ಮೈಸೂರು, ಆ. 12- ಮೈಸೂರಿನ ಸುಪ್ರಿತಾ ಪಾಲೆಯಂಡ ಪೊನ್ನಪ್ಪ ಅವರು ತತ್ವಶಾಸ್ತ್ರ ವಿಷಯದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ ಮಹಾಪ್ರಬಂಧವನ್ನು ಆಸ್ಟ್ರೇಲಿ ಯಾದ ಬ್ರಿಷ್‍ಬೇನ್‍ನಲ್ಲಿರುವ ಕ್ವೀನ್ಸ್‍ಲ್ಯಾಂಡ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯು ಮಾರ್ಚ್ 25 ರಂದು ಪಿಎಚ್.ಡಿ ಪದವಿಗೆ ಅಂಗೀಕರಿಸಿದೆ. ಅವರು `ಎಲೆಕ್ಟ್ರೋಮೆರಿಜೈಷನ್ ಸ್ಟಡೀಸ್ ಆಫ್ ಕಾಂಜುಗೆಟೆಡ್ ಮಾನೋಮರ್ಸ್ ಅಂಡ್ ದೆರ್ ಬಯೋಸೆನ್ಸಾರ್ ಅಪ್ಲಿಕೇಷನ್ಸ್’ ವಿಷಯದಲ್ಲಿ ಸಂಶೋ ಧನೆ ಪೂರ್ಣಗೊಳಿಸಿದ್ದರು. ಇದು ದೇಹದಲ್ಲಿನ ಪೆÇ್ರೀಟೀನ್ ಅನ್ನು ಮೊದಲೇ ಪತ್ತೆಹಚ್ಚಲು ಸಹಾಯ ಮಾಡುತ್ತದೆ (ಕ್ಯಾನ್ಸರ್ ಮಾರಕ ಕೋಶಗಳು). ಸುಪ್ರೀತಾ ಪಾಲೆಯಂಡ ಪೊನ್ನಪ್ಪ…
ಎಸ್‍ಎಸ್‍ಎಲ್‍ಸಿ ಪರೀಕ್ಷೆ, ಫಲಿತಾಂಶ ಯಶಸ್ಸಿಗೆ ಕಾರಣರಾದವರಿಗೆ ಯಡಿಯೂರಪ್ಪ ಕೃತಜ್ಞತೆ ಸಲ್ಲಿಕೆ
August 12, 2020ಬೆಂಗಳೂರು, ಆ.11(ಕೆಎಂಶಿ)- ಸವಾಲುಗಳ ನಡುವೆ ಯಶಸ್ವಿ ಯಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ನಡೆದು, ಫಲಿತಾಂಶವೂ ಪ್ರಕಟಗೊಳ್ಳಲು ಕಾರಣ ರಾದ ಎಲ್ಲರಿಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ. ಕೊರೊನಾ ಸವಾಲುಗಳ ನಡುವೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅಡ್ಡಿಯಾಗ ಬಾರದು ಎಂದು ರಾಜ್ಯ ಸರ್ಕಾರ ಟೊಂಕ ಕಟ್ಟಿ ನಿಂತು, ಈ ವರ್ಷದ ಜೂನ್ 25ರಿಂದ ಜುಲೈ 3ರವರೆಗೆ, ಅತ್ಯಂತ ಯಶಸ್ವಿಯಾಗಿ ನಡೆಸಿದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳ ಫಲಿತಾಂಶ ನಿನ್ನೆ ಪ್ರಕಟವಾಗಿದೆ. ಶೇ.71.80ರಷ್ಟು ಮಕ್ಕಳು ತೇರ್ಗಡೆಯಾಗಿದ್ದಾರೆ. ಆತಂಕಗಳನ್ನು ಮೀರಿ ಪರೀಕ್ಷೆ ಬರೆದ ಎಲ್ಲ…
ಮೈಸೂರಲ್ಲಿ 647 ಸೇರಿ ರಾಜ್ಯದಲ್ಲಿ ಮಂಗಳವಾರ 6473 ಮಂದಿ ಗುಣಮುಖ
August 12, 2020ಮೈಸೂರು, ಆ.11(ಎಸ್‍ಬಿಡಿ)- ಮೈಸೂರಲ್ಲಿ ಮಂಗಳವಾರ 647 ಮಂದಿ ಸೇರಿ ರಾಜ್ಯದಲ್ಲಿ 6,473 ಕೊರೊನಾ ಸೋಂಕಿ ತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಮೈಸೂರಿನಲ್ಲಿ ಮಂಗಳವಾರ ಡಿಸ್ಚಾರ್ಜ್ ಆದವರ ಸಂಖ್ಯೆ ಈವರೆಗಿನ ದಾಖಲೆ ಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 4,113 ಜನ ಕೊರೊನಾ ಜಯಿಸಿದ್ದಾರೆ. ಹಾಗೆಯೇ ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ ಒಟ್ಟು 1,05,599ಕ್ಕೆ ಏರಿಕೆಯಾಗಿದೆ. ಹೊಸ ಪ್ರಕರಣ: ಮಂಗಳವಾರ ಮೈಸೂರಿನಲ್ಲಿ 238 ಸೇರಿದಂತೆ ರಾಜ್ಯದಲ್ಲಿ 6,257 ಹೊಸ ಪ್ರಕರಣ ದಾಖಲಾಗಿವೆ. ಜಿಲ್ಲೆಯ 238 ಸೋಂಕಿತರಲ್ಲಿ ಸಂಪರ್ಕಿತರು 69, ವಿಷಮಶೀತ…
ಗಾರೆ ಕೆಲಸ ಮಾಡುತ್ತ ಗುಡಿಸಲಿನಲ್ಲೇ ಓದಿ ಶೇ.98.5 ಅಂಕ ಪಡೆದ ಮಹೇಶ!
August 12, 2020ಬಡ ವಿದ್ಯಾರ್ಥಿಯ ಗುಡಿಸಲಿಗೆ ತೆರಳಿ ಅಭಿನಂದಿಸಿದ ಸಚಿವ ಸುರೇಶ್‍ಕುಮಾರ್ ಬೆಂಗಳೂರು, ಆ.11- ಗಾರೆ ಕೆಲಸ ಮಾಡಿಕೊಂಡೇ ವಿದ್ಯಾಭ್ಯಾಸ ಮಾಡುತ್ತ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.98.5 ಫಲಿತಾಂಶ ಪಡೆದ ಮಹೇಶನ ಮನೆಗೆ ಖುದ್ದು ಶಿಕ್ಷಣ ಸಚಿವರೇ ಭೇಟಿ ನೀಡಿ ಅಭಿನಂದಿಸಿದರು. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದು ಕೊಂಡ ಮಹೇಶನಿಗೆ ತಾಯಿಯೇ ಸರ್ವಸ್ವ. ಆತನ ತಾಯಿ ಬದುಕಿನ ಬಂಡಿ ಸಾಗಿಸಲು ಪುಟ್ಟ ಕಂದ(ಮಹೇಶ)ನನ್ನು ಎತ್ತಿಕೊಂಡು ಯಾದಗಿರಿಯಿಂದ ಬೆಂಗಳೂರಿಗೆ ಸುಮಾರು 10 ವರ್ಷಗಳ ಹಿಂದೆಯೇ ಗುಳೆ ಬಂದರು. ಜೀವನಭೀಮಾನಗರದ ಗುಡಿಸಲಿನಲ್ಲಿ ವಾಸವಿದ್ದಾರೆ. ಇಲ್ಲಿನ…
ಲಾಕ್‍ಡೌನ್ ಅವಧಿ ವೇತನ ಪಾವತಿ, ಸೇವಾ ಭದ್ರತೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ಪ್ರತಿಭಟನೆ
August 12, 2020ಮೈಸೂರು, ಆ.11(ಪಿಎಂ)- ಲಾಕ್‍ಡೌನ್ ಅವಧಿಯ ಗೌರವಧನ ಪಾವತಿ ಮಾಡಬೇಕೆಂಬುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯ ಜಿಲ್ಲಾ ಸಮಿತಿ ಆಶ್ರಯದಲ್ಲಿ ಅತಿಥಿ ಉಪ ನ್ಯಾಸಕರು ಮಂಗಳವಾರ ಪ್ರತಿಭಟನೆ ನಡೆಸಿದರು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ನೆರೆದ ಪ್ರತಿ ಭಟನಾಕಾರರು, ರಾಜ್ಯದ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದು, ಕೇವಲ 11ರಿಂದ 13 ಸಾವಿರ ರೂ. ಮಾಸಿಕ ಗೌರವಧನ ನೀಡುವ…
ರಾಜ್ಯದಲ್ಲಿ ಇನ್ನೂ ಜಾರಿಯಾಗದ ಶೇ.10 ಮೀಸಲಾತಿ
