ಉನ್ನತ ಮಟ್ಟದ ಸಮಿತಿಗೆ ಸಂಸದ ಪ್ರತಾಪ್‍ಸಿಂಹ ಸಲಹೆ ಮೈಸೂರು, ಸೆ.10(ಆರ್‍ಕೆಬಿ)- ಈ ಬಾರಿಯ ಮೈಸೂರು ದಸರಾ ಉದ್ಘಾಟನೆಯನ್ನು ಬೆಂಗಳೂರಿನ ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ.ಸಿ.ಎನ್. ಮಂಜುನಾಥ್ ಅವರಿಂದ ಮಾಡಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ದಸರಾ ಉನ್ನತ ಸಮಿತಿ ಸಭೆಯಲ್ಲಿ ತಿಳಿಸಿ ದ್ದಾಗಿ ಸಂಸದ ಪ್ರತಾಪ್‍ಸಿಂಹ ಇಂದಿಲ್ಲಿ ತಿಳಿಸಿದರು. ಜಲದರ್ಶಿನಿ ಅತಿಥಿ ಗೃಹದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ದಸರಾ ಉದ್ಘಾಟನೆಗೆ ವೈದ್ಯರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರ ಹೆಸರು ಕೇಳಿಬಂದಿವೆ. ಪೊಲೀಸ್ ಇಲಾಖೆಗೂ ಅವಕಾಶ ನೀಡುವಂತೆ ಸಭೆಯಲ್ಲಿ ಸಲಹೆ…
ಮಾಧ್ಯಮಗಳ ಮುಂದೆ ಮದುವೆಯಾಗಿದ್ದರೂ ನಾನಿನ್ನೂ ಮದುವೆಯಾಗಿಲ್ಲ ಎಂದಿದ್ದ ಸಂಜನಾ ಗುಟ್ಟುರಟ್ಟು!
September 11, 2020ಬೆಂಗಳೂರು, ಸೆ.10- ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾದ ನಂಟಿದೆ ಎಂದು ಸಿಸಿಬಿ ಪೆÇಲೀಸರ ಅತಿಥಿಯಾಗಿರುವ ನಟಿ ಸಂಜನಾ ಗಲ್ರಾನಿ ಅವರ ಮದುವೆ ಕುರಿತವಾಗಿ ಸ್ಫೋಟಕ ಫೆÇೀಟೋ ವೊಂದು ಹೊರಬಿದ್ದಿದ್ದು, ನನಗೆ ಮದುವೆ ಆಗಿಲ್ಲ ಎಂದು ನಟಿ ಸುಳ್ಳು ಹೇಳಿದರಾ ಎಂಬ ಅನುಮಾನ ಮೂಡಲು ಕಾರಣವಾಗಿದೆ. ನಟಿ ಸಂಜನಾರನ್ನು ಪೆÇಲೀಸರು ಬಂಧಿಸಿದ ಸಂದರ್ಭದಲ್ಲಿ ಅವರ ಡ್ರಗ್ ನಂಟಿನ ಜೊತೆ ಮದುವೆ ವಿಚಾರವೂ ಕೂಡ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬಂಧನವಾಗುವ ಒಂದು ದಿನಕ್ಕೂ ಮೊದಲು ನನಗಿನ್ನು ಮದುವೆಯಾಗಿಲ್ಲ. ನಾನು ಹುಡುಗಿ. ನನ್ನ…
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪುನರ್ವಸತಿ ಕಾರ್ಯಕರ್ತರಿಂದ ಪ್ರತಿಭಟನೆ
