ಮೈಸೂರು

ಕೊರೊನಾ ವಿಚಾರದಲ್ಲಿ ಎಚ್ಚರ ವಹಿಸಲು ಜನತೆಗೆ ಮಾಜಿ ಪ್ರಧಾನಿ ದೇವೇಗೌಡರ ಮನವಿ
ಮೈಸೂರು

ಕೊರೊನಾ ವಿಚಾರದಲ್ಲಿ ಎಚ್ಚರ ವಹಿಸಲು ಜನತೆಗೆ ಮಾಜಿ ಪ್ರಧಾನಿ ದೇವೇಗೌಡರ ಮನವಿ

August 5, 2020

ಬೆಂಗಳೂರು, ಆ.4 (ಕೆಎಂಶಿ)-ಮಹಾಮಾರಿ ಕೊರೊನಾ ವೈರಸ್ ಭೀಕರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ರಾಜ್ಯದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮನೆಯಿಂದ ಹೊರಬರಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಆಗಾಗ ಕೈಯ್ಯನ್ನು ಸ್ಯಾನಿಟೈಸರ್‍ನಿಂದ ಸ್ವಚ್ಛಗೊಳಿಸಿ, ಹೊರಗಡೆ ಯಿಂದ ಮನೆಗೆ ಬಂದ ತಕ್ಷಣ ಕೈ ಮತ್ತು ಕಾಲುಗಳನ್ನು ಸಾಬೂನಿನಿಂದ ಸ್ವಚ್ಛಗೊಳಿಸಿ, ಕೆಲಸವಿಲ್ಲದ ಸಮಯದಲ್ಲಿ ಆದಷ್ಟು ಮನೆಯಲ್ಲೇ ಇರಲು ಆದ್ಯತೆ ಕೊಡಿ ಎಂದರು. ಮಾರುಕಟ್ಟೆಗಳಲ್ಲಿ, ಬ್ಯಾಂಕ್‍ಗಳಲ್ಲಿ ಹಾಗೂ ಇನ್ನಿತರ ಜನ ದಟ್ಟಣೆ…

ಮೈಸೂರು ಪತ್ರಕರ್ತರ ಭವನ ಸ್ಯಾನಿಟೈಸ್, 3 ದಿನ ಬಂದ್
ಮೈಸೂರು

ಮೈಸೂರು ಪತ್ರಕರ್ತರ ಭವನ ಸ್ಯಾನಿಟೈಸ್, 3 ದಿನ ಬಂದ್

August 5, 2020

ಮೈಸೂರು, ಆ.4(ಆರ್‍ಕೆಬಿ)- ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರು ಸಂವಾದ ನಡೆಸಿದ್ದ ಮೈಸೂರಿನ ತ್ಯಾಗ ರಾಜ ರಸ್ತೆ ಕ್ರಾಸ್‍ನಲ್ಲಿರುವ ಮೈಸೂರು ಪತ್ರಕರ್ತರ ಭವನವನ್ನು 3 ದಿನ ಬಂದ್ ಮಾಡಲಾಗಿದೆ. ಅಲ್ಲದೇ, ಇಡೀ ಕಟ್ಟಡ ವನ್ನು ಸ್ಯಾನಿಟೈಸ್ ಮಾಡಲಾಗಿದೆ. ಜು.31ರಂದು ಪತ್ರಕರ್ತರ ಸಂಘದಿಂದ ಸಿದ್ದರಾಮಯ್ಯ ಅವರ ಸಂವಾದ ಏರ್ಪ ಡಿಸಲಾಗಿತ್ತು. ಸೋಮವಾರ ರಾತ್ರಿ ಸಿದ್ದ ರಾಮಯ್ಯ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ವರದಿ ಬರುತ್ತಿ ದ್ದಂತೆಯೇ ಪತ್ರಕರ್ತರ ಸಂಘದ ಕಚೇರಿ ಯನ್ನು…

ಶಿರಾ ಜೆಡಿಎಸ್ ಶಾಸಕ ಬಿ.ಸತ್ಯನಾರಾಯಣ ನಿಧನ
ಮೈಸೂರು

ಶಿರಾ ಜೆಡಿಎಸ್ ಶಾಸಕ ಬಿ.ಸತ್ಯನಾರಾಯಣ ನಿಧನ

August 5, 2020

ಬೆಂಗಳೂರು, ಆ.4- ತುಮಕೂರು ಜಿಲ್ಲೆ, ಶಿರಾ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಸತ್ಯನಾರಾಯಣ ಅವರು ಮಂಗಳವಾರ ರಾತ್ರಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇನ್ನೇನು ಯಕೃತ್ ಕಸಿ ಶಸ್ತ್ರಚಿಕಿತ್ಸೆ ನಡೆಸಲು ಸಿದ್ಧತೆ ನಡೆಸಿದ್ದಾಗಲೇ ಅವರು ನಿಧನರಾಗಿದ್ದಾರೆ. ಅವರಿಗೆ ನ್ಯುಮೋನಿಯಾ ಸಹ ಬಾಧಿಸುತ್ತಿತ್ತು ಎಂದು ಹೇಳಲಾಗಿದೆ. ಶಿರಾದಿಂದ ನಾಲ್ಕು ಬಾರಿ ಜೆಡಿಎಸ್ ಶಾಸಕರಾಗಿ ಸತ್ಯನಾರಾಯಣ ಆಯ್ಕೆಯಾಗಿದ್ದರು. ಎರಡು ಬಾರಿ ಸಚಿವರಾಗಿಯೂ ಕಾರ್ಯ…

ಲಾಕ್‍ಡೌನ್ ಅವಧಿ ವೇತನ ಪಾವತಿ, ಸೇವಾ ಭದ್ರತೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ಪ್ರತಿಭಟನೆ
ಮೈಸೂರು

ಲಾಕ್‍ಡೌನ್ ಅವಧಿ ವೇತನ ಪಾವತಿ, ಸೇವಾ ಭದ್ರತೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ಪ್ರತಿಭಟನೆ

August 5, 2020

ಮೈಸೂರು,ಆ.4(ಪಿಎಂ)-ಲಾಕ್‍ಡೌನ್ ಅವಧಿಯ ಗೌರವಧನ ಪಾವತಿ ಮಾಡಬೇಕೆಂಬುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯ ಜಿಲ್ಲಾ ಸಮಿತಿ ಆಶ್ರಯದಲ್ಲಿ ಅತಿಥಿ ಉಪ ನ್ಯಾಸಕರು ಮಂಗಳವಾರ ಪ್ರತಿಭಟನೆ ನಡೆಸಿದರು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾ ಯಿಸಿದ ಪ್ರತಿಭಟನಾಕಾರರು, ರಾಜ್ಯದ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,564 ಅತಿಥಿ ಉಪ ನ್ಯಾಸಕರು ಸೇವೆ ಸಲ್ಲಿಸುತ್ತಿದ್ದೇವೆ. ಲಾಕ್‍ಡೌನ್ ಅವ ಧಿಯ ವೇತನವಿಲ್ಲದೆ ಹಾಗೂ ಉದ್ಯೋಗವೂ ಇಲ್ಲದೇ ತೀವ್ರ ಸಂಕಷ್ಟಕ್ಕೆ…

ಜೆಎಸ್‍ಎಸ್ ಕಾಲೇಜಿಗೆ ಕ್ಯೂಎಸ್‍ಐ-ಗೇಜ್‍ನಿಂದ ಸುವರ್ಣ ಶ್ರೇಣಿ ಚಿನ್ನದ ಸ್ಥಾನ
ಮೈಸೂರು

ಜೆಎಸ್‍ಎಸ್ ಕಾಲೇಜಿಗೆ ಕ್ಯೂಎಸ್‍ಐ-ಗೇಜ್‍ನಿಂದ ಸುವರ್ಣ ಶ್ರೇಣಿ ಚಿನ್ನದ ಸ್ಥಾನ

August 5, 2020

ಮೈಸೂರು, ಆ. 4- ಮೈಸೂರಿನ ಊಟಿ ರಸ್ತೆಯಲ್ಲಿ ರುವ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿಗೆ ಕ್ಯೂಎಸ್‍ಐ-ಗೇಜ್ ಸಂಸ್ಥೆಯು ಸುವರ್ಣ ಶ್ರೇಣಿಯ ಸ್ಥಾನಮಾನವನ್ನು ನೀಡಿದೆ. 1964ರಲ್ಲಿ ಸ್ಥಾಪನೆಗೊಂಡಿರುವ ಈ ಕಾಲೇಜು ಈಗ 50 ವರ್ಷಗಳನ್ನು ಪೂರೈಸಿದ್ದು, ಸುವರ್ಣ ಮಹೋತ್ಸವವನ್ನು ಆಚ ರಿಸಿದೆ. ಕಾಲೇಜು ನ್ಯಾಕ್ ‘ಎ’ ದರ್ಜೆ ಮಾನ್ಯತೆ, ಸ್ವಾಯತ್ತ ಸ್ಥಾನ ಮತ್ತು ಅಂತಸ್ಸಮರ್ಥ ಉತ್ಕøಷ್ಟತಾ ಕಾಲೇಜು -ಈ ಮೂರು ಸ್ಥಾನಮಾನಗಳನ್ನು ಪಡೆದಿದೆ. ಯುಜಿಸಿಯಿಂದ ಕೌಶಲ್ ಕೇಂದ್ರ, ಕರ್ನಾಟಕ ಸರ್ಕಾರದಿಂದ ಬೈಸೆಪ್ ಮತ್ತು ಕೌಶಲ್ಯ ಕರ್ನಾಟಕ…