August 12, 2020ಮೈಸೂರು, ಆ.11(ಆರ್‍ಕೆಬಿ)- ಪ್ರಧಾನಿ ನರೇಂದ್ರ ಮೋದಿ ಅವರು ಈವರೆಗೆ ಮೀಸ ಲಾತಿ ಸೌಲಭ್ಯ ಪಡೆಯದ, ಆರ್ಥಿಕವಾಗಿ ಹಿಂದುಳಿದ 144 ಜಾತಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲು ಇರು ವಂತೆ ಅವಕಾಶ ಕಲ್ಪಿಸಿದ್ದಾರೆ. ಲೋಕಸಭೆ, ರಾಜ್ಯಸಭೆಯಲ್ಲಿ ಇದಕ್ಕೆ ಅನುಮೋದನೆ ಪಡೆದಿದ್ದು, ಹೊಸ ನೀತಿ ಈಗಾಗಲೇ ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್ ರಾಜ್ಯ ಗಳಲ್ಲಿ ಜಾರಿಗೊಂಡಿದೆ. ಆದರೆ ಕರ್ನಾ ಟಕದಲ್ಲಿನ್ನೂ ಜಾರಿಯಾಗಿಲ್ಲ. ಈಗಾಗಲೇ ತಯಾರಾಗಿರುವ ಕರಡನ್ನು ಸಚಿವ ಸಂಪುಟ ದಲ್ಲಿ ಮಂಡಿಸಿ ಶೀಘ್ರ ಜಾರಿಗೊಳಿಸು ವಂತೆ ಕರ್ನಾಟಕ ರಾಜ್ಯ…
ಅಂಧತ್ವ ಮೆಟ್ಟಿನಿಂತ ನಂದಿನಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೇರು ಸಾಧನೆ
August 12, 2020ಮೈಸೂರು, ಆ.11(ಆರ್‍ಕೆಬಿ)- ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬು ದಕ್ಕೆ ಮೈಸೂರಿನ ಗ್ರಾಮೀಣ ಪ್ರತಿಭೆಯೊಬ್ಬಳು ಸಾಕ್ಷಿಯಾಗಿದ್ದಾಳೆ. ಅಂಧತ್ವದಲ್ಲಿಯೂ ಇಡೀ ಶಾಲೆಗೆ ಪ್ರಥಮ ಸ್ಥಾನ ಪಡೆದು ವಿಶೇಷ ಸಾಧನೆ ಮಾಡಿದ್ದಾಳೆ. ಮೈಸೂರು ಜಿಲ್ಲೆಯ ಹುಣ ಸೂರು ತಾಲೂಕಿನ ಅರಸು ಕಲ್ಲಹಳ್ಳಿಯ ಪ್ರಕಾಶ್ ಮತ್ತು ಭಾಗ್ಯ ದಂಪತಿ ಪುತ್ರಿ ನಂದಿನಿ, ಹುಟ್ಟುವಾಗಲೇ ದೃಷ್ಟಿ ಕಳೆದುಕೊಂಡಿದ್ದಾಳೆ. ಆದರೂ ಛಲಬಿಡದೆ ಆತ್ಮವಿಶ್ವಾಸದಿಂದ ಮುನ್ನುಗ್ಗುವ ಮನ ಸ್ಥಿತಿ ಹೊಂದಿದ್ದಾಳೆ. ಈಕೆ ಒಂದರಿಂದ 3ನೇ ತರಗತಿವರೆಗೆ ಹುಟ್ಟೂ ರಿನಲ್ಲೇ ವ್ಯಾಸಂಗ ಮಾಡಿ ದ್ದಾಳೆ. ಈಕೆ ದೃಷ್ಟಿ…
ಶ್ರವಣ ದೋಷದ ಶ್ರೇಯಾಗೆ ಎಸ್‍ಎಸ್‍ಎಲ್‍ಸಿಯಲ್ಲಿ ಶೇ.76 ಅಂಕ
August 12, 2020ಮೈಸೂರು, ಆ.11(ಆರ್‍ಕೆಬಿ)- ಶ್ರವಣ ದೋಷವುಳ್ಳ ಬಾಲಕಿ ಶ್ರೇಯಾ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.76 ಅಂಕ ಪಡೆದು ಸಾಧನೆ ಮಾಡಿದ್ದಾಳೆ. ಸರಸ್ವತಿಪುರಂ ರೋಟರಿ ವೆಸ್ಟ್ ಶಾಲೆ ವಿದ್ಯಾರ್ಥಿನಿ ಶ್ರೇಯಾಗೆ ಹುಟ್ಟಿನಿಂದಲೇ ಶ್ರವಣದೋಷ. ಶಿಕ್ಷಕರು ಮಾಡಿದ ಪಾಠವನ್ನು ಚೆನ್ನಾಗಿ ಮನನ ಮಾಡಿಕೊಂಡು 480 ಅಂಕ ಗಳಿಸಿದ್ದಾಳೆ. ಕುಕ್ಕರಹಳ್ಳಿಯ ವಿಶ್ವನಾಥ್ -ರೂಪಾ ದಂಪತಿ ಪುತ್ರಿ ಶ್ರೇಯಾಗೆ ಮುಂದೆ ಕಾಮರ್ಸ್ ಪದವಿ ಪಡೆದು ಬಳಿಕ ಕೆಎಎಸ್, ಐಎಎಸ್ ಮಾಡುವ ಹಂಬಲವಿದೆ. ಪೋಷಕರು ಉತ್ತಮ ಬೆಂಬಲ ನೀಡುತ್ತಿದ್ದಾರೆ.