September 11, 2020ಮೈಸೂರು, ಸೆ.10(ಎಂಟಿವೈ)- ವಿಕಲಚೇತನರ ಕಲ್ಯಾಣ ಇಲಾಖೆ ಯಲ್ಲಿ ಸೇವೆ ಸಲ್ಲಿಸುತ್ತಿರುವ ವಿವಿಧೋದ್ದೇಶ ಪುನರ್ ವಸತಿ ಕಾರ್ಯಕರ್ತರನ್ನೇ(ಎಂಆರ್‍ಡಬ್ಲ್ಯೂ) ತಾಲೂಕು ನೋಡಲ್ ಅಧಿಕಾರಿ ಯಾಗಿ ನಿಯೋಜಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ವಿಕಲಚೇತನರ ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ಸದಸ್ಯರು ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಮೈಸೂರು ನಗರ ಹಾಗೂ ಜಿಲ್ಲೆಯಲ್ಲಿರುವ ವಿಕಲಚೇತನರು ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಲು ಹಾಗೂ ಇಲಾಖೆಗೆ ನೆರವಾಗಲು…
ಮೈಸೂರಲ್ಲಿ ಗುರುವಾರ 635 ಮಂದಿಗೆ ಸೋಂಕು
September 11, 202013 ಮಂದಿ ಸಾವು ರಾಜ್ಯದಲ್ಲಿ 9217 ಜನರಿಗೆ ಜಾಡ್ಯ ಮೈಸೂರು,ಸೆ.10-ಮೈಸೂರಿನಲ್ಲಿ ಗುರುವಾರ 635 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 499 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಸೋಂಕಿತರ ಸಂಖ್ಯೆ 23,773 ಕ್ಕೇರಿದರೆ, ಒಟ್ಟು 16,408 ಮಂದಿ ಗುಣಮುಖರಾಗಿದ್ದಾರೆ. ಇಂದು 13 ಮಂದಿ ಮೃತಪಟ್ಟಿದ್ದು, ಒಟ್ಟಾರೆ ಸೋಂಕಿನಿಂದ 549 ಮಂದಿ ಸಾವನ್ನಪ್ಪಿದ್ದಾರೆ. 6,816 ಸಕ್ರಿಯ ಸೋಂಕಿತರ ಪೈಕಿ 318 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 116 ಮಂದಿ ಡೆಡಿಕೇಟೆಡ್ ಹೆಲ್ತ್ ಕೇರ್‍ನಲ್ಲಿ, 817 ಮಂದಿ ಕೋವಿಡ್ ಕೇರ್ ಸೆಂಟರ್‍ನಲ್ಲಿ, 285…
ವಾಯುಪಡೆಗೆ ರಫೇಲ್ ವಿದ್ಯುಕ್ತ ಸೇರ್ಪಡೆ
September 11, 2020ಅಂಬಾಲಾ(ಹರ್ಯಾಣ), ಸೆ.10- ನಮ್ಮ ದೇಶದ ಸಾರ್ವಭೌಮತ್ವದ ಮೇಲೆ ಕಣ್ಣಿಡು ತ್ತಿರುವವರಿಗೆ ರಫೇಲ್ ಯುದ್ಧ ವಿಮಾನ ಭಾರತೀಯ ವಾಯುಪಡೆಗೆ ಸೇರ್ಪಡೆ ಅತಿದೊಡ್ಡ ಕಠಿಣ ಸಂದೇಶ ರವಾನಿಸಿದೆ. ನಮ್ಮ ದೇಶದ ಗಡಿಭಾಗದಲ್ಲಿ ಸದ್ಯ ಇರುವ ಪರಿಸ್ಥಿತಿಗೆ ಅಥವಾ ನಮ್ಮ ನೆರೆಯ ದೇಶಗಳು ಉಂಟು ಮಾಡಿರುವ ಪರಿಸ್ಥಿತಿ ಪರಿಗಣಿಸಿದರೆ ರಫೇಲ್ ಯುದ್ಧ ವಿಮಾನ ಸೇರ್ಪಡೆ ಅತ್ಯಂತ ಮುಖ್ಯವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಹರ್ಯಾಣದ ಅಂಬಾಲಾ ವಾಯುನೆಲೆಯಲ್ಲಿ ಇಂದು ವಿಧ್ಯುಕ್ತವಾಗಿ ಫ್ರಾನ್ಸ್‍ನಿಂದ ಖರೀದಿಸಲಾದ ರಫೇಲ್ ಯುದ್ಧ ವಿಮಾನವನ್ನು ಸೇರ್ಪಡೆಗೊಳಿಸುವ…