ಬಿಎಸ್‍ವೈ, ಸಿದ್ದರಾಮಯ್ಯ ಶೀಘ್ರ ಗುಣಮುಖರಾಗಲೆಂದು ವಿಶೇಷ ಪೂಜೆ
ಮೈಸೂರು

ಬಿಎಸ್‍ವೈ, ಸಿದ್ದರಾಮಯ್ಯ ಶೀಘ್ರ ಗುಣಮುಖರಾಗಲೆಂದು ವಿಶೇಷ ಪೂಜೆ

August 5, 2020

ಮೈಸೂರು, ಆ.4-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಇಬ್ಬರು ಬೇಗ ಗುಣಮುಖ ರಾಗಲಿ ಎಂದು ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ನಂಜುಮಳಿಗೆ ವೃತ್ತದಲ್ಲಿರುವ ಮಹದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿ ಹಾಗೂ ಕೃಷ್ಣರಾಜ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜು (ಬಸಪ್ಪ), ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಸಿದ್ದರಾಮಯ್ಯನವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಶೀಘ್ರ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಈ ಕೊರೊನಾ ಬೇಗ ತೊಲಗಲಿ,…

ರಾಮಮಂದಿರ ಶಿಲಾನ್ಯಾಸವನ್ನು ಹಬ್ಬದಂತೆ ಆಚರಿಸಿ
ಮೈಸೂರು

ರಾಮಮಂದಿರ ಶಿಲಾನ್ಯಾಸವನ್ನು ಹಬ್ಬದಂತೆ ಆಚರಿಸಿ

August 5, 2020

ಮೈಸೂರು, ಆ.4- ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಉದ್ಘಾಟನೆ ಬುಧವಾರ (ಆ.5) ನಡೆಯಲಿದ್ದು, ಅಂದು ಪ್ರತಿಯೊಬ್ಬರ ಮನೆ, ಮನಸ್ಸು ಗಳಲ್ಲಿ ಶ್ರೀರಾಮ ಮತ್ತು ಹನುಮರ ಭಕ್ತಿ ಮಾರ್ಧನಿಸಲಿ ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ತಿಳಿಸಿದರು. ಅಪೂರ್ವ ಸ್ನೇಹ ಬಳಗದ ವತಿಯಿಂದ ಚಾಮುಂಡಿಪುರಂ ಸುತ್ತಮುತ್ತಲಿನ ಮನೆ ಮನೆಗೂ ಶ್ರೀರಾಮನ ಭಾವಚಿತ್ರ ಹಾಗೂ ಹಣತೆ ವಿತರಿಸುವ ಮೂಲಕ ಮನೆ ಯಲ್ಲೇ ರಾಮ ಜಪ ಮಾಡುವಂತೆ ಮನವಿ ಮಾಡಿದರು. ‘ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮ…

ಇಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ: ಪ್ರತಿ ಮನೆಯಲ್ಲಿ ದೀಪ ಬೆಳಗಿಸಿ ಕುಟುಂಬ ಸಮೇತ ಸಿಹಿ ತಿಂದು ಸಂಭ್ರಮಿಸಿ; ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ
ಮೈಸೂರು

ಇಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ: ಪ್ರತಿ ಮನೆಯಲ್ಲಿ ದೀಪ ಬೆಳಗಿಸಿ ಕುಟುಂಬ ಸಮೇತ ಸಿಹಿ ತಿಂದು ಸಂಭ್ರಮಿಸಿ; ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ

August 5, 2020

ಮೈಸೂರು, ಆ.4(ಪಿಎಂ)- ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕೋಟ್ಯಾಂ ತರ ಜನತೆಯ ಅಭಿಮಾನದ ಸಂಕೇತ. ಇದರ ಶಿಲಾನ್ಯಾಸದ ದಿನವಾದ ಆ.5ರಂದು ಪ್ರತಿ ಮನೆಯಲ್ಲಿ ದೀಪ ಬೆಳಗಿಸಿ, ಕುಟುಂಬ ಸಮೇತ ಸಿಹಿ ತಿನ್ನುವಂತೆ ಬಿಜೆಪಿ ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ ಕೋರಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮನೆಯ ಅಕ್ಕಪಕ್ಕದವರನ್ನು ಸೇರಿಸಿ ಸಾಮಾಜಿಕ ಅಂತರ ಕಾಯ್ದು ಕೊಂಡು ರಾಮಜಪ ಮಾಡು ವುದು, ದೀಪ ಬೆಳಗಿಸಿ ಸಿಹಿ ಹಂಚಿ ಸಂಭ್ರಮಿಸು ವುದು, ಬೆಳಿಗ್ಗೆ 8ರಿಂದ 12ರವರೆಗೆ ಕುಟುಂಬ ಸದಸ್ಯರು ಕಾರ್ಯಕ್ರಮವನ್ನು…