ಅಂಬೇಡ್ಕರ್‍ರನ್ನು ಮೀರಿಸುವಂಥ ವಿದ್ವಾಂಸ ಮತ್ತೊಬ್ಬರಿಲ್ಲ
August 12, 2020ಮೈಸೂರು, ಆ.11(ಆರ್‍ಕೆಬಿ)- ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಮೀರಿ ಸುವಂಥ ವಿದ್ವಾಂಸ ಮತ್ತೊಬ್ಬರಿಲ್ಲ. ಅಂತಹ ಜ್ಞಾನ ಅವರಲ್ಲಿತ್ತು. ಇವೆಲ್ಲವನ್ನೂ ತಿಳಿಯ ಬೇಕಾದರೆ ಅಂಬೇಡ್ಕರ್ ಅವರ ಗ್ರಂಥ, ಪುಸ್ತಕಗಳನ್ನು ಓದಬೇಕು, ವೈಚಾರಿಕತೆ ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ಪ್ರೊ. ಕೆ.ಎಸ್.ಭಗವಾನ್ ಅಭಿಪ್ರಾಯಪಟ್ಟರು. ಮೈಸೂರಿನ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಮಂಗಳವಾರ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ `ದಸಂಸ ಪುನರ್ ಅವಲೋಕನಕ್ಕಾಗಿ ಚಿಂತನಾ ಸಭೆ’ ಉದ್ಘಾಟಿಸಿದ ಅವರು, ಜಾತಿ ವ್ಯವಸ್ಥೆಯ ಅಪಾಯವನ್ನು ಬಹಳ ಚೆನ್ನಾಗಿ ಅರಿತಿದ್ದ ಅಂಬೇಡ್ಕರ್, ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯವನ್ನು…
ಕೆಎಎಸ್ ಪೂರ್ವಭಾವಿ ಪರೀಕ್ಷೆ ಮುಂದೂಡಲು ಆಗ್ರಹಿಸಿ ಅಂಚೆ ಚಳವಳಿ
August 12, 2020ಮೈಸೂರು, ಆ.11(ಪಿಎಂ)- ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‍ಸಿ) ಆ.24ರಂದು ನಡೆಸಲು ದ್ದೇಶಿಸಿರುವ ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಲು ಆಗ್ರಹಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ದಲಿತ ಸಂಘಟನೆಗಳ ಒಕ್ಕೂಟ, ಮಾನಸ ಗಂಗೋತ್ರಿ ದಲಿತ ವಿದ್ಯಾರ್ಥಿ ಒಕ್ಕೂಟದ ಸಂಯುಕ್ತಾ ಶ್ರಯದಲ್ಲಿ ಅಂಚೆ ಚಳವಳಿ ನಡೆಸಲಾಯಿತು. ಮೈಸೂರು ಮಹಾನಗರ ಪಾಲಿಕೆ ಪ್ರಧಾನ ಕಚೇರಿ ಮುಂಭಾಗದ ಅಂಚೆ ಪೆಟ್ಟಿಗೆ ಎದುರು ಜಮಾವಣೆಗೊಂಡ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು, ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಿ ಪರೀಕ್ಷೆ…










