ಮೈಸೂರು, ಆ.6(ವೈಡಿಎಸ್)- `ಕೊರೊನಾ ಭಯವೇ ಮನುಷ್ಯನನ್ನು ಶೇ.75ರಷ್ಟು ದುರ್ಬಲಗೊಳಿಸುತ್ತದೆ. ಹಾಗಾಗಿ ಧೈರ್ಯವಾಗಿ ಇರಬೇಕು. ಚಹಾ, ಕಾಫಿಗೆ ಬದಲಾಗಿ ದಿನಕ್ಕೆ ಮೂರು ಬಾರಿ ಕಷಾಯ ಕುಡಿಯಬೇಕು’…. ಆರೋಗ್ಯ ಸಮಸ್ಯೆ ಇರುವ 60-65 ವರ್ಷ ಮೇಲ್ಪ ಟ್ಟವರು ಮತ್ತು ಮಕ್ಕಳು ಕೊರೊನಾದಿಂದ ಹೆಚ್ಚು ಎಚ್ಚರ ವಹಿಸಬೇಕು. ಒಣದ್ರಾಕ್ಷಿ, ಖರ್ಜೂರ ಸೇರಿ ದಂತೆ ದೇಹಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಬೇಕು. ಹೆಚ್ಚು ಹಾಲು ಕುಡಿಯಬೇಕು. ಜತೆಗೆ ಅಕ್ಕ-ಪಕ್ಕದ ನಿವಾಸಿಗಳು ಧೈರ್ಯ ತುಂಬಿ ದರೆ ಕೊರೊನಾ ಗೆದ್ದಂತೆ ಎಂದು ಶಕ್ತಿನಗರ…
ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಕೊರೊನಾ ಸೋಂಕಿತರ ಸಾವು ಅಗತ್ಯ ಸೌಲಭ್ಯ ಒದಗಿಸುವಂತೆ ಕೋರಿ ಮುಖ್ಯಮಂತ್ರಿಗಳಿಗೆ ಶಾಸಕ ತನ್ವೀರ್ ಸೇಠ್ ಪತ್ರ
August 7, 2020ಮೈಸೂರು, ಆ.6(ಆರ್‍ಕೆ)-ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿಗಳ ಕೊರತೆ ಯಿಂದಾಗಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ದೊರೆಯದೆ ಕೊರೊನಾ ಸೋಂಕಿತ ರೋಗಿಗಳು ಸಾವನ್ನಪ್ಪುತ್ತಿದ್ದಾರೆ ಎಂದು ಮೈಸೂರಿನ ಎನ್.ಆರ್.ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಆಗಸ್ಟ್ 5ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಕೋವಿಡ್-19 ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಮೈಸೂರಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಸ್ತುತ ಲಭ್ಯವಿರುವ ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿಗಳ ಸಂಖ್ಯೆ ತೀರಾ ಕಡಿಮೆ ಇರುವ ಕಾರಣ ಅವರ ಮೇಲೆ…
ಮಾಜಿ ಡಿಸಿಎಂ ಪರಮೇಶ್ವರ್ ಜನ್ಮದಿನ; ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
August 7, 2020ಮೈಸೂರು, ಆ.6(ಪಿಎಂ)- ಮಾಜಿ ಉಪ ಮುಖ್ಯ ಮಂತ್ರಿ ಜಿ.ಪರಮೇಶ್ವರ್ ಅವರ ಹುಟ್ಟುಹಬ್ಬದಂಗವಾಗಿ ದ್ವಿತೀಯ ಪಿಯುಸಿಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಯಾದ ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ಅಖಿಲ ಕರ್ನಾಟಕ ಡಾ.ಜಿ.