ಮೈಸೂರು, ಸೆ.13(ಎಂಕೆ)- ಮೂವರು ಆಟೊದಲ್ಲಿ ಗಾಂಜಾ ಪೆÇಟ್ಟಣಗಳನ್ನು ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಎನ್. ಆರ್.ಠಾಣೆ ಪೊಲೀಸರು ಇಬ್ಬರು ಆರೋಪಿ ಗಳನ್ನು ಬಂಧಿಸಿ, 504 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬನ್ನಿಮಂಟಪದ ರಿಯಾನ್ (22), ಕೆ.ಆರ್.ಪೇಟೆಯ ಮದನ್ (22) ಬಂಧಿತರು. ಸೆ.11ರಂದು ಮೈಸೂ ರಿನಿಂದ ಕೆ.ಆರ್.ಪೇಟೆಗೆ ಆಟೊದಲ್ಲಿ ಗಾಂಜಾ ಪೊಟ್ಟಣಗಳನ್ನು ಸಾಗಿಸುತ್ತಿದ್ದ ಆರೋಪಿ ಗಳು ಟಿಪ್ಪು ವೃತ್ತದ ಬಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಒಬ್ಬ ಆರೋಪಿ ಪರಾರಿ ಯಾಗಿದ್ದಾನೆ. ಆಟೊ ತಪಾಸಣೆ ನಡೆಸಿ ದಾಗ ಪೊಲೀಸರಿಗೆ ಪ್ಲಾಸ್ಟಿಕ್ ಕವರ್ ನಲ್ಲಿದ್ದ…
ಕದ್ದ ಬೈಕ್‍ನಲ್ಲೇ ಸಂಚರಿಸುತ್ತಿದ್ದ ಚೋರನ ಸೆರೆ; 6 ದ್ವಿಚಕ್ರ ವಾಹನ ವಶ
September 14, 2020ಮೈಸೂರು, ಸೆ.13(ಎಂಕೆ)- ಕಳವು ಮಾಡಿದ್ದ ಬೈಕ್‍ನಲ್ಲಿಯೇ ರಾಜಾರೋಷವಾಗಿ ತಿರುಗಾಡುತ್ತಿದ್ದ ದ್ವಿಚಕ್ರ ವಾಹನ ಚೋರನನ್ನು ಬಂಧಿಸಿರುವ ದೇವರಾಜ ಠಾಣೆ ಪೊಲೀಸರು, ಬಂಧಿತನಿಂದ 6 ದ್ವಿಚಕ್ರ ವಾಹನ ಗಳನ್ನು ವಶಪಡಿಸಿಕೊಂಡಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಐಚನಹಳ್ಳಿಯ ಆನಂದ್(35) ಬಂಧಿತ ವ್ಯಕ್ತಿ. ಸೆ.3ರ ಸಂಜೆ 7 ಗಂಟೆಗೆ ಚೆಲುವಾಂಬ ಆಸ್ಪತ್ರೆ ಎದುರು ನಿಲ್ಲಿಸಿದ್ದ ಹುಣಸೂರಿನ ಕಾರ್ತಿಕ್ ಎಂಬವರ ಹೀರೊ ಸ್ಪ್ಲೆಂಡರ್ ಬೈಕ್ ಕಳವಾಗಿತ್ತು. ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ಕಾರ್ಯಾಚರಣೆ ಆರಂಭಿಸಿದ್ದ ದೇವರಾಜ ಠಾಣೆ ಪೊಲೀಸರು, ಕಳವು ಮಾಡಿದ್ದ ಬೈಕ್‍ನಲ್ಲಿ ತಿರುಗಾಡುತ್ತಿದ್ದ ಆನಂದನನ್ನು…
ಕೊರೊನಾಗೆ ಔಷಧಿ ಸಿಗೋವರೆಗೂ ಎಚ್ಚರ… ಎಚ್ಚರ…
September 13, 2020ಭೋಪಾಲ್,ಸೆ.12-ಭಾರತದಲ್ಲಿ ದಿನಕಳೆದಂತೆ ಮಾರಕ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವಂತೆಯೇ, ಔಷಧಿ ಸಿಗುವವರೆಗೂ ಕೊರೊನಾ ವೈರಸ್ ಕುರಿತು ನಿರ್ಲಕ್ಷ್ಯತನ ಬೇಡ, ಹುಷಾರಾಗಿರೋಣ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ. ಶನಿವಾರ ಮಧ್ಯಪ್ರದೇಶದಲ್ಲಿ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿಯ ಮನೆಗಳ ಗೃಹ ಪ್ರವೇಶ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತ ನಾಡಿದ ಪ್ರಧಾನಿ ಮೋದಿ, ಕೊರೊನಾ ವೈರಸ್ ಸೋಂಕಿಗೆ ಪರಿಣಾಮಕಾರಿಯಾಗಿ ಔಷಧಿ ಸಿಗುವವ ರೆಗೂ ಜನರು ತಮ್ಮ ಎಚ್ಚರಿಕೆಯಲ್ಲಿ ತಾವಿರಬೇಕು. ಕೋವಿಡ್ ಸೋಂಕು ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಬಿಡುಗಡೆ…
ಅ.17ಕ್ಕೆ ದಸರಾಗೆ ಚಾಲನೆ
September 13, 2020ಮೈಸೂರು, ಸೆ.12(ಎಂಕೆ)- ನಾಡಹಬ್ಬ ದಸರಾ ಮಹೋತ್ಸವ ಚಟುವಟಿಕೆ ಗರಿಗೆದ ರಿದ್ದು, ಮೈಸೂರು ಅರಮನೆ ಮಂಡಳಿ ಸಭಾಂಗಣದಲ್ಲಿ ಶನಿವಾರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅಧ್ಯಕ್ಷತೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಉಪಸ್ಥಿತಿ ಯಲ್ಲಿ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಸಿ, ಸಿದ್ಧತೆ ಬಗ್ಗೆ ಚರ್ಚಿಸಲಾಯಿತು. ಸಭೆ ಬಳಿಕ ಮಾಧ್ಯಮಗಳಿಗೆ ವವರಿ ಸಿದ ಸಚಿವ ಎಸ್.ಟಿ.ಸೋಮಶೇಖರ್, ಕೋವಿಡ್-19 ಹಿನ್ನೆಲೆ ಅ.17ಕ್ಕೆ ಮೈಸೂರು ದಸರಾಕ್ಕೆ ಚಾಲನೆ ನೀಡಲಿದ್ದು, ಈ ವರ್ಷ ಸರಳ ಮತ್ತು ಸಾಂಪ್ರದಾಯಿಕವಾಗಿ…
ಅಭಿಮನ್ಯು ಹೆಗಲಿಗೆ ಅಂಬಾರಿ
September 13, 2020ಮೈಸೂರು: ಈ ಬಾರಿ ದಸರಾ ಜಂಬೂ ಸವಾರಿಯಲ್ಲಿ ತಾಯಿ ಚಾಮುಂಡೇಶ್ವರಿ ಪ್ರತಿಷ್ಠಾಪಿತ ಚಿನ್ನದ ಅಂಬಾರಿ ಯನ್ನು ಹೊರುವ ಜವಾ ಬ್ದಾರಿಯನ್ನು ಅಭಿಮನ್ಯು ನಿರ್ವಹಿಸಲಿದ್ದಾನೆ. ದಸರಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಧ ರಿಸಲಾಗಿದ್ದು, ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ. ಸೋಮಶೇಖರ್ ಅಧಿಕೃತ ವಾಗಿ ಪ್ರಕಟಿಸಿದರು. ಅರ್ಜುನನಿಗೆ 60 ವರ್ಷ ಮೀರಿರುವುದರಿಂದ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಅಂಬಾರಿ ಹೊರುವ ಅವಕಾಶವಿಲ್ಲ. ಹಾಗಾಗಿ ಜಂಬೂಸವಾರಿಯಲ್ಲಿ ಅಭಿಮನ್ಯು ಆನೆ ಚಿನ್ನದ ಅಂಬಾರಿ ಹೊತ್ತು ಸಾಗಲಿದೆ. ಅಭಿಮನ್ಯು 1,100ವರೆಗೂ ಕೆ.ಜಿ….
ವಹಿವಾಟು ವೇಳೆ ಕೊರೊನಾಗೆ ಮುಕ್ತಾಹ್ವಾನ…!