ಕೋವಿಡ್ ಲಸಿಕೆಯ ಕ್ಲಿನಿಕಲ್ ಟ್ರಯಲ್ಸ್‍ಗೆ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಪ್ರಯೋಗಾಲಯ ಆಯ್ಕೆ ಸಂಭವ
ಮೈಸೂರು

ಕೋವಿಡ್ ಲಸಿಕೆಯ ಕ್ಲಿನಿಕಲ್ ಟ್ರಯಲ್ಸ್‍ಗೆ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಪ್ರಯೋಗಾಲಯ ಆಯ್ಕೆ ಸಂಭವ

August 4, 2020

ಮೈಸೂರು, ಆ. 3(ಆರ್‍ಕೆ)-ಕೋವಿಡ್ ಲಸಿಕೆಯ ಕ್ಲಿನಿಕಲ್ ಟ್ರಯಲ್ಸ್‍ಗೆ ಮಾಡಲು ಮೈಸೂರಿನ ಜೆಎಸ್‍ಎಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯನ್ನು ದಿ ಇಂಡಿ ಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ (Iಅಒಖ) ಸಂಸ್ಥೆಯು ಸಂಭವನೀಯ ಪಟ್ಟಿಯಲ್ಲಿ ಸೇರಿಸಿದೆ. ಕೊರೊನಾ ವೈರಸ್ ಬರದಂತೆ ತಡೆಗಟ್ಟಲು ಮುಂಜಾ ಗ್ರತೆಯಾಗಿ ನೀಡುವ ಲಸಿಕೆಯ ಟ್ರಯಲ್ಸ್ ನಡೆಸುವ ಪ್ರಯೋಗಕ್ಕೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯ ಹೊಂದಿರುವ ದೇಶದ ಹಲವು ಪ್ರಸಿದ್ಧ ಮೆಡಿಕಲ್ ಕಾಲೇಜುಗಳು ಮತ್ತು ಆಸ್ಪತ್ರೆಗಳ ಸಂಭವನೀಯ ಪಟ್ಟಿಯಲ್ಲಿ ಕೋವಿಡ್ ಟೆಸ್ಟಿಂಗ್‍ಗೆ ಆಧುನಿಕ ತಂತ್ರ ಜ್ಞಾನದ…

ಖ್ಯಾತ ಮಕ್ಕಳ ತಜ್ಞೆ ಡಾ.ಇಂದ್ರ ಆಮ್ಲ ನಿಧನ
ಮೈಸೂರು

ಖ್ಯಾತ ಮಕ್ಕಳ ತಜ್ಞೆ ಡಾ.ಇಂದ್ರ ಆಮ್ಲ ನಿಧನ

August 4, 2020

ಮೈಸೂರು, ಆ. 3 – ಮೈಸೂರಿನ ಖ್ಯಾತ ಮಕ್ಕಳ ತಜ್ಞರು ಹಾಗೂ ಕೇಂದ್ರ ಆಹಾರ ತಂತ್ರಜ್ಞಾನ ಮತ್ತು ಸಂಶೋ ಧನಾ ಸಂಸ್ಥೆ ನಿವೃತ್ತ ನಿರ್ದೇಶಕರಾದ ಡಾ. ಬಿ.ಎಲ್.ಆಮ್ಲ ಅವರ ಪತ್ನಿ ಇಂದ್ರ ಆಮ್ಲಾ ಅವರು ಆಗಸ್ಟ್ 1ರಂದು ಮೈಸೂರಿನ ಗೋಕುಲಂನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಮೃತರು ಮೂವರು ಪುತ್ರಿಯರು- ಅನಿತಾ, ನೀನಾ ಮತ್ತು ವನ್ಯ, ಮೊಮ್ಮಕ್ಕಳು, ಅಪಾರ ಬಂಧು ಬಳಗ ಮತ್ತು ಮಿತ್ರ ರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಶನಿವಾರ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ….

1 472 473 474 475 476 1,611
Translate »