ಪರಮೇ ಶ್ವರ್ ಯುವ ಸೈನ್ಯ ವತಿಯಿಂದ ಗುರು ವಾರ ಪ್ರತಿಭಾ ಪುರ ಸ್ಕಾರ ನೀಡಿ ಅಭಿ ನಂದಿಸಲಾಯಿತು. ಮೈಸೂರಿನ ಜೆಎಲ್‍ಬಿ ರಸ್ತೆಯ ಇಂಜಿನಿಯರ್‍ಗಳ ಸಂಸ್ಥೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಜಿಲ್ಲೆಯ 12 ಮಂದಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಂಜನಗೂಡು ತಾಲೂಕಿನ ವಿಜ್ಞಾನ ವಿಭಾಗದ ಯೋಗೀಶ್ (ಶೇ.92.16),…
ಗಣಪತಿಗೆ ಅಭಿಷೇಕ, 101 ಈಡುಗಾಯಿ ಒಡೆದು ಪ್ರಾರ್ಥನೆ
August 7, 2020ಮೈಸೂರು,ಆ.6(ಆರ್‍ಕೆಬಿ)-ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶೀಘ್ರ ಗುಣ ಮುಖರಾಗಲಿ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅಭಿಮಾನಿಗಳು, ಪೌರ ಕಾರ್ಮಿಕರು ಗುರುವಾರ ಮೈಸೂರಿನ ಅಗ್ರ ಹಾರದ ನೂರೊಂದು ಗಣಪತಿಗೆ ವಿಶೇಷ ಅಭಿಷೇಕ ಮಾಡಿಸಿ, 101 ಈಡುಗಾಯಿ ಒಡೆದು ದೇವರಲ್ಲಿ ಪ್ರಾರ್ಥಿಸಿದರು. ಹಿಂದು ಳಿದ ವರ್ಗಗಳ ನಾಯಕರಾಗಿ, ಮುಖ್ಯಮಂತ್ರಿ ಯಾಗಿ ಅನೇಕ ಜನಪರ ಯೋಜನೆಗಳನ್ನು ನೀಡಿದ ಸಿದ್ದರಾಮಯ್ಯ, ಕೋವಿಡ್ ಪಾಸಿಟಿವ್ ನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಶೀಘ್ರ ಹೊರಬರಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭ…
ಬುಧವಾರ ಮೈಸೂರಲ್ಲಿ 261, ರಾಜ್ಯದಲ್ಲಿ 5619 ಮಂದಿಗೆ ಸೋಂಕು
August 6, 2020ಮೈಸೂರು, ಆ.5-ಮೈಸೂರಿನಲ್ಲಿ ಬುಧವಾರ 261 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 11 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಸೋಂಕಿತರ ಸಂಖ್ಯೆ 6,115ಕ್ಕೆ ಏರಿಕೆ ಯಾಗಿದ್ದು, ಈವರೆಗೆ ಒಟ್ಟು 194 ಮಂದಿ ಸೋಂಕಿ ನಿಂದ ಮೃತಪಟ್ಟಂತಾಗಿದೆ. ಇಂದು 112 ಮಂದಿ ಸೇರಿದಂತೆ ಒಟ್ಟು 2342 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 3579 ಸಕ್ರಿಯ ಸೋಂಕಿತರ ಪೈಕಿ 240 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 87 ಮಂದಿ ಕೋವಿಡ್ ಹೆಲ್ತ್ ಕೇರ್‍ನಲ್ಲಿ, 776 ಮಂದಿ ಕೋವಿಡ್ ಕೇರ್ ಸೆಂಟರ್‍ನಲ್ಲಿ, 201 ಮಂದಿ…
ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳ ನೀರಿನ ಮಟ್ಟ ಹೆಚ್ಚಳ