ಸಮಾಜದೊಂದಿಗೆ ಸಾಮರಸ್ಯ ಹೊಂದಿದ ಆರ್‍ಎಸ್‍ಎಸ್: ಸು.ರಾಮಣ್ಣ
September 11, 2020ಮೈಸೂರು, ಸೆ.10(ಎಂಕೆ)- ಸಾಮರಸ್ಯ ವಿಲ್ಲದ ಸಂಘಟನೆ ಬರೀ ನಾಟಕ-ಸುಳ್ಳು. ‘ಅಹಿಂದ’ ಎಂಬುದು ಸಂಘಟನೆಯಲ್ಲ. ರಾಜಕೀಯ ಆಕಾಂಕ್ಷೆ ಇಟ್ಟುಕೊಂಡು ಕಟ್ಟಿದ ತಾತ್ಕಾಲಿಕ ಸಮೂಹ ಶಕ್ತಿ ಎನಿಸುತ್ತದೆ ಎಂದು ಆರ್‍ಎಸ್‍ಎಸ್‍ನ ಹಿರಿಯ ಪ್ರಚಾ ರಕ ಸು.ರಾಮಣ್ಣ ಅಭಿಪ್ರಾಯಪಟ್ಟರು. ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ಮಾಧವ ಕೃಪ ಸಭಾಂಗಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್, ವಿನಾ ಯಕ ಕ್ರೀಡಾ ಹಾಗೂ ಸಮಾಜ ಸೇವಾ ಸಂಸ್ಥೆ ಹಾಗೂ ಯುವಜನ ಸಂಘದ ಸಂಯು ಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ‘ಸಮ ಚಿತ್ತದ ಸಮದರ್ಶಿ(ರಾಮಕೃಷ್ಣರ…
ಈ ಬಾರಿ ದಸರಾ ಉದ್ಘಾಟನೆಗೆ ಡಾ.ಸಿ.ಎನ್.ಮಂಜುನಾಥ್ ಆಯ್ಕೆ?
September 10, 2020ಬೆಂಗಳೂರು, ಸೆ.9-ಈ ಬಾರಿಯ ಮೈಸೂರು ದಸರಾ ಉತ್ಸವ ಉದ್ಘಾಟನೆಗೆ ಬೆಂಗಳೂರು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕರು ಹಾಗೂ ಕೊರೊನಾ ನಿಯಂತ್ರಣ ಸಂಬಂಧ ರಾಜ್ಯದಲ್ಲಿ ರಚನೆಯಾಗಿರುವ ಟಾಸ್ಕ್‍ಫೋರ್ಸ್ ಸದಸ್ಯರೂ ಆದ ಡಾ. ಸಿ.ಎನ್.ಮಂಜುನಾಥ್‍ರನ್ನು ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದೆ. ಕೊರೊನಾ ಸೋಂಕು ತಡೆಗೆ ಅವಿರತ ಶ್ರಮಿಸುತ್ತಿರುವ, ಕೊರೊನಾ ವಾರಿಯರ್ಸ್ ಬಗ್ಗೆ ಅತೀವ ಗೌರವವುಳ್ಳ ಮೈಸೂರು ಉಸ್ತು ವಾರಿ ಸಚಿವರೂ ಆದ ಸಹಕಾರ ಸಚಿವ ಎಸ್.ಟಿ.ಸೋಮ ಶೇಖರ್, ಅವರ ಪ್ರತಿನಿಧಿಯಾಗಿ ಡಾ. ಮಂಜುನಾಥ್ ಆಯ್ಕೆಗೆ ಒಲವು ತೋರಿದ್ದಾರೆ ಎಂದು ಹೇಳಲಾಗುತ್ತಿದೆ….
