ಮೈಸೂರು, ಜೂ.17(ಅರ್‍ಕೆಬಿ)- ಜೂ.25ರಿಂದ ಜು.4ರವರೆಗೆ ನಡೆಯಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಜಿಲ್ಲಾದ್ಯಂತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳ ಲಾಗಿದೆ. 12 ಹೆಚ್ಚುವರಿ ಕೇಂದ್ರಗಳು ಸೇರಿದಂತೆ ಜಿಲ್ಲೆ ಯಲ್ಲಿ ಒಟ್ಟು 139 ಪರೀಕ್ಷಾ ಕೇಂದ್ರಗಳಿದ್ದು, 39,822 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಡಿಡಿಪಿಐ) ಪಾಂಡುರಂಗ ಮಾಹಿತಿ ನೀಡಿದರು. ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಪ್ರಾದೇ ಶಿಕ ಆಯುಕ್ತರ ಕಚೇರಿಯ ಚಾಮುಂಡೇಶ್ವರಿ ಸಭಾಂ ಗಣದಲ್ಲಿ ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ `ಕರ್ನಾಟಕ ಅಭಿವೃದ್ಧಿ…
ಸೋಂಕಿತನ ಸಂಪರ್ಕ: ನಂ.ಗೂಡು ಗ್ರಾಮಾಂತರ ಠಾಣೆಯಲ್ಲಿ ಎಚ್ಚರ!
June 18, 2020ನಂಜನಗೂಡು, ಜೂ.17(ರವಿ)-ಕೊರೊನಾ ಪ್ರಥಮ ಸಂಪರ್ಕ ಹೊಂದಿದ್ದ ವ್ಯಕ್ತಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆ ಸ್ಯಾನಿ ಟೈಸ್ ಮಾಡಿ, ಸಾರ್ವಜನಿಕರು ಅನಗತ್ಯವಾಗಿ ಠಾಣೆ ಪ್ರವೇಶಿಸದಂತೆ ಬ್ಯಾರಿಕೇಡ್ ಹಾಕಲಾಗಿದೆ. ಕೊರೊನಾ ಸೋಂಕಿತ ವ್ಯಕ್ತಿ ಠಾಣೆಗೆ ಭೇಟಿ ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದ ಡಿವೈ ಎಸ್‍ಪಿ ಪ್ರಭಾಕರರಾವ್ ಶಿಂಧೆ, ಆದರೆ ಸೋಂಕಿತನ ಜೊತೆ ಕಳೆದ 2 ದಿನಗಳ ಹಿಂದೆ ಪಾರ್ಟಿ ಮಾಡಿದ್ದ ವ್ಯಕ್ತಿಗಳಲ್ಲಿ ಓರ್ವ ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಎಂಬ ಮಾಹಿತಿ…
ಕೆಲಸ ನಮ್ಮದು ಟೇಪು ಬಿಜೆಪಿ ಅವರದ್ದು: ಮಾಧ್ಯಮಗಳ ವಿರುದ್ಧವೂ ಎಚ್‍ಡಿಕೆ ಗರಂ
June 18, 2020ಬೆಂಗಳೂರು, ಜೂ. 17- ನಮ್ಮ ಸರ್ಕಾರ ಮಾಡಿದ್ದ ಅಭಿವೃದ್ಧಿ ಕಾರ್ಯ ಗಳಿಗೆ ಚಾಲನೆ ನೀಡುವ ಮೂಲಕ ಬಿಜೆಪಿ ಸರ್ಕಾರ ಅದರ ಖ್ಯಾತಿಯನ್ನು ತನ್ನ ಹೆಸರಿಗೆ ಹಾಕಿಕೊಳ್ಳುತ್ತಿದೆ ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರ ಸ್ವಾಮಿ ಟೀಕಿಸಿದರು. ಈಗಾಗಲೇ ನನಗೆ 65 ವರ್ಷ. ದೇವರು ಆಯಸ್ಸು ಕೊಟ್ಟರೆ ಇನ್ನೂ 10-15ವರ್ಷ ಬದುಕಬಹುದಷ್ಟೇ ಎಂದರು. ಇದೇ ವೇಳೆ ಮಾಧ್ಯಮಗಳ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನದಿಂದಲೇ ಮಾತನಾ ಡಿದ ಅವರು, ಮಾಧ್ಯಮದವರು ತಮಗೆ ಬೆಂಬಲ ನೀಡದಿದ್ದರೂ ಪರವಾಗಿಲ್ಲ. ಆದರೆ ದೇಶವನ್ನು ಉಳಿಸುವ…
ಕೂರ್ಗಳ್ಳಿ ಕೆರೆಯೊಡಲು ಕಲುಷಿತ!
