ಮೈಸೂರು, ಆ. 10-ವಾಸುದೇವ ಮಹಾರಾಜರ ಆರಾಧನಾ ಮಹೋ ತ್ಸವದ ಅಂಗವಾಗಿ ಮೈಸೂರಿನ ಬ್ರಹ್ಮೀ ಭೂತ ವಾಸುದೇವ ಮಹಾರಾಜ್ ಫೌಂಡೇ ಷನ್ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಡಾ.ಭವಾನಿ ಶಂಕರ್ (ಶಿಕ್ಷಣ ಮತ್ತು ಸಮಾಜ ಸೇವೆ), ಡಾ. ಟಿ.ಎನ್.ಶಶಿಕುಮಾರ್ (ಯೋಗ) ಮತ್ತು ಎನ್.ಶ್ರೀಧರ ದೀಕ್ಷಿತ್ (ಸಮಾಜ ಸೇವೆ) ಅವರಿಗೆ ವಾಸುದೇವ್ ಮಹಾರಾಜ್ ಸದ್ಭಾ ವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಹಿರಿಯ ಸಮಾಜ ಸೇವಕ…
ನಾಳೆ ಕೆಎಎಸ್, ಎಫ್‍ಡಿಎ ಪರೀಕ್ಷೆಗಳ ಆನ್‍ಲೈನ್ ತರಬೇತಿ ಶಿಬಿರ ಸಮಾರೋಪ
August 11, 2020ಮೈಸೂರು, ಆ.10(ಆರ್‍ಕೆಬಿ)- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸ್ಪರ್ಧಾ ತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವು ಕೆಎಎಸ್ ಹಾಗೂ ಇತರೆ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 2 ತಿಂಗಳ ಆನ್‍ಲೈನ್ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಆ.12ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನಿಂದಲೇ ಆನ್‍ಲೈನ್‍ನಲ್ಲಿ ಹಿರಿಯ ಐಎಎಸ್ ಅಧಿಕಾರಿ ಪಿ.ಮಣಿವಣ್ಣನ್ ತರಬೇತಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಲಿದ್ದಾರೆ. ಕರಾಮುವಿ ಕುಲಪತಿ ಪೆÇ್ರ.ಎಸ್.ವಿದ್ಯಾಶಂಕರ್ ಅಧ್ಯಕ್ಷತೆ ವಹಿಸ ಲಿದ್ದು, 190 ಪುಟದ ಮುಕ್ತ ಭಂಡಾರ ಅಧ್ಯಯನ ಪುಸ್ತಕವನ್ನು ಬಿಡುಗಡೆ ಮಾಡುವರು. ಗ್ರಾಮೀಣ ಮೂಲಭೂತ ಅಭಿವೃದ್ಧಿ ನಿಗಮದ…
ಮೈಸೂರಲ್ಲಿ ಕೊರೊನಾ ಜಾಗೃತಿ ಯುವ ಕಾರ್ಯಪಡೆ ಅಸ್ತಿತ್ವಕ್ಕೆ