ದಸರಾ ಗಜಪಡೆ ಆಯ್ಕೆಗೆ ಅರಣ್ಯ ಇಲಾಖೆ ಕಸರತ್ತು
September 10, 2020ಮೈಸೂರು, ಸೆ.9(ಎಂಟಿವೈ)- ಕೊರೊನಾದಿಂದಾಗಿ ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕವಾಗಿ ದಸರಾ ಆಚ ರಣೆಗೆ ಸರ್ಕಾರ ನಿರ್ಧರಿಸಿದ ಬೆನ್ನಲ್ಲೇ ಅರಣ್ಯ ಇಲಾಖೆ ಗಜಪಡೆ ಐವರು ಸದಸ್ಯರ ಆಯ್ಕೆ ಪ್ರಕ್ರಿಯೆ ಆರಂಭಿಸಿದೆ. ಬುಧವಾರ ಅಧಿಕಾರಿಗಳ ತಂಡ ವಿವಿಧ ಆನೆ ಕ್ಯಾಂಪ್ ಗಳಿಗೆ ಭೇಟಿ ನೀಡಿ ಆನೆಗಳನ್ನು ಪರಿಶೀಲಿಸಿದೆ. ದಸರಾ ಮಹೋತ್ಸವಕ್ಕೆ ಗಜಪಡೆ ಆಯ್ಕೆ, ಅವುಗಳ ಕಾಳಜಿ ಸೇರಿದಂತೆ ಆನೆಗಳ ಜವಾಬ್ದಾರಿ ಮೈಸೂರು ವನ್ಯ ಜೀವಿ ವಿಭಾಗಕ್ಕೆ ಸೇರಿದೆ. ಈ ಹಿನ್ನೆಲೆಯಲ್ಲಿ ಡಿಸಿಎಫ್ ಅಲೆಗ್ಸಾಂಡರ್ ಬುಧವಾರ ನಾಗರಹೊಳೆ ಹುಲಿ ಸಂರಕ್ಷಿತ…
ಸೆ.15ರಂದು ವಿಷ್ಣು ಸ್ಮಾರಕಕ್ಕೆ ಭೂಮಿಪೂಜೆ
September 10, 2020ಮೈಸೂರು, ಸೆ.9(ಆರ್‍ಕೆಬಿ)- ಮೈಸೂರು ಸಮೀ ಪದ ಉದ್ಬೂರು ಗೇಟ್ ಬಳಿಯ ಹಾಲಾಳು ಗ್ರಾಮದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟ ದಿ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕಾರ್ಯದ ಭೂಮಿಪೂಜೆ ಸೆ.15ರಂದು ನಡೆಯಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಲಾಗಿದೆ. ಅವರು ಅಂದು ಬೆಳಗ್ಗೆ 10.30ರ ನಂತರ ಆನ್‍ಲೈನ್ ಮೂಲಕವೇ ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ತಿಳಿಸಿದರು. ಹುಟ್ಟುಹಬ್ಬ: ಸೆ. 18, ವಿಷ್ಣುವರ್ಧನ್ ಜನ್ಮದಿನ. ಸೆ.15ರಂದೇ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡ ಲಾಗುತ್ತಿದೆ. ಆದರೆ, ಕೋವಿಡ್-19…
ಪಡಿತರ ಅಕ್ರಮ ತಡೆಗೆ ರಾಜ್ಯ ಮಟ್ಟದಲ್ಲಿ ಜಾಗೃತ ದಳ
September 10, 2020ಹಾಸನ,ಸೆ.9-ಪಡಿತರ ಅಕ್ರಮ ತಡೆಯುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಜಾಗೃತ ದಳ ರಚನೆ ಮಾಡಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ. ಚನ್ನರಾಯಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪಡಿತರ ಅಕ್ರಮ ದಾಸ್ತಾನು ಮಾರಾಟ ಮಾಡುತ್ತಿರುವ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಜಾಗೃತದಳ ರಚನೆಗೆ ಚಿಂತಿಸಲಾಗಿದೆ. ಈ ಮೂಲಕ ಅಕ್ರಮ ತಡೆಗೆ ಕಠಿಣ ಕ್ರಮವಹಿಸಲಾಗಿದೆ ಎಂದರು. ಅರಸೀಕೆರೆ ತಾಲೂಕಿನಲ್ಲಿ 800…









