ನವದೆಹಲಿ, ಆ.8-ಕೃಷಿ ಕ್ಷೇತ್ರಕ್ಕೆ ಇನ್ನಷ್ಟು ಉತ್ತೇಜನವನ್ನು ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಬೆಳೆ ಕಟಾವು ಬಳಿಕದ ಕೃಷಿ ಚಟುವಟಿಕೆ ಗಳನ್ನು ಇನ್ನಷ್ಟು ಉತ್ತೇಜಿಸುವ ನಿಟ್ಟಿನಲ್ಲಿ `ಅಗ್ರಿ ಇನ್ ಫ್ರಾ ಫಂಡ್’ನಡಿಯಲ್ಲಿ 1 ಲಕ್ಷ ಕೋಟಿ ರೂ.ಗಳ ಹಣಕಾಸು ನೆರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರದಂದು ವಿಡಿಯೋ ಕಾನ್ಫೆರನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ಈ ಯೋಜನೆಯು ರೈತರು ಬೆಳೆದ ಬೆಳೆಗಳನ್ನು ಸೂಕ್ತವಾಗಿ ಸಂರಕ್ಷಿ ಸಿಡಲು ಅಗತ್ಯ ವಿರುವ ಕೋಲ್ಡ್ ಸ್ಟೋರೇಜ್‍ಗಳು, ಉತ್ಪನ್ನ ಸಂಗ್ರಹ ಕೇಂದ್ರಗಳು,…
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧ ಹೋರಾಟ ತೀವ್ರಗೊಳಿಸಿದ ರೈತಸಂಘ
August 9, 2020ಮೈಸೂರು, ಆ.8 (ಪಿಎಂ)- ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀ ವಾಜ್ಞೆ ಮೂಲಕ ಜಾರಿಗೆ ತಂದಿರುವುದನ್ನು ಖಂಡಿ ಸಿರುವ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಕಾಯ್ದೆ ಹಿಂಪಡೆಯಲು ಆಗ್ರಹಿಸಿದೆ. `ನಮ್ಮ ಭೂಮಿ ಮಾರಾಟಕ್ಕಿಲ್ಲ, ಕಾರ್ಪೊರೇಟ್ ಕಂಪನಿ, ಬಂಡವಾಳಶಾಹಿ, ಭೂ ದಲ್ಲಾಳಿಗಳಿಗೆ ಗ್ರಾಮದೊಳಗೆ ಪ್ರವೇಶವಿಲ್ಲ’ ಎಂಬ ಫಲಕ ಅಳವಡಿ ಸುವ ಚಳವಳಿಗೆ ಶನಿವಾರ ಚಾಲನೆ ನೀಡಿದೆ. `ಆ.8ರ ಕ್ವಿಟ್ ಇಂಡಿಯಾ ಚಳವಳಿ ಘೋಷಣೆ ದಿನದ ಸ್ಮರಣೆಯೊಂದಿಗೆ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧದ…
ಮೈಸೂರಿನ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸ ಕುಂಠಿತ
August 9, 2020ಮೈಸೂರು, ಆ. 8(ಆರ್‍ಕೆ)- ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಕೊರೊನಾ ವೈರಸ್ ಸೋಂಕು ವ್ಯಾಪಕ ವಾಗಿ ಹರಡುತ್ತಿರುವುದ ರಿಂದ ಜಿಲ್ಲಾಧಿಕಾರಿ ಕಚೇರಿ, ಮುಡಾ, ನಗರ ಪಾಲಿಕೆ, ತಹಸೀಲ್ದಾರ್, ಜಿಲ್ಲಾ ಪಂಚಾಯ್ತಿ ಸೇರಿ ದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕುಂಠಿತವಾಗಿದೆ. ಅಧಿಕಾರಿಗಳು, ಸಿಬ್ಬಂದಿ ಹಾಗೂ ಜನ ಪ್ರತಿನಿಧಿಗಳನ್ನೊರತುಪಡಿಸಿ ಎಲ್ಲಾ ಕಚೇರಿ ಗಳಲ್ಲೂ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿರುವುದರಿಂದ ಸೇವೆ ಸಿಗದೆ ಜನರು ಪರಿತಪಿಸುವಂತಾಗಿದೆ. ಕಚೇರಿ ಪ್ರವೇಶ ದ್ವಾರದಲ್ಲಿ ಅಡ್ಡಲಾಗಿ ಟೇಬಲ್ ಅಡ್ಡಗಟ್ಟಿ ರುವುದು ಇಲ್ಲವೇ ಟೇಪ್ ಕಟ್ಟಿರುವುದ…
ಸಾಕಾನೆ ದಾಳಿಗೆ ಬಲಿಯಾದ ಮಾವುತನ ಕುಟುಂಬಕ್ಕೆ ಮೃಗಾಲಯ ಪ್ರಾಧಿಕಾರದಿಂದ 10 ಲಕ್ಷ ರೂ. ಪರಿಹಾರ
August 9, 2020ಮೈಸೂರು, ಆ.8(ಎಂಟಿವೈ)- ಆನೆಯ ಆಕಸ್ಮಿಕ ದಾಳಿಗೆ ತುತ್ತಾಗಿ ಬಲಿಯಾದ ಗುತ್ತಿಗೆ ನೌಕರ ಹರೀಶ್ ಕುಟುಂಬಕ್ಕೆ ಮೃಗಾ ಲಯ ಪ್ರಾಧಿಕಾರದಿಂದ ಶನಿವಾರ 10 ಲಕ್ಷ ರೂ. ಪರಿಹಾರ ವಿತರಿಸಲಾಯಿತು. ಮೈಸೂರು ಮೃಗಾಲಯದ ಇತಿಹಾಸ ದಲ್ಲಿಯೇ ಮೊದಲ ಬಾರಿಗೆ ಆನೆ ದಾಳಿಗೆ ಮಾವುತ ಬಲಿಯಾದ ಘಟನೆ ಶುಕ್ರವಾರ ನಡೆದಿದೆ. 16 ವರ್ಷಗಳಿಂದ ಗುತ್ತಿಗೆ ಆಧಾರ ಆನೆಗಳ ಪಾಲನೆ ಮಾಡುತ್ತಿದ್ದ ಲಲಿತಾದ್ರಿ ಪುರದ ದಿ.ಸಿದ್ದೇಗೌಡರ ಮಗ ಎಸ್. ಹರೀಶ್(38) ಆನೆ ದಾಳಿಗೆ ಬಲಿಯಾ ದವರು. ಇಂದು ಬೆಳಗ್ಗೆ ಅಂತಿಮ ದರ್ಶನ ಬಳಿಕ…
ಸಂಬಳವಿಲ್ಲದೆ ಕಂಗಾಲಾಗಿರುವ ಕಲಾ ಮಂದಿರ ದಿನಗೂಲಿ ನೌಕರರು
August 9, 2020ಮೈಸೂರು, ಆ.8(ಆರ್‍ಕೆ)-ಕೊರೊನಾ ಸಂಕಷ್ಟದ ನಡುವೆ ಮೈಸೂರಿನ ಕರ್ನಾಟಕ ಕಲಾ ಮಂದಿರದ ದಿನಗೂಲಿ ನೌಕರರು ಸಂಬಳವಿಲ್ಲದೆ ಕಂಗಾಲಾಗಿದ್ದಾರೆ. ಅನು ದಾನದ ಕೊರತೆಯಿಂದಾಗಿ ಕಳೆದ 3 ತಿಂಗಳಿಂದ ತಮಗೆ ಸಂಬಳ ನೀಡದಿರುವ ಕಾರಣ ಜೀವನೋ ಪಾಯಕ್ಕೆ ಪರದಾಡುತ್ತಿದ್ದೇವೆ ಎಂದು ಕಲಾ ಮಂದಿರ ದಿನಗೂಲಿ ನೌಕರರು ತಮ್ಮ ಅಳಲು ತೋಡಿ ಕೊಂಡಿದ್ದಾರೆ. ಮೇಲ್ವಿಚಾರಕ ರಮೇಶ್, ಟಪಾಲು ನಿರ್ವಹಿಸುವ ಮಹದೇವು, ಸ್ವಚ್ಛತಾ ಸಿಬ್ಬಂದಿ ಗೋಪಾಲ್, ವಿದ್ಯುತ್ ಕೆಲಸ ನಿರ್ವಹಿಸುವ ಫಯಾಜ್ ಜೊತೆಗೆ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಮಹದೇವು, ವಳ್ಳಿಯಮ್ಮ, ಶಂಕರ,…
ಕರ್ನಾಟಕದ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ವಾರ ಕಾಲ ಭಾರೀ ಮಳೆ ಹಿನ್ನೆಲೆ ರೆಡ್ ಅಲರ್ಟ್