September 13, 2020ಮೈಸೂರು, ಸೆ.12(ಎಸ್‍ಬಿಡಿ)- ದೇಶಕ್ಕೆ ಕೊರೊನಾ ವಕ್ಕರಿಸಿ 6 ತಿಂಗಳಾಗಿದ್ದು, ಮನುಕುಲಕ್ಕೆ ದೊಡ್ಡ ಪಾಠ ಕಲಿಸಿದೆ. ಆದರೂ ಬಹುತೇಕರು ಸುರಕ್ಷತಾ ಕ್ರಮ ಅನುಸರಿಸದೆ ನಿರ್ಲಕ್ಷ್ಯ ತೋರುತ್ತಿರುವುದ ರಿಂದಲೇ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ನಿರ್ಲಕ್ಷ್ಯದ ಪರಿಣಾಮವೇ ಮೈಸೂರು ಜಿಲ್ಲೆಯಲ್ಲಿ ನಿತ್ಯ 600ಕ್ಕೂ ಹೆಚ್ಚು ಜನರಿಗೆ ಸೋಂಕು ಪತ್ತೆ ಯಾಗುತ್ತಿದ್ದು, 10ಕ್ಕೂ ಹೆಚ್ಚು ಸೋಂಕಿತರು ಸಾವ ನ್ನಪ್ಪುತ್ತಿದ್ದಾರೆ. ಸದ್ಯಕ್ಕೆ ಕೊರೊನಾ ತೊಲಗುವು ದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಕಾರಣದಿಂದಲೇ ಲಾಕ್‍ಡೌನ್, ಇನ್ನಿತರ ಸೀಮಿತ ನಿರ್ಬಂಧಗಳನ್ನು ತೆರವುಗೊಳಿಸಿ, ಬಹುತೇಕ ಎಲ್ಲಾ…
ಹಳ್ಳಿ ಮಕ್ಕಳ ಶಾಲೆಗೆ ಸೆಳೆಯಲು ಸಜ್ಜಾಗಿದೆ `ಗ್ರಾಪಂ ಶಿಕ್ಷಣ ಪಡೆ’
September 13, 2020ಮೈಸೂರು, ಸೆ.12(ಎಸ್‍ಪಿಎನ್)- ಗ್ರಾಮೀಣ ಮಕ್ಕಳು ಹೊಸ ಶಿಕ್ಷಣ ನೀತಿಯಿಂದ ದೂರ ಉಳಿಯದಂತೆ ಹಾಗೂ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ದೃಷ್ಟಿಯಿಂದ ವಿವಿಧ ಇಲಾಖಾ ಅಧಿಕಾರಿಗಳನ್ನು ಒಳಗೊಂಡ, 15 ಅಂಶಗಳಿರುವ `ಗ್ರಾಮ ಪಂಚಾಯ್ತಿ ಶಿಕ್ಷಣ ಪಡೆ’ ರಚಿಸಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹಾಗೂ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಂಟಿಯಾಗಿ ಕಾರ್ಯ ನಿರ್ವಹಿಸಲು ಮುಂದಾಗಿವೆ. `ಗ್ರಾಪಂ ಶಿಕ್ಷಣ ಪಡೆ’ ರಚನೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್…
ಕಂಟೇನ್ಮೆಂಟ್ ವಲಯ ಹೊರತುಪಡಿಸಿ ಉಳಿದೆಡೆ ಗ್ರಂಥಾಲಯ ಪುನರಾರಂಭ
