ಮೈಸೂರು, ಆ.3(ಆರ್‍ಕೆ)- ಭಾನುವಾರದ ಲಾಕ್‍ಡೌನ್, ರಾತ್ರಿ ಕಫ್ರ್ಯೂ ಜಾರಿಯಲ್ಲಿದ್ದ ಕಾರಣ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳ ಎಲ್ಲಾ ವಾಣಿಜ್ಯ ಮಳಿಗೆಗಳ ಜುಲೈ ಮಾಹೆಯ ಪರ ವಾನಗಿ ಶುಲ್ಕ (ಬಾಡಿಗೆ) ಪಾವತಿಯಿಂದ ಸಂಪೂರ್ಣ ವಿನಾ ಯಿತಿ ನೀಡಲಾಗಿದೆ. ಈ ಕುರಿತು ರಾಜ್ಯದ ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಪತ್ರ ಬರೆದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‍ಆರ್‍ಟಿಸಿ)ದ ಕೇಂದ್ರ ಕಚೇರಿ ಮುಖ್ಯ ಸಂಚಾರ ವ್ಯವಸ್ಥಾಪಕರು, ಭಾನುವಾರಗಳಂದು ಸಂಪೂರ್ಣ ಲಾಕ್‍ಡೌನ್, ಉಳಿದ ದಿನಗಳಂದು ರಾತ್ರಿ ಕಫ್ರ್ಯೂ ವಿಧಿಸಿದ್ದ ಕಾರಣ ಸಾರಿಗೆ ಕಾರ್ಯಾಚರಣೆ…
ಇಂದಿರಾ ಕ್ಯಾಂಟಿನ್‍ಗಳಿಂದ ಮೈಸೂರು ನಗರ ಪಾಲಿಕೆಗೆ ಲಕ್ಷಾಂತರ ರೂ. ನಷ್ಟ
August 4, 2020ಮೈಸೂರು, ಆ.3(ಎಸ್‍ಬಿಡಿ)- `ಇಂದಿರಾ ಕ್ಯಾಂಟಿನ್’ ಮೇಲ್ವಿಚಾರಣೆ ಕೊರತೆಯಿಂದ ಮೈಸೂರು ನಗರ ಪಾಲಿಕೆಗೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ ಎಂದು ಬಿಜೆಪಿ ಸದಸ್ಯರು ಸೋಮ ವಾರ ಕೌನ್ಸಿಲ್ ಸಭೆಯಲ್ಲಿ ದೂರಿದರು. ಬಿಜೆಪಿ ಹಿರಿಯ ಸದಸ್ಯೆ ಸುನಂದಾ ಪಾಲ ನೇತ್ರ, ಇಂದಿರಾ ಕ್ಯಾಂಟಿನ್‍ಗಳ ಸಂಖ್ಯೆ, ನಿರ್ವ ಹಣೆ, ಮೇಲ್ವಿಚಾರಣೆ ಕುರಿತಂತೆ ಕೇಳಿದ್ದ ಪ್ರಶ್ನೆಗಳಿಗೆ ಸಭೆಯಲ್ಲಿ ಸ್ಪಷ್ಟನೆ ನೀಡುವಾಗ ಈ ಸಂಬಂಧ ಸುದೀರ್ಘ ಚರ್ಚೆಯಾಯಿತು. ಮೈಸೂರು ನಗರದಲ್ಲಿ 11 ಇಂದಿರಾ ಕ್ಯಾಂಟಿನ್ ಗಳಿದ್ದು, 40-50 ಲಕ್ಷ ರೂ. ಅನುದಾನವನ್ನು ನೀಡಲಾಗಿದೆ. ಕ್ಯಾಂಟಿನ್‍ಗಳ ಬಳಿ…
ಆ.31ರವರೆಗೆ ಶಾಲಾ ಕಾಲೇಜು ಬಂದ್‍ಗೆ ಸೂಚನೆ
August 4, 2020ಮೈಸೂರು,ಆ.3(ಎಸ್‍ಪಿಎನ್)-ರಾಜ್ಯದಲ್ಲಿ ಕೊರೊನಾ ಸೋಂಕು ದಿನೇದಿನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಶಾಲಾ-ಕಾಲೇಜುಗಳನ್ನು ಆ.31ರವರೆಗೆ ಮುಚ್ಚು ವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸೋಮ ವಾರ ಅಧಿಕೃತ ಸುತ್ತೋಲೆ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಕೋವಿಡ್-19ರ ಮಾರ್ಗಸೂಚಿ ಯಂತೆ ರಾಜ್ಯದ ಎಲ್ಲಾ ಶಾಲಾ-ಕಾಲೇಜು ಮತ್ತು ತರಬೇತಿ ಸಂಸ್ಥೆಗಳನ್ನು ಆಗಸ್ಟ್ 31ರವರೆಗೆ ಮುಚ್ಚುವಂತೆ ಸೂಚಿಸಿ ರುವ ಹಿನ್ನೆಲೆಯಲ್ಲಿ ಈ ಆದೇಶ ಜಾರಿ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಕೊರೊನಾ ಸೋಂಕಿನ ನಡುವೆಯೂ ಮೈಸೂರು ಜಿಲ್ಲೆಯ ಆಯಾಯ ಬಿಇಓ ಕಚೇರಿ ವ್ಯಾಪ್ತಿಯಲ್ಲಿ 1ರಿಂದ 10ನೇ…
ಇತ್ತೀಚಿನ ಚುನಾವಣಾ ನೀತಿ ಅಸಹನೆ ಮೂಡಿಸಿದೆ
August 4, 2020ಮೈಸೂರು, ಆ.3(ಆರ್‍ಕೆಬಿ)- ಇತ್ತೀಚಿನ ಚುನಾವಣೆಗಳು ಜಾತಿ ಲೆಕ್ಕಾಚಾರದಲ್ಲಿಯೇ ನಡೆಯುತ್ತಿವೆ. ಜಾತಿ ಇಲ್ಲದೇ ಚುನಾ ವಣೆಯೇ ಇಲ್ಲವೇನೋ ಎಂಬಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಒಡನಾಡಿ ಹೆಚ್.ಎಂ. ಮರಿಶೆಟ್ಟಿ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಸೋಮವಾರ ಮೈಸೂರು ಜಿಲ್ಲಾ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಕಾಂಗ್ರೆಸ್ ಮುಂಚೂಣಿ ಘಟಕಗಳ ಅಧ್ಯಕ್ಷರು ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆಯನ್ನು ಉದ್ಘಾಟಿಸಿ, ಅವರು ಮಾತನಾಡಿದರು. 60ರ ದಶಕದಲ್ಲಿನ ತಮ್ಮ ಕಾಂಗ್ರೆಸ್ ಸೇವೆಯನ್ನು ಸ್ಮರಿಸಿದ ಅವರು ಇತ್ತೀಚಿನ…
ಮೈಸೂರಲ್ಲಿ ಸಂಭ್ರಮ ಕಾಣದ `ರಕ್ಷಾ ಬಂಧನ’
August 4, 2020ಮೈಸೂರು, ಆ.3(ಆರ್‍ಕೆಬಿ)- ಶ್ರಾವಣ ಮಾಸದ ಹುಣ್ಣಿಮೆಯಂದು ಬರುವ ಅಣ್ಣ- ತಂಗಿಯರ ಸಂಬಂಧ ಗಟ್ಟಿಗೊಳಿಸುವ ರಕ್ಷಾಬಂಧನ (ರಾಖಿ ಹಬ್ಬ) ಸಂಭ್ರಮ ಇಂದು ಮೈಸೂರಿನಲ್ಲಿ ಕಂಡು ಬರಲಿಲ್ಲ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ರಾಖಿ ಕಟ್ಟಲು ಯುವತಿ ಯರು, ಮಹಿಳೆಯರು ಮುಂದಾಗಲಿಲ್ಲ. ಅಲ್ಲೊಂದು, ಇಲ್ಲೊಂದು ರಾಖಿ ಕಟ್ಟಿದ್ದು ಬಿಟ್ಟರೆ ಇಂದು ರಕ್ಷಾ ಬಂಧನದ ಸಡಗರ ಹಿಂದಿನ ವರ್ಷಗಳಂತೆ ಕಂಡು ಬರಲಿಲ್ಲ. ಪ್ರತೀ ವರ್ಷ ರಕ್ಷಾ ಬಂಧನ ವೇಳೆ ಯುವತಿಯರು, ಮಹಿಳೆಯರು ತಮ್ಮ ಒಡಹುಟ್ಟಿದ ಸಹೋದರನಿಗೆ, ಸಹೋದರ ಸಮಾನ ಯುವಕರಿಗೆ ರಾಖಿ ಕಟ್ಟುವುದು…
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಹಿಂಪಡೆಯಲು ಆಗ್ರಹಿಸಿ ರೈತರಿಂದ ಫಲಕ, ಅಂಚೆ ಚಳುವಳಿ