August 7, 2020ಬೆಂಗಳೂರು, ಆ.6-ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರೆದಿದ್ದು, ಮಲೆ ನಾಡು ಮತ್ತು ಕರಾವಳಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ರಾಜ್ಯ ದೆಲ್ಲೆಡೆ ಅಬ್ಬರಿಸುತ್ತಿ ರುವ ವರುಣ ಇನ್ನೂ ಒಂದು ವಾರ ತನ್ನ ಆರ್ಭಟವನ್ನು ತೋರಿ ಸಲಿದ್ದಾನೆ ಎಂದು ಭಾರತೀಯ ಹವಾ ಮಾನ ಇಲಾಖೆ ಮಾಹಿತಿ ನೀಡಿದೆ. ಕರ್ನಾಟಕದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾ ಗುವ ಸಾಧ್ಯತೆಯಿದೆ. 20 ಸೆಂ.ಮೀಗಿಂತಲೂ ಹೆಚ್ಚು ಮಳೆಯಾಗಲಿದೆ. ಇದರಿಂದಾಗಿ ಇಂದು…
ಕೊರೊನಾ ಸೋಂಕಿ ನಿಂದ ಮೃತಪಟ್ಟರೂ ಮರಣ ಪ್ರಮಾಣ ಪತ್ರದಲ್ಲಿ ಸಾವಿನ ಕಾರಣ ನಮೂದಾಗದು
August 7, 2020ಮೈಸೂರು,ಆ.6(ಆರ್‍ಕೆ)- ಕೊರೊನಾ ಸೋಂಕಿ ನಿಂದ ಮೃತಪಟ್ಟರೂ ಮರಣ ಪ್ರಮಾಣ ಪತ್ರ (Death Certificate)ದಲ್ಲಿ ಸಾವಿನ ಕಾರಣ (Cause of Death)ವನ್ನು ನಮೂದಿಸುವುದಿಲ್ಲ. ಕೋವಿಡ್-19 ಸೋಂಕು ದೃಢಪಟ್ಟು ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್, ಹೋಂ ಐಸೋ ಲೇಷನ್ ಅಥವಾ ಫೆಸಿಲಿಟಿ ಕ್ವಾರಂಟೈನ್ ಆದಾಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆ ಅಂತಹವರ ಮರಣ ಪ್ರಮಾಣ ಪತ್ರದಲ್ಲಿ ‘ಕೊರೋನಾ ಸೋಂಕಿ ನಿಂದ ಸಾವು’ ಎಂದು ನಮೂದಿಸಲಾಗುತ್ತದೆ. ಅವರ ಕುಟುಂಬದವರು ಈ ಪ್ರಮಾಣ ಪತ್ರ ಸಲ್ಲಿಸಿ ಸರ್ಕಾರ ದಿಂದ ಪರಿಹಾರದ ಹಣ ಪಡೆಯಬಹುದು…
ಸುಷ್ಮಾ ಸ್ವರಾಜ್ ರಾಜತಾಂತ್ರಿಕತೆಯ ಬಹುದೊಡ್ಡ ಶಕ್ತಿಯಾಗಿದ್ದರು
August 7, 2020`ಉತ್ತಮ ಸ್ನೇಹಿತೆ’ಯನ್ನು ಸ್ಮರಿಸಿದ ಮಾಲ್ಡೀವ್ಸ್ ಸಚಿವ ಅಬ್ದುಲ್ ಶಾಹೀದ್ ನವದೆಹಲಿ, ಆ.6- ಸುಷ್ಮಾ ಸ್ವರಾಜ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜವಾಬ್ದಾರಿ ವಹಿಸಿಕೊಂಡ ಮೇಲೆ ಅದರ ಕಾರ್ಯ ವೈಖ ರಿಯೇ ಬದಲಾಗಿತ್ತು. ಆ ಇಲಾಖೆಗೆ ಮಾನವೀಯತೆಯ ಸ್ಪರ್ಶ ಕೊಟ್ಟವರು ಅವರು. ಜಗತ್ತಿನ ವಿವಿಧ ರಾಷ್ಟ್ರಗಳ ವಿದೇಶಾಂಗ ಸಚಿವರೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದರು. ಕಳೆದ ವರ್ಷ ಸುಷ್ಮಾ ಸ್ವರಾಜ್ ಅವರು ಮೃತಪಟ್ಟಾಗ ಪಾಕಿಸ್ತಾನದ ವಿದೇಶಾಂಗ ಸಚಿವರಿಂದ ಹಿಡಿದು ಹಲವು ರಾಷ್ಟ್ರಗಳ ಪ್ರಮುಖರು, ಭಾರತದಲ್ಲಿರುವ ವಿದೇಶಿ ರಾಯಭಾರಿಗಳು ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು,…