June 18, 2020ಮೈಸೂರು, ಜೂ. 17(ಪಿಎಂ)- ರಾಸಾಯನಿಕ ಮಿಶ್ರಿತ ತ್ಯಾಜ್ಯ ನೀರು… ಪ್ಲಾಸ್ಟಿಕ್ ಸೇರಿದಂತೆ ನಾನಾ ಬಗೆಯ ತ್ಯಾಜ್ಯಗಳ ರಾಶಿ… ಹೀಗೆ ಬಹು ಬಗೆಯ ತ್ಯಾಜ್ಯ ಕೂರ್ಗಳ್ಳಿ ಕೆರೆಯ ಒಡಲು ಸೇರುತ್ತಿದೆ. ಒಂದು ಕಾಲದಲ್ಲಿ ಜನ-ಜಾನುವಾರಗಳ ದಾಹ ನೀಗಿಸುವ ಜೀವ ಜಲವಾಗಿದ್ದ ಕೆರೆ ನೀರು, ಈಗ ಕಲು ಷಿತಗೊಂಡು ವಿಷ ಕಾರುವಂತಾಗಿದೆ. ಮಾನವನ ಅಭಿವೃದ್ಧಿ ಪರಿಕಲ್ಪನೆ ಪ್ರಕೃತಿಯನ್ನೇ ನುಂಗುವ ಮಟ್ಟಕ್ಕೆ ತಲು ಪಿದೆ. ಆ ಮೂಲಕ ತನ್ನ ವಿನಾಶಕ್ಕೆ ತಾನೇ ಕಾರಣವಾಗುತ್ತಿರುವ ಅರಿವಿದ್ದರೂ ಮಾನವ ತನ್ನ ದುರಾಸೆ ಕೈಗೆ ಬುದ್ಧಿ…
ಮೈಸೂರು ನಗರಕ್ಕೆ 24×7 ನೀರು ಪೂರೈಸುವ ಯೋಜನೆಗೆ ಜೂ.19ರಂದು ಪ್ರಾಯೋಗಿಕ ಕಾರ್ಯಾಚರಣೆ
June 18, 2020ಮೈಸೂರು,ಜೂ.17(ಪಿಎಂ)- ಮೈಸೂರು ನಗರಕ್ಕೆ ವಾರದ ಏಳೂ ದಿನಗಳು, ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ಸಂಬಂಧ ವಿಶ್ವೇಶ್ವರ ನಗರದ 2,485 ಮನೆಗಳ ಕೊಳಾಯಿಗಳಲ್ಲಿ (ನಲ್ಲಿ) ಜೂ.19ರಂದು ಬೆಳಿಗ್ಗೆ 9ಕ್ಕೆ ನೀರು ಹರಿಸುವ ಪ್ರಾಯೋಗಿಕ ಕಾರ್ಯಾ ಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಬುಧವಾರ ಮಾತನಾಡಿದ ಅವರು, ಈ ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾ ರದ ಅವಧಿಯಲ್ಲಿ ಮೈಸೂರು ನಗರಕ್ಕೆ 24×7 ನೀರು ಪೂರೈಸುವ ಯೋಜನೆ…
ವೀರಯೋಧರಿಗೆ ಮೈಸೂರಿನ ವಿವಿಧೆಡೆ ಭಾವಪೂರ್ಣ ಶ್ರದ್ಧಾಂಜಲಿ
June 18, 2020ಮೈಸೂರು, ಜೂ.17(ವೈಡಿಎಸ್, ಎಂಕೆ) – ಲಡಾಖ್‍ನ ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಯೋಧರ ನಡುವಿನ ಘರ್ಷಣೆಯಲ್ಲಿ ಹುತಾತ್ಮರಾದ 20 ಭಾರ ತೀಯ ಸೈನಿಕರಿಗೆ ನಗರದ ವಿವಿಧೆಡೆ ಮೇಣದ ಬತ್ತಿ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವೀರಮರಣ ಹೊಂದಿದ ಯೋಧರ ಭಾವ ಚಿತ್ರಗಳನ್ನು