September 13, 2020ಮೈಸೂರು, ಸೆ.12(ಪಿಎಂ)- ಕಂಟೇ ನ್ಮೆಂಟ್ ವಲಯ ಹೊರತುಪಡಿಸಿ ಉಳಿ ದೆಡೆ ಸಾರ್ವಜನಿಕ ಗ್ರಂಥಾಲಯಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ರಾಜ್ಯದಲ್ಲಿ ಸಾರ್ವಜನಿಕ ಗ್ರಂಥಾ ಲಯ ಇಲಾಖೆಯ ಎಲ್ಲಾ ವಿಧದ ಗ್ರಂಥಾಲಯಗಳು ಶನಿವಾರದಿಂದ ಓದು ಗರ ಸೇವೆಗೆ ತೆರೆದುಕೊಂಡಿವೆ. ಮೈಸೂರು ನಗರ ಕೇಂದ್ರ ಗ್ರಂಥಾ ಲಯ ವ್ಯಾಪ್ತಿಯ ಶಾಖಾ ಗ್ರಂಥಾಲಯ ಗಳು, ಸೇವಾ ಕೇಂದ್ರ ಗ್ರಂಥಾಲಯಗಳು, ಸಮುದಾಯ ಮಕ್ಕಳ ಗ್ರಂಥಾಲಯ, ವಾಚ ನಾಲಯಗಳು ಸೇರಿದಂತೆ 39 ಗ್ರಂಥಾ ಲಯಗಳು ಬೆಳಗ್ಗೆ 8ರಿಂದ 11.30ರವರೆಗೆ ಮತ್ತು ಸಂಜೆ 4ರಿಂದ…
ಪ್ರವಾಸೋದ್ಯಮ ಚೇತರಿಕೆಗಾಗಿ ಬೆಂಗಳೂರು-ಮೈಸೂರು ಬೈಕ್ ರ್ಯಾಲಿ
September 13, 2020ಮೈಸೂರು, ಸೆ.12(ಎಂಟಿವೈ)- ಕೊರೊನಾ ಹಾವಳಿ ಯಿಂದಾಗಿ ತತ್ತರಿಸಿರುವ ಪ್ರವಾಸೋದ್ಯಮಕ್ಕೆ ಚೈತನ್ಯ ತುಂಬು ವುದರೊಂದಿಗೆ ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಕರ್ನಾ ಟಕ ಟೂರಿಸಂ ಫೆÇೀರಂ(ಕೆಟಿಎಫ್) ನಡೆಸಿದ `ರ್ಯಾಲಿ ಟೂ ಪ್ರಮೋಟ್ ಟೂರಿಸಂ’ ಬೈಕ್ ರ್ಯಾಲಿಯಲ್ಲಿ 12 ರೈಡರ್‍ಗಳು ಬೆಂಗಳೂರಿಂದ ಮೈಸೂರಿಗೆ ಶನಿವಾರ ಆಗಮಿಸಿದರು. ಬೆಂಗಳೂರಿನ ಯುಬಿ ಸಿಟಿಯಿಂದ ಶನಿವಾರ ಬೆಳಗ್ಗೆ ರ್ಯಾಲಿ ಹೊರಟ ಬೈಕ್ ಸವಾರರು ಮಧ್ಯಾಹ್ನ 12.30ಕ್ಕೆ ಮೈಸೂರಿಗೆ ತಲುಪಿದರು. ಹೈವೆ ವೃತ್ತದ ಗ್ರಾಂಡ್ ಮಕ್ರ್ಯೂರ್ ಹೋಟೆಲ್ ಬಳಿ ಇಂಡಿಯನ್ ಮೋಟಾರ್ ಸೈಕಲ್ ರೈಡರ್ಸ್ ಗ್ರೂಪ್‍ನ 12…
ಕೊಲಂಬೋಗೆ ನಾನೊಮ್ಮೆ ಪ್ರವಾಸಕ್ಕೆ ಹೋಗಿದ್ದು ನಿಜ
September 13, 2020ಬೆಂಗಳೂರು, ಸೆ.12(ಕೆಎಂಶಿ)- ಜೆಡಿಎಸ್ ಪಕ್ಷದ ಗೌಪ್ಯ ಕಾರ್ಯಸೂಚಿ ಹಾಗೂ ಮುಂದಿನ ರಾಜಕೀಯ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಹಾಗೂ ಪ್ರಮುಖ ನಾಯಕರೊಂದಿಗೆ ಶ್ರೀಲಂಕಾದ ಕೊಲಂಬೋಗೆ ಒಮ್ಮೆ ಪ್ರವಾಸ ಹೋಗಿದ್ದು ನಿಜ. ಆದರೆ, ಕದ್ದು ಮುಚ್ಚಿ ಕೊಲಂಬೋ ಯಾತ್ರೆ ಮಾಡಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು, ಒಂದಾನೊಂದು ಕಾಲದಲ್ಲಿ ನಮ್ಮ ಪಕ್ಷದಲ್ಲಿದ್ದ ರಾಜಕಾರಣಿಯೊಬ್ಬರು ಜೆಡಿಎಸ್ ಶಾಸಕರು ಮತ್ತು ನಾನು ಕೊಲಂಬೋ ಪ್ರವಾಸ…









