ಮೈಸೂರು, ಸೆ.12(ಎಂಟಿವೈ)- ಕೊರೊನಾ ಹಿನ್ನೆಲೆಯಲ್ಲಿ 6 ತಿಂಗಳಿಂದ ಸಾಂಸ್ಕøತಿಕ ಕಾರ್ಯಕ್ರಮವಿಲ್ಲದೆ ಜಡ್ಡು ಗಟ್ಟಿದ್ದ ವಾತಾವರಣವನ್ನು ಬದಲಿಸಿದ ವಿಶ್ವ ಬುಡಕಟ್ಟು ಹಾಗೂ ಜಾನಪದ ದಿನಾಚರಣೆ ಕಾರ್ಯಕ್ರಮದಲ್ಲಿ ಮೊಳಗಿದ ಜಾನಪದ ಗೀತೆ ನೆರೆದಿದ್ದವರನ್ನು ಪುಳಕಗೊಳಿಸಿತು. ಮೈಸೂರಿನ ಇನ್ಸ್‍ಸ್ಟಿಟ್ಯೂಟ್ ಆಫ್ ಇಂಜಿ ನಿಯರ್ಸ್ ಸಭಾಂಗಣದಲ್ಲಿ ಕನ್ನಡ ಜಾನ ಪದ ಪರಿಷತ್ ಶನಿವಾರ ಆಯೋಜಿಸಿದ್ದ ವಿಶ್ವ ಬುಡಕಟ್ಟು ಮತ್ತು ಜಾನಪದ ದಿನಾ ಚರಣೆಯಲ್ಲಿ ಜಾನಪದ, ತತ್ವಗೀತೆ ಗಾಯನ ಮೇಳೈಸಿತು. ಜಾನಪದ ಗೀತೆಗಳ ಗಾಯಕ ರಾದ ಅಮ್ಮ ರಾಮಚಂದ್ರ, ಪನ್ನಗ ವಿಜಯ ಕುಮಾರ್, ಮರಿಸ್ವಾಮಿ…
ಡ್ರಗ್ಸ್ ದಂಧೆ ವಿಚಾರದಲ್ಲಿ ರಾಜಕೀಯ ಬೇಡ
September 13, 2020ಕೊಳ್ಳೇಗಾಲ, ಸೆ.12(ನಾಗೇಂದ್ರ)- ಡ್ರಗ್ಸ್ ದಂಧೆ ವಿಚಾರದಲ್ಲಿ ಯಾರೂ ಕೂಡ ರಾಜಕೀಯ ಮಾಡ ಬಾರದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು. ನಗರದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, `ಡ್ರಗ್ಸ್ ಯುವ ಜನಾಂಗದವರನ್ನು ನಾಶ ಮಾಡು ತ್ತಿದೆ. ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ಇದರ ವಿರುದ್ಧ ಹೋರಾಡ ಬೇಕು. ಡ್ರಗ್ಸ್ ದಂಧೆಯ ತನಿಖೆಯ ದಾರಿ ತಪ್ಪಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು…
ಮೈಸೂರು ಜಿಲ್ಲೆಯಲ್ಲಿ 637 ಮಂದಿಗೆ ಕೊರೊನಾ, 565 ಮಂದಿ ಡಿಸ್ಚಾರ್ಚ್
September 13, 2020ಮೈಸೂರು,ಸೆ.12(ವೈಡಿಎಸ್)-ಮೈಸೂರು ಜಿಲ್ಲೆಯಲ್ಲಿ ಶನಿವಾರ 637 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 25,086ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಗುಣಮುಖರಾದ 565 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಒಟ್ಟು 17,490 ಸೋಂಕಿತರು ಗುಣಮುಖ ರಾದಂತಾಗಿದೆ. ಈ ಮಧ್ಯೆ 14 ಸೋಂಕಿತರು ಮೃತಪಟ್ಟಿರುವು ದಾಗಿ ಶನಿವಾರದ ಹೆಲ್ತ್ ಬುಲೆಟಿನ್‍ನಲ್ಲಿ ತಿಳಿಸಲಾಗಿದ್ದು, ಒಟ್ಟು ಕೊರೊನಾಗೆ ಬಲಿಯಾದವರ ಸಂಖ್ಯೆ 576ಕ್ಕೆ ಏರಿದೆ. 7,020 ಜನರಲ್ಲಿ ಸೋಂಕು ಸಕ್ರಿಯವಾಗಿದ್ದು, ಅವರೆಲ್ಲಾ ಕೋವಿಡ್ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳು, ಹೆಲ್ತ್ ಕೇರ್ಸ್,…