ಕೇಂದ್ರದ ಶಿಕ್ಷಣ ನೀತಿ ವಿರುದ್ಧ ಎಐಡಿಎಸ್‍ಓನಿಂದ ಇಂದು `ಕರ್ನಾಟಕ ಪ್ರತಿರೋಧ ದಿನ’
August 7, 2020ಮೈಸೂರು, ಆ.6(ಪಿಎಂ)- ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವ `ರಾಷ್ಟ್ರೀಯ ಶಿಕ್ಷಣ ನೀತಿ-2020’ ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ ಮತ್ತು ವಿದೇಶಿ ಬಂಡವಾಳಕ್ಕೆ ಅವಕಾಶ ಕಲ್ಪಿಸುವ ಅಂಶ ಒಳಗೊಂಡಿದೆ ಎಂದು ಆರೋಪಿಸಿರುವ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಓ), ನೂತನ ಶಿಕ್ಷಣ ನೀತಿ ಖಂಡಿಸಿ ಆ.7ರಂದು `ಅಖಿಲ ಕರ್ನಾಟಕ ಪ್ರತಿರೋಧ ದಿನ’ ಆಚರಿಸಲಿದೆ. ಮನೆ ಎದುರೇ ಪ್ರತಿಭಟನೆ: ಕೊರೊನಾ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಆ.7ರಂದು ಬೀದಿಗಿಳಿದು ಹೋರಾಟ, ಪ್ರತಿಭಟನೆ ನಡೆಸುವುದನ್ನು ಕೈಬಿಡಲಾಗಿದೆ. ಶಿಕ್ಷಣ ನೀತಿ ಖಂಡಿಸುವ ಫಲಕಗಳನ್ನು ಸಂಘಟನೆ…
ಸರಸ್ವತಿಪುರಂ 6ನೇ ಮುಖ್ಯರಸ್ತೆ ಸಮಸ್ಯೆಗೆ ತಾತ್ಕಾಲಿಕ ಪರಿಹಾರ
August 7, 2020ಮೈಸೂರು, ಆ.6(ಎಂಕೆ)- ನಗರದ ಸರಸ್ವತಿಪುರಂನ 6ನೇ ಮುಖ್ಯರಸ್ತೆಯಲ್ಲಿ ನಿವಾಸಿಗಳ ಮನೆಯ ಮುಂದೆ ಹಾಕ ಲಾಗಿದ್ದ ಮಣ್ಣಿನ ರಾಶಿಯನ್ನು ತೆಗೆದು ಪಾದಚಾರಿಗಳು ತಿರುಗಾಡಲು ಅನುವು ಮಾಡಿಕೊಡಲಾಗಿದೆ. ಈ ರಸ್ತೆಯಲ್ಲಿ ನಡೆಯುತ್ತಿರುವ ಯುಜಿಡಿ ಕಾಮಗಾರಿ ಹಿನ್ನೆಲೆ ಇಡೀ ರಸ್ತೆಯನ್ನು ಅಗೆದು ತಿರುಗಾಡಲು ಸಾಧ್ಯವಾಗದಂತೆ ಮನೆಗಳ ಮುಂದೆಯೇ ಮಣ್ಣು ಹಾಕಲಾಗಿತ್ತು. ಈ ಬಗ್ಗೆ ‘ಮೈಸೂರು ಮಿತ್ರ’ ಪತ್ರಿಕೆ ಯಲ್ಲಿ ಆಗಸ್ಟ್ 4ರಂದು ‘ಯುಜಿಡಿ ಸಮಸ್ಯೆ ನಿವಾರಿಸುವುದಾಗಿ ಹೇಳಿ ಇಡೀ ರಸ್ತೆ ಅಗೆದು ನಿವಾಸಿಗಳಿಗೆ ‘ದಿಗ್ಬಂಧನ’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಬಳಿಕ ಎಚ್ಚೆತ್ತ…