ಹಿಡಿದು ಜೈಕಾರ ಮೊಳಗಿಸಿ ನಮನ ಸಲ್ಲಿಸಲಾಯಿತು. ಚೀನಿಯರ ಕೃತ್ಯ ಖಂಡಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಕೋಟೆ ಆಂಜನೇಯ ದೇವಸ್ಥಾನ: ಮೈಸೂರು ನಗರ ಬಿಜೆಪಿ ಯುವಮೋರ್ಚಾ ದಿಂದ ಅರಮನೆ ಉತ್ತರ ದ್ವಾರದಲ್ಲಿರುವ ಕೋಟೆ ಆಂಜನೇಯ ದೇವಸ್ಥಾನದ ಎದುರು ಭಾರತ-ಚೀನಾ ನಡುವೆ…
ಶ್ರೀಗಂಧ ಚೋರರಿಬ್ಬರ ಸೆರೆ; ಬೈಕ್, ಸಲಕರಣೆ ವಶ
June 18, 2020ಮೈಸೂರು, ಜೂ.17(ಎಂಟಿವೈ)- ಶ್ರೀಗಂಧ ಮರ ಕಳವು ಮಾಡುತ್ತಿದ್ದ ಇಬ್ಬರನ್ನು ಭೂ ಮಾಲೀಕರ ನೆರವಿನಿಂದ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಬೈಕ್, ಗರಗಸ, ಮಚ್ಚು ಹಾಗೂ 5 ಶ್ರೀಗಂಧದ ಮರಗಳ ತುಂಡು ಗಳನ್ನು ವಶಪಡಿಸಿಕೊಂಡಿದ್ದಾರೆ. ಚನ್ನಪಟ್ಟಣ ತಾಲೂಕಿನ ಸಾದರಹಳ್ಳಿ ನಿವಾಸಿ ರವಿ ಮತ್ತು ಲೋಕೇಶ್ ಶ್ರೀಗಂಧ ಮರ ಕಳವು ಮಾಡಿ ಸಿಕ್ಕಿಬಿದ್ದಿದ್ದಾರೆ. ತಿ.ನರಸೀಪುರ ತಾಲೂಕಿನ ಸೋಸಲೆ ಹೋಬಳಿ ಕಾರ್ಗಳ್ಳಿ ಗ್ರಾಮದ ಕೆ.ಎಂ.ವೀರಭದ್ರಯ್ಯ ಎಂಬವರ ಜಮೀನಿನಲ್ಲಿ ಬೆಳೆದಿದ್ದ ಶ್ರೀಗಂಧ ಮರವನ್ನು ರವಿ ಮತ್ತು ಲೋಕೇಶ್ ಮಂಗಳವಾರ ರಾತ್ರಿ…
ಮೈಸೂರು ಜಿಲ್ಲಾದ್ಯಂತ ಮಾಸ್ಕ್‍ಡೇ ಆಚರಿಸಲು ಡಿಸಿ ಸೂಚನೆ
June 18, 2020ಮೈಸೂರು, ಜೂ.17- ದೇಶವ್ಯಾಪಿ ಕೊರೊನಾ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆ ಯಲ್ಲಿ ಸಾರ್ವಜನಿಕÀರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸರ್ಕಾರದ ಆದೇಶದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಾಲೂಕು ಆಡಳಿತದ ಮುಖ್ಯಸ್ಥರು ಜೂ.18ರಂದು `ಮಾಸ್ಕ್‍ಡೇ’ ಆಚರಿಸಬೇಕೆಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಮುಖಗವಸು (ಮಾಸ್ಕ್) ಧರಿಸುವುದು, ಸೋಪಿನಿಂದ ಕೈ ತೊಳೆಯುವುದು, ಸ್ಯಾನಿಟೈಸರ್ ಬಳಕೆ ಮಾಡುವುದು ಹಾಗೂ ದೈಹಿಕ ಅಂತರ ಕಾಯ್ದು ಕೊಳ್ಳುವುದು ಕಡ್ಡಾಯವಾಗಿದೆ. ಈ ಕುರಿತು ಜನಸಮುದಾಯದಲ್ಲಿ ಹೆಚ್ಚಿನ ಜನಜಾಗೃತಿ ಮೂಡಿಸುವ ಮೂಲಕ ರಾಜ್ಯ…