ಮಹಾರಾಷ್ಟ್ರ ಉಸ್ತುವಾರಿ ಕೈತಪ್ಪಿದ್ದಕ್ಕೆ ಬೇಸರವಿಲ್ಲ
September 13, 2020ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ ಮಹಾರಾಷ್ಟ್ರದಲ್ಲಿ ಮರಳಿ ಕಾಂಗ್ರೆಸ್ ಮುಂಚೂಣಿಗೆ ತರುತ್ತೇನೆ: ನೂತನ ಉಸ್ತುವಾರಿ ಪಾಟೀಲ್ ಬೆಂಗಳೂರು, ಸೆ.12(ಕೆಎಂಶಿ)-ಮಹಾರಾಷ್ಟ್ರ ಉಸ್ತುವಾರಿ ಮತ್ತು ಇತರ ಪ್ರಮುಖ ಹುದ್ದೆಯಿಂದ ಪಕ್ಷ ನನ್ನ ಕೈಬಿಟ್ಟಿದ್ದಕ್ಕೆ ಬೇಸರವಿಲ್ಲ ಎಂದಿರುವ ಕಾಂಗ್ರೆಸ್‍ನ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಎಲ್ಲವೂ ನಮ್ಮ ಕೈಯಲ್ಲಿರುವುದಿಲ್ಲ. ನಮಗೆ ಏನು ಸಿಗಬೇಕೋ ಅದು ಸಿಗುತ್ತೆ ಎಂದಿದ್ದಾರೆ. ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ನಾನು ನೆಹರೂ ಮತ್ತು ಡಾ. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿರುವೆನು. ಪಕ್ಷದ…
ಇಂದ್ರಾಣಿ ಮುಖರ್ಜಿ ಜೈಲು ಕೊಠಡಿ ಪಕ್ಕದಲ್ಲೇ ರಿಯಾ ಚಕ್ರವರ್ತಿ ಜೈಲುವಾಸ ಫ್ಯಾನ್ ಇಲ್ಲ, ಬೆಡ್ ಇಲ್ಲ, ಹಾಸಿಗೆ ಇಲ್ಲ
September 13, 2020ಮುಂಬೈ,ಸೆ.12- ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕ ರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಗೆಳತಿ ರಿಯಾ ಚಕ್ರವರ್ತಿ ಜೈಲಿನಲ್ಲಿ ಫ್ಯಾನ್ ಮತ್ತು ಬೆಡ್ ರಹಿತ ರಾತ್ರಿ ಕಳೆದಿದ್ದಾರೆ. ಅದೂ ಕೂಡ ಇಂದ್ರಾಣಿ ಮುಖರ್ಜಿ ಇರುವ ಕೊಠಡಿ ಪಕ್ಕದ ಕೊಠಡಿಯಲ್ಲಿ ರಿಯಾರನ್ನು ಇರಿಸಲಾಗಿದೆÉ. ರಿಯಾ ಚಕ್ರವರ್ತಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮುಂಬೈ ಕೋರ್ಟ್ ವಜಾಗೊಳಿಸಿದ್ದು, ಹೀಗಾಗಿ ರಿಯಾಗೆ ಜೈಲೇ ಗತಿಯಾದಂತಾಗಿದೆ. ಹೈಫೈ ಜೀವನ ನಡೆಸುತ್ತಿದ್ದ ರಿಯಾ ಸದ್ಯ ಜೈಲುವಾಸಿಯಾಗಿದ್ದು, ಮೂಲ ಸೌಕರ್ಯ ಗಳಿಲ್ಲದ ಕತ್ತಲೆ ಕೋಣೆಯಲ್ಲಿ ದಿನ…
ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಜಾಲ: ಪ್ರಶಾಂತ್ ಸಂಬರಗಿ ವಿಚಾರಣೆ
September 13, 2020ಬೆಂಗಳೂರು, ಸೆ. 12- ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಅಧಿಕಾರಿಗಳು ನಡೆಸಿದ ಸಾಮಾಜಿಕ ಕಾರ್ಯಕರ್ತ, ಚಲನಚಿತ್ರ ವಿತರಕ ಪ್ರಶಾಂತ್ ಸಂಬರಗಿ ವಿಚಾರಣೆ ಮುಕ್ತಾಯವಾಗಿದೆ. ವಿಚಾರಣೆ ಮುಗಿಸಿ ಸಿಸಿಬಿ ಕಚೇರಿಯಿಂದ ಹೊರಬಂದ ಸಂಬರಗಿ ಸುದ್ದಿಗಾರರೊಡನೆ ಮಾತನಾಡಿ, ಸಿಸಿಬಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ನನ್ನ ಬಳಿಯಿದ್ದ ಸಾಕ್ಷ್ಯಗಳನ್ನು ನೀಡಿದ್ದೇನೆ. ಶೇಕ್ ಫಾಜಿಲ್ ಹಾಗೂ ಶಾಸಕ ಜಮೀರ್ ಅಹಮದ್ ನಂಟಿಗೆ ಸಂಬಂಧಿಸಿ ವಿಚಾರಣೆ ಮಾಡುವಂತೆ ಸಿಸಿಬಿಗೆ ಮನವಿ ಮಾಡಿ ದ್ದೇನೆ ಎಂದರು. ಕೊಲಂಬೋದ ಕ್ಯಾಸಿನೋಗೆ ಹೋಗಿರುವುದಾಗಿ ಸ್ವತಃ ಜಮೀರ್…
ಕಂಗನಾ ರಾನಾವತ್‍ಗೆ ಡ್ರಗ್ ಪರೀಕ್ಷೆ ನಡೆಸಲು ಆದೇಶ
September 13, 2020ಮುಂಬೈ, ಸೆ. 12- ಬಾಲಿವುಡ್ ನಟಿ ಕಂಗನಾ ರಾನಾವತ್ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವಿನ ತಿಕ್ಕಾಟ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ, ಮುಂಬೈಯ ಪಾಲಿ ಹಿಲ್ಸ್‍ನಲ್ಲಿರುವ ಕಂಗನಾ ಕಚೇರಿಯನ್ನು ಧ್ವಂಸ ಮಾಡಲು ಹೊರಟ ಸರ್ಕಾರಕ್ಕೆ ಹೈಕೋರ್ಟ್ ತಡೆ ತಂದ ನಂತರ ಅದು ಅರ್ಧಕ್ಕೆ ನಿಂತಿದೆ. ಇದೀಗ ನಟಿ ಕಂಗನಾ ರನ್ನು ಡ್ರಗ್ ಪರೀಕ್ಷೆಗೆ ಒಳಪಡಿಸಲು ಸರ್ಕಾರ ನಿರ್ಧರಿಸಿದೆ. ಮುಂಬೈ ಪೆÇಲೀಸರು ಕಂಗನಾ ಮೇಲೆ ಡ್ರಗ್ ಪರೀಕ್ಷೆ ನಡೆಸುವಂತೆ ಮಹಾರಾಷ್ಟ್ರ ಸರ್ಕಾರ ನಿನ್ನೆ ಆದೇಶಿಸಿದೆ. ಇದಕ್ಕೆ ಕಾರಣ ನಟ…
ಮೂರು ದಶಕದ ನಂತರ ವೆನಿಸ್ ಚಲನಚಿತ್ರೋತ್ಸವದಲ್ಲಿ ಭಾರತೀಯ ಚಿತ್ರ ‘ದಿ ಡಿಸೆಪಲ್’ಗೆ ಪ್ರತಿಷ್ಠಿತ FIPRESCI ಪ್ರಶಸ್ತಿ