August 4, 2020ಮೈಸೂರು, ಆ.3(ಪಿಎಂ)- ಸುಗ್ರೀವಾಜ್ಞೆ ಮೂಲಕ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ಹಿಂಪಡೆಯಲು ಆಗ್ರಹಿಸಿ ರೈತರು ಸೋಮವಾರ ಮೈಸೂರಲ್ಲಿ ಫಲಕ ಹಾಗೂ ಅಂಚೆ ಚಳುವಳಿ ನಡೆಸಿದರು. ಸದರಿ ಕಾಯ್ದೆ ತಿದ್ದುಪಡಿ ಹಿಂಪಡೆಯಲು ಆಗ್ರಹಿಸಿ ಚಳುವಳಿ ನಡೆಸಲು ವಿವಿಧ ಜನ ಪರ ಹಾಗೂ ರೈತ ಸಂಘಟನೆಗಳ ಆಶ್ರಯ ದಲ್ಲಿ ಅಸ್ತಿತ್ವಕ್ಕೆ ತಂದಿರುವ `ನಮ್ಮೂರ ಭೂಮಿ ನಮಗಿರಲಿ, ಅನ್ಯರಿಗಲ್ಲ’ ವೇದಿಕೆ ವತಿ ಯಿಂದ ಫಲಕ ಚಳುವಳಿ ನಡೆಸಲಾಯಿತು. ಆ ಮೂಲಕ ರಾಜ್ಯಾದ್ಯಂತ ಗ್ರಾಮಗಳ ಮುಖ್ಯ ದ್ವಾರದಲ್ಲಿ…
ಕೊರೊನಾದಿಂದ ಸಾವಿಗೀಡಾದ ಪಡಿತರ ವಿತರಕರ ಕುಟುಂಬಕ್ಕೆ ಪರಿಹಾರ ನೀಡಿ, ಕಮಿಷನ್ ಹೆಚ್ಚಿಸಿ
August 4, 2020ಮೈಸೂರು,ಆ.3(ಆರ್‍ಕೆಬಿ)-ಸರ್ಕಾರಿ ಪಡಿತರ ವಿತರಕರಿಗೆ ಸರ್ಕಾರವು ಕಮಿಷನ್ ಹೆಚ್ಚಳ ಮಾಡಿ ಕೊರೊನಾ ವೈರಸ್ ನಿಂದ ನಿಧನರಾದವರಿಗೆ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಇಂದಿಲ್ಲಿ ಸರ್ಕಾರವನ್ನು ಆಗ್ರಹಿಸಿದರು. ರಾಜ್ಯದಲ್ಲಿ 20 ಸಾವಿರಕ್ಕೂ ಹೆಚ್ಚು ಪಡಿತರ ವಿತರಕ ರಿದ್ದು, 4,45,00,000 ಕಾರ್ಡುದಾರರಿಗೆ ಪಡಿತರ ಅಂಗಡಿ ಮಾಲೀಕರು ಜೀವದ ಹಂಗು ತೊರೆದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳಡಿ ಆಹಾರ ಪದಾರ್ಥ ಗಳನ್ನು ವಿತರಿಸುತ್ತಿದ್ದೇವೆ. ಈಗಾಗಲೇ ರಾಜ್ಯದಲ್ಲಿ ಸುಮಾರು 6 ಮಂದಿ ಪಡಿತರ ಅಂಗಡಿ…
ಬಿಎಸ್‍ವೈ, ಅಮಿತ್ ಶಾ ಶೀಘ್ರ ಗುಣಮುಖರಾಗಲೆಂದು ವಿಶೇಷ ಪೂಜೆ
August 4, 2020ಮೈಸೂರು, ಆ. 3- ಮೈಸೂರಿನ ಅಗ್ರ ಹಾರದಲ್ಲಿರುವ ನೂರೊಂದು ಗಣಪತಿ ದೇವಸ್ಥಾನದಲ್ಲಿ ಬಿ.ಎಸ್.ಯಡಿಯೂರಪ್ಪ ಅಭಿಮಾನಿ ಬಳಗದ ವತಿಯಿಂದ ಮುಖ್ಯ ಮಂತ್ರಿ ಯಡಿಯೂರಪ್ಪ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ರಾಜ್ಯದಲ್ಲಿರುವ ಕೊರೊನಾ ಸೋಂಕಿತರು ಗುಣಮುಖರಾಗಲೆಂದು ವಿಘ್ನ ನಿವಾರಕ ವಿಘ್ನೇಶ್ವರನಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು. ಇದೇ ವೇಳೆ ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಚ್.ಜಿ ಗಿರಿಧರ್ ಮಾತನಾಡಿ, ಜನಸೇವೆಯೇ ಜನಾರ್ಧನ ಸೇವೆ ಎಂದು ಸೇವೆ ಮಾಡುತ್ತಿರುವ ಮುಖ್ಯ ಮಂತ್ರಿ ಯಡಿಯೂರಪ್ಪ, ರಾಷ್ಟ್ರದ ರಕ್ಷಣೆ…
