎಂದು ತಿಳಿಸಿದರು. ಹೊರಗಡೆಯಿಂದ ಡ್ರಗ್ಸ್ ತಂದು ರೆಸಾರ್ಟ್‍ಗಳಲ್ಲಿ ಸೇವನೆ ಮಾಡಿದರೆ ಅಥವಾ ಡ್ರಗ್ಸ್ ಸಂಬಂಧ ಯಾವುದೇ…

1 433 434 435 436 437 1,611
Translate »