ಮೈಸೂರಲ್ಲಿ ಇಂದು ಕೆಲವೆಡೆ ನೀರು ಪೂರೈಕೆ ವ್ಯತ್ಯಯ
June 18, 2020ಮೈಸೂರು, ಜೂ.17-ಬೆಳಗೊಳ ಯಂತ್ರಾಗಾರದ ಮುಖ್ಯ ಕೊಳವೆ ಮಾರ್ಗದ ದುರಸ್ತಿ ಕಾಮಗಾರಿ ನಿಮಿತ್ತ ಜೂ.18ರಂದು (ಗುರುವಾರ) ಮಂಡಿ ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಯಾದವಗಿರಿ, ಬನ್ನಿಮಂಟಪ ಎ, ಬಿ, ಸಿ ಲೇಔಟ್, ಈರನಗೆರೆ, ಸಿದ್ದಿಖಿನಗರ, ಶಿವರಾತ್ರೀಶ್ವರನಗರ, ತಿಲಕ್‍ನಗರ, ಬಡೇಮಕಾನ್, ಹಲೀಂ ನಗರ, ದೇವರಾಜ ಮೊಹಲ್ಲಾ, ಭಾಗಶಃ ನಜರ್ ಬಾದ್ ಮೊಹಲ್ಲಾ, ವಿದ್ಯಾರಣ್ಯಪುರಂ, ವಿಶ್ವೇಶ್ವರನಗರ, ಚಾಮುಂಡಿಪುರಂ, ದೇವರಾಜ ಮೊಹಲ್ಲಾ, ಲೂರ್ದ್‍ನಗರ, ಮೀನಾ ಬಜಾರ್, ವಾರ್ಡ್ ನಂ. 8, 17, 18, 19, 23ರಿಂದ 27ರವ ರೆಗೆ 40, 41, 55, 60,…
SSLC ಪರೀಕ್ಷೆ ರದ್ದು ಕೋರಿ ಸಲ್ಲಿಸಿದ ಮೇಲ್ಮನವಿ ವಜಾಗೊಳಿಸಿದ ಸುಪ್ರೀಂ
June 18, 2020ಬೆಂಗಳೂರು,ಜೂ.17-ಕರ್ನಾಟಕದಲ್ಲಿ ಜೂ.25ರಿಂದ ನಡೆಯಲಿರುವ ಎಸ್‍ಎಸ್ ಎಲ್‍ಸಿ ಪರೀಕ್ಷೆ ರದ್ದುಪಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ. ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಸಮಸ್ಯೆಗಳು ಎದುರಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ತೊಂದರೆಯಾಗಬಹುದು. ಅಲ್ಲದೆ ವಿದ್ಯಾರ್ಥಿಗಳ ಪೋಷಕರು ಆತಂಕದಲ್ಲಿ ಇದ್ದಾರೆ. ಇಂತಹ ಸಂದಿಗ್ದ ಪರಿಸ್ಥಿತಿ ಯಲ್ಲಿ ಪರೀಕ್ಷೆ ನಡೆಸದಿರುವುದು ಉತ್ತಮ. ಹಾಗಾಗಿ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿ ಯಿಂದ ಪರೀಕ್ಷೆ ರದ್ದುಪಡಿಸಬೇಕೆಂದು ಬೆಳ ಗಾವಿಯ ಮಹಿಳೆ ರಾಜಶ್ರೀ ಅವರು ಸುಪ್ರೀಂ ಕೋರ್ಟಿಗೆ ಮೇಲ್ಮನವಿಯನ್ನು ಸಲ್ಲಿಸಿದ್ದರು. ಅರ್ಜಿಯನ್ನು…