August 11, 2020ಮೈಸೂರು,ಆ.10(ಆರ್‍ಕೆ)- ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಕೊರೊನಾ ಯುವ ಕಾರ್ಯಪಡೆಯೊಂದು ಅಸ್ತಿತ್ವಕ್ಕೆ ಬಂದಿದೆ. ಶಾರದಾದೇವಿ ನಗರದ ನಿವೇದಿತಾ ಪಾರ್ಕ್ ಬಳಿ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರು ಗಿಡ ನೆಡುವ ಮೂಲಕ ಕಾರ್ಯಪಡೆಯನ್ನು ಉದ್ಘಾಟಿಸಿದರು. 45ನೇ ವಾರ್ಡಿನಲ್ಲಿ ಕೆಲಸ ಮಾಡಲಿ ರುವ 60 ಮಂದಿ ಯುವಕ-ಯುವತಿ ಯರು, ಕೊರೊನಾ ವೈರಸ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಿ ವೃದ್ಧರು, ರೋಗ ಲಕ್ಷಣಗಳಿರುವವರು ಮನೆಯಿಂದ ಹೊರಗೆ ಬಾರದಂತೆ ನೋಡಿಕೊಂಡು ಅವರಿಗೆ ಅಗತ್ಯವಿರುವ ಸೇವೆ ಸಲ್ಲಿಸುವರು. ಈ ಸಂದರ್ಭ ಮಾತನಾಡಿದ ಜಾವ ಗಲ್…
ಕೆಆರ್‍ಎಸ್‍ಗೆ ಪ್ರವಾಸಿಗರ ದಂಡು
August 10, 2020ಕೆಆರ್‍ಎಸ್, ಆ.9(ಎಂಟಿವೈ)- ಕೊಡಗು ಜಿಲ್ಲೆ ಸೇರಿದಂತೆ ಕಾವೇರಿ ಕಣಿವೆಯಲ್ಲಿ ಸುರಿ ಯುತ್ತಿರುವ ಧಾರಾಕಾರ ಮಳೆಯಿಂದ ಜೀವನದಿ ಕಾವೇರಿ ಉಕ್ಕಿ ಹರಿಯುತ್ತಿದ್ದು, ಕೆಆರ್‍ಎಸ್ ಅಣೆಕಟ್ಟೆಯಿಂದ 73 ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಬಿಡಲಾಗುತ್ತಿದೆ. ಕ್ರೆಸ್ಟ್‍ಗೇಟ್ ಮೂಲಕ ಹಾಲಿನ ನೊರೆಯಂತೆ ಉಕ್ಕುತ್ತಿರುವ ರಮ ಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಭಾನು ವಾರ ಪ್ರವಾಸಿಗರು ಮುಗಿಬಿದ್ದರು. ಪ್ರತಿ ವರ್ಷ ಕೆಆರ್‍ಎಸ್ ಅಣೆಕಟ್ಟೆಯಿಂದ ನದಿಗೆ ನೀರು ಬಿಡುವುದನ್ನು ನೋಡಲೆಂದು ವಿವಿ ಧೆಡೆಯಿಂದ ಪ್ರವಾಸಿಗರು ಆಗಮಿಸುವ ಪರಿ ಪಾಠ ಹೊಂದಿದ್ದು, ಈ ಬಾರಿ ಕೊರೊನಾ ಆತಂಕದಿಂದ…
ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ
August 10, 2020ನಂಜನಗೂಡು,ಆ.9(ರವಿ)-ಕಪಿಲಾ ನದಿಯ ಪ್ರವಾಹ ಇಳಿಮುಖ ವಾಗಿದ್ದು, ಮಲ್ಲನಮೂಲೆ ಮಠದ ಬಳಿ ಜಲಾವೃತಗೊಂಡು ಬಂದ್ ಆಗಿದ್ದ ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಭಾನುವಾರದಿಂದ ಸಂಚಾರಕ್ಕೆ ಮುಕ್ತವಾಗಿದೆ. ಕೇರಳದ ವೈನಾಡಿನಲ್ಲಿ ಕೆಲ ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದ ಕಾರಣ ಬೀಚನಹಳ್ಳಿ ಕಬಿನಿ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದುಬರುತ್ತಿತ್ತು. ಇದರಿಂದ ಸುಮಾರು 78 ಸಾವಿರ ಕ್ಯೂಸೆಕ್ ನೀರನ್ನು ಜಲಾಶಯದಿಂದ ನದಿಗೆ ಬಿಡಲಾಗಿತ್ತು. ಪರಿಣಾಮ ಕಪಿಲಾ ನದಿ ನೀರಿನ ಮಟ್ಟ ಏರಿಕೆಯಾಗಿ ನಂಜನಗೂಡು ನಗರ ಹೊರವಲಯದ ಮಲ್ಲನಮೂಲೆ ಮಠದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ…
ಕೃಷಿ ವಲಯಕ್ಕೆ 1 ಲಕ್ಷ ಕೋಟಿ ರೂ.ಗಳ ಹಣಕಾಸು ನೆರವು ಯೋಜನೆಗೆ ಮೋದಿ ಚಾಲನೆ
August 10, 2020ನವದೆಹಲಿ, ಆ.9- ಕೃಷಿ ವಲಯದಲ್ಲಿ ನವೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ದೇಶದ ವಿವಿಧೆಡೆ 350ಕ್ಕೂ ಹೆಚ್ಚು ಅಗ್ರಿ ಸ್ಟಾರ್ಟ್ ಅಪ್ ಆರಂಭಕ್ಕೆ ಕೇಂದ್ರ ಸರ್ಕಾರ ಹಣಕಾಸು ನೆರವು ನೀಡಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ರೈತರು ಮತ್ತು ಬೆಳೆಗಾರರ ಹಿತರಕ್ಷಣೆಗಾಗಿ ಕೃಷಿ ಉತ್ಪಾದಕರ ಸಂಘಟನೆ (ಎಫ್‍ಪಿಒ)ಗಳ ಜಾಲವನ್ನು ಸಹ ಸೃಷ್ಟಿಸಲಾಗುವುದು ಎಂದು ಅವರು ಘೋಷಿಸಿದರು. ಕೃಷಿ ಮೂಲ ಸೌಕರ್ಯಾಭಿವೃದ್ಧಿಗಾಗಿ ರೈತರಿಗೆ ಒಂದು ಲಕ್ಷ ಕೋಟಿ ರೂ.ಗಳ ಹಣಕಾಸು ನೆರವಿನ ಸೌಲಭ್ಯ ಒದಗಿಸುವ ಮಹತ್ವದ ಯೋಜನೆಗೆ ಪ್ರಧಾನಮಂತ್ರಿ…
ಶ್ರೀರಾಮುಲುಗೆ ಕೊರೊನಾ ಪಾಸಿಟಿವ್
August 10, 2020ಬೆಂಗಳೂರು, ಆ.9- ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇಂದು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿಸಿದಾಗ ಕೊರೊನಾ ಪಾಸಿಟಿವ್ ಬಂದಿದೆ ಎಂದು ಶ್ರೀರಾಮುಲು ಅವರೇ ಸರಣಿ ಟ್ವೀಟ್ ಮಾಡಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲಿದ್ದೇನೆ ಎಂದರು. ಆದಷ್ಟೂ ಬೇಗ ಗುಣಮುಖನಾಗಿ ಸಂಕಷ್ಟ ಸಮಯದಲ್ಲಿ ಇನ್ನಷ್ಟು ಜನಸೇವೆ ಮಾಡಲು ಶಕ್ತಿ ಕೊಡುವಂತೆ ಭಗ ವಂತನಲ್ಲಿ ಪ್ರಾರ್ಥಿಸುತ್ತೇನೆ. ಇತ್ತೀಚೆಗೆ ನನ್ನ ಸಂಪರ್ಕದಲ್ಲಿದ್ದ ಎಲ್ಲರೂ ಮುನ್ನೆಚ್ಚರಿಕೆ ಕ್ರಮ ವಹಿಸಲು ಕೋರುತ್ತೇನೆ ಎಂದು ಟ್ವೀಟಿಸಿದ್ದಾರೆ….