August 6, 2020ಮೈಸೂರು, ಆ.5-ರಾಜ್ಯದಲ್ಲಿ ಧಾರಾಕಾರ ಮಳೆ ಸುರಿಯುತ್ತಿ ರುವ ಪರಿಣಾಮ ನದಿಗಳು ಉಕ್ಕಿ ಹರಿಯುತ್ತಿದ್ದು, ಜಲಾಶಯ ಗಳಲ್ಲಿ ಒಳ ಹರಿವು ಹೆಚ್ಚಾಗಿದೆ. ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆಆರ್‍ಎಸ್ ಜಲಾಶಯಕ್ಕೆ ಬುಧವಾರ 29,855 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಇದರಿಂದಾಗಿ 124.80 ಅಡಿ ಗರಿಷ್ಠ ಸಾಮಥ್ರ್ಯದ ಈ ಜಲಾಶಯದ ಇಂದಿನ ನೀರಿನ ಮಟ್ಟ 108.40 ಅಡಿಗೆ ಏರಿಕೆಯಾಗಿದೆ. ಜಲಾಶಯದಿಂದ 4,715 ಕ್ಯೂಸೆಕ್ಸ್ ನೀರು ಹೊರ ಬಿಡಲಾಗುತ್ತಿದೆ. ಕಬಿನಿ ಜಲಾಶಯಕ್ಕೆ 33,977 ಕ್ಯೂಸೆಕ್ಸ್ ನೀರು ಹರಿದು ಬರು ತ್ತಿದ್ದು, 2284…
ಜನರಿದ್ದಲ್ಲಿಗೇ ತೆರಳಿ ಪರೀಕ್ಷೆ ನಡೆಸುತ್ತಿರುವ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟಿಂಗ್ ತಂಡಗಳು
August 6, 2020ಮೈಸೂರು, ಆ.5(ಪಿಎಂ)- ಕೊರೊನಾ ನಿಗ್ರಹ ಕ್ಕಾಗಿ ಮೈಸೂರು ಜಿಲ್ಲೆಯಲ್ಲಿ ಸಂಚಾರಿ ರ್ಯಾಪಿಡ್ ಆ್ಯಂಟಿ ಜೆನ್ ಟೆಸ್ಟಿಂಗ್(ಆರ್‍ಎಟಿ) ತಂಡಗಳು ಕಾರ್ಯ ನಿರ್ವ ಹಿಸುತ್ತಿದ್ದು, ಹೆಚ್ಚು ಸೋಂಕಿತರು ಪತ್ತೆಯಾಗುತ್ತಿರುವ ಪ್ರದೇಶಗಳಿಗೇ ತೆರಳಿ ಸ್ಥಳದಲ್ಲೇ ಟೆಸ್ಟಿಂಗ್ ನಡೆಸುತ್ತಿವೆ. ಮೈಸೂರು ನಗರದಲ್ಲಿ 8 ಹಾಗೂ ಪ್ರತಿ ತಾಲೂಕಿ ನಲ್ಲಿ ಕನಿಷ್ಠ 10 ತಂಡಗಳಂತೆ ಆರ್‍ಎಟಿ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ರ್ಯಾಪಿಡ್ ಟೆಸ್ಟಿಂಗ್ ಮಾಡಲಾಗುತ್ತಿದೆ. ರೋಗ ಲಕ್ಷಣಗಳಿದ್ದ ಕಾರಣಕ್ಕೆ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್‍ನಲ್ಲಿ ಮೂಗಿನ ದ್ರವದ ಪರೀಕ್ಷೆ ನಡೆಸಿದಾಗ…
ಕೊರೊನಾ ಸಂಕಷ್ಟ: ಸಂಭ್ರಮದ ಜನ್ಮದಿನ ಕೈಬಿಟ್ಟ ಸಂಸದ ಶ್ರೀನಿವಾಸ ಪ್ರಸಾದ್
August 6, 2020ಮೈಸೂರು, ಆ.5(ಪಿಎಂ)- ಇಡೀ ಜಗತ್ತು ಕೊರೊನಾ ಸಂಕಷ್ಟದಲ್ಲಿ ಸಿಲುಕಿ ರುವ ಹಿನ್ನೆಲೆಯಲ್ಲಿ ಸಂಭ್ರಮದ ಜನ್ಮದಿನ ಆಚರಿಸಿಕೊಳ್ಳದೇ ಇರಲು ಸಂಸದ ವಿ. ಶ್ರೀನಿವಾಸ ಪ್ರಸಾದ್ ನಿರ್ಧರಿಸಿದ್ದಾರೆ. ಈ ಸಂಬಂಧ ಸಮಾನತೆ-ಸ್ವಾಭಿಮಾನ-ಸ್ವಾವ ಲಂಬನೆ ಪ್ರತಿಷ್ಠಾನ ಪತ್ರಿಕಾ ಪ್ರಕಟಣೆ ನೀಡಿದೆ. ಪ್ರತಿಷ್ಠಾನದ ಸಂಸ್ಥಾಪಕರು, ಮಹಾ ಪೋಷಕರೂ ಆದ ಸಂಸದ ವಿ.ಶ್ರೀನಿ ವಾಸ ಪ್ರಸಾದ್ ಅವರ ಜನ್ಮದಿನವಾದ ಆ.6ರಂದು ಯಾವುದೇ ರೀತಿಯ ಸಭೆ-ಸಮಾರಂಭ ಇರುವುದಿಲ್ಲ. ಜೊತೆಗೆ ಅಂದು ಅವರು ಯಾರನ್ನೂ ಭೇಟಿ ಮಾಡುವುದಿಲ್ಲ. ಇದನ್ನು ಸಂಸದರೇ ಸ್ಪಷ್ಟಪಡಿಸಿದ್ದಾರೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಡಾ….