ಬಿಎಸ್‍ವೈ, ಅಮಿತ್ ಶಾಗೆ ಕೊರೊನಾ
August 3, 2020ನವದೆಹಲಿ/ಬೆಂಗಳೂರು, ಆ.2- ಇಡೀ ವಿಶ್ವವನ್ನು ಬೆಂಬಿಡದೆ ಕಾಡುತ್ತಿರುವ ಕೊರೊನಾ ವೈರಸ್ ಭಾರತ ದಲ್ಲಿಯೂ ಆರ್ಭಟ ಮುಂದುವರೆಸಿದೆ. ಉತ್ತರ ಪ್ರದೇಶದ ಪ್ರಭಾವಿ ಸಚಿವೆ ಕಮಲರಾಣಿ ವರುಣ್ ಭಾನು ವಾರ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದೇ ವೇಳೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ತಮಿಳು ನಾಡು ರಾಜ್ಯಪಾಲ ಭನ್ವಾರಿಲಾಲ್ ಪುರೋಹಿತ್ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದ್ದು, ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಮಗೆ ಸೋಂಕು ತಗುಲಿರುವುದನ್ನು ಸಾಮಾಜಿಕ ಜಾಲತಾಣದ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಖಚಿತಪಡಿಸಿದ್ದಾರೆ. `ನನ್ನ…
ಅಯೋಧ್ಯೆ ಭೂಮಿಪೂಜೆ: ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್.ಕೆ.ಅಡ್ವಾಣಿ, ಎಂಎಂ ಜೋಶಿ ಭಾಗಿ
August 3, 2020ನವದೆಹಲಿ,ಆ.2-ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ ಮತ್ತು ಮುರುಳಿ ಮನೋಹರ್ ಜೋಶಿ ರಾಮಮಂದಿರ ಭೂಮಿಪೂಜೆ ಸಮಾರಂಭಕ್ಕಾಗಿ ಅಯೋಧ್ಯೆಗೆ ತೆರಳುತ್ತಿಲ್ಲ.ಆದರೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಆ.5ರಂದು ನಡೆಯ ಲಿರುವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಉಭಯ ನಾಯಕರನ್ನು ದೂರವಾಣಿ ಮೂಲಕ ಶನಿವಾರ ಆಹ್ವಾನಿಸಲಾಗಿದೆ. ಸುಪ್ರೀಂಕೋರ್ಟ್‍ನಿಂದ ಸ್ಥಾಪಿಸಲಾಗಿರುವ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿಂದ ಆಹ್ವಾನವನ್ನು ಕಳುಹಿಸಲಾಗಿದೆ. ಅಯೋಧ್ಯೆಯಲ್ಲಿ 1990ರಲ್ಲಿ ರಾಮಮಂದಿರ ನಿರ್ಮಾಣ ಆಂದೋಲನದ ಪ್ರಮುಖ ಪಾತ್ರ ವಹಿಸಿದ್ದ ಎಲ್.ಕೆ.ಅಡ್ವಾಣಿ ಕಳೆದ ವಾರ ಲಖನೌನ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ…