ಮೈಸೂರಲ್ಲಿ ಒಂದೇ ದಿನ 455 ಮಂದಿಗೆ ಕೊರೊನಾ ಸೋಂಕು
August 10, 20207 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 5,985 ಜನರಿಗೆ ಜಾಡ್ಯ ಮೈಸೂರು, ಆ.9(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ದಾಖಲೆಯ 455 ಪ್ರಕರಣ ಸೇರಿದಂತೆ ರಾಜ್ಯದಲ್ಲಿ ಭಾನುವಾರ 5,985 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ ಮೈಸೂರಿನಲ್ಲಿ 7,311 ಹಾಗೂ ರಾಜ್ಯದಲ್ಲಿ 1,78,087ಕ್ಕೆ ಏರಿಕೆಯಾಗಿದೆ. ಒಂದೇ ದಿನ ಮೈಸೂರಿನಲ್ಲಿ 461 ಮಂದಿ ಸೇರಿ ರಾಜ್ಯ ದಲ್ಲಿ 4,670 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಮೈಸೂರಿನಲ್ಲಿ ಭಾನುವಾರ ದಾಖಲೆ ಸಂಖ್ಯೆಯ ಪ್ರಕರಣ ವರದಿ ಯಾಗಿದ್ದರೂ,…
ಮೈಸೂರು ಜಿಲ್ಲೆಯಲ್ಲಿ `ವಿದ್ಯಾಗಮ’ ಶೇ.60 ಅನುಷ್ಠಾನ
August 10, 2020ಮೈಸೂರು, ಆ.9(ಎಸ್‍ಪಿಎನ್)- ಜಿಲ್ಲಾ ದ್ಯಂತ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಯಶಸ್ವಿ ಯಾದ ಬೆನ್ನಲ್ಲೇ, ಅದೇ ಮಾದರಿಯಲ್ಲಿ `ವಿದ್ಯಾಗಮ’ ಯೋಜನೆ ಅನುಷ್ಠಾನಗೊಳಿ ಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾ ಗಿದೆ. ಕೋವಿಡ್-19 ಭೀತಿ ಮತ್ತು ಜಿಟಿ ಜಿಟಿ ಮಳೆಯ ಕಾಟದ ನಡುವೆಯೂ ಜಿಲ್ಲೆ ಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ಆಗಸ್ಟ್ ತಿಂಗಳಲ್ಲಿ ಚುರುಕು ಪಡೆದುಕೊಂಡಿವೆ. ಕಳೆದ 4 ತಿಂಗಳಿಂದ ಪಾಠ-ಪ್ರವಚನ ವಿಲ್ಲದೆ ಸುಮ್ಮನೆ ದಿನದೂಡುತ್ತಿದ್ದ 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು, ಇದೀಗ ತಮ್ಮ ಮನೆ ಮುಂದಿನ ವರಾಂಡ, ಪಡಸಾಲೆ, ಅರಳಿ ಕಟ್ಟೆ…
ಉದ್ಯಾನಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಚಾಲನೆ
August 10, 2020ಮೈಸೂರು,ಆ.9(ಆರ್‍ಕೆಬಿ)-ಚಾಮರಾಜ ಕ್ಷೇತ್ರ ವ್ಯಾಪ್ತಿಯ 2 ಉದ್ಯಾನಗಳನ್ನು 20 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮ ಗಾರಿಗೆ ಶಾಸಕ ಎಲ್.ನಾಗೇಂದ್ರ ಭಾನುವಾರ ಚಾಲನೆ ನೀಡಿದರು. ಶಾಸಕರ ವಿವೇಚನಾ ನಿಧಿ ಎಸ್‍ಎಫ್‍ಸಿ ಯೋಜನೆ ಅನುದಾನ ದಲ್ಲಿ 2ನೇ ವಾರ್ಡ್‍ನ ಮಹಾಲಕ್ಷ್ಮಿ ಸ್ವೀಟ್ಸ್ ಮುಂಭಾಗದ ಉದ್ಯಾನ ಹಾಗೂ ಉಮಾಮಹೇಶ್ವರಿ ದೇವಸ್ಥಾನ ಮುಂಭಾಗದ ಉದ್ಯಾನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಬಳಿಕ ಮಾತನಾಡಿ, ಎರಡೂ ಉದ್ಯಾನಗಳ ಅಭಿವೃದ್ಧಿಗೆ ನೀಡಿದ ಅನುದಾನ ಸಾಲದೇ ಇದ್ದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಅನು ದಾನದಲ್ಲಿ ಹೆಚ್ಚುವರಿಯಾಗಿ ಹಣ ಬಿಡುಗಡೆ…