ಉಸಿರಾಟ ತೊಂದರೆವುಳ್ಳ ಕೊರೊನಾ ಸೋಂಕಿತರಿಗೆ ಉಚಿತ ಆಕ್ಸಿಜನ್
August 6, 2020ಮೈಸೂರು,ಆ.5(ಆರ್‍ಕೆ)-ತೀವ್ರ ಉಸಿರಾಟದ ತೊಂದರೆ ಯಿಂದ ಬಳಲುತ್ತಿರುವ ಕೊರೊನಾ ಸೋಂಕಿತರಿಗೆ ಉಚಿತ ವಾಗಿ ಆಕ್ಸಿಜನ್ ಸಿಲಿಂಡರ್ ಪೂರೈಸಲು ಯುನೈಟೆಡ್ ವಿಷನ್ ವೆಲ್‍ಫೇರ್ ಅಂಡ್ ಚಾರಿಟಬಲ್ ಟ್ರಸ್ಟ್ ಮುಂದೆ ಬಂದಿದೆ. ಮೈಸೂರಿನ ಸುಭಾಷ್‍ನಗರದಲ್ಲಿರುವ ಮೆಸ್ಕೋ ಕೈಗಾ ರಿಕಾ ತರಬೇತಿ ಕೇಂದ್ರದ ಆವರಣದಲ್ಲಿ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಸರಳ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಿಸ್ಟ್ರಿಕ್ಟ್ ವೆಕ್ಟರ್ ಬಾಂಡ್ ಡಿಸೀಸ್ ಕಂಟ್ರೋಲ್ ಆಫೀಸರ್(ಡಿವಿಬಿಸಿಓ) ಡಾ.ಚಿದಂಬರ ಅವರು ಗಿಡಕ್ಕೆ ನೀರೆರೆಯುವ ಮೂಲಕ ಉಚಿತವಾಗಿ ಆಕ್ಸಿಜನ್ ಪೂರೈಸುವ ಸೇವೆಗೆ ಬುಧವಾರ ಬೆಳಿಗ್ಗೆ…
ಮೈಸೂರಲ್ಲಿ ಸರಳ ಸ್ವಾತಂತ್ರ್ಯ ದಿನಾಚರಣೆ
August 6, 2020ಮೈಸೂರು, ಆ.5(ಪಿಎಂ)- ಕೊರೊನಾ ತೀವ್ರವಾಗಿ ವ್ಯಾಪಿಸು ತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಸ್ವಾತಂತ್ರ್ಯ ದಿನೋತ್ಸವವನ್ನು ಕೇಂದ್ರ ಗೃಹ ಮಂತ್ರಾಲಯದ ಮಾರ್ಗಸೂಚಿಯಂತೆ ಸರಳವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಎಸ್. ಮಂಜುನಾಥಸ್ವಾಮಿ ತಿಳಿಸಿದರು. ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಬಂಧ ಬುಧವಾರ ಹಮ್ಮಿಕೊಂಡಿದ್ದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಬಾರಿಯಂತೆ ಮೈಸೂರು ನಗರದ ಬನ್ನಿಮಂಟಪ ಪಂಜಿನ ಕವಾಯತು ಮೈದಾನ ದಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಗುವುದು. ಆದರೆ ಹೆಚ್ಚು ಜನ ಸಂದಣಿಗೆ ಅವಕಾಶ ನೀಡದೇ,…