September 13, 2020ನವದೆಹಲಿ, ಸೆ. 12- ಚೈತನ್ಯ ತಮ್ಹಾನೆ ಅವರ “ದಿ ಡಿಸೆಪಲ್” 2020ರ ವೆನಿಸ್ ಚಲನಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಫಿಪ್ರೆಸ್ಕಿ ಪ್ರಶಸ್ತಿ (ಈIPಖಇSಅI ಚಿತಿಚಿಡಿಜ) ಗಳಿಸಿ ಕೊಂಡಿದೆ. ಶಾಸ್ತ್ರೀಯ ಸಂಗೀತ ಗಾರರ ಜಗತ್ತನ್ನು ಯಶಸ್ಸಿನ ಅಂಚಿನಲ್ಲಿ ನೋಡುವ ಈ ಚಿತ್ರವು ಕಳೆದ ವಾರ ಬಿಯೆನೆಲ್‍ನಲ್ಲಿ ತನ್ನ ಪ್ರಥಮ ಪ್ರದರ್ಶನವನ್ನು ಕಂಡಿತ್ತು. ಮತ್ತು ವಿಮರ್ಶಕರಿಂದ ಅದ್ಭುತ ವಿಮರ್ಶೆಗಳನ್ನು ಪಡೆದಿತ್ತು. ದಿ ಇಂಟನ್ರ್ಯಾಷನಲ್ ಫೆಡರೇಶನ್ ಆಫ್ ಫಿಲ್ಮ್ ಕ್ರಿಟಿಕ್ಸ್ ಫೆಡರೇಶನ್ ಇಂಟ ನ್ರ್ಯಾಷನಲ್ ಡೆ ಲಾ ಪ್ರೆಸ್ ಸಿನೆಮಾ ಟೋಗ್ರಾಫಿಕ್ಗ ನ ಈ…
ಕನ್ನಡ ಚಿತ್ರ ಸಾಹಿತಿ ತಂಗಾಳಿ ನಾಗರಾಜ್ ನಿಧನ
September 13, 2020ಬೆಂಗಳೂರು, ಸೆ. 12- ಕನ್ನಡ ಸಿನಿಮಾದ ಖ್ಯಾತ ಚಿತ್ರಸಾಹಿತಿ, ಗೀತ ರಚನೆಕಾರ ತಂಗಾಳಿ ನಾಗರಾಜ್ ಅವರು ವಿಧಿವಶರಾಗಿದ್ದಾರೆ. ಶನಿವಾರ ಬೆಳಗ್ಗೆ ಹೃದಯಾಘಾತದಿಂದ ಕೊನೆ ಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. “ತಂಗಾಳಿ ಎಲ್ಲಿಂದ ಬೀಸುವೆ” ಎಂಬ ಹಾಡು ಬರೆದು ಖ್ಯಾತವಾಗಿದ್ದ ನಾಗರಾಜ್ ನಂತರದಲ್ಲಿ ತಂಗಾಳಿ ನಾಗರಾಜ್ ಎಂದೇ ಹೆಸರಾಗಿದ್ದರು. 15 ವರ್ಷಗಳಿಂದ ಕನ್ನಡ ಚಿತ್ರೋದ್ಯಮದಲ್ಲಿ ಗೀತ ರಚನೆಗಾರರಾಗಿದ್ದ ನಾಗರಾಜ್ ನೂರಾರು ಹಿಟ್ ಹಾಡುಗಳನ್ನು ಕೊಟ್ಟಿದ್ದಾರೆ. ತಂಗಾಳಿ ನಾಗರಾಜ್ ಅವರ ನಿಧನಕ್ಕೆ ಗೀತರಚನೆಗಾರ ಕವಿರಾಜ್, ಖ್ಯಾತ ಹಿನ್ನೆಲೆ ಸಂಗೀತ ನಿರ್ದೇಶಕರು ಸಂತಾಪ…
ಸಂಗೀತ ನಿರ್ದೇಶಕ ಆದಿತ್ಯ ಪೌಡ್ವಾಲ್ ವಿಧಿವಶ
September 13, 2020ಮುಂಬಯಿ, ಸೆ. 12- ಸಂಗೀತ ನಿರ್ದೇಶಕ ಹಾಗೂ ಹಿರಿಯ ಗಾಯಕಿ ಅನುರಾಧ ಪೌಡ್ವಾಲ್ ಅವರ ಪುತ್ರ ಆದಿತ್ಯ ಪೌಡ್ವಾಲ್ ಶನಿವಾರ ನಿಧನರಾಗಿದ್ದಾರೆ. ಆದಿತ್ಯ ಅವರಿಗೆ ಕೇವಲ 35 ವರ್ಷ. ಹಲವು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದರು. ಅವರಿಗೆ ಅಧಿಕ ರಕ್ತದೊತ್ತಡವಿತ್ತು ಎಂದು ಗಾಯಕ ಶಂಕರ್ ಮಹದೇವನ್ ತಿಳಿಸಿದ್ದಾರೆ. ಕಿಡ್ನಿ ವೈಫಲ್ಯದಿಂದ ಅವರು ವಿಧಿವಶ ರಾಗಿದ್ದಾರೆ, ಕಳೆದ ನಾಲ್ಕು ದಿನಗಳಿಂದ ಆಸ್ಪತ್ರೆ ಐಸಿಯುನಲ್ಲಿ ದಾಖಲಾಗಿದ್ದರು. ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಆದಿತ್ಯ ನವಾಜುದ್ದೀನ್ ಸಿದ್ಧಕಿ ನಟನೆಯ ಥ್ಯಾಕರೆ ಸಿನಿಮಾಗೆ…










